ತಿರುವಾಯ್ಮೊೞಿ-ಸರಳ ವಿವರಣೆ – 10.8 – ತಿರುಮಾಲಿರುಂಚೋಲೈ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 10.7 – ಶೆಞ್ಜೊಲ್

ಎಂಪೆರುಮಾನರು ಕರುಣೆಯಿಂದ ತಮ್ಮ ಗರುಡವಾಹನದಲ್ಲಿ ಆಳ್ವಾರರನ್ನು ಪರಮಪದಕ್ಕೆ ಕರೆದೊಯ್ಯಲು ಆಗಮಿಸಿದರು. ಆಳ್ವಾರರು ಎಂಪೆರುಮಾನರು ಮೊದಲಿನಿಂದ ತಮಗೆ ಮಾಡಿದ ಉಪಕಾರಗಳನ್ನು ಸ್ಮರಿಸುತ್ತಾರೆ, “ನಾನು ಏನೂ ಅವನಿಗಾಗಿ ಮಾಡಿಲ್ಲದಿದ್ದದರೂ , ಹೇಗೆ ಎಂಪೆರುಮಾನರು ಅತಿ ಕರುಣೆಯಿಂದ ನನಗೆ ಫಲವನ್ನು ಕೊಡುತ್ತಿದ್ದಾರೆ?” ಮತ್ತು ಎಂಪೆರುಮಾನರಿಗೆ ಈ ಪ್ರಶ್ನೆಯನ್ನು ಕೇಳುತ್ತಾರೆ. ಎಂಪೆರುಮಾನರು ಉತ್ತರವನ್ನು ಕೊಡಲು ಅಸಫಲರಾಗುತ್ತಾರೆ. ಆಳ್ವಾರರು ಎಂಪೆರುಮಾನರ ಸಹಜವಾದ ಕಾರಣವಿಲ್ಲದ ಕರುಣೆಯನ್ನು ಮತ್ತು ಅವರ ಕೃಪಾ ಕಟಾಕ್ಷವನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅದನ್ನು ಯೋಚಿಸುವಾಗ ಆನಂದಭರಿತರಾಗುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಆಕಸ್ಮಿಕವಾಗಿ ನಾನು ‘ತಿರುಮಾಲಿರುಂಚೋಲೈ ಮಲೈ’ ಎಂದು ಹೇಳಿದೆ. ಅದನ್ನು ಹೇಳಿದ ಕೂಡಲೇ ಎಂಪೆರುಮಾನರು ಏನನ್ನೂ ಅಪೇಕ್ಷಿಸದೇ , ಪಿರಾಟ್ಟಿಯೊಂದಿಗೆ ಆಗಮಿಸಿ, ಕರುಣೆಯಿಂದ ನನ್ನಲ್ಲಿ ಸೇರಿಕೊಂಡರು.”
ತಿರುಮಾಲಿರುಞ್ಜೋಲೈ ಮಲೈಯೆನ್‌ಱೇನೆನ್ನ,
ತಿರುಮಾಲ್ ವನ್ದು ಎನ್ನೆಞ್ಜು ನಿಱೈಯ ಪ್ಪುಗುನ್ದಾನ್,
ಕುರು ಮಾಮಣಿ ಉನ್ದು ಪುನಲ್ ಪೊನ್ನಿತ್ತೆನ್ಬಾಲ್,
ತಿರುಮಾಲ್ ಶೆನ್‍ಱು ಶೇರ್ವಿಡಮ್ ತೆನ್ ತಿರುಪ್ಪೇರೇ ॥

ನಾನು ತಿರುಮಾಲಿರುಂಚೋಲೈ ಎಂದು ಹೇಳಿದ ಕೂಡಲೇ, ಎಂಪೆರುಮಾನರು , ಯಾರು ಶ್ರೀಯಃಪತಿಯಾಗಿರುವರೋ ಮತ್ತು ಪರಿಪೂರ್ಣವಾಗಿರುವರೋ, ಅವರು ನನ್ನ ಹೃದಯದಲ್ಲಿ ಆಗಮಿಸಿ, ನನ್ನನ್ನು ಪೂರ್ತಿಯಾಗಿ ಆವರಿಸಿಕೊಂಡರು. ‘ಶ್ರಿಯಾಸಾರ್ದಮ್ ಜಗತ್ಪತಿಃ’ ನಲ್ಲಿ ಹೇಳಿರುವ ಹಾಗೆ ದಿವ್ಯ ಸ್ಥಳದಲ್ಲಿ (ಪರಮಪದದಲ್ಲಿ) ಪಿರಾಟ್ಟಿಯೊಂದಿಗೆ ನೆಲೆಸಿರುವ ಎಂಪೆರುಮಾನರು , ಸುಂದರವಾದ , ಅಮೂಲ್ಯವಾದ ರತ್ನಗಳಿರುವ ಪೊನ್ನಿ ನದಿಯ ದಕ್ಷಿಣ ತೀರದಲ್ಲಿರುವ , ತಿರುಪ್ಪೇರ್ ಗೆ ಬಂದು ಕರುಣೆಯಿಂದ ಅಲ್ಲಿ ನೆಲೆಸಿದರು.

ಎರಡನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಅವನು ಇದಕ್ಕೆ ಮೊದಲು ಸರ್ವೇಶ್ವರನಾದರೂ, ನನ್ನೊಂದಿಗೆ ಸಮಾಗಮವಾಗಿಲ್ಲದ ಕಾರಣ ಅವನಿಗೆ ಕೊರತೆಯಿತ್ತು. ಏನೂ ಕಾರಣವಿಲ್ಲದೆ (ಅಪೇಕ್ಷೆಯಿಲ್ಲದೆ) ನನ್ನ ಹೃದಯದಲ್ಲಿ ಬಂದು ನಿಂತಾಗ, ಅವನು ಪರಿಪೂರ್ಣನಾದನು.”
ಪೇರೇ ಉಱೈಗಿನ್‍ಱ ಪಿರಾನ್ ಇನ್‍ಱುವನ್ದು,
ಪೇರೇನೆನ್‍ಱು ಎನ್ನೆಞ್ಜು ನಿಱೈಯ ಪ್ಪುಗುನ್ದಾನ್,
ಕಾಱೇೞ್ ಕಡಲೇೞ್ ಮಲೈಯೇೞ್ ಉಲಗುಣ್ಡುಮ್,
ಆರಾವಯಿಱ್ಱಾನೈ ಅಡಙ್ಗ ಪಿಡಿತ್ತೇನೇ ॥

ತಿರುಪ್ಪೇರ್‌ನಲ್ಲಿ ಶಾಶ್ವತವಾಗಿ ನೆಲೆಸಿರುವ ಸರ್ವೇಶ್ವರನು ಈದಿನ ಬಂದು ಹೇಳುತ್ತಾನೆ, “ನಾನು ಇಲ್ಲಿಂದ ಹೋಗುವುದಿಲ್ಲ” ಮತ್ತು ನನ್ನ ಹೃದಯದಲ್ಲಿ ಬಂದು ಅದನ್ನು ಪರಿಪೂರ್ಣಗೊಳಿಸುತ್ತಾನೆ. ಎಲ್ಲಾ ಲೋಕಗಳನ್ನೂ ನುಂಗಿದ ಮೇಲೂ , ಏಳು ರೀತಿಯ ಮೇಘಗಳನ್ನು , ಏಳು ರೀತಿಯ ಸಮುದ್ರಗಳನ್ನು, ಏಳು ರೀತಿಯ ಪ್ರತಿಧ್ವನಿಸುವ ಪರ್ವತಗಳನ್ನು ಹೊಂದಿದ ಮೇಲೂ, ಅವನು ಅಪೂರ್ಣವಾದ ಹೊಟ್ಟೆಯೊಂದಿಗೆ ಇದ್ದನು. ನನ್ನಲ್ಲಿ ಆಗಮಿಸಿದ ಅವನನ್ನು ನಾನು ಆನಂದಿಸಿದ ಮೇಲೆ ಎಲ್ಲಾ ರೀತಿಯಲ್ಲಿಯೂ ಪರಿಪೂರ್ಣನಾದನು.

ಮೂರನೆಯ ಪಾಸುರಮ್:
ಆಳ್ವಾರರು ಎಂಪೆರುಮಾನರ ‘ನಿರ್ಹೇತುಕ ಸಂಶ್ಲೇಷಮ್’ (ಕಾರಣವಿಲ್ಲದೇ ಒಂದಾಗುವಿಕೆ) ಯನ್ನು ಧ್ಯಾನಿಸುತ್ತಾರೆ ಮತ್ತು ಹೇಳುತ್ತಾರೆ ,” ಅಂತಹ ಎಂಪೆರುಮಾನರ ದಿವ್ಯ ಪಾದಗಳು ನನಗೆ ಸುಲಭವಾಗಿ ಸಿಕ್ಕಿತು”
ಪಿಡಿತ್ತೇನ್ ಪಿಱವಿ ಕೆಡುತ್ತೇನ್ ಪಿಣಿ ಶಾರೇನ್,
ಮಡಿತ್ತೇನ್ ಮನೈ ವಾೞ್‍ಕ್ಕೈಯುಳ್ ನಿಱ್ಪದೋರ್ ಮಾಯೈಯೈ,
ಕೊಡಿ ಕ್ಕೋಪುರ ಮಾಡಙ್ಗಳ್ ಶೂೞ್ ತಿರುಪ್ಪೇರಾನ್,
ಅಡಿ ಚ್ಚೇರ್ವದು ಎನಕ್ಕೆಳಿದಾಯಿನವಾಱೇ ॥

ನಾನು ಸುಲಭವಾಗಿ ದೊರಕುವ ಎಂಪೆರುಮಾನರ ದಿವ್ಯ ಪಾದಗಳನ್ನು ಸುಲಭವಾಗಿ ದೊರಕುವಂತೆ ಮಾಡಿದ ಎಂಪೆರುಮಾನರು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡ , ಎತ್ತರವಾದ ಬಂಗಲೆಗಳನ್ನು ಮತ್ತು ಧ್ವಜವನ್ನು ಹೊತ್ತಿರುವ ಕಂಭಗಳನ್ನು ಹೊಂದಿರುವ ತಿರುಪ್ಪೇರ್ ನಗರವನ್ನು ನಾನು ಸಮೀಪಿಸಿದೆ. ನನ್ನ ಹುಟ್ಟಿನ ಜೊತೆ ನನಗಿರುವ ಸಂಬಂಧವನ್ನು ತೊರೆದು ಹಾಕಲಾಯಿತು. ನನಗೆ ಇನ್ನು ಯಾವ ರೀತಿಯ ದುಃಖಗಳೂ ಇರುವುದಿಲ್ಲ. ಸಂಸಾರದಲ್ಲಿನ ಜೊತೆ ನನಗಿರುವ ಅಜ್ಞಾನವನ್ನೂ ನಾನು ಬಿಟ್ಟಾಯಿತು.

ನಾಲ್ಕನೆಯ ಪಾಸುರಮ್:
ಆಳ್ವಾರರು ಎಂಪೆರುಮಾನರ ಸ್ವಭಾವವಾದ ತಿರುನಾಡನ್ನೇ (ಪರಮಪದವನ್ನೇ) ಅನುಗ್ರಹಿಸುವ ಅವರ ಕರುಣೆಯನ್ನು ಯೋಚಿಸುತ್ತಾರೆ ಮತ್ತು “ಎಂತಹ ಸುಲಭವಾಗಿದೆ” ಎಂದು ಆಶ್ಚರ್‍ಯ ಪಡುತ್ತಾರೆ. ಮತ್ತು ಹೇಳುತ್ತಾರೆ, “ನಾನು ನನ್ನ ಎಲ್ಲಾ ಇಂದ್ರಿಯಗಳ ಜೊತೆಗೆ ಇರುವ ಆನಂದಿಸುವ ಮನಸ್ಸಿನಿಂದ ಸಂತೋಷ ಪಡುತ್ತಿದ್ದೇನೆ.”
ಎಳಿದಾಯಿನ ವಾಱೆನ್‍ಱು ಎನ್ ಕಣ್‍ಗಳ್ ಕಳಿಪ್ಪ,
ಕಳಿದಾಗಿಯ ಶಿನ್ದಯಿನಾಯ್ ಕಳಿಕ್ಕಿನ್‍ಱೇನ್,
ಕಿಳಿತಾವಿಯ ಶೋಲೈಗಳ್ ಶೂೞ್ ತಿರುಪ್ಪೇರಾನ್,
ತೆಳಿದಾಗಿಯ ಶೇಣ್ ವಿಶುಮ್ಬು ತರುವಾನೇ ॥

ಆನಂದಮಯವಾದ ಹೃದಯವನ್ನು ಹೊಂದಿರುವವನ ಜೊತೆಗೆ ಇದ್ದುಕೊಂಡು, ನನ್ನ ದಾಹಭರಿತವಾದ ಕಣ್ಣುಗಳು ಹೇಳುತ್ತಿವೆ “ ಕಷ್ಟವೆಂದು ತಿಳಿದ ಗುರಿಯು ಸುಲಭವಾಗಿ ದೊರಕಿದೆ”, ಆನಂದವನ್ನು ಹೊಂದಲು ನಾನು ಉತ್ಸುಕನಾಗಿದ್ದೇನೆ. ಎಂಪೆರುಮಾನರು ಸುಲಭವಾಗಿ ಸನ್ನಿಹಿತರಾಗಬಹುದಾದ ತಿರುಪ್ಪೇರ್ ನಲ್ಲಿ ಉಪಸ್ಥಿತರಾಗಿದ್ದಾರೆ. ಇಲ್ಲಿ ದಟ್ಟವಾದ ತೋಟಗಳಿಂದ ಆವರಿಸಲ್ಪಟ್ಟಿದೆ. ಇಲ್ಲಿ ಗಿಣಿಗಳು ಸಂತೋಷದಿಂದ ಜಿಗಿಯುತ್ತಿವೆ. ಎಂಪೆರುಮಾನರು, ಅತೀ ಎತ್ತರದಲ್ಲಿರುವ , ಅದರ ಒಳ್ಳೆಯದಾದ ಉನ್ನತವಾದ ಅಂಶಗಳಿಂದ ಅತ್ಯಂತ ಪ್ರಕಾಶಮಾನವಾಗಿರುವ ಪರಮ ವ್ಯೋಮವನ್ನು ನನಗೆ ಅನುಗ್ರಹಿಸಲು ಸಿದ್ಧವಾಗಿದ್ದಾರೆ.

ಐದನೆಯ ಪಾಸುರಮ್:
ತಿರುಪ್ಪೇರ್ ನಗರದಲ್ಲಿರುವ ಎಂಪೆರುಮಾನರು ನನಗೆ ತಿರುನಾಡನ್ನು (ಪರಮಪದವನ್ನು) ಅನುಗ್ರಹಿಸಲು ಶಪಥ ಮಾಡಿದ್ದಾರೆ. ನನ್ನನ್ನು ಕಂಗಾಲಾಗಿ, ದಿಗ್ಭ್ರಾಂತನನ್ನಾಗಿ ಮಾಡುವ ನನಗಿರುವ ಅನೇಕ ತೊಂದರೆಗಳನ್ನು ಅವರು ನಿವಾರಿಸಿದ್ದಾರೆ.
ವಾನೇ ತರುವಾನೆನಕ್ಕಾಯ್ ಎನ್ನೋಡೊಟ್ಟಿ,
ಊನೇಯ್ ಕುರುಮ್ಬೈಯಿದನುಳ್ ಪುಗುನ್ದು, ಇನ್‍ಱು
ತಾನೇ ತಡುಮಾಱ್ಱ ವಿನೈಗಳ್ ತವಿರ್ತ್ತಾನ್,
ತೇನೇಯ್ ಪೊೞಿಲ್ ತೆನ್ ತಿರುಪ್ಪೇರ್ ನಗರಾನೇ ॥

ಅನೇಕ ಜೀರುಂಡೆಗಳನ್ನು ಹೊಂದಿರುವ ತೋಟಗಳಿಂದ ಕೂಡಿದ ಸುಂದರವಾದ ನಗರವಾದ ತಿರುಪ್ಪೇರ್ ನಲ್ಲಿ ಎಂಪೆರುಮಾನರು ವಾಸವಾಗಿದ್ದಾರೆ. ನನಗೆ ಪರಮಪದವನ್ನು ಕರುಣಿಸುವುದಾಗಿ ಭರವಸೆಯನ್ನು ಕೊಟ್ಟು, ನನ್ನೊಂದಿಗೆ ಪ್ರತಿಜ್ಞೆ ಮಾಡಿ, ಅವನು ತಾನಾಗಿಯೇ ನನ್ನ ಮೂಳೆ, ಮಾಂಸಗಳಿಂದ ತುಂಬಿರುವ ದೇಹದೊಳಗೆ ಬಂದು ಪ್ರವೇಶಿಸಿ, ಗೊಂದಲಗಳಿಗೆ ಕಾರಣವಾದ ನನ್ನ ಪಾಪ, ಪುಣ್ಯಗಳನ್ನು ನಿವಾರಿಸಿದ್ದಾನೆ. ಇಲ್ಲಿ ತೇನ್ ಎಂದರೆ ಜೇನು ಎಂದೂ ಅರ್ಥವಾಗಬಹುದು.

ಆರನೆಯ ಪಾಸುರಮ್:
ಆಳ್ವಾರರು ಇದನ್ನು ಯೋಚಿಸಿ ಹರ್ಷಿಸುತ್ತಾರೆ, “ ಎಂಪೆರುಮಾನರಿಗೆ ಅನೇಕ ಕರುಣಾಮಯವಾದ ವಾಸಸ್ಥಾನಗಳಿವೆ. ಎಲ್ಲೂ ಜಾಗವಿಲ್ಲದವನ ಹಾಗೆ ನಾನು ಕರೆದ ತಕ್ಷಣ ಕರುಣಾಮಯನಾಗಿ ಬಂದು ‘ನಾನು ಇಲ್ಲಿ ನೆಲೆಸುತ್ತೇನೆ ‘ ಎಂದು ತಾನೇ ನನ್ನ ಹೃದಯದೊಳಗೆ ಯಾವ ಅಪೇಕ್ಷೆ ಮತ್ತು ಕಾರಣಗಳಿಲ್ಲದೇ ತಾನೇ ಬಂದು ನೆಲೆಸಿದ್ದಾನೆ.”
ತಿರುಪ್ಪೇರ್ ನಗರಾನ್ ತಿರುಮಾಲಿರುಞ್ಜೋಲೈ,
ಪೊರುಪ್ಪೇ ಉಱೈಗಿನ್‍ಱ ಪಿರಾನ್ ಇನ್‍ಱುವನ್ದು,
ಇರುಪ್ಪೇನೆನ್‍ಱು ಎನ್ನೆಞ್ಜು ನಿಱೈಯ ಪ್ಪುಗುನ್ದಾನ್,
ವಿರುಪ್ಪೇಪೆಱ್ಱು ಅಮುದಮುಣ್ಡು ಕಳಿತ್ತೇನೇ ॥

ಎಂಪೆರುಮಾನರು ಅತ್ಯಂತ ಶ್ರೇಷ್ಠ ಪೋಷಕರು. ಅವರು ತಿರುಪ್ಪೇರ್ ನಗರದಲ್ಲಿ ನಿರಂತರವಾಗಿ ನೆಲೆಸಿರುವವರು. ದಿವ್ಯವಾದ ಪರ್ವತವಾದ ತಿರುಮಾಲಿರುಂಚೋಲೈಗೆ ಇಂದು ಆಗಮಿಸಿ, ‘ನಾನು ಇಲ್ಲಿ ನೆಲೆಸುತ್ತೇನೆ’ ಎಂದು ನಿರ್ಧರಿಸಿ, ನನ್ನ ಹೃದಯದಲ್ಲಿ ಪ್ರವೇಶಿಸಿ, ಅದನ್ನು ಪರಿಪೂರ್ಣವನ್ನಾಗಿ ಮಾಡಿದ್ದಾರೆ. ಈ ಅತ್ಯುತ್ತಮವಾದ ಪಾರಿತೋಷವನ್ನು ಹೊಂದಿ, ಅಮೃತವನ್ನು ಸವಿದು, ನಾನು ಪರಮ ಸಂತೋಷನಾಗಿದ್ದೇನೆ.

ಏಳನೆಯ ಪಾಸುರಮ್:
ಆಳ್ವಾರರು ತಮಗೆ ಸಿಕ್ಕಿದ ದೈವ ಕೃಪೆಯನ್ನು ಕರುಣೆಯಿಂದ ವಿವರಿಸಿದ್ದಾರೆ.
ಉಣ್ಡು ಕಳಿತ್ತೇಱ್ಕು ಉಮ್ಬರ್ ಎನ್ ಕುಱೈ? ಮೇಲೈ
ತ್ತೊಣ್ಡುಗಳಿತ್ತು ಅನ್ದಿ ತೊೞುಮ್ ಶೊಲ್ಲು ಪೆತ್ತೇನ್,
ವಣ್ಡು ಕಳಿಕ್ಕುಮ್ ಪೊೞಿಲ್ ಶೂೞ್ ತಿರುಪ್ಪೇರಾನ್,
ಕಣ್ಡು ಕಳಿಪ್ಪ ಕಣ್ಣುಳ್ ನಿನ್‍ಱು ಅಗಲಾನೇ ॥

ಸಂತೋಷದಿಂದ ಜಿಗಿಯುತ್ತಿರುವ ಜೀರುಂಡೆಗಳಿಂದ ತುಂಬಿದ ತೋಟಗಳಿಂದ ಕೂಡಿದ ತಿರುಪ್ಪೇರ್ ನಗರದಲ್ಲಿ ವಾಸವಾಗಿರುವ ಎಂಪೆರುಮಾನರು ಪದೇ ಪದೇ ನಾನು ನೋಡುವಂತೆ ನನ್ನ ದೃಷ್ಟಿಗೆ ಆನಂದವನ್ನು ಉಂಟುಮಾಡುತ್ತಿರುವರು. ಅವರು ನನ್ನನ್ನು ಬಿಟ್ಟು ಹೋಗುವುದಿಲ್ಲ. ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಯೆಂದರೆ, ನಾನು ನಿರಂತರವಾಗಿ ಅವನನ್ನು ಅನುಭವಿಸಿ , ಆನಂದಿಸುತ್ತಿರುವಂತೆ, ವಿಶಿಷ್ಟವಾಗಿರುವ ಪರಮಪದದಲ್ಲೂ ಈ ಆನಂದವು ಮುಂದುವರೆಯುವುದೇ? ನಾನು ಕೊನೆಯಲ್ಲಿ ‘ನಮಃ’ ಎಂದು ಹೇಳುತ್ತಿದ್ದೇನೆ. ಅದು ಆರಾಧನೆ, ಶರಣಾಗತಿ ಮುಂತಾದುವುಗಳನ್ನು ಸೂಚಿಸುತ್ತವೆ. ಅನಂತವಾದ ಶ್ರೇಷ್ಠ ಆನಂದವನ್ನು ಪಡೆದ ಮೇಲೆ ಶ್ರೇಷ್ಠ ಸೇವಕತ್ವವನ್ನು ಹೊಂದಿದ್ದೇನೆ. ‘ಉಗಳಿತ್ತಾಲ್’ ಎಂದರೆ ಸಮೃದ್ಧಿಯಲ್ಲಿರುವುದು ಎಂದು ಅರ್ಥ.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ತಿರುಪ್ಪೇರ್ ನಗರದಲ್ಲಿರುವ ಎಂಪೆರುಮಾನರು ಸಂಪೂರ್ಣವಾಗಿ ಆನಂದಿಸಲ್ಪಡುವವರು. ಅವರ ಸ್ವಭಾವವು ನಮ್ಮ ಬುದ್ಧಿ ಮತ್ತು ಶಬ್ದಗಳಿಗೆ ಎಟುಕದಂಥವರು. ಅವರು ನಿರಂತರವಾಗಿ ನನ್ನ ಕಣ್ಣಿನ ದೃಷ್ಟಿಗೆ ವಸ್ತುವಾಗಿರುವರು. ನನ್ನ ಮೇಲೆ ಸದಾ ಪ್ರೀತಿಯನ್ನು ತೋರಿಸುತ್ತಿರುವರು, ಎಂದಿಗೂ ನನ್ನನ್ನು ಬಿಟ್ಟು ಹೋಗಲಾರರು. ನನ್ನ ಹೃದಯದಲ್ಲಿ ಪ್ರವೇಶಿಸಿದರು ಮತ್ತು ನನ್ನ ಮಟ್ಟದಲ್ಲಿ ನನಗೆ ಉಪಕಾರವನ್ನು ಮಾಡಲು ನಿಲ್ಲಿಸುವುದಿಲ್ಲ.”
ಕಣ್ಣುಳ್ ನಿನ್‍ಱಗಲಾನ್ ಕರುತ್ತಿನ್ ಕಣ್ ಪೆರಿಯನ್,
ಎಣ್ಣಿಲ್ ನುಣ್ ಪೊರುಳ್ ಏೞ್ ಇಶೈಯಿನ್ ಶುವೈ ತಾನೇ,
ವಣ್ಣನನ್ಮಣಿ ಮಾಡಙ್ಗಳ್ ಶೂೞ್ ತಿರುಪ್ಪೇರಾನ್,
ತಿಣ್ಣಮ್ ಎನ್ ಮನತ್ತು ಪ್ಪುಗುನ್ದಾನ್ ಶೆಱಿನ್ದಿನ್‍ಱೇ ॥

ಎಂಪೆರುಮಾನರು ತಿರುಪ್ಪೇರ್ ನಗರದಲ್ಲಿ ವಾಸವಾಗಿರುವರು, ನನ್ನ ಬಾಹ್ಯ ಕಣ್ಣುಗಳಿಗೆ ನಿರಂತರವಾಗಿ ಆನಂದವನ್ನು ನೀಡುವರು. ಅವರು ನನ್ನನ್ನು ಬಿಟ್ಟು ಹೋಗುವುದಿಲ್ಲ. ಅವರು ಹೃದಯದಲ್ಲಿ ಅತ್ಯಂತ ಶ್ರೀಮಂತರು. ಅವರು ಅತ್ಯಂತ ನವಿರಾದ ಭಾವನೆಗಳನ್ನು ಹೊಂದಿರುವರು. ಸಪ್ತ ಸ್ವರದಲ್ಲಿರುವ ಸವಿಯನ್ನು ಹೊಂದಿದ್ದಾರೆ. ಅಮೂಲ್ಯವಾದ ವಿವಿಧ ಬಣ್ಣಗಳಿಂದ ಕೂಡಿರುವ ರತ್ನಗಳನ್ನು ಹೊಂದಿರುವ ದೊಡ್ಡ ದೊಡ್ಡ ಅರಮನೆಗಳಿಂದ ಸುತ್ತುವರೆಯಲ್ಪಟ್ಟ ತಿರುಪ್ಪೇರ್ ನಗರದಲ್ಲಿ ವಾಸವಾಗಿದ್ದಾರೆ. ಈ ದಿನ ಅಂತಹ ಎಂಪೆರುಮಾನರು ಯಾವ ಕಾರಣವಿಲ್ಲದೇ ನನ್ನ ಹೃದಯವನ್ನು ಹೊಕ್ಕಿ, ಅಲ್ಲಿ ಸ್ಥಿರವಾಗಿ ನಿಂತಿದ್ದಾರೆ.

ಒಂಬತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನನ್ನೊಳಗೆ ಒಂದಾಗಿ , ಸ್ಥಿರವಾಗಿ ನನ್ನಲ್ಲಿ ನೆಲೆಸಿರುವ ಎಂಪೆರುಮಾನರಿಗೆ ನಾನು ಕೇಳಬೇಕೆಂದಿರುವೆ, ‘ಇಷ್ಟು ದಿನ ನನ್ನನ್ನು ಏಕೆ ಪರಿಗಣಿಸಲಿಲ್ಲ?’ ಎಂದು.”
ಇನ್‍ಱೆನ್ನೈ ಪ್ಪೊರುಳಾಕ್ಕಿ ತ್ತನ್ನೈ ಎನ್ನುಳ್ ವೈತ್ತಾನ್,
ಅನ್‍ಱೆನ್ನೈ ಪ್ಪುಱಮ್ ಪೋಗ ಪ್ಪುಣರ್ತದು ಎನ್‍ಶೆಯ್‍ವಾನ್,
ಕುನ್‍ಱೆನ್ನತ್ತಿಗೞ್ ಮಾಡಙ್ಗಳ್ ಶೂೞ್ ತಿರುಪ್ಪೇರಾನ್,
ಒನ್‍ಱೆನಕ್ಕರುಳ್ ಶೆಯ್ಯ ಉಣರ್ತಲ್ ಉಱ್ಱೇನೇ ॥

ಎಂಪೆರುಮಾನರು ನನ್ನನ್ನು ಒಂದು ಒಳ್ಳೆಯ ಅನುಕೂಲಕರವಾದ ವಸ್ತುವನ್ನಾಗಿಸಿ, ಅವರನ್ನೇ ನನ್ನ ಹೃದಯದಲ್ಲಿ ಸೇರಿಸಿದರು. ಆದರೆ ನನ್ನನ್ನು ಲೌಕಿಕ ಸಂತೋಷಗಳಲ್ಲಿ ಇದಕ್ಕೆ ಮೊದಲು ಮುಳುಗುವಂತೆ ಮಾಡಿದ್ದರು.ಏಕೆ ಅವರಿಂದ ನನ್ನನ್ನು ದೂರ ಮಾಡಿದ್ದರು? ಹೊಳೆಯುವ ಪರ್ವತಗಳಂತೆ ಇರುವ ದೊಡ್ಡ ದೊಡ್ಡ ಮನೆಗಳನ್ನು ಹೊಂದಿರುವ ತಿರುಪ್ಪೇರ್ ನಗರದ ವಾಸಿಯಾಗಿರುವ ಎಂಪೆರುಮಾನರು ನನಗೆ ಕರುಣೆಯಿಂದ ಈ ಎರಡು ಸನ್ನಿವೇಶಗಳನ್ನು ವಿವರಿಸಲಿ. ಇದರ ಅರ್ಥ ಒಂದರ ಕಾರಣವನ್ನು ಅವರು ವಿವರಿಸಿದರೆ, ಇನ್ನೊಂದು ಅದರ ತದ್ವಿರುದ್ಧವಾಗಿರುತ್ತದೆ. ಆದರೆ ನಿರ್ಹೇತುಕ ವಿಷಯೀಕಾರಮ್ (ಏನೂ ಕಾರಣವಿಲ್ಲದೆಯೇ ದಯಪಾಲಿಸುವ ಗುಣ) ನನ್ನು ಈ ಪ್ರಶ್ನೆ ಕೇಳಿದರೆ, ಭಗವಂತನಾದರೂ , ಎಲ್ಲಾ ಕಡೆಯೂ ಇರುವವನಾದರೂ ಅವನಿಗೂ ಉತ್ತರ ಹೇಳಲು ಬರುವುದಿಲ್ಲ.

ಹತ್ತನೆಯ ಪಾಸುರಮ್:
ಎಂಪೆರುಮಾನರ ಹತ್ತಿರ ಆಳ್ವಾರರ ಪ್ರಶ್ನೆಗೆ ಹೇಳಲು ಉತ್ತರವಿರುವುದಿಲ್ಲ. ಅವರು ಕರುಣೆಯಿಂದ ಹೇಳುತ್ತಾರೆ, “ಹೇಳು, ನಿನಗೆ ಏನು ಬೇಕು?” ಆಳ್ವಾರರು ಹೇಳುತ್ತಾರೆ, “ನಾನು ನಿನ್ನ ದಿವ್ಯ ಪಾದಗಳನ್ನು ಪ್ರೀತಿಯಿಂದ ಮತ್ತು ಆನಂದದಿಂದ ಸೇವೆ ಮಾಡಬೇಕು. ನನಗೆ ಇದನ್ನು ಮಾತ್ರ ಕೊಡು.” ಎಂದು. ಎಂಪೆರುಮಾನರು ಹೇಳುತ್ತಾರೆ, “ ಸರಿ, ಕೊಟ್ಟಾಯಿತು”, ಆಳ್ವಾರರು ಸಂತೋಷಗೊಂಡು ಹೇಳುತ್ತಾರೆ, “ತಿರುಪ್ಪೇರ್ ನಗರದ ಎಂಪೆರುಮಾನರಿಗೆ ಶರಣದವರಿಗೆ ದುಃಖವೇ ಇರುವುದಿಲ್ಲ. “ ಎಂದು.
ಉಱ್ಱೇನ್ ಉಗನ್ದು ಪಣಿಶೆಯ್‍ದು ಉನಪಾದಮ್,
ಪೆಱ್ಱೇನ್ , ಈದೇ ಇನ್ನಮ್ ವೇಣ್ಡುವದೆನ್ದಾಯ್,
ಕಱ್ಱಾರ್ ಮಱೈ ವಾಣರ್ಗಳ್ ವಾೞ್ ತಿರುಪ್ಪೇರಾಱ್ಕು,
ಅಱ್ಱಾರ್ ಅಡಿಯಾರ್ ತಮಕ್ಕು ಅಲ್ಲಲ್ ನಿಲ್ಲಾವೇ ॥

ಏನೂ ಕಾರಣವಿಲ್ಲದೇ, (ನನ್ನ ಯಾವ ಪ್ರಯತ್ನವಿಲ್ಲದೇ) ನಾನು ನಿನ್ನ ದಿವ್ಯ ಪಾದಗಳನ್ನು ಸೇರಿಕೊಂಡೆ. ನಾನು ಕೇವಲ ನನ್ನ ಮಾತುಗಳಿಂದ , ಪ್ರೀತಿಯಿಂದ ನಿನ್ನನ್ನು ಸ್ಮರಿಸಿ, ಪರಮ ಗುರಿಯಾಗಿರುವ ನಿನ್ನ ದಿವ್ಯ ಪಾದಗಳನ್ನು ಹೊಂದಿದೆ. ಓಹ್! ಸಹಜವಾಗಿ ನನ್ನ ಜೊತೆಗೆ ಸಂಬಂಧ ಹೊಂದಿರುವವನೇ! ಈ ಸೇವೆಯೇ ನನಗೆ ಎಂದೆಂದಿಗೂ ಆಸೆ ಪಡುವಂತಹುದು. ತಿರುಪ್ಪೇರ್ ನಗರದಲ್ಲಿ ವಾಸವಾಗಿರುವ, ಭಗವತ್ ಅನುಭವವನ್ನು ಹೊಂದಿರುವ, ವೇದಗಳ ಅರ್ಥಗಳನ್ನು ಕಲಿತಿರುವ , ನಿನ್ನನ್ನು ಮಾತ್ರವೇ ಪೂಜಿಸುವ ಭಕ್ತರಿಗೆ ಯಾವ ದುಃಖಗಳು ಆನಂದಿಸುವುದನ್ನು ತಡೆಯುತ್ತವೆಯೋ, ಅಂತಹ ದುಃಖಗಳು ಸಹಜವಾಗಿ ದೂರವಾಗುತ್ತವೆ. ಮತ್ತು ಹೇಳಿರುವ ಹಾಗೆ ‘ಅಱ್ಱರುಕ್ಕು ಅಡಿಯಾರ್ ‘ (ಎಂಪೆರುಮಾನರಿಗೆ ಮಾತ್ರವೇ ಸೇವೆ ಸಲ್ಲಿಸುವವರಿಗೇ ಶರಣದವರು).

ಹನ್ನೊಂದನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ವಿಶಿಷ್ಟವಾದ , ತೇಜಸ್ಸನ್ನು ಹೊಂದಿರುವ ತಿರುನಾಡು (ಪರಮಪದಮ್) ಈ ಪದಿಗೆಯನ್ನು ಕಲಿತವರಿಗೆ ಸಿಗುತ್ತದೆ. “
ನಿಲ್ಲಾ ಅಲ್ಲಲ್ ನೀಳ್ ವಯಲ್ ಶೂೞ್ ತಿರುಪ್ಪೇರ್ ಮೇಲ್,
ನಲ್ಲಾರ್ ಪಲರ್ ವಾೞ್ ಕುರುಗೂರ್ ಚ್ಚಡಗೋಪನ್,
ಶೊಲ್ಲಾರ್ ತಮಿೞ್ ಆಯಿರತ್ತುಳ್ ಇವೈಪತ್ತುಮ್
ವಲ್ಲಾರ್ , ತೊಣ್ಡರಾಳ್ವದು ಶೂೞ್ ಪೊನ್ ವಿಶುಮ್ಬೇ ॥

ಆಳ್ವಾರ್ ತಿರುನಗರಿಗೇ ನಾಯಕರಾದ ನಮ್ಮಾಳ್ವಾರ್, ತಿರುಪ್ಪೇರ್ ನ ಮೇಲೆ ಹಾಡಿದ ಈ ಪದಿಗೆಯನ್ನು ಹಾಡಿದವರಿಗೆ, ದುಃಖವೇ ಇಲ್ಲದ ವಾಸಸ್ಥಾನವಾಗಿರುವ , ಗದ್ದೆಗಳಿಂದ ತೋಟಗಳಿಂದ ಆವೃತ್ತವಾಗಿರುವ ತಿರುಪ್ಪೇರ್ ನಗರದ ಮೇಲೆ ಹಾಡಿರುವ, ಸಾವಿರ ಪಾಸುರಗಳಲ್ಲಿ ಶಬ್ದಗಳ ಮಾಲೆಯಾದ ಈ ಹತ್ತು ಪಾಸುರಗಳನ್ನು ಹಾಡಿದವರು , ಪರಮವ್ಯೋಮವೆಂದೇ ಹೆಸರಾಗಿರುವ , ಎಲ್ಲಾ ದಿಕ್ಕುಗಳಲ್ಲಿಯೂ ವ್ಯಾಪಿಸಿರುವ , ಅಪರಿಮಿತವಾಗಿರುವ ಮತ್ತು ತೇಜಸ್ಸನ್ನು ಹೊಂದಿರುವ ಪರಮಪದಕ್ಕೇ ನಾಯಕರಾಗಿ ನೆಲೆಸುವರು.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-10-8-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org