ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ
ನಮ್ಮಾಳ್ವಾರರು ಅತೀ ಖಿನ್ನರಾಗಿ ದುಃಖದಿಂದ ಪರವಶಗೊಂಡು , ಎಂಪೆರುಮಾನರಿಂದ ಅಗಲಿಕೆ ಹೊಂದಿ, ದುಃಖದಿಂದ ಸ್ತ್ರೀಯ ಭಾವನೆಯನ್ನು ಹೊಂದಿದರು. ಪರಾಂಕುಶ ನಾಯಕಿಯು , ಶ್ರೀರಂಗನಾಥರ ಮೇಲೆ ಅಪ್ರತಿಮವಾದ ಪ್ರೇಮವನ್ನು ಹೊಂದಿ, ಮಾತು ಹೊರಬಾರದೇ ಪ್ರಜ್ಞೆ ತಪ್ಪಿದಳು. ಮತ್ತೂ ಮುಂದೆ ಹೋಗಿ, ಪರಾಂಕುಶ ನಾಯಕಿಯ ದಿವ್ಯ ತಾಯಿಯ ರೂಪವನ್ನು ಹೊಂದಿದರು. ಆ ತಾಯಿಯು ತನ್ನ ಮಗಳನ್ನು ಕರೆದುಕೊಂಡು ಹೋಗಿ, ಪೆರಿಯ ಪೆರುಮಾಳಿನ ಮುಂದೆ ಇರುವ ದಿವ್ಯ ಕಂಭದ ನಡುವೆ ಕೂಡಿಸಿದರು. ಅವಳ ಅತ್ಯಂತ ದೀನ ಸ್ಥಿತಿಯನ್ನು ಪೆರಿಯ ಪೆರುಮಾಳಿನ ಮುಂದೆ ವಿವರಿಸಿ, ‘ನೀನು ಅವಳನ್ನು ಎಲ್ಲಾ ರೀತಿಯಲ್ಲಿಯೂ ಕಾಪಾಡಬೇಕು’ ಎಂದು ಪ್ರಾರ್ಥಿಸಿದರು.
ಪಾಸುರಮ್ 1 :
ಪರಾಂಕುಶ ನಾಯಕಿಯ ತಾಯಿಯು ತನ್ನ ಮಗಳ ಪ್ರಜ್ಞೆ ಇಲ್ಲದ ಸ್ಥಿತಿಯನ್ನು ಪೆರಿಯ ಪೆರುಮಾಳಿನ ಹತ್ತಿರ ಹೇಳುತ್ತಾಳೆ. ಮತ್ತು ‘ಈಗ ನೀನು ಅವಳಿಗೆ ಏನು ಮಾಡುತ್ತೀಯ’ ಎಂದು ಕೇಳುತ್ತಾಳೆ.
ಕಙ್ಗುಲುಮ್ ಪಹಲುಮ್ ಕಣ್ ತುಯಿಲ್ ಅಱಿಯಾಳ್ ಕಣ್ಣನೀರ್ ಕೈಗಳಾಲ್ ಇಱೈಕ್ಕುಮ್
ಶಙ್ಗು ಶಕ್ಕರಙ್ಗಳೆನ್‌ಱು ಕೈಕೂಪ್ಪುಮ್ ತಾಮರೈ ಕ್ಕಣ್ ಎನ್‍ಱೇ ತಳರುಮ್
ಎಙ್ಗನೇ ತರಿಕ್ಕೇನ್ ಉನ್ನೈವಿಟ್ಟೆನ್ನುಮ್ ಇರು ನಿಲಮ್ ಕೈ ತುೞಾಇರುಕ್ಕುಮ್
ಶೆಙ್ಗಯಲ್ ಪಾಯ್ ನೀರ್ ತ್ತಿರುವರಙ್ಗತ್ತಾಯ್ ಇವಳ್ ತಿಱತ್ತೆನ್‍ಶೆಯ್‍ಗಿನ್‍ಱಾಯೇ ॥
ಹಗಲಿನಲ್ಲಿ ಮತ್ತು ಇರುಳಿನಲ್ಲಿ ನನ್ನ ಮಗಳ ಕಣ್ಣುಗಳು ನಿದ್ರಿಸುವ ಯಾವ ಸೂಚನೆಯನ್ನೂ ತೋರಿಸುವುದಿಲ್ಲ. ಅವಳು ತನ್ನ ಕಣ್ಣಿನಿಂದ ಸುರಿಯುವ ನೀರನ್ನು ತೊಡೆದು, ಮತ್ತೆ ಮತ್ತೆ ಶಂಖು ಚಕ್ರ ಎಂದು ಹೇಳುತ್ತಿರುತ್ತಾಳೆ. ಅವಳು ತನ್ನ ಕೈಗಳನ್ನು ಅಂಜಲಿಯ ರೂಪದಲ್ಲಿ ಹಿಡಿದು ನಿನ್ನ ಬರುವಿಕೆಗಾಗಿ ಕಾದಿರುತ್ತಾಳೆ. ‘ತಾವರೆಯಂತಹ ಕಣ್ಣುಗಳು ‘ ಎಂದು ಹೇಳುತ್ತಾಳೆ. ಅವಳು ಅತೀ ಪ್ರಯಾಸಗೊಳ್ಳುತ್ತಾಳೆ . ‘ನೀನಿಲ್ಲದೆ ಹೇಗೆ ಬದುಕುವುದು’ ಎಂದು ಕನವರಿಸುತ್ತಾಳೆ. ಅವಳು ತನ್ನ ಕೈಗಳಿಂದ ನೆಲವನ್ನೆಲ್ಲಾ ಸವರಿ ಹುಡುಕುತ್ತಾಳೆ. ತಾನು ಚಟುವಟಿಕೆಗಳಿಲ್ಲದೆ ಇರುತ್ತಾಳೆ. ಓಹ್! ಕೋಯಿಲ್‍ನಲ್ಲಿ (ಶ್ರೀರಂಗಮ್) ವಾಸವಾಗಿರುವ ಎಂಪೆರುಮಾನರೇ! ಅಲ್ಲಿ ಕೆಂಪಾದ ಮೀನುಗಳು ನೀರಿನ ಕೊಳದಲ್ಲಿ ಜಿಗಿದು ಆಟವಾಡುತ್ತಿರುತ್ತವೆ. ಇಂತಹ ವಿಚಿತ್ರವಾದ ಭಾವನೆಗಳನ್ನು ನಿನ್ನ ಮೇಲೆ ಹೊಂದಿರುವ ಈ ಹುಡುಗಿಗೆ ಏನು ಮಾಡಬೇಕೆಂದು ಯೋಚಿಸಿರುವೆ? ಎಂದು ತಾಯಿಯು ಕೇಳುತ್ತಾಳೆ.
ಇದರ ಅರ್ಥ => ನೀನು ಅವಳ ದುಃಖವನ್ನು ದೂರ ಮಾಡುತ್ತೀಯೋ ಇಲ್ಲಾ ಅದನ್ನು ಹೆಚ್ಚಿಸುವೆಯೋ ಹೇಳು ಎಂದು ಕೇಳುತ್ತಾಳೆ.
ಪಾಸುರಮ್ 2:
ತಾಯಿಯು ಹೇಳುತ್ತಾಳೆ “ನೀನೇ ಎಲ್ಲರನ್ನೂ ಎಲ್ಲಾ ರೀತಿಯಲ್ಲಿಯೂ ಕಾಪಾಡುವವನು . ಆದರೆ ಅವಳ ಸ್ಥಿತಿಯು ಅವಳನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ? “
ಎನ್‍ಶೆಯ್‍ಹಿನ್‍ಱಾಯ್ ಎನ್ ತಾಮರೈಕ್ಕಣ್ಣಾ ಎನ್ನುಮ್, ಕಣ್ಣೀರ್‍ಮಲ್‍ಗ ಇರುಕ್ಕುಮ್
ಎನ್‍ಶೆಯ್‍ಹೇನ್ ಎಱಿ ನೀರ್ ತಿರುವರಙ್ಗತ್ತಾಯ್ ಎನ್ನುಮ್ ವೆವ್ವುಯಿರ್ ತ್ತುಯಿರ್ತ್ತುರುಗುಮ್
ಮುನ್ ಶೆಯ್‍ದ ವಿನೈಯೇ ಮುಗಪ್ಪಡಾಯ್ ಎನ್ನುಮ್ ಮುಗಿಲ್‍ವಣ್ಣಾ ತಗುವದೋ ಎನ್ನುಮ್,
ಮುನ್ ಶೆಯ್‍ದು ಇವ್ವುಲಗಮ್ ಉಣ್ಡು ಉಮಿೞ್‍ನ್ದಳನ್ದಾಯ್ ಎನ್ಗೊಲೋ ಮುಡಿಗಿನ್‍ಱದು ಇವಟ್ಕೇ॥
ಪರಾಂಕುಶ ನಾಯಕಿಯು ಹೇಳುತ್ತಾಳೆ. “ಓಹ್! ಆನಂದ ಪಡಿಸುವ ಕಣ್ಣುಗಳನ್ನು ಹೊಂದಿರುವವನೇ! ಆ ಕಣ್ಣುಗಳಿಂದಲೇ ನಾನು ಅಸ್ತಿತ್ವದಲ್ಲಿರುವೆ. ನೀನು ನನ್ನನ್ನು ಏನು ಮಾಡಬೇಕೆಂದು ಯೋಚಿಸಿರುವೆ?” ಎಂದು ಕಂಬನಿಭರಿತ ಕಣ್ಣುಗಳಿಂದ ಕುಸಿಯುತ್ತಾಳೆ. “ಶ್ರೀರಂಗದ ಕೋಯಿಲ್‍ನಲ್ಲಿ ನೆಲೆಸಿರುವವನೇ! ಅದು ಅನೇಕ ನೀರಿನ ತಂಗುದಾಣವಾಗಿದೆ. ಈಗ ನಾನೇನು ಮಾಡಲಿ” ಎಂದು ಹಪಹಪಿಸುತ್ತಾಳೆ. ಅವಳು ನೀಳವಾದ ಉಸಿರನ್ನು ಆಳವಾಗಿ ಪದೇ ಪದೇ ತೆಗೆದುಕೊಳ್ಳುತ್ತಾಳೆ. ಅವಳು ಒಳಗಡೆ ತನ್ನ ಮನದಲ್ಲಿ ಬಹಳ ಉಷ್ಣವಾಗುತ್ತಾಳೆ. ಆ ಪರಿಸ್ಥಿತಿಯಲ್ಲಿ ಕರಗಿ ಹೋಗುತ್ತಾಳೆ. ಅವಳು ಹೇಳುತ್ತಾಳೆ. “ನನ್ನ ಹಿಂದಿನ ಕರ್ಮವು ನನ್ನ ಮುಂದೆ ನಿಂತಿದೆ. ಆ ಕರ್ಮವನ್ನು ಒಂದು ಚೇತನವಾಗಿ ಪರಿಗಣಿಸುತ್ತಾಳೆ. ಏಕೆಂದರೆ , ಅದು ತೊಂದರೆಯನ್ನು ಮತ್ತು ನಷ್ಟವನ್ನೂ ಉಂಟುಮಾಡುವುದರಿಂದ. ಅವಳು ಹೇಳುತ್ತಾಳೆ “ಓಹ್! ಅತ್ಯಂತ ಪ್ರಭಾವಶಾಲಿಯಾದ ಎಂಪೆರುಮಾನರೇ! ಮೋಡಗಳು ಹೇಗೆ ಮಳೆಯನ್ನು ಸುರಿಸುವಾಗ ಆ ಪ್ರದೇಶ ಭೂಮಿಯೇ ಇಲ್ಲಾ ನೀರಿನ ತಾಣವೇ ಎಂದು ಬೇರ್ಪಡಿಸದೇ ನಿಷ್ಪಕ್ಷಪಾತದಿಂದ ಸುರಿಸುವಂತೆ ನಿನ್ನ ಕರುಣೆಯನ್ನು ನನ್ನ ಮೇಲೆ ಸುರಿಸು. ನೀನು ನನ್ನ ಮುಂದೆ ಕಾಣಿಸಿಕೊಳ್ಳದಿರುವುದು ನಿನ್ನ ವರ್ಚಸ್ಸಿಗೆ ಸೂಕ್ತವೇ “ ಎಂದು ಹೇಳುತ್ತಾಳೆ. ಅವಳ ತಾಯಿಯು ಕೇಳುತ್ತಾಳೆ “ ಓಹ್! ಮೊದಲನೆಯ ಬಾರಿಗೇ ಈ ವಿಶ್ವವನ್ನೆಲ್ಲಾ (ಎಲ್ಲಾ ಲೋಕಗಳನ್ನೂ) ನುಂಗಿ , ಆಮೇಲೆ ಅದನ್ನು ಹೊರಗೆ ಕಕ್ಕಿ, ಅದನ್ನು ಅಳೆದು, ಮತ್ತು ಕೊನೆಯಲ್ಲಿ ಅದನ್ನು ಸ್ವೀಕರಿಸಿದವನೇ! ನನ್ನ ಮಗಳಿಗೆ ಅಂತ್ಯದಲ್ಲಿ ಏನು ಆಗುತ್ತದೆ?”
ಇದರ ಅರ್ಥ : ಅವಳನ್ನು ಅವಳ ಚಿಂತೆಯಿಂದ ಪರಿಹರಿಸಿ , ನಿನ್ನಿಂದ ರಕ್ಷಿಸಲ್ಪಡುವವರ ಗುಂಪಿಗೆ ಸೇರಿಸಿಕೊಳ್ಳುತ್ತೀಯಾ? ಇಲ್ಲವೇ, ಅವಳನ್ನು ದೂರ ತಳ್ಳಿ, ನಿನ್ನಿಂದ ದೂರವೇ ಇರಿಸುತ್ತೀಯಾ?
ಪಾಸುರಮ್ 3:
ತಾಯಿಯು ಹೇಳುತ್ತಾಳೆ “ ನಿನ್ನ ಭಕ್ತರನ್ನು ಕಾಪಾಡಲು ಅಸಂಖ್ಯೇಯ ವೈರಿಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಅನೇಕ ಅವತಾರಗಳನ್ನು ಎತ್ತಿರುವವನೇ! ನೀನು ನನ್ನ ಮಗಳು ಈ ಸ್ಥಿತಿಗೆ ತಲುಪಲು ಏನು ಮಾಡಿರುವೆ? “ ಎಂದು ಕೇಳುತ್ತಾಳೆ.
ವಟ್ಕಿಲಳ್ ಇಱೈಯುಮ್ ಮಣಿವಣ್ಣಾ ಎನ್ನುಮ್ ವಾನಮೇ ನೋಕ್ಕುಮ್ ಮೈಯಾಕ್ಕುಮ್
ಉಟ್ಕುಡೈ ಅಶುರರ್ ಉಯಿರೆಲ್ಲಾಮ್ ಉಣ್ಡ ಒರುವನೇ ಎನ್ನುಮ್ ಉಳ್ಳುರುಗುಮ್
ಕಟ್ಕಿಲೀ ಉನ್ನೈ ಕಾಣುಮಾಱು ಅರುಳಾಯ್ ಕಾಕುತ್ತಾ ಕಣ್ಣನೇ ಎನ್ನುಮ್
ತಿಟ್ಕೊಳಿ ಮದಿಳ್ ಶೂೞ್ ತಿರುವರಙ್ಗತ್ತಾಯ್ ಇವಳ್ ತಿಱತ್ತೆನ್ ಶೆಯ್‍ದಿಟ್ಟಾಯೇ॥
ನನ್ನ ಮಗಳಿಗೆ ಅವಳ ಗುರುತಾಗಿರುವ ಮತ್ತು ಸಹಜ ಸ್ವರೂಪವಾಗಿರುವ ನಾಚಿಕೆಯು ಸಂಪೂರ್ಣವಾಗಿ ಬಿಟ್ಟು ಹೋಗಿದೆ. ಅವಳು ಹೇಳುತ್ತಾಳೆ “ನನಗೆ ಅತ್ಯಂತ ವಿಧೇಯನಾಗಿರುವ ಮಾಣಿಕ್ಯವೇ! ನಿನ್ನನ್ನು ಸುಲಭವಾಗಿ ನನ್ನ ಅಂಗ ವಸ್ತ್ರದಲ್ಲಿಡಬಹುದು” ಎಂದು ಹೇಳುತ್ತಾಳೆ. ಅವಳು ಮೇಲೆ ಆಕಾಶವನ್ನು ನೋಡಿ ಮೂರ್ಛೆ ಹೋಗುತ್ತಾಳೆ. ಅವಳು ಹೇಳುತ್ತಾಳೆ “ಓಹ್! ಸ್ವಾತಂತ್ರ್ಯವಾಗಿರುವ ವೀರನೇ! ನೀನು ಅತ್ಯಂತ ದುರಹಂಕಾರದ ದೈತ್ಯರನ್ನು ಸ್ವಲ್ಪವೂ ಮಿಗಿಸದೇ ಸಂಪೂರ್ಣವಾಗಿ ಅವರ ಜೀವವನ್ನು ಕುಡಿದಿರುವೆ. “ ಅವಳು ತನ್ನ ಮನದಲ್ಲೇ ಅಳಲು ಪ್ರಾರಂಭಿಸುತ್ತಾಳೆ. “ಓಹ್! ಬರೀ ಕಣ್ಣುಗಳಿಂದ ಕಾಣಲು ಅಶಕ್ತನಾಗಿರುವವನೇ! ನನ್ನ ಕಣ್ಣುಗಳಿಗೆ ಕಾಣಿಸಿಕೊಳ್ಳು” ಎಂದು ಕೇಳಿಕೊಳ್ಳುತ್ತಾಳೆ. “ನೀನು ದಶರಥನಿಗೆ ದಿವ್ಯ ಮಗನಾಗಿ ಅವತಾರ ಪಡೆದಿಲ್ಲವೇ? ಆಗ ನೀನು ನಿನ್ನನ್ನು ನಗರಗಳಲ್ಲಿ ಮತ್ತು ಕಾಡುಗಳಲ್ಲಿ ಸ್ಥಾಪಿಸಲಿಲ್ಲವೇ?” ಮತ್ತು “ ಪುಂಸಾಮ್ ದೃಷ್ಟಿ ಚಿತ್ತಾಪಹಾರಿಣಾಮ್” ಮತ್ತು “ಧದೃಶುಃ ವಿಸ್ಮಿತಾಕಾರಾಃ” ಎಂದು ವರ್ಣಿಸಿಕೊಳ್ಳಲಿಲ್ಲವೇ? ಮತ್ತು ಕೃಷ್ಣನಾಗಿ ನೀನು ಅವತಾರವನ್ನೆತ್ತಿದ್ದಾಗ ನಿನ್ನ ವರ್ಚಸ್ಸು ಮತ್ತು ರೂಪವನ್ನು ಗೋಪಿಕೆಯರ “ದಾಸಾಮ್ ಆವಿರಭೂತ್” ಎಂದು ಸ್ಥಾಪಿಸಲಿಲ್ಲವೇ?” ಎಂದು ಕೇಳುತ್ತಾಳೆ. ತಾಯಿಯು ಹೇಳುತ್ತಾಳೆ “ ಓಹ್! ಶ್ರೀರಂಗದ ಕೋಯಿಲ್‍ನಲ್ಲಿ ನೆಲೆಸಿರುವವನೇ ! ಅದು ಬಲವಾದ ಧ್ವಜವನ್ನು ತನ್ನ ಕೋಟೆಯಲ್ಲಿ ಹೊಂದಿದೆ. ನನ್ನ ಮಗಳು ಇಂತಹ ಶೋಕದಲ್ಲಿ ಮುಳುಗಲು ನೀನು ಏನು ಮಾಡಿರುವೆ?” ಎಂದು ಕೇಳುತ್ತಾಳೆ.
ಪಾಸುರಮ್ 4:
ಪರಾಂಕುಶ ನಾಯಕಿಯ ತಾಯಿಯು ಪೆರಿಯ ಪೆರುಮಾಳಿನ ಹತ್ತಿರ ಕೇಳಿ ಕೊಳ್ಳುತ್ತಾಳೆ “ ಈ ಹುಡುಗಿಗೆ ಕರುಣೆಯಿಂದ ಒಳ್ಳೆಯದು ಮಾಡುವಂತೆ ಯೋಚಿಸು” ಎಂದು.
ಇಟ್ಟಕಾಲ್ ಇಟ್ಟಕೈಯಳಾಯ್ ಇರುಕ್ಕುಮ್ ಎೞುನ್ದುಲಾಯ್ ಮಯಙ್ಗುಮ್ ಕೈಕೂಪ್ಪುಮ್
ಕಟ್ಟಮೇ ಕಾದಲ್ ಎನ್‍ಱು ಮೂರ್ಚ್ಚಿಕ್ಕುಮ್ ಕಡಲ್‍ವಣ್ಣಾ ಕಡಿಯೈ ಕಾಣ್ ಎನ್ನುಮ್
ವಟ್ಟವಾಯ್ ನೇಮಿ ವಲಙ್ಗೈಯಾ ಎನ್ನುಮ್ ವನ್ದಿಡಾಯ್ ಎನ್‍ಱೆನ್‍ಱೇ ಮಯಙ್ಗುಮ್ ,
ಶಿಟ್ಟನೇ ಶೆೞು ನೀರ್ ತ್ತಿರುವರಙ್ಗತ್ತಾಯ್ ಇವಳ್ ತಿಱತ್ತೆನ್ ಶಿನ್ದಿತ್ತಾಯೇ ॥
ನನ್ನ ಮಗಳ ಕೈಗಳು ಮತ್ತು ಕಾಲುಗಳು ಎಲ್ಲಿ ಇರುತ್ತದೆಯೋ ಅದು ಕದಲುವುದೇ ಇಲ್ಲ. ಜ್ಞಾನ ತಪ್ಪಿ ಮತ್ತೆ ತಿಳಿಯಾದಾಗ , ಅವಳು ನಿಲ್ಲುತ್ತಾಳೆ, ಸುತ್ತ ನಡೆದು ಮತ್ತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಅವಳು ಅಂಜಲಿಯನ್ನು ಹಿಡಿಯುತ್ತಾಳೆ. ಅವಳು ಸಿಡಿಸಿಡಿಗೊಳ್ಳುತ್ತಾಳೆ. ಮತ್ತು ಹೇಳುತ್ತಾಳೆ “ ಪ್ರೀತಿ ಮಾಡುವುದು ಕಷ್ಟ ಸಾಧ್ಯ. “ ಅವಳು ಮತ್ತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಮತ್ತೆ ಅವಳು ಹೇಳುತ್ತಾಳೆ “ ಓಹ್! ಸಾಗರದಂತೆ ಅಳತೆಗೆ ಸಿಗದೆ ಅಗಾಧವಾಗಿ ತನ್ನಲ್ಲಿ ಎಲ್ಲವನ್ನೂ ಇಟ್ಟುಕೊಂಡು ರಕ್ಷಿಸುವವನೇ! ನೀನು ನನ್ನ ಬಗ್ಗೆ ಕ್ರೂರಿಯಾಗಿಬಿಟ್ಟೆ. ಅವಳು ಹೇಳುತ್ತಾಳೆ “ಓಹ್! ಅಂದವಾದ ದಿವ್ಯ ಚಕ್ರವನ್ನು ತನ್ನ ಬಲಗೈಯಲ್ಲಿ ಹಿಡಿದಿರುವವನೇ! “ ಎಂದು ಮತ್ತೆ ಮತ್ತೆ ಅವನನ್ನು ಕೇಳಿಕೊಳ್ಳುತ್ತಾಳೆ “ ದಯವಿಟ್ಟು ನಿನ್ನ ದಿವ್ಯ ಚಕ್ರದೊಂದಿಗೆ ಪ್ರತ್ಯಕ್ಷವಾಗು” ಮತ್ತು ತಾನು ತನ್ನ ಮತಿಯನ್ನು ಸಂಪೂರ್ಣ ಕಳೆದುಕೊಂಡು “ನಾನು ನನ್ನ ಸಹಜವಾದ ಗುಣವನ್ನು , ಪದೇ ಪದೇ ಅವರನ್ನು ಕರೆದೂ ಪೂರಾ ಕಳೆದುಕೊಂಡಿರುವೆ. ಮತ್ತು ನಾನು ನನ್ನ ಆಸೆಯನ್ನು ಮತ್ತು ಗುರಿಯನ್ನು ಸಂಪೂರ್ಣ ವಾಗಿ ಕಳೆದುಕೊಂಡಿರುವೆ. ಏಕೆಂದರೆ ಅವರು ಬರಲಿಲ್ಲವಾದ್ದರಿಂದ.” ಓಹ್! ಸುಂದರವಾದ ನದೀ ತೀರದಲ್ಲಿ ಮಲಗಿರುವವನೇ! ನೀನು ಬಹಳ ಜನಪ್ರಿಯ ಪ್ರಸಿದ್ಧನಂತೆ ಭಾವಿಸಿರುವೆ. ನೀನು ಅವಳ ಬಗ್ಗೆ ಏನೆಂದು ಆಲೋಚಿಸಿರುವೆ?
ಇದರ ಅರ್ಥ => ಅವಳನ್ನು ಇದೇ ರೀತಿ ಆಶ್ಚರ್ಯಚಕಿತಳನ್ನಾಗಿ ಮಾಡುತ್ತೀಯಾ ಇಲ್ಲವಾದರೆ ಅವಳಿಗೆ ಜ್ಞಾನದ ಪ್ರಕಾಶವನ್ನು ನೀಡುತ್ತೀಯಾ?
ಪಾಸುರಮ್ 5:
ಪರಾಂಕುಶ ನಾಯಕಿಯ ತಾಯಿಯು ತನ್ನ ಮಗಳು ಒಂದು ಕ್ಷಣದಲ್ಲಿ ಆಗುವ ಪರಿವರ್ತನೆಯನ್ನು ತೋರಿಸಿ ಹೇಳುತ್ತಾಳೆ “ಆಶ್ರಿತ ವಾತ್ಸಲ್ಯವಾಗಿರುವ ನಿನಗೆ ಅವಳನ್ನು ಈ ರೀತಿ ಕಷ್ಟ ಪಡಿಸುವುದು ಸಮಂಜಸವಾಗಿದೆಯೇ?”
ಶಿನ್ದಿಕ್ಕುಮ್ ತ್ತಿಶೈಕ್ಕುಮ್ ತೇಱುಮ್ ಕೈಕೂಪ್ಪುಮ್ ತಿರುವರಙ್ಗತ್ತುಳ್ಳಾಯ್ ಎನ್ನುಮ್,
ವನ್ದಿಕ್ಕುಮ್ , ಆಙ್ಗೇ ಮೞೈ ಕ್ಕಣ್ಣೀರ್ ಮಲ್‍ಗ ವನ್ದಿಡಾಯ್ ಎನ್‍ಱೆನ್‍ಱೇ ಮಯಙ್ಗುಮ್,
ಅನ್ದಿಪ್ಪೋದವುಣನ್ ಉಡಲ್ ಇಡನ್ದಾನೇ ಅಲೈ ಕಡಲ್ ಕಡೈನ್ದ ಆರಮುದೇ,
ಶನ್ದಿತ್ತುನ್ ಶರಣಮ್ ಶಾರ್ವದೇ ವಲಿತ್ತ ತೈಯಲೈ ಮೈಯಲ್ ಶೆಯ್‍ದಾನೇ॥
ನೀನು (ಎಂಪೆರುಮಾನರು) ಹಿರಣ್ಯನ ದೇಹವನ್ನು ಸಂಜೆಯ ವೇಳೆಯಲ್ಲಿ ತುಂಡು ತುಂಡಾಗಿಸಿರುವೆ. ನೀನು ಅಪರಿಮಿತವಾಗಿ ಆನಂದಿಸಲ್ಪಡುವೆ , ಸಮುದ್ರದ ಅಲೆಗಳಲ್ಲಿ ಮಂಥನ ಮಾಡಿರುವೆ . ಓಹ್! ನಿನ್ನಲ್ಲೇ ಸೇರಬೇಕೆಂದು ಆಸೆ ಹೊಂದಿರುವ , ಮತ್ತು ಅದಕ್ಕಾಗಿ ಪರಿಪೂರ್ಣವಾದ ರೂಪವನ್ನು ಸರಿಯಾದ ರೀತಿಯಲ್ಲಿ ಹೊಂದಿರುವ ಮತ್ತು ಬಾಹ್ಯ ಅನುಭವಕ್ಕಾಗಿ ನಿನ್ನ ಪಾದಗಳನ್ನೇ ಆನಂದಿಸಬೇಕೆಂದು ಅದರಲ್ಲಿ ಸೇರಬೇಕೆಂದು ಅಮಿತವಾಗಿ ಆಸೆ ಹೊಂದಿರುವ ನನ್ನ ಮಗಳು ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾಳೆ. ಅವಳು, ನೀನು ಅವಳ ಜೊತೆ ಮೊದಲು ಹೇಗೆ ಕೂಡಿ ಇದ್ದೆಯೋ, ಅದನ್ನೇ ಯೋಚಿಸಿರುತ್ತಿರುತ್ತಾಳೆ. ಅತ್ಯಂತ ಆಶ್ಚರ್‍ಯ ಹೊಂದುತ್ತಾಳೆ. ತನ್ನನ್ನು ತಾನೇ ಸಂಭಾಳಿಸಿಕೊಂಡು ಅಂಜಲಿಯನ್ನು ನೀಡೂತ್ತಾಳೆ. ನಿನ್ನನ್ನು ‘ ಓಹ್! ಕೋಯಿಲ್ (ಶ್ರೀರಂಗಂ) ನಲ್ಲಿ ನೆಲೆಸಿರುವವನೇ’ ಎಂದು ಕೂಗಿ ಕರೆಯುತ್ತಾಳೆ. ತನ್ನ ತಲೆಯನ್ನು ಬಗ್ಗಿಸುತ್ತಾಳೆ. ಅಲ್ಲಿಯೇ ಹಾಗೇ ನಿಲ್ಲುತ್ತಾಳೆ. ತನ್ನ ಕಣ್ಣುಗಳನ್ನು ಕಂಬನಿಭರಿತಗೊಳ್ಳುತ್ತಾಳೆ. ಬಾರಿ ಬಾರಿ ‘ಬಂದು ನನ್ನನ್ನು ಸ್ವೀಕರಿಸು’ ಎಂದು ಕೇಳುತ್ತಾಳೆ. ಜ್ಞಾನ ತಪ್ಪಿ ಬೀಳುತ್ತಾಳೆ. => ಅವಳು ಎಂಪೆರುಮಾನರ ಹತ್ತಿರ ಪ್ರೇಮವಶಗೊಂಡು ಎಲ್ಲಾ ರೀತಿಯ ಪರಿವರ್ತನೆಗೊಳಗಾಗುತ್ತಾಳೆ.
ಪಾಸುರಮ್ 6:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ. “ನಿನ್ನ ಹತ್ತಿರ ಅವಶ್ಯಕವಾಗಿರುವ ಎಲ್ಲಾ ಆಯುಧಗಳಿವೆ. (ತನ್ನ ಭಕ್ತರನ್ನು ಆಪತ್ತುಗಳಿಂದ ರಕ್ಷಿಸಲು) ಆದರೂ ನನ್ನ ಮಗಳನ್ನು ದುಃಖ ಪಡುವಂತೆ ಮಾಡಿದ್ದೀಯ. ಈಗ ಹೇಳು ನಾನು ಅವಳಿಗಾಗಿ ಏನನ್ನು ಮಾಡಬೇಕು?”
ಮೈಯಲ್ ಶೆಯ್‍ದೆನ್ನೈ ಮನಮ್ ಕವರ್ನ್ದಾನೇ ಎನ್ನುಮ್ ಮಾಮಾಯನೇ ಎನ್ನುಮ್,
ಶೆಯ್ಯ ವಾಯ್ ಮಣಿಯೇ ಎನ್ನುಮ್ ತಣ್ ಪುನಲ್ ಶೂೞ್ ತ್ತಿರುವರಙ್ಗತ್ತುಳ್ಳಾಯ್ ಎನ್ನುಮ್,
ನೆಯ್ಯ ವಾಳ್ ತಣ್ಡು ಶಙ್ಗು ಶಕ್ಕರಮ್ ವಿಲ್ ಏನ್ದುಮ್ ವಿಣ್ಣೋರ್‌ಮುದಲ್ ಎನ್ನುಮ್,
ಪೈಕೊಳ್ ಪಾಮ್ಬಣೈಯಾಯ್ ಇವಳ್ ತಿಱತ್ತರುಳಾಯ್ ಪಾವಿಯೇನ್ ಶೆಯಱ್ ಪಾಲದುವೇ॥
ನನ್ನ ಮಗಳು ಹೇಳುತ್ತಾಳೆ “ಓಹ್! ನನ್ನ ಹೃದಯವನ್ನು ಕದ್ದವನೇ! ನನ್ನನ್ನು ಆಶ್ಚರ್‍ಯಚಕಿತಳನ್ನಾಗಿ ಮಾಡಿರುವೆ. ಓಹ್! ಒಂದು ಅತ್ಯಮೂಲ್ಯವಾದ ಮಾಣಿಕ್ಯವೇ! ನಿನ್ನನ್ನು ಬಹಳ ಸುಲಭವಾಗಿ ಪಡೆಯಬಹುದು. ಕೆಂಪಾದ ಸುಂದರ ದಿವ್ಯ ತುಟಿಗಳನ್ನು ಹೊಂದಿರುವವನೇ! ಓಹ್! ಕೋಯಿಲ್(ಶ್ರೀರಂಗಂ)ನಲ್ಲಿ ನೆಲೆಸಿರುವವನೇ , ಅದು ನೀರಿನ ಪ್ರದೇಶದಿಂದ ಸುತ್ತುವರೆದಿದೆ. ಓಹ್! ನೀನು ಐದು ವಿಧವಾದ ಆಯುಧಗಳನ್ನು ಹಿಡಿದುಕೊಂಡು ನಿನ್ನ ಶರಣಾಗತಿಯಾದವರನ್ನು ವಿಳಂಬಮಾಡದೇ ರಕ್ಷಿಸಲು ಬರುತ್ತೀಯ. ನಿತ್ಯ ಸೂರಿಗಳ ಅಸ್ತಿತ್ವಕ್ಕೆ ಕಾರಣನಾದವನೇ! ತಿರುವನಂತಾಳ್ವಾನ್ ರನ್ನು ಹಾಸಿಗೆಯಾಗಿ ಹೊಂದಿರುವವನೇ! ನನ್ನ ಮಗಳ ಕರುಣಾಜನಕ ಸ್ಥಿತಿಯನ್ನು ನೋಡಲು ಪಾಪಗಳನ್ನು ನಾನು ಮಾಡಿರುವೆ. ಅವಳ ಈ ಸ್ಥಿತಿಗೆ ನಿನ್ನ ಉತ್ತರವೇನೆಂದು ಕರುಣೆಯಿಂದಲಿ ಹೇಳು”.
ಪಾಸುರಮ್ 7:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ. “ನನ್ನ ಮಗಳು ಎಂಪೆರುಮಾನರ ಗುಣಗಳಾದ ತನ್ನ ಭಕ್ತರ ರಕ್ಷಣೆಗಾಗಿ ಸಮುದ್ರ ಶಯನರಾಗಿರುವುದು ಮುಂತಾದುವುಗಳನ್ನು ಹೇಳಲು ಉತ್ಸುಕಳಾಗಿರುತ್ತಾಳೆ.
ಪಾಲ ತುನ್ಬಙ್ಗಳ್ ಇನ್ಬಙ್ಗಳ್ ಪಡೈತ್ತಾಯ್ ಪಟ್ರಿಲಾರ್ ಪಟ್ರ ನಿನ್‍ಱಾನೇ
ಕಾಲಶಕ್ಕರತ್ತಾಯ್ ಕಡಲ್ ಇಡಮ್ ಕೊಣ್ಡ ಕಡಲ್‍ವಣ್ಣಾ ಕಣ್ಣನೇ ಎನ್ನುಮ್
ಶೇಲ್‍ಕೊಳ್ ತಣ್ ಪುನಲ್ ಶೂೞ್ ತ್ತಿರುವರಙ್ಗತ್ತಾಯ್ ಎನ್ನುಮ್ ಎನ್‍ತೀರ್ತ್ತನೇ ಎನ್ನುಮ್,
ಕೋಲಮಾಮೞೈಕಣ್ ಪನಿ ಮಲ್‍ಗ ಇರುಕ್ಕುಮ್ ಎನ್ನುಡೈ ಕ್ಕೋಮಳಕ್ಕೊೞುನ್ದೇ॥
ನನ್ನ ನಾಜೂಕಾದ ಪ್ರವೃತ್ತಿ ಹೊಂದಿರುವ ಮಗಳು ಅವಳು ಒಂದು ಎಳೆಯದಾದ ಬಳ್ಳಿ ಇದ್ದ ಹಾಗೆ. ನೀನು ನಿನ್ನಲ್ಲಿ ಶರಣಾಗತಿ ಹೊಂದದವರಿಗೆ ದುಃಖವನ್ನೂ , ಶರಣಾಗತಿ ಹೊಂದಿದವರಿಗೆ ಸಂತೋಷವನ್ನೂ ಎಲ್ಲಾ ಪ್ರದೇಶಗಳಲ್ಲಿಯೂ ಕೊಡುತ್ತೀಯ. ನೀನು ಆಶ್ರಯವಿಲ್ಲದವರಿಗೆ ಆಶ್ರಯವಾಗಿಯೂ , ಜಯಂತನಂತೆ ನಿನ್ನಲ್ಲಿ ಶರಣಾಗತಿಯಾಗಿಲ್ಲದವರಿಗೂ ಆಶ್ರಯನಾಗಿರುವೆ. ನೀನು ಸಮಯದ ಚಕ್ರವನ್ನು ನಿಯಂತ್ರಿಸಿರುವೆ. ನೀನು ಕರುಣೆಯಿಂದ ಹಾಲಿನ ಸಮುದ್ರದಲ್ಲಿ ಶಯನಿಸಿರುವೆ. ಆ ನೋಟವು ಒಂದು ಸಮುದ್ರವು ಇನ್ನೊಂದು ಸಮುದ್ರದ ಮೇಲೆ ಮಲಗಿರುವ ಹಾಗಿದೆ. ಓಹ್! ನೀನು ಕೃಷ್ಣನಾಗಿ ನಿನ್ನ ಭಕ್ತರನ್ನು ರಕ್ಷಿಸಲು ಅವತರಿಸಿರುವೆ. ಓಹ್! ಕೋಯಿಲ್(ಶ್ರೀರಂಗಂ)ನಲ್ಲಿ ನೆಲೆಸಿರುವವನೇ! ಅದು ಕಾವೇರಿಯ ತಣ್ಣಗಿನ ನೀರಿನಿಂದ ಮತ್ತು ಅದರಲ್ಲಿ ಇರುವ ಮೀನುಗಳಿಂದ ಸುತ್ತುವರಿಯಲ್ಪಟ್ಟಿದೆ. ಓಹ್! ನೀನು ಪವಿತ್ರವಾದ ಒಂದು ನದಿಯಂತೆ! ಅದರಲ್ಲಿ ನಾನು ಮುಳುಗಬೇಕೆಂದಿರುವೆ. ಎಂದು ಹೇಳಿ ತಾನು ನಿಷ್ಕ್ರಿಯವಾಗಿ, ಕಂಬನಿಗಳನ್ನು ತನ್ನ ಸುಂದರವಾದ, ವಿಶಾಲವಾದ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾಳೆ.
ಪಾಸುರಮ್ 8:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ ,” ನಾನು ನನ್ನ ಮಗಳಲ್ಲಿ ಮತ್ತೆ ಮತ್ತೆ ಬರುವ ನರಳಾಟಕ್ಕೆ ಏನು ಮದ್ದು ಮಾಡಲಿ?” ಎಂದು.
ಕೊೞುನ್ದು ವಾನವರ್ಗಟ್ಕೆನ್ನುಮ್ ಕುನ್‍ಱೇನ್ದಿ ಕ್ಕೋನಿರೈ ಕಾತ್ತವನ್ ಎನ್ನುಮ್,
ಅೞುಮ್ ತೊೞುಮ್ ಆವಿ ಅನಲ ವೆವ್ವುಯಿರ್ಕ್ಕುಮ್ ಅಞ್ಜನವಣ್ಣನೇ ಎನ್ನುಮ್,
ಎೞುನ್ದು ಮೇಲ್ ನೋಕ್ಕಿ ಇಮೈಪ್ಪಿಲಳ್ ಇರುಕ್ಕುಮ್ ಎಙ್ಗನೇ ನೋಕ್ಕುಗೇನ್ ಎನ್ನುಮ್,
ಶೆೞುಮೇ ತಡಮ್ ಪುನಲ್ ಶೂೞ್ ತಿರುವರಙ್ಗತ್ತಾಯ್ ಎನ್‍ಶೆಯ್‍ಹೇನ್ ಎನ್ ತಿರುಮಗಟ್ಕೇ॥
ನನ್ನ ಮಗಳು ಹೇಳುತ್ತಾಳೆ, ಅವರು ನಿತ್ಯಸೂರಿಗಳಿಗೆಲ್ಲಾ ನಾಯಕರಾದವರು. ಪರ್ವತವನ್ನೇ ತನ್ನ ಕಿರುಬೆರಳಲ್ಲಿ ಎತ್ತಿ ಅಮಾನುಷವಾದ ಕಾರ್ಯವನ್ನು ಮಾಡಿ ಹಸುಗಳನ್ನೂ, ಗೊಲ್ಲರನ್ನೂ ರಕ್ಷಿಸಿದರು. ಅವಳು ತನ್ನ ಕಂಬನಿಭರಿತ ಕಣ್ಣುಗಳಿಂದ ಭಕ್ತಿಯಲ್ಲಿ ಮುಳುಗಿ ಹೋಗುತ್ತಾಳೆ. ಅವಳು ತನ್ನ ಕೈಗಳನ್ನು ಅಂಜಲಿಯ ರೂಪದಲ್ಲಿ ಹಿಡಿದು, ಶರಣಾಗತಿ ಹೊಂದುವಂತೆ ತೋರಿಸುತ್ತಾಳೆ. ತನ್ನ ಸುಡದ ಆತ್ಮವನ್ನು ಸುಟ್ಟು ಕರಗಿಸುವಂತೆ ಬಿಸಿಯಾದ ನಿಟ್ಟುಸಿರು ಬಿಡುತ್ತಾಳೆ. ಆಸೆಯನ್ನು ಹೆಚ್ಚಿಸುವೆ ಕಪ್ಪಾದ ರೂಪವನ್ನು ಹೊಂದಿರುವವನೇ ! ಎಂದು ಅವಳು ಎಂಪೆರುಮಾನರನ್ನು ನೋಡುವಂತೆ ಎದ್ದು ನಿಲ್ಲುತ್ತಾಳೆ. ಮತ್ತು ಕಣ್ಣುಗಳನ್ನು ಮಿಟುಕಿಸದೇ ಹಾಗೆಯೇ ನಿಲ್ಲುತ್ತಾಳೆ. ಅವಳು ಹೇಳುತ್ತಾಳೆ, “ ನಾನು ಹೇಗೆ ನಿನ್ನನ್ನು ನೋಡಲಿ?” ಓಹ್! ಕೋಯಿಲ್‍ನಲ್ಲಿ ನೆಲೆಸಿರುವವನೇ! ಆ ಶ್ರೀರಂಗಮ್ ಸುಂದರವಾದ ವಿಶಾಲ ನೀರಿನ ತಾಣಗಳಿಂದ ಸುತ್ತುವರೆಯಲ್ಪಟ್ಟಿದೆ. ನಾನು ಲಕ್ಷ್ಮಿಗೆ ಹೋಲಿಸುವ ರೂಪವನ್ನು ಹೊಂದಿರುವ ಮಗಳಿಗೆ ಏನು ಮಾಡಲಿ? ನಾನು ಅವಳ ನರಳಾಟಕ್ಕೆ, ದುಃಖಕ್ಕೆ ಕಾರಣವಾದ ಅಮಿತವಾದ ಪ್ರೀತಿಯನ್ನೇ ನಿಯಂತ್ರಣ ಮಾಡಲೇ? ಅಥವಾ ಬರದಿರುವ ನಿನ್ನನ್ನು ಬರುವಂತೆ ಮಾಡಲೇ?
=> ಇದರ ಅರ್ಥ ಎರಡೂ ಅಸಾಧ್ಯ ಎಂದು.
ಪಾಸುರಮ್ 9:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ “ ನಾನು ನನ್ನ ಮಗಳ ಆಸೆಯನ್ನು ಪೂರೈಸಲಾಗುತ್ತಿಲ್ಲ. ಅವಳು ನಿನ್ನ ಪ್ರೀತಿಯನ್ನು ಪಡೆಯಬೇಕೆಂದು ಅತ್ಯಂತ ಮೋಹಿತಳಾಗಿದ್ದಾಳೆ. ಲಕ್ಷ್ಮೀದೇವಿ , ಭೂದೇವಿ ಮತ್ತು ನೀಳಾದೇವಿಯ ಜೊತೆಗಿರುವ ನಿನ್ನನ್ನು ಅವಳು ಅತ್ಯಂತ ಮೋಹಿಸಿದ್ದಾಳೆ.”
ಎನ್ ತಿರುಮಗಳ್ ಶೇರ್ ಮಾರ್ವನೇ ಎನ್ನುಮ್ ಎನ್ನುಡೈ ಆವಿಯೇ ಎನ್ನುಮ್,
ನಿನ್‍ತಿರುವಯಿತ್ತಾಲ್ ಇಡನ್ದು ನೀಕೊಣ್ಡ ನಿಲಮಗಳ್ ಕೇಳ್ವನೇ ಎನ್ನುಮ್,
ಅನ್‍ಱುರು ಏೞುಮ್ ತೞುವಿ ನೀಕೊಣ್ಡ ಆಯ್‍ಮಗಳ್ ಅನ್ಬನೇ ಎನ್ನುಮ್,
ತೆನ್ ತಿರುವರಙ್ಗಮ್ ಕೋಯಿಲ್‍ಕೊಣ್ಡಾನೇ ತೆಳಿಗಿಲೇನ್ ಮುಡಿವಿವಳ್ ತನಕ್ಕೇ॥
ನನ್ನ ಮಗಳು ಹೇಳುತ್ತಾಳೆ, “ಓಹ್! ವಿಶಾಲವಾದ ದಿವ್ಯ ಎದೆಯನ್ನು ಹೊಂದಿರುವವನೇ,! ಆ ಸ್ಥಳವು ಲಕ್ಷ್ಮೀದೇವಿಯ ವಾಸಸ್ಥಾನವಾಗಿದೆ. ಅವಳು ನನಗೂ ನಾಯಕಿಯಾಗಿದ್ದಾಳೆ. ಅವಳು ನಿನ್ನಲ್ಲಿ ಸಮಾಗಮವಾಗಿದ್ದಾಳೆ. ಓಹ್! ಭೂಮಿ ಪಿರಾಟ್ಟಿಯ ಯಜಮಾನರಾಗಿರುವವರೇ! ನೀನು ನಿನ್ನ ದಿವ್ಯ ಕೊಂಬುಗಳಿಂದ ನೆಲವನ್ನು ಬಗೆದು ಅವಳನ್ನು ಮೇಲೆತ್ತಿ ತನ್ನವಳೆಂದು ಸ್ವೀಕರಿಸಿರುವೆ. ಓಹ್! ಸ್ಥಿರವಾದ ಪ್ರೀತಿಯನ್ನು ನಪ್ಪಿನ್ನೈ ಪಿರಾಟ್ಟಿಯ ಮೇಲೆ ಹೊಂದಿರುವವನೇ! ನಿನ್ನ ಜಾತಿಯಲ್ಲಿಯೇ ಹುಟ್ಟಿದವಳೆಂದು ಅತ್ಯಮೂಲ್ಯ ನಿಧಿಯೆಂದು ಸಂರಕ್ಷಿಸಿ ನಿನ್ನಲ್ಲಿಯೇ ಸ್ವೀಕರಿಸಿರುವೆ. ಭಯಂಕರವಾದ ಗುಡುಗಿನಂತೆ ಆರ್ಭಟಿಸುವ ಏಳು ಗೂಳಿಗಳನ್ನು ಸ್ಪರ್ಧೆಯಲ್ಲಿ ಸೋಲಿಸಿ ನಪ್ಪಿನ್ನೈಯನ್ನು ಗೆದ್ದು ಅವಳನ್ನು ಆಲಂಗಿಸಿರುವೆ. ಓಹ್! ಶ್ರೀರಂಗ ಕ್ಷೇತ್ರವನ್ನು ತನ್ನ ವಾಸಸ್ಥಾನವಾಗಿ ಒಪ್ಪಿಕೊಂಡಿರುವ ಎಂಪೆರುಮಾನರೇ! ನನಗೆ ಅವಳ ದುಃಖವನ್ನು ಪರಿಹರಿಸಲು ಸಾಧನಗಳು (ಮಾಧ್ಯಮವು) ತಿಳಿದಿಲ್ಲ. ಎಂದು ಹೇಳುತ್ತಾಳೆ.
ಪಾಸುರಮ್ 10:
ಅಂತರಾತ್ಮಗಳಿಗೇ ಶ್ರೇಷ್ಠನಾದ ತಮ್ಮನ್ನು ತಾವು ನಾಯಕರೆಂದು ಭಾವಿಸುವ ದೇವತೆಗಳಿಗೇ ಶ್ರೇಷ್ಠನಾದ ಸರ್ವೇಶ್ವರನು , ಪರಾಂಕುಶ ನಾಯಕಿಯ ದುಃಖವನ್ನೂ, ಅಗಲಿಕೆಯನ್ನೂ ಅರ್ಥ ಮಾಡಿಕೊಂಡು , ಅವಳಿಗೆ ತನ್ನ ಪ್ರತ್ಯಕ್ಷ ರೂಪವನ್ನು, ಅಗಾಧವಾಗಿ ಸರಳತೆಯೊಂದಿಗೆ, ತನ್ನ ಹೊರ ರೂಪದ ಸೌಂದರ್‍ಯವನ್ನು ತೋರಿಸುತ್ತಾನೆ. ಅವಳಿಗೆ ನಂಬಿಕೆಯುಂಟಾಗುತ್ತದೆ. ಅವಳ ತಾಯಿಯು ತೃಪ್ತಿ, ಸಮಾಧಾನದಿಂದ ಹೇಳುತ್ತಾಳೆ.
ಮುಡಿವಿವಳ್ ತನಕ್ಕು ಒನ್‍ಱಱಿಗಿಲೇನ್ ಎನ್ನುಮ್ ಮೂವುಲಗಾಳಿಯೇಯೆನ್ನುಮ್,
ಕಡಿಕಮೞ್ ಕೊನ್‍ಱೈ ಚ್ಚಡೈಯನೇಯೆನ್ನುಮ್ ನಾನ್ಮುಗಕ್ಕಡವುಳೇ ಎನ್ನುಮ್,
ವಡಿವುಡೈ ವಾನೋರ್ ತಲೈವನೇ ಎನ್ನುಮ್ ವಣ್ ತಿರುವರಙ್ಗನೇ ಎನ್ನುಮ್,
ಅಡಿ ಅಡೈಯಾದಾಳ್ ಪೋಲ್ ಇವಳ್ ಅಣುಗಿ ಅಡೈನ್ದನಳ್ ಮುಗಿಲ್‍ವಣ್ಣನ್ ಅಡಿಯೇ ॥
ನನ್ನ ಮಗಳು ಹೇಳುತ್ತಾಳೆ, “ ನನಗೆ ಪರಿಹಾರ ಗೊತ್ತಿಲ್ಲ, ಓಹ್! ಮೂರು ಲೋಕಗಳ (ಭೂಃ , ಭುವಃ, ಸುವಃ ಎಂಬ) ನಾಯಕನೆಂದು ತಿಳಿದಿರುವ ಇಂದ್ರನ ಅಂತರಾತ್ಮಕ್ಕೇ ಒಡೆಯನಾಗಿರುವ, ಕೊನ್‍ಱೈ ಮಾಲೆಯ ಸುಗಂಧವನ್ನು ಹೊಂದಿರುವ ಜಟೆಯನ್ನು ಧರಿಸಿರುವ ರುದ್ರನ ಅಂತರಾತ್ಮವಾಗಿರುವ, ರುದ್ರ ತಾನು ಜಪಿಸುವ, ಆರಾಧಿಸುವ , ನಾಲ್ಕು ತಲೆಯಿರುವ ಬ್ರಹ್ಮನ ಅಂತರಾತ್ಮವಾಗಿರುವ , ನಿನ್ನದೇ ರೂಪವನ್ನು ಹೊಂದಿರುವ ನಿತ್ಯಸೂರಿಗಳಿಗೆಲ್ಲಾ ನಾಯಕನಾಗಿರುವ ,ಓಹ್! ಕೋಯಿಲ್ (ಶ್ರೀರಂಗಂ) ನಲ್ಲಿ ಎಲ್ಲಾ ರೀತಿಯ ನಿಯಂತ್ರಣವನ್ನು ಹೊಂದಿರುವ , ಅದನ್ನು ಉತ್ಕೃಷ್ಟತೆಯಿಂದ ಸಾಧಿಸುವ, ಸರ್ವೇಶ್ವರನಾದ ಎಂಪೆರುಮಾನರು”, ನನ್ನ ಮಗಳು ಎಂಪೆರುಮಾನರನ್ನು ಸೇರದಿರುವಂತೆ ಅನಿಸಿದರೂ, ಕಪ್ಪಾದ ಮೇಘಗಳಂತೆ , ಭೂಮಿಯ ಮೇಲೆ ಮತ್ತು ನೀರಿನ ತಾಣವೆಂದು ಭೇದವೆಣಿಸದೇ ಮಳೆಯನ್ನು ಸುರಿಸುವಂತೆ, ಅವನ ಧಾರಾಳತನದಿಂದ ನನ್ನ ಮಗಳು ಅವರ ದಿವ್ಯ ಪಾದವನ್ನು ಸಮೀಪಿಸಿ , ಸೇರಿಕೊಂಡಳು.
ಪಾಸುರಮ್ 11:
ಆಳ್ವಾರರು ಹೇಳುತ್ತಾರೆ, “ ಯಾರು ಈ ಹತ್ತು ಪಾಸುರಗಳನ್ನು ಅಭ್ಯಾಸ ಮಾಡುತ್ತಾರೋ, ಅವರಿಗೆ ನಾನು ಅನುಭವಿಸಿದ ಯಾವ ನರಳಾಟಗಳೂ ಇಲ್ಲದೆ, ಪರಮಪದವನ್ನು ಹೊಂದುತ್ತಾರೆ. ಅಲ್ಲಿ ಅವರು ಅಪರಿಮಿತವಾದ ಆನಂದವನ್ನೂ, ಸುತ್ತಲೂ ನಿತ್ಯಸೂರಿಗಳನ್ನೂ ಹೊಂದುತ್ತಾರೆ.
ಮುಗಿಲ್‍ವಣ್ಣನ್ ಅಡಿಯೈ ಅಡೈನ್ದು ಅರುಳ್ ಶೂಡಿ ಉಯ್‍ನ್ದವನ್ ಮೊಯ್ ಪುನಲ್ ಪೊರುನಲ್
ತುಗಿಲ್‍ವಣ್ಣ ತ್ತೂ ನೀರ್ ಶೇರ್ಪ್ಪನ್ ವಣ್ ಪೊೞಿಲ್ ಶೂೞ್ ವಣ್ ಕುರುಗೂರ್ ಚ್ಚಡಗೋಪನ್,
ಮುಗಿಲ್‍ವಣ್ಣನ್ ಅಡಿಮೇಲ್ ಶೊನ್ನ ಶೊಲ್‍ಮಾಲೈ ಆಯಿರತ್ತಿಪ್ಪತ್ತುಮ್ ವಲ್ಲಾರ್ ,
ಮುಗಿಲ್‍ವಣ್ಣ ವಾನತ್ತಿಮೈಯವರ್ ಶೂೞ ಇರುಪ್ಪರ್ ಪೇರ್ ಇನ್ಬವೆಳ್ಳತ್ತೇ ॥
ದಿವ್ಯ ತಾಮಿರಭರಣಿ ನದಿಯು ಅಗಾಧವಾದ , ಸ್ವಚ್ಛ ನೀರಿನಿಂದ ತುಂಬಿಕೊಂಡು, ರೇಷ್ಮೆ ಬಟ್ಟೆಯ ಬಣ್ಣವನ್ನು ಹೊಂದಿದೆ. ಅಪರಿಮಿತವಾಗಿ ಸಂಪದ್ಭರಿತವಾದ ಆಳ್ವಾರ್ ತಿರುನಗರಿಯು ಇಂತಹ ನದಿಯ ತೀರದಲ್ಲಿ ಇದ್ದು, ಜೇನು, ಹೂವುಗಳಿಂದ ತುಂಬಿದ ತೋಟಗಳಿಂದ ಆವರಿಸಲ್ಪಟ್ಟಿದೆ. ಅಂತಹ ಆಳ್ವಾರ್‍ತಿರುನಗರಿಗೇ ನಾಯಕರಾದ ನಮ್ಮಾಳ್ವಾರರು , ಧಾರಾಳತೆಯಿರುವ ಮೇಘಗಳ ಗುಣವನ್ನು ಹೊಂದಿರುವ ಪೆರಿಯ ಪೆರುಮಾಳರ ದಿವ್ಯ ಪಾದಗಳನ್ನು ಸೇವಿಸಿ, ಅಭಿವೃದ್ಧಿಗೊಂಡರು. ಅವರು ಅಪಾರ ಕರುಣೆಯಿಂದ ಈ ಹತ್ತು ಪಾಸುರಗಳನ್ನು ಒಟ್ಟು ಮೊತ್ತ ಸಾವಿರ ಪಾಸುರಗಳಲ್ಲಿ ಶಬ್ದಗಳ ಮಾಲೆಯಂತೆ , ಅಪರಿಮಿತವಾಗಿ ಸುಂದರವಾದ, ಮೇಘದಂತೆ ಇರುವ ಪೆರಿಯ ಪೆರುಮಾಳರ ದಿವ್ಯ ಪಾದಗಳಲ್ಲಿ ಹೇಳಿದ್ದಾರೆ. ಯಾರು ಈ ಹತ್ತು ಪಾಸುರಗಳನ್ನು ನಿಜವಾದ ಭಾವನೆಯಿಂದ (ಅರ್ಥದಿಂದ) ಹೇಳುತ್ತಾರೋ, ಅವರು ಅಪರಿಮಿತವಾದ ಆನಂದದ ಸಮುದ್ರದಲ್ಲಿ, ಗಾಢವಾದ ನೀಲಿಯ ಬಣ್ಣದ , ನಿತ್ಯಸೂರಿಗಳಿಂದ ಆವರಿಸಲ್ಪಟ್ಟ ಪರಮಪದದಲ್ಲಿ ಇರುತ್ತಾರೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/05/thiruvaimozhi-7-2-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org