ಸ್ತೋತ್ರ ರತ್ನ – ಸರಳ ವಿವರಣೆ ಶ್ಲೋಕ 31-40

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

<< ಶ್ಲೋಕ 21-30

ಶ್ಲೋಕ-31 – ಈ ಶ್ಲೋಕದಲ್ಲಿ ಆಳಂದಾರ್ “ಪಡಿಕ್ಕಳವಾಗ ನಿಮಿರ್ತ್ತ ನಿನ್ ಪಾದಪನ್ಗಯಮೇ ತಲೈಕ್ಕಣಿಯಾಯ್” (ತಿರುವಾಯ್ಮೊೞಿ 9.2.2 ಜಗತ್ತಿನ ಪರಿಮಾಣದವರೆಗು ಏರಿದ ನಿನ್ನ ಪಾದಪಂಕಜವು ನನ್ನ ಶಿರಸ್ಸನ್ನು ಅಲಂಕರಿಸಲಿ ) ಹಾಗು ತಿರುವಾಯ್ಮೊೞಿ 4.3.6 “ಕೋಲಮಾಮ್ ಎನ್ ಸೆನ್ನಿಕ್ಕು ಉನ್ ಕಮಲಮ್ ಅನ್ನ ಕುರೈ ಕೞಲೇ” ( ತಿರುವಾಯ್ಮೊೞಿ 4.3.6 ನಿನ್ನ ತವೆರೆಗೆ ಸದೃಶವಾದ ದಿವ್ಯ ಪಾದಗಳು ನನ್ನ ಶಿರಸ್ಸಿಗೆ ಆಲಂಕಾರವಾಗಿದೆ) ಯಲ್ಲಿ ಹೇಳಿದಂತೆ, ” ನಿನ್ನ ದಿವ್ಯ ಪಾದಗಳ್ಳನ್ನು ನೋಡುವುದೋಂದೆ ಸಾಲದು ,ನಿನ್ನ ದಿವ್ಯ ಪಾಧಗಳಿಂದ ನಿನ್ನ ಶಿರಸ್ಸನ್ನು ಅಲಂಕರಿಸಬೇಕು” ಎಂದು ಹೇಳುತಿಧಾರೆ.
ಕದಾ ಪುನಃ ಶಂಖ ರಥಾನ್ಗ ಕಲ್ಪಕ
ಧ್ವಜಾರವಿಂದ  ಅಂಕುಶ  ವಜ್ರ  ಲಾಂಚನಮ್ |
ತ್ರಿವಿಕ್ರಮ! ತ್ವಚ್ಚರಣಾಅಂಬುಜದ್ವಯಮ್  
ಮದೀಯಮೂರ್ದಾನಮಲಂಕರಿಷ್ಯತಿ ||

ತ್ರಿವಿಕ್ರಮನಾಗಿ ಅವತರಿಸಿದ ಭಗವಂತನೆ! ಶಂಖ, ಚಕ್ರ, ಕಲ್ಪಕ-ವೃಕ್ಷ, ದ್ವಜ, ತಾವರೆ, ಅಂಕುಶ, ಹಾಗು ವಜ್ರಾಯುದಗಳ ಛಿನ್ಹೆಗಳನ್ನು ಹೋಂದಿರುವ ನಿನ್ನ ದಿವ್ಯ ಪಾದಯುಗಳಿಂದ ನನ್ನ ಶಿರಸ್ಸು ಎಂದು ಅಲಂಕೃತವಾಗುವುದು ?

ಶ್ಲೋಕ- 32 – ಈ ಶ್ಲೋಕದಿಂದ ಶ್ಲೋಕ-46 “ಭವನ್ತಮ್”ರವರೆಗು ಆಳವಂದಾರ್ ಎಮ್ಪೆರುಮಾನಿನ ಸುಂದರ ತೋಳ್ಗಳ, ಆಭರಣ, ಆಯುದ, ದಿವ್ಯ ಮಹಿಶಿ, ದಿವ್ಯ ಪರಿಕರ ಹಾಗು ಐಶ್ವರ್ಯದ ಯೋಗವನ್ನು (ಭಗವನ್ನು ಇವನ್ನು ಹೋಂದಿರುವುದನ್ನು) ಸವಿಯುತಿದ್ದಾರೆ, ಹಾಗು ಈ ಅನುಭವಜನಿತ (ಅನುಭವದಿಂದ ಹುಟ್ಟಿದ) ಕೈಂಕರ್ಯದಲ್ಲಿ ಎಂದು ತೊಡಗುವೆ ಎಂದು ಕೇಳುತಿದ್ದಾರೆ. ಭಗವಾನನ್ನು ಭಕ್ತರೋಂದಿಗೆ ಪರಮಪದದಲ್ಲಿ ಸೇವಿಸುವ ತಮ್ಮ ಪ್ರಾಪ್ಯವನ್ನು ವಿವರಿಸುತಿದ್ದಾರೆ.
ವಿರಾಜಮಾನೋಜ್ಜ್ವಲಪೀತವಾಸಸಮ್
ಸ್ಮಿತಾತಸೀಸೂನಸಮಾಮಲಚ್ಚವಿಮ್ |
ನಿಮಗ್ನನಾಭಿಮ್ ತನುಮಧ್ಯಮುನ್ನತಮ್
ವಿಶಾಲವಕ್ಷಸ್ಥಲಶೋಭಿಲಕ್ಷಣಮ್ ||

ಪ್ರಾಕಾಶಿಸುವ ಪೀತಾಂಬರ, ಅಗಸೆ ಪುಷ್ಪಕ್ಕೆ ಸಮಾನವಾದ ದೇಹಕಾಂತಿ, ಆಳವಾದ ಗಂಭೀರವಾದ ನಾಭಿ, ಸೂಕ್ಷಮವಾದ(ಸಣ್ಣ) ಸೋಂಟ ಹಾಗು ವಿಶಾಲವಾದ ವಕ್ಷಸ್ಥಳದಲ್ಲಿ ಪ್ರಕಾಶಿಸುವ ಶ್ರೀವತ್ಸವದ (ವರ್ಣಗಳ ಸಮ್ಮಿಶ್ರಣದ )ಶೋಭೆಯನ್ನು (ಎಮ್ಪೆರುಮಾನ್ ಹೋಂದಿದ್ದಾನೆ.)

ಶ್ಲೋಕ- 33 – ಆಳವಂದಾರ್ ಎಮ್ಪೆರುಮಾನಿನ ಶೌರ್ಯ ಧೈರ್ಯಾದಿಗಳನ್ನು ಹಾಗು ಅವನ ದಿವ್ಯ ಭುಜಗಳ ಸೌಂದರ್ಯವನ್ನು ಔಭವಿಸುತಿದ್ದಾರೆ.
ಚಕಾಸತಮ್ ಜ್ಯಾಗಿಣಕರ್ಕಶೈಶುಭೈಃ
ಚತುರ್ಭಿರಾಜಾನುವಿಳಂಬಿಭಿರ್  ಭುಜೈಃ |
ಪ್ರಿಯಾವತಂಸೋತ್ಪಲಕರ್ಣಭೂಷಣ
ಶ್ಲತಾಲಕಾಬಂಧ  ವಿಮರ್ದ  ಸಂಶಿಭಿ: ||

ಬಿಲ್ಲಿನ ಹೆದೆಯಿಂದ ಜಡ್ಡುಕಟ್ಟ ಕಠಿನವಾದ ಹಾಗು ಶ್ರೀಮಹಾಲಕ್ಷ್ಮಿಯ ಕರ್ಣ್ಗಳನ್ನು ಅಲಂಕರಿಸುವ ಉತ್ಪಲಪುಷ್ಪಗಳು (ಕನ್ನೈದಿಲೆ ಪುಷ್ಪಗಳು), ಆಕೆಯ ಓಲೆ ಹಾಗು ಮುಂಗುರುಳುಗಳನ್ನು ಹೋಂದಿರುವ ಜಡೆ ಯನ್ನು ತೋರುವ ಶುಭವಾದ ದಿವ್ಯ ಭುಜಗಳೋಂದಿಗೆ ಎಮ್ಪೆರುಮಾನ್ ಪ್ರಕಾಶಿಸುತಿದ್ಡ್ದಾನೆ.

ಶ್ಲೋಕ- 34 – ದಿವ್ಯ ಭುಜಗಳ ನಂತರ ಆಳವಂದಾರ್ ಎಮ್ಪೆರುಮಾನಿನ ದಿವ್ಯ ಕಂಠ ಹಾಗು ಮುಖದ ಸೌಂದರ್ಯನ್ನು ಅನುಭವಿಸುತಿದ್ದಾರೆ.
ಉದಗ್ರಪೀನಾಮ್ಸವಿಲಮ್ಬಿ ಕುಂಡಲ
ಅಲಕಾವಳೀ  ಬಂಧುರಕಂಬುಕಂಧರಮ್ |
ಮುಖಶ್ರಿಯಾ ನ್ಯಕ್ಕೃತಪೂರ್ಣ ನಿರ್ಮಲಾ$
ಮೃತಾಂಸುಬಿಂಬ ಅಂಬುರು ಹೋಜ್ಜ್ವಲಶ್ರಿಯಂ ||

ಉನ್ನತವಾದ ಹಾಗು ಸ್ಥೂಲವಾದ ಭುಜಶಿರಸ್ಸು ಪರ್ಯಂತವು ವ್ಯಾಪಿಸುವ ಕುಂಡಲಗಳಿಂದ ಶೋಭಿತವಾದ ಕಂಠವನ್ನು ಎಮ್ಪೆರುಮಾನ್ ಹೋಂದಿದ್ದಾನೆ. ಮುಂಗುರುಳುಗಳನ್ನು ಹಾಗು ಕಂಠದಲ್ಲಿ ಮೂರು ರೇಖೆಗಳನ್ನು ಹೋಂದಿದ್ದಾನೆ. ಪೂರ್ಣವಾಧ ನಿಶ್ಕಳಂಕ ಚಂದ್ರನ ಹಾಗು ಈಗ ಅರಳಿದ ತಾವರೆಯ ಕಾಂತಿಯನ್ನು ಮೀರುವ ಮುಖ ಔಜ್ವಲ್ಯವನ್ನು ಹೋಂದಿದ್ದಾನೆ.

ಶ್ಲೋಕ- 35 – “ಕೋಳಿೞೈತ್ ತಾಮರೈ” (ತಿರುವಾಯ್ಮೊೞಿ 7.7.8 ಆಭರಣದಂತೆ ತಮ್ಮದೆಯಾದ ಕಾಂತಿಯನ್ನು ಹೋಂದಿರುವ ತಾವರೆಗೆ ಸಮಾನವಾದ ಕಣ್ಗಳನ್ನು ಹೋಂದಿದ್ದಾನೆ. [ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನಿನ ದಿವ್ಯ ಮುಖದ ಅವಯವ ಶೋಭೆಯನ್ನು ಅನುಭವಿಸುತ್ತಾರೆ]) ಇದೇ ರೀತಿಯಲ್ಲಿ ಆಳವಂದಾರ್ (ಎಮ್ಪೆರುಮಾನಿನ) ಮುಖದ ಒಂದೋಂದು ಅವಯವದ ಸೌಂದರ್ಯದ ಸಮೂಹವನ್ನು ಅನುಭವಿಸುತಿದ್ದಾರೆ.
ಪ್ರಬುದ್ಧಮುಗ್ದಾಮ್ಬುಜಚಾರುಲೋಚನಮ್
ಸವಿಭ್ರಮಭ್ರೂಲತಮುಜ್ಜ್ವಲಾಧರಮ್ |
ಶುಚಿಸ್ಮಿತಮ್ ಕೋಮಲಗಣ್ಡಮುನ್ನಸಮ್
ಲಲಾಟಪರ್ಯನ್ತವಿಲಮ್ಬಿತಾಲಕಮ್ ||

ಈಗ ಅರಳಿದ ತಾವರೆಯಂತೆ ಕಣ್ಗಳನ್ನು, ಬಳ್ಳಿಯಂತೆ ಬಾಗಿದ ಹುಬ್ಬುಗಳನ್ನು, ಕಾಂತಿಯುಕ್ತ ತುಟಿಗಳನ್ನು, ಶುದ್ಧ ಮಂದಹಾಸಯನ್ನು(ನಗು), ಎತ್ತರವಾದ ಮೂಗನ್ನು, ಹಾಗು ಹಣೆಯವರೆಗು ಬರುವ ಮುಂಗುರುಳುಗಳನ್ನು ಉಳ್ಳ…

ಶ್ಲೋಕ- 36 – ಆಳವಂದಾರ್ ಎಮ್ಪೆರುಮಾನಿನ ಆಯುದ-ಆಭರಣಯುಕ್ತತೆಯನ್ನು ಪ್ರಶಂಸಿಸುತಿದ್ದಾರೆ.
ಸ್ಫುರತ್ ಕಿರೀಟ ಅಂಗದ  ಹಾರ ಕಂಟಿಕಾ
ಮಣೀಂದ್ರ ಕಾಂಚಿ ಗುಣ ನೂಪುರಾದಿಭಭಿಃ |
ರಥಾಂಗ ಸಂಖಾಸಿ  ಗದಾಧನುರ್ವರೈ
ಲಸತ್ತುಳಸ್ಯಾ ವನಮಾಲಯೋಜ್ವಲಂ ||

ಎಮ್ಪೆರುಮಾನ್ ಕಂಗೊಳಿಸುತ್ತಿರುವ ಕಿರೀಟ, ಬಾಹುಪುರಿ(ಭುಜಗಳ ಆಭರಣ), ಕಂಟಾಭರಣ, ಹಾರ, ಶ್ರೀ ಕೌಸ್ತುಭ, ಉಡಿದಾರ, ಕಾಲಿನ ಗೋರಸು ಹಾಗು ಚಕ್ರ, ಶಙ್ಖ, ನನ್ದಕವೆಂಬ ಖಡ್ಗ, ಕೌಮೋದಕೀ ಎಂಭ ಗದೆ, ಶಾರ್ನ್ಗವೆಂಬ ಧನುಸ್ಸುಗಳಂತ ಆಯುದಗಳು ಹಾಗು (ನಿನ್ನ ಸಮ್ಸ್ಪರ್ಶದಿಂದ) ಪ್ರಕಾಸಿಸುತ್ತಿರುವ ತುಳಸೀ ಹಾಗು ವನಮಾಲಾ ಹಾರಗಳಿಂದ ಅಲಂಕೃತನಾಗಿ ಹೊಳಿಯಿತಿದ್ದಾನೆ.

ಶ್ಲೋಕ- 37 – ಈ ಶ್ಲೋಕ ಹಾಗು ಮುಂದಿನ ಶ್ಲೋಕಗಳಲ್ಲಿ ಆಳವಂದಾರ್ ಎಮ್ಪೆರುಮಾನಿನ ಎಮ್ಪೆರುಮಾನ್ ಹಾಗು ಪಿರಾಟ್ಟಿಯ(ಶ್ರೀಮಹಾಲಕ್ಷ್ಮೀ) ವಾಲ್ಲಭ್ಯವನ್ನು ಅನುಭವಿಸುತಿದ್ದಾರೆ. ಈ ಶ್ಲೋಕದಲ್ಲಿ ಆಕೆಯ ವೈಭವವನ್ನು ಹಾಗು ಅವಳ ವಿಷಯದಲ್ಲಿ ಎಮ್ಪೆರುಮಾನಿನ ವಿಶೇಷ ಪ್ರೀತಿಯನ್ನು ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಚಕರ್ತ ಯಸ್ಯಾ ಭವನಮ್ ಭುಜಾನ್ತರಮ್
ತವ ಪ್ರಿಯಮ್ ಧಾಮ ಯದೀಯಜನ್ಮಭೂಃ |
ಜಗತ್ಸಮಸ್ತಮ್ ಯದಪಾಙ್ಗಸಮ್ಶ್ರಯಮ್
ಯದರ್ತಮಮ್ಭೋದಿರಮನ್ತ್ಯಬನ್ದಿ ಚ

(ಓ ಎಮ್ಪೆರುಮಾನೇ!) ಯಾವ ಪಿರಾಟ್ಟಿಗಾಗಿ ನಿನ್ನ ವಕ್ಷಸ್ತಳವನ್ನು ಆಕೆಯ ವಾಸಸ್ಥಾನವಾಗಿ ಮಾಡಿದೆಯೋ, ಆಕೆಯ ಜನ್ಮಭೂಮಿಯಾದ ಕ್ಷ್ರೀರಾಬ್ಧಿಯನ್ನು ನಿನಗೆ ಪ್ರಿಯವಾದ ಧಾಮವಾಗಿರುವುದೊ, ಸಮಸ್ಥವಾದ ಜಗತ್ತು ಯಾರ ಕಟಾಕ್ಷವನ್ನು ಆಶ್ರಯಿಸಿದೆಯೋ, ಯಾರಿಗಾಗಿ ಸಮುದ್ರವನ್ನು ಕಡೆಯಲ್ಪಟ್ಟಿತೋ ಯಾರಿಗಾಗಿ ಸೇತು ಬಂಧನ ನಡೆದಿತೋ.

ಶ್ಲೋಕ-38 – ಈ ಶ್ಲೋಕದಲ್ಲಿ ಆಳವಂದಾರ್ ಪಿರಾಟ್ಟಿಯ(ಶ್ರೀಮಹಾಲಕ್ಷ್ಮಿಯ) ಭೋಗ್ಯತಾತಿಶಯವನ್ನು ಹಾಗು “ಉನಕ್ಕೇಱ್ಕುಮ್ ಕೋಲ ಮಲರ್ಪ್ ಪಾವೈ” (ತಿರುವಾಯ್ಮೊೞಿ 10.10.6 ಸುಂದರವಾದ ಕಮಲದಲ್ಲಿ ವಾಸಿಸುವವಳು ಹಾಗು ನಿನಗೆ ತಕ್ಕವಳಾದ ಶ್ರೀಮಹಾಲಕ್ಷ್ಮೀ)ಯಲ್ಲಿ ಹೇಳಿದಂತೆ ಎಮ್ಪೆರುಮಾನಿಗೆ ಅನನ್ಯಾರ್ಹತ್ವವನ್ನು (ಎಮ್ಪೆರುಮಾನಿಗಾಗಿಯೇ ಇರುವುದು) ಅನುಭವಿಸುತಿದ್ದಾರೆ.
ಸ್ವವೈಶ್ವರೂಪ್ಯೇಣ ಸದಾऽನುಭೂತಯಾऽಪಿ
ಅಪೂರ್ವವತ್ ವಿಸ್ಮಯಮಾದದಾನಯಾ |
ಗುಣೇನ ರೂಪೇಣ ವಿಲಾಸಚೇಷ್ಟಿತೈಃ
ಸದಾ ತವೈವೋಚಿತಯಾ ತವ ಶ್ರಿಯಾ ||

ನಿನ್ನ ವಿಶ್ವರೂಪದಲ್ಲಿ ಸದಾ ಅನುಭವಿಸಿದರು, ನಿನ್ನನ್ನು ವಿಸ್ಮಯಿಸುವಂತಹ/ಆಶ್ಚರ್ಯಗೊಳಿಸುವಂತ ಗುಣಗಳು, ಸುಂದರ ರೂಪ ಹಾಗು ದಿವ್ಯ ವ್ಯಾಪಾರಗಳನ್ನು ಹೋಂದಿರುವ ಪಿರಾಟ್ಟಿ, ಹೋಸದಾಗಿರುವಂತೆ ನಿನ್ನ ಎಲ್ಲಾ ([ಪರಮಪದದಲ್ಲಿ] ಪರ, [ಕ್ಷೀರಾಬ್ಧಿಯಲ್ಲಿ] ವ್ಯೂಹ, ವಿಭವಗಳಂತಹ [ಅವತಾರ])ರೂಪಗಳಲ್ಲಿ ಅನುರೂಪವಾಗಿ ಅವತರಿಸುವವಳು, ನಿನಗೆ ಅನನ್ಯಾರ್ಹಳಾದ ಹಾಗು ನಿನಗೆ ಸಮ್ಪತ್ತಾಗಿ ಇರುವಳು.

ಶ್ಲೋಕ-39 – ಈ ಶ್ಲೋಕದಲ್ಲಿ ಆಳವಂದಾರ್ ಪರ್ಯಂಕ ವಿದ್ಯೆಯಲ್ಲಿ ಹೇಳಿದಂತೆ ಆದಿಶೆಷನ ಮಡಿಯಲ್ಲಿ ಪಿರಾಟ್ಟಿಯೋಂದಿಗೆ ಆಸೀನನಾಗಿರುವುದನ್ನು ಅನುಭವಿಸುತಿದ್ದಾರೆ.
ತಯಾ ಸಹಾಸೀನಮನನ್ತಭೋಗಿನಿ
ಪ್ರಕ್ರುಶ್ಟವಿಜ್ಞಾನಬಲೈಕದಾಮನಿ|
ಫಣಾಮಣಿವ್ರಾತಮಯೂಖಮಂಡಳ
ಪ್ರಕಾಶಮಾನೋದರದಿವ್ಯಧಾಮನಿ || 

ಪ್ರಕೃಷ್ಟವಾದ ಜ್ಞಾನ ಶಕ್ತಿಗಳಿಗೆ ಆಶ್ರಯನಾಗಿರುವವನು,ಫಣಾಮಣ್ಡಲದ ರತ್ನಗಳಿಂದ ಪ್ರಕಾಶಿತವಾದ ಭಗವಾನ್ ಹಾಗು ಪಿರಾಟ್ಟಿಯು ಬಿಜಯಿಸಿದ ಮಡಿಲನ್ನು ಹೋಂದಿರುವವನಾದ ತಿರುವನಂತಾೞ್ವಾನಿನ ಮೇಲೆ ಭಗವಾನ್ ಶಯನಿಸುತಿದ್ದಾರೆ.

ಶ್ಲೋಕ- 40 – ಕೈಂಕರ್ಯವನ್ನು ಮಾಡುವ ತ್ವರೆಯಿಂದ ಆಳವಂದಾರ್ ತಿರುವನಂತಾೞ್ವಾನಿನ ವಿಲಕ್ಷಣ ಕೈಂಕರ್ಯವನ್ನು ಅನುಭವಿಸುತಿದ್ದಾರೆ.
“ಉಪಮಾನಮಶೇಷಾಮ್ ಸಾದೂನಾಮ್ ಯಸ್ಸದಾSಭವತ್ ” ಎಂದು ಶ್ರೀವಿಷ್ಣುಪುರಾಣ ದಲ್ಲಿ(1.15.157 ಹೇಗೆ ಎಲ್ಲಾ ಸಜ್ಜನರಿಗೂ ಪ್ರಹ್ಲದದು ಉದಾಹರಣೆಯಾಗಿದ್ದಾನೋ), ಹಾಗೆಯೇ ಕೈಂಕರ್ಯವನ್ನು ಮಾಡಲು ಇಚ್ಛಿಸುವವರಿಗೆ ತಿರುವನಂತಾೞ್ವಾನಿನ ಕಾರ್ಯವು ಒಳ್ಳೆಯ ಉದಾಹರಣೆಯಾಗಿದೆ. ಆದಿಶೇಷನ ಇಂತ ಪರಮ ದಶೆಯನ್ನು ವಿವರಿಸುತಿದ್ದಾರೆ.
ನಿವಾಸಶಯ್ಯಾಸನಪಾದುಕಾಂಶುಕ
ಉಪದಾನವರ್ಷಾತಪವಾರಣಾದಿಭಿಃ |
ಶರೀರಭೇದೈಸ್ ತವ ಶೇಷತಾಮ್ ಗತೈರ್
ಯತೋಚಿತಮ್ ಶೇಷ ಇತೀರಿತೇ ಜನೈಃ ||

ಎಮ್ಪೆರುಮಾನ್ ತಾನು ವಾಸಿಸುವ ಅರಮನೆಯಾಗಿ, ಮಲಗಿವ ಹಾಸಿಗೆಯಾಗಿ, ಆಸೀನವಾಗಿರುವ ಸಿಂಹಾಸನವಾಗಿ, ಧರಿಸುವ ಪಾದರಕ್ಷೆಗಳಾಗಿ, ( ಧರಿಸುವ ) ವಸ್ತ್ರಗಳಾಗಿ, ( ಆಲಂಗಿಸುವ ) ದಿಂಬಾಗಿ, ಬಿಸಿಲು ಮಳೆಗಳಿಂದ ರಕ್ಷಿಸುವ ಛತ್ರಾದಿಗಳಾಗಿರುವುದರಿಂದ ಎಲ್ಲರಿಂದಲು ಶೇಷನೆಂದು ವಿಖ್ಯಾತನಾದ ತಿರುವನಂತಾೞ್ವಾನಿನ ಮೇಲೆ ಶಯನಿಸುತಿದ್ದಾನೆ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/sthothra-rathnam-slokams-31-to-40-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment