ತಿರುಪ್ಪಳ್ಳಿಯೆೞುಚ್ಚಿ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ಮುದಲಾಯಿರಮ್

ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿನಮಾಲೈಯ ೧೧ನೆ ಪಾಶುರದಲ್ಲಿ ತೊಂಡರಡಿಪ್ಪೊಡಿ ಆೞ್ವಾರವರ ವೈಭವವನ್ನು ಬಹಳ ಸುಂದರವಾಗಿ ಬಹಿರಂಗಪಡಿಸಿದ್ದಾರೆ.

ಮನ್ನಿಯ ಸೀರ್ ಮಾರ್ಗೞಿಯಿಲ್ ಕೇಟೈ ಇನ್ನು ಮಾನಿಲತ್ತೀರ್
ಎನ್ನಿದನ್ಕು ಏಟ್ರಮ್ ಎನಿಲ್ ಉರೈಕ್ಕೇನ್ – ತುನ್ನು ಪುಘೞ್
ಮಾಮರೈಯೋನ್ ತೊಂಡರಡಿಪ್ಪೊಡಿ ಆೞ್ವಾರ್ ಪಿರಪ್ಪಾಲ್
ನಾನ್ಮರೈಯೋರ್ ಕೊಂಡಾಡುಮ್ ನಾಳ್

“ಓ ಜಗತ್ತಿನ ಜನರೇ! ‘ವೈಷ್ಣವರ ತಿಂಗಳು’ ಎನ್ನಿಸಿಕೊಳ್ಳುವ ಮಾರ್ಘೞಿ ತಿಂಗಳಿನ ಕೇಟ್ಟೈಯ ದಿನದ ಶ್ರೇಷ್ಠತೆಯನ್ನು ಹೇಳುತ್ತೇನೆ ಕೇಳಿರಿ! ಎಂಪೆರುಮಾನಿನ ಭಕ್ತರಿಗೆ ಮಾತ್ರವೇ ಸೇವಕನಾಗಿದ್ದ, ವೇದದ ಅರ್ಥಗಳನ್ನು ಅರಿದು ಅದರಲ್ಲೇ ತನ್ನನ್ನು ಸಂಪೂರ್ಣವಾಗಿ ಒಳಗೊಂಡಿಸಿಕೊಂಡ ತೊಂಡರಡಿಪ್ಪೊಡಿ ಆೞ್ವಾರ್ ಜನಿಸಿದ ದಿನ ಮಾರ್ಘೞಿ ಕೇಟ್ಟೈ ಎಂದು ವೇದ ನಿಪುಣರಾದ ಎಂಪೆರುಮಾನಾರ್ ( ಶ್ರೀ ರಾಮಾನುಜರ್) ಆಚರಿಸಿದ ದಿನ.
ಎಂಪೆರುಮಾನನ್ನು ಯೋಗ ನಿದ್ರೆಯಿಂದ ( ದೇಹ ನಿದ್ರೆಯಲ್ಲಿದ್ದರೂ ಸಹ, ಮನಸ್ಸು ಎಲ್ಲಾ ಅರಿತಿರುವ ಸ್ಥಿತಿ) ಎಬ್ಬಿಸಲು ಹಾಡುವ ಸ್ತೋತ್ರ ಸುಪ್ರಭಾತ. ‘ತುಳಸೀಭೃತ್ಯರ್’ ( ಎಂಪೆರುಮಾನನಿಗೆ ತುಳಸೀ ಕೈಂಕರ್ಯವನ್ನು ಮಾಡುವುದನ್ನು ಬಹಳ ಮೆಚ್ಚುವವರು) ( ತೊಂಡರಡಿಪ್ಪೊಡಿ ಆೞ್ವಾರ್ ಸ್ವತಃ ತಮ್ಮ ಪ್ರಬಂಧ ‘ತಿರುಮಾಲೈ’ನಲ್ಲಿ ತನ್ನನ್ನು”ತುಳಬತೊಂಡಾಯ ತೊಲ್ಸೀರ್ ತೊಂಡರಡಿಪ್ಪೊಡಿ ಎನ್ನುಮ್ ಅಡಿಯನೈ” (ತುಳಸೀ ಕೈಂಕರ್ಯವನ್ನು ಮಾಡುವ ಸೇವಕನು) ಎಂದು ಹೇಳಿಕೊಳ್ಳುತ್ತಾರೆ. ) ರಚಿಸಿದ ತಿರುಪ್ಪಳ್ಳಿಯೆೞುಚ್ಚಿ ಎಂಪೆರುಮಾನನಿಗೆ ಅತ್ಯಂತ ವಿಶೇಷವಾದ ಸುಪ್ರಭಾತ ಎಂದು ಆಚಾರ್ಯ ಹೃದಯದ ೮೫ನೆ ಚೂರ್ಣಿಕೆಯಲ್ಲಿ ನಮ್ಮ ಪೂರ್ವಾಚಾರ್ಯರಲೊಬ್ಬರಾದ ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ತೋರಿಸಿದ್ದಾರೆ.
ತಿರುಪ್ಪಳ್ಳಿಯೆೞುಚ್ಚಿಯ ಸರಳ ವಿವರಣೆಯನ್ನು ನಮ್ಮ ಪೂರ್ವಾಚಾರ್ಯರ ವ್ಯಾಖ್ಯಾನಗಳ ಸಹಾಯದೊಂದಿಗೆ ಬರೆಯಲಾಗಿದೆ.

ತನಿಯನ್:
ತಮೇವ ಮತ್ವಾ ಪರವಾಸುದೇವಮ್
ರಂಗೇಶಯಮ್ ರಾಜವದರ್ಹಣೀಯಮ್
ಪ್ರಾಬೋಧಿಕೀಮ್ ಯೋಕೃತ ಸೂಕ್ತಿಮಾಲಾಮ್
ಭಕ್ತಾಂಘ್ರಿ ರೇಣುಮ್ ಭಗವಂತಮೀಡೇ

ಶ್ರೀವೈಕುಂಠದಲ್ಲಿರುವ ಪರವಾಸುದೇವನಾದ, ರಾಜನಂತೆ ಪೂಜಿಸಲ್ಪಡುವ, ಆದಿಶೇಷನ ಮೇಲೆ ಮಲಗಿರುವ, ಜ್ಞಾನ ಇತ್ಯಾದಿ ಕಲ್ಯಾಣ ಗುಣಗಳನ್ನು ಹೊಂದಿರುವ ಪೆರಿಯ ಪೆರುಮಾಳನ್ನು( ಶ್ರೀರಂಗದಲ್ಲಿ ವಿಗ್ರಹ ರೂಪದಲ್ಲಿರುವ ಎಂಪೆರುಮಾನ್)ಎಬ್ಬಿಸಲು ಸ್ತೋತ್ರ ಮಾಲೆಯನ್ನು ನಮಗೆ ಕೊಟ್ಟ ತೊಂಡರಡಿಪ್ಪೊಡಿ ಆೞ್ವಾರ್ ಆವರನ್ನು ನಾನು ವಂದಿಸುತ್ತೇನೆ.

ಮನ್ಡನ್ಗುಡಿ ಎನ್ಬರ್ ಮಾಮರೈಯೋರ್ ಮನ್ನಿಯ ಸೀರ್
ತೊಂಡರಡಿಪ್ಪೊಡಿ ತೊನ್ನಗರನ್.
ವಂಡು ತಿಣರ್ತವಯಲ್ ತೆನ್ನರಂಗತ್ತಮ್ಮಾನೈ
ಪಳ್ಳಿ ಉಣರ್ತುಮ್ ಪಿರಾನ್ ಉದಿತ್ತ ಊರ್.

ದುಂಬಿಗಳ ಗುಂಪು ತುಂಬಿದ, ಗದ್ದೆಗಳಿಂದ ಸುತ್ತಲ್ಪಟ್ಟ ತಿರುವರಂಗದಲ್ಲಿ ಶಯನಿಸುತ್ತಿರುವ ಪೆರಿಯ ಪೆರುಮಾಳನ್ನು ಎಬ್ಬಿಸಿ ನಮಗೆಲ್ಲಾ ವಿಶೇಷವಾದ ಪ್ರಯೋಜನಗಳು ದೊರಕುವಂತೆ ಮಾಡಿದ ತೊಂಡರಡಿಪ್ಪೊಡಿ ಆೞ್ವಾರ್ ಆವತರಿಸಿದ ಸ್ಥಳವೇ ತಿರುಮನ್ಡನ್ಗುಡಿ ಎಂದು ವೇದ ಪಂಡಿತರು ಹೇಳಿದ್ದಾರೆ

೧. ಪಾಸುರಮ್: ಈ ಪಾಸುರದಲ್ಲಿ ಸ್ವರ್ಗೀಯ ಜೀವಿಗಳೆಲ್ಲರೂ ಪೆರಿಯ ಪೆರುಮಾಳನ್ನು ಎಬ್ಬಿಸಲು ಶ್ರೀರಂಗಕ್ಕೆ ಬರುತ್ತಾರೆಂದು ಆೞ್ವಾರ್ ಕಾರುಣ್ಯವಾಗಿ ನಮಗೆ ತಿಳಿಸುತ್ತಾರೆ. ಇದರಿಂದ, ಶ್ರೀಮನ್ ನಾರಾಯಣ ಒಬ್ಬನೇ ಪೂಜಿಸಲ್ಪಡುವವನು, ಎಲ್ಲಾ ದೇವತೆಗಳೂ ನಾರಾಯಣನನ್ನೇ ಪೂಜಿಸುತ್ತಾರೆಂದು ನಮಗೆ ಸ್ಪಷ್ಟವಾಗಿ ತಿಳಿದು ಬರುತ್ತದೆ.


ಕದಿರವನ್ ಗುಣದಿಸೈಚ್ ಚಿಗರಮ್ ವಂದಣೈನ್ದಾನ್
ಕನ ಇರುಳ್ ಅಗನ್ರದು ಕಾಲೈ ಆಮ್ ಪೊೞುದಾಯ್.
ಮಧು ವಿರಿಂದು ಒೞುಗಿನ ಮಾಮಲರ್ ಎಲ್ಲಾಮ್
ವಾನವರ್ ಅರಸರ್ಗಳ್ ವಂದು ವಂದೀಂಡಿ.
ಎದಿರ್ ದಿಸೈನಿರೈಂದನರ್ ಇವರೊಡುಮ್ ಪುಹುಂದ
ಇರುಂಗಳಿಟ್ರು ಈಟ್ಟಮುಮ್ ಪಿಡಿಯೊಡು ಮುರಸುಮ್
ಆದಿರ್ದಲಿಲ್ ಆಲೈ ಕಡಲ್ ಪೋನ್ರು ಉಳದು ಎಂಗುಮ್
ಅರಂಗತ್ತಮ್ಮಾ ಪಳ್ಳಿ ಎೞುಂದರುಳಾಯೇ!

ಓ ತಿರುವರಂಗದಲ್ಲಿ ವಾಸಿಸುವ ನಾಯಕನೇ! ಸೂರ್ಯನು ಪೂರ್ವದಲ್ಲಿ ಹುಟ್ಟಿದ್ದಾನೆ. ಪೂರ್ವ ಪರ್ವತಗಳಲ್ಲಿ ಉಗಮವಾಗಿ, ರಾತ್ರಿಯ ಕತ್ತಲನ್ನು ಓಡಿಸಿದ್ದಾನೆ! ಹಗಲಿನ ಆಗಮನದೊಂದಿಗೆ, ಈಗ ಅರಳುತ್ತಿರುವ ಹೂಗಳಿಂದ ಜೇನು ಸುರಿಯುತ್ತಿದೆ! ರಾಜರು ಹಾಗು ಸ್ವರ್ಗೀಯ ಜೀವಿಗಳೆಲ್ಲರೂ, ನಿನ್ನ ಕಣ್ಣು ದೃಷ್ಟಿಯಿಂದ ಅನುಗ್ರಹವನ್ನು ಪಡೆಯಲು ಅವರೇ ಮೊಟ್ಟಮೊದಲು ಬಂದಿರುವುದೆಂದು ಹೇಳಿಕೊಂಡು ಗುಂಪುಗುಂಪಾಗಿ ನಿನ್ನ ದೇವಸ್ಥಾನದ ದಕ್ಷಿಣ ದ್ವಾರದ ಮುಂದೆ ಸೇರಿದ್ದಾರೆ. ಅವರೊಂದಿಗೆ, ಅವರ ವಾಹನಗಳಾದ ಹೆಣ್ಣು ಮತ್ತು ಗಂಡು ಆನೆಗಳು, ಮತ್ತು ವಿಧವಿಧವಾದ ಸಂಗೀತ ವಾದ್ಯಗಳನ್ನು ನುಡಿಸುವವರು ಕೂಡ ಬಂದಿದ್ದಾರೆ. ನೀನು ಏಳುವುದನ್ನು ನೋಡಿ, ಆವರು ಅತ್ಯಂತ ಸಂತೋಷದಿಂದ ತಟ್ಟುವ ಚಪ್ಪಾಳೆಗಳು ಸಮುದ್ರದಲ್ಲಿ ಆಕ್ರೋಶದಿಂದ ಉಕ್ಕಿ ಬರುವ ಅಲೆಗಳಂತೆ ಎಲ್ಲಾ ದಿಕ್ಕುಗಳಲ್ಲೂ ಪ್ರತಿಧ್ವನಿಸುತ್ತಿವೆ!

೨.ಪಾಸುರಮ್: ಪೂರ್ವದಿಂದ ಬೀಸುವ ಗಾಳಿ, ಹಂಸಗಳನ್ನು ಎಬ್ಬಿಸಿ, ಹಗಲಾಗುತ್ತಿದೆ ಎಂದು ಸೂಚನೆ ಕೊಡುತ್ತಿದೆ
ನಿನ್ನ ಭಕ್ತರಿಗಾಗಿ ಅತ್ಯಂತ ಪ್ರೀತಿಯಿಂದ ನೀನು ನಿನ್ನ ದೈವಿಕ ಯೋಗ ನಿದ್ರೆಯಿಂದ ಏಳಬೇಕು! .

ಕೊೞುಂಗೊಡಿ ಮುಲ್ಲೈಯಿನ್ ಕೊೞುಮಲರ್ ಅಣವಿ
ಕೂರ್ನದದು ಗುಣದಿಸೈ ಮಾರುದಮ್ ಇದುವೋ
ಎೞುನ್ದನ ಮಲರಣೈಪ್ ಪಳ್ಳಿಕೊಳ್ಳನ್ನಮ್
ಈನ್ಪನಿ ನನೈಂದ ತಮ್ ಇರುಂಜಿರಗುದರೀ
ವಿೞುಂಗಿಯ ಮುದಲಯಿನ್ ಪಿಲಮ್ ಪುರೈ ಪೇೞ್ವಾಯ್
ವಿಳ್ಳೈ ಇರುರ ಅದನ್ ವಿಡತ್ತಿನುಕ್ಕನುಂಗಿ
ಅೞುಂಗಿಯ ಆನೆಯಿನ್ ಅರುಂದುಯರ್ ಕೆಡುತ್ತ
ಅರಂಗತ್ತಮ್ಮಾ ಪಳ್ಳಿ ಎೞುಂದರುಳಾಯೇ!

ಪೂರ್ವ ದಿಕ್ಕಿನಿಂದ ಬೀಸುತ್ತಿರುವ ತಂಗಾಳಿಯು ಆಗ ತಾನೆ ತನ್ನ ಹೂಗಳು ಅರಳುತ್ತಿರುವ ಮಲ್ಲಿಗೆಯ ಬಳ್ಳಿಗಳನ್ನು ನಿಧಾನವಾಗಿ ಹೊರಸುತ್ತಿದೆ. ಆ ಹೂವಿನ ಹಾಸಿಗೆಯ ಮೇಲೆ ಮಲಗಿದ್ದ ಹಂಸಗಳು ತಮ್ಮ ರೆಕ್ಕೆಗಳ ಮೇಲೆ ಮಳೆಯ ನೀರಿನಂತಿದ್ದ ಇಬ್ಬನಿ ಹನಿಯನ್ನು ಒದರಿಕೊಂಡು ಏಳುತ್ತಿವೆ.
ತಿರುವರಂಗದಲ್ಲಿ ದೈವಿಕ ಯೋಗನಿದ್ರೆಯಲ್ಲಿರುವ ನಾಯಕನೇ! ಗುಹೆಯಂತಹ ಬಾಯಲ್ಲಿ ಗಜೇಂದ್ರನ ಕಾಲನ್ನು ಕಚ್ಚಿ ನುಂಗಲು ಪ್ರಯತ್ನಿಸುತ್ತಿದ್ದ ಮೊಸಳೆಯನ್ನು ನೀನು ಕೊಂದು ಗಜೇಂದ್ರನನ್ನು ಆಪತ್ತಿನಿಂದ ಕಾಪಾಡಿದೆ! ಈಗ ಎದ್ದು ನಮ್ಮನ್ನೆಲ್ಲಾ ಅನುಗ್ರಹಿಸು!

೩.ಪಾಸುರಮ್: ಸೂರ್ಯನು ತಾರೆಗಳ ವೈಭವವನ್ನು ತನ್ನ ಕಿರಣಗಳ ಕಾಂತಿಯಿಂದ ಮುಚ್ಚಿದ್ದಾನೆ. ಈ ಪಾಸುರದಲ್ಲಿ ಆೞ್ವಾರ್ ತಾನು ಚಕ್ರಾಯುಧವನ್ನು ಹಿಡಿದಿರುವ ಎಂಪೆರುಮಾನಿನ ಕೈಯನ್ನು ಪೂಜಿಸಲು ಆಕಾಂಕ್ಷಿಸುತ್ತಾರೆ.

ಸುಡರೊಳಿ ಪರನ್ದನ ಸೂೞ್ ದಿಸೈ ಎಲ್ಲಾಮ್
ತುನ್ನಿಯ ತಾರಕೈ ಮಿನ್ನೊಳಿ ಸುರುಂಗಿ.
ಪಡರ್ ಒಳಿ ಪಸುತ್ತನನ್ ಪನಿಮದಿ ಇವನೋ
ಪಾಯಿರುಳ್ ಅಗನ್ರದು ಪೈಮ್ ಪೊೞಿರ್ ಕಮುಗಿನ್
ಮಡಲಿಡೈಕ್ ಕೀರಿ ವಣ್ ಪಾಳೈಗಳ್ ನಾರ
ವೈಗರೈ ಕೂರ್ನದದು ಮಾರುದಮ್ ಇದುವೋ
ಅಡಲ್ ಒಳಿ ತಿಗೞ್ ತರು ತಿಗಿರಿಯನ್ ತಡಕ್ಕೈ
ಅರಂಗತ್ತಮ್ಮಾ ಪಳ್ಳಿ ಎೞುಂದರುಳಾಯೇ!

ಸೂರ್ಯನ ಕಿರಣಗಳ ಕಾಂತಿಯು ಈಗ ಎಲ್ಲಾ ಕಡೆಯೂ ಹರಡಿದೆ.
ದಟ್ಟವಾಗಿ ಕಟ್ಟಲ್ಪಟ್ಟ ನಕ್ಷತ್ರಗಳ ಬೆಳಕು ಮುಚ್ಚಲ್ಪಟ್ಟಿದೆ.
ತಂಪಾದ ಚಂದ್ರನು ಕೂಡ ತನ್ನ ಕಾಂತಿಯನ್ನು ಕಳೆದುಕೊಂಡಿದ್ದಾನೆ.
ಎಲ್ಲಾ ಕಡೆಗೂ ಹರಡಿದ್ದ ಕತ್ತಲೆಯು ಈಗ ಓಡಿಸಲ್ಪಟ್ಟಿದೆ.
ಮುಂಜಾನೆಯ ತಂಗಾಳಿ ಐರಕೆಯ(ಅಡಿಕೆ) ಗಿಡಗಳ ಎಲೆಗಳ ಮೇಲೆ ಬೀಸಿಕೊಂಡು , ಅವುಗಳಿಂದ ಇನಿದಾದ ಸುವಾಸನೆಯನ್ನು ತರುತ್ತಿದೆ. ಬಲವಾದ ದೈವಿಕ ಚಕ್ರಾಯುಧವನ್ನು ಕೈಯಲ್ಲಿ ಹಿಡಿದುಕೊಂಡು, ತಿರುವರಂಗದಲ್ಲಿ ದೈವಿಕ ವಿಶ್ರಾಂತಿಗೊಂಡಿರುವ ನಾಯಕನೇ! ನೀನು ಎದ್ದು ನಮ್ಮನ್ನು ಅನುಗ್ರಹಿಸಬೇಕು!

೪.ಪಾಸುರಮ್: ಈ ಪಾಸುರದಲ್ಲಿ, ತಾನು ಎಂಪೆರುಮಾನನ್ನು ಅನುಭವಿಸಲು ತಡೆಯಾಗಿರುವ ತನ್ನ ಶತ್ರುಗಳನ್ನು ರಾಮಾಯಣದಲ್ಲಿ ಮಾಡಿದಂತೆ ಸಂಹಾರ ಮಾಡಬೇಕೆಂದು ಆೞ್ವಾರ್ ಎಂಪೆರುಮಾನನ್ನು ಕೇಳಿಕೊಳ್ಳುತ್ತಾರೆ.

ಮೇಟ್ಟಿಳ ಮೇದಿಗಳ್ ತಳೈ ವಿಡುಮ್ ಆಯರ್ಗಳ್
ವೈಂಗುೞಲ್ ಓಸೈಯುಮ್ ವಿಡೈ ಮಣಿಕ್ ಕುರಲುಮ್
ಈಟ್ಟಿಯ ಇಸೈ ದಿಸೈ ಪರನ್ದನ ವಯಲುಳ್
ಇರಿನ್ದನ ಸುರುಂಬಿನಮ್ ಇಲಂಗಯರ್ ಕುಲತ್ತೈ
ವಾಟ್ಟಿಯ ವರಿಸಿಲೈ ವಾನವರ್ ಏರೇ
ಮಾ ಮುನಿ ವೇಳ್ವಿಯೈಕ್ ಕಾತ್ತು
ಅವಬಿರದಮ್ ಆಟ್ಟಿಯ ಅಡು ತಿರಲ್ ಅಯೋದ್ಧಿ ಎಮ್ ಅರಸೇ
ಅರಂಗತ್ತಮ್ಮಾ ಪಳ್ಳಿ ಎೞುಂದರುಳಾಯೇ!

ಎಮ್ಮೆಗಳನ್ನು ಮೇಯಿಸುವ ಹುಡುಗರು ತಮ್ಮ ಎಮ್ಮೆಗಳನ್ನು ಹುಲ್ಲು ಮೇಯಲು ಬಿಟ್ಟು ಕೊಳಲನ್ನು ಬಾರಿಸುವ ಧ್ವನಿ ಮತ್ತು ಆ ಎಮ್ಮೆಗಳ ಕಂಠದಲ್ಲಿರುವ ಘಂಟೆಗಳ ಶಬ್ದ ಎಲ್ಲಾ ದಿಕ್ಕುಗಳಲ್ಲೂ ವ್ಯಾಪಿಸುತ್ತಿದೆ.ಹುಲ್ಲಿನ ಮೇಲಿರುವ ರೆಕ್ಕೆ ಹುಳಗಳು (Beetles) ಝೇಂಕರಿಸಲು ಪ್ರಾರಂಭಿಸಿವೆ. ಸರ್ವೋಚ್ಚ ಅಸ್ತಿತ್ವನಾದ, ಶತ್ರುಗಳನ್ನು ಸುಟ್ಟು ಹಾಕುವ ‘ಶಾರ್ಂಗಮ್’ಎನ್ನುವ ದೈವಿಕ ಬಿಲ್ಲನ್ನು ಹಿಡಿದಿರುವ ಶ್ರೀ ರಾಮನೇ! ಶತ್ರುಗಳನ್ನು ನಾಶ ಮಾಡುವ ಶಕ್ತಿಯುಳ್ಳ ಅಯೋಧ್ಯೆಯ ರಾಜನೇ! ಅವಭೃತಸ್ಸ್ನಾನ (ದೈವಿಕ ಜಳಕ) ಮಾಡಿದವನೇ! ರಾಕ್ಷಸರನ್ನು ಸಂಹಾರ ಮಾಡಿ ಋಷಿ ವಿಶ್ವಾಮಿತ್ರರಿಗೆ ಯಾಗವನ್ನು ಪೂರ್ತಿ ಮಾಡಲು ಅನುಗ್ರಹಿಸಿದವನೇ! ನಮ್ಮೆಲ್ಲರಿಗೂ ನಾಯಕನಾದವನೇ! ತಿರುವರಂಗದಲ್ಲಿ ದೈವಿಕ ವಿಶ್ರಾಂತಿ ತೆಗೆದುಕೊಂಡಿರುವವನೇ! ಎದ್ದು ನಮ್ಮನ್ನು ಅನುಗ್ರಹಿಸು!

೫.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನನಿಗೆ “ ಸ್ವಗೀಯ ನಿವಾಸಿಗಳೆಲ್ಲಾ ನಿನ್ನನ್ನು ಪೂಜಿಸಲು ಹೂಗಳನ್ನು ತಂದಿದ್ದಾರೆ. ನೀನು ನಿನ್ನ ಭಕ್ತರನ್ನು ಭೇದಭಾವನೆಯಿಂದ ನೋಡುವುದಿಲ್ಲದ ಕಾರಣ , ಎದ್ದು ಎಲ್ಲರ ಕೈಂಕರ್ಯಗಳನ್ನೂ ಸ್ವೀಕರಿಸು! “ಎಂದು ಹೇಳುತ್ತಾರೆ.

ಪುಲಂಬಿನ ಪುಟ್ಕಳುಮ್ ಪೂಮ್ ಪೊೞಿಲ್ಗಳಿನ್ ವಾಯ್
ಪೋಯಿಟ್ರು ಕಂಗುಲ್ ಪುಹುನ್ದದು ಪುಲರಿ.
ಕಲಂದದು ಗುಣದಿಸೈಕ್ ಕನೈಕಡಲ್ ಅರವಮ್
ಕಳಿ ವಂಡು ಮಿೞಟ್ಟ್ರಿಯ ಕಲಂಬಗಮ್ ಪುನೈಂದ
ಅಲಂಗಲ್ ಅಮ್ ತೊಡಯಲ್ ಕೊಂಡು ಅಡಿಯಿಣೈ ಪಣಿವಾನ್
ಅಮರರ್ಗಳ್ ಪುಹುನ್ದನರ್ ಆದಲಿಲ್ ಅಮ್ಮಾ
ಇಲಂಗಯರ್ ಕೋನ್ ವೞಿಪಾಡು ಸೈ ಕೋಯಿಲ್
ಎಂಪೆರುಮಾನ್ ಪಳ್ಳಿ ಎೞುಂದರುಳಾಯೇ!

ಅರಳಿರುವ ಹೂಗಳು ತುಂಬಾ ತುಂಬಿರುವ ವನದಲ್ಲಿರುವ ಪಕ್ಷಿಗಳು ಸಂತೋಷದಿಂದ ಚಿಲಿಪಿಲಿಸುತ್ತಿವೆ!
ರಾತ್ರಿ ಹಿಂತೆಗೆದುಕೊಂಡಿದೆ ಮತ್ತು ಮುಂಜಾನೆ ನೆಲೆಸಿದೆ. ಸಮುದ್ರದ ಶಬ್ದ ಪೂರ್ವ ದಿಕ್ಕಿನಿಂದ ಎಲ್ಲಾ ದಿಕ್ಕುಗಳಲ್ಲೂ ಕೇಳಿಸುತ್ತಿದೆ.
ಜೇನನ್ನು ಕುಡಿಯಲು ರೆಕ್ಕೆ ಹುಳಗಳು ಅಂಟಿಕೊಂಡಿರುವ ಹೂಮಾಲೆಗಳೊಂದಿಗೆ ನಿನ್ನನ್ನು ಪೂಜಿಸಲು ಸ್ವಗೀಯ ಜೀವಿಗಳು
ಬಂದಿದ್ದಾರೆ. ವಿಭೀಷಣನಿಂದ ಪೂಜಿಸಲ್ಲಟ್ಟ ಲಂಕೆಯ ರಾಜನೇ! ತಿರುವರಂಗದಲ್ಲಿ ದೈವಿಕ ವಿಶ್ರಾಂತಿಗೊಂಡಿರುವವನೇ! ಎದ್ದು ನಮ್ಮನ್ನು ಅನುಗ್ರಹಿಸು!

೬.ಪಾಸುರಮ್: “ ಸ್ವರ್ಗೀಯ ಜೀವಿಗಳ ಸೈನ್ಯದ ಆಡಳಿತವನ್ನು ನಡೆಸಲು ಸೈನ್ಯದ ಮುಖ್ಯಸ್ಥನಾಗಿ ನೀನು ನೇಮಿಸಿದ ಸುಬ್ರಹ್ಮಣ್ಯನು, ಮತ್ತು ಇತರ ಸ್ವರ್ಗೀಯ ನಿವಾಸಿಗಳು ಅವರವರ ಪತ್ನಿಯರು, ವಾಹನಗಳು ಮತ್ತು ಅನುಯಾಯಿಗಳೊಂದಿಗೆ ನಿನ್ನನ್ನು ಪೂಜಿಸಿ, ತಮ್ಮ ಆಸೆಗಳನ್ನು ಪೂರೈಸಲು ನಿನ್ನನ್ನು ಹೇಳಿಕೊಳ್ಳುವುದಕ್ಕೆ ಬಂದಿದ್ದಾರೆ. ನೀನು ಎದ್ದು ಅವರನ್ನು ಅನುಗ್ರಹಿಸು!

ಇರವಿಯರ್ ಮಣಿ ನೆಡುಮ್ ತೇರೊಡುಮ್ ಇವರೋ
ಇರಯವರ್ ಪದಿನೊರು ವಿಡಯರುಮ್ ಇವರೋ
ಮರುವಿಯ ಮಯಿಲಿನನ್ ಅರುಮುಗನ್ ಇವನೋ
ಮರುದರುಮ್ ವಶುಕ್ಕಳುಮ್ ವಂದು ವಂದೀಂಡಿ
ಪುರವಿಯೋಡು ಆಡಲುಮ್ ಪಾಡಲುಮ್ ತೇರುಮ್
ಕುಮರದಂಡಮ್ ಪುಹುನ್ದು ಈಂಡಿಯ ವೆಳ್ಳಮ್
ಅರುವರೈ ಅನೈಯ ನಿನ್ ಕೋಯಿಲ್ ಮುನ್ ಇವರೋ
ಅರಂಗತ್ತಮ್ಮಾ ಪಳ್ಳಿ ಎೞುನ್ದರುಳಾಯೇ!

ಹನ್ನೆರಡು ಆದಿತ್ಯರು( ಸೂರ್ಯ ದೇವತೆಯರು) ತಮ್ಮ ರಥಗಳಲ್ಲಿ ಬಂದಿದ್ದಾರೆ. ಈ ಜಗತ್ತನ್ನು ಆಳುವ ಹನ್ನೊಂದು ರುದ್ರರೂ ಬಂದಿದ್ದಾರೆ. ಆರು ಮುಖಗಳನ್ನು ಹೊಂದಿರುವ ಸುಬ್ರಹ್ಮಣ್ಯನು ತನ್ನ ವಾಹನವಾದ ನವಿಲಿನ ಮೇಲೆ ಬಂದಿದ್ದಾನೆ. ನಲವತ್ತು ಒಂಬತ್ತು ಮರುತ್ತರು ಮತ್ತು ಎಂಟು ವರುಷಗಳು( ವಿಭಿನ್ನ ವರ್ಗದ ಸ್ವರ್ಗೀಯ ನಿವಾಸಿಗಳು) ನಿನ್ನ ದರ್ಶನಕ್ಕಾಗಿ ಸಾಲಲ್ಲಿ ಮೊದಲು ನಿಲ್ಲಲು ಜಗಳವಾಡುತ್ತಿದ್ದಾರೆ. ಎಲ್ಲಾ ಸ್ವರ್ಗೀಯ ನಿವಾಸಿಗಳು ಒಬ್ಬರಿಗೊಬ್ಬರು ಹತ್ತಿರ ನಿಂತುಕೊಂಡು, ತಮ್ಮ ರಥಗಳು ಮತ್ತು ಕುದುರೆಗಳ ಮೇಲೆ ಹಾಡು ಹಾಡಿಕೊಂಡು, ಕುಣಿಯುತ್ತಿದ್ದಾರೆ.
ನಿನ್ನ ಕಣ್ದೃಷ್ಟಿಯಲ್ಲಿ ಬೀಳಲು ಎಲ್ಲಾ ಸ್ವರ್ಗೀಯ ಜೀವಿಗಳು ಬೃಹತ್ತಾದ ಪರ್ವತದಂತೆ ಕಾಣಿಸಿಕೊಳ್ಳುವ ತಿರುವರಂಗದ ಮುಂದೆ ಸೇರಿದ್ದಾರೆ. ತಿರುವರಂಗದಲ್ಲಿ ದೈವಿಕ ವಿಶ್ರಾಂತಿ ಗೊಂಡಿರುವ ಓ ದೇವನೇ! ನೀನು ಎದ್ದು ನಮ್ಮೆಲ್ಲರ ಮೇಲೆ ಕರುಣೆ ತೋರಿಸು!

೭.ಪಾಸುರಮ್: “ ಆಕಾಶದಲ್ಲಿ ಇತರ ಸ್ವರ್ಗೀಯ ಜೀವಿಗಳೊಂದಿಗೆ, ಇಂದ್ರನು ಮತ್ತು ಸಪ್ತ ಋಷಿಗಳೂ ಜಾಗವನ್ನು ಭರ್ತಿ ಮಾಡಿ ಸೇರಿ ನಿನ್ನನ್ನು ಪ್ರಶಂಸಿಸುತ್ತಿದ್ದಾರೆ! ನೀನು ಎದ್ದು ಅವರಿಗೆ ದರ್ಶನವನ್ನು ನೀಡು” ಎಂದು ಆೞ್ವಾರ್ ಹೇಳುತ್ತಾರೆ

ಅನ್ದರತ್ತು ಅಮರರ್ಗಳ್ ಕೂಟ್ಟಂಗಳ್ ಇವಯೋ
ಅರುನ್ದವ ಮುನಿವರುಮ್ ಮರುದರುಮ್ ಇವರೋ
ಇಂದಿರನ್ ಆನಯುಮ್ ತಾನುಮ್ ವಂದು ಇವನೋ
ಎಂಪೆರುಮಾನ್ ಉನ ಕೋಯಿಲಿನ್ ವಾಸಲ್
ಸುಂದರರ್ ನೆರುಕ್ಕ ವಿಚ್ಚಾದರರ್ ನೂಕ್ಕ
ಸಿತ್ತರುಮ್ ಮಯಂಗಿನರ್ ತಿರುವಡಿ ತೊೞುವಾನ್
ಅಂದರಮ್ ಪಾರ್ ಇಡಮ್ ಇಲ್ಲೈ ಮಟ್ಟ್ರು ಇದುವೋ
ಅರಂಗತ್ತಮ್ಮಾ ಪಳ್ಳಿ ಎೞುಂದರುಳಾಯೇ!

ಓ ನಾಯಕನೇ! ಇಂದ್ರನು ತನ್ನ ವಾಹನನಾದ ಆನೆ ಐರಾವತನ ಮೇಲೆ ಬಂದು ನಿನ್ನ ದೇವಾಲಯದ ಪ್ರವೇಶದ್ವಾರದ ಮುಂದೆ ಕಾಯುತ್ತಿದ್ದಾನೆ. ಸನಕ ಮತ್ತು ಇತರ ಋಷಿಗಳು, ಮರುತ್ತುರು ಮತ್ತು ಅವರ ಅನುಯಾಯಿಯರು, ಯಕ್ಷರು, ಗಂಧರ್ವರು, ವಿದ್ಯಾಧರರು( ವಿಭಿ್ನ ಗುಂಪಿನ ಸ್ವರ್ಗೀಯ ನಿವಾಸಿಗಳು) ಎಲ್ಲರೂ ಬಂದು ಆಕಾಶದಲ್ಲಿ ತಮಾಷೆ ಮಾಡಿಕೊಂಡು ನಿಂತಿದ್ದಾರೆ. ನಿನ್ನ ದಿವ್ಯ ಪಾದಗಳನ್ನು ಪೂಜಿಸಲು ಇವರೆಲ್ಲರೂ ಕಾಯುತ್ತಿದ್ದಾರೆ. ತಿರುವರಂಗದಲ್ಲಿ ದೈವಿಕ ವಿಶ್ರಾಂತಿ ತೆಗೆದುಕೊಳ್ಳುತ್ತಿರುವವನೇ! ಎದ್ದು ನಮಗೆ ಅನುಗ್ರಹವನ್ನು ನೀಡು!

೮.ಪಾಸುರಮ್: ನಿನ್ನನ್ನು ಪೂಜಿಸಲು ಹೆಚ್ಚು ಸೂಕ್ತವಾದ ಸಮಯವಾದ ಮುಂಜಾನೆಯು ಬಂದಿದೆ. ನಿನ್ನ ಪೂಜೆಗೆ ಅಗತ್ಯವಾದ ಸಾಮಗ್ರಿಗಳೊಂದಿಗೆ, ನಿನ್ನನ್ನು ಬಿಟ್ಟು ಬೇರೇನೂ ಬಯಸದ ಋಷಿಗಳು ಬಂದಿರುವುದರಿಂದ, ನೀನು ಎದ್ದು ಅವರಿಗೆ ದರ್ಶನವನ್ನು ನೀಡು!

ವಂಬವಿೞ್ ವಾನವರ್ ವಾಯುರೈ ವೞಂಗ
ಮಾನಿದಿ ಕಪಿಲೈ ಒಣ್ ಕಣ್ಣಾಡಿ ಮುದಲಾ
ಎಂಪೆರುಮಾನ್ ಪಡಿ ಮಕ್ಕಲಮ್ ಕಾಂಡರ್ಕು
ಏರ್ಪನ ಆಯಿನ ಕೊಂಡು ನನ್ ಮುನಿವರ್
ತುಂಬುರು ನಾರದರ್ ಪುಹುನ್ದನರ್ ಇವರೋ
ತೋನ್ರಿನನ್ ಇರವಿಯುಮ್ ತುಲಂಗೊಳಿ ಪರಪ್ಪಿ
ಅಂಬರ ತಲತ್ತಿನಿನ್ರು ಅಗಲ್ಗಿನ್ರದು ಇರುಳ್ ಪೋಯ್
ಅರಂಗತ್ತಮ್ಮಾ ಪಳ್ಳಿ ಎೞುಂದರುಳಾಯೇ!

“ಓ ಸ್ವಾಮಿಯೇ! ನನ್ನ ನಾಯಕನೇ! ಪ್ರಸಿದ್ಧ ಋಷಿಗಳಾದ ತುಂಬುರು ಮತ್ತು ನಾರದರು , ಸುವಾಸನೆ ತುಂಬಿರುವ ಸ್ವರ್ಗದ ನಿವಾಸಿಗಳು, ಕಾಮಧೇನು(ದೈವಿಕ ಹಸು), ಎಲ್ಲರೂ ನಿನ್ನ ತಿರು ಆರಾಧನೆಗೆ ಬೇಕಿರುವ ದೈವಿಕ ಸಾಮಗ್ರಿಗಳಾದ, ಎಲೆ, ಐಶ್ವರ್ಯ, ಕನ್ನಡಿ ಎಲ್ಲಾ ತಂದಿದ್ದಾರೆ. ಕತ್ತಲೆ ಮರೆಯಾಗಿ ಹೋಯಿತು. ಸೂರ್ಯನು ತನ್ನ ಕಿರಣಗಳಿಂದ ಎಲ್ಲಾ ದಿಕ್ಕುಗಳಲ್ಲೂ ಬೆಳಕು ಹರಡುತ್ತಿದ್ದಾನೆ. ತಿರುವರಂಗದಲ್ಲಿ ದೈವಿಕ ನಿದ್ರೆಯಲ್ಲಿರುವವನೇ! ಎದ್ದು ನಮ್ಮನ್ನು ಅನುಗ್ರಹಿಸು!

೯.ಪಾಸುರಮ್:”ಪ್ರಸಿದ್ಧರಾದ ಸಂಗೀತಗಾರರು ಮತ್ತು ನರ್ತಕರು ನಿನ್ನ ಸೇವೆ ಮಾಡಲು ಬಂದು ಕಾಯುತ್ತಿದ್ದಾರೆ. ಎದ್ದು ಅವರ ಸೇವೆಯನ್ನು ಸ್ವೀಕರಿಸು” ಎಂದು ಆೞ್ವಾರ್ ಎಂಪೆರುಮಾನನಿಗೆ ಹೇಳುತ್ತಾರೆ

ಏದಮಿಲ್ ತಣ್ಣುಮೈ ಎಕ್ಕಮ್ ಮತ್ತಳಿ
ಯಾೞ್ ಕುೞಲ್ ಮುೞವಮೋಡು
ಇಸೈ ದಿಸೈ ಕೆೞುಮಿ
ಗೀತಂಗಳ್ ಪಾಡಿನರ್ ಕಿನ್ನರರ್ ಗೆರುಡರ್ಗಳ್
ಗೆಂದರುವರ್ ಅವರ್ ಕಂಗುಲುಳ್ ಎಲ್ಲಾಮ್
ಮಾಧವರ್ ವಾನವರ್ ಸಾರಣರ್ ಇಯಕ್ಕರ್
ಸಿತ್ತರುಮ್ ಮಯಂಗಿನರ್ ತಿರುವಡಿತ್ ತೊೞುವಾನ್
ಆದಲಿಲ್ ಅವರ್ಕು ನಾಳ್ ಓಲಕ್ಕಮ್ ಅರುಳ
ಅರಂಗತ್ತಮ್ಮಾ ಪಳ್ಳಿ ಎೞುಂದರುಳಾಯೇ!

ಸ್ವರ್ಗದ ನಿವಾಸಿಗಳಾದ ಕಿನ್ನರರು, ಗರುಡರು,ಗಂಧರ್ವರು ಎಲ್ಲಾ ಬಂದು ವಿಧವಿಧವಾದ ಎಕ್ಕಮ್(ಒಂದು ತಂತಿಯ ವಾದ್ಯ), ಮತ್ತಳಿ( ತಾಳವಾದ್ಯ), ವೀಣೆ, ಕೊಳಲು ಇತ್ಯಾದಿ ಸಂಗೀತ ವಾದ್ಯಗಳನ್ನು ನುಡಿಸುತ್ತಾ ಸಂಗೀತವನ್ನು ಎಲ್ಲಾ ದಿಕ್ಕುಗಳಲ್ಲೂ ಹರಡುತ್ತಿದ್ದಾರೆ. ಸ್ವಲ್ಪ ಜನ ಇಡೀ ರಾತ್ರಿ ಇಲ್ಲೇ ಇದ್ದರು. ಇನ್ನಷ್ಟು ಜನ ಮುಂಜಾನೆ ಬಂದರು.
ಪ್ರಸಿದ್ಧ ಋಷಿಗಳು, ಸ್ವರ್ಗ ಜೀವಿಗಳಾದ ದೇವತೆಗಳು, ಚಾರಣರು,ಯಕ್ಷರು, ಸಿದ್ಧರು ಎಲ್ಲಾ ನಿನ್ನ ದಿವ್ಯ ಪಾದಗಳನ್ನು ಪೂಜಿಸಲು ಬಂದಿದ್ದಾರೆ. ತಿರುವರಂಗದಲ್ಲಿ ದೈವಿಕ ನಿದ್ರೆಯಲ್ಲಿರುವವನೇ! ಎದ್ದು ನಮ್ಮನ್ನು ಅನುಗ್ರಹಿಸು. ಅವರಿಗೆ ನಿನ್ನ ಆಸ್ಥಾನದಲ್ಲಿ ಜಾಗ ಕೊಡು.

೧೦.ಪಾಸುರಮ್:ಕಳೆದ ೯ ಪಾಸುರಗಳಲ್ಲಿ ಆೞ್ವಾರ್ ಎಂಪೆರುಮಾನನ್ನು ಎಲ್ಲರನ್ನೂ ಅನುಗ್ರಹಿಸಲು ಹೇಳಿಕೊಳ್ಳುತ್ತಾರೆ. ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನನ್ನು , ಪೆರಿಯ ಪೆರುಮಾಳನ್ನು ಬಿಟ್ಟು ಬೇರೆ ಯಾವ ದೈವವನ್ನೂ ಅರಿಯದ ತನಗೆ ಅನುಗ್ರಹ ನೀಡಲು ಬೇಡಿಕೊಳ್ಳುತ್ತಾರೆ.

ಕಡಿ ಮಲರ್ ಕಮಲಂಗಳ್ ಮಲರ್ನ್ದನ ಇವಯೋ
ಕದಿರವನ್ ಕನೈಕಡಲ್ ಮುಳೈತ್ತನನ್ ಇವನೋ
ತುಡಿಯಿಡಯಾರ್ ಸುರಿ ಕುೞಲ್ ಪಿೞಿಂದು ಉದರಿತ್
ತುಗಿಲ್ ಉಡುತ್ತು ಏರಿನರ್ ಸೂೞ್ ಪುನಲ್ ಅರಂಗಾ
ತೊಡೈ ಒತ್ತ ತುಳವಮುಮ್ ಕೂಡೆಯುಮ್ ಪೊಲಿಂದು
ತೋನ್ರಿಯ ತೋಳ್ ತೊಂಡರಡಿಪ್ಪೊಡಿ ಎನ್ನುಮ್ ಅಡಿಯನೈ
ಅಳಿಯನ್ ಎನ್ರು ಅರುಳಿ ಉನ್ ಅಡಿಯಾರ್ಕು ಆಟ್ಪಡುತ್ತಾಯ್
ಪಳ್ಳಿ ಎೞುಂದರುಳಾಯೇ!

ಪವಿತ್ರವಾದ ಕಾವೇರಿಯಿಂದ ಸುತ್ತಲ್ಪಟ್ಟು ತಿರುವರಂಗದಲ್ಲಿ ದೈವಿಕ ಯೋಗನಿದ್ರೆಯಲ್ಲಿರುವ ಓ ಶ್ರೀ ರಂಗನಾಥ!
ಪರಿಮಳಯುಕ್ತವಾದ ತಾವರೆ ಹೂವುಗಳು ಕೋಲಾಹಲವಾದ ಸಮುದ್ರದಿಂದ ಉಗಮವಾದ ಸೂರ್ಯನನ್ನು ನೋಡಿ ಅರಳಿವೆ.
ತೆಳ್ಳಗಿರುವ ಸೊಂಟ ಹೊಂದಿರುವ ಮಹಿಳೆಯರು ನದಿಯಲ್ಲಿ ಸ್ನಾನ ಮಾಡಿ, ತಮ್ಮ ವಸ್ತ್ರಗಳನ್ನು ಒಣಗಿಸಿ,ತಾಜಾ ವಸ್ತ್ರಗಳೊಂದಿಗೆ ನದಿಯ ತೀರವನ್ನು ಸೇರಿದ್ದಾರೆ. ಬುಟ್ಟಿಯಲ್ಲಿ ತುಳಸಿ ಮಾಲೆಗಳನ್ನು ಇಟ್ಟುಕೊಂಡಿರುವ, ಉಜ್ವಲವಾದ ಭುಜಗಳು ಹೊಂದಿರುವ ಈ ತೊಂಡರಡಿಪ್ಪೊಡಿ ಎನ್ನುವ ನನ್ನನ್ನು ನಿನ್ನ ಮತ್ತು ನಿನ್ನ ಭಕ್ತರ ಸೂಕ್ತ ಸೇವಕನಾಗಿ ಸ್ವೀಕರಿಸು! ಇದಕ್ಕಾಗಿಯೇ ನಿನ್ನ ದೈವಿಕ ನಿದ್ರೆ ಯಿಂದ ಎದ್ದು ನನ್ನನ್ನು ಅನುಗ್ರಹಿಸು!“ಎಂದು ಬೇಡಿಕೊಳ್ಳುತ್ತಾರೆ.
ತೊಂಡರಡಿಪ್ಪೊಡಿ ಆೞ್ವಾರ್ ತಿರುವಡಿಗಳೇ ಶರಣಂ!

ಮೂಲ: https://divyaprabandham.koyil.org/index.php/2020/05/thiruppalliyezhuchchi-simple/

ಅಡಿಯೇನ್ ರೂಪ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment