ರಾಮಾನುಜ ನೂಱ್ಱ್ರಂದಾದಿ – ಸರಳ ವಿವಿರಣೆ

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಇಯಱ್ಪಾ

ಶ್ರೀ ಮಣವಾಳ ಮಾಮುನಿಗಳು ಉಪದೇಶ ರತ್ನಮಾಲೈಯ 38ನೇ ಪಾಸುರದಲ್ಲಿ ಎಂಪೆರುಮಾನಾರ್ ಅವರ ವೈಶಿಷ್ಟ್ಯತೆಯನ್ನು ಅದ್ಭುತವಾಗಿ ಬಹಿರಂಗಪಡಿಸಿದ್ದಾರೆ :

ಎಂಪೆರುಮಾನಾರ್ ದರಿಸನಂ ಎನ್ಱೇ ಇದರ್ಕು

ನಂಪೆರುಮಾಳ್ ಪೇರಿಟ್ಟು ನಾಟ್ಟಿ ವೈತ್ತಾರ್ – ಅಂಬುವಿಯೋರ್

ಇಂದ ದರಿಸನತ್ತೈ ಎಂಪೆರುಮಾನಾರ್ ವಳರ್ತ್ತ 

ಅಂದ ಚೆಯಲ್ ಅಱಿಗೈಕ್ಕಾ

ನಂಪೆರುಮಾಳ್ (ಶ್ರೀರಂಗದಲ್ಲಿ ಉತ್ಸವ ಮೂರ್ತಿ ) ನಮ್ಮ ಶ್ರೀವೈಷ್ಣವ ಸಂಪ್ರದಾಯಂ (ಶ್ರೀವಿಷ್ಣುವಿನ ದೈವೀಕ ಅನುಯಾಯಿಗಳು ಅನುಸರಿಸುವ ದಿವ್ಯ ಸಂಸ್ಕೃತಿ ) ಅನ್ನು ಎಂಪೆರುಮಾನಾರ್ ದರಿಶನಂ ಎಂದು ಹೆಸರಿಟ್ಟು ಅದನ್ನು ದೃಢೀಕರಿಸಿದ್ದಾರೆ. ಇದಕ್ಕೆ ಕಾರಣ, ಶ್ರೀಭಾಷ್ಯಂ ಮುಂತಾದ ಗ್ರಂಥಗಳನ್ನು (ಪುಸ್ತಕಗಳನ್ನು) ಕರುಣೆಯಿಂದ ರಚಿಸುವ ಮೂಲಕ ಎಂಪೆರುಮಾನಾರ್  ಈ ಭಕ್ತಿಯ ಹಾದಿಯನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ ಮತ್ತು ಅಭಿವೃದ್ಧಿಪಡಿಸಿದ್ದಾರೆ, ಪ್ರತಿಯೊಬ್ಬರೂ ನಮ್ಮ ಆಧ್ಯಾತ್ಮದ ಅರ್ಥಗಳನ್ನು ಅನೇಕ ಆಚಾರ್ಯರ (ಪೂರ್ವಾಚಾರ್ಯರು ) ಮೂಲಕ ತಿಳಿದುಕೊಳ್ಳುವಂತೆ ಮಾಡಿದ್ದಾರೆ,  ಎಂಪೆರುಮಾನರ  ವಿವಿಧ ದೈವಿಕ ವಾಸಸ್ಥಾನಗಳಲ್ಲಿ ಸುಧಾರಣೆಗಳನ್ನು ಮಾಡಿದ್ದಾರೆ [ದೇವಾಲಯ ಆಡಳಿತದಲ್ಲಿ , ಶಾಸ್ತ್ರಗಳಲ್ಲಿ   ವಿವರಿಸಿದಂತೆ ಎಂಪೆರುಮಾನ್ ಗಾಗಿ  ಉತ್ಸವಗಳನ್ನು  ನಡೆಸುವುದು].  ಎಂಪೆರುಮಾನಾರ್  ಮಾಡಿದ ದೊಡ್ಡ ಪ್ರಯೋಜನಕಾರಿ ಕಾರ್ಯಗಳ ಬಗ್ಗೆ ಎಲ್ಲರಿಗೂ ತಿಳಿಯಲೆಂದು ಈ ರೀತಿಯಾಗಿ ನಂಪೆರುಮಾಳ್ ಇದನ್ನು ಸ್ಥಾಪಿಸಿದರು. ತಿರುಕ್ಕೋಷ್ಟಿಯೂರ್ ನಂಬಿ [ಎಂಪೆರುಮಾನಾರ್ ನ ಐದು ಆಚಾರ್ಯರಲ್ಲಿ ಒಬ್ಬರು] ರಾಮಾನುಜರಿಗೆ  ಎಂಪೆರುಮಾನಾರ್ ಎಂಬ ಬಿರುದನ್ನು ನೀಡಿದರು  ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಎಂಪೆರುಮಾನಾರಿನ ಶ್ರೇಷ್ಠತೆಯನ್ನು ಹೊರತರುವ ಸಲುವಾಗಿ ನಂಪೆರುಮಾಳ್ ಇದನ್ನು ಆಯೋಜಿಸುತ್ತಿದ್ದರು ಎಂದು ಹೇಳಬಹುದು. ಪಿಳ್ಳೈ  ತಿರುವರಂಗತ್ತು ಅಮುಧನಾರ್ ಒಬ್ಬ  ಆಚಾರ್ಯರಾಗಿದ್ದು, ಅವರು ಎಂಪೆರುಮಾನಾರ್ ನ ಸಮಯದಲ್ಲಿ ಶ್ರೀರಂಗದಲ್ಲಿ ವಾಸಿಸುತ್ತಿದ್ದರು. ಆರಂಭದಲ್ಲಿ ಅವರಿಗೆ ಎಂಪೆರುಮಾನಾರ್  ಬಗ್ಗೆ ಹೆಚ್ಚಿನ ಗೌರವವಿರಲಿಲ್ಲ. ಅವರನ್ನು ಎಂಪೆರುಮಾನಾರ್  ಆದೇಶದ ಮೇರೆಗೆ, ಕೂರತ್ ಆೞ್ವಾನ್- ಎಂಪೆರುಮಾನಾರರ  ಪ್ರಮುಖ ಶಿಷ್ಯರಲ್ಲಿ ಒಬ್ಬರಾದವರನ್ನು  ಸುಧಾರಿಸಲು   ಕಳುಹಿಸಲಾಯಿತು. ಕೂರತ್ ಆೞ್ವಾನ್ ಅವರ ಅಪಾರ ಕರುಣೆಯಿಂದಾಗಿ, ಅವರು ಎಂಪೆರುಮಾನಾರರ  ಶ್ರೇಷ್ಠತೆಯನ್ನು ಅರಿತುಕೊಂಡರು ಮತ್ತು ಎಂಪೆರುಮಾನಾರರ  ಗುಣಗಳನ್ನು ವಿವರಿಸುವ ಅದ್ಭುತ ಪ್ರಬಂಧಮ್ ರಾಮಾನುಜ  ನೂಱ್ಱ್ರಂದಾದಿ ಯನ್ನು ಕರುಣೆಯಿಂದ ರಚಿಸಿದರು. ಮನವಾಳ  ಮಾಮುನಿಗಳ್  ಈ ಪ್ರಬಂಧಕ್ಕೆ ಸಂಕ್ಷಿಪ್ತ ವ್ಯಾಖ್ಯಾನವನ್ನು ನೀಡಿದ್ದಾರೆ . ಈ ಭಾಷ್ಯದ ಮುನ್ನುಡಿಯಲ್ಲಿ ಅವರು ಈ ಪ್ರಬಂಧದ ಶ್ರೇಷ್ಠತೆಯನ್ನು ಸುಂದರವಾಗಿ ಉಲ್ಲೇಖಿಸಿದ್ದಾರೆ. ಈ ವೈಶಿಷ್ಟ್ಯಗಳನ್ನು ನಾವು ಇಲ್ಲಿ ಸಂಕ್ಷಿಪ್ತವಾಗಿ ನೋಡುತ್ತೇವೆ. ಮಧುರಕವಿ ಆೞ್ವಾರ್ ಈ ಹಿಂದೆ ಕಣ್ಣಿನುನ್  ಚಿಱುತ್ತಾಂಬು , ಇದು ನಮ್ಮಾೞ್ವಾರ್ ಗೆ  ಸಂಬಂಧಿಸಿದಂತೆ ತನ್ನ ಸ್ಥಾನವನ್ನು ವಿವರಿಸಿ [ನಮ್ಮಾೞ್ವಾರೇ  ಅವರಿಗೆ ಎಲ್ಲವೂ ಆಗಿದೆ] ರಚಿಸಿದಂತೆಯೇ, ಮತ್ತು ಇತರರಿಗೆ ಸೂಚನೆಯಂತೆ, ಅಮುಧನಾರ್  ಸಹ ಕರುಣಾಮಯದಿಂದ ಈ ಪ್ರಬಂಧವನ್ನು ಎಂಪೆರುಮಾನಾರ್  ಬಗ್ಗೆ  ಸಂಯೋಜಿಸಿದ್ದಾರೆ. ಆದರೆ ಮಧುರಕವಿ ಆೞ್ವಾರ್ ಸಂಕ್ಷಿಪ್ತವಾಗಿ ರಚಿಸಿದಂತೆ ಅಲ್ಲದೆ ,  ಅಮುಧನಾರ್  ವಿಸ್ತಾರವಾಗಿ ಈ ಪ್ರಬಂದವನ್ನು ರಚಿಸಿದ್ದಾರೆ. ಗಾಯತ್ರಿ  ಮಂತ್ರಂ [ಬುದ್ಧಿಶಕ್ತಿ ನೀಡಲು ದೇವತೆಯನ್ನು ಆಹ್ವಾನಿಸುವ ಒಂದು ಮಂತ್ರವನ್ನು] ಪ್ರತಿದಿನ ಬ್ರಹ್ಮೋಪದೇಶ ಆದವರು  ಪಠಿಸುತ್ತಾರೆಯೊ  [ಈ ಕಾರ್ಯದಲ್ಲಿ ಒಬ್ಬ ಚಿಕ್ಕ ಬಾಲಕನಿಗೆ  ಪರಮಾತ್ಮನ ಬಗ್ಗೆ ಸೂಚನೆ ನೀಡಲಾಗುತ್ತದೆ], ಅಂತೆಯೇ ತಮ್ಮ ಆಚಾರ್ಯರೊಂದಿಗೆ ಸಂಬಂಧವನ್ನು ಹೊಂದಿದವರು ಮತ್ತು ಎಂಪೆರುಮಾನಾರರ  ದೈವಿಕ ಪಾದಗಳಲ್ಲಿ ಆಸೆ ಹೊಂದಿರುವವರು ಇದನ್ನು ಪ್ರತಿದಿನವೂ ಪಠಿಸಬೇಕು. ಈ ಪ್ರಬಂಧಂನ ಪ್ರತಿ ಪಾಸುರಂನಲ್ಲಿ, ಎಂಪೆರುಮಾನಾರರ   ಹೆಸರನ್ನು ಆಹ್ವಾನಿಸಲಾಗಿದೆ. ಆದ್ದರಿಂದ ಈ ಪ್ರಬಂಧವನ್ನು ನಮ್ಮ ಹಿರಿಯರು ಪ್ರಪನ್ನ ಗಾಯತ್ರಿ  ಎಂದು ಕರೆಯುತ್ತಾರೆ.

ಈ ಸರಳ ಅನುವಾದವನ್ನು ಮಾಮುನಿಗಳ  ಸಂಕ್ಷಿಪ್ತ ವ್ಯಾಖ್ಯಾನದ ಸಹಾಯದಿಂದ ಬರೆಯಲಾಗುತ್ತಿದೆ.

ನಮ್ಮ ಮುಂದಿನ ಶೀರ್ಷಿಕೆಯಲ್ಲಿ ನಾವು ಈ ಪ್ರಬಂದದ ತನಿಯನ್ಗಳನ್ನು ಆನಂದಿಸೋಣ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://divyaprabandham.koyil.org/index.php/2020/04/ramanusa-nurrandhadhi-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment