ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
<<ಹತ್ತನೇ ತಿರುಮೊಳಿ – ಕಾರ್ಕೋಡಲ್ ಪೂಕ್ಕಾಳ್
ಎಂಪೆರುಮಾನ್ ತನ್ನ ವಚನ ತಪ್ಪುವುದಿಲ್ಲ; ಆತನು ನಮ್ಮನ್ನು ಕಾಪಾಡುವನು. ಇದು ವಿಫಲವಾದರೂ, ತಾನು ಪೆರಿಯಾಳ್ವಾರ್ ಅವರ ದೈವೀಕ ಮಗಳಾಗಿರುವುದರಿಂದ ಅವರು ನಮಗೆ ಆಶ್ರಯ ನೀಡುತ್ತಾರೆ ಎಂದು ಆಂಡಾಳ್ ತುಂಬಾ ದೃಢವಾಗಿ ತಿಳಿದಿದ್ದರು. ಇಷ್ಟೆಲ್ಲಾ ಆದರೂ ಅವನು ಬರದ ಕಾರಣ, ಅರ್ಜುನನ ಬಾಣಗಳಿಂದ ಹೊಡೆದುರುಳಿಸಲಾದ ಭೀಷ್ಮನುಬಾಣಗಳ ಹಾಸಿಗೆಯ ಮೇಲೆ ನರಳುತ್ತಿರುವಂತೆ ಅವಳು ವಿವಿಧ ವಸ್ತುಗಳಿಂದ ಎಂಪೆರುಮಾನ್ನನ್ನು ಸ್ಮರಣೆ ಮಾಡಲ್ಪಟ್ಟು ಬಳಲುತ್ತಿದ್ದಳು. ಇದನ್ನು ನೋಡಿದ ತಾಯಂದಿರು, ಸ್ನೇಹಿತರು ಮತ್ತು ಇತರರೆಲ್ಲರೂ ಅಲ್ಲಿ ನೆರೆದರು. ಅವಳು ದುಃಖದಿಂದ ಅವರಿಗೆ ಹೇಳಿದಳು “ಅವನು ಬರುತ್ತಾನೆ ಎಂದು ನನಗೆ ಖಚಿತವಾಗಿತ್ತು; ಈಗ ನನ್ನ ಸ್ಥಾನವು ಈ ಸ್ಥಿತಿಗೆ ಬಂದಿದೆ; ಈ ಸ್ಥಿತಿಯಲ್ಲಿಯೂ ಅವನು ಬಂದಿಲ್ಲ; ಅವನ ಸ್ವಭಾವವನ್ನು ನೋಡಿ.” ನಂತರ ಅವಳು ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುತ್ತಾ “ಅವನು ನನ್ನಂತಹ ಕೆಲವು ವ್ಯಕ್ತಿಗಳಿಗೆ (ಪಿರಾಟ್ಟಿಮಾರ್ಗಳಿಗೆ) ಈ ಹಿಂದೆ ಸಹಾಯ ಮಾಡಿದ್ದಾನೆ. ಅವನು ನನ್ನನ್ನು ಸಹ ಸ್ವೀಕರಿಸುವನು” ಎನ್ನುತ್ತಾ, ತನ್ನನ್ನು ತಾನೇ ಸುಧಾರಿಸಿಕೊಳ್ಳುತ್ತಾಳೆ.
ಮೊದಲನೇ ಪಾಸುರಂ. “ಈ ದುಃಖದ ಸ್ಥಿತಿಯಲ್ಲಿಯೂ ನೀನೇಕೆ ಬಂದು ಸಹಾಯ ಮಾಡುತ್ತಿಲ್ಲ?” ಎಂಬ ಅವಳ ಪ್ರಶ್ನೆಗೆ ಅವನಲ್ಲಿ ಉತ್ತರವಿದೆಯೇ ಎಂದು ಕೇಳಲು ಅವಳು ಅವರಿಗೆ ಹೇಳುತ್ತಾಳೆ. ನನ್ನಲ್ಲಿ ಯಾವ ಕೊರತೆಯೂ ಇಲ್ಲ; ಅವನಲ್ಲಿಯೂ ಕೊರತೆಯಿಲ್ಲ; ಆದರೂ ಅವನು ಯಾಕೆ ಬರುತ್ತಿಲ್ಲ?
ತಾಮ್ ಉಗಕ್ಕುಮ್ ತಂ ಕೈಯಿಲ್ ಶಂಗಮೇ ಪೋಲಾವೋ
ಯಾಮ್ ಉಗಕ್ಕುಮ್ ಎನ್ ಕೈಯಿಲ್ ಶಂಗಮುಂ ಏನ್ದಿಳೈಯೀರ್
ತೀ ಮುಗತ್ತು ನಾಗಣೈ ಮೇಲ್ ಶೇರುಮ್ ತಿರುವರಂಗರ್
ಆ ಮುಗತ್ತೈ ನೋಕ್ಕಾರ್ ಆಲ್ ಅಮ್ಮನೇ ಅಮ್ಮನೇ
ಓಹ್, ಆಭರಣಗಳಿಂದ ಅಲಂಕರಿಸಿದ ಹುಡುಗಿಯರೇ! ನಾನು ಸಂತೋಷದಿಂದ ನನ್ನ ಕೈಗಳಲ್ಲಿ ಧರಿಸಿರುವ ಬಳೆಗಳು, ಅವನು ತನ್ನ ದಿವ್ಯ ಹಸ್ತದಲ್ಲಿ ಸಂತೋಷದಿಂದ ಹಿಡಿದಿರುವ ಶಂಖಕ್ಕೆ ಹೊಂದಿಕೆಯಾಗುವುದಿಲ್ಲವೇ? ಕ್ರೂರ ಮುಖಗಳಿರುವ (ಅವರು ನನಗೆ ಸಹಾಯ ಮಾಡದ ಕಾರಣ) ತಿರುವನ್ದಾಳ್ವಾನ್ ಹಾಸಿಗೆಯ ಮೇಲೆ ಮಲಗಿರುವ ತಿರುವರಂಗನಾಥರು (ಶ್ರೀರಂಗದ ಅಧಿಪತಿ) ನನ್ನ ಮುಖವನ್ನು ನೋಡಿಲ್ಲ. ಅಯ್ಯೋ!
ಎರಡನೇ ಪಾಸುರಂ. ತನ್ನ ಸ್ಥಿತಿಯನ್ನು ಮರೆಮಾಚಬೇಕಿದ್ದ ತಾಯಂದಿರ ಬಳಿ ತನ್ನ ಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದಾಳೆ
ಎಳಿಲ್ ಉಡೈಯ ಅಮ್ಮನೈಮೀರ್ ಎನ್ ಅರಂಗತ್ತಿನ್ ಅಮುದರ್
ಕುಳಲ್ಅಳಗರ್ ವಾಯ್ಅಳಗರ್ ಕಣ್ಅಳಗರ್ ಕೂಪ್ಪೊಳಿಲ್
ಎಳುಕಮಲ ಪೂಅಳಗರ್ ಎಮ್ಮಾನಾರ್ ಎನ್ನುಡೈಯ
ಕಳಲ್ ವಳೈಯೈ ತಾಮುಮ್ ಕಳಲ್ ವಳೈಯೇ ಆಕ್ಕಿನರೇ
ಓ ಸುಂದರ ತಾಯಂದಿರೇ! ಸುಂದರವಾದ ದಿವ್ಯ ವಸ್ತ್ರಗಳನ್ನು ಹೊಂದಿರುವ, ಸುಂದರವಾದ ದಿವ್ಯವಾದ ಅಧರಗಳನ್ನು ಹೊಂದಿರುವ, ಸುಂದರವಾದ ದಿವ್ಯ ಚಕ್ಷುಗಳನ್ನು ಹೊಂದಿರುವ, ದಿವ್ಯ ನಾಭಿಯ ಮೇಲೆ ದಿವ್ಯ ಕಮಲವನ್ನು ಹೊಂದಿ ಸೌಂದರ್ಯವನ್ನು ಪಡೆದಿರುವ ಅವರು ನನ್ನ ಮಕರಂದವಾಗಿ, ಶ್ರೀರಂಗದಲ್ಲಿ ಕರುಣಾಮಯಿಯಾಗಿ ನೆಲೆಸಿದ್ದಾರೆ. ನನ್ನ ಒಡೆಯನಾದ, ಅಳಗಿಯ ಮಣವಾಳರ್ ಆದ ಅವನು, ಜಾರಿಕೊಳ್ಳದ ನನ್ನ ಬಳೆಗಳನ್ನು ಜಾರಿಬೀಳುವ ಬಳೆಗಳನ್ನಾಗಿ ಮಾಡಿದನು.
ಮೂರನೇ ಪಾಸುರಂ. ಅವರು ಅವಳಿಗೆ ಹೇಳಿದರು “ಅವನು ನಿನ್ನ ಬಳೆಗಳನ್ನು ತೆಗೆದುಕೊಂಡದ್ದು ನಿನ್ನ ಮೇಲಿನ ಪ್ರೀತಿಯಿಂದ ಮಾತ್ರ. ಅವನಲ್ಲಿ ಬಳೆಗಳ ಕೊರತೆ ಇದ್ದುದರಿಂದ ಅವನು ನಿನ್ನದನ್ನು ತೆಗೆದುಕೊಂಡು ಪೂರ್ಣನಾದನು”. ಆಂಡಾಳ್ ಪ್ರತಿಕ್ರಿಯಿಸುತ್ತಾಳೆ “ಇದು ನಿಜವಲ್ಲ, ತನ್ನ ಬಳಿ ಮೊದಲೇ ಇರಲಿಲ್ಲವೆಂದು ವ್ಯಥೆಪಟ್ಟನೋ ಅಥವಾ, ಸಿಕ್ಕಿದ ಮೇಲೆ ಸಂತೋಷಗೊಂಡನೋ? ಹಾಗಂತ ಏನೂ ಅಲ್ಲ”. ತನಗೆ ಹಿಂಸೆ ನೀಡಲೆಂದೇ ಹೀಗೆ ಮಾಡಿದನೆಂದು ತಿರಸ್ಕಾರ ಮಾಡುತ್ತಾಳೆ.
ಪೊಂಗೋದಮ್ ಶೂಳ್ನ್ದ ಭುವನಿಯುಮ್ ವಿಣ್ಣುಲಗುಮ್
ಆಂಗಾದುಮ್ ಶೋರಾಮೇ ಆಳ್ಗಿನ್ರ ಎಂಪೆರುಮಾನ್
ಶೇಂಗಾಲ್ ಉಡೈಯ ತಿರುವರಂಗ ಶೆಲ್ವನಾರ್
ಎಂಗೋಲ್ ವಳೈಯಾಲ್ ಇಡರ್ ತೀರ್ವರ್ ಆಗಾದೇ
ಅಲೆಗಳಿಂದ ಕ್ಷೋಭೆಗೊಳ್ಳುವ ಸಾಗರದಿಂದ ಸುತ್ತುವರೆದಿರುವ ಈ ಭೂಮಿ ಮತ್ತು ಪರಮಪದ ಎರಡಕ್ಕೂ ಅವನು ಯಜಮಾನನಾಗಿ ಯಾವುದೇ ಕೊರತೆಯಿಲ್ಲದೆ ಆಳುತ್ತಾನೆ. ಅವನು ತನ್ನ ರಾಜದಂಡದಿಂದ ಆಳುವ ಸಾಮರ್ಥ್ಯವನ್ನು ಹೊಂದಿದ್ದಾನೆ ಮತ್ತು “ಕೋಯಿಲ್” (ದೇವಾಲಯ) ಎಂದು ಕರೆಯಲ್ಪಡುವ ಶ್ರೀರಂಗದಲ್ಲಿ ಮಲಗಿದ್ದಾನೆ. ಆ ಶ್ರೀಮಾನ್ ತನ್ನ ಕೊರತೆಯನ್ನು ನೀಗಿಸಲು ನನ್ನ ಬಳೆಗಳನ್ನು ತೆಗೆದುಕೊಳ್ಳುತ್ತಾನೆಯೇ ?
ನಾಲ್ಕನೆಯ ಪಾಸುರಂ. “ಎಂಪೆರುಮಾನ್ ನಿಮ್ಮ ಮೇಲಿನ ಪ್ರೀತಿಯಿಂದ ಬಳೆಗಳನ್ನು ತೆಗೆದುಕೊಂಡರು. ಅದಕ್ಕಾಗಿ ನೀವು ಸಂತೋಷಪಡಬೇಕಲ್ಲವೇ? ” ಎಂದು ಕೇಳಿದಾಗ ಅವಳು ಹೇಳುತ್ತಾಳೆ “ಅವನು ಸ್ವಯಿಚ್ಛೆಯಿಂದ ನನ್ನ ಬಳೆಗಳನ್ನು ತೆಗೆದುಕೊಂಡರೆ, ಅವನು ಒಮ್ಮೆಯಾದರೂ ನಾನು ವಾಸಿಸುವ ಬೀದಿಯಲ್ಲಿ ಹೋಗಬಾರದೇ?”
ಮಚ್ಚಣಿಮಾಡ ಮದಿಳರಂಗರ್ ವಾಮನನಾರ್
ಪಚ್ಚೈ ಪಶುನ್ ದೇವರ್ ತಾಮ್ ಪಂಡು ನೀರೇಟ್ರ
ಪಿಚ್ಚೈ ಕುರೈಯಾಗಿ ಎನ್ನುಡೈಯ ಪೆಯ್ವಳೈ ಮೇಲ್
ಇಚ್ಚೈ ಉಡೈಯರೇಲ್ ಇತ್ತೆರುವೇ ಪೋದಾರೇ
ಎಂಪೆರುಮಾನ್ ಕರುಣೆಯಿಂದ ಶ್ರೀರಂಗಂನಲ್ಲಿ ನೆಲೆಸಿದ್ದಾರೆ, ಇದು ಮೇಲ್ಛಾವಣಿಯಿಂದ ಅಲಂಕೃತವಾದ ಮಾಳಿಗೆ, ಪ್ರಾಕಾರಗಳು ಮತ್ತು ಸುತ್ತುವರೆದ ಗೋಡೆಗಳೊಂದಿಗೆ ಮಹಲುಗಳನ್ನು ಹೊಂದಿದೆ. ಅವರ ಮೇಲೆ ಹಸೀ ಭಕ್ತಿಯನ್ನು ಹೊಂದಿರುವ ಪೆರಿಯ ಪೆರುಮಾಳ್ ಅವರು ಹಿಂದೆ ವಾಮನ ಅವತಾರವನ್ನು ತೆಗೆದುಕೊಂಡಿದ್ದರು. ಅವನು (ಮಹಾಬಲಿಯಿಂದ) ಭಿಕ್ಷೆಯನ್ನು ತೆಗೆದುಕೊಂಡಾಗ, ಅದರಲ್ಲಿ ಏನಾದರೂ ಕೊರತೆಯಿದ್ದರೆ, ನನ್ನ ಬಳೆಗಳ ಮೇಲಿನ ಆಸೆಯನ್ನು ಹೋಗಲಾಡಿಸಲು, ಅವನು ಈ ಬೀದಿಗೆ ಕರುಣೆಯಿಂದ ಬರುತ್ತಿರಲಿಲ್ಲವೇ?
ಐದನೇ ಪಾಸುರಂ. ಅದು ಅವಳ ಬಳೆಗಳು ಮಾತ್ರವಲ್ಲ, ಅವಳ ಸ್ವರೂಪವನ್ನೂ ಕದಿಯಲು ಅವನು ಬಯಸಿದ್ದನು ಎಂದು ಅವಳು ಹೇಳುತ್ತಾಳೆ.
ಪೊಲ್ಲಾ ಕ್ಕುರಳುರುವಾಯ್ ಪೋರ್ಕೈಯಿಲ್ ನೀರೇಟ್ರು
ಎಲ್ಲಾ ಉಲಗಂ ಅಳಂದು ಕೊಂಡ ಎಂಪೆರುಮಾನ್
ನಲ್ಲಾರ್ಗಳ್ ವಾಳುಮ್ ನಳಿರ್ ಅರಂಗ ನಾಗಣೆಯಾನ್
ಇಲ್ಲಾದೋಮ್ ಕೈಪೊರುಳುಂ ಎಯ್ದುವಾನ್ ಒತ್ತುಳನೇ
ಅವನು ವಾಮನನಾಗಿ ವಿಶಿಷ್ಟ ರೂಪವನ್ನು ಪಡೆದ ಸ್ವಾಮಿ (ಭಗವಂತ) ತನ್ನ ಕೈಯಲ್ಲಿ ಪವಿತ್ರ ಜಾಲವನ್ನು ತೆಗೆದುಕೊಂಡು (ಭಿಕ್ಷೆ ಸ್ವೀಕರಿಸುವ ಸಂಕೇತವಾಗಿ) ಲೋಕಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಅಳೆದನು. ಅವರು ಪೆರಿಯ ಪೆರುಮಾಳ್ ಆಗಿದ್ದು, ಅವರು ಮಹಾನ್ ವ್ಯಕ್ತಿಗಳು ನೆಲೆಸಿರುವ ತಂಪಾದ ಶ್ರೀರಂಗದಲ್ಲಿ ತಿರುವಂದಾಳ್ವಾನ್ ಅವರನ್ನು ಶೇಷಶಾಯಿ ಹಾಸಿಗೆಯಾಗಿ ಹೊಂದಿದ್ದಾರೆ. ನನ್ನ ಆಸ್ತಿಯಾಗಿ ಏನೂ ಇಲ್ಲದಿರುವಾಗ ಅವನು ನನ್ನ ಸ್ವರೂಪವನ್ನೂ ಕದಿಯಲು ಕಾಣಿಸಿಕೊಳ್ಳುತ್ತಾನೆ.
ಆರನೇ ಪಾಸುರಂ. ಅವನು ಬಯಸಿದಂತೆಯೇ ಅವನು ತನ್ನ ಸ್ವರೂಪವನ್ನು ಕದ್ದನು ಎಂದು ಅವಳು ಹೇಳುತ್ತಾಳೆ.
ಕೈ ಪೊರುಳ್ಗಳ್ ಮುನ್ನಮೇ ಕೈಕೊಂಡಾರ್ ಕಾವಿರಿ ನೀರ್
ಶೆಯ್ಪುರಳ ಓಡುಮ್ ತಿರುವರಂಗ ಶೆಲ್ವನಾರ್
ಎಪ್ಪೊರುಟ್ಕುಮ್ ನಿನ್ರಾರ್ಕುಮ್ ಎಯ್ದಾದು ನಾನ್ಮರೈಯಿನ್
ಶೊಲ್ ಪೊರುಳಾಯ್ ನಿನ್ರಾರ್ ಎನ್ ಮೆಯ್ಪೊರುಳುಂ ಕೊಂಡಾರೇ
ಕಾವೇರಿಯ ನೀರಿನಿಂದ ಫಲವತ್ತಾದ ಹೊಲಗಳನ್ನು ಹೊಂದಿರುವ ತಿರುವರಂಗಂನಲ್ಲಿ ಎಂಪೆರುಮಾನ್ ಶ್ರೀಮಾನ್ (ಶ್ರೀಮಹಾಲಕ್ಷ್ಮಿಯನ್ನು ತನ್ನ ಸಂಪತ್ತಾಗಿ ಹೊಂದಿರುವವನು) ಕರುಣೆಯಿಂದ ನೆಲೆಸಿದ್ದಾನೆ. ಅವನು ಕೆಲವರಿಗೆ ಅವರು ಎಷ್ಟೇ ಕೀಳರಿಮೆ ಹೊಂದಿದ್ದರೂ ತುಂಬಾ ಸರಳವಾಗಿದ್ದಾನೆ, ಮತ್ತು ಕೆಲವರಿಗೆ ಅವರು ಎಷ್ಟೇ ಉನ್ನತರಾಗಿದ್ದರೂ ಅವರು ಅವನನ್ನು ಸಾಧಿಸಲಾಗುವುದಿಲ್ಲ. ನಾಲ್ಕು ವೇದಗಳಲ್ಲಿರುವ ಪದಗಳ ಅರ್ಥವಾದ ಆ ಪೆರಿಯ ಪೆರುಮಾಳ್, ನನ್ನ ಕೈಯಲ್ಲಿದ್ದ ಎಲ್ಲವನ್ನೂ ತೆಗೆದುಕೊಂಡು ಈಗ ನನ್ನ ದೇಹವನ್ನೂ ತೆಗೆದುಕೊಂಡನು.
ಏಳನೇ ಪಾಸುರಂ. ಅವನು ಸೀತಾ ದೇವಿಗೆ ತೋರಿಸಿದ ಪ್ರೀತಿಯನ್ನು ಅವನು ತನ್ನ ಕಡೆಗೆ ತೋರಿಸಲಿಲ್ಲ ಎಂದು ಅವಳು ಹೇಳುತ್ತಾಳೆ.
ಉಣ್ಣಾದುರಂಗಾದು ಒಲಿ ಕಡಲೈ ಊಡರುತ್ತು
ಪೆಣ್ಣಾಕ್ಕೈ ಯಾಪ್ಪುಂಡು ತಾಮ್ ಉತ್ತ ಪೇದೆಲ್ಲಾಮ್
ತಿಣ್ಣಾರ್ ಮದಿಳ್ ಶೂಳ್ ತಿರುವರಂಗ ಶೆಲ್ವನಾರ್
ಎಣ್ಣಾದೇ ತಮ್ಮುಡೈಯ ನನ್ಮೈಗಳೇ ಎಣ್ಣುವರೇ
ಭದ್ರವಾದ ಪ್ರಾಕಾರದಿಂದ ಸುತ್ತುವರೆದಿರುವ ತಿರುವರಂಗದಲ್ಲಿ ಮಲಗಿರುವ ಶ್ರೀ ಮಹಾಲಕ್ಷ್ಮಿಯ ಪತ್ನಿ ಎಂಪೆರುಮಾನ ನು ಶ್ರೀರಾಮನಾಗಿ ಅವತರಿಸಿದಾಗ ಸೀತಾ ಎಂಬ ಮಹಿಳೆಯನ್ನು ಬಯಸಿದ್ದನು. ತನ್ನ ನಿದ್ರೆ ಮತ್ತು ಆಹಾರವನ್ನು ತ್ಯಜಿಸಿ, ಅವನು ಕ್ಷೋಭಿತ ಸಾಗರಕ್ಕೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಿದನು. ತನ್ನೆಲ್ಲ ಸರಳತೆಯನ್ನು ಮರೆತು ಈಗ ಅವನು ತನ್ನ ಹಿರಿಮೆಯ ಬಗ್ಗೆ ಯೋಚಿಸುತ್ತಿದ್ದಾನೆ.
ಎಂಟನೆಯ ಪಾಸುರಂ. ಎಂಪೆರುಮಾನನ ಮಂಗಳಕರ ಗುಣಗಳನ್ನು ಧ್ಯಾನಿಸುವ ಮೂಲಕ ತನ್ನನ್ನು ತಾನು ಸುಧಾರಿಸಿಕೊಳ್ಳಬಹುದು ಎಂದು ಹೇಳಿದಾಗ, ಅವಳು “ನಾನು ಎಂಪೆರುಮಾನ್ನನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ. ಆದರೆ ನನಗೆ ಹಾಗೆ ಮಾಡಲು ಸಾಧ್ಯವಾಗುತ್ತಿಲ್ಲ” ಎನ್ನುತ್ತಾಳೆ.
ಪಾಶಿ ತೂರ್ತು ಕಿಡಂದ ಪಾರ್ಮಗಳ್ಕು ಪಂಡೊರುನಾಳ್
ಮಾಶುಡಂಬಿಲ್ ನೀರ್ ವಾರಾ ಮಾನಮಿಲಾ ಪನ್ರಿಯಾಂ
ತೇಶುಡೈಯ ತೇವರ್ ತಿರುವರಂಗ ಶೆಲ್ವನಾರ್
ಪೇಶಿ ಇರುಪ್ಪನಗಳ್ ಪೇರ್ಕವುಮ್ ಪೇರಾವೇ
ಹಿಂದೊಮ್ಮೆ, ಮೇಲೆಲ್ಲ ಪಾಚಿಯನ್ನು ಹೊಂದಿದ್ದ ಭೂಮಿ ದೇವಿಯ ಸಲುವಾಗಿ, ತೇಜಸ್ವಿಯಾದ ತಿರುವರಂಗನಾಥನು (ಶ್ರೀರಂಗದ ಅಧಿಪತಿ) ವರಾಹ (ಕಾಡುಹಂದಿ) ರೂಪವನ್ನು ನಾಚಿಕೆಯಿಲ್ಲದೆ ತೆಗೆದುಕೊಂಡಾಗ, ಅವನ ದೈವೀಕ ರೂಪದ ಮೇಲೆಲ್ಲ ಮಣ್ಣು ಮತ್ತು ನೀರು ತೊಟ್ಟಿಕ್ಕಿತು (ಅವನು ಭೂಮಿ ದೇವಿಯನ್ನು ಎತ್ತಲು ಸಾಗರವನ್ನು ಪ್ರವೇಶಿಸಿದಾಗ). ಅವರು ವರಾಹನಾಗಿ ಹೇಳಿದ ಮಾತುಗಳನ್ನು ನಾನು ನಾಶಮಾಡಲು ಬಯಸಿದರೂ ನನ್ನ ಹೃದಯದಿಂದ ಹೊರತೆಗೆಯಲಾಗುತ್ತಿಲ್ಲ.
ಒಂಭತ್ತನೇ ಪಾಸುರಂ. ರುಕ್ಮಿಣಿ ದೇವಿಗೆ ಎಂಪೆರುಮಾನನು ಮಾಡಿದ ಸಹಾಯವು ತನ್ನನ್ನೂ ಒಳಗೊಂಡಂತೆ ಎಲ್ಲಾ ಮಹಿಳೆಯರಿಗೆ ಮಾಡಿದ ಸಹಾಯ ಎಂದು ಭಾವಿಸಿ ಅವಳು ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಾಳೆ. ಇದನ್ನು ಎಂಪೆರುಮಾನ್ ಅರ್ಜುನನಿಗೆ ಹೇಳಿದ ಮಾತಿನಂತೆಯೇ ನೋಡಬೇಕು (ದುಃಖಪಡಬೇಡ); ಇದು ಸಾಮಾನ್ಯವಾಗಿ ಶರಣಾದ ಎಲ್ಲರಿಗೂ ಅನ್ವಯಿಸುತ್ತದೆ.
ಕಣ್ಣಾಲಮ್ ಕೋಡಿತ್ತು ಕನ್ನಿ ತನ್ನೈ ಕೈ ಪಿಡಿಪ್ಪಾನ್
ತಿಣ್ಣಾರ್ದಿರುಂದ ಶಿಶುಪಾಲನ್ ತೇಜಳಿನ್ದು
ಅಣ್ಣಾನ್ದಿರುಕ್ಕವೇ ಆಂಗವಳೈ ಕೈ ಪಿಡಿತ್ತ
ಪೆಣ್ಣಾಳನ್ ಪೇಣುಮ್ ಊರ್ ಪೇರುಮ್ ಅರಂಗಮೇ
ಮದುವೆಯ ಎಲ್ಲಾ ಪೂರ್ವಭಾವಿ ಕಾರ್ಯಕ್ರಮಗಳು ಮುಗಿದ ನಂತರ, ರುಕ್ಮಿಣಿ ದೇವಿಯನ್ನು (ಶ್ರೀ ಮಹಾಲಕ್ಷ್ಮಿ) ಮದುವೆಯಾಗಲಿದ್ದೇನೆ ಎಂದು ಶಿಶುಪಾಲನು ತುಂಬಾ ವಿಶ್ವಾಸ ಹೊಂದಿದ್ದನು. ತನ್ನ ಕಾಂತಿಯನ್ನೆಲ್ಲ ಕಳೆದುಕೊಂಡು ಅಸಹಾಯಕಳಾಗಿ ಆಕಾಶದತ್ತ ನೋಡುತ್ತಿರುವಾಗ, ಎಂಪೆರುಮಾನನು ಕರುಣೆಯಿಂದ ಆ ರುಕ್ಮಿಣಿ ದೇವಿಯನ್ನು ಮದುವೆಯಾಗಿ ಎಲ್ಲಾ ಸ್ತ್ರೀಯರಿಗೂ ಆಸರೆಯಾಗಿ ಪ್ರಸಿದ್ಧನಾದನು. ಆ ಎಂಪೆರುಮಾನ್ ಮಲಗಿರುವ ದಿವ್ಯ ನಿವಾಸದ ದೈವೀಕ ಹೆಸರು ತಿರುವರಂಗಂ.
ಹತ್ತನೇ ಪಾಸುರಂ. ಪೆರಿಯಾಳ್ವಾರ್ ಅವರ ದೈವೀಕ ಮಗಳಾಗಿದ್ದರೂ ಎಂಪೆರುಮಾನ್ ತನ್ನನ್ನು ಸ್ವೀಕರಿಸಲಿಲ್ಲ ಎಂದು ಅವಳು ದುಃಖಿತಳಾಗುತ್ತಾಳೆ ಮತ್ತು ಅವಳು ಇನ್ನೇನು ಮಾಡಬಹುದೆಂದು ಚಿಂತಿಸುತ್ತಾಳೆ.
ಶೆಮ್ಮೈ ಉಡೈಯತಿರುವರಂಗರ್ ತಾಮ್ ಪಣಿತ್ತ
ಮೆಯ್ಮೈ ಪೆರುವಾರ್ತೈ ವಿಟ್ಟುಶಿತ್ತರ್ ಕೇಟ್ಟಿರುಪ್ಪರ್
ತಮ್ಮೈ ಉಗಪ್ಪಾರೈ ತಾಮ್ ಉಗಪ್ಪರ್ ಎನ್ನುಮ್ ಶೊಲ್
ತಮ್ಮಿಡೈಯೇ ಪೊಯ್ಯಾನಾಲ್ ಶಾದಿಪ್ಪಾರ್ ಆರ್ ಇನಿಯೇ
ಪ್ರಾಮಾಣಿಕತೆಯ ದೈವೀಕ ಗುಣವನ್ನು ಹೊಂದಿರುವ ತಿರುವರಂಗನಾಥನು ಮೊದಲು ಕರುಣೆಯಿಂದ, ಸತ್ಯವಾದ ಮತ್ತು ಅತ್ಯಂತ ಅಮೂಲ್ಯವಾದ ವಚನಗಳನ್ನು ಮಾತನಾಡಿದ್ದನು, ಅವುಗಳು ಚರಮ ಶ್ಲೋಕ (ಪರಮ ಅಂತಿಮ ಸ್ತೋತ್ರ) ಎಂದು ಪ್ರಸಿದ್ಧವಾಗಿವೆ. ನನ್ನ ದಿವ್ಯ ಪಿತಾಮಹರು ಆ ಮಾತುಗಳನ್ನು ಕೇಳಿ ಯಾವುದೇ ಚಿಂತೆಯಿಂದ ಮುಕ್ತರಾಗುತ್ತಿದ್ದರು. “ತನ್ನನ್ನು ಇಷ್ಟಪಡುವವರನ್ನು ಅವನು ಇಷ್ಟಪಡುತ್ತಾನೆ” ಎಂಬ ಗಾದೆ ಸುಳ್ಳಾದರೆ, ಇನ್ಯಾರು ಅವನಿಗೆ ಏನನ್ನು ಮಾಡಲು ಆದೇಶಿಸಬಹುದು?
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ: https://divyaprabandham.koyil.org/index.php/2020/05/nachchiyar-thirumozhi-11-simple/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org