ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 11 – 20

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

<< ಶ್ಲೋಕ 1-10

ಶ್ಲೋಕ 11 – ಈ ಶ್ಲೋಕದಲ್ಲಿ ಪರತ್ವ ಲಕ್ಷಣವು ವಿವರಿಸಲಾಗಿದೆ.
ಸ್ವಾಭಾವಿಕಾನವದಿಕಾತಿಶಯೇಶಿತೃತ್ವಂ
ನಾರಾಯಣ ತ್ವಯಿ ನ ಮೃಷ್ಯತಿ ವೈದಿಕಃ ಕಃ |
ಬ್ರಹ್ಮಾ ಶಿವಶ್ ಶತಮಖಃ ಪರಮಃ ಸ್ವರಾಡಿತಿ
ಏತೇऽಪಿ ಯಸ್ಯ ಮಹಿಮಾರ್ಣವವಿಪ್ರುಶಸ್ತೇ ||

ಹೇ ನಾರಾಯಣನೇ! ಬ್ರಹ್ಮಾ, ಶಿವ, ಇಂದ್ರ , ಕರ್ಮವಷ್ಯರಲ್ಲದವರೂ ಹಾಗು ಈ ಎಲ್ಲಾ ದೇವತೆಗಳಿಗಿಂತಲೂ ಶ್ರೇಷ್ಠರಾದ ಮುಕ್ತಾತ್ಮಗಳೆಲ್ಲರು ನಿನ್ನ ವೈಭವದ ಸಾಗರದಲ್ಲಿ ಹನಿಸದೃಶರು; ನಿನ್ನ ಅವಧಿಯಿಲ್ಲದ ಸ್ವಭಾವಿಕ ಐಶ್ವರ್ಯವನ್ನು (ನಿಯಮನ ಸಾಮರ್ಥ್ಯವನ್ನು) ಯಾವ ವೈದಿಕನು [ವೈದಿಕ (ಧರ್ಮವನ್ನು) ಆಚರಿಸುವವನು] ಸಹಿಸನು ?

ಶ್ಲೋಕ-12 – ಈ ಶ್ಲೋಕದಲ್ಲಿ ಆಳವಂದಾರ್ ಯಾವ ವ್ಯಕ್ತಿಯನ್ನು ಅನ್ವಯಿಸುತ್ತಿದೆಯೆಂದು ಸಂಶಯವೇಳುವ ಸರ್ವನಾಮಗಳೊ ವಿಶೇಷನಾಮಗಳಲ್ಲದೆ ಸ್ವತಃಪೂರ್ಣವಾಗಿರುವ ಹಾಗು ಸ್ಪಷ್ಟವಾಗಿ ಭಗವದ್ಪರತ್ವವನ್ನು ತೋರುವ ನಾಮಗಳನ್ನು ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಕಶ್ಶ್ರೀಃ ಶ್ರಿಯಃ ಪರಮ್ಸತ್ವಸಮಾಶ್ರಯಃ ಕಃ
ಕಃ ಪುಣ್ಡರೀಕನಯನಃ ಪುರುಷೋತ್ತಮಃ ಕಃ |
ಕಸ್ಯಾಯುತಾಯುತಶತೈಕಕಲಾಂಶಕಾಂಶೇ ವಿಶ್ವಮ್
ವಿಚಿತ್ರಚಿದಚಿತ್ಪ್ರವಿಭಾಗವೃತ್ತಮ್ ||
‘ಶ್ರೀ’ಯಿಗೂ(ಶ್ರೀಮಹಾಲಕ್ಷ್ಮಿಗೂ) ಶ್ರೀಯಾದವನು ಯಾರು ? ತಾವರೆಯಂತೆ ಕಣ್ಗಳನ್ನು ಹೊಂದಿರುವವನು ಯಾರು? ಪುರುಷೊತ್ತಮನು ಯಾರು? ಯಾರ ಸಂಕಲ್ಪದ ಹತ್ತು ಸಾವಿರ ಭಾಗಗಳಲ್ಲಿ ಒಂದನ್ನು ಪುನಃ ಹತ್ತು ಸಾವಿರವನ್ನಾಗಿ ಮಾಡಿ ಆ ಒಂದು ಭಾಗವನ್ನು ನೂರರ ಭಾಗವನ್ನಾಗಿ ಮಾಡಿ ಆ ಅಲ್ಪಭಾಗದ ಅತ್ಯಲ್ಪಭಾಗದಿಂದ ಧರಿಸುವುದು.

ಶ್ಲೋಕ 13 – ಆಳವಂದಾರ್ ಇತಿಹಾಸ ಪುರಾಣಗಳಿಂದ ವ್ಯಕ್ತವಾಗಿರುವ ಬ್ರಹ್ಮರುದ್ರಾದಿಗಳ ಕ್ಷೇತ್ರಜ್ಞತ್ವವನ್ನು ಭಗವದ್ಪರತ್ವವನ್ನು ವಿವರಿಸುತಿದ್ದಾರೆ.
ವೇದಾಪಹಾರಗುರುಪಾತಕ ದೈತ್ಯಪೀಡಾದಿ
ಆಪತ್ ವಿಮೋಚನಮಹಿಷ್ಠಪಲಪ್ರದಾನೈಃ |
ಕೋನ್ಯಃ ಪ್ರಜಾಪಶುಪತೀ ಪರಿಪಾತಿ ಕಸ್ಯ
ಪಾದೋದಕೇನ ಶಿವಸ್ ಸ್ವಶಿರೋದೃತೇನ ||
ಪ್ರಜಾಪತಿಯೆಂದು ಅರಿಯಲ್ಪಡುವ ಬ್ರಹ್ಮನನ್ನು ,ಪಶುಪತಿಯೆಂದು ಅರಿಯಲ್ಪಡುವ ರುದ್ರನನ್ನು, ವೇದದ ಅಪಹಾರ (ಬ್ರಹ್ಮಾ ವೇದವನ್ನು ಕಳೆದುಕೊಳ್ಳುವುದು), ತಂದೆಯ ತಲೆಯನ್ನೆ ಕೀಳುವುದರಿಂದ ಬಂದ ಪಾಪ(ರುದ್ರನು ಬ್ರಹ್ಮನ ಶಿರಸ್ಸನ್ನು ಕೀಳುವುದು) ,ಅಸುರರಿಂದ ಬಂದ ದುಃಖದಂತಃ( ಇಂದ್ರಾದಿ ದೇವತೆಗಳಿಗೆ) ಅಪಾಯಗಳನ್ನು ನಿವರಿಸಿದವನು (ನೀನೇ ಅಲ್ಲವೆ) ಯಾರು. ಯಾರ ಶ್ರೀಪಾದತೀರ್ಥವನ್ನು ಧರಿಸುವುದರಿಂದ ಶಿವನು ಶುದ್ಧನಾದನು ?

ಶ್ಲೋಕಮ್ 14 – ಭಗವದ್ಪರತ್ವವನ್ನು (ವಿವರಿಸುವ ಈ ಐದು ಶ್ಲೋಕಗಳ ರೂಪದಲ್ಲಿರುವ) ವಿವರಣೆಯನ್ನು ನಿಗಮಿಸಿ ಆಳವಂದಾರ್ ಪ್ರಮಾಣಾಭಿಮತವಾಗಿರುವ (ಶಾಸ್ತ್ರಕ್ಕೆ ಅನುಗುಣವಾಗಿರುವ) ತರ್ಕ ಹಾಗು ಅನುಮಾನದಿಂದ ಭಗವದ್ಪರತ್ವವನ್ನು ವಿವರಿಸುತಿದ್ದಾರೆ.

ಕಸ್ಯೋದರೇ ಹರವಿರಿಞ್ಚಿಮುಖಃ ಪ್ರಪಞ್ಚಃ
ಕೋ ರಕ್ಷತೀಮಮಜನಿಷ್ಟ ಕಸ್ಯ ನಾಭೇಃ |
ಕ್ರಾನ್ತ್ವಾ ನಿಗೀರ್ಯ ಪುನರುದ್ಗಿರತಿ ತ್ವದನ್ಯಃ
ಕಃ ಕೇನ ವೈಷ ಪರವಾನಿತಿ ಶಕ್ಯಶಙ್ಕಃ ||
ಯಾರ ಉದರದಲ್ಲಿ(ಹೋಟ್ಟೆಯಲ್ಲಿ) ಶಿವ ಬ್ರಹ್ಮಾದಿಗಳು ಇದ್ದರೋ? ಯಾರು ಈ ಜಗತ್ತನ್ನು ರಕ್ಷಿಸುತ್ತಿರುವನೋ? ಯಾರ ನಾಭಿಯಿಂದ (ಈ ) ಲೋಕದ ಶೃಷ್ಟಿಯಾಯಿತೋ ? ನೀನಲ್ಲದೆ ಬೇರೆಯವರಾರು ಈ ವಿಶ್ವವನ್ನು ವ್ಯಾಪಿಸಿ,  ನುಂಗಿ ಉಗುಳಿದನು ? ನಿನ್ನ ಈ ಲೋಕಸ್ವಾಮಿತ್ವದಲ್ಲಿ ಶಂಕೆಯೂ ಸಾಧವೆ ?

ಶ್ಲೋಕ-15 – ಈ ಶ್ಲೋಕದಲ್ಲಿ ಆಸುರೀಮ್ ಯೋನಿಮಾಪನ್ನಾಃ ಎಂದು ಹೇಳಿದಂತೆ, ಸುದೃಡವಾಗಿ ಶಾಸ್ತ್ರ ಪ್ರಮಾಣಸಿಧ್ದವಾದರು, “ಅಯ್ಯೋ! ಈ ಆಸುರ ಸ್ವಭಾವವನ್ನುಳ್ಳವರು ಅವನನ್ನು ಕಳೆದುಕೊಳ್ಳುತ್ತಿದ್ದಾರೆ !” ಎಂದು ಆಳವಾಂದಾರ್ ಇಂತವರ ನಷ್ಠವನ್ನು ಕಂಡು ದುಃಖಿಸಿಸುತಿದರೆ. ಅಥವ ಇನ್ನಿಂದು ನಿರ್ವಾಹ- ಇಂತಃ ವಿಲಕ್ಷಣನ ಭಗವಂತನು “ಯಾರುಮೋರ್ ನಿಲೈಮೈಯ ಎನ ಅಱಿವರಿಯ ಎಮ್ಪೆರುಮಾನ್” [ತಿರುವಾಯ್ಮೋೞಿ 1.3.4: (ಮಾತ್ಸರ್ಯಯುಕ್ತರಿಂದ) ಇಂತಃ ಗುಣಾನ್ವಿತನೆಂದು ಅರಿಯಲಾಗದಂತವನು, ಎಮ್ಪೆರುಮಾನ್] ಎಂದು ಹೇಳಿದಂತೆ ಇಂತಃ ವಿಲಕ್ಷಣನಾನ ಭಗವಂತನು ಆಸುರ ಪ್ರಕೃತಿಗಳಿಂದ ಕಾಣದಿರಲಿ
ತ್ವಾಮ್ ಶೀಲರೂಪಚರಿತೈಃ ಪರಮಪ್ರಕೃಷ್ಟ
ಸತ್ವೇನ ಸಾತ್ವಿಕತಯಾ ಪ್ರಬಲೈಶ್ಚ ಶಾಸ್ತ್ರೈಃ |
ಪ್ರಖ್ಯಾತದೈವಪರಮಾರ್ಥವಿದಾಮ್ ಮತೈಶ್ಚ
ನೈವಾಸುರಪ್ರಕೃತಯಃ ಪ್ರಭವನ್ತಿ ಬೋದ್ಧುಮ್ ||
(ಅಯ್ಯೋ !) (ಸರ್ವ ಶ್ರೇಷ್ಟನೇ!) ನಿನ್ನನ್ನು ಆಸುರ ಸ್ವಭಾವವುಳ್ಳವರು ಈ ರೀತಿಯಲ್ಲಿ

  • ನಿನ್ನ ಶೀಲ ಗುಣವನ್ನು(ಸೌಶೀಲ್ಯ ಗುಣ) ,(ವೇದಗಳಿಂದ ಶ್ಲಾಘಿಸಲ್ಪಟ್ಟ ನಿನ್ನ) ರೂಪವನ್ನು ಹಾಗು ದಿವ್ಯಚೇಷ್ಟಿತಗಳಿಂದ,
  • ನಿನ್ನ ಸತ್ವಮಯವಾದ ಲೋಕ/ ಐಶ್ವರ್ಯಗಳಿಂದ,
  • ಸುದೃಡವಾದ ಸಾತ್ವಿಕ ಶಾಸ್ತ್ರಗಳಿಂದ,
  • ನಿನ್ನನ್ನು ತತ್ತ್ವತಃ (ಯಥಾರ್ಥವಾಗಿ) ತಿಳಿದವರ ಅಭಿಪ್ರಾಯಗಳಿಂದಲೂ
  • ತಿಳಿಯಲ್ಪಡುವನೆಂದು ಅರಿಯಲು ಸಮರ್ಥರಲ್ಲ.

ಶ್ಲೋಕ-16 – ಆಳವಂದಾರ್ ಎಮ್ಪೆರುಮಾನಿನ ಸೌಲಭ್ಯವನ್ನು ಕಂಡು ಅವನನ್ನು ಹೊಂದುವ ಮಹಾನರಬಗ್ಗೆ ಚಿಂತಿಸಿ (ಅವರು ಎಮ್ಪೆರುಮಾನನ್ನು ಸೇರುವುದನ್ನೇ) ಅದನ್ನೆ ತಮ್ಮ ಪ್ರಯೋಜನವೆಂದು ಭಾವಿಸುತ್ತಿದ್ದಾರೆ.
ಉಲ್ಲಙ್ಗಿತ ತ್ರಿವಿದ ಸೀಮಸಮಾದಿಶಾಯಿ
ಸಮ್ಭಾವನಮ್ ತವ ಪರಿಬ್ರಡಿಮಸ್ವಭಾವಮ್ |
ಮಾಯಾಬಲೇನ ಭವತಾಪಿ ನಿಗೂಹ್ಯಮಾನಮ್
ಪಶ್ಯನ್ತಿ ಕೇಚಿದನಿಶಮ್ ತ್ವದನನ್ಯಭಾವಾಃ ||

ತ್ರಿವಿಧಪರಿಚ್ಛೇದರಹಿತವಾದ (ಕಾಲದಿಂದ, ದೇಶದಿಂದ ಹಾಗು ವಸ್ತುವಿಂದ) ಹಾಗು ನಿಸ್ಸಂದೇಹವಾಗಿ “ನಿನಗೆ ಸಮರಾಗಲಿ ಅಧಿಕರಾಗಲಿ ಇಲ್ಲದಿರುವಂತಹ ಪ್ರಭುತ್ವವು, ನಿನ್ನ ಆಶ್ಚರ್ಯ ಶಕ್ತಿಯಿಂದ ಮರೈಯಿಸಲ್ಪಟ್ಟದ್ದಾಗಿದರೂ ಕೆಲವು ಮಹಾನರು ನಿನ್ನನ್ನೇ ಏಕಚಿತ್ತರಾಗಿ ನೋಡುತಿದ್ದಾರೆ.

ಶ್ಲೋಕ-17 – ಇಲ್ಲಿ ಆಳವಂದಾರ್ ಭಗವದಧೀನದಲ್ಲಿರುವ ಹಾಗು ಹಿಂದೆ ಹೇಳಲ್ಪಟ್ಟ ತನ್ನ ಸರ್ವೇಶ್ವರತ್ವಕ್ಕೆ ಪಾತ್ರವಾಗಿರುವ ವಸ್ತು-ವೈಚಿತ್ರ್ಯವನ್ನು ವಿವರಿಸುತಿದ್ದಾರೆ.
ಯದಣ್ಡಮ್ ಅಣ್ಡಾತರ ಗೋಚರಮ್ ಯತ್
ದಶೋತ್ತರಾಣ್ಯಾವರಣಾನಿ ಯಾನಿ |
ಗುಣಾಃ ಪ್ರದಾನಮ್ ಪುರುಷಃ ಪರಮ್ ಪದಮ್
ಪರಾತ್ಪರಮ್ ಬ್ರಹ್ಮ ತೇ ವಿಭೂತಯಃ ||
(1) ಬ್ರಹ್ಮನ ಅಧೀನದಲ್ಲಿರುವ [14 ಪದರಗಳನ್ನು ಹೊಂದಿರುವ ಜಗತ್ತು] ಬ್ರಹ್ಮಾಂಡವನ್ನು,(2)ಅಂಡದಲ್ಲಿರುವವು ಯಾವೊ ಅವನ್ನು,(3)[ಅಂಡವನ್ನು ಅವರ್ತಿಸುವ ಆ ಒಂಕ್ಕಿಂದ ಒಂದು ಹತ್ತಷ್ಠು ದೊಡ್ಡದಾಗಿರುವ ಒಂದೊಂದು ಆವರಣವನ್ನು ಹಾಗು ಸಮಗ್ರವಾದ ಸಪ್ತ ಆವರಣಗಳನ್ನು(4)ಸತ್ವ(ಒಳ್ಳೆಯದ್ದು / ಶ್ರೇಯಸ್ಕರವಾದದ್ದು) ರಜಸ್(ಆಸೆ) ಹಾಗು ತಮಸ್ಗಳನ್ನು(ಅಜ್ಞಾನ)(5)ಮೂಲ ಪ್ರಕೃತಿಯನ್ನು(6) ಜೀವತ್ಮಗಳ ಸಮಷ್ಟಿಯನ್ನು(ಗುಂಪು)(7) ಶ್ರೀವೈಕುಂಠವನ್ನು (8) [ಬ್ರಹ್ಮಾದಿ ದೇವತೆಗಳಿಂದ ಉತ್ಕೃಷ್ಟರಾದ] ಮುಕ್ತಾತ್ಮಗಳಿಂದಲೂ ಪರರಾದ ನಿತ್ಯಸೂರಿಗಳ ಸಮಷ್ಟಿಯನ್ನು ಹಾಗು(9) ದಿವ್ಯ ವಿಗ್ರಹವು(ಗಳು) ನಿನ್ನ ಶರೀರವು ಅಥವಾ ರೂಪಗಳು.

ಶ್ಲೋಕ-18 – ಆಳವಂದಾರ್ ಹಿಂದೆ ಶರಣ್ಯನ(ಗತಿ- ಭಗವಾನ್) ವೈಭವವವನ್ನು ಹೇಳಿದರು, ಹಾಗು ಈ ಪಾಸುರದಲ್ಲಿ, “ಇಂತಃ ಉಭಯ-ವಿಭೂತಿ-ನಾಥನ್ನು ಹೇಗೆ ಆಶ್ರಯಿಸಲಿ” ಎಂಬ ಶಂಕೆಯನ್ನು ದೂರಮಾಡಲು, ಭಕ್ತರ ತನ್ನನ್ನು ಅನುಭವಿಸುವಂತೆ ಮಾಡುವ 12 ಗುಣಗಳನ್ನು ವಿವರಿಸುತ್ತಿದ್ದಾರೆ. ಅಥವಾ ಹಿಂದೆ ಭಗವಂತನ ಸರ್ವೇಶ್ವರತ್ವವು ವಿವರಿಸಲ್ಪಟ್ಟಿತು, ಹಾಗು ಈಗ ಹೇಳಲು ಪ್ರಾಪ್ತವಾದ ಅವನ ಗುಣಗಳನ್ನು ಹೇಳುತಿದ್ದಾರೆ.
ವಶೀ ವದಾನ್ಯೋ ಗುಣವಾನ್ ಋಜುಶ್ ಶುಚಿರ್
ಮೃದುರ್ದಯಾಳುರ್ ಮಧುರಸ್ ಸ್ಥಿರಸ್ ಸಮಃ |
ಕ್ರುತೀ ಕ್ರುತಜ್ಞಸ್ತ್ವಮಸಿ ಸ್ವಭಾವತಸ್
ಸಮಸ್ತಕಲ್ಯಾಣಗುಣಾಮೃತೋದದಿಃ ||

ನೀನು ಸ್ವಭಾವತಃವೇ (1) (ಭಕ್ತರ) ಅಧೀನದಲ್ಲಿರುವವನು ,(2) (ಭಕ್ತರಿಗೆ ನಿನ್ನನ್ನು ಪ್ರಕಾಶಿಸುವಂತಹ) ಉದಾರನು ,(3) ಸೌಶೀಲ್ಯವನ್ನು ಉಳ್ಳವನು(ಉತ್ತಮ ಸ್ವಭಾವವನ್ನು ಹೊಂದಿರುವವನು) ,(4)ಯಾವ ತಾರತಮ್ಯವು ಇಲ್ಲದೆ ಎಲ್ಲರೊಂದಿಗೂ ಪಳಗುವನು ,(5)(ಮನೋ-ವಾಕ್-ಕಾಯಗಳಲ್ಲಿ) ಆರ್ಜವದಿಂದಿರುವನು ,(6)(ನಿರ್ಹೇತುಕಕರುಣೆಯನ್ನು- ಯಾವ ಕಾರಣವಿಲ್ಲದೆ ತೋರುವ ಕರುಣೆಯನ್ನು ತೋರುವ ) ಶುದ್ಧಿಯನ್ನು ಉಳ್ಳವನು ,(7)ಭಕ್ತರ-ವಿಶ್ಲೇಶವನ್ನು ತಾಳಲಾರದವನು ,(8)(ಭಕ್ತರ ಧುಃಖವನ್ನು ತಾಳಲಾರದಂತಹ) ದಯೆಯನ್ನು ಉಳ್ಳವನು ,(9)ಮಧುರವಾಗಿರುವನು, (ಭಕ್ತರನ್ನು ರಕ್ಷಿಸುವುದರಲ್ಲಿ ) ಸ್ಥಿರವಾಗಿರುವನು(10)(ನಿನಲ್ಲಿ ಶರಣಾದ) ಎಲ್ಲರಿಗು ಸಮನಾಗಿರುವವನು ,(11)[ಭಕ್ತರನ್ನು ತನ್ನವರೆಂದು ಭಾವಿಸುತ್ತಾ ಅವರ] ಕಾರ್ಯಗಳಲ್ಲಿ ಪ್ರವರ್ತಿಸುವವನು, (12)ಭಕ್ತರ ಚಿಕ್ಕ ಕಾರ್ಯದಿಂದಲೂ ಕೃತಜ್ಞತೆಯನ್ನು ತೋರುವವಂತಹ ಕಲ್ಯಾಣ ಗುಣಗಳ ಅಮೃತ-ಸಾಗರನು.

ಶ್ಲೋಕ-19- ಆಳವಂದಾರ್ ಹೇಗೆ ಭಗವಾನಿನ ಕಲ್ಯಾಣ ಗುಣಗಳು ಅನಂತವೋ ಅದೇ ರೀತಿಯಲ್ಲಿ ಪ್ರತಿಯೊಂದು ಗುಣವು ತನ್ನಲ್ಲೆ ಅಪರಿಮಿತವಾಗಿದೆ.
ಉಪರ್ಯುಪರ್ಯುಬ್ಜಭುವೋ£ಪಿ ಪೂರುಷಾನ್
ಪ್ರಕಲ್ಪ್ಯ ತೇ ಯೇ ಶತಮಿತ್ಯನುಕ್ರಮಾತ್ |
ಗಿರಸ್ ತ್ವದೇಕೈಕಗುಣಾವಧೀಪ್ಸಯಾ
ಸದಾ ಸ್ಥಿತಾ ನೋದ್ಯಮತೋ£ತಿ ಶೇರತೇ ||
ನಿನ್ನ ಪ್ರತಿಯೊಂದು ಗುಣದ ಮಿತಿ(ಸೀಮೆಯನ್ನು) ನೋಡಲು ಇಚ್ಛಿಸುತ್ತಾ ಎಂದೂ ಹೆಚ್ಚು ಬ್ರಹ್ಮಗಳನ್ನು ಕಲ್ಪಿಸುತ್ತಾ ಅವರಿಗೆ “ತೇ ಯೇ ಶತಮ್”(ನೂರರಷ್ಟು) ಎಂದು ಹೇಳುತ್ತಲೆ ಇದ್ದರು ವೇದವಾಕ್ಯಗಳು ಸ್ವಲ್ಪವು ಮುಂದೆ ಸಾಗಲಿಲ್ಲ.

ಶ್ಲೋಕ- 20 – ಈಗ ಆಳವಂದಾರ್ ಹಿಂದೆ ಹೇಳಲ್ಪಟ್ಟ ಭಗವದ್-ಗುಣ-ರಸಿಕರಾದ ಭಕ್ತರ ವೈಭವನ್ನು ವಿವರಿಸುತಿದ್ದಾರೆ, ಅಥವಾ (ಇನ್ನೋಂದು ನಿರ್ವಾಹ) “ಅಸ್ಮಿನ್ನಸ್ಯ ಚ ತದ್ಯೋಗಮ್ ಶಾಸ್ತಿ”(ಬ್ರಹ್ಮ ಸೂತ್ರಮ್ 1.1.20-ಜೀವಾತ್ಮ ಪರಮಾತ್ಮರ ಅನಂದಮಯವಾದ ಸಾಯುಜ್ಯವನ್ನು ಶ್ರುತಿ ವಿವರಿಸುವುದು) ಎಂದು ಹೇಳಿದಂತೆ ಭಗವಂತನಿಂದ ಭಕ್ತರು ಇಂತಹ ವೈಭವನ್ನು ಹೊಂದಿದ್ದಾರೆಂದರೆ, ಭಗವಂತನ ವೈಭವವು (ಪರೀಕ್ಷಿಸಿ) ಹೇಳಲು ಸಾಧ್ಯವೆಂದು ಸ್ಪಷ್ಟವಾಗಿದೆ.
ತ್ವದಾಶ್ರಿತಾನಾಮ್ ಜಗದುದ್ಭವಸ್ತಿತಿ
ಪ್ರಣಾಶಸಂಸಾರವಿಮೋಚನಾದಯಃ |
ಭವನ್ತಿ ಲೀಲಾ ವಿದಯಶ್ಚ ವೈದಿಕಾಸ್
ತ್ವದೀಯ ಗಂಭೀರ ಮನೋನುಸಾರಿಣಃ ||

(ಬ್ರಹ್ಮಾದಿಗಳಂತಹ) ನಿನ್ನ ಭಕ್ತರಿಗೆ ಜಗತ್ ಶೃಷ್ಟಿ , ರಕ್ಷಣೆ , ಸಂಹಾರ , ಸಂಸಾರ ತರಣಾದಿಗಳು ಕ್ರೀಡೆಯಂತಿವೆ; ವೇದದ ನಿಯಮಗಳೂ ಸಹ ನಿನ್ನ ಭಕ್ತರ ಆಳವಾದ ದಿವ್ಯ ಹೃದಯವನ್ನೇ ಅನುಸರಿಸುವುದು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/sthothra-rathnam-slokams-11-to-20-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment