ಸ್ತೋತ್ರ ರತ್ನ- ಸರಳ ವಿವರಣೆ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

vishnu-lakshmi
alavandhar-nathamunigal

ವಿಶಿಷ್ಟಾದ್ವೈತ ಸಿದ್ಧಾತ ಹಾಗು ಶ್ರೀವೈಷ್ಣವ ಸಂಪ್ರದಯದ ಉತ್ತಮ ವಿದ್ವಾನ್ ಹಾಗು ಶ್ರೀಮನ್ನಾಥಮುನಿಗಳ ಪೌತ್ರರಾದ(ಮೊಮ್ಮಗರಾದ) ಆಳವಂದಾರ್ ಪ್ರಾಪ್ಯ (ಹೋಂದಬೇಕಾದ ವಿಷಯ/ ಗುರಿ) ಹಾಗು ಪ್ರಾಪಕಗಳ (ಅದರ ಉಪಾಯ/ಸಾಧನ) ಸ್ವರೂಪವನ್ನು ದ್ವಯಮಹಾಮಂತ್ರದ ವಿಸ್ತರ ವಿವರಣೆಯ ರೂಪದಲ್ಲಿ ತಮ್ಮ ಸ್ತೋತ್ರ ರತ್ನದಲ್ಲಿ ಪ್ರಕಾಶಿಸಿದ್ದಾರೆ. ನಮಗೆ ಲಭ್ಯವಾದ ಪೂರ್ವಾಚಾರ್ಯರ ಸಂಸ್ಕೃತ ಸ್ತೋತ್ರ ಗ್ರಂಥಗಳಲ್ಲಿ ಇದು ಪುರಾತನತಮವಾದದ್ದು.

ಪೆರಿಯ ನಂಬಿಗಳು ಇಳೈಯಾೞ್ವಾರನ್ನು(ಶ್ರೀ ರಾಮಾನುಜರನ್ನು) ಆಳವಂದಾರಿನ ಶಿಷ್ಯರನ್ನಾಗಿ ಮಾಡಿಸಲು ಕಾಂಚೀಪುರಕ್ಕೆ ಹೊರಟಿದ್ದರು. ತಿರುಕ್ಕಚ್ಚಿ ನಂಬಿಗಳ ಉಪದೇಶದಂತೆ ದೇವಪ್ ಪೇರುಮಾಳಿನ ಕೈಂಕರ್ಯಕ್ಕಾಗಿ ಸಾಳೈಕ್ಕಿಣಱಿಂದ(ಒಂದು ಬಾವಿ) ತೀರ್ಥವನ್ನು ತರುತಿದ್ದರು. ಪೆರಿಯ ನಂಬಿಗಳ ಸ್ತೋತ್ರ ರತ್ನದಿಂದ ಪಠನವು ಇಳೈಯಾೞ್ವಾರನ್ನು ತುಂಬಾ ಅಕರ್ಶಿಸಿತು ಹಾಗು ಅವರನ್ನು ನಮ್ಮ ಸಂಪ್ರದಾಯಕ್ಕೆ ತಂದಿತು. ಎಮ್ಪೆರುಮಾನಾರೆಂದು ಪ್ರಸಿದ್ಧರಾದ ಇಳೈಯಾೞ್ವಾರಿಗೆ ಈ ಸ್ತೋತ್ರವು ತುಂಬಾ ಪ್ರಿಯವಾಗಿತ್ತು ಹಾಗು ಇದರ ಹಲವಾರು ಭಾಗಗಳನ್ನು ತಮ್ಮ ಶ್ರೀವೈಕುಂಠಗದ್ಯದಲ್ಲು ಆಕರಿಸಿದ್ದಾರೆ

ಪೆರಿಯವಾಚ್ಚಾನ್ ಪಿಳ್ಳೈ ಈ ದಿವ್ಯವಾದ ಪ್ರಬಂಧಕ್ಕೆ ವಿಸ್ತರವಾದ ವ್ಯಾಖ್ಯಾನವನ್ನು ರಚಿಸಿದ್ದಾರೆ. ದುರ್ಗ್ರಾಹ್ಯವಾದ ಸ್ತೋತ್ರಗಳಿಗೆ ಸುವ್ಯಕ್ತವಾಗಿ ಅರ್ಥಗಳನ್ನು ತೋರಿದ್ದಾರೆ. ಶ್ಲೋಕಗಳಿಗೆ ಈ ವ್ಯಾಖ್ಯಾನವನ್ನು ಅನುಸರಿ ಸರಳ ಅರ್ಥವನ್ನು ನೋಡುತಿದ್ದೇವೆ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/sthothra-rathnam-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment