ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಹದಿನಾಲ್ಕನೇ ತಿರುಮೊಳಿ – ಪಟ್ಟಿಮೇಯ್ಂದು

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ

ನಾಚ್ಚಿಯಾರ್ ತಿರುಮೊಳಿ

<< ಹದಿಮೂರನೇ ತಿರುಮೊಳಿ – ಕಣ್ಣನೆನ್ನುಮ್

ತಿರುಪ್ಪಾವೈಯಲ್ಲಿ, ಆಂಡಾಳ್ ಪ್ರಾಪ್ಯಂ (ಅಂತ್ಯ ಫಲ) ಮತ್ತು ಪ್ರಾಪಕಂ (ಅದನ್ನು ಸಾಧಿಸುವ ರೀತಿ) ಅನ್ನು ಸ್ಥಾಪಿಸಿದ್ದರು. ತಾನು ಅಂತಿಮ ಫಲವನ್ನು ಆಗಲೇ ಪಡೆಯದ ಕಾರಣ, ಅವಳು ಗೊಂದಲಕ್ಕೊಳಗಾದಳು ಮತ್ತು ನಾಚ್ಚಿಯಾರ್ ತಿರುಮೊಳಿಯಲ್ಲಿ, ಆರಂಭದಲ್ಲಿ ಕಾಮನ (ಪ್ರೀತಿಯ ದೇವತೆ) ಪಾದಗಳಿಗೆ ಬಿದ್ದಳು. ಅದರ ನಂತರ, ಅವಳು ಮುಂಜಾನೆ ಸ್ನಾನಕ್ಕೆ ಹೋದಳು (ಪನಿ ನೀರಾಟ್ಟಂ); ಅವಳ ಆಸೆ ಈಡೇರುತ್ತದೆಯೇ ಎಂದು ತಿಳಿಯಲು ವೃತ್ತವನ್ನು ಪೂರ್ಣಗೊಳಿಸಲು ಅವಳು ಪಯತ್ನಿಸಿದಳು; ಕೋಗಿಲೆಯ ಮಾತುಗಳನ್ನು ಕೇಳಿದಳು; ಎಂಪೆರುಮಾನ್‌ನನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಬಯಸಿ ಆದರೆ ಅದು ಫಲಿಸದ ಕಾರಣ, ತನ್ನ ಕನಸಿನಲ್ಲಿ ಅವನನ್ನು ಆನಂದಿಸಿ, ತನ್ನನ್ನು ತಾನು ಆಧರಿಸಿಕೊಂಡಳು; ಎಂಪೆರುಮಾನ್ ನ ದಿವ್ಯ ಅಧರಾಮೃತ ಮಕರಂದದ ಬಗ್ಗೆ ಶ್ರೀ ಪಾಂಚಜನ್ಯಾಳ್ವಾನ್ ಬಳಿ ವಿಚಾರಿಸಿದಳು; ಮೋಡಗಳೊಂದಿಗೆ ಎಂಪೆರುಮಾನ್ ಬಗ್ಗೆ ವಿಚಾರಿಸಿದಳು; ಆ ಮೋಡಗಳನ್ನು ಅವನಿಗೆ ದೂತರಾಗಿ ಕಳುಹಿಸಿದಳು; ಅರಳಿದ ಆ ಹೂವುಗಳು ಆಕೆಗೆ ಎಂಪೆರುಮಾನ್‌ನನ್ನು ನೆನಪಿಸಿ ದುಃಖಿತಳಾದಳು; ಅವು ತನ್ನನ್ನು ಹೇಗೆ ಹಿಂಸಿಸಿದವು  ಎಂದು ಹೇಳಿದಳು; ತಾನು ಹೆಣ್ಣಾಗಿ ಹುಟ್ಟಿದ ಬಗೆಯನ್ನು ಮೆಲುಕು ಹಾಕುತ್ತಾ, ಎಂಪೆರುಮಾನ್ ಸಿಗದೇ ಇದ್ದಾಗ, ಅವನು ಪೆರಿಯಾಳ್ವಾರರ ನಿಮಿತ್ತ ಬರುತ್ತಾನೆ ಎಂದು ಸಮಾಧಾನ ಮಾಡಿಕೊಂಡಳು; ಅವನು ಅದಕ್ಕೂ ಬರದಿದ್ದರಿಂದ ದುಃಖಿತಳಾದಳು; ಆಕೆಯನ್ನು ಹೇಗಾದರೂ ಮಾಡಿ ಅವನು  ವಾಸವಾಗಿದ್ದ ಸ್ಥಳಗಳಿಗೆ ಕರೆದುಕೊಂಡು ಹೋಗುವಂತೆ ಹತ್ತಿರದಲ್ಲಿದ್ದವರಿಗೆ ಪ್ರಾರ್ಥಿಸಿದಳು; ತನ್ನನ್ನು ಸುಧಾರಿಸಿಕೊಳ್ಳಲು ವಸ್ತ್ರ, ಮಾಲೆ ಇತ್ಯಾದಿ ವಸ್ತುಗಳನ್ನು ತರುವಂತೆ ಅವರ ಬಳಿ ಕೇಳಿಕೊಂಡಳು; ಆಗಲೂ ಎಂಪೆರುಮಾನ್ ಬರಲಿಲ್ಲ.

ಅವಳು ಪ್ರಪನ್ನ ಕುಲದಲ್ಲಿ (ಎಂಪೆರುಮಾನ್‌ಗೆ ಶರಣಾದವರ ಕುಲ) ಜನಿಸಿದರೂ ಅವಳ ಈ ಸ್ಥಿತಿಗೆ ಕಾರಣ ಎಂಪೆರುಮಾನ್‌ನ ಮೇಲಿನ ಅತಿಯಾದ ಪ್ರೀತಿ. ಎಂಪೆರುಮಾನ್ ಸಹ ಆಕೆ ಪರಮಭಕ್ತಿಯ ಸ್ಥಿತಿಯನ್ನು (ಎಂಪೆರುಮಾನ್‌ನೊಂದಿಗೆ ಐಕ್ಯವಾದರೆ ಅಸ್ತಿತ್ವದಲ್ಲಿರುವುದು ಮತ್ತು ಬೇರ್ಪಟ್ಟರೆ ನಾಶವಾಗುವುದು) ಪಡೆಯಲು ಕಾಯುತ್ತಿದ್ದನು. ಆಕೆಯೂ ಸಹ ನಮ್ಮಾಳ್ವಾರ್ ಅವರಂತೆ ಆಗ್ರಹ ಪಡಿಸಿಯಾದರೂ ಎಂಪೆರುಮಾನ್‌ನನ್ನು ಪಡೆಯುವ ಗುರಿ ಹೊಂದಿದ್ದಾಳೆ. ಹೀಗೆ ದುಃಖವು ಉಕ್ಕಿ ಹರಿಯುವುದರಿಂದ, ಅವಳು ಈ ಪದಿಗಂನಲ್ಲಿ “ಕಾಂಡೀರ್” (ಒಬ್ಬ ವ್ಯಕ್ತಿಯು ಪ್ರಶ್ನೆಯನ್ನು ಕೇಳುತ್ತಿರುವಂತೆ) ಮತ್ತು “ಕಂ ಡೋಮೇ” (ಇನ್ನೊಬ್ಬರು ಪ್ರತಿಕ್ರಿಯಿಸುತ್ತಿರುವಂತೆ) ಕರುಣೆಯಿಂದ ಹೇಳುತ್ತಿದ್ದಾರೆ.

ಅವಳ ಪ್ರಯತ್ನಗಳನ್ನು ನೋಡಿದರೆ, ಅವಳು ಎಂಪೆರುಮಾನ್‌ನನ್ನು ಪಡೆಯಲು ಅವನಲ್ಲದೇ ಅನ್ಯ ಮಾರ್ಗಗಳಿಂದ ಪ್ರಯತ್ನಿಸುತ್ತಿದ್ದಾಳೆ ಎಂದು ನಾವು ಹೇಳಬಹುದೇ? ಇಲ್ಲ, ನಾವು ಅದನ್ನು ಹೇಳಲು ಸಾಧ್ಯವಿಲ್ಲ. ಆಕೆಯ ಈ ಸ್ಥಿತಿಯು ಎಂಪೆರುಮಾನ್‌ನ ಮೇಲಿನ ಅತಿಯಾದ ಪ್ರೀತಿ, ಎಂಪೆರುಮಾನ್‌ನ ಶ್ರೇಷ್ಠ ಗುಣ ಮತ್ತು ಅವನಿಂದ ಬೇರ್ಪಡುವಿಕೆಯನ್ನು ಸಹಿಸಿಕೊಳ್ಳಲಾಗದ ಅಸಮರ್ಥತೆಯಿಂದ ಮಾತ್ರ ಉಂಟಾಗುತ್ತದೆ; ಅವಳು ಈ ಕೃತ್ಯಗಳನ್ನು (ಮೊದಲ ವಾಕ್ಯವೃಂದದಲ್ಲಿ ಉಲ್ಲೇಖಿಸಲಾಗಿದೆ) ಇತರ ವಿಧಾನಗಳನ್ನು ಅನುಸರಿಸುವ ಪ್ರಯತ್ನವಾಗಿ ಮಾಡಿಲ್ಲ. ಅದು ಅವಳ ಸ್ವರೂಪದೊಂದಿಗೆ (ಮೂಲ ಸ್ವಭಾವ) ಹೊಂದಿಕೆಯಾಗುವುದಿಲ್ಲ. ಎಂಪೆರುಮಾನ್ ಅನ್ನು ಸಾಧನವಾಗಿ ಯೋಚಿಸುವವರು ಎಂದಿಗೂ ಇತರ ಮಾರ್ಗಗಳ ಬಗ್ಗೆ ಯೋಚಿಸುವುದಿಲ್ಲ.

ಮೊದಲನೇ ಪಾಸುರಂ. ಪರಮಪದ ಅನುಭವವನ್ನು ಬಿಟ್ಟು, ಶ್ರೀಗೋಕುಲಂನಲ್ಲಿರುವ ಅತಿಯಾದ ಬೆಣ್ಣೆಯನ್ನು ಸವಿಯಲು ಮತ್ತು ನಪ್ಪಿನ್ನೈ ದೇವಿ ಯನ್ನು ಮದುವೆಯಾಗಲು ಅವನು ಇಲ್ಲಿ ಅವತರಿಸಿದನು. ಅವನ ಬಯಕೆಗೆ ಅನುಗುಣವಾಗಿ, ಅವನು ವೃಂದಾವನದಲ್ಲಿ (ಬೃಂದಾವನ) ಸಂಚರಿಸಿದನು ಮತ್ತು ಶ್ರೇಷ್ಠತೆಯನ್ನು ಪಡೆದನು.

ಪಟ್ಟಿ ಮೇಯ್ನ್ದು ಓರ್ ಕಾರೇರು ಬಲದೇವರ್ಕು ಓರ್ ಕೀಳ್  ಕನ್ರಾಯ್

ಇಟ್ಟೀರಿಟ್ಟು ವಿಳೈಯಾಡಿ ಇಂಗೇ ಪೋದ ಕಂಡೀರೇ?

ಇಟ್ಟಮಾನ ಪಶುಕ್ಕಳೈ ಇನಿದು ಮರಿತ್ತು ನೀರೂಟ್ಟಿ

ವಿಟ್ಟುಕ್ಕೊಂಡು ವಿಳೈಯಾಡ ವಿರುಂದಾವನತ್ತೇ ಕಂಡೋಮೇ

ವಿಶಿಷ್ಟ ಮತ್ತು ಕಪ್ಪು ಬಣ್ಣದ ಗೂಳಿಯಂತಿದ್ದ ಕಣ್ಣನ್ ಯಾವುದೇ ನಿರ್ಬಂಧವಿಲ್ಲದೆ ಎಲ್ಲ ಕಡೆ ತಿರುಗಾಡುತ್ತಿದ್ದ. ಅವರು ಬಲದೇವನ (ಬಲರಾಮನ) ಅನನ್ಯ, ವಿಧೇಯ ಕಿರಿಯ ಸಹೋದರ. ತನ್ನ ಸಂತೋಷಕ್ಕೆ, ಆಟಕ್ಕೆ ವಾಹಿನಿಯಾಗಿ ನಾನಾ ಚಟುವಟಿಕೆಗಳನ್ನು ಅವನು ನಡೆಸುತ್ತಿದ್ದನು. ನೀವು ಅವುಗಳನ್ನು ನೋಡಿದ್ದೀರಾ? ವೃಂದಾವನದಲ್ಲಿ ತನಗೆ ಪ್ರಿಯವಾದ ಹಸುಗಳನ್ನು ಅವುಗಳ ಸಿಹಿ ಹೆಸರುಗಳಿಂದ ಕರೆಯುವುದು, ನೀರು ಕುಡಿಯಲು ಕರೆದುಕೊಂಡು ಹೋಗುವುದು, ಮೇಯಲು ಬಿಡುವುದು ಮತ್ತು ಆಟವಾಡುವುದನ್ನು ನಾವು ನೋಡಿದ್ದೇವೆ.

ಎರಡನೇ ಪಾಸುರಂ. ಅವರು ವನಮಾಲೈ ವೈಜಯಂತಿ (ದೈವೀಕ ಮಾಲೆ) ಧರಿಸಿ ವೃಂದಾವನದಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುವುದನ್ನು ಅವರು ನೋಡಿದ್ದಾರೆಂದು ಅವಳು ಹೇಳುತ್ತಾಳೆ.

ಅನುಂಗ ಎನ್ನೈ ಪಿರಿವು ಶೆಯ್ದು ಆಯರ್ಪಾಡಿ ಕವಂರ್ದು ಉಣ್ಣುಮ್

ಕುಣುನ್ಗು ನಾರಿ ಕುಟ್ಟೇಟ್ರೈ ಗೋವರ್ಧನನೈ ಕಂಡೀರೇ?

ಕಣಂಗಳೋಡು ಮಿನ್ ಮೇಗಮ್ ಕಲನ್ದದಾರ್ ಪೋಲ್ ವನಮಾಲೈ

ಮಿನುಂಗ ನಿನ್ರು  ವಿಳೈಯಾಡ ವಿರುಂದಾವನತ್ತೇ ಕಂಡೋಮೇ

ನನ್ನಿಂದ ಬೇರ್ಪಟ್ಟು ನಾನು ದುಃಖಿತಳಾಗುವಂತೆ ಮಾಡಿದವನನ್ನು, ಶ್ರೀಗೋಕುಲವನ್ನು ವಶಪಡಿಸಿಕೊಂಡು ಆನಂದಿಸುತ್ತಾ, ಬೆಣ್ಣೆಯ ವಾಸನೆಯನ್ನು ಮೈ ಮೇಲೆ ಬೀರುತ್ತಿರುವವನನ್ನು, ಎಳೆಯ ಗೂಳಿಯಂತೆ ಕಾಣುವವನನ್ನು ಮತ್ತು ಹಸುಗಳನ್ನು ಚೆನ್ನಾಗಿ ಪೋಷಿಸುವ ಕಣ್ಣನನ್ನು ನೀವು ನೋಡಿದ್ದೀರಾ?

ಮೂರನೇ ಪಾಸುರಂ. ಅವರು ವೃಂಧಾವನದಲ್ಲಿ ಕಣ್ಣನನ್ನು ಕಂಡರು, ಅಲ್ಲಿ ಗರುಡಾಳ್ವಾರ್ (ಆಕಾಶದಲ್ಲಿ) ತನ್ನ ರೆಕ್ಕೆಗಳನ್ನು ಅವನಿಗೆ ಕೊಡೆಯಂತೆ ಚಾಚಿ ಕೈಂಕರ್ಯವನ್ನು ನಡೆಸುತ್ತಿದ್ದನು ಎಂದು ಹೇಳುತ್ತಾಳೆ.

ಮಾಲಾಯ್ ಪಿರಂದ ನಂಬಿಯೈ ಮಾಲೈ ಶೆಯ್ಯುಮ್ ಮಣಾಳನೈ

ಏಲಾ ಪೊಯ್ಗಳ್ ಉರುಪ್ಪಾನೈ ಇಂಗೇ ಪೋದ ಕಂಡೀರೇ?

ಮೇಲಾಲ್ ಪರಂದ ವೆಯಿಲ್ ಕಾಪ್ಪಾನ್ ವಿನದೈ ಶಿರುವನ್ ಶಿರಗೆನ್ನುಮ್

ಮೇಲಾಪಿನ್ ಕೀಳ್ ವರುವಾನೈ ವಿರುಂದಾವನತ್ತೇ ಕಂಡೋಮೇ

ಗೋಪಾಲಕಿಯರ ಮೇಲಿನ ವಾತ್ಸಲ್ಯದಿಂದ ತನ್ನ ದೈವೀಕ ರೂಪವಾಗಿ ಅವತರಿಸಿರುವ ಕಣ್ಣನನ್ನು, ಪ್ರೀತಿಯ ವರನನ್ನು, ಅಸಮರ್ಪಕ ಸುಳ್ಳುಗಳನ್ನು ಹೇಳುವವನನ್ನು, ನೀವು ಈ ಸ್ಥಳದ ಸುತ್ತಲೂ ನೋಡಿದ್ದೀರಾ?  ಸೂರ್ಯನಿಂದ ಸುಡುವ ಕಿರಣಗಳು ಕಣ್ಣನ ಗಾಢವಾದ ದಿವ್ಯ ರೂಪದ ಮೇಲೆ ಬೀಳದಂತೆ ಆಕಾಶದಲ್ಲಿ ತನ್ನ ರೆಕ್ಕೆಗಳನ್ನು ಛಾವಣಿಯಂತೆ ಚಾಚುತ್ತಿರುವ ಗರುಡನ ಜೊತೆ ಕಣ್ಣನನ್ನು ನಾವು ವೃಂದಾವನದಲ್ಲಿ ನಾವು ನೋಡಿದ್ದೇವೆ.

ನಾಲ್ಕನೆಯ ಪಾಸುರಂ. ಅವಳು ಎಂಪೆರುಮಾನ್ ಅನ್ನು ಭವ್ಯವಾದ ಆನೆ ಮರಿಯಂತೆ ಆನಂದಿಸುತ್ತಾಳೆ.

ಕಾರ್ ತಣ್ ಕಮಲ ಕಣ್ಣೆನ್ನುಮ್ ನೆಡುಮ್ ಕಯಿರ್ ಪಡುತ್ತಿ ಎನ್ನೈ

ಈರ್ತುಕೊಂಡು ವಿಳೈಯಾಡುಮ್ ಈಶನ್ ತನ್ನೈ ಕಂಡೀರೇ?

ಪೋರ್ತ ಮುತ್ತಿನ್ ಕುಪ್ಪಾಯ ಪುಗರ್ ಮಾಲ್ ಯಾನೈ ಕನ್ರೇ ಪೋಲ್ 

ವೇರ್ತು ನಿನ್ರು  ವಿಳೈಯಾಡ ವಿರುಂದಾವನತ್ತೇ ಕಂಡೋಮೇ

ಎಂಪೆರುಮಾನ್ ತಂಪಾದ ಕಮಲದ ಹೂವುಗಳಂತಿರುವ, ಕಪ್ಪು ಮೋಡಗಳ ಮೇಲೆ ಅರಳಿರುವಂತಿರುವ ತನ್ನ ದಿವ್ಯ ಕಣ್ಣುಗಳನ್ನು ಹೊಂದಿದ್ದಾನೆ. ನೀಳವಾದ ಹಗ್ಗದಂತಿರುವ ಆ ಕಣ್ಣುಗಳಿಂದ ನನ್ನನ್ನು ಬಲೆಯಲ್ಲಿಟ್ಟುಕೊಂಡು, ನನ್ನ ಹೃದಯವನ್ನು ತನ್ನೆಡೆಗೆ ಎಳೆದುಕೊಂಡು ಆಟವಾಡುತ್ತಿರುವ ಸರ್ವೇಶ್ವರನಾದ ಎಂಪೆರುಮಾನ್‌ನನ್ನು ನೀವು ನೋಡಿದ್ದೀರಾ? ಮುತ್ತುಗಳಿಂದ ಮಾಡಿದ ಹೊದಿಕೆಯನ್ನು ಹೊಂದಿರುವ ಬೃಹತ್ ಆನೆ ಮರಿಯಂತೆ, ಕಾಂತಿಯನ್ನು ಹೊಂದಿದ್ದು, ದೇಹದಾದ್ಯಂತ ಬೆವರಿನಿಂದ ಆಟವಾಡುತ್ತಿರುವಂತೆ ನಾವು ಅವನನ್ನು ವೃಂದಾವನದಲ್ಲಿ ನೋಡಿದ್ದೇವೆ (ಅವಳು ಬೆವರಿನ ಹನಿಗಳನ್ನು ಮುತ್ತಿನ ಹೊದಿಕೆಗೆ ಸಮೀಕರಿಸುತ್ತಾಳೆ).

ಐದನೇ ಪಾಸುರಂ. ಎಂಪೆರುಮಾನ್ ತನ್ನ ದೈವೀಕ ಪೀತಾಂಬರಂ (ಹಳದಿ ಬಣ್ಣದ ವಸ್ತ್ರ) ಧರಿಸಿ ಉದ್ದಕ್ಕೂ ಮಿಂಚಿನ ಗೆರೆ ಹೊಂದಿರುವ ಸಣ್ಣ ಕಪ್ಪು ಮೋಡದಂತೆ ಬೀದಿಯಲ್ಲಿ ಸಂಚರಿಸುತ್ತಿದ್ದನು ಎಂದು ಅವಳು ಹೇಳುತ್ತಾಳೆ.

ಮಾಧವನ್ ಎನ್ ಮಣಿಯಿನೈ ವಲೈಯಿಲ್ ಪಿಳೈತ್ತ ಪನ್ರಿ ಪೋಲ್

ಏದುಮ್ ಒನ್ರುಮ್ ಕೊಳ ತ್ತಾರಾ ಈಶನ್ ತನ್ನೈ ಕಂಡೀರೇ?

ಪೀತಗ ಆಡೈ ಉಡೈ ತಾಳ ಪೆರುಮ್ ಕಾರ್ಮೇಘ ಕನ್ರೇ ಪೋಲ್

ವೀದಿಯಾರ ವರುವಾನೈ ವಿರುಂದಾವನತ್ತೇ ಕಂಡೋಮೇ

ಶ್ರೀಮಹಾಲಕ್ಷ್ಮಿಯ ಪತಿಯಾಗಿರುವ ಮಹಾನ್ ಸರ್ವೇಶ್ವರನನ್ನು ನೀವು ನೋಡಿದ್ದೀರಾ?, ನನಗೆ ನೀಲಮಣಿಯಂತೆ ಅತ್ಯಂತ ಮಧುರನಾಗಿ, ಜಾಲದಿಂದ ತಪ್ಪಿಸಿಕೊಂಡ ವರಾಹದಂತೆ ಹೆಮ್ಮೆಪಡುತ್ತಾ, ತನ್ನ ಬಳಿಯಿರುವ ಯಾವುದನ್ನೂ ಯಾರಿಗೂ ಬಿಟ್ಟುಕೊಡದೇ ಇರುವುದನ್ನು ನೀವು ನೋಡಿದ್ದೀರಾ? ನಾವು ಎಂಪೆರುಮಾನ್ ನನ್ನು ವೃಂದಾವನದಲ್ಲಿ ಅವನ ದಿವ್ಯವಾದ ಹಳದಿ ಬಣ್ಣದ ಉಡುಪು ತೂಗಾಡುತ್ತಾ, ಕಪ್ಪಾಗಿ ಮತ್ತು ದಟ್ಟವಾಗಿರುವ ಸಣ್ಣ ಮೋಡದಂತೆ, ಬೀದಿಯನ್ನು ಕರುಣೆಯಿಂದ ತುಂಬಿರುವುದನ್ನು ನೋಡಿದ್ದೇವೆ.

ಆರನೇ ಪಾಸುರಂ. ಉದಯಗಿರಿಯಿಂದ (ಸೂರ್ಯನು ಉದಯಿಸುವ ಪರ್ವತ) ಮೇಲೇಳುತ್ತಿರುವ ಸೂರ್ಯನಂತೆ, ಕೆಂಪು ಮಿಶ್ರಿತ ಪ್ರಭೆಯೊಂದಿಗೆ ಅವನ ಕಪ್ಪು ದೈವಿಕ ರೂಪದೊಂದಿಗೆ ಅವರು ಅವನನ್ನು ನೋಡಿದ್ದಾರೆಂದು ಅವಳು ಹೇಳುತ್ತಾಳೆ.

ಧರುಮಮ್ ಅರಿಯಾ ಕುರುಮ್ಬನೈ ತನ್ ಕೈ ಶಾರ್ನ್ಗಮ್ ಅದುವೇ ಪೋಲ್

ಪುರುವ ವಟ್ಟಂ ಅಳಗಿಯ ಪೊರುತ್ತಮಿಲಿಯೈ ಕಂಡೀರೇ?

ಉರುವು ಕರಿದಾಯ್ ಮುಗಮ್ ಶೆಯ್ದಾಯ್ ಉದಯ ಪರುಪ್ಪದತ್ತಿನ್ ಮೇಲ್

ವಿರಿಯುಮ್ ಕದಿರೇ ಪೋಲ್ವಾನೈ ವಿರುಂದಾವನತ್ತೇ ಕಂಡೋಮೇ

ಕರುಣೆಯ ಅಸ್ತಿತ್ವವನ್ನು ತಿಳಿದಿಲ್ಲದ, ನಿರಂತರವಾಗಿ ಕಿಡಿಗೇಡಿತನಗಳಲ್ಲಿ ತೊಡಗಿರುವ, ಕಣ್ಣ ಹುಬ್ಬುಗಳು ತನ್ನ ಕೈಯಲ್ಲಿರುವ ಬಿಲ್ಲು ಶಾರಂಗದಂತೆ ಕಾಣುವ, ತನ್ನ ದಿವ್ಯ ನೇತ್ರಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟ ಮತ್ತು ಅನುಯಾಯಿಗಳೊಂದಿಗೆ ಹೊಂದಿಕೆಯಾಗದ ಎಂಪೆರುಮಾನ್ ಅನ್ನು ನೀವು ನೋಡಿದ್ದೀರಾ? ಸೂರ್ಯನು ಉದಯಿಸುತ್ತಿರುವ ಪರ್ವತದಿಂದ ಹೊರಬರುವಂತೆ ಕಾಣುವ ಅವನನ್ನು ವೃಂದಾವನದಲ್ಲಿ ನಾವು ನೋಡಿದ್ದೇವೆ, ಏಕೆಂದರೆ ಅವನ ಗಾಢವಾದ ದೈವೀಕ ರೂಪದಲ್ಲಿ ಅವನು ದಟ್ಟ ಕೆಂಪು ಕಾಂತಿಯನ್ನು ಹೊಂದಿದ್ದಾನೆ.

ಏಳನೇ ಪಾಸುರಂ. ನಕ್ಷತ್ರಗಳ ಜೊತೆಗೂಡಿದ ನಿರ್ಮಲ ಆಕಾಶದಂತೆಯೇ, ವೃಂದಾವನದಲ್ಲಿ ಎಂಪೆರುಮಾನ್ ತನ್ನ ಸ್ನೇಹಿತರ ನಡುವೆ ಬರುವುದನ್ನು ಅವರು ನೋಡಿದ್ದಾರೆ ಎಂದು ಅವಳು ಹೇಳುತ್ತಾರೆ.

ಪೊರುತ್ತಮ್ ಉಡೈಯ ನಂಬಿಯೈ ಪುರಂ ಪೋಲ್ ಉಳ್ಳುಮ್ ಕರಿಯಾನೈ

ಕರುತ್ತೈ ಪಿಳೈತ್ತು ನಿನ್ರ ಅಕ್ಕರುಮ್ ಮಾ ಮುಗಿಲೈ ಕಂಡೀರೇ?

ಅರುತ್ತಿ ತಾರಾ ಗಣಂಗಳಾಲ್ ಆರ ಪೆರುಗು ವಾನಮ್ ಪೋಲ್

ವಿರುತ್ತಮ್ ಪೆರಿದಾಯ್ ವರುವಾನೈ ವಿರುಂದಾವನತ್ತೇ ಕಂಡೋಮೇ

ತನ್ನ ಕಪ್ಪುದಿವ್ಯ ಸ್ವರೂಪದಂತೆ ಹೃದಯವನ್ನು ತುಂಬಾ ಕತ್ತಲೆಯಾಗಿಸಿಕೊಂಡಿರುವ  (ಯಾವುದೇ ಕರುಣೆಯಿಲ್ಲದ), ನನ್ನ ಆಲೋಚನೆಗಳಿಗಿಂತ ಭಿನ್ನವಾದ ಮತ್ತು ದೊಡ್ಡ ಕಪ್ಪು ಮೋಡದಂತಿರುವ ಯೋಗ್ಯ ಸ್ವಾಮಿ (ಪ್ರಭು) ಕಣ್ಣನನ್ನು ನೀವು ನೋಡಿದ್ದೀರಾ? ಪ್ರಾಪಂಚಿಕ ಭೋಗವನ್ನು ಬಯಸುವವರು ಇಷ್ಟಪಡುವ ನಕ್ಷತ್ರಗಳಿಂದ ತುಂಬಿರುವ ಆಕಾಶದಂತೆ, ವೃಂದಾವನದಲ್ಲಿ ತನ್ನ ಸ್ನೇಹಿತರೊಡನೆ ದೊಡ್ಡ ಗುಂಪಿನಲ್ಲಿರುವ ಆ ಎಂಪೆರುಮಾನ್ ಅನ್ನು ನಾವು ನೋಡಿದ್ದೇವೆ.

ಎಂಟನೆಯ ಪಾಸುರಂ. ಅವರು ಎಂಪೆರುಮಾನ್ ನನ್ನು ಅವನ ದಿವ್ಯ ಭುಜಗಳ ಮೇಲೆ ಹೊಳೆಯುತ್ತಿರುವ ಮತ್ತು ಆಟವಾಡುತ್ತಿರುವ ಸುಂದರವಾದ ವಸ್ತ್ರಗಳೊಂದಿಗೆ ನೋಡಿದ್ದಾರೆ ಎಂದು ಅವಳು ಹೇಳುತ್ತಾಳೆ.

ವೆಳಿಯ ಶಂಗು ಒನ್ರು ಉಡೈಯಾನೈ ಪೀತಗ ಆಡೈ ಉಡೈಯಾನೈ

ಅಳಿ ನನ್ಗುಡೈಯ ತಿರುಮಾಲೈ ಆಳಿಯಾನೈ ಕಂಡೀರೇ?

ಕಳಿವಂಡು ಎಂಗುಮ್ ಕಲಂದಾರ್ ಪೋಲ್ ಕಮಲ್ ಪೂಂಗುಳಲ್ ಹಳ್ ತಡಮ್ ತೋಳ್ ಮೇಲ್

ಮಿಳಿರ ನಿನ್ರು  ವಿಳೈಯಾಡ ವಿರುಂದಾವನತ್ತೇ ಕಂಡೋಮೇ

ಶ್ವೇತವರ್ಣದ, ಅನುಪಮವಾದ ಶ್ರೀ ಪಾಂಚಜನ್ಯಂ (ದೈವೀಕ ಶಂಖ) ಹೊಂದಿರುವ, ದಿವ್ಯವಾದ ಹಳದಿ ಬಣ್ಣದ ವಸ್ತ್ರವನ್ನುಧರಿಸಿರುವ, ಕರುಣಾಕರನಾದ, ದೈವೀಕ ಚಕ್ರ ಹಿಡಿದಿರುವ ಶ್ರೀ ಮಹಾಲಕ್ಷ್ಮಿಯ ಪತಿಯಾಗಿರುವ ಕಣ್ಣನನ್ನು ನೀವು ನೋಡಿದ್ದೀರಾ? ಜೇನು ಕುಡಿದು ಸಂತೋಷಪಡುವ ಜೀರುಂಡೆಗಳು ಎಲ್ಲಾ ಕಡೆಗಳಲ್ಲಿ ಹರಡಿ, ಅವನ ದಿವ್ಯವಾದ ಭುಜಗಳ ಮೇಲೆ ವೈಭವಯುತವಾಗಿ ತೂಗಾಡುತ್ತಿರುವಂತಿರುವ ಸುಗಂಧಭರಿತವಾದ ತನ್ನ ಸುಂದರವಾದ ವಸ್ತ್ರಗಳೊಂದಿಗೆ ನಾವು ಅವನನ್ನು ವೃಂದಾವನದಲ್ಲಿ ನೋಡಿದ್ದೇವೆ.

ಒಂಭತ್ತನೇ ಪಾಸುರಂ. ವೃಂದಾವನದ ಕಾಡಿನಲ್ಲಿ ರಾಕ್ಷಸರನ್ನು ಬೇಟೆಯಾಡುತ್ತಿದ್ದ ಎಂಪೆರುಮಾನನ್ನು ಅವರು ನೋಡಿದ್ದಾರೆ ಎಂದು ಅವಳು ಹೇಳುತ್ತಾಳೆ.

ನಾಟ್ಟೈ ಪಡೈಎನ್ರು  ಅಯನ್ ಮುದಲಾತ್ತಂದ ನಳಿರ್ ಮಾಮಲರುಂದಿ

ವೀಟ್ಟೈ ಪಣ್ಣಿ ವಿಳೈಯಾಡುಮ್ ವಿಮಲನ್ ತನ್ನೈ ಕಣ್ಣೀರೇ

ಕಾಟ್ಟೈ ನಾಡಿ ತ್ತೇನುಹನುಮ್ ಕಳಿರುಮ್ ಪುಳ್ಳುಮ್ ಉಡನ್ ಮಡಿಯ

ವೇಟ್ಟೈಯಾಡಿ  ವರುವಾನೈ ವಿರುಂದಾವನತ್ತೇ ಕಂಡೋಮೇ

ಮಹಾ ಪುಷ್ಪದಿಂದ ನಾಭಿಯ ನಿವಾಸವನ್ನು ನಿರ್ಮಿಸಿದ ವಿಮಲನ್ ಎಂಪೆರುಮಾನ್, ಬ್ರಹ್ಮ ಮೊದಲಾದ ಪ್ರಜಾಪತಿಗಳನ್ನು (ಜಗತ್ತನ್ನು ಸೃಷ್ಟಿಸಿದವರು) ಕೇಳುತ್ತಾ, “ಜಗತ್ತುಗಳನ್ನು ಸೃಷ್ಟಿಸು” ಎಂದು ಹೇಳಿ ಮತ್ತು ಆಟವಾಡುವ ರಸವನ್ನು ಆನಂದಿಸುವುದನ್ನು ನೀವು ನೋಡಿದ್ದೀರಾ? ಧೇನುಕನೆಂಬ ರಾಕ್ಷಸ, ಕುವಲಯಾಪೀಡಮ್ ಎಂಬ ಆನೆ ಮತ್ತು

ಬಕಾಸುರನೆಂಬ ರಾಕ್ಷಸನನ್ನು (ಕೊಕ್ಕರೆ ರೂಪದಲ್ಲಿ) ತಕ್ಷಣವೇ ಕೊಲ್ಲಲ್ಪಡುವಂತೆ ಕಾಡುಗಳಲ್ಲಿ ಬೇಟೆಯಾಡಿದ ಕಣ್ಣನನ್ನು ಬೃಂದಾವನದಲ್ಲಿ ನೋಡಿದ್ದೇವೆ.

ಹತ್ತನೇ ಪಾಸುರಂ. ಈ ಪಧಿಗವನ್ನು ಸದಾ ಧ್ಯಾನಿಸುವವರಿಗೆ ಅವರು ಎಂಪೆರುಮಾನ್‌ನೊಂದಿಗೆ ಬೇರ್ಪಡಿಸಲಾಗದಂತೇ ಇದ್ದು ಅವನಿಗೆ ಕೈಂಕರ್ಯವನ್ನು ನಡೆಸುವ ಫಲ ಸಿಗುವುದೆಂದು ಹೇಳುವ ಮೂಲಕ ಅವಳು ಪಧಿಗವನ್ನು ಪೂರ್ಣಗೊಳಿಸುತ್ತಾಳೆ.

ಪರುಂದಾಳ್ ಕಲಿಟ್ರುಕ್ಕರುಳ್ ಶೆಯ್ದ ಪರಮಂ ತನ್ನೈ ಪಾರಿನ್ಮೇಲ್

ವಿರುಂದಾವನತ್ತೇ ಕಂಡಮೈ ವಿಟ್ತುಶಿತ್ತನ್  ಕೋದೈ ಶೊಲ್

ಮರುಂದಾಮ್ ಎನ್ರು  ತಮ್ ಮನತ್ತೇ ವೈತ್ತುಕೊಂಡು ವಾಳ್ವಾರ್ಹಳ್ ಪೆರುಂತಾಳ್ ಉಡೈಯ ಪಿರಾನ್ ಅಡಿಕ್ಕೀಳ್ ಪಿರಿಯಾದೆನ್ರುಮ್ ಇರುಪ್ಪಾರೇ.

ಅಡಿಯೇನ್ ಯತಿರಾಜ ರಾಮಾನುಜ ದಾಸನ್ 

ಮೂಲ: https://divyaprabandham.koyil.org/index.php/2020/05/nachchiyar-thirumozhi-14-simple/

ಸಂಗ್ರಹಣಾ ಸ್ಥಾನ https://divyaprabandham.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org