ತಿರುವಾಯ್ಮೊೞಿ – ಸರಳ ವಿವರಣೆ – 2.10 ಕಿಳರೊಳಿ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 1.2 ವೀಡುಮಿನ್

kallalagar-mulavar-uthsavar-azhwar

ಆೞ್ವಾರ್ ಎಂಪೆರುಮಾನಿಗೆ ಇಷ್ಟವಾದ ಕೈಂಕರ್ಯವನ್ನು ಮಾಡಲು ಬಯಸಿದರು. ಆಗ, ಎಂಪೆರುಮಾನ್ ‘ ತೆರ್ಕು ತಿರುಮಲೈ'( ದಕ್ಷಿಣದಲ್ಲಿರುವ ಪವಿತ್ರ ಬೆಟ್ಟ) ಎನ್ನುವ ತಿರುಮಾಲಿರುನ್ಜೋಲೈಯ ಬಗ್ಗೆ ಯೋಚಿಸಿ, ಅಲ್ಲಿ ಆೞ್ವಾರಿಗೆ ದರ್ಶನವನ್ನು ನೀಡಿ “ನಿನಗಾಗಿ ನಾನಿಲ್ಲಿ ಬಂದಿರುವೆನು.ಇಲ್ಲಿ ನೀನು ಎಲ್ಲಾ ರೀತಿಯ ಕೈಂಕರ್ಯಗಳನ್ನೂ ಮಾಡು” ಎಂದು ಹೇಳಿದರು. ಅದನ್ನು ಕೇಳಿ ಆೞ್ವಾರ್ ಅತ್ಯಂತ ತೃಪ್ತಿಗೊಂಡರು ಹಾಗು ಪವಿತ್ರವಾದ ತಿರುಮಾಲಿರುನ್ಜೋಲೈಯನ್ನು ಆನಂದವಾಗಿ ಅನುಭವಿಸಿದರು!

೧.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್, ಅತಿಶಯದ ಕಾಂತಿಯುಳ್ಳವನಾದ ಎಂಪೆರುಮಾನಿಗೆ ಬಹು ಪ್ರೀತಿಯಾದ ತಿರುಮಲೈಯೇ ನಮ್ಮ ಗುರಿಯಾಗಿರಬೇಕು ಎಂದು ಹೇಳುತ್ತಾರೆ.

ಕಿಳರೊಳಿ ಇಳಮೈ ಕೆಡುವದನ್ ಮುನ್ನಮ್
ವಳರೊಳಿ ಮಾಯೋನ್ ಮರುವಿಯ ಕೋಯಿಲ್
ವಳರಿಳಮ್ ಪೊೞಿಲ್ ಸೂೞ್ ಮಾಲಿರುನ್ಜೋಲೈ
ತಳರ್ವಿಲರಾಗಿಲ್ ಸಾರ್ವದು ಸದಿರೇ॥


ದುಃಖವೇ ಇಲ್ಲದ, ಹೆಚ್ಚುತ್ತಿರುವ ಜ್ಞಾನಕ್ಕೆ ಅರ್ಹತೆ ಹೊಂದಿರುವ, ಮೊದಮೊದಲು ಶುರುವಾದ ಯೌವನದಲ್ಲಿರುವ, ಇಲ್ಲಿ ಧೃಡವಾಗಿ ನೆಲೆಸಿರುವ, ಅದ್ಭುತವಾದ ಸಾಮರ್ಥ್ಯಗಳನ್ನು ಹೊಂದಿರುವ, ಕಾಂತಿಯು ಕೂಡುತ್ತಿರುವ ಆ ಸರ್ವೇಶ್ವರನ (ಭಕ್ತರಿಗಾಗಿ ಇಲ್ಲಿ ಬಂದ ನಂತರ ಅವನ ಕಾಂತಿ ಹೆಚ್ಚಾಗುತ್ತಿದೆ) ವಾಸ ಸ್ಥಳವಾದ, ಬೆಳೆದಿದ್ದರೂ ಯೌವನದಿಂದ ಕೂಡಿರುವಂತಹ ವನಗಳಿಂದ ಆವರಿಸಲ್ಪಟ್ಟಿರುವುದರಂದ ‘ತಿರುಮಾಲಿರುನ್ಜೋಲೈ’ ಎಂದು ಹೆಸರು ಪಡೆದಿರುವ ಅಂತಹ ತಿರುಮಲೈಯನ್ನು ಸೇರುವುದೇ ಅತ್ಯುತ್ತಮ!

೨.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್, ಅೞಗರ್ ಇರುವ ತಿರುಮಲೈ(ಪವಿತ್ರವಾದ ಬೆಟ್ಟ) ದಿವ್ಯ ದೇಶವನ್ನು ಆನಂದದಿಂದ ಅನುಭವಿಸುವುದೇ ನಮ್ಮ ಅಂತಿಮ ಗುರಿಯಾಗಿರಬೇಕು ಎಂದು ಹೇಳುತ್ತಾರೆ.

ಸದಿರಿಳ ಮಡವಾರ್ ತಾೞ್ಚಿಯೈ ಮದಿಯಾದು
ಅದಿರ್ಕುರಲ್ ಸಂಗತ್ತು ಅೞಗರ್ ತಮ್ ಕೋಯಿಲ್
ಮದಿ ತವೞ್ ಕುಡುಮಿ ಮಾಲಿರುನ್ಜೋಲೈ
ಪದಿ ಅದು ಏತ್ತಿ ಎೞುವದು ಪಯನೇ॥


ಬುದ್ಧಿವಂತರಾದ ಯುವತಿಯರು ಸಮ್ಮೋಹಿಸಲು ಪ್ರಯೋಗಿಸುವ ವಾರ್ತೆಗಳಿಗೆ ಮತ್ತು ಕ್ರಿಯೆಗಳಿಗೆ ಲಗತ್ತಿಸುವುದನ್ನು ಬಿಟ್ಟು , ಪ್ರಸಿದ್ಧವಾಗಿರುವ ತಿರುಮಾಲಿರುನ್ಜೋಲೈಯನ್ನು ಪ್ರಶಂಸಿಸುವುದನ್ನೇ ಗುರಿಯಾಗಿ ಪಾಲಿಸಿ, ಉನ್ನತಿ ಪಡೆಯಬೇಕು. ಚಂದ್ರನು ಮುಟ್ಟುವಂತೆ ಎತ್ತರವಾದ ಶಿಖರಗಳನ್ನು ಹೊಂದಿರುವ, ದೈವಿಕ ಮಲೆ ಪ್ರದೇಶವಾದ ಈ ತಿರುಮಾಲಿರುನ್ಜೋಲೈ ಅೞಗರ್ ಎಂಪೆರುಮಾನಿನ ವಾಸಸ್ಥಳ. ಅೞಗರ್ ಎಂಪೆರುಮಾನಿನ ಮೀರದ ಸೌಂದರ್ಯಕ್ಕೆ ಜೊತೆಗೂಡಿ ಆನಂದದಿಂದ ಬಾರಿಸುವ ಶ್ರೀ ಪಾಂಚಜನ್ಯವೇ ಕಾರಣ.


೩.ಪಾಸುರಮ್: ಈ ಪಾಸುರವನ್ನು ಆೞ್ವಾರ್ ತನ್ನ ಮನಸ್ಸು/ಹೃದಯಕ್ಕೆ ಹೇಳುತ್ತಾರೆ. ಈ ಪಾಸುರದಲ್ಲಿ ಆೞ್ವಾರ್, ಉದಾರವಾಗಿರುವ ಎಂಪೆರುಮಾನ್ ವಾಸಿಸುವ ಸ್ಥಳವಾದ ತಿರುಮಲೈಯನ್ನು ಬಯಸುವುದೇ ನಮ್ಮ ಗುರಿಯಾಗಿರಬೇಕು ಎಂದು ಹೇಳುತ್ತಾರೆ.

ಪಯನಲ್ಲ ಸೈದು ಪಯನಿಲ್ಲೈ ನೆಂಜೇ
ಪುಯಲ್ ಮೞೈ ವಣ್ಣರ್ ಪುರಿಂದುರೈ ಕೋಯಿಲ್
ಮಯಲ್ ಮಿಗು ಪೊೞಿಲ್ ಸೂೞ್ ಮಾಲಿರುನ್ಜೋಲೈ
ಅಯನ್ ಮಲೈ ಅಡೈವದು ಅದು ಕರುಮಮೇ॥

ಓ ಹೃದಯವೇ! ಉಪಯೋಗವಿಲ್ಲದ ಕಾರ್ಯಗಳನ್ನು ಮಾಡಿ ಏನೂ ಪ್ರಯೋಜನವಿಲ್ಲ.
ಹೇಗೆ ಕರಿ ಮೋಡಗಳು ನೀರಿನ ಹನಿಗಳನ್ನು ಹೊತ್ತು ( ತಾಳಿಕೊಂಡು) ಭೂಮಿ ಮತ್ತು ಸಮುದ್ರ, ಎರಡಕ್ಕೂ ತಾರತಮ್ಯ(ಭೇದ) ವಿಲ್ಲದೆ ಮಳೆ ಸುರಿಸುತ್ತದೆಯೋ, ಆ ಕರಿ ಮೋಡದಂತೆ ಇರುವವನು ಎಂಪೆರುಮಾನ್.
ಆಕರ್ಷಿಸುವ ಸುಂದರವಾದ ವನಗಳಿಂದ ಆವರಿಸಲ್ಪಟ್ಟಿರುವ ವಾಸಸ್ಥಳ ತಿರುಮಾಲಿರುನ್ಜೋಲೈಯಲ್ಲಿ ಸ್ನೇಹಪೂರ್ವಕವಾಗಿ, ನಿರಂತರವಾಗಿ ನೆಲೆಸಿದ್ದಾನೆ ಎಂಪೆರುಮಾನ್. ಅಂತಹ ತಿರುಮಲೈಯ ಸಮೀಪದಲ್ಲಿರುವ ಮಲೆಗಳನ್ನು ತಲುಪುವುದೇ ಜೀವಾತ್ಮರ ನೈಸರ್ಗಿಕ ಕಾರ್ಯವಾಗಿರಬೇಕು!

೪.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ರಕ್ಷಕನ ( ಕಾಪಾಡುವವನ) ವಾಸಸ್ಥಳವಾದ, ಬೃಹತ್ತಾದ ವನಗಳಿಂದ ಆವರಿಸಲ್ಪಟ್ಟಿರುವ ತಿರುಮಾಲಿರುನ್ಜೋಲೈಯನ್ನು ಪಡೆಯುವುದೇ ಜೀವಾತ್ಮರಿಗೆ ಸೂಕ್ತವಾದ ಕಾರ್ಯ ಎಂದು ಹೇಳುತ್ತಾರೆ.

ಕರುಮವನ್ ಪಾಸಮ್ ಕೞಿತ್ತು ಉೞನ್ರುಯ್ಯವೇ
ಪೆರುಮಲೈ ಎಡುತ್ತಾನ್ ಪೀಡುಡೈ ಕೋಯಿಲ್
ವರುಮೞೈ ತವೞುಮ್ ಮಾಲಿರುನ್ಜೋಲೈ
ತಿರುಮಲೈ ಅದುವೇ ಅಡೈವದು ತಿಱಮೇ॥


ಜೀವಾತ್ಮರನ್ನು ಗಟ್ಟಿಯಾಗಿ ಬಂಧಿಸಿರುವ, ಬಿಡಿಸಿಕೊಳ್ಳಲು ಕಷ್ಟವಾಗಿರುವ ಕರ್ಮಗಳನ್ನು ಅಳಿಸಿ, ನಮ್ಮ ಕೈಂಕರ್ಯಗಳನ್ನು ಸ್ವೀಕರಿಸಲು, ಗೋವರ್ಧನ ಬೆಟ್ಟವನ್ನು ಎತ್ತಿ ಹಸುಗಳನ್ನು ಮೇಯಿಸುವ ಹುಡುಗರು ಮತ್ತು ಹುಡುಗಿಯರನ್ನು ರಕ್ಷಿಸಿದ ಎಂಪೆರುಮಾನ್ ಅತ್ಯಂತವಾಗಿ ಪ್ರಕಾಶಿಸುತ್ತಾ ನಿರಂತರವಾಗಿ ಆಕಾಶದಲ್ಲಿ ತೇಲುತ್ತಿರುವ ಮೋಡಗಳು ಮುಟ್ಟುವಂತಿರುವ ಎತ್ತರವಾದ ಮತ್ತು ಬೃಹತ್ತಾದ ವನಗಳನ್ನು ಹೊಂದಿರುವ ದೈವಿಕ ವಾಸಸ್ಥಳವಾದ ತಿರುಮಾಲಿರುನ್ಜೋಲೈಯಲ್ಲಿ ವಾಸಿಸುತ್ತಿದ್ದಾನೆ. ಅಂತಹ ತಿರುಮಲೈಯನ್ನು ಸೇರುವುದೇ ನಮ್ಮೆಲ್ಲರ ಉತ್ತಮವಾದ ಕಾರ್ಯ!

೫.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್, ಎಲ್ಲರನ್ನು ರಕ್ಷಿಸಲು ದೈವಿಕ ಚಕ್ಕರವನ್ನು ಹಿಡಿದುಕೊಂಡಿರುವವನ ವಾಸಸ್ಥಳವಾದ ತಿರುಮಲೈಯ ಸಮೀಪದಲ್ಲಿರುವ ಬೆಟ್ಟವನ್ನು ಸೇರುವುದೇ ಅತ್ಯುತ್ತಮವಾದ ಉಪಾಯ ಎಂದು ಹೇಳುತ್ತಾರೆ

ತಿಱಮುಡೈ ವಲತ್ತಾಲ್ ತೀವಿನೈ ಪೆರುಕ್ಕಾದು
ಮುಯಲ್ ಆೞಿ ಪಡೈಯವನ್ ಕೋಯಿಲ್
ಮಱುವಿಲ್ ವಣ್ ಸುನೈ ಸೂೞ್ ಮಾಲಿರುನ್ಜೋಲೈ
ಪುಱ ಮಲೈ ಸಾರ ಪೋವದು ಕಿಱಿಯೇ

ಪಾಪಗಳನ್ನು (ಶಾಸ್ತ್ರಕ್ಕೆ ವಿರುದ್ಧವಾಗಿ ಮಾಡುವ ಕಾರ್ಯಗಳು) ಹೆಚ್ಚಿಸುತ್ತಾ ಹೋಗುವ ಬದಲು, ಎಲ್ಲರಿಗೂ ಸಹಾಯಕನಾಗಿರುವ, ನಿಷ್ಕಳಂಕವಾದ, ಕೊಳಗಳಿಂದ ತುಂಬಿರುವ ಮಾಲಿರುನ್ಜೋಲೈಯ ಹತ್ತಿರ ಇರುವ ಬೆಟ್ಟಗಳನ್ನು ನಮಗಿರುವ ವಿವಿಧ ಸಾಮರ್ಥ್ಯಗಳಿಂದ , ಸಮೀಪಿಸುವುದೇ ಅತ್ಯುತ್ತಮವಾದ ಉಪಾಯ! ಅಂತಹ ತಿರುಮಲೈ , ನಮ್ಮನ್ನು ರಕ್ಷಿಸಲು ದೈವಿಕ ಚಕ್ರಾಯುಧವನ್ನು ಹಿಡಿದುಕೊಂಡಿರುವ ಅೞಗರ್ ಎಂಪೆರುಮಾನಿನ ದೈವಿಕ ವಾಸಸ್ಥಳ!

೬.ಪಾಸುರಮ್:ಈ ಪಾಸುರದಲ್ಲಿ ಆೞ್ವಾರ್ ತನ್ನ ಭಕ್ತರನ್ನು ಅತ್ಯಂತವಾಗಿ ಪ್ರೀತಿಸುವ ಎಂಪೆರುಮಾನಿನ ವಾಸಸ್ಥಳವಾದ ತಿರುಮಲೈಗೆ ತಲುಪಿಸುವ ಮಾರ್ಗವನ್ನು ಧ್ಯಾನಿಸುವುದೇ ಅತಿ ಶ್ರೇಷ್ಠವಾದದ್ದು ಎಂದು ಹೇಳುತ್ತಾರೆ.

ಕಿಱಿಯೆನ ನಿನೈಮಿನ್ ಕೀೞ್ಮೈ ಸೈಯ್ಯಾದೆ
ಉಱಿಯಮರ್ ವೆಣ್ಣೈ ಉಂಡವನ್ ಕೋಯಿಲ್
ಮಱಿಯೊಡು ಪಿಣೈಸೇರ್ ಮಾಲಿರುನ್ಜೋಲೈ
ನೆಱಿಪಡ ಅದುವೇ ನಿನೈವದು ನಲಮೇ!

ಕೆಳಮಟ್ಟಾದ ಕಾರ್ಯಗಳಲ್ಲಿ ( ಜಗತ್ತಿನ ಸುಖ ಭೋಗಗಳು) ಒಳಗೊಳ್ಳುವುದಕ್ಕೆ ಬದಲು, ಹೆಣ್ಣು ಜಿಂಕೆಗಳು ತಮ್ಮ ಕರುಗಳೊಂದಿಗೆ ಕೂಡಿರುವ ತಿರುಮಾಲಿರುನ್ಜೋಲೈಯ ಮಾರ್ಗವನ್ನು ಪ್ರವೇಶಿಸಿ, ಧ್ಯಾನಿಸುವುದನ್ನೇ ಅತ್ಯುತ್ತಮವಾದ ಉಪಾಯವೆಂದು ಪರಿಗಣಿಸುವುದೇ ನಮ್ಮ ಗುರಿಯಾಗಿರಬೇಕು (ಏಕೆಂದರೆ) , ಹಗ್ಗದಿಂದ ಕಟ್ಟಿ ನೇತಾಡಿಸಿರುವ ಮಡಿಕೆಗಳಲ್ಲಿ ಸುರಕ್ಷಿತವಾಗಿ ಶೇಖರಿಸಿ ಇಟ್ಟಿದ್ದ ಬೆಣ್ಣೆಯನ್ನು ಉಂಡ ಕೃಷ್ಣನ ದೇವಸ್ಥಾನವಿದು!

೭.ಪಾಸುರಮ್:ಈ ಪಾಸುರದಲ್ಲಿ ಆೞ್ವಾರ್, ಪ್ರಳಯ ಕಾಲದಲ್ಲಿ ನಮಗೆ ಸಹಾಯಕನಾಗಿರುವ ಎಂಪೆರುಮಾನಿನ ವಾಸಸ್ಥಳವಾದ ತಿರುಮಲೈಯನ್ನೇ ಬಯಸಿ, ಅನುಕೂಲವಾಗಿರುವುದೇ ಅತ್ಯುತ್ತಮ!

ನಲಮೆನ ನಿನೈಮಿನ್ ನರಗೞುನ್ದಾದೇ
ನಿಲಮುನಮ್ ಇಡನ್ದಾನ್ ನೀಡುರೈ ಕೋಯಿಲ್
ಮಲಮರು ಮದಿಸೇರ್ ಮಾಲಿರುನ್ಜೋಲೈ
ವಲಮುಱೈ ಏಯ್ದಿ ಮರುವುದಲ್ ವಲಮೇ!

ಸಂಸಾರ ಎನ್ನುವ ನರಕದಲ್ಲಿ ಮುಳುಗುವುದಕ್ಕೆ ಬದಲು, ಚೆನ್ನಾಗಿ ಇರಿಸಲಾದ ನಿಷ್ಕಳಂಕವಾದ ( ತಿರುಮಲೈಯ ಶಿಖರಗಳನ್ನು ಮುಟ್ಟಿ ಉಜ್ಜಿಕೊಂಡಿರುವ ಕಾರಣ ನಿಷ್ಕಳಂಕವಾದ ಚಂದ್ರನು) ಚಂದ್ರನನ್ನು ಹೊಂದಿರುವ, ಪ್ರಳಯ( ಸರ್ವ ನಾಶ) ಕಾಲದಲ್ಲಿ ಭೂಮಿಯನ್ನು ಎತ್ತಿದ ವರಾಹ ಪೆರುಮಾಳಾದ ಎಂಪೆರುಮಾನಿನ ನಿರಂತರ ವಾಸಸ್ಥಳವಾದ ತಿರುಮಲೈಯಲ್ಲಿ ಅವನೊಂದಿಗೆ ನಮಗಿರುವ ಶೇಷ /ಸೇವಕ ಹಾಗು ಶೇಷಿ /ಯಜಮಾನ ಸಂಬಂಧದ ಅನುಕೂಲವಾದ ಅಂಶಗಳನ್ನು ಪಡೆಯಲು ಮತಿಯಲ್ಲಿ( ಬುದ್ಧಿಯಲ್ಲಿ) ನಾವು ಇಟ್ಟುಕೊಳ್ಳಬೇಕು!

೮.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ತನ್ನ ಭಕ್ತರಿಗೆ ಅನುಕೂಲವಾಗಿರುವ ಕೃಷ್ಣನ ವಾಸಸ್ಥಳವಾದ ತಿರುಮಲೈಗೆ ನಿರಂತರವಾಗಿ, ಅನುಕೂಲವಾಗಿ ನಡೆದುಕೊಳ್ಳುವುದೇ ಆತ್ಮಕ್ಕೆ ನೈಸರ್ಗಿಕವಾಗಿ ತಕ್ಕದ್ದು ಎಂದು ಹೇಳುತ್ತಾರೆ.

ವಲಮ್ ಸೈದು ವೈಗಲ್ ವಲಮ್ ಕೞಿಯಾದೇ
ವಲಮ್ ಸೆಯ್ಯುಮ್ ಆಯ ಮಾಯವನ್ ಕೋಯಿಲ್
ವಲಮ್ ಸೆಯ್ಯುಮ್ ವಾನೋರ್ ಮಾಲಿರುನ್ಜೋಲೈ
ವಲಮ್ ಸೈದು ನಾಳುಮ್ ಮರುವುದಲ್ ವೞಕ್ಕೇ

ಭಕ್ತರ ಮೇಲೆ ಅವಲಂಬಿತನಾಗಿದ್ದುಕೊಂಡು ಅವರಿಗೆ ಅನುಕೂಲವಾಗಿರುವ ಶ್ರೀ ಕೃಷ್ಣನ ದೇವಸ್ಥಾನದ ಕ್ಷೇತ್ರವಾಗಿದೆ ತಿರುಮಲೈ.
ಪರಮಪದದಲ್ಲಿ ವಾಸಿಸುವ ನಿತ್ಯಸೂರಿಯರು ಅಂತಹ ತಿರುಮಲೈನಲ್ಲಿ ಕೈಂಕರ್ಯವನ್ನು ಮಾಡುತ್ತಾರೆ.
ಜೀವಾತ್ಮರು ಶಕ್ತಿಯನ್ನು ಪಡೆದು,( ಇಂದ್ರಿಯಗಳಿಗಾಗಿ) ಒಳ್ಳೆಯ, ಅನುಕೂಲವಾದ ಕಾರ್ಯಗಳನ್ನು (ತಿರುಮಲೈನಲ್ಲಿ ಪ್ರದಕ್ಷಿಣೆ ಇತ್ಯಾದಿ) ಮಾಡಿಕೊಂಡು, ಬೇರೆ ಲೌಕಿಕ ವಿಷಯಗಳಲ್ಲಿ ಒಳಗೊಳ್ಳದೆ ಸದಾ ಎಂದೆಂದಿಗೂ ಎಂಪೆರುಮಾನೊಂದಿಗೆ ಇರಬೇಕು!


೯.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಪೂತನೆಯನ್ನು ಸಂಹಾರ ಮಾಡಿದ ಎಂಪೆರುಮಾನಿನ ದೈವಿಕ ವಾಸಸ್ಥಳವನ್ನು ಪೂಜಿಸಬೇಕೆಂದು ಮನಸ್ಸಿನಲ್ಲಿ ಧೃಡವಾದ ವಿಶ್ವಾಸದೊಂದಿಗೆ ವಿಚಾರ ಮಾಡುವುದೇ ವಿಜಯಕ್ಕೆ ಕಾರಣ ಎಂದು ಹೇಳುತ್ತಾರೆ.

ವೞಕ್ಕೆನ ನಿನೈಮಿನ್ ವಲ್ವಿನೈ ಮೂೞ್ಗಾದು
ಅೞಕ್ಕೊಡಿ ಅಟ್ಟಾನ್ ಅಮರ್ ಪೆರುಮ್ ಕೋಯಿಲ್
ಮೞಕ್ಕಳಿಟ್ಟ್ರಿನಮ್ ಸೇರ್ ಮಾಲಿರುನ್ಜೋಲೈ
ತೊೞಕ್ಕ್ ಕರುದುವದೇ ತುಣಿವದು ಸೂದೇ!

ಶಕ್ತಿಯುತವಾದ ಪಾಪಗಳಲ್ಲಿ ಮುಳುಗುವುದಕ್ಕೆ ಬದಲಾಗಿ, ರಾಕ್ಷಸ ಹುಡುಗಿ ಪೂತನಯನ್ನು ಸಂಹಾರ ಮಾಡಿದ ಎಂಪೆರುಮಾನ್ ಮಾಲಿರುನ್ಜೋಲೈಯಲ್ಲಿ ದೈವಿಕ ಮತ್ತು ಬೃಹತ್ತಾದ ದೇವಸ್ಥಾನದಲ್ಲಿ ಚನ್ನಾಗಿ ನೆಲೆಸಿದ್ದಾನೆ.ಆನೆ ಮರಿಗಳ ಗುಂಪು ಅಂತಹ ತಿರುಮಾಲಿರುನ್ಜೋಲೈಯನ್ನು ತಲುಪುತ್ತವೆ.ಸಂಸಾರವನ್ನು ಗೆಲ್ಲಲು ಅಂತಹ ತಿರುಮಾಲಿರುನ್ಜೋಲೈಯನ್ನು ಧೃಡವಾದ ,ಸಂಪೂರ್ಣ ವಿಶ್ವಾಸದೊಂದಿಗೆ ಪೂಜಿಸುವುದೇ ಜೀವಾತ್ಮ ಸ್ವರೂಪಕ್ಕೆ ತಕ್ಕದ್ದು ಎಂದು ತಿಳಿದುಕೋ.

೧೦.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ವೈದಿಕ ಜ್ಞಾನವನ್ನು ( ವೇದಗಳ ಬಗ್ಗೆ ಜ್ಞಾನ) ಪ್ರಚಾರ ಮಾಡಲು ಪ್ರಾರಂಭಿಸಿದ ಎಂಪೆರುಮಾನಿನ ವಾಸಸ್ಥಳವಾದ ತಿರುಮಲೈಯನ್ನು ಪ್ರವೇಶಿಸುವುದೇ ನಮ್ಮ ಗುರಿ ಎಂದು ಹೇಳಿ, ಪೂರ್ತಿ ಮಾಡುತ್ತಾರೆ.

ಸೂದೆನ್ರು ಕಳವುಮ್ ಸೂದುಮ್ ಸೈಯ್ಯಾದೆ
ವೇದಮುನ್ ವಿರಿತ್ತಾನ್ ವಿರುಮ್ಬಿಯ ಕೋಯಿಲ್
ಮಾದುರು ಮಯಿಲ್ ಸೇರ್ ಮಾಲಿರುನ್ಜೋಲೈ
ಪೋದವಿೞ್ ಮಲೈಯೇ ಪುಗುವದು ಪೊರುಳೇ


ಜೀವಿಗಳಿಗೆ, ಪಶುಗಳಿಗೆ ತಿಳಿದೋ ತಿಳಿಯದೆಯೋ ಅವರ ಸ್ವತ್ತನ್ನು ಕದ್ದು, ಐಶ್ವರ್ಯ ಪಡೆಯುವುದು ಸರಳವಾದ ದಾರಿ. ಅಂತಹ ಕೀಳಾಗಿರುವ ಕಾರ್ಯಗಳಲ್ಲಿ ಒಳಗೊಳ್ಳುವ ಬದಲು, ತಿರುಮಾಲಿರುನ್ಜೋಲೈಯನ್ನು ಪ್ರವೇಶಿಸುವುದೇ ನಮ್ಮ ಗುರಿಯಾಗಿ ಪರಿಗಣಿಸಬೇಕು.
ವೇದದ ತತ್ವಗಳನ್ನು ಭಗವದ್ ಗೀತೆ ಇತ್ಯಾದಿ ಮೂಲಕ ಉಪದೇಶಿಸಿದ ಎಂಪೆರುಮಾನಿನ ಆನಂನಮಯವಾದ ವಾಸಸ್ಥಳ ತಿರುಮಾಲಿರುನ್ಜೋಲೈ. ತಮ್ಮ ಜೋಡಿಗಳೊಂದಿಗೆ ಕೂಡಿರುವ, ಮೃದುವಾದ ನವಿಲುಗಳು ಇರುವ, ಎತ್ತರವಾದ, ಬೃಹತ್ತಾದ ವನಗಳಿರುವ ಸ್ಥಳ ತಿರುಮಾಲಿರುನ್ಜೋಲೈ!

೧೧.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ತಿರುವಾಯ್ಮೊೞಿಯ ಈ ಹತ್ತು ಪಾಸುರಗಳೇ ಇವನ್ನು ಕಲಿತವರನ್ನು ಸಂಸಾರದ ಸಂಬಂಧದಿಂದ ಬಿಡುಗಡೆ ಮಾಡಿ ನಿರಂತರವಾಗಿ ಎಂಪೆರುಮಾನನ್ನು ಸೇರುವಂತೆ ಮಾಡುತ್ತದೆ ಎಂದು ಹೇಳುತ್ತಾರೆ.

ಪೊರುಳ್ ಎನ್ರು ಇವ್ವುಲಗಮ್ ಪಡೈತ್ತವನ್ ಪುಗೞ್ ಮೇಲ್
ಮರುಳಿಲ್ ವಣ್ ಕುರುಗೂರ್ ವಣ್ ಶಠಕೋಪನ್
ತೆರುಳ್ ಕೊಳ್ಳ ಚೊನ್ನ ಓರಾಯಿರತ್ತುಳ್ ಇಪ್ಪತ್ತು
ಅರುಳ್ ಉಡಯವನ್ ತಾಳ್ ಅಣೈವಿಕ್ಕುಮ್ ಮುಡಿತ್ತೇ!

ಈ ಜಗತ್ತನ್ನು ಸೃಷ್ಟಿಸಿ ಭಕ್ತರಲ್ಲಿ ಸತ್ಸಂಗವನ್ನು ಫಲಿತಾಂಶವಾಗಿ ಉಂಟು ಮಾಡುವ ಎಂಪೆರುಮಾನಿನ ದಯಾ, ಕ್ಷಮಾ ಔದಾರ್ಯ ಇತ್ಯಾದಿ ಕಲ್ಯಾಣ ಗುಣಗಳನ್ನು ವೈಭವೀಕರಿಸುವ ವಿಶಿಷ್ಟವಾದ ಸಾವಿರ ಪಾಸುರಗಳಲ್ಲಿ ಒಂದಾದ ಈ ಪದಿಗೆಯಲ್ಲಿ (decad) ಸುಂದರವಾದ, ವಿಶಿಷ್ಟವಾದ ಆೞ್ವಾರ್ತಿರುನಗರಿಯ ನಾಯಕರಾದ ಉದಾರವಾದ ನಮ್ಮಾೞ್ವಾರ್ ಅತ್ಯಂತ ಕರುಣೆಯಿಂದ ಜೀವಾತ್ಮರಿಗೆ ಸತ್ಯವಾದ ಜ್ಞಾನವನ್ನು ಉಪದೇಶಿಸುತ್ತಾರೆ. ಇಂತಹ ಪದಿಗವೇ( ೧೦ ಪಾಸುರಗಳ ಒಂದು ಜೊತೆ decad) ಸಂಸಾರವನ್ನು(ವಸ್ತು ಲೋಕದ ಬಂಧನಗಳನ್ನು) ನಿರ್ಮೂಲ ಮಾಡಿ ಕರುಣಾಮಯನಾದ ಸುಂದರನಾದ ಆ ಎಂಪೆರುಮಾನಿನ ಪಾದಕಮಲಗಳನ್ನು ಸೇರುವಂತೆ ಮಾಡುತ್ತದೆ!

ಮೂಲ: https://divyaprabandham.koyil.org/index.php/2020/05/thiruvaimozhi-2-10-simple/

ಅಡಿಯೇನ್ ರೂಪ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org