ಸ್ತೋತ್ರ ರತ್ನ – ಸರಳ ವಿವರಣೆ ಶ್ಲೋಕ 21-30

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

<< ಶ್ಲೋಕ 11-20

ಶ್ಲೋಕ- 21 – ಆಳವಂದಾರ್ ಶರಣ್ಯನಾದ ಭಗವದ್ವೈಭವವನ್ನು ಧ್ಯಾನಿಸುತಿದ್ದಾರೆ. ಹೀಗಲ್ಲದೆ ಹಿಂದೆ ಪ್ರಾಪ್ಯ ಸ್ವರೂಪವನ್ನು ವಿವರಿಸಿದರು, ಇಲ್ಲಿ ಅದನ್ನು ಅರ್ಥಿಸುತ್ತಿರುವವನ ಸ್ವರೂಪ ವಿವರಿಸಲ್ಪಡುತ್ತಿದೆ, ಹೀಗಲ್ಲದೆ ಹಿಂದೆ ಭಗವದ್ ಸ್ವರೂಪವು ವಿವರಿಸಿದಮೇಲೆ, ಇಲ್ಲಿ ನಂತರ ವಿವರಿಸಲ್ಪಡುವ ಶರಣಾಗತಿಯ ಸ್ವರೂಪವನ್ನು ತೋರುತಿದ್ದಾರೆ ಎಂದು ವಿವಕ್ಷಿತ ವಾಗಿದೆ.
ನಮೋ ನಮೋ ವಾಙ್ಗ್ಮನಸಾತಿಭೂಮಯೇ
ನಮೋ ನಮೋ ವಾಙ್ಗ್ಮನಸೈಕಭೂಮಯೇ |
ನಮೋ ನಮೋऽನನ್ತಮಹಾವಿಭೂತಯೇ
ನಮೋ ನಮೋऽನನ್ತದಯೈಕಸಿನ್ದವೇ ||

(ಸ್ವಪ್ರಯತ್ನದಿಂದ ನಿನ್ನನ್ನು ತಿಳಿಯಲು ಪ್ರಯತ್ನಿಸುವವರ) ಮನಸ್ಸು ಹಾಗು ವಾಕ್ಕಿಗೆ ಅತೀತನಾದ ನಿನಗೆ ನಮಸ್ಕಾರಗಳು. (ನಿನ್ನ ಅನುಗ್ರಹದಿಂದ ನಿನ್ನನ್ನು ತಿಳಿದವರಿಗೆ) ವಾಕ್ ಹಾಗು ಮನಸ್ಸಿನಿಂದಲೆ ಅನಂತವಾದ ಮಹದೈಶ್ವರ್ಯಯುಕ್ತನಾದ ನಿನಗೆ ನಮಸ್ಕಾರಗಳು; ದಯೆಯ ಸಾಗರನಾದ ನಿನಗೆ ನಮಸ್ಕಾರಗಳು.


ಶ್ಲೋಕ- 22 – ಆಳವಂದಾರ್ ತಮ್ಮ ಅಧಿಕಾರವನ್ನು ಘೋಷಿಸಿ (ಹಿಂದಿನ ಶ್ಲೋಕದಲ್ಲಿ ಬಂದ) ಪ್ರಪತ್ತಿಯನ್ನು ಆಚರಿಸುತಿದ್ದಾರೆ. ಹಿಂದೆ ವಿವರಿಸಲ್ಪಟ್ಟ ಉಪೇಯಕ್ಕೆ ತಕ್ಕ ಉಪಯದ ಆಚರಣೆಯೆಂದೂ, ಈ ಶ್ಲೋಕವನ್ನು ವಿವರಿಸಬಹುದು.
ನ ದರ್ಮನಿಶ್ಠೋऽಸ್ಮಿ ನ ಚಾತ್ಮವೇದೀ
ನ ಭಕ್ತಿಮಾನ್ ತ್ವಚರಣಾರವಿಂದೇ |
ಆಕಿಂಚನ್ಯೋನ್ಯಗತಿ: ಶರಣ್ಯ!
ತ್ವತ್ಪಾದಮೂಲಮ್ ಶರಣಮ್ ಪ್ರಪದ್ಯೇ ||

ಶರಣ್ಯನಾದ ಭಗವಂತನೇ ಕರ್ಮಯೋಗದಲ್ಲಿ ನಾನು ಸ್ಥಿರನಲ್ಲ, ಆತ್ಮಜ್ಞಾನವು ನನ್ನಲ್ಲಿ ಇಲ್ಲ, ನಿನ್ನ ಚರಣಾರವಿಂದಗಳಲ್ಲಿ ಭಕ್ತಿಯೂ ಇಲ್ಲದವನಾದ ನಾನು, ಬೇರೋಂದು ಉಪಾಯವಿಲ್ಲದೆ ಹಾಗಲಿ ಬೇರೊಂದು ಶರಣವು(ಗತಿ) ಇಲ್ಲದೆ ನಿನ್ನ ಪಾದಪಂಕಜಗಳನ್ನೆ ಉಪಾಯವಾಗಿ ಸ್ವಿಕರಿಸುತ್ತೇನೆ.


ಶ್ಲೋಕ 23 – ಭಗವಾನ್ , “ನನ್ನ ವಿಷಯದಲ್ಲಿ ಯಾವ ಆನುಕೂಲ್ಯವಿಲ್ಲದಿದ್ದರು , ನಿಮ್ಮಲ್ಲಿ ಅರ್ಜಿತ ಆನುಕೂಲ್ಯವನ್ನು ಇಲ್ಲದಿದ್ದರು , ನಾನು ನಿಮ್ಮಲ್ಲಿ ಗುಣಗಳನ್ನು ತಂದು ಉಪೇಯವನ್ನೂ ನೀಡುವೆನು.” ಎಂದು ಹೇಳಿದರು. ಆಳವಂದಾರ್, “ನಾನು ಪೂರ್ಣವಾಗಿ ದೋಶಗಳಿಂದಲೆ ಭರಿತನಾಗಿದ್ದೇನೆ.
ನ ನಿನ್ದಿತಮ್ ಕರ್ಮ ತದಸ್ತಿ ಲೋಕೇ
ಸಹಸ್ರಶೋ ಯನ್ನ ಮಯಾ ವ್ಯದಾಯಿ |
ಸೋऽಹಮ್ ವಿಪಾಕಾವಸರೇ ಮುಕುನ್ದ!
ಕ್ರನ್ದಾಮಿ ಸಮ್ಪ್ರತ್ಯಗತಿಸ್ ತವಾಗ್ರೇ ||

ಮೋಕ್ಷವನ್ನು ಪ್ರಸಾದಿಸುವ ಭಗವಂತನೇ ! ಸಾವಿರಬಾರಿ ನಿನ್ನಿಂದ ಮಾಡದ ನಿಶಿದ್ಧ ಕರ್ಮಗಳು ಶಾಸ್ತ್ರಶಲ್ಲು ಇಲ್ಲ [(ಶಾಸ್ತ್ರವನ್ನು) ಲೋಕ(ಎಂದಿದ್ದು) ಲೋಕವನ್ನು ನಿರ್ವಹುಸುವುದರಿಂದ] , ಈಗ (ಆ ಕರ್ಮಗಳು) ವಿಪಾಕ( ಪಕ್ವ) ದಶೆಯಲ್ಲಿರುವಾಗ ಬೇರೋಂದು ಗತಿಯಿಲ್ಲದೆ ನಿಮ್ಮ ಮುಂದೆ ಅಳುತಿದ್ದೆನೆ.

ಶ್ಲೋಕ- 24 – ಆಳವಂದಾರ್ ,”ನಿನ್ನ ಕೃಪೆಯೇ ನನಗೆ ಶರಣು” ಎಂದು ಎಂಬೆರುಮಾನನ್ನು ಕುರಿತು ಕೂಗುತಿದ್ದಾರೆ. ಆಳವಂದಾರ್, “ನಿನ್ನನ್ನು ಹೊಂದುವುದು ನನಗೆ ಹೇಗೆ ಮಹಾಭಾಗ್ಯವೋ ಹಾಗೆಯೇ ನಿನ್ನ ಕೃಪೆಗು ನಾನು ಸೂಕ್ತ ಪಾತ್ರನು.
ನಿಮಜ್ಜತೋऽನನ್ತಭವಾರ್ಣವಾನ್ತಃ
ಚಿರಾಯ ಮೇ ಕೂಲಮಿವಾಶಿ ಲಬ್ದಃ |
ತ್ವಯಾಪಿ ಲಬ್ದಮ್ ಭವಗವನ್ನಿದಾನೀಮ್
ಅನುತ್ತಮಮ್ ಪಾತ್ರಮಿದಮ್ ದಯಾಯಾಃ ||

ಅನಂತನೆ! ( ದೇಶದಿಂದಾಗಲಿ ಕಾಲದಿಂದಾಗಲಿ ವಸ್ತುವಿಂದಾಗಲಿ ಪರಿಚ್ಛೆದ ರಹಿತನು) ದೀರ್ಘ ಕಾಲದಿಂದ ಸಂಸಾರಾರ್ಣವದಲ್ಲಿ ಸಮ್ಮಗ್ನನಾದ (ಚೆನ್ನಾಗಿ ಮುಳುಗಿದ) ನನಗೆ ತೀರವಾಗಿ ಬಂದಿದ್ದೀಯ. ಓ ಭಗವಾನ್! ನಿನ್ನ ಕೃಪೆಗೂ ಸೂಕ್ತ ಪಾತ್ರನಾಗಿದ್ದೇನೆ.

ಶ್ಲೋಕ- 25 – “ನನ್ನಲ್ಲಿ ನಿಮ್ಮ ಭಾರವೆಲ್ಲವೂ ಸಮರ್ಪಿಸಿದಮೇಲೆ ಶ್ರೀ ರಾಮಾಯಣದ ಸುಂದರ ಖಂಡದಲ್ಲಿ ‘ತತ್ ತಸ್ಯ ಸದೃಶಮ್ ಭವೇತ್’ (9.30 ತನ್ನ ಸ್ವರೂಪಕ್ಕೆ ಪ್ರಾಪ್ತವಾದದ್ದು- ತಾನೇ ಲಂಕೆಯನ್ನು ನಶಿಸಿ ನನ್ನನು ರಕ್ಷಿಸುವುದು – ಆದರಿಂದ ಅವನ ಆಗಮದವರೆಗು ಕಾಯುವೆನು)’ ಎಂದತೆ ಇರುವುದಲ್ಲದೆ ಈಗಲೇ ರಕ್ಷಿಸಲು ಏಕೆ ನಿರ್ಬಂದಿಸುತಿದ್ದೀರ”, ಎಂದು ಭಗವಾನ್ ಕೇಳಿದಾಗ. ಆಳವಂದಾರ್, “ನಾನು ನನ್ನ ಧುಃಖವನ್ನು ದೂರಮಾಡಲು ಹೇಳುತಿಲ್ಲ; ನಿನ್ನ ಭಕ್ತರು ಈ ಲೋಕದಲ್ಲಿ ಧುಃಖಿಸುವುದು ನಿನ್ನ ಮಹಿಮೆಗೇ ಕಳೆ.
ಅಭೂತಪೂರ್ವಮ್ ಮಮ ಭಾವಿ ಕಿಮ್ ವಾ
ಸರ್ವಮ್ ಸಹೇ ಮೇ ಸಹಜಮ್ ಹಿ ಧುಃಖಮ್ |
ಕಿನ್ತು ತ್ವದಗ್ರೇ ಶರಣಾಗತಾನಾಮ್
ಪರಾಭವೋ ನಾಥ! ನ ತೇ$ನುರೂಪ: ||

ಹೇ ನಾಥ! ಪೂರ್ವವುಂಟಾಗದ ಯಾವ ಹೋಸ ಧುಃಖವು ನನಗೆ ಸಂಭವಿಸದು; ಈ ಧುಃಖಗಳೆಲ್ಲವನ್ನು ಸಹಿಸುತಿದ್ದೇನೆ, ಇವು(ಧುಃಖಗಳು) ನನಗೆ ಸಹಜವಾಗಿ (ನನ್ನೋಂದಿಗೇ ಹುಟ್ಟಿದಂತಹದು) ಬಂದಂತಹದು, ಆದರೆ ನಿನ್ನ ಮುಂದೆ ನಿನ್ನ ಶರಣಾಗತರ ತಿರಸ್ಕಾರವು ನಿನಗೆ ಅನುರೂಪವಾದದ್ದಲ್ಲ

ಶ್ಲೋಕ- 26 – ಆಳವಂದಾರ್, “ನಿನ್ನ ಮಹಿಮೆಗೆ ಕಳಂಕವೆಂದು ನನ್ನನು ನಿರಾಕರಿಸಿದರು ನಿನ್ನನ್ನು ನಾನು ಬಿಡನು.” ಎಂದು ಹಾಗು ತಮ್ಮ ಅಗತಿತ್ವದಿಂದ ಬಂದಿರುವ ಮಹಾ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.
ನಿರಾಸಕಸ್ಯಾಪಿ ನ ತಾವದುತ್ಸಹೇ
ಮಹೇಶ! ಹಾತುಮ್ ತವ ಪಾದಪಂಕಜಂ
|
ರುಶಾ ನಿರಸ್ತೋऽಪಿ ಶಿಸುಃ ಸ್ಥನಂಧಯೋ
ನ ಜಾತು ಮಾತುಶ್ಚರಣೌ ಜಿಹಾಸತಿ ||

ಓ ಸರ್ವೇಶ್ವರನೆ! ನನು (ನಿನ್ನಿಂದ) ತಳ್ಳಲ್ಪಟ್ಟರು, ನಿನ್ನ ಪದಾರವಿಂದಗಳನ್ನು ಎಂದೂ ಬಿಡನು ; ಸ್ಥನ್ಯಪಾನ ಮಾಡುವ ಮಗುವು (ತನ್ನ ತಾಯಿಯಿಂದ) ಕೋಪದಿಂದ ತಳ್ಳಲ್ಪಟ್ಟರು, ಅದು ತನ್ನ ತಾಯಿಯ ಪಾದಗಳನ್ನು ಎಂದೂ ಬಿಡದು.

ಶ್ಲೋಕ- 27 – ಆಳವಂದಾರ್, “ನಿನ್ನನ್ನು ಬಿಡದೆ ಇರಲು ಕಾರಣವು ಕೇವಲ ಅನನ್ಯಗಿತಿತ್ವವೇ ? ನಿನ್ನ ಭೋಗ್ಯತೆಯಲ್ಲಿ ಮುಳುಗಿರುವ ನನ್ನ ಮನಸ್ಸು ಬೇರೊಂದನ್ನು ಅರ್ಥಿಸದು.
ತವಾಮೃತಸ್ಯನ್ದಿನಿ ಪಾದಪಙ್ಕಜೇ
ನಿವೇಶಿತಾತ್ಮಾ ಕಥಮನ್ಯದಿಚ್ಛತಿ? |
ಸ್ಥಿತ್ತೇऽರವಿನ್ದೇ ಮಕರಂದನಿರ್ಭರೇ
ಮದುವ್ರತೋ ನೇಕ್ಷುರಕಂ ಹಿ ವೀಕ್ಶತೇ ||

ಅಮ್ರೃತವನ್ನು ಸ್ರವಿಸುತ್ತಿರುವ ನಿನ್ನ ಪಾದಾರವಿಂದಗಳಲ್ಲಿ ಸಮರ್ಪಿಸಲ್ಪಟ್ಟ ನನ್ನ ಮನಸ್ಸು ಹೇಗೆ ಇತರ ವಿಷಯಗಳನ್ನು ಇಚ್ಛಿಸುವುದು ? ಮಧುವಿನಿಂದ ಭರಿತವಾದ ಕೆಂದಾವರೆ ಇದಲ್ಲಿ ಒಂದು ಜೇನು ಕೋಳವಳಿಕೆಯನ್ನು (ಒಂದು ಕ್ಷುದ್ರ ಪುಷ್ಪವು) ನೋಡುವುದೋ.

ಶ್ಲೋಕ- 28 – ಆಳವಂದಾರ್, “ನನಗೆ ಉಪಕರಿಸಲು ಅಂಜಲಿಯೋಂದೆ ಪರ್ಯಾಪ್ತವಲ್ಲವೆ ?”, ಎಂದು ಕೇಳುತಿದ್ದಾರೆ.
ತ್ವದಂಗ್ರಿಂಮುದ್ದಿಶ್ಯ ಕದಾऽಪಿ ಕೇನಚಿತ್
ಯಥಾ ತಥಾ ವಾऽಪಿ ಸಕೃತ್ಕೃತೋऽಞ್ಜಲಿ |
ತದೈವ ಮುಷ್ಣಾತ್ಯಶುಭಾನ್ಯಶೇಷತಃ
ಶುಭಾನಿ ಪುಷ್ಣಾತಿ ನ ಜಾತು ಹೀಯತೇ ||

ಯಾರಿಂದಾದರು ಯಾವಾದಾದದರೋಂದು ಕಾಲದಲ್ಲಿ ಯಾವುದಾದರೋಂದು ರೀತಿಯಲ್ಲಿ ಮಾಡಿದ ಅಂಜಲಿ ಒಡನೆ ಪಾಪಗಳನ್ನು ಅಶೇಷವಾಗಿ ದೂರಮಾಡಿ, ಶುಭಗಳನ್ನು ವೃದ್ಧಿಸುತ್ತದೆ (ಇಂತಹ ಮಂಗಳವು) ಎಂದು ಕ್ಷಯಿಸುವುದು.

ಶ್ಲೋಕ-29 – ಈ ಶ್ಲೋಕದಲ್ಲಿ ಮಾನಸ ಪ್ರಪತ್ತಿಯನ್ನು ತೋರುತ್ತದೆ ,ಅಥವಾ ಶ್ಲೋಕ 28 “ತ್ವದಂಗ್ರಿಂಮುದ್ದಿಶ್ಯ”,ದಲ್ಲಿ ಹಾಗು ಶ್ಲೋಕ 29 “ಉದೀರ್ಣ”ದಲ್ಲಿ ಮಾಡಿದ ಶರಣಾಗತಿ ಜನಿತ ಪರಭಕ್ತಿಯನ್ನು ತೊರುತ್ತದೆ ಎಂದೂ ಹೇಳಬಹುದು.
ಉದೀರ್ಣಸಂಸಾರದವಾಶುಶುಕ್ಷಣಿಮ್
ಕ್ಷಣೇನ ನಿರ್ವಾಪ್ಯ ಪರಾಮ್ ಚ ನಿರ್ವೃತಿಮ್ |
ಪ್ರಯಚ್ಛತಿ ತ್ವಚಾರಣಾರುಣಂಬುಜ
ದ್ವಯಾನುರಾಗಾಮೃತಸಿನ್ದುಶೀಕರಃ ||

ನಿನ್ನ ಕೆಂಪಾದ ದಿವ್ಯ ಪಾದದ್ವದಲ್ಲಿನ ಭಕ್ತಿಯ ಅಮೃತಸಾಗರದಿಂದ ಒಂದು ಹನಿಯು ಪ್ರಜ್ವಲಿಸುತ್ತಿರುವ
ಸಂಸಾರವೆಂಬ ಕಾಡ್ಗಿಚ್ಚನ್ನು ಒಂದು ಕ್ಷಣದಲ್ಲಿ ಆರಿಸಿ ಶ್ರೇಷ್ಠವಾದ ಆನಂದವನ್ನು ಕೋಡುತ್ತದೆ.

ಶ್ಲೋಕ-30 ಆಳವಂದಾರ್ ಯಾವುದೇ ವಿಳಂಭವಿಲ್ಲದೆ ಫಲವನ್ನು ಪ್ರಸಾದಿಸುವ ಸಿದ್ಧೋಪಾಯವನ್ನು( ಭಗವಂತನನ್ನು) ಸ್ವೀಕರಿಸಿ, ಫಲಪ್ರಾಪ್ತಿಗೆ ಕಾಯಲಾಗದೆ “ಕೂವಿಕ್ ಕೊಳ್ಳುಮ್ ಕಾಲಮ್ ಇನ್ನಮ್ ಕುಱುಗಾದೋ”( ತಿರುವಾಯ್ಮೊೞಿ 6.9.9- ನಿನ್ನನ್ನು ಪ್ರಾಪಿಸುವ ದಿನವು ಇನ್ನು ವೇಗವಾಗದೋ)ಯಲ್ಲಿ ಹೇಳಿದಂತೆ ಹೇಳುತಿದ್ದಾರೆ. ಹೀಗಲ್ಲದೆ ಇನ್ನೋಂದು ನಿರ್ವಾಹವು, “ಕನೈಕೞಲ್ ಕಾಣ್ಬದೆನ್ಱುಕೊಲ್ ಕಣ್ಗಳ್(ತಿರುವಾಯ್ಮೊೞಿ 6.3.10- ಎಂಪೆರುಮಾನಿನ ಪಾದಗಳನ್ನು ನನ್ನ ಕಣ್ಗಳು ಎಂದು ಕಾನುವುದು ?)” ಹಾಗು ″ಕಾಣಕ್ ಕರುದುಮ್ ಎನ್ ಕಣ್ಣೇ(ತಿರುವಾಇಮೊೞಿ 9.5.1 ನನ್ನ ಕಣ್ಗಳು ನೋಡಲು ಇಚ್ಛಿಸುತ್ತವೆ)” ಯಂತೆ ಪ್ರಪತ್ತಿಯೀಂದ ಲಭಿಸಿದ ಪರ ಭಕ್ತಿಯಕಾರಣದಿಂದ ಹೇಳುತಿದ್ದಾರೆ.
ವಿಲಾಸವಿಕ್ರಾಂತಪರಾವರಾಲಯಮ್
ನಮಸ್ಯದಾರ್ತಿಕ್ಷಪಣೇ ಕೃತಕ್ಷಣಮ್ |
ಧನಮ್ ಮದೀಯಮ್ ತವ ಪಾದಪಂಕಜಂ
ಕದಾ ನು ಸಾಕ್ಷಾತ್ಕರವಾಣಿ ಚಕ್ಷುಷಾ ||

ಪರರಾದ ಉತ್ಕೃಷ್ಟರಾದ ದೇವತೆಗಳ ಹಾಗು ಮಾನುಷ ಲೋಕಗಳನ್ನು ಅನಾಯಸವಾಗಿ ಕ್ರೀಡೆಯಂತೆ ಅಳೆದಂತಹ, ಹಾಗು ಅದನ್ನು ಆರಾದಿಸಿದವರ ಧುಃಖಗಳನ್ನು ನಶಿಸುವಂತಹ, ಹಾಗು ನನಗೆ ಧನದಂತಿರುವ ನಿನ್ನ ಪಾದಪಂಕಜಗಳನ್ನು ಎಂದು ಕಾಣುವೆ?

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/sthothra-rathnam-slokams-11-to-20-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment