ಶ್ರೀ: ಶ್ರೀಮತೇ ಶಠಕೋಪಾಯ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಪರಾಶರ ಭಟ್ಟರ್ ಅರುಳಿಚ್ಚೆಯ್ದ ;-
ನೀಳಾತುಙ್ಗ ಸ್ತನ ಗಿರಿ ತಟಿ ಸುಪ್ತಮುದ್ಬೋಧ್ಯ ಕೃಷ್ಣಮ್
ಪಾರಾರ್ಥ್ಯಮ್ ಸ್ವಮ್ ಶ್ರುತಿ ಶತ ಶಿರ ಸಿಧ್ಧಮ್ ಅಧ್ಯಾಪಯನ್ತೀ
ಸ್ವೋಚ್ಛಿಷ್ಟಾಯಾಮ್ ಸ್ರಜನಿಗಳಿತಮ್ ಯಾ ಬಲಾತ್ಕೃತ್ಯ ಭುಙ್ಕ್ತೇ
ಗೋದಾತಸ್ಯೈ ನಮ ಇದಮಿದಮ್ ಭೂಯಯೇವಸ್ತು ಭೂಯಃ ॥
ಕೃಷ್ಣನು ನೀಳಾದೇವಿಯ ಅವತಾರವಾದ ನಪ್ಪಿನ್ನೈಯ ಕಡಿದಾದ ಗಿರಿಯಂತಹ ಎದೆಯ ಮೇಲೆ ಮಲಗಿರುತ್ತಾನೆ.
ಆಂಡಾಳ್ ತಾನೇ ಕಟ್ಟಿರುವ ಹೂಮಾಲೆಯಿಂದ ಕಣ್ಣನನ್ನು ಬಂಧಿಸುತ್ತಾಳೆ. ಅವಳು ಮಲಗಿದ್ದ ಕೃಷ್ಣನನ್ನು ಎಬ್ಬಿಸಿ , ಅವನಿಗೆ ತನ್ನ ಪಾರತಂತ್ರ್ಯದ ( ಕೃಷ್ಣನ ಮೇಲಿನ ಅವಲಂಬನೆಯ) ಬಗ್ಗೆ ತಿಳಿಸುತ್ತಾಳೆ. ಕೃಷ್ಣನ ಮೇಲಿನ ಅವಲಂಬನೆಯನ್ನು ವೇದಾಂತಗಳಲ್ಲಿ (ವೇದಗಳ ಕೊನೆಯ ಭಾಗ) ತೋರಿಸಲಾಗಿದೆ.
ಆಂಡಾಳ್ ಬಲವಂತದಿಂದ ಕೃಷ್ಣನನ್ನು ಹೂಮಾಲೆಯಿಂದ ಸೆಳೆದುಕೊಂಡು ಆನಂದಿಸುತ್ತಾಳೆ. ಪರಾಶರ ಭಟ್ಟರು ಅಂತಹ ಆಂಡಾಳಿಗೆ ನಮಸ್ಕಾರವನ್ನು ಮಾಡುತ್ತಾರೆ. ಮತ್ತು ಸದಾ ಎಂಬೆರುಮಾನರ ಜೊತೆಯಲ್ಲಿ ಆನಂದದಿಂದ ಇರಲಿ ಎಂದು ಹಾರೈಸುತ್ತಾರೆ.
ಉಯ್ಯಕೊಣ್ಡಾರ್ ಅರುಳಿಚ್ಚೆಯ್ದ ;-
ಅನ್ನವಯಲ್ ಪುದುವೈ ಆಣ್ಡಾಳ್ ಅರಙ್ಗರ್ಕು
ಪ್ಪನ್ನು ತಿರುಪ್ಪಾವೈ ಪ್ಪಲ್ಪದಿಯಮ್
ಇನ್ನಿಶೈಯಾಲ್ ಪಾಡಿಕೊಡುತ್ತಾಳ್ ನಱ್ಪಾಮಾಲೈ
ಪೂಮಾಲೈ ಶೂಡಿಕೊಡುತ್ತಾಳೈ ಚ್ಚೊಲ್ಲು ॥
ಹಂಸ ಪಕ್ಷಿಗಳಿಂದ ಆವೃತ್ತವಾಗಿದ್ದ ಶ್ರೀ ವಿಲ್ಲಿಪುತ್ತೂರಿನಲ್ಲಿ ಆಂಡಾಳ್ ನಾಚ್ಚಿಯಾರ್ ತಾನೇ ಕಟ್ಟಿದ ಹೂಮಾಲೆಯನ್ನು ಮೊದಲು ತನಗೇ ಮುಡಿದುಕೊಂಡು ನಂತರ ಶ್ರೀ ರಂಗನಾಥರಿಗೆ ಏರಿಸಿ , ನಂತರ ಪ್ರಾಸಬಧ್ಧವಾಗಿ ತಾನೇ ಹಾಡಿದ ತಿರುಪ್ಪಾವೈ ಎಂಬ ಹಾಡುಗಳ ಮಾಲೆಯನ್ನು ಶ್ರೀ ರಂಗನಾಥರಿಗೆ ಅರ್ಪಿಸುತ್ತಾಳೆ. ಅವಳು ಈ ಪಾಸುರಗಳನ್ನು ಅತ್ಯಂತ ಕರುಣೆಯಿಂದ ನಮಗೆ ಕೊಟ್ಟಿದ್ದಾಳೆ.
ಶೂಡಿಕೊಡುತ್ತ ಶುಡರ್ಕೊಡಿಯೇ ತೊಲ್ ಪಾವೈ
ಪಾಡಿಯರುಳವಲ್ಲ ಪಲ್ವಳೈಯಾಯ್ , ನಾಡಿನೀ
ವೇನ್ಗಡವರ್ಕೆನ್ನೈ ವಿದಿಯೆನ್ರ ವಿಮ್ಮಾಟ್ರಮ್
ನಾನ್ಗಡವಾ ವಣ್ಣಮೇ ನಲ್ಗು ||
ಆಂಡಾಳ್ ತಾನೇ ಹೂವನ್ನು ಪೋಣಿಸಿ , ಮೊದಲು ತನ್ನ ಬಳ್ಳಿಯಂತಹ ಮುಡಿಗೆ ಮುಡಿದುಕೊಂಡು ನಂತರ ಎಂಬೆರುಮಾನರಿಗೆ ಪ್ರೀತಿಯಿಂದ ಸಮರ್ಪಿಸುತ್ತಾಳೆ.
ಅವಳು ಒಂದು ಬಂಗಾರದ ಹಗ್ಗದಂತೆ ಪೆರುಮಾಳನ್ನು ಪ್ರೀತಿಯಿಂದ ಕಟ್ಟಿಹಾಕುತ್ತಾಳೆ.
ಅವಳು ಆಯರ್ಪ್ಪಾಡಿ (ಶ್ರೀ ಗೋಕುಲ) ಯಲ್ಲಿ ಹಿಂದಿನ ಕಾಲದಲ್ಲಿ ಅನುಸರಿಸಿದ ಕೃಷ್ಣನ ವ್ರತವನ್ನು ಕೈಗೊಂಡು ನಮಗೆ ಹಾಡಲು ಹಾಗು ಹಿಂಬಾಲಿಸಲು (ತತ್ತ್ವಗಳನ್ನು) ತಿರುಪ್ಪಾವೈ ಮೂಲಕ ಕೊಟ್ಟಿರುತ್ತಾಳೆ.
ಆಂಡಾಳ್ ತಾನು ಶ್ರೀ ವೆಂಕಟೇಶ್ವರನನ್ನೇ ಮದುವೆ ಮಾಡಿಕೊಳ್ಳಬೇಕು ಎಂಬ ಬಲವಾದ ಧೃಢ ನಿಶ್ಚಯದಂತೆ ನಮಗೂ ಅಂತಹ ಶಕ್ತಿಯನ್ನೂ ಪ್ರೀತಿಯನ್ನೂ ಆಂಡಾಳ್ ನಮಗೆ ದಯಪಾಲಿಸಲಿ ಎಂದು ಕೇಳಿಕೊಳ್ಳುತ್ತೇನೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/05/thiruppavai-thaniyans-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org