ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಪಾಸುರ ೬೨
ಒಬ್ಬನು ಹೇಗೆ ಸುಲಭವಾಗಿ ಪರಮಪದವನ್ನು ಪಡೆಯಬಹುದು ಎಂದು ಅವರು ಕರುಣೆಯಿಂದ ಹೇಳುತ್ತಾರೆ.
ಉಯ್ಯ ನಿನೈವು ಉಣ್ಡಾಗಿಲ್ ಉಂ ಗುರುಕ್ಕಳ್ ತಂ ಪದತ್ತೇ
ವೈಯುಂ ಅನ್ಬು ತನೈ ಇಂದ ಮಾನಿಲತ್ತೀರ್- ಮೈ ಉರೈಕ್ಕೇನ್
ಪೈಯರವಿಲ್ ಮಾಯನ್ ಪರಮಪದಂ ಉಂಗಳುಕ್ಕಾಂ
ಕೈ ಇಲಂಗು ನೆಲ್ಲಿಕ್ಕನಿ
ಓಹ್ ಸಂಸಾರದ ಈ ವಿಸ್ತಾರವಾದ ಜಗತ್ತಿನಲ್ಲಿ ವಾಸಿಸುತ್ತಿರುವವರೇ! ಉನ್ನತಿಗೇರುವ ಆಲೋಚನೆ ಇದ್ದರೆ, ಅದನ್ನು ಸಾಧಿಸಲು ಸರಳ ಮಾರ್ಗವನ್ನು ನಾನು ನಿಮಗೆ ಹೇಳುತ್ತೇನೆ. ನನ್ನ ಮಾತು ಕೇಳಿ. ನಿಮ್ಮ ಅಚಾರ್ಯರ ದಿವ್ಯ ಪಾದಗಳಲ್ಲಿ ಭಕ್ತಿಯನ್ನು ನಿರ್ವಹಿಸಿ.
ಅದ್ಭುತ ಘಟಕವಾದ ಎಂಪೆರುಮಾನರ ದಿವ್ಯ ವಾಸಸ್ಥಾನವಾದ ಪರಮಪದಂ ಅನ್ನು ನೀವು ಪಡೆಯುತ್ತೀರಿ, ಅವರು ಹೆಡೆಗಳನ್ನು ವಿಸ್ತರಿಸಿದ ಆದಿಶೇಷನ ಮೇಲೆ ಒರಗುತ್ತಿದ್ದಾರೆ. ಇದುವೆ ಸತ್ಯ, ಮತ್ತು ಒಬ್ಬರ ಅಂಗೈ ಹಿಂಭಾಗದಂತೆ ಸ್ಪಷ್ಟವಾದದ್ದು.”ಉಂಗಳುಕ್ಕು” ಎಂಬ ಸಾಮಾನ್ಯ ಪದದ ಬಳಕೆಯಿಂದ, “ನಿಮ್ಮೆಲ್ಲರಿಗೂ”ಎಂದು , ಅವರ ಆಚಾರ್ಯರೊಂದಿಗೆ ಸಂಪರ್ಕ ಹೊಂದಿರುವ ಮತ್ತು ಅವರ ಬಗ್ಗೆ ಭಕ್ತಿ ಹೊಂದಿರುವ ಎಲ್ಲರಿಗೂ ಇದು ಅನ್ವಯಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಭರತನ ಬಳಿ ಭಕ್ತಿ ಹೊಂದಿದ್ದ ಶತ್ರುಘ್ನನು ಶ್ರೀ ರಾಮನ ಪ್ರೀತಿಯನ್ನು ಸಾಧಿಸಿದಂತೆಯೇ, ಅವರ ಆಚಾರ್ಯರಲ್ಲಿ ಭಕ್ತಿ ಹೊಂದಿದವರು ಸುಲಭವಾಗಿ ಎಂಪೆರುಮಾನರನ್ನು ಪಡೆಯುತ್ತಾರೆ.ಇವು ಯಾವುದೇ ಸುಳ್ಳು ಪದಗಳಿಲ್ಲದವನು, ಎಂದು ಕರೆಯಲ್ಪಡುವ ಮನವಾಳಮಾಮುನಿಯ ದೈವಿಕ ಪದಗಳಾಗಿರುವುದರಿಂದ ಇದರಲ್ಲಿ ಯಾವುದೇ ಅನುಮಾನವಿಲ್ಲ.
ಪಾಸುರ ೬೩
ಅಚಾರ್ಯರು ಮಾಡಿದ ಮಹತ್ವವಾದ ಹಿತವನ್ನು ಅವರು ಕರುಣೆಯಿಂದ ಮಾತನಾಡುತ್ತಾರೆ ಮತ್ತು ಶಿಷ್ಯನು ಅದಕ್ಕಾಗಿ ಅವರಿಗೆ ಕೃತಜ್ಞನಾಗಿರುತ್ತಾನೆ.
ಆಚಾರ್ಯನ್ ಸೈದ ಉಪಕಾರಮಾನ ಅದು
ತುಯ್ದಾಗ ನೆಂಜು ತನ್ನಿಲ್ ತೋನ್ಱುಮೇಲ್ -ದೇಶಾನ್
ದರತ್ತಿಲ್ ಇರುಕ್ಕ ಮನಂ ತಾನ್ ಪೊರುಂದ ಮಾಟ್ಟಾದು
ಇರುತ್ತಾಲ್ ಇನಿ ಏದು ಅಱಿಯೋಂ ಯಾಂ
ಆಚಾರ್ಯರು ನೀಡಿದ ಪ್ರಯೋಜನವು ದೋಷರಹಿತವಾಗಿದೆ ಎಂದು ಶಿಷ್ಯನೊಬ್ಬನ ಮನಸ್ಸಿನಲ್ಲಿ ಅರಿವಾದರೆ, ಅವನು ತನ್ನ ಅಚಾರ್ಯನಿಗೆ ಸೇವೆಯನ್ನು ಮಾಡಲು ಸಾಧ್ಯವಾಗದ ಸ್ಥಳದಲ್ಲಿ ಇರುವುದು ಅವನಿಗೆ ಅಸಮರ್ಥ ಎನಿಸುವುದು.
ಶಿಷ್ಯನಿಗೆ ಜ್ಞಾನವನ್ನು ದಯಪಾಲಿಸುವುದು, ಶಿಷ್ಯನು ತಪ್ಪಾದರೆ ಅದನ್ನು ಸರಿಪಡಿಸುವುದು, ಅವನನ್ನು ಸೇವೆಯಲ್ಲಿ ತೊಡಗಿಸಿಕೊಳ್ಳುವುದು, ಅವನಿಗೆ ಮೋಕ್ಷಮ್ ಅನ್ನು ಪಡೆಯುವುದು ಮುಂತಾದ ಅನೇಕ ಸಹಾಯಕ ಚಟುವಟಿಕೆಗಳಲ್ಲಿ ಆಚಾರ್ಯನ್ ತೊಡಗಿರುತ್ತಾರೆ.ಒಳ್ಳೆಯ ಶಿಷ್ಯನಾಗಿರುವವನು ಇವುಗಳ ಬಗ್ಗೆ ಯೋಚಿಸಿ ಕೃತಜ್ಞತೆಯಿಂದ ಸೇವೆಯನ್ನು ಮಾಡುವಲ್ಲಿ ನಿರತನಾಗಿರಬೇಕು.ಮಾಮುನಿಗಳ್ ಸ್ವತಃ ಆೞ್ವಾರ್ ತಿರುನಗರಿಯಲ್ಲಿ ತನ್ನ ಆಚಾರ್ಯನ್, ತಿರುವಾಯ್ಮೊೞಿ ಪಿಳ್ಳೈ ಈ ಜಗತ್ತಿನಲ್ಲಿ ಬಾಳಿದವರೆಗು , ವಾಸಿಸುತ್ತಿದ್ದರು ಮತ್ತು ಅವರ ಆಚಾರ್ಯನ್ ನೀಡಿದ ಸೇವೆಗಳನ್ನು ನಿರ್ವಹಿಸಿದರು.ಅವರ ಅಚಾರ್ಯರು ದೈವಿಕ ವಾಸಸ್ಥಾನಕ್ಕೆ [ಶ್ರೀವೈಕುಂಠಮ್] ತೆರಳಿದ ನಂತರವೇ ಅವರು ಶ್ರೀರಂಗಕ್ಕೆ ಹೋದರು.ಹೀಗಾಗಿ, ಅವರು ಸ್ವತಃ ಅನುಸರಿಸಿದ್ದನ್ನು ಇತರರಿಗೆ ಸೂಚಿಸುತ್ತಿದ್ದಾರೆ.
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/07/upadhesa-raththina-malai-62-63-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org