ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ – 91 ರಿಂದ 100ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ ಸರಣಿ

ಹಿಂದಿನ ಶೀರ್ಷಿಕೆ << 81-90 ಪಾಸುರಗಳು

ತೊಂಬತ್ತೊಂದನೆಯ ಪಾಸುರಂ. ಸಂಸಾರಿಗಳು ಯಾವುದೇ ವಿಷಯಗಳಲ್ಲಿ ಒಳಗೊಳ್ಳದಿದ್ದರೂ ಸಹ, ಅಮುದನಾರರು ಅವರನ್ನು  ಉನ್ನತಿಗೆ ತರಲು ರಾಮಾನುಜರು ಮಾಡಿದ ಪ್ರಯತ್ನಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರನ್ನು ಶ್ಲಾಘಿಸುತ್ತಾರೆ.

ಮರುಳ್ ಸುರಂದು ಆಗಮ ವಾದಿಯರ್ ಕೂಱುಂ ಅವಪ್ ಪೊರುಳಾಮ್

ಇರುಳ್ ಸುರಂದು ಎಯ್ತ ಉಲಗು ಇರುಳ್ ನೀಂಗತ್ ತನ್ ಈಣ್ಡಿಯ ಶೀರ್

ಅರುಳ್ ಸುರಂದು ಎಲ್ಲಾ ಉಯಿರ್ಗಟ್ಕುಂ ನಾದನಂ ಅರಂಗನ್ ಎನ್ನುಂ

ಪೊರುಳ್ ಸುರಂದಾನ್ ಎನ್ ಇರಾಮಾನುಶನ್ ಮಿಕ್ಕ ಪುಣ್ಣಿಯನೇ

ಸಂಪೂರ್ಣ ಅಜ್ಞಾನದಿಂದ ಶೈವ ಆಗಮವನ್ನು (ಶಿವನಿಂದ ನೀಡಿದ ಗ್ರಂಥ) ಆಧರಿಸಿ ತಮ್ಮ ವಾದವನ್ನು ಮಂಡಿಸುವವರು ಪಾಸುಪಥರು. ಅವರ ಕೀಳು ಅರ್ಥಗಳಿಂದ ಜಗತ್ತು ಕತ್ತಲೆಯಲ್ಲಿ ಮುಳುಗಿತು. ಲೌಕಿಕ ಜನರ ಅಂಧಕಾರದ ಅಜ್ಞಾನವನ್ನು ಹೋಗಲಾಡಿಸಲು, ರಾಮಾನುಜರು ತಮ್ಮ ವಿಶಿಷ್ಟವಾದ ಕರುಣೆಯನ್ನು ಹೆಚ್ಚಿಸಿದರು ಮತ್ತು ಶ್ರೀರಂಗನಾಥರು ಎಲ್ಲಾ ಆತ್ಮಗಳಿಗೆ ಅಧಿಪತಿ ಎಂದು ಕರುಣೆಯಿಂದ ಬಹಿರಂಗಪಡಿಸಿದರು. ಅವರು ಮಹಾನ್, ಧರ್ಮನಿಷ್ಠ ವ್ಯಕ್ತಿ

ತೊಂಬತ್ತೆರಡನೇ ಪಾಸುರಂ. ಎಂಪೆರುಮಾನಾರ್ ಅವರನ್ನು ಯಾವುದೇ ಕಾರಣವಿಲ್ಲದೆ ಸ್ವೀಕರಿಸಿದ್ದಾರೆ ಮತ್ತು ಅವರು ಕರುಣೆಯಿಂದ ತನ್ನ ಆಂತರಿಕ ಮತ್ತು ಬಾಹ್ಯ ಇಂದ್ರಿಯಗಳೆರಡಕ್ಕೂ ವಿಷಯವಾಗಿ ನಿಂತಿದ್ದಾರೆ ಎಂದು ಅರಿತುಕೊಂಡು, ಅವರು ಸಂತೋಷವನ್ನು ಅನುಭವಿಸುತ್ತಾರೆ ಮತ್ತು ಇದಕ್ಕೆ ಕಾರಣವೇನು ಎಂದು ಎಂಪೆರುಮಾನಾರ್ ಅವರನ್ನು ಕೇಳುತ್ತಾರೆ.

ಪುಣ್ಣಿಯನೋನ್ಬು ಪುರಿಂದುಂ ಇಲೇನ್ ಅಡಿ ಪೋಱ್ಱಿ ಶೆಯ್ಯುಂ

ನುಣ್ ಅರುಮ್ ಕೇಳ್ವಿ ನುವನ್ಱುಂ ಇಲೇನ್ ಸೆಮ್ಮೈ ನೂಲ್ ಪುಲವರ್ಕ್ಕು

ಎನ್ ಅರುಮ್ ಕೀರ್ತಿ ಇರಾಮಾನುಶ ಇನ್ಱು ನೀ ಪುಗುಂದು ಎನ್

ಕಣ್ಣುಳ್ಳುಂ  ನೆಂಜುಳ್ಳುಂ ನಿನ್ಱ ಇಕ್ಕಾರಣಂ ಕಟ್ಟುರಯೇ

 ಈ ಪ್ರಯೋಜನವನ್ನು ಪಡೆಯಲು ನಾನು ಯಾವುದೇ ಪುಣ್ಯ ಕಾರ್ಯವನ್ನು ಮಾಡಿಲ್ಲ. ನಿನ್ನ ದಿವ್ಯ ಪಾದಗಳನ್ನು ಪಡೆಯಲು ನಾನು ಯಾವುದೇ ತಪಸ್ಸನ್ನು [ಶಾಸ್ತ್ರಗಳನ್ನು ಕೇಳಲು] ಮಾಡಲು ಬಯಸಲಿಲ್ಲ. ಯಾವುದೇ ನಿರೀಕ್ಷೆಗಳಿಲ್ಲದ ಮತ್ತು ಶಾಸ್ತ್ರಗಳಿಗೆ ಸಮಾನವಾದ ಕವಿತೆಗಳನ್ನು ಹಾಡುವ ಪರಿಣಿತರೂ ಗ್ರಹಿಸಲು ಕಷ್ಟಕರವಾದ ಖ್ಯಾತಿಯನ್ನು ಹೊಂದಿರುವ ರಾಮಾನುಜ! ನನ್ನ ಬಾಹ್ಯ ಕಣ್ಣು ಮತ್ತು ಆಂತರಿಕ ಕಣ್ಣಿಗೆ (ಮನಸ್ಸಿಗೆ) ನೀವು ವಸ್ತುವಾಗಿರುವ ಕಾರಣವನ್ನು ನೀವು ಮಾತ್ರ ಬಹಿರಂಗಪಡಿಸಬೇಕು.

ತೊಂಬತ್ತಮೂರನೇ ಪಾಸುರಂ. ಎಂಪೆರುಮಾನಾರ್ ತನ್ನ ಸಲ್ಲಿಕೆಗೆ ಪ್ರತಿಕ್ರಿಯಿಸದ ಕಾರಣ, ರಾಮಾನುಜನು ಯಾರೂ ಕೇಳದೆ ಕುದ್ರುಷ್ಟಿ ತತ್ತ್ವಗಳನ್ನು ನಾಶಪಡಿಸಿದಂತೆಯೇ, ಅಮುಧನಾರರು ಕೇಳದೆಯೇ ಅವರು ತಮ್ಮ ಬಲವಾದ ಕರ್ಮಗಳನ್ನು (ಹಿಂದಿನ ಕರ್ಮಗಳನ್ನು) ಕಡಿದುಹಾಕಿದ್ದಾರೆ ಎಂದು ಸ್ವತಃ ಸ್ಪಷ್ಟೀಕರಣವನ್ನು ಪಡೆಯುತ್ತಾರೆ.  ಮತ್ತು ಎಂಪೆರುಮಾನಾರ್ ಅವರು ಏನೂ ಕಾರಣವಿಲ್ಲದೆ ಈ ಮೇಲಿನ ಕೆಲಸಗಳನ್ನು ಮಾಡುವವರು ಎಂದು ಹೇಳುತ್ತಾರೆ.

ಕಟ್ಟಪ್ ಪೊರುಳೈ ಮಱೈಪ್ಪೊರುಳ್ ಎನ್ಱು ಕಯವರ್ ಸೊಲ್ಲುಮ್

ಪೆಟ್ಟೈಕ್ ಕೆಡುಕ್ಕುಂ ಪಿರಾನ್ ಅಲ್ಲನೇ ಎನ್ ಪೆರು ವಿನೈಯಕ್

ಕಿಟ್ಟಿಕ್ ಕಿೞನ್ಗೋಡು ತನ್ ಅರುಳ್ ಎನ್ನುಂ ಒಳ್ ವಾಳ್ ಉರುವಿ

ವೆಟ್ಟಿಕ್ ಕಳೈಂದ ಇರಾಮಾನುಶನ್ ಎನ್ನುಂ ಮೆಯ್ತ್ ತವನೇ

ಶರಣಾದವರಲ್ಲಿ ನಾಯಕನಾದ ಎಂಪೆರುಮಾನಾರ್ ನನ್ನ ಬಳಿಗೆ ಬಂದು ನಾಶವಾಗದ ನನ್ನ ದೊಡ್ಡ ಪಾಪಗಳನ್ನು ಕಿತ್ತುಹಾಕಿದನು. ವೇಧಗಳ ಕೀಳು [ತಪ್ಪಾದ] ಅರ್ಥಗಳನ್ನು ನಿಜವಾದ ಅರ್ಥಗಳೆಂದು   ಬಹಿರಂಗಪಡಿಸಿದಾಗ ಕುದ್ರುಷ್ಟಿಗಳ ದಿಗ್ಭ್ರಮೆಗೊಳಿಸುವ ಹೇಳಿಕೆಗಳನ್ನು ನಿರ್ಣಾಮ  ಮಾಡಿದ ಮಹಾನ್ ದಾನವನು ಅಲ್ಲವೇ!     

ತೊಂಬತ್ತನಾಲ್ಕನೆಯ ಪಾಸುರಂ. ಎಂಪೆರುಮಾನಾರ್  ಕರುಣೆಯಿಂದ ಶರಣಾಗತಿಯಲ್ಲಿ ದೃಢವಾದ ಲಂಗರು ಹಾಕುವಿಕೆಯಿಂದ ಪ್ರಾರಂಭಿಸಿ ಮತ್ತು ಶ್ರೀವೈಕುಂಠದೊದಿಗೆ ಕೊನೆಗೊಳ್ಳುವ ಮೂಲಕ ತನ್ನನ್ನು ಸಾಧಿಸುವ ಎಲ್ಲರಿಗೂ ಕರುಣೆಯಿಂದ ಪ್ರಯೋಜನಗಳನ್ನು ನೀಡಿದರೂ, ಅಮುಧಾನಾರ್ ಎಂಪೆರುಮಾನಾರ್  ಅವರ ಮಂಗಳಕರ ಗುಣಗಳನ್ನು ಹೊರತುಪಡಿಸಿ ಬೇರೇನನ್ನೂ ಅಪೇಕ್ಷಿಸುವುದಿಲ್ಲ ಎಂದು ಹೇಳುತ್ತಾರೆ.

ತವಮ್ ತರುಂ ಸೆಲ್ವಂ ತಗವುಂ ತರುಂ ಸಲಿಯಾಪ್ ಪಿಱವಿಪ್

ಪವಂ ತರುಂ ತೀವಿನೈ ಪಾಱ್ಱಿತ್ ತರುಂ ಪರಂದಾಮಂ ಎನ್ನುಂ

ತಿವಮ್  ತರುಂ ತೀದಿಲ್ ಇರಾಮಾನುಶನ್ ತನ್ನೈಚ್ ಚಾರ್ನ್ದವರ್ಗಟ್ಕು

ಉವಂದು ಅರುಂದೇನ್ ಅವನ್ ಶೀರ್ ಅನ್ಱಿ ಯಾನ್ ಒನ್ಱುಂ ಉಳ್ ಮಗಿೞ್ನ್ದೇ

  ತನ್ನನ್ನು ಸಾಧಿಸುವವರಿಗೆ ಪ್ರಯೋಜನವನ್ನು ನೀಡದಿರುವ ಕೊರತೆಯನ್ನು ಹೊಂದಿರದ ಎಂಪೆರುಮಾನರ್, ತನ್ನನ್ನು ಸಾಧಿಸುವವರಿಗೆ ಶರಣಾಗುವ ಕ್ರಿಯೆಯಲ್ಲಿ ದೃಢವಾದ ನಂಬಿಕೆಯನ್ನು ನೀಡುತ್ತಾನೆ. ಅವನು ಭಕ್ತಿಯ ಸಂಪತ್ತನ್ನು ನೀಡುತ್ತಾನೆ, ಅದು ಪ್ರಾಪ್ತ್ಯಂ (ಪ್ರಯೋಜನ) ಅದರ ಅಂತಿಮ ಫಲಿತಾಂಶಕ್ಕೆ ಸೂಕ್ತವಾಗಿದೆ. ಅವರು ಸಂಸಾರದಲ್ಲಿ ಜನ್ಮಗಳನ್ನು ಸೃಷ್ಟಿಸುವ ಕೆಟ್ಟ ಕಾರ್ಯಗಳನ್ನು ಹೊಡೆದುರುಳಿಸುತ್ತಾರೆ, ಇದು ಎಂಪೆರುಮಾನ್ ಹೊರತುಪಡಿಸಿ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅವರು ಪರಂಧಾಮಂ ಎಂದೂ ಕರೆಯಲ್ಪಡುವ ಶ್ರೀವೈಕುಂಠವನ್ನು ಕೊಡುತ್ತಾರೆ. ಇವನ್ನೆಲ್ಲ ಕೊಟ್ಟರೂ ನನ್ನ ಮನಸ್ಸು  ಅವನ ಮಂಗಳಕರ ಗುಣಗಳನ್ನು ಬಿಟ್ಟು ಬೇರೇನನ್ನೂ ಆನಂದಿಸುವುದಿಲ್ಲ.

ತೊಂಬತ್ತೈದನೆಯ ಪಾಸುರಂ. ಎಂಪೆರುಮಾನಾರ್ ಅವರ ಜ್ಞಾನ, ಶಕ್ತಿ ಇತ್ಯಾದಿಗಳ ಬಗ್ಗೆ ಯೋಚಿಸಿ ಅವರು ಎಂಪೆರುಮಾನಾರ್ ಈ ಪ್ರಪಂಚದವರಲ್ಲ ಮತ್ತು ಸಂಸಾರದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರದ ನಿತ್ಯಸೂರಿಗಳಲ್ಲಿ ಒಬ್ಬರು ಈ ಜಗತ್ತಿನಲ್ಲಿ ಅವತರಿಸಿದ್ದಾರೆ ಎಂದು ಅವರು ಕರುಣೆಯಿಂದ ಹೇಳುತ್ತಾರೆ.

ಉಳ್ ನಿನ್ಱು ಉಯಿರ್ಗಳುಕ್ಕು ಉಱ್ಱವನೇ ಸೆಯ್ದು ಅವರ್ಕ್ಕು ಉಯವೇ

ಪಣ್ಣುಂ ಪರನುಮ್ ಪರಿವಿಲನಾಮ್ಬಡಿ ಪಲ್ ಉಯಿರ್ಕ್ಕುಂ   

ವಿಣ್ಣಿನ್ ತಲೈ ನಿನ್ಱು ವೀಡು ಅಳಿಪ್ಪಾನ್ ಎಮ್ ಇರಾಮಾನುಶನ್

ಮಣ್ಣಿನ್ ತಲತ್ತು ಉದಿತ್ತು ಉಯ್ಮಱೈ ನಾಲುಮ್ ವಳರ್ತ್ತನನೇ

ಎಂಪೆರುಮಾನ್ ಆತ್ಮಗಳನ್ನು ಪ್ರವೇಶಿಸುತ್ತಾನೆ ಮತ್ತು ಅವುಗಳನ್ನು ಮೇಲಕ್ಕೆತ್ತಲು ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ. ಆದರೆ ಎಂಪೆರುಮಾನಾರನ್ನು  ನೋಡಿದರೆ ಎಂಪೆರುಮಾನರಿಗೂ ಸಹ ಆತ್ಮಾಭಿಮಾನದ ಬಗ್ಗೆ ಅಷ್ಟೊಂದು ಪ್ರೀತಿ ಇಲ್ಲ ಎಂದು ಹೇಳಬಹುದು. ಏಕೆಂದರೆ ಎಂಪೆರುಮಾನಾರ್ , ನಮ್ಮ ನಾಥನ್ (ಪ್ರಭು) ಅಲೌಕಿಕ ಪ್ರದೇಶದಲ್ಲಿ ಶ್ರೀವೈಕುಂಠಂನ ಶ್ರೇಷ್ಠ ನಿವಾಸದಿಂದ, ಎಲ್ಲಾ ಆತ್ಮಗಳನ್ನು ಉದ್ಧರಿಸಲು ಮತ್ತು ಮೋಕ್ಷವನ್ನು ನೀಡುವುದಕ್ಕಾಗಿ ಬಂದವರು. ಇಲ್ಲಿರುವ ಯಾವ ದೋಷವೂ ತಟ್ಟದೆ ಭೂಮಿಯ ಮೇಲೆ ಅವತರಿಸಿದನು. ಎಲ್ಲರನ್ನು ಉದ್ಧಾರ ಮಾಡುವ ನಾಲ್ಕು ವೇದಗಳನ್ನು ಯಾವುದೇ ಕೊರತೆಯಿಲ್ಲದೆ ಎಲ್ಲರೂ ಉನ್ನತಿ ಹೊಂದುವಂತೆ ಪೋಷಿಸಿದರು.

ತೊಂಬತ್ತಾರನೆಯ ಪಾಸುರಂ. ಎಂಪೆರುಮಾನಾರ್  ಕರುಣೆಯಿಂದ ವೇದಾಂತಗಳಿಗೆ (ಉಪನಿಷತ್‌ಗಳಿಗೆ) ಅನುಗುಣವಾಗಿ ಎರಡು ಮಾರ್ಗಗಳನ್ನು ತೋರಿಸಿದ್ದಾರೆ, ಅವುಗಳೆಂದರೆ ಭಕ್ತಿ  ಮತ್ತು ಪ್ರಪತ್ತಿ (ಶರಣಾಗತಿಯ ಕ್ರಿಯೆ). ಈ ಎರಡರಲ್ಲಿ, ನಿಮ್ಮ ಮಾರ್ಗವು ಸುಲಭವಾಗಿ ಸಾಗಿಸುವ ಪ್ರಪತ್ತಿಯೇ? ಎಂಪೆರುಮಾನಾರ್ ಅವರ ವಾತ್ಸಲ್ಯದಲ್ಲಿ ಆಶ್ರಯ ಪಡೆದಿದ್ದೇನೆ ಎಂದು ಅಮುದನಾರ್  ಹೇಳುತ್ತಾರೆ.

ವಳರುಂ ಪಿಣಿ ಕೊಣ್ಡ ವಲ್ವಿನೈಯಾಲ್ ಮಿಕ್ಕ ನಲ್ವಿನೈಯಿಲ್

ಕಿಳರುಂ ತುಣಿವು ಕಿಡೈತ್ತಱಿಯಾದು ಮುಡೈತ್ತಲೈ ಊನ್

ತಳರುಂ ಅಳವುಂ ದರಿತ್ತುಂ ವಿೞುಂದುಂ ತನಿ ತಿರಿವೇಱ್ಕು

ಉಳರ್ ಎಮ್ ಇರೈಯವರ್ ಇರಾಮಾನುಶನ್ ತನ್ನೈ ಉಱ್ಱವರೇ

  ಅನಿಯಮಿತ ದುಃಖಗಳನ್ನು ನೀಡುವ ಎದ್ದುಕಾಣುವ ಕರ್ಮಗಳಿಂದ (ಹಿಂದಿನ ಕರ್ಮಗಳು) ಶರಣಾಗತಿಯ ಅತ್ಯಂತ ಶ್ರೇಷ್ಠ ಮಾರ್ಗದಲ್ಲಿ ಒಬ್ಬರು ಸುಲಭವಾಗಿ ಸಂಪೂರ್ಣ ನಂಬಿಕೆಯನ್ನು ಪಡೆಯುವುದಿಲ್ಲ. ದುರ್ಗಂಧದ ಭಂಡಾರವಾಗಿರುವ ಮತ್ತು ಮಾಂಸ ಇತ್ಯಾದಿಗಳಿಂದ ಕೂಡಿದ ಈ ದೇಹವು ಸನ್ನಿಹಿತವಾದ ಛಿದ್ರವಾಗುವ  ಮರಣದ ಸಮಯದಲ್ಲಿ , ಉತ್ತಮ ಸೂಚನೆಗಳ ಮೂಲಕ, ಪ್ರಾಪಂಚಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿದ್ದ ಮತ್ತು ಯಾವುದೇ ಆಧಾರವಿಲ್ಲದೆ ತಿರುಗಾಡುತ್ತಿದ್ದ ನನಗೆ , ಯಾರಿಗೆ ನಮ್ಮ ಸ್ವಾಮಿ ಎಂಪೆರುಮಾನಾರ್ ಆಶ್ರಯವಾಗಿದ್ದಾರೋ  ಅವರೇ  ನನಗೆ  ಬೆಂಬಲ.

ತೊಂಬತ್ತೇಳನೆಯ ಪಾಸುರಂ. ಎಂಪೆರುಮಾನಾರ್‌ಗೆ ಮಾತ್ರವಲ್ಲದೆ ಅವರ ಅನುಯಾಯಿಗಳಿಗೂ ಅಪೇಕ್ಷಿಸಲು ಕಾರಣವೇನು? ಅದೂ ಕೂಡ ಎಂಪೆರುಮಾನಾರ್ ಅವರ ಕರುಣೆಯಿಂದ ಬಂದಿದೆ ಎಂದು ಅಮುದನಾರ್  ಹೇಳುತ್ತಾರೆ.

ತನ್ನೈ ಉಱ್ಱು ಆಟ್ಚೆಯ್ಯುಂ ತನ್ಮೈಯಿನೋರ್  ಮನ್ನು ತಾಮರೈತ್ತಾಳ್

ತನ್ನೈ   ಉಱ್ಱು ಆಟ್ಚೆಯ್ಯ ಎನ್ನೈ ಉಱ್ಱಾನ್ ಇನ್ಱು ತನ್ ತಗವಲ್

ತನ್ನೈ ಉಱ್ಱಾರ್ ಅನ್ಱಿತ್ ತನ್ಮೈ ಉಱ್ಱಾರ್ ಇಲ್ಲೈ ಎನ್ಱು ಅರಿಂದು

ತನ್ನೈ ಉಱ್ಱಾರೈ ಇರಾಮುನಸನ್ ಗುಣಂ ಸಾಱ್ಱಿಡುಮೇ

ಎಂಪೆರುಮಾನಾರ್ ಅವರು ತಮ್ಮ ದಿವ್ಯ ಮನಸ್ಸಿನಲ್ಲಿ ಯೋಚಿಸಿದರು, ಬಂದು ತನ್ನನ್ನು ಸಾಧಿಸುವ ಜನರಿದ್ದರೂ, ತನ್ನನ್ನು ಪಡೆದವರನ್ನು ಸಾಧಿಸುವ ಮತ್ತು ಹೊಗಳುವವರು ಯಾರೂ ಇಲ್ಲ. ಹೀಗಾಗಿ, ಅವನು ನನ್ನನ್ನು ಅವನೊಂದಿಗೆ ಮಾತ್ರ ತೊಡಗಿಸಿಕೊಳ್ಳುವಂತೆ ಮಾಡಿದನು ಮತ್ತು ಇತರ ಎಲ್ಲ ಲೌಕಿಕ ಅನ್ವೇಷಣೆಗಳನ್ನು ಮರೆತುಬಿಡುತ್ತಾನೆ; ಆತನು ತನ್ನ ಸೇವಕರಾದವರ ಮಧುರವಾದ, ಪೂರಕವಾದ ದೈವಿಕ ಪಾದಗಳ ಹೊರತಾಗಿ ನನಗೆ ಬೇರೇನೂ ತಿಳಿಯದಂತೆ ಮಾಡಿದನು. ಅವರ ಕರುಣೆಯಿಂದಾಗಿ, ಅವರು ಇಂದು ನನ್ನನ್ನು ತಮ್ಮ  ಅಡಿಯಲ್ಲಿ ಸ್ವೀಕರಿಸಿದರು.

ತೊಂಬತ್ತೆಂಟನೆಯ ಪಾಸುರಂ. ಎಂಪೆರುಮಾನ್ ತನ್ನ ಕರ್ಮಗಳ ಆಧಾರದ ಮೇಲೆ ತನ್ನನ್ನು ಸ್ವರ್ಗ ಅಥವಾ ನರಕಕ್ಕೆ ಕಳುಹಿಸಬಹುದೆಂದು ಅಮುಧನಾರನು ತನ್ನ ದಿವ್ಯ ಮನಸ್ಸಿನಲ್ಲಿ ಭಾವಿಸಿದನು ಮತ್ತು ಅದರ ಬಗ್ಗೆ ಎಂಪೆರುಮಾನಾರನ್ನು   ಕೇಳಿದನು. ತನಗೆ ಶರಣಾದವರಿಗೆ ಎಂಪೆರುಮಾನಾರ್ ಹಾಗೆ ಮಾಡುವುದಿಲ್ಲ ಎಂದು ರಾಮಾನುಜರು ಭರವಸೆ ನೀಡುತ್ತಾರೆ ಮತ್ತು ಕಾತುರ ಬಿಡಲು  ಕೇಳಿಕೊಳ್ಳುತ್ತಾರೆ.

ಇಡುಮೇ ಇನಿಯ ಶುವರ್ಕ್ಕತ್ತಿಲ್ ಇನ್ನಂ ನರಗಲಿತ್ತುಚ್

ಚುಡುಮೇ ಅವಱ್ಱೈತ್ ತೊಡರ್ ತರು ತೊಲ್ಲೈ ಶುೞಲ್ ಪಿಱಪ್ಪಿಲ್

ನಡುಮೇ ಇನಿ ನ್ಂ ಇರಾಮಾನುಶನ್ ನಮ್ಮೈ  ನಮ್  ವಶತ್ತೇ

ವಿಡುಮೇ ಶರಣಂ  ಎನ್ಱಾಲ್ ಮನಮೇ ನೈಯಲ್ ಮೇವುದರ್ಕೇ

  ನಮ್ಮನ್ನು ಉದ್ಧಾರ ಮಾಡಲು ಬಂದಿರುವ ಎಂಪೆರುಮಾನ್‌ಗೆ “ನೀನು ನಮ್ಮ ಆಶ್ರಯ” ಎಂದು ಹೇಳಿದಾಗ, ಅವನು ನಮ್ಮನ್ನು ಲೌಕಿಕ ಅನ್ವೇಷಣೆಯಲ್ಲಿ ತೊಡಗಿರುವವರಿಗೆ ಮಧುರವಾಗಿ ತೋರುವ ಸ್ವರ್ಗದಲ್ಲಿ ಬಿಡುವನೇ? ಅವನ ಪಾದಗಳನ್ನು ಪಡೆದ ನಂತರವೂ ನರಕದಲ್ಲಿ ಹಿಂಸಿಸಲ್ಪಡಲು ನಮಗೆ ಅವಕಾಶ ನೀಡಬಹುದೇ? ಸ್ವರ್ಗ ಮತ್ತು ನರಕವನ್ನು ಅನುಸರಿಸುವ ಜನನ ಮತ್ತು ಮರಣಗಳ ಪುನರಾವರ್ತಿತ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಅವನು ನಮ್ಮನ್ನು ಬಿಡುತ್ತಾನೆಯೇ? ಅಥವಾ, ನಮ್ಮ ಇಚ್ಛೆಯಂತೆ ಬದುಕಲು ಆತನು ಅನುಮತಿಸುವನೇ? ಓ ಮನಸೇ! ನಾವು ಪಡೆಯುವ ಅಂತಿಮ ಪ್ರಯೋಜನದ ಬಗ್ಗೆ ದುಃಖಿಸಬೇಡಿ.

ತೊಂಬತ್ತೊಂಬತ್ತನೇ ಪಾಸುರಂ. ನಾವು ಬಾಹ್ಯರು (ವೇದಗಳನ್ನು ನಂಬದವರು) ಮತ್ತು ಕುದ್ರುಷ್ಟಿಗಳು (ವೇದಗಳನ್ನು ತಪ್ಪಾಗಿ ಅರ್ಥೈಸುವವರು) ಹೇರಳವಾಗಿ ಕಂಡುಬರುವ ಸ್ಥಳದಲ್ಲಿ ವಾಸಿಸುವುದರಿಂದ, ನಾವು ದಿಗ್ಭ್ರಮೆಗೊಳ್ಳುವ ಸಾಧ್ಯತೆ ಹೆಚ್ಚು ಇಲ್ಲವೇ? ರಾಮಾನುಜ ಬಂದ ನಂತರ ಈ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು ಎಂದು ಅಮುಧನಾರ್  ಹೇಳುತ್ತಾರೆ.

ತರ್ಕಚ್ ಚಮಣರುಂ ಸಾಕ್ಕಿಯಪ್ ಪೇಯ್ಗಳುಂ ತಾೞ್ ಸಡೈಯೋನ್

ಸೊಲ್ ಕಱ್ಱ ಸೋಂಬರುಂ ಸೂನಿಯ ವಾದರುಂ ನಾನ್ಮರೈಯುಂ

ನಿಱ್ಕಕ್ ಕುಱುಂಬು ಸೆಯ್ ನೀಶರುಂ ಮಾಣ್ದನರ್ ನೀಳ್ ನಿಲತ್ತೇ

ಪೊಱ್ಕಱ್ಪಗಂ ಎಮ್ ಇರಾಮಾನುಶ ಮುನಿ ಪೋಂದ  ಪಿನ್ನೇ

ವಾಗ್ವಾದಗಳ ಮೂಲಕ ತಮ್ಮ ತತ್ತ್ವಜ್ಞಾನವನ್ನು ಜಾಣ್ಮೆಯಿಂದ ನಡೆಸುವ ಶಮಣರು, ತಮ್ಮ ತತ್ತ್ವವನ್ನು ನೆಪಮಾತ್ರದಂತೆ ಹಿಡಿದಿಟ್ಟುಕೊಳ್ಳುವ ಬೌದ್ಧರು, ಜಟಾಧಾರಿ ರುದ್ರರು ಹೇಳಿದ ಶೈವಾಗಮವನ್ನು ಕಲಿತು ತಪಸ್ಸು ಮಾಡುವ ಕೀಳು ತಾಮಸ (ಅಜ್ಞಾನ ಮತ್ತು ಸೋಮಾರಿತನ) ಹೊಂದಿರುವ ಶೈವರು.   ಮತ್ತು ಎಂಪೆರುಮಾನ್ ಅವರ ಅನುಮತಿಯೊಂದಿಗೆ, ಮೋಹಶಾಸ್ತ್ರಗಳನ್ನು (ಇತರರನ್ನು ದಿಗ್ಭ್ರಮೆಗೊಳಿಸುವ ಕೀಳು ಗ್ರಂಥ), ಮಾಧ್ಯಮಿಕರು (ಬೌದ್ಧಗಳ ಒಂದು ಉಪಪಂಗಡ) ಶೂನ್ಯಮ್ (ಶೂನ್ಯತೆಯ) ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ, ಕುದೃಷ್ಟಿಗಳು, ಮೇಲಿನವುಗಳಿಗಿಂತ ಭಿನ್ನವಾಗಿ, ಆದರೆ ವೇದಗಳನ್ನು ಸ್ವೀಕರಿಸುತ್ತಾರೆ. ವೇದಗಳ ಅರ್ಥಗಳಿಗೆ ತಪ್ಪಾದ ವ್ಯಾಖ್ಯಾನ, ಎಂಪೆರುಮಾನಾರ್ ನಂತರ ನಾಶವಾಯಿತು, ಅವರು ಕಲ್ಪ  ವೃಕ್ಷದಂತಹ (ಇಷ್ಟವನ್ನು ಪೂರೈಸುವ ವೃಕ್ಷ) ಮತ್ತು ಈ ಜನರನ್ನು ನಮಗೆ ತೋರಿಸಿಕೊಟ್ಟವರು, ಈ ವಿಸ್ತಾರವಾದ ಜಗತ್ತಿನಲ್ಲಿ ಅವತರಿಸಿದ್ದಾರೆ.

ನೂರನೇ ಪಾಸುರಂ. ಅವರ ದಿವ್ಯ ಮನಸ್ಸು ಎಂಪೆರುಮಾನಾರ್  ಅವರ ದಿವ್ಯ ಪಾದಗಳ ಮಧುರವಾದ ಅನುಭವಕ್ಕೆ ಅಪೇಕ್ಷೆಯಿಂದ ತೊಡಗಿರುವುದನ್ನು ನೋಡಿದ ಅಮುದನಾರರು ಎಂಪೆರುಮಾನಾರ್‌ ತನಗೆ ಬೇರೆ ಯಾವುದನ್ನಾದರೂ ತೋರಿಸಿ ತನ್ನನ್ನು ದಿಗ್ಭ್ರಮೆಗೊಳಿಸಬೇಡಿ ಎಂದು ಕೇಳಿಕೊಳ್ಳುತ್ತಾರೆ.

ಪೋಂದದು ಎನ ನೆಂಜು ಎನ್ನುಂ ಪೊನ್ವಂದು ಉನದು ಅಡಿಪ್ ಪೋದಿಲ್ ಒಣ್ ಶೀರ್       

ಆಂ ತೆಳಿ ತೇನ್ ಉಂಡು ಅಮರ್ನ್ದಿಡ ವೇಣ್ಡಿಲ್ ನಿಂ ಪಾಲ್ ಅದುವೇ

ಇಂದಿಡ ವೇಣ್ಡುಂ ಇರಾಮಾನುಶ ಇದು ಅನ್ಱಿ ಒನ್ಱುಂ

ಮಾನ್ದ ಕಿಲ್ಲಾದು ಇನಿ ಮಱ್ಱು ಒನ್ಱು ಕಾಟ್ಟಿ ಮಯಕ್ಕಿಡಲೇ

  ಸುಂದರವಾದ ಜೀರುಂಡೆಯಂತಿರುವ ನನ್ನ ಮನಸ್ಸು, ಹೂವಿನಂತಿರುವ ನಿನ್ನ ದಿವ್ಯ ಪಾದಗಳ ತಂಪು ಮತ್ತು ಮೃದುತ್ವದ ದೋಷರಹಿತ ಮಧುವನ್ನು ಕುಡಿದು ಅಲ್ಲಿಯೇ ಶಾಶ್ವತವಾಗಿ ವಾಸಿಸಲು ನಿನ್ನ ಬಳಿಗೆ ಬಂದಿತು. ನೀವು ಅದನ್ನು ಕರುಣೆಯಿಂದ ಕೊಡಬೇಕು. ನನ್ನ ಮನಸ್ಸು ಬೇರೆ ಯಾವುದನ್ನೂ ಆನಂದಿಸುವುದಿಲ್ಲ. ನೀನು ನನಗೆ ಬೇರೇನನ್ನೂ ತೋರಿಸಿ ನನ್ನನ್ನು ದಿಗ್ಭ್ರಮೆಗೊಳಿಸಬೇಡ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ http://divyaprabandham.koyil.org/index.php/2020/05/ramanusa-nurrandhadhi-pasurams-91-100-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org                                             

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment