ಉಪದೇಶ ರತ್ನಮಾಲೈ – ಸರಳ ವಿವರಣೆ – ೬೦ ರಿಂದ ೬೧ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೬೦

ಈ ಪಾಸುರಂನಿಂದ ಪ್ರಾರಂಭಿಸಿ, ಅಚಾರ್ಯರ ಮೇಲಿನ ಭಕ್ತಿಯನ್ನು ಅವರು ಕರುಣೆಯಿಂದ ವಿವರಿಸುತ್ತಾರೆ, ಇದನ್ನು ಶ್ರೀವಚನ ಭೂಷಣಂನಲ್ಲಿ  ಶ್ರೇಷ್ಠ ಅರ್ಥವೆಂದು ಎತ್ತಿ ತೋರಿಸಲಾಗಿದೆ.ಈ ಪಾಸುರಂ ನಲ್ಲಿ, ಅವರು ತಮ್ಮ ಆಚಾರ್ಯರ ಬಗ್ಗೆ ಭಕ್ತಿ ಇಲ್ಲದವರನ್ನು ಎಂಪೆರುಮಾನ್ ಪ್ರೀತಿಸುವುದಿಲ್ಲ ಎಂದು ಕರುಣೆಯಿಂದ ಹೇಳುತ್ತಾರೆ.

ತನ್ ಗುರುವಿನ್ ತಾಳಿಣೈಗಳ್ ತನ್ನಿಲ್ ಅನ್ಬು ಒನ್ರು ಇಲ್ಲದಾರ್

ಅನ್ಬು ತನ್ ಪಾಲ್ ಸೈದಾಲುಂ ಅಂಬುಯೈಕೋನ್ -ಇನ್ಬ ಮಿಗು

ವಿಣ್ಣಾಡು ತಾನ್ ಅಳಿಕ್ಕ ವೇಣ್ಡಿಯಿರಾನ್ ಆದಲಾಲ್

ನಣ್ಣಾರ್ ಅವರ್ಗಳ್ ತಿರುನಾಡು

ಒಬ್ಬ ವ್ಯಕ್ತಿಯು ತನ್ನ ಆಚಾರ್ಯನ ದೈವಿಕ ಪಾದಗಳ ಬಗ್ಗೆ ಭಕ್ತಿ ಹೊಂದಿಲ್ಲದಿದ್ದರೆ, ಶ್ರೀಯಃ ಪತಿಯಾದ ಎಂಪೆರುಮಾನ್ ಕಡೆಗೆ ಆ ವ್ಯಕ್ತಿಯು ಎಷ್ಟು ಭಕ್ತಿಯನ್ನು ಹೊಂದಿದ್ದರೂ, ಅಪರಿಮಿತ ಆನಂದವನ್ನು ಹೊಂದಿರುವ ಪರಮಪದದಲ್ಲಿ ಅವನಿಗೆ ಸ್ಥಾನ ನೀಡಲು ಎಂಪೆರುಮಾನ್ ಬಯಸುವುದಿಲ್ಲ.

ಹೀಗಾಗಿ, ತನ್ನ ಆಚಾರ್ಯರ ಬಗ್ಗೆ ಭಕ್ತಿ ಇಲ್ಲದವನು ಪರಮಪದಂನ ದೈವಿಕ ವಾಸಸ್ಥಾನವನ್ನು ಪಡೆಯುವುದಿಲ್ಲ.

ಅಂಬುಯೈಕೋನ್ ಎಂಬ ಪದದ ಬಳಕೆಯೊಂದಿಗೆ ಪಿರಾಟ್ಟಿ [ಶ್ರೀ ಮಹಾಲಕ್ಷ್ಮಿ] ಅವರೊಂದಿಗಿನ ಸಂಪರ್ಕದ ಮೂಲಕ ಎಂಪೆರುಮಾನ್ ಅನ್ನು ಉಲ್ಲೇಖಿಸಲಾಗಿರುವುದರಿಂದ,  ದೋಷಗಳನ್ನು ಮರೆಮಾಚುವ ಮೂಲಕ ಚೇತನವನ್ನು ಎಂಪೆರುಮಾನನ ಹತ್ತರ  ಶಿಫಾರಸು ಮಾಡುವ ಪಿರಾಟ್ಟಿ ಎಂಪೆರುಮಾನನೊಂದಿಗೆ ಇರುವುದು ಕಂಡುಬರುವುದು, ತಮ್ಮ ಆಚಾರ್ಯರಿಗೆ ಮೀಸಲಾಗಿಲ್ಲದವರನ್ನು ಎಂಪೆರುಮಾನ್ ಸ್ವೀಕರಿಸುವುದಿಲ್ಲ.

ಪಾಸುರ ೬೧

ಶ್ರೀ ಮಹಾಲಕ್ಷ್ಮಿಯ ಪತಿ, ಎಂಪೆರುಮಾನ್, ಯಾರೊಬ್ಬರು ತಮ್ಮ ಅಚಾರ್ಯರೊಂದಿಗೆ ಸಂಪರ್ಕ ಹೊಂದಿರುವವರಿಗೆ ಪರಮಪದಂ ನೀಡುತ್ತಾರೆ ಎಂದು ಮಾಮುನಿಗಳು ಕರುಣೆಯಿಂದ ಹೇಳುತ್ತಾರೆ.

ಜ್ಞಾನಂ ಅನುಟ್ಟಾನಂ ಇವೈ ನನ್ಱಾಗವೇ ಉಡೈಯನ್

ಆನ ಗುರುವೈ ಅಡಂದಕ್ಕಾಲ್-ಮಾನಿಲತ್ತೀರ್

ತೇನಾರ್ ಕಮಲತ್ ತಿರುಮಾಮಗಳ್ ಕೊಳೞುನನ್

ತಾನೇ ವೈಗುಂದಂ ತರುಂ

ಓ ಈ ವಿಸ್ತಾರವಾದ ಭೂಮಿಯ ಮೇಲೆ ಇರುವವರು! ಅರ್ಥ ಪಂಚಕಂ ಮತ್ತು ಆ ಜ್ಞಾನಕ್ಕೆ ಹೊಂದಿಕೆಯಾದ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಜವಾದ ಜ್ಞಾನ ಹೊಂದಿರುವ ಒಬ್ಬರ ಆಚಾರ್ಯನಿಗೆ ಶರಣಾದರೆ, ಜೇನುತುಪ್ಪದಿಂದ ತುಂಬಿದ ಕಮಲದ ಮೇಲೆ ವಾಸಿಸುವ ಶ್ರೀ ಮಹಾಲಕ್ಷ್ಮಿಯ ಅಧಿಪತಿ ಶ್ರೀಮನ್ನಾರಾಯಣರು ,ಸ್ವತಃ ತಾವೇ, ಅಂತಹ ಶಿಷ್ಯರಿಗೆ ಶ್ರೀ ವೈಕುಂಠವನ್ನು ನೀಡುತ್ತಾರೆ.ಈ ಪಾಸುರದಲ್ಲಿ, ಮಾಮುನಿಗಳು ಉತ್ತಮ ಅಚಾರ್ಯರು ಹೇಗೆ ಆಗುತ್ತಾರೆ ಎಂಬುದರ ಬಗ್ಗೆ ಕರುಣೆಯಿಂದ ಮತ್ತು ಸ್ಪಷ್ಟವಾಗಿ ಹೇಳಿದ್ದಾರೆ. ಅಚಾರ್ಯರಿಗೆ ಅರ್ಥ ಪಂಚಕಂ ಬಗ್ಗೆ ಜ್ಞಾನವಿರಬೇಕು – ಐದು ಅರ್ಥಗಳು – ಸ್ವಯಂ ಬಗ್ಗೆ ಜ್ಞಾನ, ಎಂಪೆರುಮಾನ್ ಬಗ್ಗೆ ಜ್ಞಾನ, ಎಂಪೆರುಮಾನ್ ಸಾಧಿಸುವ ವಿಧಾನಗಳ ಬಗ್ಗೆ ಜ್ಞಾನ,  ಅಂತಹ ಜ್ಞಾನದಿಂದ [ಎಂಪೆರುಮಾನ್ ತಲುಪಿದ ನಂತರ] ಆಗುವ ಹಿತ ಮತ್ತು ಸಾಧಿಸುವಲ್ಲಿನ ಅಡೆತಡೆಗಳ ಬಗ್ಗೆ ಜ್ಞಾನ. ಇದಲ್ಲದೆ, ಈ ಜ್ಞಾನಕ್ಕೆ ಅನುಗುಣವಾಗಿ, ಒಬ್ಬ ವ್ಯಕ್ತಿಯು ಎಂಪೆರುಮಾನ್ ಅನ್ನು ಸಾಧನವಾಗಿ ಭಾವಿಸಬೇಕು ಮತ್ತು ಅಚಾರ್ಯರ ಮೂಲಕ ಎಂಪೆರುಮಾನರಿಗೆ ಶರಣಾಗಬೇಕು ಮತ್ತು ಎಂಪೆರುಮಾನ್ ಮತ್ತು ಆಚಾರ್ಯರಿಗೆ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು.ಒಬ್ಬರು ಅಚಾರ್ಯನಿಗೆ ಶರಣಾಗಬೇಕು ಮತ್ತು ಅವರನ್ನು ಆಶ್ರಯವಾಗಿ ನೋಡಬೇಕು ಎಂದು ಮಾಮುನಿಗಳು ಈ ಪಾಸುರದಲ್ಲಿ  ಕರುಣೆಯಿಂದ ಹೇಳುತ್ತಾರೆ. ಈ ರೀತಿ ಅವರು ಪರಮಪದಂ ತಲುಪಲು ಸ್ವಂತವಾಗಿ ಯಾವುದೇ ಪ್ರಯತ್ನಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ; ಎಂಪೆರುಮಾನ್ ಸ್ವತಃ ಅದನ್ನು ನೀಡುತ್ತಾರೆ. ಈ ಪಾಸುರ ಇಡೀ ಪ್ರಬಂಧದ ಮೂಲತತ್ವವಾಗಿದೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/07/upadhesa-raththina-malai-60-61-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org 
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment