ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಪಾಸುರ ೫೧
ನಂಪಿಳ್ಳೈಯವರಿಗೆ ಲೋಕಾಚಾರ್ಯರ್ ಎಂಬ ವೈಶಿಷ್ಟ್ಯವಾದ ದಿವ್ಯ ಹೆಸರು ಬಂದ ರೀತಿಯನ್ನು ಮಾಮುನಿಗಳು ದಯೆತೋರಿ ವಿವರಿಸುತ್ತಾರೆ.
ತುನ್ನು ಪುಗೞ್ ಕಂದಾಡೈ ತೋೞಪ್ಪರ್ ತಂ ಉಗಪ್ಪಾಲ್
ಎನ್ನ ಉಲಗಾರಿಯನೋ ಎನ್ಱು ಉರೈಕ್ಕಪ್ -ಪಿನ್ನೈ
ಉಲಗಾರಿಯನ್ ಎನ್ನುಂ ಪೇರ್ ನಂಪಿಳ್ಳೈಕ್ಕು ಓಂಗಿ
ವಿಲಗಾಮಲ್ ನಿನ್ಱದು ಎನ್ಱುಂ ಮೇಲ್
ಕಂದಾಡೈ ತೋೞಪ್ಪರ್ ಅವರು ತಮ್ಮ ಜನನಕುಲ ಮತ್ತು ಜ್ಞಾನದ ವಿಷಯದಲ್ಲಿ ಶ್ರೇಷ್ಠತೆಯನ್ನು ಹೊಂದಿದ್ದರು, ಅವರು ಮುಧಲಿಯಾಂಡಾನ್ ಅವರ ಮೊಮ್ಮಗ [ಭಗವದ್ ರಾಮಾನುಜರ್ ಅವರ ಸೋದರಳಿಯ ಮತ್ತು ಅವರ ಆತ್ಮೀಯ ಶಿಷ್ಯರಲ್ಲಿ ಒಬ್ಬರು].ನಂಪಿಳ್ಳೈ ಅವರ ಜ್ಞಾನ ಮತ್ತು ಅವರು ಹೊಂದಿದ್ದ ಶಿಷ್ಯರ ಸಂಖ್ಯೆಯಿಂದಾಗಿ ಅವರು ನಂಪಿಳ್ಳೈ ಬಗ್ಗೆ ಅಸೂಯೆ ಹೊಂದಿದ್ದರು.ಒಂದು ದಿನ, ಅವರು ಇತರ ಭಕ್ತರ ಸಮ್ಮುಖದಲ್ಲಿ, ನಂಪೆರುಮಾಳರ ಸನ್ನಿಧಿಯಲ್ಲಿ ನಂಪಿಳ್ಳೈಯನ್ನು ಅವಮಾನಿಸಿ ತಮ್ಮ ಮನೆಗೆ ಮರಳಿದರು. ಏನಾಯಿತು ಎಂಬುದರ ಬಗ್ಗೆ ಕೇಳಿದ ಅವರ ಹೆಂಡತಿ, ಅವರ ಕಾರ್ಯಕ್ಕಾಗಿ ಅವರನ್ನು ದಂಡಿಸಿದರು, ಇದರ ಪರಿಣಾಮವಾಗಿ ಅವರ ಮನಸ್ಸಿನಲ್ಲಿ ಸ್ಪಷ್ಟತೆಯನ್ನು ಪಡೆದರು.ಅವರು ತಮ್ಮ ಮನೆಯ ಬಾಗಿಲು ತೆರೆದು ನಂಪಿಳ್ಳೈಗೆ ಕ್ಷಮೆಯಾಚಿಸಿಲು ಹೊರಟರು. ನಂಪಿಳ್ಳೈ ಅವರ ಬಾಗಿಲಿನ ಹೊರಗೆ ಕಾಯುತ್ತಿದ್ದರು. ಅವರು ಮಾತನಾಡುವ ಮೊದಲು, ನಂಪಿಳ್ಳೈ ಅವರಿಗೆ “ನಾನು ಅನುಚಿತವಾಗಿ ವರ್ತಿಸಿದ್ದೇನೆ, ಮುದಲಿಯಾಂಡಾನ್ ಕುಲದ ವಂಶಸ್ಥರಾದ ನೀವು ಕೋಪಗೊಂಡಿದ್ದೀರಿ. ನನ್ನ ವರ್ತನೆಗೆ ನೀವು ನನ್ನನ್ನು ಕ್ಷಮಿಸಬೇಕು ” ಎಂದರು.
ಇದನ್ನು ಕೇಳಿದ ಕಂದಾಡೈ ತೋೞಪ್ಪರ್ “ನಾನು ನಿಮ್ಮಂತಹ ಯಾರನ್ನೂ ಇಲ್ಲಿಯವರೆಗೆ ನೋಡಿಲ್ಲ. ನೀವು ಕೆಲವೇ ಜನರಿಗೆ ಅಚಾರ್ಯರು ಮಾತ್ರವಲ್ಲ ಇಡೀ ಜಗತ್ತಿಗೆ ನೀವು ಆಚಾರ್ಯರಾಗಲು ಅರ್ಹರಾಗಿದ್ದೀರಿ. ನೀವು ಲೋಕಾಚಾರ್ಯರ್ (ಇಡೀ ಜಗತ್ತಿಗೆ ಶಿಕ್ಷಕರು) ”. ಈ ಘಟನೆಯ ನಂತರ, ಲೋಕಾಚಾರ್ಯರ್ ಎಂಬ ಹೆಸರು ನಂಪಿಳ್ಳೈಗಾಗಿ ಎಲ್ಲೆಡೆ ಹರಡಿತು ಮತ್ತು ದೃಡವಾಗಿ ಸ್ಥಾಪನೆಯಾಯಿತು.
ಪಾಸುರ ೫೨
ಲೋಕಾಚಾರ್ಯರ್ ಎಂಬ ದಿವ್ಯ ನಾಮವು ಪ್ರಪಂಚದಾದ್ಯಂತ ಪ್ರಸಿದ್ಧವಾಗುವ ಕಾರಣವನ್ನು ವಿವರಿಸುತ್ತಾರೆ.
ಪಿನ್ನೈ ವಡಕ್ಕು ತಿರುವೀದಿಪಿಳ್ಳೈ ಅನ್ಬಾಲ್
ಆನ್ನ ತಿರುನಾಮತ್ತೈ ಆದರಿತ್ತು -ಮನ್ನುಪುಗೞ್
ಮೈಂದರ್ಕ್ಕುಚ್ ಚಾಱ್ಱುಗೈಯಾಲ್ ವಂದು ಪರಂದದು ಎಂಗುಂ
ಇಂದ ತಿರುನಾಮಮ್ ಇಂಗು
ಹಿಂದಿನ ಪಾಸುರಂನಲ್ಲಿ ಕಂಡುಬರುವ ನಿರೂಪಣೆಯ ನಂತರ, ನಂಪಿಳ್ಳೈನ ಶಿಷ್ಯರಾದ ವಡಕ್ಕುತಿರುವೀದಿಪಿಳ್ಳೈ, ಲೋಕಾಚಾರಿಯಾರ್ ಎಂಬ ದಿವ್ಯ ನಾಮದ ಮೇಲಿನ ವಾತ್ಸಲ್ಯದಿಂದಾಗಿ, ಅಚಾರ್ಯನ ಕರುಣೆಯಿಂದ ಹುಟ್ಟಿದ ತನ್ನ ಮಗನಿಗೆ, ಶ್ರೇಷ್ಠತೆಯನ್ನು ಹೊಂದಿದ್ದವರಿಗೆ ಆ ದೈವಿಕ ಹೆಸರನ್ನು ಕೊಟ್ಟರು.ಹೀಗಾಗಿ, ಈ ದೈವಿಕ ಹೆಸರು ಇನ್ನಷ್ಟು ಪ್ರಸಿದ್ಧವಾಯಿತು.
ಮಾಮುನಿಗಳು ಕೂಡ ಪಿಳ್ಳೈ ಲೋಕಾಚಾರ್ಯರನ್ನು ವಾತ್ಸಲ್ಯದಿಂದ “ವಾೞಿ ಉಲಗಾರಿಯನ್” (ಪಿಳ್ಳೈ ಲೋಕಾಚಾರ್ಯರು ಧೀರ್ಘಕಾಲ ಬಾಳಲಿ) ಎಂದು ಪ್ರಶಂಸಿದ್ದಾರೆ.ಪ್ರಪಂಚದ ಎಲ್ಲ ಜನರ ಉನ್ನತಿಗಾಗಿ ಪಿಳ್ಳೈ ಲೋಕಾಚಾರ್ಯರು ದಯೆತೋರಿ ಅನೇಕ ರಹಸ್ಯ ಗ್ರಂಥಗಳನ್ನು (ಗುಪ್ತ ಶಾಸ್ತ್ರಗಳನ್ನು) ರಚಿಸುವುದರೊಂದಿಗೆ, ಅವರ ಮಹಾನ್ ಸಹಾನುಭೂತಿಯಿಂದ, ಅವರ ದಿವ್ಯ ನಾಮವು ಪ್ರಪಂಚದಾದ್ಯಂತ ಆಚರಿಸಲಾಯಿತು.
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/07/upadhesa-raththina-malai-51-52-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org