ತಿರುವಾಯ್ಮೊೞಿ – ಸರಳ ವಿವರಣೆ – 10.1 – ತಾಳತಾಮರೈ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 9.10 – ಮಾಲೈನಣ್ಣಿ


ಆಳ್ವಾರರು ಎಂಪೆರುಮಾನರಿಗಾಗಿ ಶಾಶ್ವತವಾಗಿ ಕೈಂಕರ್‍ಯವನ್ನು ಮಾಡಲು ಬಯಸುತ್ತಾರೆ. ಆದರೆ ಈ ಲೋಕದಲ್ಲಿ ಅದು ಸಾಧ್ಯವಿಲ್ಲವೆಂದೂ, ಅದಕ್ಕಾಗಿ ಪರಮಪದವನ್ನು ಏರಿ ,ಆ ಕೈಂಕರ್‍ಯವನ್ನು ಮಾಡಬೇಕೆಂದು ಮನಗಾಣುತ್ತಾರೆ. ಅದಕ್ಕಾಗಿ ತಿರುಮೋಹೂರ್‌ನಲ್ಲಿರುವ ಕಾಳಮೇಗಮ್ ಪೆರುಮಾಳ್ ಒಬ್ಬರೇ ಪರಮಪದಕ್ಕೆ ಸೇರಲು ಇರುವ ತೊಂದರೆಯನ್ನು ನಿವಾರಿಸಲು ಮತ್ತು ಪರಮಪದಕ್ಕೆ ಕರೆದೊಯ್ಯಲು ಸಾಧ್ಯವೆಂದು ಆ ಎಂಪೆರುಮಾನರಿಗೆ ಶರಣಾಗತರಾಗುತ್ತಾರೆ. ಪರಮಪದದ ಪ್ರಯಾಣಕ್ಕೆ ತನ್ನನ್ನು ಜೊತೆಗಾರನಾಗಿ ಪರಿಗಣಿಸಬೇಕೆಂದು ಕೋರುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಮಗೆ ತೊಂದರೆಗಳನ್ನು ನಿವಾರಿಸುವ ಗುಣವಿರುವ ಕಾಳಮೇಗ ಎಂಪೆರುಮಾನರನ್ನು ಬಿಟ್ಟರೆ ಯಾವ ಆಶ್ರಯವೂ ಇಲ್ಲ “

ತಾಳ ತಾಮರೈ ತ್ತಡಮಣಿ ವಯಲ್ ತಿರುಮೋಗೂರ್,
ನಾಳುಮ್ ಮೇವಿ ನನ್ಗಮರ್ನ್ದು ನಿನ್‍ಱು ಅಶುರರೈ ತ್ತಗರ್ಕ್ಕುಮ್,
ತೋಳು ನಾನ್ಗುಡೈ ಚ್ಚುರಿ ಕುೞಲ್ ಕಮಲಕ್ಕಣ್ ಕನಿ ವಾಯ್,
ಕಾಳಮೇಗತ್ತೈ ಯೆನ್‍ಱಿ ಮಱ್ಱೊನ್‍ಱಿಲಮ್ ಗದಿಯೇ ॥

ವೈರಿಗಳಾದ ರಾಕ್ಷಸರನ್ನು ಹತ್ಯೆಗೊಳಿಸಲು ಕಾಳಮೇಗಮ್ ಎಂಪೆರುಮಾನರು ತಿರುಮೋಗೂರ್‌ನಲ್ಲಿ , ಅತೀವ ಆತ್ಮತೃಪ್ತಿಯ ಆನಂದದೊಂದಿಗೆ ,ಬಲವಾಗಿ ನಿಂತು, ಶಾಶ್ವತವಾಗಿ ನೆಲೆಸಿದ್ದಾರೆ. ಅಲ್ಲಿ ರೈತರ ಗದ್ದೆಗಳು, ಬಲವಾದ ಕಾಂಡಗಳನ್ನು ಹೊಂದಿದ, ತಾವರೆ ಹೂಗಳುಳ್ಳ ಕೆರೆಗಳೊಂದಿಗೆ ಅಲಂಕೃತವಾಗಿದೆ. ಎಂಪೆರುಮಾನರಿಗೆ ನಾಲ್ಕು ದಿವ್ಯ ಕೈಗಳು, ಸುರುಳಿಕೊಂಡಿರುವ ಮುಂಗುರುಳು, ದಟ್ಟವಾದ ಕೂದಲು, ತಾವರೆಯಂತಹ ದಿವ್ಯ ಕಣ್ಣುಗಳು , ಹವಳದಂತಹ ಸ್ನೇಹಭರಿತವಾದ ದಿವ್ಯ ತುಟಿಗಳಿವೆ. ಅಂತಹ ಭವ್ಯವಾದ, ಕಪ್ಪು ಮೇಘದಂತಿರುವ, ನಮಗೆ ನಿರ್ದಿಷ್ಟ ಗುರಿಯಾಗಿರುವ ಎಂಪೆರುಮಾನರನ್ನು ಬಿಟ್ಟು ಬೇರೆ ಯಾವ ಆಶ್ರಯವೂ ನಮಗಿಲ್ಲ.

ಎರಡನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಉಲ್ಲಾಸಭರಿತವಾದ ಎಂಪೆರುಮಾನರ ದಿವ್ಯ ಪಾದಗಳನ್ನು ಬಿಟ್ಟು ನಮಗೆ ಬೇರೆ ಯಾವ ಆಶ್ರಯವೂ ಇಲ್ಲ. ಅವರಿಗೆ ದಿವ್ಯ ನಾಮಗಳಿವೆ. ಅವುಗಳ ಆನಂದವು ಭಕ್ತರ ಆಯಾಸವನ್ನು ನಿರ್ಮೂಲನೆ ಮಾಡಿ, ಅವರನ್ನು ಮೇಲೆತ್ತುತ್ತದೆ.”

ಇಲಮ್ ಗದಿ ಮಱ್ಱೊನ್‍ಱು ಎಮ್ಮೈಕ್ಕುಮ್ ಈನ್ ತಣ್ ತುೞಾಯಿನ್,
ಅಲಙ್ಗಲಮ್ ಕಣ್ಣಿ ಆಯಿರಮ್ ಪೇರ್ ಉಡೈ ಅಮ್ಮಾನ್,
ನಲಮ್ ಕೊಳ್ ನಾನ್ಮಱೈ ವಾಣರ್‌ಗಳ್ ವಾೞ್ ತಿರುಮೋಗೂರ್,
ನಲಮ್‍ಕೞಲವನಡಿನಿೞಲ್ ತಡಮನ್‍ಱಿ ಯಾಮೇ ॥


ಕಾಳಮೇಗಮ್ ಎಂಪೆರುಮಾನರು ಸುಂದರವಾದ, ಜೀಕುತ್ತಿರುವ ತಿರುತ್ತುೞಾಯ್ ಹಾರದಿಂದ ಅಲಂಕೃತರಾಗಿದ್ದಾರೆ. ಅದು ಅದರಲ್ಲಿ ಪೋಣಿಸಿದ ಹೂವುಗಳಿಗೆ ತಂಪಾದ ಅನುಭವನ್ನು ಕೊಟ್ಟು ಆನಂದಮಯವನ್ನಾಗಿಸಿದೆ. ಅವರು ಯಾವ ಷರತ್ತುಗಳೂ ಇಲ್ಲದ ಸ್ವಾಮಿಯು , ಆನಂದಭರಿತವಾದ ಅನೇಕ ನಾಮಗಳನ್ನು ಹೊಂದಿದ್ದಾರೆ. ಅವರು ತಿರುಮೋಗೂರ್‌ನಲ್ಲಿ ವಾಸವಾಗಿದ್ದಾರೆ. ಅಲ್ಲಿ ವೇದಗಳಲ್ಲಿ ಪಾರಂಗತ್ಯ ಹೊಂದಿರುವ, ಇತರರಿಗಾಗಿ ಅನುಕಂಪ ತೋರಿಸುವ, ಅವನ ವಿಶಿಷ್ಟವಾದ ರಕ್ಷಿಸುವ ಇತ್ಯಾದಿ ಗುಣಗಳನ್ನು ಆಸ್ವಾದಿಸುವುದರಿಂದ ತಮ್ಮ ಜೀವನವನ್ನು ಉತ್ಕೃಷ್ಟಗೊಳಿಸಿಕೊಂಡಿರುವ ಜನರು ವಾಸವಾಗಿದ್ದಾರೆ. ನಮ್ಮ ಎಲ್ಲಾ ಜನ್ಮಗಳಲ್ಲೂ, ನಮಗೆ ಅಲ್ಲಿಯ ಕೆರೆಯ ನೆರಳನ್ನು ಬಿಟ್ಟರೆ ಯಾವ ಗುರಿಯೂ ಇಲ್ಲ. ಬೇರೆ ವಾಕ್ಯದಲ್ಲಿ ಹೇಳುವುದಾದರೆ, ಎಂಪೆರುಮಾನರ ವಿಜಯದ ಕಾಲ್ಗೆಜ್ಜೆಗಳನ್ನು ಹೊಂದಿರುವ ದಿವ್ಯ ಪಾದಗಳು, ಭಕ್ತರಲ್ಲಿ ಭೇದ ಭಾವ ಎಣಿಸದೇ ಅವರಲ್ಲಿಗೆ ಕರೆದೊಯ್ಯುತ್ತದೆ.

ಮೂರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾವೆಲ್ಲರೂ ತಿರುಮೋಗೂರ್‌ಗೆ ಹೋಗಿ ಸೇರೋಣ. ಅಲ್ಲಿ ಸರ್ವೇಶ್ವರನು ಎಲ್ಲಾ ಕಲ್ಯಾಣ ಗುಣಗಳನ್ನು ಹೊಂದಿ, ನಿರಂತರವಾಗಿ ವಾಸವಾಗಿದ್ದಾನೆ. ಅವನು ನಮ್ಮ ಎಲ್ಲಾ ಸಂಕಟಗಳನ್ನು ದೂರ ಮಾಡುತ್ತಾನೆ. ಇದನ್ನು ಒಳ್ಳೆಯ ಸಲಹೆಯಾಗಿ ತೆಗೆದುಕೊಳ್ಳಿ.”

ಅನ್‍ಱಿ ಯಾಮ್ ಒರುಪುಗಲಿಡಮ್ ಇಲಮ್ ಎನ್‍ಱೆನ್‍ಱಲಟ್ಱಿ,
ನಿನ್‍ಱು ನಾನ್ಮುಗನ್ ಅರನೊಡು ದೇವರ್ಗಳ್ ನಾಡ
ವೆನ್‍ಱು ಇಮ್ಮೂವುಲಗಳಿತ್ತು ಉೞಲ್ವಾನ್ ತಿರುಮೋಗೂರ್,
ನನ್‍ಱು ನಾಮ್ ಇನಿ ನಣುಗುದುಮ್ ನಮದಿಡರ್ ಕೆಡವೇ ॥

ಎಂಪೆರುಮಾನರನ್ನು ಮತ್ತೆ ಮತ್ತೆ ಕೂಗಿ ಕರೆದು “ ನಿನ್ನನ್ನು ಬಿಟ್ಟರೆ ಬೇರೆ ಯಾವ ಗತಿಯೂ ಇಲ್ಲ “ ಎಂದಾಗ , ಪ್ರತಿಯೊಂದು ಸಲವೂ ದುರ್ಬಲನಾಗುತ್ತಾ, ಅನೇಕ ದೇವತೆಗಳು ಬ್ರಹ್ಮ, ರುದ್ರ ಮುಂತಾದವರು ಆಕಾಶದಲ್ಲಿ ನಿಂತಾಗ, ನಾವು ಎಂಪೆರುಮಾನರನ್ನು ಹೊಂದಲು ಸಮೀಪಿಸಲು ನಾವೆಲ್ಲರೂ ತಿರುಮೋಗೂರಿಗೆ ಹೋಗೋಣ. ಅಲ್ಲಿ ಮೂರು ಪದರದ ವಿಶ್ವದಲ್ಲಿ ವೈರಿಗಳನ್ನು ಜಯಿಸುವ ಒಬ್ಬನ ವಾಸಸ್ಥಾನವಾಗಿದೆ. ಮತ್ತು ಎಲ್ಲರ ರಕ್ಷಣೆಯು ಅವನ ದಿನಚರ್‍ಯವಾಗಿದೆ. ನಮ್ಮ ಮನಸ್ಸಿನ ಸಂಘರ್ಷಗಳನ್ನು ತೆಗೆದು ಹಾಕಲು, ಮತ್ತು ಅನನ್ಯಪ್ರಯೋಜನರಾಗಿ ನಾವು ಅವನನ್ನು ತಲುಪೋಣ.

ನಾಲ್ಕನೆಯ ಪಾಸುರಮ್ :
ಆಳ್ವಾರರು ಶ್ರೀವೈಷ್ಣವರನ್ನು ಆಮಂತ್ರಿಸುತ್ತಾ ಹೇಳುತ್ತಾರೆ, “ ಬನ್ನಿ, ನಾವು ನಮ್ಮ ಕಳವಳಗಳನ್ನು ತೊಡೆದು ಹಾಕಲು ತಿರುಮೋಗೂರಿನ ಎಂಪೆರುಮಾನರಿಗೆ ಶರಣಾಗತರಾಗೋಣ”.

ಇಡರ್‌ಕೆಡ ಎಮ್ಮೈ ಪ್ಪೋನ್ದಳಿಯಾಯ್ ಎನ್‍ಱೆನ್‍ಱೇತ್ತಿ,
ಶುಡರ್‌ಕೊಳ್ ಶೋದಿಯೈ ತ್ತೇವರುಮ್ ಮುನಿವರುಮ್ ತೊಡರ,
ಪಡರ್‌ಕೊಳ್ ಪಾಮ್ಬಣೈ ಪ್ಪಳ್ಳಿಕೊಳ್ವಾನ್ ತಿರುಮೋಗೂರ್,
ಇಡರ್‌ಕೆಡ ಅಡಿ ಪರವುದುಮ್ ತೊಣ್ಡೀರ್ ವಮ್ಮಿನೇ ॥


ಶ್ರೇಷ್ಠವಾದ ಹೊಳೆಯುವ ಪ್ರಕಾಶದ ರೂಪವನ್ನು ಹೊಂದಿರುವ ಎಂಪೆರುಮಾನರು ಕರುಣೆಯಿಂದ ದಿವ್ಯ ಸರ್ಪದ ಮೇಲೆ ಶಯನಿಸಿದ್ದಾರೆ. ಆ ಸರ್ಪವು ಮೃದುವಾಗಿ, ತಂಪಾಗಿ, ಸುಗಂಧಿತವಾಗಿ ಹಾವುಗಳ ಜಾತಿಯ ಸ್ವಭಾವಕ್ಕೆ ತಕ್ಕವನಾಗಿದೆ. ಅದು ಎಂಪೆರುಮಾನರ ಸ್ಪರ್ಶಕ್ಕೆ ತಾಗಿ ಅವರ ಗುಣವಾದ ವಿಸ್ತಾರತೆಯನ್ನು ಹೊಂದಿದೆ. ತಮ್ಮನ್ನೇ ಸ್ವಾಮಿಯೆಂದೂ, ಮುನಿಗಳೆಂದು ತಿಳಿದಿರುವ ದೇವತೆಗಳು ಎಂಪೆರುಮಾನರನ್ನು ನಿರಂತರವಾಗಿ ಹಿಂಬಾಲಿಸಿ, ಶರಣಾಗತರಾಗಿ, ಪದೇಪದೇ ಹೊಗಳಿ ಹೇಳುತ್ತಾರೆ, “ವೈರಿಗಳಿಂದ ಪರಿಣಮಿಸಿದ ದುಃಖಗಳನ್ನು ತೊಡೆದು ಹಾಕಿ ಈ ದಿವ್ಯಕ್ಷೇತ್ರಕ್ಕೆ ಬಂದು ನಮ್ಮನ್ನು ರಕ್ಷಿಸು. “ ಎಂದು. ಅಂತಹ ಎಂಪೆರುಮಾನರು ಈಗ ತಿರುಮೋಗೂರ್ ನಲ್ಲಿದ್ದಾರೆ. ಓಹ್! ಶರಣಾಗತರಾಗಲು ಇಚ್ಛೆಯುಳ್ಳವರೇ ! ಬನ್ನಿ, ಅವನ ದಿವ್ಯ ಪಾದಗಳನ್ನು ಹೊಗಳಿ ಕೊಂಡಾಡೋಣ.

ಐದನೆಯ ಪಾಸುರಮ್ :
ಆಳ್ವರರು ಹೇಳುತ್ತಾರೆ, “ ಎಂಪೆರುಮಾನರು ಕರುಣೆಯಿಂದ ಆಗಮಿಸಿ, ನೆಲೆಸಿರುವ ತಿರುಮೋಗೂರಿಗೆ ಬಂದು ಶರಣಾಗತರಾಗಿ.”

ತೊಣ್ಡೀರ್ ವಮ್ಮಿನ್ ನಮ್ ಶುಡರೊಳಿ ಒರುತನಿಮುದಲ್ವನ್,
ಅಣ್ಡಮೂವುಲಗಳನ್ದವನ್ ಅಣಿ ತಿರುಮೋಗೂರ್,
ಎಣ್ಡಿಶೈಯುಮ್ ಈನ್ ಕರುಮ್ಬೊಡು ಪೆರುಮ್ ಶೆನ್ನೆಲ್ ವಿಳೈಯ,
ಕೊಣ್ಡ ಕೋಯಿಲೈ ವಲಮ್ ಶೆಯ್‍ದು ಇಙ್ಗಾಡುದುಮ್ ಕೂತ್ತೇ ॥

ಓಹ್! ಶರಣಾಗತರಾಗಲು ಇಚ್ಛಿಸುವವರೇ! ಬನ್ನಿ ! ಆನಂದಮಯವಾದ , ಅಪರಿಮಿತವಾಗಿ ಹೊಳೆಯುವ ದಿವ್ಯ ಪ್ರಕಾಶತೆಯುಳ್ಳ ರೂಪವನ್ನು ಹೊಂದಿರುವ ಎಂಪೆರುಮಾನರು, ಮೂರು ರೀತಿಯ ಕಾರಣಕರ್ತೃವಾಗಿದ್ದಾರೆ. ಅವು : ಸಮರ್ಥತೆಯ ಕಾರಣಕರ್ತೃ, ಲೌಕಿಕ ಕಾರಣಕರ್ತೃ, ಮತ್ತು ಪೂರಕ ಕಾರಣಕರ್ತೃ. ಅವರು ಅಂಡಾಕಾರದ ವಿಶ್ವಮಂಡಲದಲ್ಲಿರುವ ಮೂರು ಪದರದ ಲೋಕಗಳನ್ನೆಲ್ಲಾ ಅಳೆದು, ಸ್ವೀಕರಿಸಿದ್ದಾರೆ. ಸಿಹಿಯಾದ ಕಬ್ಬುಗಳಿರುವ , ಎತ್ತರದ ಕೆಂಪಾದ ಭತ್ತದ ಗದ್ದೆಗಳು ಎಲ್ಲಾ ದಿಕ್ಕಿನಲ್ಲಿರುವ ತಿರುಮೋಗೂರಿನ ಗುಡಿಯಲ್ಲಿ ವಾಸಿಸಲು ಒಪ್ಪಿಕೊಂಡಿದ್ದಾರೆ. ಈ ಲೋಕದಲ್ಲಿಯೇ ಇರುವ ಅಂತಹ ದೇವಸ್ಥಾನಕ್ಕೆ ಪ್ರದಕ್ಷಿಣೆಯನ್ನು ಹಾಕಿ, ಅತಿಯಾದ ಪ್ರೇಮದಿಂದ ಹಾಡಿ, ಆಡೋಣ.

ಆರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ತಿರುಮೋಗೂರಿನಲ್ಲಿ ಕರುಣೆಯಿಂದ ನಿಂತಿರುವ ಎಂಪೆರುಮಾನರಿಗಿಂತಲೂ ನಂಬಿಕೆಗೆ ಅರ್ಹವಾದ, ರಕ್ಷಿಸುವ ದೇವರು ಎಲ್ಲೂ ಇಲ್ಲ. ಆದ್ದರಿಂದ ಅಂತಹ ದಿವ್ಯ ಪಾದಗಳಿಗೆ ಶರಣಾಗತರಾಗೋಣ.”

ಕೂತ್ತನ್ ಕೋವಲನ್ ಕುದಱ್ಱು ವಲ್ ಅಶುರರ್ಗಳ್ ಕೂಟ್ಱಮ್,
ಏತ್ತುಮ್ ನಙ್ಗಟ್ಕುಮ್ ಅಮರರ್ಕ್ಕುಮ್ ಮುನಿವರ್ಕ್ಕುಮ್ ಇನ್ಬನ್,
ವಾಯ್‍ತ್ತ ತಣ್ ಪಣೈ ವಳವಯಲ್ ಶೂೞ್ ತಿರುಮೋಗೂರ್,
ಆತ್ತನ್, ತಾಮರೈ ಅಡಿಯೆನ್‍ಱಿ ಮಱ್ಱಿಲಮ್ ಅರಣೇ ॥


ಎಂಪೆರುಮಾನರಿಗೆ ನೃತ್ಯದಲ್ಲಿ ಪರಿಣಿತರಾಗಿರುವವರಂತೆ ಸುಂದರವಾದ ನಡಿಗೆಯಿದೆ. ತಮ್ಮ ರಕ್ಷಣೆಯ ಅವಶ್ಯಕತೆ ಇರುವವರನ್ನು ಹಿಂಬಾಲಿಸಿ, ರಕ್ಷಿಸುತ್ತಾರೆ. ಅವರು ಕೇಶಿ, ಧೇನುಕ ಮುಂತಾದ ಬಲಶಾಲಿಯಾದ ಅಸುರರಿಗೆ ಮೃತ್ಯು ರೂಪವಾಗಿದ್ದಾರೆ. ಆ ಅಸುರರು ಕಡಿದು ಎಲ್ಲರಿಗೂ ತೊಂದರೆಯನ್ನುಂಟು ಮಾಡಿದ್ದರು. ಎಂಪೆರುಮಾನರನ್ನು ಹೊಗಳಿ, ಕೈಂಕರ್‍ಯವನ್ನು ಬಿಟ್ಟು ಬೇರೆ ಏನೂ ಅಪೇಕ್ಷೆಯಿಲ್ಲದ ನಮಗೆ, ನಿತ್ಯಸೂರಿಗಳಿಗೆ ಮತ್ತು ಮುನಿಗಳಿಗೆ ಅವರು ಆನಂದವನ್ನು ಕೊಡುತ್ತಾರೆ. ನಮಗೆ ಕೊನೆಯವರೆಗೂ ಆನಂದ ಕೊಡಬಲ್ಲ ಅತ್ಯಂತ ನಂಬಿಕೆಗೆ ಅರ್ಹವಾದ ಎಂಪೆರುಮಾನರ ದಿವ್ಯ ಪಾದಗಳನ್ನು ಬಿಟ್ಟರೆ ಯಾವ ರಕ್ಷಣೆಯೂ ಇಲ್ಲ. ಅವರು ತಣ್ಣಗಿನ ನೀರಿನ ತಾಣಗಳಿಂದ ಮತ್ತು ಸುಂದರವಾದ ತೋಟಗಳಿಂದ ಆವರಿಸಲ್ಪಟ್ಟ ತಿರುಮೋಗೂರಿನಲ್ಲಿ ಭಕ್ತರು ಶರಣಾಗುವುದಕ್ಕಾಗಿಯೇ ನೆಲೆಸಿದ್ದಾರೆ.

ಏಳನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ನಾವು ಎಂಪೆರುಮಾನರ ವಾಸಸ್ಥಳವಾದ ತಿರುಮೋಗೂರನ್ನು ಪ್ರವೇಶಿಸುತ್ತಿದ್ದಂತೆ , ನಮ್ಮ ಎಲ್ಲಾ ಸಂಕಷ್ಟಗಳೂ ತಕ್ಷಣ ನಷ್ಟವಾಗುತ್ತದೆ. ಏಕೆಂದರೆ ಎಂಪೆರುಮಾನರು ಎಲ್ಲದಕ್ಕೂ ಕಾರಣವಾದವರು, ಅವರು ನಮ್ಮನ್ನು ರಕ್ಷಿಸುವುದನ್ನು ನಿರಾಕರಿಸಲು ಸಾಧ್ಯವಿಲ್ಲ.”

ಮಱ್ಱಿಲಮ್ ಅರಣ್ ವಾನ್ ಪೆರುಮ್ ಪಾೞ್ ತನಿಮುದಲಾ,
ಶುಱ್ಱುಮ್ ನೀರ್‌ಪಡೈತ್ತು ಅದನ್‍ವೞಿ ತ್ತೊಲ್ ಮುನಿ ಮುದಲಾ,
ಮುಱ್ಱುಮ್ ದೇವರೋಡು ಉಲಗು ಶೆಯ್ವಾನ್ ತಿರುಮೋಗೂರ್,
ಶುಱ್ಱಿ ನಾಮ್ ವಲಮ್ ಶೆಯ್ಯ ನಮ್ ತುಯರ್ ಕೆಡುಮ್ ಕಡಿದೇ ॥

ಎಂಪೆರುಮಾನರಿಗೆ ತಮ್ಮದೇ ಆದ ವಿಶಿಷ್ಟತೆ ಇದೆ. ಅವರು ಪರಮ ಶ್ರೇಷ್ಠತೆ ಹೊಂದಿರುವವರು ಮತ್ತು ಲೌಕಿಕ ಮಾಯೆಯ ಎಲ್ಲಾ ಪರಿಣಾಮಗಳನ್ನು , ಮೂಲಾಧಾರ ವಸ್ತುಗಳನ್ನೂ ಸರದಿಯಂತೆ, ಎಲ್ಲಾ ಕಡೆಗೂ ವ್ಯಾಪಿಸಿರುವ ಸಾಧಾರಣ ನೀರನ್ನೂ ಸೃಷ್ಟಿಸಿರುತ್ತಾರೆ. ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸುವ ಬ್ರಹ್ಮನನ್ನೂ, ಇತರೆ ದೇವತೆಗಳನ್ನೂ ಸೃಷ್ಟಿಸುವ ಕಾರ್ಯವನ್ನೂ ಮಾಡುತ್ತಾನೆ. ಅಂತಹ ಎಂಪೆರುಮಾನರು ವಾಸಿಸುವ ತಿರುಮೋಗೂರಿನ ಗುಡಿಯನ್ನು ಪ್ರದಕ್ಷಿಣೆ ಮಾಡಿದರೆ, ನಮ್ಮ ಒಂಟಿತನವು ದೂರವಾಗಿ ನಮ್ಮ ಕಷ್ಟಗಳು ನಾಶವಾಗುತ್ತವೆ. ಆದ್ದರಿಂದ ನಮಗೆ ತಿರುಮೋಗೂರಿನ ಎಂಪೆರುಮಾನರನ್ನು ಬಿಟ್ಟರೆ ಬೇರೆ ಯಾವ ರಕ್ಷಣೆಯೂ ಇಲ್ಲ.

ಎಂಟನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ ,” ತಿರುಮೋಗೂರಿನಲ್ಲಿ ಕರುಣೆಯಿಂದ ನಿಂತಿರುವ ಬಲಶಾಲಿಯಾದ ಪರಮಪುರುಷನಾದ ದಶರಥನ ಮಗನಿಗೆ ಶರಣಾದರೆ, ನಮ್ಮ ಶೋಕ , ವ್ಯಸನಗಳೆಲ್ಲವೂ ಪರಿಹಾರವಾಗುತ್ತದೆ.”

ತುಯರ್ ಕೆಡುಮ್ ಕಡಿದಡೈನ್ದುವನ್ದು ಅಡಿಯವರ್ ತೊೞುಮಿನ್,
ಉಯರ್ ಕೊಳ್ ಶೋಲೈ, ಒಣ್ ತಡಮಣಿ ಒಳಿ ತಿರುಮೋಗೂರ್,
ಪೆಯ‍‌ರ್ಗಳಾಯಿರಮುಡೈಯ ವಲ್ ಅರಕ್ಕರ್ ಪುಕ್ಕೞುನ್ದ,
ದಯರದನ್ ಪೆಱ್ಱ ಮರತಕಮಣಿ ತ್ತಡತ್ತಿನೈಯೇ॥


ಎತ್ತರದ ಮರಗಳನ್ನು ಹೊಂದಿರುವ ಮತ್ತು ವಿಶಿಷ್ಟವಾದ ನೀರಿನ ಕೆರೆಗಳಿಂದ ಅಲಂಕೃತವಾದ , ಅದರಿಂದ ಹೊಳೆಯುತ್ತಿರುವ ತಿರುಮೋಗೂರಿನಲ್ಲಿ ನಿಂತಿರುವ ದಶರಥ ಪುತ್ರನಾದ ಎಂಪೆರುಮಾನರು ಎಲ್ಲವನ್ನೂ ಮುಳುಗಿಸಬಲ್ಲ ಕೆರೆಯ ಹಾಗೆ, ಅಮೂಲ್ಯವಾದ ಪಚ್ಚೆಯ ಹರಳಿನ ಬಣ್ಣದಿಂದ ಹೊಳೆಯುತ್ತಿದ್ದಾರೆ. ಅನೇಕ ಬಿರುದುಗಳನ್ನು ಪಡೆದ ಬಲಶಾಲಿಯಾದ ರಾಕ್ಷಸರನ್ನು ಅದರಲ್ಲಿ ಮುಳುಗಿಸಲು ಸಮರ್ಥರಾಗಿದ್ದಾರೆ. ಶ್ರೀ ರಾಮಾಯಣಮ್‍ನ ಕಿಶ್ಕಿಂಧಾ ಕಾಂಡಮ್ 4.12 ನಲ್ಲಿ ಹೇಳಿರುವ ಹಾಗೆ, ‘ಗುಣೈರ್ದಾಸ್ಯಮ್ ಉಪಾಗತಃ’ ನೀವೆಲ್ಲರೂ ಇಲ್ಲಿಗೆ ಬಂದು ಅವನನ್ನು ಪೂಜಿಸಿ. ನಿಮ್ಮ ವ್ಯಸನಗಳೆಲ್ಲವೂ ನಿಮ್ಮ ಪ್ರಯತ್ನವಿಲ್ಲದೇ ನಾಶವಾಗುವುದು. ಮರತಗ ಮಣಿಯ ಉದಾಹರಣೆಗೆ ಅರ್ಥವೇನೆಂದರೆ, ಮರತಗ ಮಣಿಯು ವಿಷವನ್ನು ನಿರ್ಮೂಲನೆ ಮಾಡುವುದರ ಜೊತಗೆ ಒಂದು ಒಡವೆಯ (ನಗದ) ರೂಪದಲ್ಲೂ ಧರಿಸುತ್ತಾರೆ. ಹಾಗೆಯೇ ಎಂಪೆರುಮಾನರು ವೈರಿಗಳನ್ನು ನಿರ್ಮೂಲನೆ ಮಾಡುವುದರ ಜೊತೆಗೆ , ಭಕ್ತರಿಗೆ ಆಶ್ರಯವಾಗಿಯೂ ಇರುತ್ತಾರೆ.

ಒಂಬತ್ತನೆಯ ಪಾಸುರಮ್:
ಆಳ್ವಾರರು ತಮ್ಮ ರಕ್ಷಣೆಗಾಗಿ ತಿರುಮೋಗೂರಿಗೆ ಬಂದಿದ್ದರಿಂದ ಆದ ಪ್ರಯೋಜನವನ್ನು ಇಲ್ಲಿ ಹೇಳಿದ್ದಾರೆ.

ಮಣಿ ತ್ತಡತ್ತಡಿ ಮಲರ್ ಕಣ್‍ಗಳ್ ಪವಳ ಚ್ಚೆವ್ವಾಯ್,
ಅಣಿಕ್ಕೊಳ್ ನಾಲ್ ತಡನ್ದೋಳ್ ದೆಯ್‍ವಮ್ ಅಶುರರೈ ಎನ್‍ಱುಮ್,
ತುಣಿಕ್ಕುಮ್ ವಲ್ಲರಟ್ಟನ್ ಉಱೈ ಪೊೞಿಲ್ ತಿರುಮೋಗೂರ್,
ನಣಿತ್ತು ನಮ್ಮುಡೈ ನಲ್ಲರಣ್ ನಾಮ್ ಅಡೈನ್ದನಮೇ ॥

ಕಾಳಮೇಗ ಎಂಪೆರುಮಾನರ ದಿವ್ಯ ರೂಪವು ಸ್ವಚ್ಛವಾದ ನೀರಿನ ಕೊಳದಂತಿರುವ. ದಿವ್ಯ ಪಾದಗಳನ್ನು ಹೊಂದಿದ್ದಾರೆ. ಈಗ ತಾನೇ ಅರಳಿರುವ ಹೊಸ ತಾವರೆಯ ಹೂವಿನಂತಹ ದಿವ್ಯ ಕಣ್ಣುಗಳಿವೆ. ಕೆಂಪಾದ ಹವಳದಂತಿರುವ ದಿವ್ಯ ತುಟಿಗಳು , ನಾಲ್ಕು ದೊಡ್ಡ ದಿವ್ಯ ತೋಳುಗಳು, ಅವುಗಳನ್ನು ಎಲ್ಲಾ ರೀತಿಯ ಆಭರಣಗಳನ್ನು ಹಾಕಿ ಅಲಂಕರಿಸಲು ಯೋಗ್ಯವಾಗಿದೆ. ಅವರು ಬಹಳ ಹೆಮ್ಮೆಯಿಂದ, ಬಲಶಾಲಿಯಾಗಿದ್ದು, ರಾಕ್ಷಸರನ್ನು ಕತ್ತರಿಸುವರು. ಅಂತಹ ಎಂಪೆರುಮಾನರು ಆನಂದಮಯವಾದ ತೋಟಗಳನ್ನು ಹೊಂದಿರುವ ತಿರುಮೋಗೂರಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಂತಹ ತಿರುಮೋಗೂರ್ ವಿಶಿಷ್ಟವಾದ ರಕ್ಷಣೆಯನ್ನು ನೀಡುವ ನೆಲೆಯಾಗಿದ್ದು, ಈಗ ಬಹಳ ಹತ್ತಿರದಲ್ಲಿದೆ. ನಾವು ಇಲ್ಲಿಗೆ ಬಂದು ತಲುಪಿದ್ದೇವೆ.

ಹತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ (ಅಗಾಧ ಜನಸಮೂಹಕ್ಕೆ) “ಓಹ್! ನನಗೆ ಸಂಬಂಧಿಸಿರುವ ಜನಗಳೇ! ಸರ್ವರಕ್ಷಕನು ಕರುಣೆಯಿಂದ ನೆಲೆಸಿರುವ ತಿರುಮೋಗೂರಿನ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಿ. ಅದನ್ನು ಹೊಗಳಿ, ಜ್ಞಾಪಿಸಿಕೊಳ್ಳಿ.”

ನಾಮ್ ಅಡೈನ್ದ ನಲ್ಲರಣ್ ನಮಕ್ಕೆನ್‍ಱು ನಲ್‍ ಅಮರರ್,
ತೀಮೈ ಶೆಯ್ಯುಮ್ ವಲ್ ಅಶುರರೈ ಅಞ್ಜಿ ಚ್ಚೆನ್‍ಱಡೈನ್ದಾಲ್,
ಕಾಮರೂಪಮ್‍ಕೊಣ್ಡು ಎೞುನ್ದಳಿಪ್ಪಾನ್ ತಿರುಮೋಗೂರ್,
ನಾಮಮೇ ನವಿನ್‍ಱೆಣ್ಣುಮಿನ್ ಏತ್ತುಮಿನ್ ನಮರ್ಗಾಳ್ ॥


ತಿರುಮೋಗೂರಿನ ಮಹತ್ವದ ಬಗ್ಗೆ ತಿಳಿದ ದೇವತೆಗಳು, ಅಸುರರಿಂದ ಭಯಭೀತರಾದರು. ಅಸುರರು ಕೆಟ್ಟ ಕೃತ್ಯದಲ್ಲಿ ಪಾಲ್ಗೊಂಡು , ನಂತರ ಎಂಪೆರುಮಾನರಲ್ಲಿ ಆಶ್ರಯ ಪಡೆದರೆ, ‘ಎಂಪೆರುಮಾನರು ನಮಗಾಗಿ ಪ್ರತ್ಯೇಕ ಮತ್ತು ವಿಶಿಷ್ಟ ರಕ್ಷಕ , ಅವನಿಗೆ ನಾವು ಶರಣು ಹೊಂದುತ್ತೇವೆ’ ಎಂದು ಹೇಳಿದರೆ, ಅವನು ಸಡಗರದಿಂದ , ಅವರಿಗೆ ಸರಿಯಾದ , ಅವರು ಆಸೆಪಟ್ಟ ರೀತಿಯಲ್ಲಿ ಅವರನ್ನು ಕಾಪಾಡುತ್ತಾನೆ. ಓಹ್ ಜನಗಳೇ! ಪ್ರಸಿದ್ಧವಾದ ತಿರುಮೋಗೂರಿನ ಬಗ್ಗೆ ಮಾತನಾಡಿ ಮತ್ತು ಯೋಚಿಸಿ.. ಅದು ಅಂತಹ ವಿಶಿಷ್ಟವಾದ ಎಂಪೆರುಮಾನರ ವಾಸಸ್ಥಳವಾಗಿದೆ. ಅದನ್ನು ಪ್ರೀತಿಯಿಂದ ಹೊಗಳಿ.
ಕಾಮ ರೂಪಮ್ ಎಂಬುದು ದೇವತೆಗಳಿಗೆ ಅಮೃತವನ್ನು ಕೊಡಲು ಎಂಪೆರುಮಾನರು ಧರಿಸಿದ ಸ್ತ್ರೀ ರೂಪವಾದ ಮೋಹಿನಿ ಅವತಾರವೆಂದೂ ಆಗುತ್ತದೆ.

ಹನ್ನೊಂದನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ಯಾರು ತಿರುಮೋಗೂರಿಗೆ ಸಮರ್ಪಿತವಾದ ಈ ಪದಿಗೆಯನ್ನು ಮೆಚ್ಚಿ ಹಾಡುತ್ತಾರೋ, ಅವರ ಎಲ್ಲಾ ದುಃಖಗಳೂ ದೂರವಾಗುತ್ತದೆ.”

ಏತ್ತುಮಿನ್ ನಮರ್ಗಾಳ್ ಎನ್‍ಱು ತಾನ್ ಕುಡಮಾಡು,
ಕೂತ್ತನೈ , ಕುರುಗೂರ್ ಚ್ಚಡಗೋಪನ್ ಕುಱ್ಱೇವಲ್‍ಗಳ್,
ವಾಯ್‍ತ್ತ ಆಯಿರತ್ತುಳ್ ಇವೈ ವಣ್ ತಿರುಮೋಗೂರ್‌ಕ್ಕು,
ಈತ್ತ ಪತ್ತಿವೈ ಏತ್ತವಲ್ಲಾರ್ಕ್ಕು ಇಡರ್ ಕೆಡುಮೇ ॥

ನಮ್ಮಾಳ್ವಾರರು ಆಳ್ವಾರ್ ತಿರುನಗರಿಗೆ ನಾಯಕರಾದವರು. ಅವರು ಸಾವಿರ ಪಾಸುರಗಳನ್ನು ನೃತ್ಯಗಾರನಿಗೆ ಗುಪ್ತ ಸೇವೆಯ ಮೂಲಕ ಸಮರ್ಪಿಸಿದರು. ಆ ನೃತ್ಯಗಾರನು “ಯಾರು ನನಗೆ ಸಂಬಂಧಿಸಿದವರೋ ಅವರು ನನ್ನನ್ನು ಹೊಗಳಿ” ಎಂದು ಮಡಿಕೆಗಳ ಜೊತೆಗೆ ನರ್ತಿಸಿದರು. ಆ ಸಾವಿರ ಪಾಸುರಗಳಲ್ಲಿ ಈ ಹತ್ತು ಪಾಸುರಗಳನ್ನು ವಿಶಿಷ್ಟವಾದ ತಿರುಮೋಗೂರಿಗೆ ಅರ್ಪಿಸಲಾಗಿದೆ. ಯಾರು ಈ ಹತ್ತು ಪಾಸುರಗಳನ್ನು ಪ್ರೀತಿಯಿಂದ ಹಾಡುತ್ತಾರೋ, ಅವರ ಕಷ್ಟಗಳು ನಿರ್ಮೂಲನೆಯಾಗುತ್ತದೆ.
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-10-1-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org