ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ –ಹತ್ತನೇ ತಿರುಮೊಳಿ – ಕಾರ್ಕೋಡಲ್ ಪೂಕ್ಕಾಳ್

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ

ನಾಚ್ಚಿಯಾರ್ ತಿರುಮೊಳಿ

<< ಒಂಭತ್ತನೇ ತಿರುಮೊಳಿ – ಸಿಂಧೂರ ಶೆಂಬೊಡಿ

ಆರಂಭದಲ್ಲಿ ಅವಳು ತನ್ನನ್ನು ಉಳಿಸಿಕೊಳ್ಳಲು ಕಾಮದೇವನ  (ಮನ್ಮಧನ್, ಮನ್ಮಥ) ಕಾಲಿಗೆ, ಪಕ್ಷಿಗಳು ಮತ್ತು ಮೋಡದ ಆಸರೆಗೆ ಬಿದ್ದಳು. ಇದು ಅವಳಿಗೆ ಪ್ರಯೋಜನವಾಗಲಿಲ್ಲ. ಎಂಪೆರುಮಾನ್ ಬರದಿದ್ದರೂ, ಅವನನ್ನು ಹೋಲುವ ಘಟಕಗಳ ಮೂಲಕ ಅವನನ್ನು ಗುರುತಿಸುವ ಮೂಲಕ ತನ್ನನ್ನು ತಾನು ಸುಧಾರಿಸಿಕೊಳ್ಳಬಹುದು ಎಂದು ಅವಳು ಭಾವಿಸಿದಳು. ಹೂ ಬಿಡುವ ಕಾಲದಲ್ಲಿ ಅರಳುವ ಹಕ್ಕಿಗಳು ಇತ್ಯಾದಿಗಳು ಅವಳಿಗೆ ಅವನ ದಿವ್ಯ ರೂಪ ಮತ್ತು ಅಂಗಗಳನ್ನು ನೆನಪಿಸಿ ಅವಳನ್ನು ಬಾಧಿಸಿದವು. ಈ ಸ್ಥಿತಿಯಲ್ಲಿ, ಎಂಪೆರುಮಾನ್‌ನ ಮಾತುಗಳು ಮತ್ತು ಪೆರಿಯಾಳ್ವಾರ್ ಕುಲದಲ್ಲಿ ತಾನು ಜನಿಸಿರುವುದರಿಂದ ಮಾತ್ರ ತನ್ನನ್ನು ತಾನು ಉಳಿಸಿಕೊಳ್ಳಲು ಸಾಧ್ಯ ಎಂದು ಅವಳು ಭಾವಿಸಿದಳು. ಎಂಪೆರುಮಾನ್ ಎಲ್ಲರನ್ನು ರಕ್ಷಿಸುತ್ತೇನೆ ಎಂದು ಮೊದಲೇ ಮಾತು ಕೊಟ್ಟಿದ್ದರೂ, ಅವರ ಸ್ವತಂತ್ರತೆಯ ಕಾರಣ ಯಾರೂ ಅವರನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ತಾನು ಪೆರಿಯಾಳ್ವಾರ್ ಅವರ ದೈವೀಕ ಮಗಳಾಗಿರುವುದು ತನ್ನನ್ನು ತಾನು ಉಳಿಸಿಕೊಳ್ಳುವ ಏಕೈಕ ಮಾರ್ಗವೆಂದು ಅವಳು ಭಾವಿಸಿದಳು. ಇದರಲ್ಲಿಯೂ ಆಕೆಗೆ ಅನಗತ್ಯವಾದ ಅನುಮಾನವಿತ್ತು, ಅಂದರೆ, “ಎಂಪೆರುಮಾನ್ ನನ್ನನ್ನು ಕೈಬಿಟ್ಟರೆ ಏನು ಗತಿ?” ನಂತರ ಅವಳು ಯೋಚಿಸಿದಳು “ಇನ್ನೇನಾದರೂ ಆಗಬಹುದು ಅಥವಾ ಇಲ್ಲದಿರಬಹುದು”. ಆದಾಗ್ಯೂ, ಪೆರಿಯಾಳ್ವಾರ್ ಮತ್ತು ನನ್ನ ನಡುವಿನ ಸಂಬಂಧವು ವ್ಯರ್ಥವಾಗುವುದಿಲ್ಲ. ಅದು ಅವನ ಸ್ವಾತಂತ್ರ್ಯವನ್ನು ಬದಲಾಯಿಸುತ್ತದೆ ಮತ್ತು ಅವನ ದೈವೀಕ ಪಾದಗಳಲ್ಲಿ ನನ್ನನ್ನು ತಲುಪಿಸುತ್ತದೆ. ಅವಳು ತನ್ನನ್ನು ಈ ರೀತಿಯಲ್ಲಿ ಸ್ಥಿರಗೊಳಿಸಿಕೊಳ್ಳುತ್ತಾಳೆ ಮತ್ತು ಸುಧಾರಿಸಿಕೊಳ್ಳುತ್ತಾಳೆ. ಎಂಪೆರುಮಾನ್ “ನಾನು ನಿನ್ನನ್ನು ಬಿಡುವುದಿಲ್ಲ” ಎಂದು ಹೇಳಿದರೂ ಅದನ್ನು ಸಾಧಿಸಲು ಆಚಾರ್ಯನ ಅಗತ್ಯವಿದೆ (ಆಚಾರ್ಯರು ಇಲ್ಲಿ ಶಿಫಾರಸು ಪಾತ್ರವನ್ನು ನಿರ್ವಹಿಸುತ್ತಾರೆ). ಪರಾಶರ ಭಟ್ಟರು ಶ್ರೀದೇವಿಮಂಗಲದಲ್ಲಿ ರಾಜ ವಾನವಧಾರ್ಯ ನನ್ನು ನೋಡಲು ಹೋದಾಗ, ರಾಜನು ಭಟ್ಟರನ್ನು ಕೇಳಿದನು, “ಎಂಪೆರುಮಾನ್ ಅಲ್ಲಿರುವಾಗ, ಎಲ್ಲಾ ಜನರು ನಿಮ್ಮ ಬಗ್ಗೆ ಪ್ರೀತಿಯಿಂದ ಇರಲು ಕಾರಣವೇನು?” ಭಟ್ಟರು ಕರುಣಾಶಾಲಿಯಾಗಿ  ಪ್ರತಿಕ್ರಿಯಿಸಿದರು, “ಎಂಪೆರುಮಾನ್ ನನ್ನು ಪಡೆಯಲು, ಅವರ ಅನುಯಾಯಿಗಳು ಘಟಕಕಾರರಾಗಿ (ಒಗ್ಗೂಡಿಸಲು ಸಹಾಯ ಮಾಡುವವರು) ವರ್ತಿಸುತ್ತಾರೆ. ನಾನು ಕೂರತ್ತಾಳ್ವಾನರ ಮಗನಾಗಿರುವುದರಿಂದ ಈ ಜನರು ನನ್ನ ಮೇಲೆ ಪ್ರೀತಿಯನ್ನು ತೋರಿಸುತ್ತಾರೆ.

ಮೊದಲನೇ ಪಾಸುರಂ. ಅವಳು ತನ್ನ ದುಃಖಕರ ಸ್ಥಿತಿಯನ್ನು ಹೂವುಗಳಿಗೆ ಹೇಳುತ್ತಾಳೆ.

ಕಾರ್ರ್ಕೋಡಲ್ ಪೂಕ್ಕಾಳ್ ಕಾರ್ಕಡಲ್ ವಣ್ಣನ್ ಎಮ್ ಮೇಲ್ ಉಮ್ಮೈ

ಪೋರ್ಕೋಲಂ ಶೆಯ್ದು ಪೋರ ವಿಡುತ್ತವನ್ ಎಂಗುಟ್ರಾನ್?

ಆರ್ಕ್ಕೋ ಇನಿ ನಾಮ್ ಪೂಶಲ್  ಇಡುವುದು? ಅಣಿ ತುಳಾಯ್

ತಾರ್ಕೋಡುಂ ನೆಂಜನ್ ತನ್ನೈ ಪಡೈಕ್ಕ ವಲ್ಲೇನ್ ಅಂದೋ

ಓ ಕಪ್ಪು ಕಾಂದಳ ಪುಷ್ಪಗಳೇ  (ಒಂದು ರೀತಿಯ ಲಿಲ್ಲಿ ಪುಷ್ಪ)! ನಿನ್ನನ್ನು ಸೂಕ್ತವಾಗಿ ಅಲಂಕರಿಸಿ ನನ್ನ ಮೇಲೆ ಯುದ್ಧ ಮಾಡಲು ಕಳುಹಿಸಿದ ಕಪ್ಪು ಬಣ್ಣದ ಸಾಗರದಂತಹ ದಿವ್ಯ ರೂಪವನ್ನು ಹೊಂದಿರುವ ಆ ಎಂಪೆರುಮಾನ್ ಕಣ್ಣನ್ ಎಲ್ಲಿದ್ದಾನೆ? ನಾನು ಯಾರ ಬಳಿ ಹೋಗಿ ಮನವಿ ಸಲ್ಲಿಸಬೇಕು ಎಂದು ನನಗೆ ತಿಳಿದಿಲ್ಲ. ನಾನು ಸುಂದರವಾದ ತುಳಸಿ ಮಾಲೆಯನ್ನು ಬಯಸಿದ್ದೆ ಆದರೀಗ ಅದಕ್ಕಾಗಿ ಅಲೆಯುವ ಹೃದಯವನ್ನು ಹೊಂದಿದ್ದೇನೆ. ಅಯ್ಯೋ!

ಎರಡನೇ ಪಾಸುರಂ. ಅವಳು ತನ್ನನ್ನು ದುಃಖದಿಂದ ಬೇಗನೆ ಬಿಡುಗಡೆ ಮಾಡಲು ನೈದಿಲೆ ಹೂವುಗಳಿಗೆ ಹೇಳುತ್ತಾಳೆ.

ಮೇಲ್ ತೋನ್ರಿ ಪೂಕ್ಕಾಳ್  ಮೇಲ್ ಉಲಗಂಗಳಿನ್  ಮೀದು ಪೋಯ್

ಮೇಲ್ ತೋನ್ರುಮ್ ಜ್ಯೋತಿ ವೇದ ಮುದಲ್ವರ್ ವಲಂ ಕೈಯಿಲ್

ಮೇಲ್ ತೋನ್ರುಮ್ ಆಳಿಯಿನ್ ವೆಯ್ ಶುಡರ್ ಪೋಲ ಶುಡಾದು ಎಮ್ಮೈ

ಮಾಟ್ರೋಲೈ ಪಟ್ಟವರ್ ಕೂಟ್ಟತ್ತು ವೈತ್ತು ಕೊಳ್ಗಿಟ್ರಿರೇ

ಎತ್ತರದಲ್ಲಿ ಮೇಲ್ಮುಖವಾಗಿರುವ  ಅರಳಿದ ಲಿಲ್ಲಿ ಹೂವುಗಳೇ! ವೇದಗಳಲ್ಲಿ ಪ್ರಕಟವಾಗಿರುವ ಮತ್ತು ನಾವು ವಾಸಿಸುವ ಜಗತ್ತಿನ ಮೇಲೆ ನೆಲೆಗೊಂಡಿರುವ ಅವನ ಪರಮಪದದಲ್ಲಿ (ಶ್ರೀವೈಕುಂಠಂ) ಇರುವ ಅವನ ಪರಮ ಶಕ್ತಿಯ ದಿವ್ಯ ಬಲ ಹಸ್ತದಲ್ಲಿ ಕಾಣುವ ದೈವೀಕ ಚಕ್ರವು ಉರಿಯುತ್ತಿರುವ ಕಾಂತಿಯಿಂದ ನನ್ನನ್ನು ಸುಡುವ ಬದಲು, ಕೈವಲ್ಯ ನಿಷ್ಠರ (ಸ್ವಯಮ್  ಆತ್ಮಚಿಂತನೆಯಲ್ಲಿ  ನಿರತರಾಗಿರುವವರು) ಕೂಟಕ್ಕೆ ನೀವು ನನ್ನನ್ನು ಕರೆದುಕೊಂಡು ಹೋಗಬಲ್ಲಿರೇ? ಎಂಪೆರುಮಾನ್‌ನಿಂದ ಬೇರ್ಪಟ್ಟು ಈ ರೀತಿ ಬಳಲುವ ಬದಲು ಕೈವಲ್ಯ ಮೋಕ್ಷವನ್ನು ಅನುಭವಿಸುವುದು ಉತ್ತಮ ಎಂಬುದು ಸೂಚ್ಯವಾದ ಅರ್ಥ.

ಮೂರನೇ ಪಾಸುರಂ. ಅವಳು ತನ್ನ ದೃಷ್ಟಿಯನ್ನು ಮೇಲಿನಿಂದ ತಿರುಗಿಸುತ್ತಾಳೆ ತನ್ನ ಹತ್ತಿರವಿರುವ ಸಸ್ಯದ ಮೇಲೆ ಹರಡಿರುವ ಕೋವೈ ಹಣ್ಣುಗಳನ್ನು (ಬೇಲಿಯಲ್ಲಿ ಹರಡುವ ಸಸ್ಯದಿಂದ ಬರುವ ಹಣ್ಣು) ನೋಡುತ್ತಾಳೆ. ಹಿಂದೆ ನೋಡಿದ ಹೂವುಗಳು ತಮ್ಮ ಬಣ್ಣದಿಂದ ಆಕೆಗೆ ಎಂಪೆರುಮಾನ್‌ನ ದಿವ್ಯ ಸ್ವರೂಪವನ್ನು ನೆನಪಿಸಿ ಚಿತ್ರಹಿಂಸೆ ನೀಡುತ್ತಿದ್ದವು. ಈ ಬೇಲಿಯ ಹಣ್ಣುಗಳು ಅವಳಿಗೆ ಎಂಪೆರುಮಾನ್ ನ ದೈವೀಕ ತುಟಿಗಳನ್ನು ನೆನಪಿಸುತ್ತಾ ಅವಳನ್ನು ಹಿಂಸಿಸುತ್ತವೆ.

ಕೋವೈ ಮಣಾಟ್ಟಿ! ನೀ ಉನ್ ಕೊಳುಮ್ ಕನಿ ಕೊಂಡು

ಎಮ್ಮೈ ಆವಿ ತೊಲೈವಿಯೇಲ್ ವಾಯಳಗರ್ ತಮ್ಮೈ ಅಂಜುದುಂ

ಪಾವಿಯೇನ್ ತೋನ್ರಿ ಪಾಮ್ಬಣೈಯಾರ್ಕುಮ್ ತಮ್ ಪಾಮ್ಬು ಪೋಲ್

ನಾವುಮ್ ಇರನ್ಡು ಉಳ ಆಯಿಟ್ರು ನಾಣಿಲಿಯೇನುಕ್ಕೇ

ದೇವಿಯಂತಿರುವ ತೊಂಡೆ ಬಳ್ಳಿಯ ಹಣ್ಣೇ ! ನಿನ್ನ ಸುಂದರವಾದ ಹಣ್ಣುಗಳಿಂದ ನನ್ನ ಪ್ರಾಣವನ್ನು ತೆಗೆಯದಿರು.  ಎಂಪೆರುಮಾನ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನನಗೆ ತುಂಬಾ ಭಯವಾಗಿದೆ. ನಾನು ಹುಟ್ಟಿದ ನಂತರ, ಶೇಷಶಾಯಿ (ಆದಿಶೇಷನ ಸರ್ಪ ಹಾಸಿಗೆಯ ಮೇಲೆ ಮಲಗಿರುವವನು), ನಾಚಿಕೆಯಿಲ್ಲದ ಎಂಪೆರುಮಾನನು ನನಗೆ ಸಂಬಂಧಿಸಿದ ವಿಷಯಗಳಲ್ಲಿ ತಾನು ಮೇಲೊರಗಿರುವ ಹಾವಿನಂತೆಯೇ ನಾಲಿಗೆಯನ್ನು (ಎರಡು ನಾಲಿಗೆ) ಕವಲೊಡೆದಿದ್ದಾನೆ.

ನಾಲ್ಕನೆಯ ಪಾಸುರಂ. ಬೇಲಿ ಮೇಲಿನ ಹಣ್ಣು ಅವಳಿಗೆ ಎಂಪೆರುಮಾನ್‌ನ ದಿವ್ಯವಾದ ತುಟಿಗಳನ್ನು ನೆನಪಿಸಿದ್ದರಿಂದ, ಅವಳು ಇನ್ನೊಂದು ಕಡೆಗೆ ನೋಡುತ್ತಾ ತನ್ನ ನೋಟವನ್ನು ಬದಲಾಯಿಸಿದಳು. ಅವಳು ಚೆನ್ನಾಗಿ ಅರಳಿದ ಮಲ್ಲಿಗೆ ಹೂವುಗಳನ್ನು ನೋಡುತ್ತಾ ಅವು ಹೇಗೆ ಆ ಎಂಪೆರುಮಾನ್‌ನ ಬಿಳಿ ಹಲ್ಲುಗಳ ಸಾಲನ್ನು ನೆನಪಿಸುತ್ತಾ ಅವಳನ್ನು ಹಿಂಸಿಸುತ್ತವೆ ಎಂದು ಹೇಳುತ್ತಾಳೆ.

ಮುಲ್ಲೈ ಪಿರಾಟ್ಟಿ! ನೀ ಉನ್ ಮುರುವಲ್ಗಳ್ ಕೊಂಡು ಎಮ್ಮೈ

ಅಲ್ಲಲ್ ವಿಳೈವಿಯೇಲ್ ಆಳಿ ನಂಗಾಯ್! ಉನ್ ಅಡೈಕ್ಕಲಮ್

ಕೊಲ್ಲೈ  ಅರಕ್ಕಿಯೈ ಮೂಕ್ಕು ಅರಿಂದಿಟ್ಟ ಕುಮರನಾರ್

ಶೊಲ್ಲುಮ್ ಪೊಯ್ ಆನಾಲ್ ನಾನುಮ್ ಪಿರಂದಮೈ ಪೊಯ್ ಅನ್ರೇ

ದೇವಿಯಂತಿರುವ, ಅವಳಲ್ಲಿ ಆಳದ ಗುಣವನ್ನು ಹೊಂದಿರುವ (ಅವಳ ಭಾವನೆಗಳನ್ನು ಸುಲಭವಾಗಿ ಬಹಿರಂಗಪಡಿಸುವುದಿಲ್ಲ) ಓ ಮಲ್ಲಿಗೆಯ ಬಳ್ಳಿ! ಎಂಪೆರುಮಾನನ ದಿವ್ಯ ಹಲ್ಲುಗಳ ಮುತ್ತಿನ ಸಾಲುಗಳನ್ನು ನೆನಪಿಸುವ, ನಿನ್ನ ಹೂಬಿಡುವ ಮುಗುಳು ನಗೆಯಿಂದ ಮಾರ್ಗದಿಂದ ನನ್ನನ್ನು ಹಿಂಸಿಸಬೇಡ. ನಾನು ನಿನಗೆ ಶರಣಾಗುತ್ತೇನೆ. ಶೂರ್ಪನಖಿ ಎಂಬ ರಾಕ್ಷಸಿಯ ಮೂಗನ್ನು ಕತ್ತರಿಸಿ ಓಡಿಸಿದ ದಶರಥ ಚಕ್ರವರ್ತಿಯ ಮಗನ ಮಾತು ಸುಳ್ಳಾದರೆ, ಪೆರಿಯಾಳ್ವಾರರ ಮಗಳಾಗಿ ನನ್ನ ಜನ್ಮವೂ ಸುಳ್ಳಾಗುತ್ತದೆ (ಯಾವುದೇ ಪ್ರಯೋಜನವಿಲ್ಲ).

ಐದನೇ ಪಾಸುರಂ. ತನ್ನನ್ನು ಹಿಂಸಿಸುತ್ತಿದ್ದ ಮಲ್ಲಿಗೆ ಹೂವನ್ನು ಕಂಡು ಕಣ್ಣು ಮುಚ್ಚಿದಳು. ಆದರೆ, ಆಕೆ ಕಿವಿ ಮುಚ್ಚಿರಲಿಲ್ಲ.

ಪಾಡುಮ್ ಕುಯಿಲ್ಗಾಳ್ ಈದೆನ್ನ ಪಾಡಲ್? ನಲ್ ವೇಂಗಡ

ನಾಡರ್ ನಮಕ್ಕು ಒರು ವಾಳ್ವು ತಂದಾಲ್ ವಂದು ಪಾಡುಮಿನ್

ಆಡುಮ್ ಕರುಳಕ್ಕೊಡಿ  ಉಡೈಯಾರ್ ವಂದು ಅರುಳ್ ಶೆಯ್ದು

ಕೂಡುವರ್ ಆಯಿಡಿಲ್ ಕೂವಿ ನುಮ್ ಪಾಟ್ಟುಕಳ್ ಕೇಟ್ಟುಮೇ

ಹಾಡುತ್ತಿರುವ ಕೋಗಿಲೆಗಳೇ! ಇದು ಯಾವ ರೀತಿಯ ಅಪಸ್ವರದ ಹಾಡು? ಎತ್ತರವಾದ ತಿರುವೇಂಗಡಂ ಬೆಟ್ಟಗಳನ್ನು ತನ್ನ ನಿವಾಸವನ್ನಾಗಿ ಮಾಡಿಕೊಂಡಿರುವ ಎಂಪೆರುಮಾನ್ ನನ್ನನ್ನು ಸಮೃದ್ಧಿಗೊಳಿಸಿದರೆ, ನೀವು ಇಲ್ಲಿಗೆ ಬಂದು ಹಾಡಬಹುದು. ನರ್ತಿಸುವ ಗರುಡನನ್ನು ಧ್ವಜವನ್ನಾಗಿ ಹೊಂದಿರುವ ಎಂಪೆರುಮಾನ್ ಇಲ್ಲಿಗೆ ಬಂದು ನನ್ನೊಂದಿಗೆ ಸೇರಿದರೆ, ನಾವು ನಿಮ್ಮನ್ನು ಕರೆದು ನಿಮ್ಮ ಹಾಡುಗಳನ್ನು ಕೇಳುತ್ತೇವೆ.

ಆರನೇ ಪಾಸುರಂ. ಅವಳು ನವಿಲುಗಳ ಪಾದದ ಮೇಲೆ ಬಿದ್ದು, ಎಂಪೆರುಮಾನ್ ತನ್ನನ್ನು ರಕ್ಷಿಸುತ್ತಿರುವ ರೀತಿಯನ್ನು ನೋಡುವಂತೆ ಹೇಳುತ್ತಾಳೆ.

ಗಣಮಾಮಯಿಲ್ಗಾಳ್ ಕಣ್ಣಪಿರಾನ್ ತಿರುಕ್ಕೋಲಮ್ ಪೋನ್ರು

ಅಣಿಮಾ  ನಡಮ್ ಪಯಿನ್ರು ಆಡುಗಿನ್ರೀರ್ಕು ಅಡಿ ವೀಳ್ಗಿನ್ರೇನ್

ಪಣಮ್ ಆಡು ಅರವು ಅಣೈ ಪಲ್ ಪಲ ಕಾಲಮುಮ್ ಪಳ್ಳಿಕೊಳ್

ಮಣವಾಳರ್ ನಮ್ಮೈ ವೈತ್ತ ಪರಿಶು ಇದು ಕಾಣ್ಮಿನೇ

ಗುಂಪಿನಲ್ಲಿರುವ ಹಿರಿ ನವಿಲುಗಳೇ! ಸುಂದರವಾದ, ಶ್ರೇಷ್ಠವಾದ ನೃತ್ಯವನ್ನು ಅಭ್ಯಾಸ ಮಾಡುವ ನಿಮ್ಮ ದಿವ್ಯ ಪಾದಗಳಿಗೆ ನಾನು ಬೀಳುತ್ತೇನೆ ಮತ್ತು ಕಣ್ಣಪಿರಾನ್ ನಂತಹುದೇ ರೂಪವನ್ನು ಹೊಂದಿರುವ ನಿಮ್ಮನ್ನು ಆರಾಧಿಸುತ್ತೇನೆ. ಈ ನೃತ್ಯವನ್ನು ನಿಲ್ಲಿಸಿ. ಹೆಡೆ ಬಿಚ್ಚಿರುವ ಆದಿಶೇಷನ ಹಾವಿನ ಹಾಸಿಗೆಯ ಮೇಲೆ ಶಾಶ್ವತವಾಗಿ ಮಲಗಿರುವ ಅಳಗಿಯ ಮಣವಾಳನ್  (ಸುಂದರ ವರ) ನನ್ನನ್ನು ನಿಮ್ಮ ಪಾದಗಳಿಗೆ ಬೀಳಲೆಂದೇ ಸೃಷ್ಟಿಸಿದ್ದಾನೆ.

ಏಳನೇ ಪಾಸುರಂ. ನರ್ತಿಸುವ ನವಿಲುಗಳಿಗೆ “ನನ್ನ ಸಮ್ಮುಖದಲ್ಲಿ ಈ ರೀತಿ ಕುಣಿಯುವುದು ಸರಿಯೇ?” ಎಂದು ಅವಳು ಕೇಳುತ್ತಾಳೆ.

ನಡಮಾಡಿ ತೋಗೈ ವಿರಿಕ್ಕಿನ್ರ ಮಾ ಮೈಯಿಲ್ಗಾಳ್ ಉಮ್ಮೈ

ನಡಮಾಟ್ಟಮ್ ಕಾಣ ಪಾವಿಯೇನ್ ನಾನ್ ಓರ್ ಮುದಲ್ ಇಲೇನ್

ಕುಡಮಾಡುಕೂತ್ತನ್ ಗೋವಿಂದನ್ ಕೋಮಿರೈ ಶೆಯ್ದು ಎಮ್ಮೈ

ಉಡೈಮಾಡು ಕೊಂಡಾನ್ ಉಂಗಳ್ಕು ಇನಿ ಒನ್ರು ಪೋದುಮೇ

ನರ್ತಿಸುವಾಗ ನಿಮ್ಮ ಗರಿಗಳನ್ನು ಹರಡುತ್ತಿರುವ ನವಿಲುಗಳೇ! ಪಾಪಿಯಾದ ನನಗೆ ನಿಮ್ಮ ನಾಟ್ಯವನ್ನು ನೋಡುವ ದೃಷ್ಟಿಯಿಲ್ಲ. ಮಡಕೆಗಳೊಂದಿಗೆ ನೃತ್ಯ ಮಾಡಿದ ಎಂಪೆರುಮಾನ್ ಗೋವಿಂದನ್ ನನ್ನನ್ನು ಹಿಂಸಿಸಿ ಸಂಪೂರ್ಣವಾಗಿ ಸೆರೆಹಿಡಿದನು. ನನ್ನ ಮುಂದೆ ನೀನು ಹೀಗೆ ಕುಣಿಯುವುದು ಸೂಕ್ತವೇ

ಎಂಟನೆಯ ಪಾಸುರಂ. ಎಲ್ಲಾ ಘಟಕಗಳು ಅವಳನ್ನು ಹಿಂಸಿಸುತ್ತಿರುವಾಗ, ಮೋಡಗಳೂ ಸಹ ಮಳೆಯನ್ನು ಸುರಿಸುವುದರ ಮೂಲಕ ಕೃತ್ಯಕ್ಕೆ ಸೇರುತ್ತವೆ. ಪೆರಿಯ ತಿರುಮಲೈ ನಂಬಿಯು (ಭಗವದ್ ರಾಮಾನುಜರ ತಾಯಿಯ ಅಣ್ಣ ಮತ್ತು ಅವರ ಐದು ಆಚಾರ್ಯರುಗಳಲ್ಲಿ ಒಬ್ಬರು) ಪ್ರಸ್ತುತ  ಮತ್ತು ಮುಂದಿನ ಪಾಸುರಂನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಈ ಕಾರಣಕ್ಕಾಗಿ, ಎಲ್ಲಾ ಶ್ರೀವೈಷ್ಣವರು ಈ ಎರಡು ಪಾಸುರಗಳೊಂದಿಗೆ ತಮ್ಮನ್ನು ಸಹವಾಸಿಸಿಕೊಳ್ಳಬಹುದಾಗಿದೆ. ಈ ಎರಡು ಪಾಸುರಂಗಳ ಬಗ್ಗೆ ಯೋಚಿಸಿದಾಗಲೆಲ್ಲ ತಿರುಮಲೈ ನಂಬಿ ಒಂದು ಮಾತನ್ನೂ ಹೇಳಲಾರದೇ ಭಾವುಕರಾಗಿ ಕಣ್ಣೀರು ಸುರಿಸುತ್ತಿದ್ದರು.

ಮಳೆಯೇ ಮಳೆಯೇ, ಮಣ್ಪುರಂ ಪೂಶಿ ಉಳ್ಳಾಯ್ ನಿನ್ರು

ಮೆಳುಗು ಊಟ್ರಿನಾಲ್ಪೋಲ್ ಊಟ್ರುಮ್ ನಲ್ ವೇಂಗಡತ್ತುಳ್ ನಿನ್ರ

ಅಳಗ ಪಿರಾನಾರ್ ತಮ್ಮೈ ಎನ್ ನೆಂಜತ್ತು ಆಗಪ್ಪಡ

ತಳುವ ನಿನ್ರು ಎನ್ನೈ  ತದರ್ತಿಕೊಂಡು ಊಟ್ರವುಮ್ ವಲ್ಲೈಯೇ

ಓ ಮೋಡ! ಹೊರಗೆ ಮಣ್ಣನ್ನು ಹಚ್ಚಿ ಒಳಗಿನ ಮೇಣವನ್ನು ಕರಗಿಸುವಂತೆ, ಎತ್ತರವಾದ ತಿರುವೇಂಗಡಂ ಬೆಟ್ಟಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಎಂಪೆರುಮಾನ್, ಹೊರಗೆ ನನ್ನನ್ನು ಅಪ್ಪಿಕೊಳ್ಳುತ್ತಿದ್ದಾನೆ ಆದರೆ ನನ್ನೊಳಗೆ ನನ್ನ ಜೀವನವನ್ನು ಕರಗಿಸಿ ನಾಶಮಾಡುತ್ತಿದ್ದಾನೆ. ನನ್ನ ಎಂಪೆರುಮಾನ್ ನೊಂದಿಗೆ ನಾನು ಅವನನ್ನು ನನ್ನೊಳಗೆ ವಾಸಿಸುವ ಮತ್ತು ಪ್ರಕಟವಾಗುವ ರೂಪದಲ್ಲಿ ಅಪ್ಪಿಕೊಳ್ಳುವಂತೆ ಕೂಡಿಸಿದ ನಂತರ ನೀವು ಮಳೆಯನ್ನು ಸುರಿಸುತ್ತೀರಾ?

ಒಂಭತ್ತನೇ ಪಾಸುರಂ. ಇದರ ನಂತರ, ಸಾಗರವು ತನ್ನ ಅಲೆಗಳಿಂದ ಘರ್ಜಿಸಿದಾಗ ಮತ್ತು ಏರಿದಾಗ, ಅವಳು ಅದನ್ನು ನೋಡುತ್ತಾ ಮಾತನಾಡುತ್ತಾಳೆ.

ಕಡಲೇ! ಕಡಲೇ! ಉನ್ನೈ ಕಡೈನ್ದು ಕಲಕ್ಕರುತ್ತು

ಉಡಲುಳ್ ಪುಗುಂದು ನಿನ್ರು ಊರಲ್ ಅರುತ್ತವರ್ಕು ಎನ್ನೆಯುಮ್

ಉಡಲುಳ್  ಪುಗುಂದು ನಿನ್ರು ಊರಲ್ ಅರುಕ್ಕಿನ್ರ ಮಾಯರ್ಕು ಎನ್

ನಡಲೈಗಳ್ ಎಲ್ಲಾಮ್ ನಾಗಣೈಕ್ಕೇ ಶೆನ್ರು ಉರೈತ್ತಿಯೇ 

ಓ ಸಾಗರವೇ! ಎಂಪೆರುಮಾನ್ ನು ನಿನ್ನನ್ನು ಮಥಿಸಿ, ಕಲಕಿ, ನಿನ್ನೊಳು ಹೊಕ್ಕು ನಿನ್ನಿಂದ ಅಮೃತದ ಸಾರವನ್ನು (ಶ್ರೀ ಮಹಾಲಕ್ಷ್ಮಿ) ಕದ್ದನು. ಅದೇ ರೀತಿ ಅದ್ಭುತ ದಾನಶೂರನಾದ ಆ ಎಂಪೆರುಮಾನ್ ನನ್ನನ್ನು ಪ್ರವೇಶಿಸಿ ನನ್ನ ಪ್ರಾಣವನ್ನು ಅಪಹರಿಸಿದನು. ನೀನು ಹೋಗಿ ನನ್ನ ಸಂಕಟಗಳನ್ನೆಲ್ಲಾ ಅವನ ಹಾಸಿಗೆಯಂತಿರುವ ತಿರುವನಂದಾಳ್ವಾನ್ (ಆದಿಶೇಷನ) ಬಳಿ ಹೇಳುತ್ತೀಯಾ?

ಹತ್ತನೇ ಪಾಸುರಂ. ತನಗಿಂತ ಹೆಚ್ಚು ದಿಗ್ಭ್ರಮೆಗೊಂಡ ತನ್ನ ಸ್ನೇಹಿತೆಗೆ ಸಾಂತ್ವನದ ಮಾತುಗಳನ್ನು ಹೇಳಿ ಈ ಪದಿಗವನ್ನು ಪೂರ್ಣಗೊಳಿಸುತ್ತಾಳೆ.

ನಲ್ಲ ಎನ್ ತೋಳೀ ನಾಗಣೈ ಮಿಶೈ ನಮ್ ಪರರ್

ಶೆಲ್ವಾರ್ ಪೆರಿಯರ್ ಶಿರು ಮಾನಿಡರ್ ನಾಮ್ ಶೆಯ್ವದು ಎನ್ ?

ವಿಲ್ಲಿ ಪುದುವೈ ವಿಟ್ಟುಚಿತ್ತರ್ ತಂಗಳ್ ತೇವರೈ

ವಲ್ಲ ಪರಿಶು ವರುವಿಪ್ಪರೇಲ್ ಅದು ಕಾಂಡುಮೇ

ಓ ನನ್ನ ಪ್ರಿಯ ಗೆಳತಿಯೇ! ತಿರುವನಂದಾಳ್ವಾನ್ ಅವರ ಹಾಸಿಗೆಯ ಮೇಲೆ ಮಲಗಿರುವ ನಮ್ಮ ಎಂಪೆರುಮಾನನು ಶ್ರೀ ಮಹಾಲಕ್ಷ್ಮಿಯ ಪತ್ನಿಯಾಗಿರುವುದರಿಂದ ಅತ್ಯಂತ ಶ್ರೀಮಂತ ವ್ಯಕ್ತಿ. ಅವನು ಎಲ್ಲರಿಗಿಂತ ದೊಡ್ಡವನು. ಮತ್ತೊಂದೆಡೆ, ನಾವು ತುಂಬಾ ಕೀಳು ವ್ಯಕ್ತಿಗಳು. ಹೀಗಿರುವಾಗ ನಾವೇನು ​​ಮಾಡಬಹುದು? ಶ್ರೀವಿಲ್ಲಿಪುತ್ತೂರಿನ ಮುಖ್ಯಸ್ಥರಾದ ಪೆರಿಯಾಳ್ವಾರ್ ಅವರು ತಮ್ಮ ಅನುಕೂಲದಲ್ಲಿರುವ ಆ ಎಂಪೆರುಮಾನ್‌ನನ್ನು ತಮಗೆ ಸಾಧ್ಯವಿರುವ ರೀತಿಯಲ್ಲಿ ಆಹ್ವಾನಿಸಿದರೆ ನಮಗೂ ಆ ಎಂಪೆರುಮಾನ್‌ನನ್ನು ಪೂಜಿಸುವ ಭಾಗ್ಯ ಲಭಿಸುತ್ತದೆ.

ಅಡಿಯೇನ್ ಯತಿರಾಜ ರಾಮಾನುಜ ದಾಸನ್ 

ಮೂಲ: https://divyaprabandham.koyil.org/index.php/2020/05/nachchiyar-thirumozhi-10-simple/

ಸಂಗ್ರಹಣಾ ಸ್ಥಾನ https://divyaprabandham.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org