ಉಪದೇಶ ರತ್ನಮಾಲೈ – ಸರಳ ವಿವರಣೆ – ೨೯ ಮತ್ತು ೩೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ  ೨೯

ಚಿತ್ತಿರೈ ತಿರುವಾದಿರೈಯ (ಚೈತ್ರ ಮಾಸದ ಆರ್ದ್ರಾ ನಕ್ಷತ್ರ ) ವಿಶೇಷತೆಯನ್ನು ಸದಾ ಸ್ಮರಿಸಲು ಅವರ ಮನಸ್ಸಿಗೆ ಹೇಳುತ್ತಾರೆ.

ಎಂದೈ ಯತಿರಾಸರ್ ಇವ್ವುಲಗಿಲ್ ಎಂದಮಕ್ಕಾ

ವಂದು ಉದಿತ್ತ ನಾಳ್ ಎನ್ನುಮ್ ವಾಸಿಯಿನಾಲ್ -ಇಂದತ್

ತಿರುವಾದಿರೈ ತನ್ನಿನ್ ಸೀರ್ಮೈ ತನೈ ನೆಂಜೇ

ಒರುವಾಮಲ್ ಎಪ್ಪೊೞುದುಂ ಓರ್

ಓ ಮನಸೇ! ಈ ಲೋಕದಲ್ಲಿ ಯತಿರಾಜರು ( ರಾಮಾನುಜರು) ಅವತರಿಸಿದ ಚಿತ್ತಿರೈ ತಿರುವಾದಿರೈ (ಚೈತ್ರ ಮಾಸದ ಆರ್ದ್ರಾ ನಕ್ಷತ್ರ ) ದಿನದ ವಿಶೇಷತೆಯನ್ನು ಸದಾ ಸ್ಮರಿಸುತ್ತಾ ಆನಂದಿಸು.

ಹಿಂದಿನ ಪಾಸುರದಲ್ಲಿ ಈ ಲೋಕಕ್ಕೆ ಉಪದೇಶಿಸಿದರು. ತನ್ನನ್ನು ತೊಡಗಿಸಿಕೊಂಡು ಈ ಪಾಸುರದಲ್ಲಿ ಈ ದಿನದ ಖ್ಯಾತಿಯನ್ನು ಅನುಭವಿಸುವರು.ಎಂಪೆರುಮಾನಾರರು ಅವರ ಶರಣಾಗತಿ ಗದ್ಯದಲ್ಲಿ “ಅಖಿಲ ಜಗತ್ ಸ್ವಾಮಿನ್ !ಅಸ್ಮತ್  ಸ್ವಾಮಿನ್  “ (ಓ ಜಗತ್ ಪ್ರಭು! ನನ್ನ ಸ್ವಾಮಿ “ ಎಂದು ಅನುಭವಿಸಿದಂತೆ, ಮಾಮುನಿಗಳು ಸಹ ಎಂಪೆರುಮಾನಾರ್ ಮಾಡಿದ ಜಗತ್ ಕಲ್ಯಾಣವನ್ನು ಹಿಂದಿನ ಪಾಸುರದಲ್ಲಿ ಅನುಭವಿಸಿ, ಈ ಪಾಸುರದಲ್ಲಿ ಎಂಪೆರುಮಾನಾರ್ ಅವರಿಗೆ ತೋರಿದ ಕೃಪೆಯನ್ನು ಅನುಭವಿಸಿದ್ದಾರೆ .

ಪಾಸುರ ೩೦

ಇದುವರೆಗೂ ಮಾಮುನಿಗಳು ಆೞ್ವಾರ್ಗಳ ಅವತಾರದ ದಿನಗಳನ್ನು ನಕ್ಷತ್ರಗಳನ್ನು ಅದ್ಭುತವಾಗಿ ಆಚರಿಸಿದರು. ಈ ಪಾಸುರದಿಂದ ಮುಂದಿನ ನಾಲ್ಕು ಪಾಸುರಗಳಲ್ಲಿ  ಅವರು ಅವತರಿಸಿದ ಸ್ಥಳಗಳನ್ನು ಆಚರಿಸುವರು.ಈ ಪಾಸುರದಲ್ಲಿ ಮೊದಲ ಮೂರು ಆೞ್ವಾರರು,ತಿರುಮಂಗೈ ಆೞ್ವಾರ್ ಮತ್ತು ತಿರುಪ್ಪಾನ್ ಆೞ್ವಾರ್ ಅವತರಿಸಿದ ಸ್ಥಳಗಳನ್ನು ಕರುಣೆಯಿಂದ ಹೇಳುವರು . ಶ್ರೀ ಅಯೋಧ್ಯಾ ಮತ್ತು ಶ್ರೀ ಮಥುರಾ ಎಂಪೆರುಮಾನರು  (ಶ್ರೀ ರಾಮ ಮತ್ತು ಶ್ರೀ ಕೃಷ್ಣ ನಂತೆ )ಅವತರಿಸಿದ ದಿವ್ಯ ದೇಶಗಳು. ಎಂಪೆರುಮಾನಾರರ ಅವತಾರದ ನಂತರ ನಮಗೆ ಆೞ್ವಾರುಗಳ ಬಗ್ಗೆ ತಿಳಿದಿದ್ದ ಕಾರಣದಿಂದಾಗಿ ಆೞ್ವಾರ್ಗಳು ಅವತರಿಸಿದ ಸ್ಥಳಗಳು ಹಿಂದೆ ಹೇಳಿದ ದಿವ್ಯ ದೇಶಗಳಿಗಿಂತ ಹೆಚ್ಚಿನ ಮಹತ್ವವನ್ನು ಹೊಂದಿರುವುದು.

 ಎಣ್ಣರುಮ್ ಸೀರ್ಪ್ ಪೊಯ್ಗೈ  ಮುನ್ನೋರ್ ಇವ್ವುಲಗಿಲ್ ತೋನ್ಱಿಯ ಊರ್

ವಣ್ಮೈ ಮಿಗು ಕಚ್ಚಿ ಮಲ್ಲೈ ಮಾಮಯಿಲೈ – ಮಣ್ಣಿಯಿಲ್ ನೀರ್

ತೇಂಗುಮ್ ಕೂಱೈಯಲೂರ್  ಸೀರ್ ಕಲಿಯನ್ ತೋನ್ಱಿಯ   ಊರ್

ಓಂಗುಮ್  ಉಱೈಯೂರ್ ಪಾಣನ್ ಊರ್

ಮುದಲ್ ಆೞ್ವಾರರು ,- ಪೊಯ್ಗೈ ಆೞ್ವಾರ್ ,ಭೂದತ್  ಆೞ್ವಾರ್ , ಮತ್ತು ಪೇಯ್ ಆೞ್ವಾರ್ ಅಪಾರ ಕಲ್ಯಾಣ ಗುಣಗಳುಳ್ಳವರು. ಅವರು ಅವತರಿಸಿದ ಸ್ಥಳಗಳು ಅನುಕ್ರಮವಾಗಿ ಭವ್ಯವಾದ ಕಾಂಚೀಪುರಂ (ತಿರುವೆಃಕ ), ತಿರುಕ್ಕಡನ್ಮಲ್ಲೈ ( ಇಂದಿನ ಮಹಾಬಲಿಪುರಂ)ಮತ್ತು ತಿರುಮಯಿಲೈ. ಮಣ್ಣಿ ನದಿಯ ಸಮೃದ್ಧವಾದ ನೀರುಳ್ಳ,  ತಿರುಕ್ಕುರೈಯಲೂರ್ ಸ್ಥಳದಲ್ಲಿ ಖ್ಯಾತಿವಂತರು ತಿರುಮಂಗೈ ಆೞ್ವಾರ್ ಅವತರಿಸಿದ ಸ್ಥಳ .  ಅಪಾರ ಘನತೆಯುಳ್ಳ ತಿರುಕ್ಕೋೞೀ ಎಂಬ ಉಱೈಯೂರಲ್ಲಿ ತಿರುಪ್ಪಾನಾೞ್ವಾರ್ ಅವತರಿಸಿದರು .

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/06/upadhesa-raththina-malai-29-30-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment