ತಿರುವಾಯ್ಮೊೞಿ – ಸರಳ ವಿವರಣೆ – 10.7-ಶೆಞ್ಜೊಲ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 10.1 – ತಾಳತಾಮರೈ


ಆಳ್ವಾರರು ಪರಮಪದವನ್ನು ಶೀಘ್ರವಾಗಿ ತಲುಪಲು ಬಯಸುತ್ತಾರೆ. ಎಂಪೆರುಮಾನರೂ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಆದರೆ ಎಂಪೆರುಮಾನರು ಆಳ್ವಾರರನ್ನು ಅವರ ದಿವ್ಯ ಲೌಕಿಕ ರೂಪದಲ್ಲಿಯೇ ಕರೆದುಕೊಂಡು ಹೋಗಿ ಅಲ್ಲಿಯೂ ಆ ದಿವ್ಯ ರೂಪವನ್ನು ಆನಂದಿಸಲು ಬಯಸುತ್ತಾರೆ. ಅದನ್ನು ತಿಳಿದ ಆಳ್ವಾರರು ಎಂಪೆರುಮಾನರಿಗೆ ಹಾಗೆ ಮಾಡದಿರಲು ಸಲಹೆ ಕೊಡುತ್ತಾರೆ ಮತ್ತು ಎಂಪೆರುಮಾನರು ಕಡೆಗೆ ಒಪ್ಪಿಕೊಳ್ಳುತ್ತಾರೆ. ಅದನ್ನು ನೋಡಿದ ಆಳ್ವಾರರು ಎಂಪೆರುಮಾನರ ಶೀಲಗುಣವನ್ನು(ಸರಳತೆಯನ್ನು) ನೋಡಿ ಅತೀವ ಸಂತೋಷಗೊಳ್ಳುತ್ತಾರೆ ಮತ್ತು ಅದನ್ನು ಈ ಪದಿಗೆಯಲ್ಲಿ ಕರುಣೆಯಿಂದ ಎಲ್ಲರಿಗಾಗಿ ವಿವರಿಸುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಎಂಪೆರುಮಾನರು ನನ್ನ ಹೃದಯದಲ್ಲಿ ಪ್ರವೇಶಿಸಿ ನಿನ್ನ ಮೂಲಕ ತಿರುವಾಯ್ಮೊೞಿಯನ್ನು ಹಾಡಿಸುತ್ತೇನೆ’ ಎಂದು ಹೇಳುತ್ತಾರೆ. ಆದರೆ ನನ್ನ ಮೇಲಿನ ಪ್ರೀತಿಯನ್ನು ನೋಡಿ. ಓಹ್! ಅವನನ್ನು ಸೇವಿಸುವವರೇ! ಅವನ ಅಗಾಧವಾದ ಸಮುದ್ರದಂತಹ ಗುಣದಲ್ಲಿ ಮುಳುಗಿಹೋಗಬೇಡಿ” ಎಂದು.

ಶೆಞ್ಜೊಲ್ ಕವಿಗಾಳ್ ಉಯಿರ್ ಕಾತ್ತು ಆಟ್ಚೆಯ್‍ಮ್ಮಿನ್ ತಿರುಮಾಲಿರುಞ್ಜೋಲೈ,
ವಞ್ಜಕ್ಕಳ್ವನ್ ಮಾಮಾಯನ್ ಮಾಯಕ್ಕವಿಯಾಯ್ ವನ್ದು, ಎನ್
ನೆಞ್ಜುಮುಯಿರುಮುಳ್ ಕಲನ್ದು ನಿನ್‍ಱಾರ್ ಅಱಿಯಾವಣ್ಣಮ್ , ಎನ್
ನೆಞ್ಜುಮುಯಿರುಮ್ ಅವೈ ಉಣ್ಡು ತಾನೇಯಾಗಿ ನಿಱೈನ್ದಾನೇ ॥

ತಿರುಮಾಲಿರುಂಜೋಲೈನಲ್ಲಿರುವ ಎಂಪೆರುಮಾನರು , ಯಾರೊಬ್ಬರಿಂದ ಅವರಿಗೇ ಗೊತ್ತಾಗದಂತೆ ಕಳ್ಳತನವನ್ನು ಮಾಡಿ, ಅದ್ಭುತವಾದ ರೂಪವನ್ನು ಹೊಂದಿ, ಅನೇಕ ಕಲ್ಯಾಣ ಗುಣಗಳನ್ನು ಹೊಂದಿ, ಆದರೂ ತುಂಟತನದ ಕಾರ್ಯಗಳನ್ನು ಮಾಡಿ, ನನ್ನನ್ನು ಪದ್ಯಗಳನ್ನು ಹಾಡುವಂತೆ ಪ್ರೇರೇಪಿಸಿ, ಅವರು ನನ್ನ ಹೃದಯದಲ್ಲಿ ಬಂದು ನೆಲೆಸಿ, ನನ್ನಲ್ಲೇ ಒಂದಾಗಿ , ಅವನೊಂದಿಗೇ ಇರುವ ಲಕ್ಶ್ಮಿಗೇ ಗೊತ್ತಾಗದ ಹಾಗೆ ಬಂದು ನನ್ನಲ್ಲಿ ನೆಲೆಸಿರುವನು. ಅವನು ನನ್ನ ಹೃದಯವನ್ನೂ ಸರ್ವಸ್ವವನ್ನೂ ಸ್ವೀಕರಿಸಿ, ಆನಂದಭರಿತನಾಗಿ , ಅವಾಪ್ತ ಸಮಸ್ತ ಕಾಮನಾಗಿರುವನು. ಓಹ್! ಪ್ರಾಮಾಣಿಕವಾಗಿ ಪಾಸುರಗಳನ್ನು ಹಾಡುವವರೇ! ನಿಮ್ಮನ್ನೂ ಮತ್ತು ನಿಮ್ಮ ವಸ್ತುಗಳನ್ನೂ ಜೋಪಾನವಾಗಿರಿಸಿಕೊಳ್ಳಿ. ಅವನು ಎಲ್ಲವನ್ನೂ ಕದ್ದುಬಿಡುವನು. ಮತ್ತು ನಿಮ್ಮ ಮಾತುಗಳಿಂದ ಅವನನ್ನು ಸೇವಿಸಿ.
ಇದರ ಅರ್ಥವೇನೆಂದರೆ : ಭಗವಂತನಲ್ಲಿ ಅನನ್ಯಪ್ರಯೋಜನಕ್ಕಾಗಿ (ಕೈಂಕರ್‍ಯವನ್ನು ಬಿಟ್ಟು ಬೇರೆ ಏನೂ ಅಪೇಕ್ಷೆಯಿಲ್ಲದವರಿಗೆ) ತೊಡಗಿಕೊಂಡವರಿಗೆ , ತಮ್ಮನ್ನು ಮತ್ತು ತಮ್ಮ ವಸ್ತುಗಳನ್ನು ಅವನು ಕದ್ದುಕೊಂಡು ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲವೆಂದು.

ಎರಡನೆಯ ಪಾಸುರಮ್:
ಆಳ್ವಾರರು, ತಮ್ಮ ಮತ್ತು ಎಂಪೆರುಮಾನರ ಸಮಾಗಮವಾದ ಮೇಲೆ ಎಂಪೆರುಮಾನರಿಗೆ ದೊರಕಿದ ಸಂತೋಷ ಮತ್ತು ಐಶ್ವರ್‍ಯಗಳನ್ನು ತಿಳಿದುಕೊಂಡು ಆನಂದಿಸುತ್ತಾರೆ.

ತಾನೇಯಾಗಿ ನಿಱೈನ್ದು ಎಲ್ಲಾವುಲಗುಮ್ ಉಯಿರುಮ್ ತಾನೇಯಾಯ್,
ತಾನೇ ಯಾನೆನ್ಬಾನಾಗಿ ತ್ತನ್ನೈ ತ್ತಾನೇ ತುದಿತ್ತು, ಎನಕ್ಕು
ತ್ತೇನೇ ಪಾಲೇ ಕನ್ನಲೇ ಅಮುದೇ ತಿರುಮಾಲಿರುಞ್ಜೋಲೈ,
ಕೋನೇಯಾಗಿ ನಿನ್‍ಱೊೞಿನ್ದಾನ್ ಎನ್ನೈ ಮುಱ್ಱುಮ್ ಉಯಿರ್ ಉಣ್ಡೇ ॥


ಎಂಪೆರುಮಾನರು ನನ್ನನ್ನು ಎಲ್ಲಾ ರೀತಿಯಲ್ಲೂ ಆನಂದಿಸುತ್ತಾರೆ. ಅವನೇ ಮೂಲಭೂತ ಮತ್ತು ಪರಿಪೂರ್ಣ. ಅವನೇ ಎಲ್ಲಾ ಸಮಸ್ತ ಲೋಕಗಳೂ ಮತ್ತು ಎಲ್ಲಾ ಸಮಸ್ತ ಜೀವಿಗಳು ಅವನೇ [ಅವನ ದೇಹವೇ ಎಲ್ಲವೂ]. ಅವನೇ ನಾನೂ, ಜ್ಞಾನದ ಪ್ರತೀಕವಾದ ವಸ್ತುವೆಂದು ಕರೆಯಲ್ಪಡುತ್ತೇನೆ. ಅವನೇ ಹೊಗಳಿಕೆಗೆ ಪಾತ್ರವಾಗುವವನು ಮತ್ತು ಹೊಗಳುವವನು ಅವನೇ. ಇದನ್ನೆಲ್ಲಾ ನನಗೆ ತಿಳಿಯಲ್ಪಡುವಂತೆ ಮಾಡಿದ್ದರಿಂದ, ಜೇನು, ಹಾಲು, ಸಕ್ಕರೆ, ಅಮೃತ – ಇವೆಲ್ಲವುಗಳ ಮಾಧುರ್‍ಯವೂ ಅವನೇ. ಅವನೇ ತಿರುಮಾಲಿರುಂಚೋಲೈನಲ್ಲಿ ಕರುಣೆಯಿಂದ ನೆಲೆಸಿರುವ ಸ್ವಾಮಿಯೂ ಮತ್ತು ಅಲ್ಲಿಂದ ಹೋಗದೇ ನೆಲೆಸಿರುವವನು .
ಇದರ ಅರ್ಥ : ಅವನೇ ಆನಂದಪಡುವವನು ಮತ್ತು ಆನಂದಿಸಲ್ಪಡುವವನು.

ಮೂರನೆಯ ಪಾಸುರಮ್:
ಆಳ್ವಾರರು ಕರಣೆಯಿಂದ ಎಂಪೆರುಮಾನರ ಕೊನೆಯಿಲ್ಲದ ಪ್ರೀತಿಯನ್ನು ಮತ್ತು ಅದು ತಮ್ಮ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಬಗ್ಗೆ ವಿವರಿಸಿದ್ದಾರೆ.

ಎನ್ನೈ ಮುಱ್ಱುಮ್ ಉಯಿರ್ ಉಣ್ಡು ಎನ್ ಮಾಯವಾಕ್ಕೈ ಇದನುಳ್ ಪುಕ್ಕು,
ಎನ್ನೈ ಮುಱ್ಱುಮ್ ತಾನೇಯಾಯ್ ನಿನ್‍ಱ ಮಾಯ ಅಮ್ಮಾನ್ ಶೇರ್,
ತೆನ್ನನ್ ತಿರುಮಾಲಿರುಞ್ಜೋಲೈ ತ್ತಿಶೈ ಕೈಕೂಪ್ಪಿ ಚ್ಚೇರ್ನ್ದಯಾನ್,
ಇನ್ನುಮ್ ಪೋವೇನೇ ಕೊಲೋ ಎನ್ಗೊಲ್ ಅಮ್ಮಾನ್ ತಿರುವರುಳೇ ॥

ನನ್ನ ಆತ್ಮವನ್ನು ಎಲ್ಲಾ ರೀತಿಯಲ್ಲೂ ಆನಂದಿಸಿದ ಮೇಲೆ , ಎಂಪೆರುಮಾನರು ಎಲ್ಲಾ ರೀತಿಯಲ್ಲೂ ಅಜ್ಞಾನವನ್ನು ಹೊಂದಿರುವ ನನ್ನ ದೇಹದೊಳಗೆ ಹೊಕ್ಕು , ನನ್ನನ್ನು ಮತ್ತು ಅದಕ್ಕೆ ಜೋಡಣೆಯಾಗಿರುವ ನನ್ನ ದೇಹವನ್ನು ಪರಿಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು. ಅವರಿಗೆ ಅನೇಕ ಕಲ್ಯಾಣ ಗುಣಗಳು ಮತ್ತು ಅದ್ಭುತವಾದ ಕ್ರಿಯೆಗಳೂ ಇವೆ. ಅವರು ಬೇರೆ ಸಾಟಿಯಿಲ್ಲದ ಪ್ರಭುವಾಗಿದ್ದಾರೆ. ಅವರು ಸ್ಥಿರವಾಗಿ ಹೊಗಳಲು ಯೋಗ್ಯವಾದ ದಕ್ಷಿಣ ದಿಕ್ಕಿನಲ್ಲಿರುವ ತಿರುಮಲೈನಲ್ಲಿ ನೆಲೆಸಿದ್ದಾರೆ. ಅವರಿಗೆ ಸೇವೆ ಸಲ್ಲಿಸಲು ನಾನು ಆ ದಿವ್ಯ ದೇಶವನ್ನು ತಲುಪಿದ್ದೇನೆ. ಈ ಸ್ಥಿತಿಯನ್ನು ತಲುಪಿದ ನಂತರ ಬೇರೆ ಎಲ್ಲಾದರೂ ನನಗೆ ಹೋಗಲು ಸ್ಥಳವಿದೆಯೇ? ಎಲ್ಲಾದರೂ ಹೋಗಲು ಸಾಧ್ಯವೇ? ಇಂತಹ ಬೇಷರತ್ತಾದ ಪ್ರಿತಿಯನ್ನು ಹೊಂದಿರುವ ಸ್ವಾಮಿಯು ಎಂತಹ ಅದ್ಭುತವಾದವರು. ಇದರ ಅರ್ಥ : ಎಂಪೆರುಮಾನರು ಬೇರೆ ಅನೇಕ ಪ್ರಯೋಜನಗಳನ್ನು , ವರಗಳನ್ನು ಕೊಡಲು ಇಲ್ಲಿ ನಿಂತಿದ್ದಾರೆ. ತೆನ್ನನ್ ಎಂಬುದು ಆ ಕ್ಷೇತ್ರದ ರಾಜನೂ ಆಗಿರಬಹುದು.

ನಾಲ್ಕನೆಯ ಪಾಸುರಮ್:
ಆಳ್ವಾರರು ಎಂಪೆರುಮಾನರ ಪ್ರೀತಿಯನ್ನು ಆಳ್ವಾರರ ದೇಹದ ಮೇಲೆ ಇಟ್ಟಿರುವುದನ್ನು ಮತ್ತು ತಿರುಮಲೈಯಲ್ಲಿದ್ದುಕೊಂಡು ಆಳ್ವಾರರನ್ನು ಎಂಪೆರುಮಾನರು ಆನಂದಿಸುವುದನ್ನು ವಿವರಿಸುತ್ತಾರೆ.

ಎನ್ಗೊಲ್ ಅಮ್ಮಾನ್ ತಿರುವರುಳ್‍ಗಳ್ ಉಲಗುಮ್ ಉಯಿರುಮ್ ತಾನೇಯಾಯ್,
ನನ್ಗೆನ್ನುಡಲುಮ್ ಕೈವಿಡಾನ್ ಞಾಲತ್ತೂಡೇ ನಡನ್ದುೞಕ್ಕಿ,
ತೆನ್ ಕೊಳ್ ತಿಶೈಕ್ಕು ತ್ತಿಲದಮಾಯ್‍ ನಿನ್‍ಱ ತಿರುಮಾಲಿರುಞ್ಜೋಲೈ,
ನಙ್ಗಳ್ ಕುನ್‍ಱಮ್ ಕೈವಿಡಾನ್ ನಣ್ಣಾ ಅಶುರರ್ ನಲಿಯವೇ ॥

ಎಂಪೆರುಮಾನರು ಎಲ್ಲಾ ಲೋಕಗಳೂ ಮತ್ತು ಜೀವಿಗಳಾಗಿದ್ದುಕೊಂಡು , ಅವರಲ್ಲಿ ಆಸಕ್ತಿಯಿಲ್ಲದ ಅಸುರರನ್ನು ವಧಿಸಿ, ಭೂಮಿಯ ಮೇಲೆ ಇಳಿದು, ಇಲ್ಲಿ ವಿಹರಿಸುತ್ತಾರೆ. ಅಲ್ಲಿಂದ ದಕ್ಷಿಣ ದಿಕ್ಕಿನಲ್ಲಿ ಬಹಳ ಎತ್ತರದಲ್ಲಿರುವ ಮತ್ತು ಎಲ್ಲ ಪರ್ವತಗಳಿಗೂ ಮುಖ್ಯವಾಗಿರುವ , ನಮ್ಮಂತಹವರಿಂದ ಆನಂದಿಸಲ್ಪಡುವ ತಾಣವಾದ ತಿರುಮಾಲಿರುಂಚೋಲೈಗೆ ಬಂದು, ಅಲ್ಲಿಂದ ನಿರ್ಗಮಿಸದೇ ಅಲ್ಲಿಯೇ ಇರುತ್ತಾರೆ. ನನ್ನ ದೇಹದಲ್ಲಿ ನೆಲೆಸಿ ಅಲ್ಲಿಂದಲೂ ನಿರ್ಗಮಿಸದೇ ಇದ್ದಾರೆ. ಅವರ ಶೀಲಮ್ (ಸರಳತೆ) ಎಂತಹ ಅದ್ಭುತವಾದುದು ಮತ್ತು ನಮಗೆ ಒಳಿತನ್ನು ಉಂಟುಮಾಡುವುದು ಎಂದು ಆಳ್ವಾರರು ವರ್ಣಿಸಿದ್ದಾರೆ.

ಐದನೆಯ ಪಾಸುರಮ್:
ಎಂಪೆರುಮಾನರು ನನ್ನಲ್ಲಿ ಒಂದಾಗಿ , ತಿರುವಾಯ್ಮೊೞಿಯನ್ನು ನನ್ನ ಬಾಯಿಯಿಂದ ಕೇಳಿ ಮತ್ತು ಹತೋಟಿಯಿಲ್ಲದ, ತುಂಬಿ ಹರಿಯುವ ಆನಂದಮಯವಾದ ತಿರುವಾಯ್ಮೊೞಿಯನ್ನು ಕೇಳಿ, ನಿತ್ಯಸೂರಿಗಳು ಮತ್ತು ಮುಕ್ತಾತ್ಮಗಳು ಹಾಡಿದಾಗ ತಲೆದೂಗುವಂತೆ , ಎಂಪೆರುಮಾನರು ತಮ್ಮ ತಲೆಯನ್ನು ಆಡಿಸುತ್ತಿದ್ದಾರೆ.

ನಣ್ಣಾ ಅಶುರರ್ ನಲಿವೆಯ್‍ದ ನಲ್ಲ ಅಮರರ್ ಪೊಲಿವೆಯ್‍ದ,
ಎಣ್ಣಾದನಗಳ್ ಎಣ್ಣುಮ್ ನನ್ ಮುನಿವರ್ ಇನ್ಬಮ್ ತಲೈಚ್ಚಿಱಪ್ಪ,
ಪಣ್ಡಾರ್ ಪಾಡಲಿನ್ ಕವಿಗಳ್ ಯಾನಯ್ ತ್ತನ್ನೈ ತ್ತಾನ್ ಪಾಡಿ,
ತೆನ್ನಾವೆನ್ನುಮ್ ಎನ್ನಮ್ಮಾನ್ ತಿರುಮಾಲಿರುಞ್ಜೋಲೈಯಾನೇ॥

ಅಡಚಣೆಯಾಗಿರುವ ಮತ್ತು ಅವನನ್ನು ಹೊಂದಲು ನಿರಾಸಕ್ತರಾಗಿರುವ ಅಸುರರನ್ನು ಸಂಹರಿಸಿ, ತಮ್ಮನ್ನು ಹೊಂದಲು ಆಸಕ್ತರಾಗಿರುವ , ಭಕ್ತಿಯನ್ನು ಹೊಂದಿರುವ ಅನುಕೂಲಕರವಾದ ದೈವೀಕರಿಗೆ ಐಶ್ವರ್‍ಯವನ್ನು ಕರುಣಿಸಿ, ಅತ್ಯಂತ ಆಳವಾದ ತಪಸ್ಸನ್ನು ಮಾಡುವ ಧ್ಯಾನಿಗಳಿಗೆ ಅತ್ಯಂತ ಆಳವಾದ ಆನಂದವನ್ನು ನೀಡಿ, ನಮ್ಮಿಂದ ಊಹಿಸಲೂ ಸಾಧ್ಯವಾಗದ ಮಟ್ಟಿಗೆ ಕಲ್ಯಾಣ ಗುಣಗಳನ್ನೂ ಮತ್ತು ಸಕಲ ಐಶ್ವರ್‍ಯಗಳನ್ನೂ ಹೊಂದಿರುವ , ಅವಾಪ್ತ ಸಮಸ್ತ ಕಾಮನ್, ನನ್ನ ಸ್ವಾಮಿಯು ತಿರುಮಲೆಗೂ (ತಿರುಮಾಲಿರುಂಚೋಲೈಗೂ) ಸ್ವಾಮಿಯಾಗಿ ನಿಂತಿದ್ದಾರೆ. ನನ್ನಿಂದ ಮಧುರವಾದ ಪಾಸುರಗಳನ್ನು, ಸಂಗೀತದೊಂದಿಗೆ ಮತ್ತು ರಾಗ, ತಾಳಗಳೊಂದಿಗೆ ಸ್ವೀಕರಿಸಿ, ಅವರು ತಮ್ಮ ತಲೆಯನ್ನು ಮೃದುವಾಗಿ ಆಡಿಸಿ, ಈ ಪಾಸುರಗಳನ್ನು ಹಾಡಿಕೊಳ್ಳುತ್ತಾರೆ.

ಆರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಶ್ರೀಯಃ ಪತಿ (ಮಹಾಲಕ್ಶ್ಮಿಯ ಸಂಗಾತಿ) ಯಾದ ಎಂಪೆರುಮಾನರು ತಿರುಮಲೈನಲ್ಲಿ ಕರುಣೆಯಿಂದ ನಿಂತಿದ್ದಾರೆ, ಮತ್ತು ನನ್ನನ್ನು ಆಳಲು ಉತ್ಸುಕರಾಗಿದ್ದಾರೆ. “

ತಿರುಮಾಲಿರುಞ್ಜೋಲೈ ಯಾನೇಯಾಗಿ ಚ್ಚೆೞು ಮೂವುಲಗುಮ್, ತನ್
ಒರು ಮಾವಯಱ್ಱಿನುಳ್ಳೇ ವೈತ್ತು ಊೞಿಯೂೞಿ ತಲೈ ಅಳಿಕ್ಕುಮ್,
ತಿರುಮಾಲೆನ್ನೈ ಆಳುಮಾಲ್ ಶಿವನುಮ್ ಪಿರಮನುಮ್ ಕಾಣಾದು,
ಅರುಮಾಲೆಯ್‍ದಿ ಅಡಿ ಪರವ ಅರುಳೈಯೀನ್ದ ಅಮ್ಮಾನೇ ॥


ರುದ್ರರು, ಬ್ರಹ್ಮರು ಎಂಪೆರುಮಾನರನ್ನು ನೋಡಲು ಸಾಧ್ಯವಿಲ್ಲವಾದ್ದರಿಂದ, ಅವರು ಸೇರಲು ಅತಿಕಷ್ಟವಾದ , ಅವನ ದಿವ್ಯ ಪಾದಗಳನ್ನು ಬಹಳ ಭಕ್ತಿಯಿಂದ ಆರಾಧಿಸುತ್ತಾರೆ. ಆದ್ದರಿಂದ ಅವನ ಕೃಪೆಗೆ ಪಾತ್ರರಾಗುತ್ತಾರೆ. ಪ್ರತಿಯೊಂದು ಕಲ್ಪದಲ್ಲೂ ಅಂತಹ ಎಲ್ಲರಿಗಿಂತಲೂ ಶ್ರೇಷ್ಠನಾದ ಎಂಪೆರುಮಾನರು ಮೂರು ಲೋಕಗಳನ್ನೂ ಮೂಲಭೂತವಾಗಿ ರಕ್ಷಿಸಲು ಅವುಗಳನ್ನು ಒಂದು ನಿಶ್ಚಯವಾದ ರೀತಿಯಲ್ಲಿ ತನ್ನ ದಿವ್ಯ ಹೊಟ್ಟೆಯಲ್ಲಿರಿಸಿಕೊಳ್ಳುತ್ತಾರೆ. ಅದಕ್ಕೆ ತದ್ವಿರುದ್ಧವಾದ ವಸ್ತುಗಳನ್ನು ಒಂದಾಗಿರಿಸಿಕೊಳ್ಳಲು ಶಕ್ತಿಯಿದೆ. ಅವರಿಗೆ ಶ್ರೀಯಃ ಪತಿತ್ವಮ್ ಇರುವುದರಿಂದ ಮೋಹದಿಂದ ನನ್ನ ಸೇವೆಯನ್ನು ಸ್ವೀಕರಿಸಲು ತಾವು ತಿರುಮಾಲಿರುಂಚೋಲೈನಲ್ಲಿ ನೆಲೆಸಿದ್ದಾರೆ. ‘ಒರುಮಾ ‘ ಎಂದರೆ ಸಣ್ಣದಾದ ಮುಖ್ಯವಲ್ಲದ ಒಂದು ಭಾಗ (ಅವರ ಹೊಟ್ಟೆಯಲ್ಲಿ ) ಎಂದು ಅರ್ಥ.

ಏಳನೆಯ ಪಾಸುರಮ್ :
ಆಳ್ವಾರರು ತಮ್ಮ ಏಳ್ಗೆಗೆ ಕಾರಣವಾದ ತಿರುಮಾಲಿರುಂಚೋಲೈನನ್ನು ಹೊಗಳುತ್ತಾರೆ,

ಅರುಳೈ ಈ ಎನ್ನಮ್ಮಾನೇ ಎನ್ನುಮ್ ಮುಕ್ಕಣ್ ಅಮ್ಮಾನುಮ್,
ತೆರುಳ್ ಕೊಳ್ ಪಿರಮನಮ್ಮಾನುಮ್ ದೇವರ್ ಕೋನುಮ್ ತೇವರುಮ್,
ಇರುಳ್‍ಗಳ್ ಕಡಿಯುಮ್ ಮುನಿವರುಮ್ ಏತ್ತುಮ್ ಅಮ್ಮಾನ್ ತಿರುಮಲೈ,
ಮರುಳ್‍ಗಳ್ ಕಡಿಯುಮ್ ಮಣಿಮಲೈ ತಿರುಮಾಲಿರುಞ್ಜೋಲೈ ಮಲೈಯೇ ॥


ಎಂಪೆರುಮಾನರು ಈ ರೀತಿಯಾಗಿ ಹೊಗಳಲ್ಪಡುತ್ತಾರೆ. “ ಓಹ್! ನನ್ನ ಸ್ವಾಮಿಯೇ! ಕರುಣೆಯಿಂದ ದಯೆತೋರು “ ಎಂದು ಜ್ಞಾನ ಮುಂತಾದುವುಗಳನ್ನು ಹೊಂದಿರುವ ಮೂರುಕಣ್ಣುಗಳಿರುವ ರುದ್ರನು ಮತ್ತು ಸೃಷ್ಟಿಗೇ ಕರ್ತೃ ಮತ್ತು ಮೂಲಭೂತನಾಗಿರುವ ಬ್ರಹ್ಮನು , ದೇವ ದೇವತೆಗಳಿಗೆಲ್ಲಾ ಮತ್ತು ಪುರಾಣಗಳಿಂದ ಅಂಧಕಾರವನ್ನು ದೂರ ಮಾಡುವ ಋಷಿಗಳನ್ನು ನಿಯಂತ್ರಿಸುವ ಇಂದ್ರನಿಂದ ಪೂಜಿಸಲ್ಪಡುತ್ತಾನೆ. ದಿವ್ಯ ಪರ್ವತವು ಅಂತಹ ಎಂಪೆರುಮಾನರ ಒಂದು ವಾಸಸ್ಥಾನವಾಗಿದೆ. ಅಂತಹ ದಿವ್ಯ ಬೆಟ್ಟವು ಅವಿದ್ಯಾ (ಅಜ್ಞಾನ) ಮುಂತಾದುವುಗಳು ನಮ್ಮ ಗುರಿಯನ್ನು ತಲುಪಲು ತೊಂದರೆಗಳನ್ನುಂಟುಮಾಡುವ ಅನೇಕ ಅಡಚಣೆಗಳನ್ನು ದೂರಮಾಡುತ್ತದೆ. ಮತ್ತು ವಿಶಿಷ್ಟವಾಗಿ ಪರಮ ಆನಂದವನ್ನು ನೀಡುತ್ತದೆ. ಅದೇ ತಿರುಮಾಲಿರುಂಚೋಲೈ.

ಎಂಟನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಗುಡಿಗಳ ಮೇಲೆ ಅವನಿಗಿರುವ ಆಸೆಯನ್ನು ನನ್ನ ಅಂಗಗಳ ಮೂಲಕ ವ್ಯಕ್ತಪಡಿಸುತ್ತಾನೆ. ತಿರುಮಲೈನನ್ನು ಮೊದಲುಗೊಂಡು. ಅವನು ನನ್ನನ್ನು ಬಿಟ್ಟು ಒಂದು ನಿಮಿಷವೂ ಅಗಲಲಾರ. ಎಂತಹ ಅದ್ಭುತವಾದ ಸ್ಥಿತಿ ಇದು.”

ತಿರುಮಾಲಿರುಞ್ಜೋಲೈ ಮಲೈಯೇ ತಿರುಪ್ಪಾಱ್ಕಡಲೇ ಎನ್‍ತಲೈಯೇ,
ತಿರುಮಾಲ್ ವೈಕುನ್ದಮೇ ತಣ್ ತಿರುವೇಂಙ್ಗಡಮೇ ಎನದುಡಲೇ,
ಅರು ಮಾಮಯತ್ತೆನದುಯಿರೇ ಮನಮೇ ವಾಕ್ಕೇ ಕರುಮಮೇ,
ಒರುಮಾನೊಡಿಯುಮ್ ಪಿರಿಯಾನ್ ಎನ್ನೂೞಿಮುದಲ್ವನೊರುವನೇ ॥


ಎಂಪೆರುಮಾನರು ಎಲ್ಲದಕ್ಕೂ ಕಾರಣಕರ್ತರಾಗಿರುವರು. ಅವುಗಳು ಕಾಲದ ಅಧೀನದಲ್ಲಿರುವುದು. ನನ್ನನ್ನು ಹೊಂದಲು ಅವರು ಒಂದು ಘಳಿಗೆಯೂ ತಿರುಮಾಲಿರುಂಚೋಲೈ ಬೆಟ್ಟವು , ತಿರುಪ್ಪಾರ್ಕಡಲ್ ,ನನ್ನ ತಲೆಯು , ಅದರಿಂದ ಅಗಲಲಾರರು. ಅದು ಪರಮಪದಮ್ ಅಲ್ಲಿ ಅವರು ಶ್ರೀಯಃಪತಿಯಾಗಿ , ಶ್ರಿಯಾಸಾರ್ದಮ್ ನಲ್ಲಿ ಹೇಳಿರುವ ಹಾಗೆ ಶಾಶ್ವತವಾಗಿ ನೆಲೆಸಿದ್ದಾರೆ. ಉತ್ತೇಜಕವಾದ , ಪೆರಿಯ ತಿರುಮಲೈ , ನನ್ನ ದೇಹವು, ಅಲ್ಲಿ ನನ್ನ ಆತ್ಮವು ಕೈಗೆಟುಕದ ಶ್ರೇಷ್ಠವಾದ ಅದ್ಭುತವಾದ ಪ್ರಕೃತಿಯೊಂದಿಗೆ, ನನ್ನ ಮನಸ್ಸು , ನನ್ನ ಮಾತುಗಳು ಮತ್ತು ನನ್ನ ಕ್ರಿಯೆಯು ಮಿಲನವಾಗಿದೆ. ಎಂತಹ ವಿಶಿಷ್ಠವಾದವನು ಅವನು. ಪ್ರತಿಯೊಂದು ವಾಕ್ಯದ ಅಂತ್ಯದಲ್ಲಿರುವ ‘ಏ’ ಕಾರಮ್ ಅವನಿಗೆ ನನ್ನ ಪ್ರತಿಯೊಂದು ಸಂಗತಿಯೂ ಎಂತಹ ಪ್ರಿಯವಾಗಿದೆ ಎಂದು ಸೂಚಿಸುತ್ತದೆ.

ಒಂಬತ್ತನೆಯ ಪಾಸುರಮ್:
ಆಳ್ವಾರರು ತಮ್ಮ ದಿವ್ಯ ಹೃದಯಕ್ಕೆ ಹೇಳುತ್ತಾರೆ, “ನಮಗೆ ಎಲ್ಲಾ ರೀತಿಯ ಸಂಪತ್ತೂ ತಿರುಮಲೈನಿಂದ ದೊರಕಿದೆ. ಆದ್ದರಿಂದ ಇಲ್ಲಿಂದ ಹೋಗುವುದು ಬೇಡ.” ಎಂದು ಮತ್ತು ಎಂಪೆರುಮಾನರ ತಮ್ಮನ್ನು ದೇಹ ಸಮೇತವಾಗಿ ತಿರುನಾಡಿಗೆ(ಪರಮಪದಕ್ಕೆ) ಕರೆದೊಯ್ಯಲು ಇರುವ ಆಸೆಯನ್ನು ತಿಳಿದು ಎಂಪೆರುಮಾನರಿಗೆ ಹೇಳುತ್ತಾರೆ, “ನೀನು ಈ ದೇಹವನ್ನು ಇಲ್ಲಿಯೇ ವಿಸರ್ಜಿಸಿ ಅದನ್ನು ತೊರೆದು ನನ್ನನ್ನು ಪರಮಪದಕ್ಕೆ ಕರೆದೊಯ್ಯಬೇಕು” ಎಂದು ಹೇಳುತ್ತಾರೆ.

ಊೞಿ ಮುದಲ್ವನೊರುವನೇ ಎನ್ನುಮ್ ಒರುವನ್ ಉಲಗೆಲ್ಲಾಮ್,
ಊೞಿದೋಱುಮ್ ತನ್ನುಳ್ಳೇ ಪಡೈತ್ತು ಕ್ಕಾತ್ತು ಕ್ಕೆಡುತ್ತುೞಲುಮ್,
ಆೞಿವಣ್ಣನ್ ಎನ್ನಮ್ಮಾನ್ ಅನ್ದಣ್ ತಿರುಮಾಲಿರುಞ್ಜೋಲೈ ,
ವಾೞಿ ಮನಮೇ ಕೈವಿಡೇಲ್ ಉಡಲುಮ್ ಉಯಿರುಮ್ ಮಙ್ಗ ಒಟ್ಟೇ ॥


ಓಹ್! ಹೃದಯವೇ ! ನಮ್ಮ ದೇಹ, ಪ್ರಾಣ ವಾಯು ಮುಂತಾದುವುಗಳು ನಶ್ವರವಾದ ವಸ್ತುಗಳು. ಅವುಗಳನ್ನು ಬಿಟ್ಟು, ಉತ್ಸಾಹ ಭರಿತವಾದ ಸುಂದರ ತಿರುಮಾಲಿರುಂಚೋಲೈಗೆ ಬಂದು ಸೇರಬೇಕು. ಅದು ನನ್ನ ಸ್ವಾಮಿಯ ಸರಿಯಾದ ಸಂಬಂಧ ಹೊಂದಿರುವ ನೆಲೆಯಾಗಿದೆ. ಅವನು ವಿಶಿಷ್ಟವಾದ ಏಕಮೇವ ಕಾರಣನು ಈ ಕಾಲದ ನಿಯಂತ್ರಣದಲ್ಲಿರುವ ಸಮಸ್ತ ಸೃಷ್ಟಿಗೆ. ಅದನ್ನು ‘ಕಾರಣ ವಾಕ್ಯಮ್’ ನಲ್ಲಿ ಹೇಳಿರುವ ಹಾಗೆ ಅವನು ‘ಏಕಮೇವ’ ನಾಗಿರುವನು. ಅವನು ಅಪರಿಮಿತನಾಗಿ, ಎಲ್ಲಾ ಲೋಕಗಳನ್ನು ದೈನಂದಿನ ಸೃಷ್ಟಿಕರ್ತನು, ರಕ್ಷಕನು, ಪೋಷಕನು ಮತ್ತು ನಾಶಮಾಡುವವನು. ಅವನು ತನ್ನ ದಿವ್ಯ ಇಚ್ಛೆಯ ಒಂದು ಸಣ್ಣ ಭಾಗದಿಂದ ಇದನ್ನು ಪೂರೈಸುವನು. ನಿನ್ನ ಆಸೆಯು ತೀರುವವರೆಗೆ ಬಿಡಬೇಡ. ಇಂತಹ ದಿವ್ಯವಾದ ಬೆಟ್ಟಕ್ಕೆ ಶರಣುಹೊಂದಿ ಅನೇಕ ವರ್ಷಗಳ ಕಾಲ ಬದುಕು. ‘ಆೞಿ ವಣ್ಣನ್ ‘ ಎಂದರೆ ‘ಅವನ ದಿವ್ಯ ರೂಪ ಅಪರಿಮಿತವಾಗಿ ಆನಂದಭರಿತವಾದುದು’ ಎಂದು ಅರ್ಥ.

ಹತ್ತನೆಯ ಪಾಸುರಮ್:
ಆಳ್ವಾರರು ಎಂಪೆರುಮಾನರಿಗೆ ಪ್ರಾರ್ಥಿಸಿದರೂ, ಎಂಪೆರುಮಾನರು ಆಳ್ವಾರರ ದೇಹದ ಮೇಲಿನ ಆಸೆಯಿಂದ ಅವರ ಕೋರಿಕೆಯನ್ನು ಒಪ್ಪಲಿಲ್ಲ. ಆದ್ದರಿಂದ ಆಳ್ವಾರರು ಎಂಪೆರುಮಾನರಿಗೆ ಇಪ್ಪತ್ನಾಲ್ಕು ಮೂಲವಸ್ತುಗಳಿಂದ ಮಾಡಿದ ಪ್ರಕೃತಿಯನ್ನು ತಿಳಿಸಿ, ಅದು ತ್ಯಜಿಸಲ್ಪಡುವುದು ಎಂದು ಅದನ್ನು ದಯವಿಟ್ಟು ನಿರ್ಮೂಲನೆ ಮಾಡುವಂತೆ ಏಕೆಂದರೆ ಅದರ ಮೇಲೆ ತನಗೆ ಸ್ವಲ್ಪವೂ ಆಸೆಯಿಲ್ಲದೆ ಇರುವುದರಿಂದ.

ಮಙ್ಗವೊಟ್ಟುನ್ ಮಾಮಾಯೈ ತಿರುಮಾಲಿರುಞ್ಜೋಲೈ ಮೇಯ,
ನಙ್ಗಳ್‍ಕೋನೇ ಯಾನೇ ನೀಯಾಗಿ ಎನ್ನೈ ಅಳಿತ್ತಾನೇ,
ಪೊಙ್ಗೆಮ್ ಪುಲನುಮ್ ಪೊಱಿಯೈನ್ದುಮ್ ಕರುಮೇನ್ದಿರಿಯಮ್ ಐಮ್ಬೂದಮ್,
ಇಙ್ಗು ಇವ್ವುಯಿರೇಯ್ ಪಿರ ಕಿರುತಿ ಮಾನಾಙ್ಗಾರ ಮನಙ್ಗಳೇ ॥


ಓಹ್! ಶಾಶ್ವತವಾಗಿ ತಿರುಮಾಲಿರುಂಚೋಲೈ ಬೆಟ್ಟದಲ್ಲಿ ನೆಲೆಸಿರುವವನೇ! ನನ್ನಂತಹವರಿಗೆ ಸ್ವಾಮಿಯಾಗಿರುವವನೇ! ನಿನಗೂ ನನಗೂ ವ್ಯತ್ಯಾಸವಿಲ್ಲದೇ, ನಾನು ನನ್ನ ರಕ್ಷಕನಿಗೇ ಸಲಹೆ ಕೊಡುವಂತೆ, ದಯವಿಟ್ಟು ಈ ಅದ್ಭುತವಾದ ಪ್ರಕೃತಿಯನ್ನು ಮತ್ತು ಈ ಪ್ರಕೃತಿಯ ಮಾಯೆಯನ್ನು ನನ್ನಿಂದ ದೂರಗೊಳಿಸು. ಅದು ಐದು ರೀತಿಯ ಹೆಚ್ಚುವರಿಯಾಗುವ ಆನಂದವನ್ನು ಕೊಡುವ ಅಂಶಗಳನ್ನು ಒಳಗೊಂಡಿದೆ. ಅವುಗಳು ,ಶಬ್ದ, ಸ್ಪರ್ಶ, ರೂಪ, ರುಚಿ ಮತ್ತು ವಾಸನೆ. ಐದು ರೀತಿಯ ಪಾಶಗಳಾದ , ಜ್ಞಾನೇಂದ್ರಿಯಗಳು ಅವು ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಚರ್ಮ, ಐದು ಕರ್ಮೇಂದ್ರಿಯಗಳು ಅಂತಹ ಕೆಲಸಕ್ಕೆ ಸಹಾಯ ಮಾಡುವುದು. ಪಂಚಭೂತಗಳು ಅವು ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಅವುಗಳು ನಮ್ಮ ದೇಹದ ಸೃಷ್ಟಿಗೆ ಕಾರಣವಾದುವುಗಳು , ಅವುಗಳು ನಮ್ಮ ಇಂದ್ರಿಯಗಳನ್ನು ಹಿಡಿದುಕೊಂಡಿವೆ. ಮೂಲಭೂತ ಅಂಶಗಳು ನಮ್ಮ ಆತ್ಮವನ್ನು ಈ ಸಂಸಾರದಲ್ಲಿ ಬಿಗಿಯಾಗಿ ಬಂಧಿಸಿವೆ. ‘ಮಹಾನ್’ ಎಂಬುದು ಸೃಷ್ಟಿಗೆ ಪೂರಕವಾಗಿದೆ, ‘ಅಹಂಕಾರ’ ಎಂಬುದು ತರ್ಕಬುದ್ಧಿ ಮತ್ತು ನಾನು ಎಂಬುದರ ಪೂರಕವಾಗಿ ಸಂಕಲ್ಪದ ಕಾರಣವಾಗಿದೆ.

ಹನ್ನೊಂದನೆಯ ಪಾಸುರಮ್:
ಈ ಪದಿಗೆಯಲ್ಲಿ ಮಹತ್ ಮತ್ತು ಅಹಂಕಾರಮ್‍ನನ್ನು ತಿರುಮಲೈನಲ್ಲಿ ನಿಂತು ವಿವರಿಸಲಾಗಿದೆ.

ಮಾನಾಙ್ಗಾರ ಮನಮ್ ಕೆಡ ಐವರ್ ವನ್‍ಕೈಯರ್ ಮಙ್ಗ ,
ತಾನಾಙ್ಗಾರಮಾಯ್ ಪ್ಪುಕ್ಕು ತ್ತಾನೇ ತ್ತಾನೇ ಯಾನಾನೈ,
ತೇನಾಙ್ಗಾರ ಪ್ಪೊೞಿಲ್ ಕುರುಗೂರ್ ಚ್ಚಡಗೋಪನ್ ಶೊಲ್ಲಾಯಿರತ್ತುಳ್,
ಮಾನಾಙ್ಗಾರತ್ತಿವೈಪತ್ತುಮ್ ತಿರುಮಾಲಿರುಞ್ಜೋಲೈ ಮಲೈಕ್ಕೇ ॥


ಶ್ರೇಷ್ಠವಾದ ಅಭಿಮಾನವನ್ನು ಹೊಂದಿರುವ ಎಂಪೆರುಮಾನರು, ಐದು ಇಂದ್ರಿಯಗಳನ್ನು ನಾಶ ಪಡಿಸಿ, ದೇಹದೊಂದಿಗೆ ಮಹಾನ್, ಅಹಂಕಾರಮ್ ಮತ್ತು ಮನಸ್ಸಿನ ಮೂಲಕ ಸಂಪರ್ಕ ಹೊಂದಿ, ನನ್ನೊಳಗೆ ಪ್ರವೇಶಿಸಿ, ನಾನೇ ಮತ್ತು ನನಗೆ ಸಂಬಂಧಿಸಿದ ವಸ್ತುಗಳೇ ಆಗಿದ್ದಾರೆ. ಹೆಮ್ಮೆಯಿಂದ ನಿಂತಿರುವ ತೋಟಗಳಿಂದ ಕೂಡಿದ , ದುಂಬಿಗಳಿಂದ ಆವೃತ್ತವಾದ ಆಳ್ವಾರ್ ತಿರುನಗರಿಗೇ ನಾಯಕರಾದ ನಮ್ಮಾಳ್ವಾರರು ಈ ಹತ್ತು ಪಾಸುರಗಳನ್ನು ಸಾವಿರ ಪಾಸುರಗಳೊಂದಿಗೆ ತಿರುಮಾಲಿರುಂಚೋಲೈಗಾಗಿಯೇ ಕರುಣೆಯಿಂದ ಹೇಳಿದ್ದಾರೆ. ಈ ಪದಿಗೆಯು ಮಹತ್ ಮತ್ತು ಅಹಂಕಾರಮ್‍ನ ಎಲ್ಲಾ ತೊಂದರೆಗಳನ್ನೂ ಕೇಂದ್ರೀಕರಿಸಿ ಹೇಳುತ್ತದೆ. ಇದರ ಅರ್ಥ ಈ ಪಾಸುರಗಳನ್ನು ಕಲಿತವರಿಗೆ , ಮಹತ್ ಮತ್ತು ಅಹಂಕಾರಗಳು ಮುಂತಾದ ತೊಂದರೆಗಳು ಸಹಜವಾಗಿ ತೊರೆದು ಹೋಗುತ್ತವೆ.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-10-7-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org