ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಪಾಸುರ ೪೬
ವೇದಗಳು ಅಂಗ, ಪ್ರಾಥಮಿಕ ಘಟಕ ಮತ್ತು ಉಪಾಂಗ, ದ್ವಿತೀಯಕ ಘಟಕವನ್ನು ಹೊಂದಿದೆ, ಅದೇ ರೀತಿ ತಿರುವಾಯ್ಮೊೞಿ ಇತರ ದಿವ್ಯ ಪ್ರಬಂಧಮ್‌ಗಳ ಮೂಲಕ ಪ್ರಾಥಮಿಕ ಮತ್ತು ದ್ವಿತೀಯಕ ಘಟಕಗಳನ್ನು ಹೊಂದಿರುವುದರಿಂದ (ಇತರ ಆೞ್ವಾರಗಳ ದೈವಿಕ ಸಂಯೋಜನೆಗಳು), ಮಾಮುನಿಗಳು, ವ್ಯಾಖ್ಯಾನಗಳನ್ನು ಬರೆದ ಮಹಾನ್ ವ್ಯಕ್ತಿಗಳನ್ನು ಆಚರಿಸಲು ಉದ್ದೇಶಿಸಿ, ಈ ಪ್ರಬಂಧಮ್‌ಗಳಿಗಾಗಿ, ಪೆರಿಯಾವಾಚ್ಚಾನ್ ಪಿಳ್ಳೈ ಅವರು ನಿರ್ವಹಿಸಿದ ಸರ್ವೋಚ್ಚ ಪ್ರಯೋಜನವನ್ನು ಆಚರಿಸುವುದರೊಂದಿಗೆ ಪ್ರಾರಂಭಿಸುತ್ತಾರೆ.
ಪೆರಿಯವಾಚ್ಚಾನ್ ಪಿಳ್ಳೈ ಪಿನ್ಬುಳ್ಳವೈಕ್ಕುಂ
ತೆರಿಯ ವ್ಯಾಕ್ಯೈಗಳ್ ಸೈವಲ್ -ಅರಿಯ
ಅರುಳಿಚ್ಚೆಯಲ್ ಪೊರುಳೈ ಆರಿಯರ್ಗಟ್ಕು ಇಪ್ಪೋದು
ಅರುಳಿಚ್ ಚೆಯಲಾಯ್ತಱಿಂದು
ಪೆರಿಯವಾಚ್ಚಾನ್ ಪಿಳ್ಳೈ, ಅವರನ್ನು ಪ್ರೀತಿಯಿಂದ ವ್ಯಾಖ್ಯಾನ ಚಕ್ರವರ್ತಿ (ವ್ಯಾಖ್ಯಾನಕಾರರಲ್ಲಿ ಚಕ್ರವರ್ತಿ) ಎಂದು ಕರೆಯಲಾಗುತ್ತದೆ ಮತ್ತು ನಂಪಿಳ್ಳೈ ಅವರ ಆತ್ಮೀಯ ಶಿಷ್ಯರಾಗಿದ್ದರು, ಅವರು ಆೞ್ವಾರ್ಗಳ ಉಳಿದ ಎಲ್ಲ 3000 ದಿವ್ಯ ಪ್ರಬಂಧಗಳಿಗೆ [ಅರುಳಿಚಯಲ್ಗಳು] ಅರ್ಥ ವ್ಯಾಖ್ಯಾನ ಎಲ್ಲರಿಗೂ ತಿಳಿಯಲೆಂದು ಬರೆದರು .
ತನ್ನ ಅಚಾರ್ಯರಿಂದ ಎಲ್ಲ ಅರುಳಿಚೆಯಲ್‌ಗಳ ಸಂಪೂರ್ಣ ಅರ್ಥಗಳನ್ನು ಆಲಿಸಿ ಮತ್ತು ಅವರ ದೈವಿಕ ಮನಸ್ಸಿನಲ್ಲಿ ಅವುಗಳನ್ನು ಸಂತೋಷದಿಂದ ಅನುಭವಿಸುವುದರ ಜೊತೆಗೆ ಇತರರಿಗೆ ಅರ್ಥಗಳನ್ನು ಸೂಚಿಸುವ ಏಕಮಾತ್ರ ಗೌರವವನ್ನು ಅವರು ಹೊಂದಿದ್ದಾರೆ.
ಪಾಸುರ ೪೭
ಮಾಮುನಿಗಳು ನಂಜೀಯರ್ ಮತ್ತು ಇತರರು ಕರುಣೆಯಿಂದ ಬರೆದ ವ್ಯಾಖ್ಯಾನಗಳ ಬಗ್ಗೆ ಕರುಣೆಯಿಂದ ಬರೆಯುತ್ತಾರೆ.
ನಂಜೀಯರ್ ಸೈದ ವ್ಯಾಖ್ಯಿಯೈಗಳ್ ನಾಲಿರಣ್ಡುಕ್ಕು
ಎಂಜಾಮಲ್ ಯಾವೈಕ್ಕುಂ ಇಲ್ಲೈಯೇ ತಂ ಸೀರಾಲ್
ವೈಯ ಗುರುವಿನ್ ತಂಬಿ ಮನ್ನು ಮಣವಾಳ ಮುನಿ
ಸೈಯ್ಯುಂ ಅವೈ ತಾಮುಂ ಸಿಲ
ನಂಜೀಯರ್ ಕೆಲವು ಪ್ರಬಂಧಗಳಿಗೆ ವ್ಯಾಖ್ಯಾನಗಳನ್ನು ಕರುಣೆಯಿಂದ ಬರೆದಿದ್ದರೂ, ಅವರು ಪೆರಿಯವಾಚ್ಚಾನ್ ಪಿಳ್ಳೈ (ಅವರು ಇದ್ದಿದ್ದರೆ ಅದ್ಭುತವಾಗುತ್ತಿತ್ತು!) ನಂತೆ ಎಲ್ಲಾ ಪ್ರಬಂಧಗಳಿಗೆ ವ್ಯಾಖ್ಯಾನಗಳನ್ನು ಬರೆಯಲಿಲ್ಲ.ಅೞಗಿಯ ಮಣವಾಳ ಪೆರುಮಾಳ್ ನಾಯನಾರ್, ಪಿಳ್ಳೈ ಲೋಕಾಚಾರ್ಯರ್ ಅವರ ದೈವಿಕ ಕಿರಿಯ ಸಹೋದರ, ಮತ್ತು ಶ್ರೇಷ್ಠ, ಶುಭ ಗುಣಗಳು ಮತ್ತು ಅರುಳಿಚೇಯಲ್ಗಳ ಮತ್ತು ಶಾಸ್ತ್ರಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅವರು ಕೆಲವು ಪ್ರಬಂಧಗಳಿಗೆ ಕರುಣಾಮಯದಿಂದ ಅದ್ಭುತ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಅದೇ ರೀತಿ , ಶ್ರೇಷ್ಠತೆಯನ್ನು ಹೊಂದಿದ್ದ ವಾದಿ ಕೇಸರಿ ಅೞಗಿಯ ಮಣವಾಳ ಜೀಯರ್ ಸಹ ಕೆಲವು ವ್ಯಾಖ್ಯಾನಗಳನ್ನು ಕರುಣೆಯಿಂದ ಬರೆದಿದ್ದಾರೆ.
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/06/upadhesa-raththina-malai-46-47-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org