ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 71ರಿಂದ 80

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-71
(ದೇವನ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿನ ,ಎಮ್ಪೆರುಮಾನಿನ ಗುಣಗಳ ಹಾಗು ಸ್ವರೂಪದ ವಿಷಯಗಳಲ್ಲಿ ಅಸ್ಥಾನೆ ಶಂಕಿಸಿ(ಸಂಶಯದ ಪ್ರಸಂಗವಿಲ್ಲದ ಸ್ಥಳದಲ್ಲಿ ಶಂಕಿಸಿ),ಸಂಶಯದ ನಿವಾರಣೆಯನ್ನು ಹೊಂದುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ದೇವನ್ ಉಱೈ ಪದಿಯಿಲ್ ಸೇರಪ್ ಪೆಱಾಮೈಯಾಲ್
ಮೇವುಮ್ ಅಡಿಯಾರ್ ವಚನಾಮ್ ಮೆಯ್ನ್ನಿಲೈಯುಮ್ – ಯಾವೈಯುಮ್ತಾನ್
ಆನಿಲೈಯುಮ್ ಸಂಗಿತ್ತು ಅವೈ ತೆಳಿನ್ದ ಮಾಱನ್ಪಾಲ್
ಮಾನಿಲತ್ತೀರ್ ತನ್ಗಳ್ ಮನಮ್
ಓ ವಿಶಾಲವಾದವಾದ ವಿಶ್ವದ ವಾಸಿಗಳೇ! ತಿರುವಾಱನ್ವಿಳಯಿನಲ್ಲಿ ಎಮ್ಪೆರುಮಾನನ್ನು ಸೇರಲಾರದೆ, ಅಸ್ಥಾನೆ ಎಮ್ಪೆರುಮಾನಿನ ಆಶ್ರಿತಪಾರತಂತ್ರ್ಯವನ್ನು ಚೇತನಾಚೇತನ ವಿಶಿಷ್ಠತೆಯನ್ನು ಶಂಕಿಸಿದ ಆೞ್ವಾರಿನ ಸಂಶಯ ನಿವಾರಿಸಲ್ಪಟ್ಟವು. ನಮ್ಮ ಹೃದಯವು ಇಂತಃ ಆೞ್ವಾರಿನಲ್ಲಿ ಮಗ್ನವಾಗಿರುವುದು.

ಪಾಸುರಮ್-72
(ನನ್ಗರುತ್ತೈ…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಆತ್ಮಾ ಆತ್ಮೀಯಗಳ(ಆತ್ಮವಿನ/ ಆತ್ಮಕ್ಕೆ ಸೇರಿದ) ವಿಷಯದಲ್ಲಿದ್ದ ನೈರಾಶ್ಯವನ್ನು ಉದ್ಘೊಷಿಸಿದ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ನಂಗರುತ್ತೈ ನನ್ಱಾಗ ನಾಡಿ ನಿಱ್ಕುಮ್ ಮಾಲಱಿಯ
ಇನ್ಗಿವಱ್ಱಿಲ್ ಆಸೈ ಎಮಕ್ಕುಳದೆನ್ ಸಂಗೈಯಿನಾಲ್
ತನ್ನುಯಿರಿನ್ ಮಱ್ಱಿನಸೈ ತಾನೊೞಿಂದ ಮಾಱನ್ಱನ್
ಅನ್ನಿಲೈಯೈ ಆಯ್ನ್ದುರೈತ್ತಾನ್ ಅಂಗು

ತಮಗೆ ಸಂಸಾರದಲ್ಲಿ ಆಸೆಯಿದೆಯೆಂದು ಅತಿಶಂಕಿಸಿ, ಇದನ್ನು ಅರಿತ ಹಾಗು ತಮ್ಮ ಹೃದಯವನ್ನು ಶೋಧಿಸಿದ ಎಮ್ಪೆರುಮಾನಿಗೆ ,ಅತ್ಮಾತ್ಮೀಯಗಳ ಸ್ವರೂಪವನ್ನು ವಿಶ್ಲೇಷಿಸಿ, ಅವುಗಳಲ್ಲಿ ತಮ್ಮ ವೈರಾಗ್ಯವನ್ನು ಕಂಡು ತಾವು ತಿಳಿದಿದರಬಗ್ಗೆ ತಮ್ಮ ಕೃಪೆಯಿಂದ ವಿವರಿಸಿದರು.

ಪಾಸುರ-73
(ಅಂಗಮರರ್…)
ಈ ಪಾಸುರದಲ್ಲಿ ಮಾಮುನಿಗಳು, ಆೞ್ವಾರ್ ಎಮ್ಪೆರುಮಾನಿಗೆ ಆರೈಕೆ ಮಾಡಲು ಯಾರು ಇಲ್ಲವೆಂದು ವಿಷಣ್ಣರಾಗುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಅಂಗಮರರ್ ಪೇಣ ಅವರ್ ನಡುವೇ ವಾೞ್ ತಿರುಮಾಱ್ಕು
ಇಂಗೋರ್ ಪರಿವರಿಲೈ ಎನ್ಱನ್ಜ ಎಂಗುಮ್
ಪರಿವರ್ ಉಳರ್ ಎನ್ನಪ್ ಪಯಮ್ ತೀರ್ನ್ದ ಮಾಱನ್
ವರಿ ಕೞಱ್ಱಾಳ್ ಸೇರ್ನ್ದವರ್ ವಾೞ್ವಾರ್

ಪರಮಪದದಲ್ಲಿ ಮಂಗಳಾಶಾಸನವನ್ನು ಮಾಡುತ್ತಿರುವ ನಿತ್ಯಸೂರಿಗಳ ನಡುವೆ ನೆಲೆಸಿರುವ ಶ್ರಿಃಯಪತಿಗೆ ಮಂಗಳಾಶಾಸನವನ್ನು ಮಾಡಲು ಯಾರೂ ಇಲ್ಲವೆಂದು ಭಯಪಟ್ಟರು. ಎಮ್ಪೆರುಮಾನ್, “ನನಗೆ ಆರೈಕೆ ಮಾಡುವವರು ಎಲ್ಲಡೆಯೂ ಇರುವರು” ಎಂದು ಹೇಳಿದಾಗ ಆೞ್ವಾರಿನ ಭಯ ದೂರವಾಯಿತು.ನೂಪುರಗಳಿಂದ(ಗೆಜ್ಜೆಗಳಿಂದ) ಅಲಂಕೃತವಾದ ಇಂತಃ ದಿವ್ಯಪಾದಗಳನ್ನು ಆಶ್ರಯಿಸುವವರು ಉಜ್ಜೀವಿಸುವರು.

ಪಾಸುರ-74
(ವಾರಾಮಲ್…)
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ತನ್ನ ಶೌರ್ಯ ಪರಾಕ್ರಮಾದಿಗಳು ಹಾಗು ಶಪಿಸಲು-ವರಗಳನ್ನು ಪ್ರಸಾದಿಸಲು ಸಮರ್ಥರೊಂದಿಗೆ ಇದ್ದ ಅವನ ವಾಸವನ್ನು ತೋರಿದ್ದನ್ನು ಕಂಡು ನಿರ್ಭಯರಾಗಿರುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ವಾರಾಮಲ್ ಅಚ್ಚಮ್ ಇನಿ ಮಾಲ್ ತನ್ ವಲಿಯಿನೈಯುಮ್
ಸೀರಾರ್ ಪರಿವರುಡನ್ ಸೇರ್ತ್ತಿಯೈಯುಮ್ ಪಾರುಮ್ ಎನತ್
ತಾನ್ ಉಗಂದ ಮಾಱನ್ಱಾಳ್ ಸಾರ್ ನೆಂಜೇ ಸಾರಾಯೇಲ್
ಮಾನಿಡವರೈಚ್ ಚಾರ್ನ್ದು ಮಾಯ್

ಆೞ್ವಾರ್ ಮತ್ತೆ ದುಃಖಪಡದಂತೆ ಇರಲು, ಸರ್ವೇಶ್ವರನು ತನ್ನ ಪರಾಕ್ರಮಾದಿಗಳನ್ನು, ಭಕ್ತಗೋಷ್ಟಿಯುಕ್ತನಾಗಿರುವುದನ್ನು ,”ಇದನ್ನು ನೋಡಿ”ಯೆಂದು ತೋರಿದನು. ಓ ಹೃದಯವೇ ! ಇಂತಹ ಆೞ್ವಾರಿನ ದಿವ್ಯ ಪಾದಗಳನ್ನು ಆಶ್ರಯಿಸು, ಇಲ್ಲದಿದ್ದರೆ ಸಂಸಾರಿಗಳನ್ನು ಆಶ್ರಯಿಸಿ ನಶಿಸುವೆ.

ಪಾಸುರ-75
(ಮಾಯನ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನಿನ ವಿಗ್ರಹಸೌಂದರ್ಯವನ್ನು ಅನುಭವಿಸಲಾಗದ ಕಾರಣ ಬಂದ ದುಃಖಾತಿಶಯದಿಂದ (ಅನುಗ್ರಹಿಸಿದ) ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಮಾಯನ್ ವಡಿವೞಗೈಕ್ ಕಾಣಾದ ವಲ್ವಿಡಾಯ್
ಆಯ್ ಅದಱ ವಿನ್ಜಿ ಅೞುದಲಱ್ಱುಮ್ ತೂಯ ಪುಗೞ್
ಉಱ್ಱ ಶಟಕೋಪನೈ ನಾಮ್ ಒನ್ಱಿ ನಿಱ್ಕುಮ್ಬೋದು ಪಗಲ್
ಅಱ್ಱ ಪೊೞುದಾನಾದೆಲ್ಲಿಯಾಮ್

ಭಗವದ್ವಿಗ್ರಹಸೌಂದರ್ಯವನ್ನು ಕಾಣಲಾಗದೆ ದುಃಖ ಹೆಚ್ಚಾಗುತ್ತಲೆ ,ಪ್ರಲಾಪವತ್ ಆಕ್ರಂದಿಸಿ ಅತ್ತು ಮೊರೆಯಿಟ್ಟರು. ಇಂತಹ ಶುದ್ಧ ಕೀರ್ತಿಯನ್ನು ಹೊಂದಿರುವ ಆೞ್ವಾರಿನ ಸಮೀಪದಲ್ಲಿರುವುದು, (ಪ್ರಕಾಶಮಾನವಾದ) ಹಗಲಾಗಿರುವುದು, ತದನುಭವವಿಚ್ಛೇದವು ಅಂದಕಾರದಿಂದಿರುವ ರಾತ್ರಿಯಾಗಿರುವುದು.

ಪಾಸುರ-76
(ಎಲ್ಲಿಪಗಲ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್, ಎಮ್ಪೆರುಮಾನ್ ಆೞ್ವಾರಿನ ಸಮೀಪದಲ್ಲಿ ಆಗಮಿಸಿ ಆೞ್ವಾರಿನ ವ್ಯಸನವನ್ನು (ದುಃಖವನ್ನು) ದೂರಮಾಡಿ ನಂತರ ಸಂಶ್ಲೇಷಿಸಿದ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಎಲ್ಲಿ ಪಗಲ್ ನಡನ್ದ ಇನ್ದ ವಿಡಾಯ್ ತೀರುಗೈಕ್ಕು
ಮೆಲ್ಲ ವನ್ದು ತಾನ್ ಕಲಕ್ಕ ವೇಣುಮೆನ – ನಲ್ಲವರ್ಗಳ್
ಮನ್ನು ಕಡಿತ್ತಾನತ್ತೇ ಮಾಲ್ ಇರುಕ್ಕ ಮಾಱನ್ ಕಣ್ಡು
ಇನ್ನಿಲೈಯೈಚ್ ಚೊನ್ನಾನ್ ಇರುಂದು

ಉತ್ಕೃಷ್ಟರಾದ ವೈದಿಕರು ವಾಸಿಸುವ ತಿರುಕಡಿತ್ತಾನದಲ್ಲಿ ನೆಲಸಿರುವ ಸರ್ವೇಶ್ವರನು ಹಲವಾರು ಹಗಲು ರಾತ್ರಿಗಳ ಕಾಲದಲ್ಲಿ ಏರ್ಪಟ್ಟ ದುಃಖವನ್ನು ದೂರಮಾಡಲು , ನಿಧಾನವಾಗಿ ಬಂದು ಆೞ್ವಾರನ್ನು ಅನುಭವಿಸಲು ಚಿಂತಿಸಿದ್ದನ್ನು ಕಂಡು, ಆೞ್ವಾರ್ ದೃಢರಾಗಿ ತಮ್ಮ ಕೃಪೆಯಿಂದ ಎಮ್ಪೆರುಮಾನಿನ ಇಂತಃ ಸ್ವಭಾವದ ಬಗ್ಗೆ ವರ್ಣಿಸಿದರು

ಪಾಸುರ-77
(ಇರುನ್ದವನ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ , ಎಮ್ಪೆರುಮಾನ್ ಆೞ್ವಾರಿನ ಆಸೆಯನ್ನು ನೆರವೇರಿಸಿ ಸಂಶ್ಲೇಶಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಇರುನ್ದವನ್ ತಾನ್ ವನ್ದು ಇನ್ಗಿವರ್ ಎಣ್ಣಾಮ್ ಎಲ್ಲಾಮ್
ತಿರುನ್ದ ಇವರ್ ತನ್ದಿಱತ್ತೇ ಸೆಯ್ದು ಪೊರುನ್ದಕ್
ಕಲನ್ದಿನಿಯನಾಯ್ ನಿಱ್ಕಕ್ ಕಣ್ಡ ಸಟಕೋಪರ್
ಕಲನ್ದ ನೆಱಿ ಕಟ್ಟುರೈತ್ತಾರ್ ಕಣ್ಡು

ತಿರುಕಡಿತ್ತಾನದಲ್ಲಿದ್ದ ಸರ್ವೇಶ್ವರನು (ಆೞ್ವಾರ್ ಇದ್ದ ಸ್ಥಳಕ್ಕೆ) ಆಗಮಿಸಿ, ಆೞ್ವಾರಿನ ಏಲ್ಲ ಆಸೆಗಳನ್ನು ನೆರವೇರಿಸಿ, ತಮ್ಮ ಕೃಪೆಯನ್ನು ತೋರಿ

ತದ್ವಿಚ್ಛೇದಗಳಿಲ್ಲದೆ ಸಮಗ್ರವಾಗಿ ಸಂಶ್ಲೇಷಿಸಿದನು. ತದನಂತರವು ಎಮ್ಪೆರುಮಾನಿನ ಆನಂದವನ್ನು ಆರಾಧಿಸಿ
ಪೂರ್ಣವಾಗಿ ಸಂಶ್ಲೇಷಿಸಿದನು. ಇಂತಃ ಸಂಶ್ಲೇಷದ ನಂತರ ಎಮ್ಪೆರುಮಾನಿನ ಆನಂದವನ್ನು ಆರಾಧಸಿ, ಎಮ್ಪೆರುಮಾನ್ ತಮ್ಮೊಂದಿಗೆ ಸಂಶ್ಲೇಷಿಸಿದ ಪ್ರಕಾರವನ್ನು ತಮ್ಮ ಹೃದಯಲ್ಲಿ ಕಂಡು ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.

ಪಾಸುರಮ್ 78
(ಕಣ್ಣಿಱೈಯ…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿಗೆ ಆತ್ಮ-ಸ್ವರೂಪದ ವೈಲಕ್ಷಣ್ಯವನ್ನು(ವಿಶೇಷತೆ / ವೈಭವ) ಎಮ್ಪೆರುಮಾನಿಂದ ತೋರಲ್ಪಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಕಣ್ಣಿಱೈಯ ವನ್ದು ಕಲನ್ದ ಮಾಲ್ ಇಕ್ಕಲವಿ
ತಿಣ್ಣಿಲೈಯಾ ವೇಣುಮ್ ಎನಚ್ ಚಿನ್ದಿತ್ತುತ್ ತಣ್ಣಿದೆನುಮ್
ಆರುಯಿರಿನ್ ಏಱ್ಱಮ್ ಅದು ಕಾಟ್ಟ ಆಯ್ನ್ದುರೈತ್ತಾನ್
ಕಾರಿಮಾಱನ್ ಕರುತ್ತು

ಆೞ್ವಾರಿನ ಕಣ್ಣುಗಳು ತುಂಬುವಂತಃ ಸಂಶ್ಲೇಷವು ದೃಢವಾಗಿರಲು ಪ್ರಿಯವಾದ ಸೂಕ್ಷ್ಮವೆಂದು ಅರಿಯಲ್ಪಡುವ ಆತ್ಮಾವಿನ ವೈಲಕ್ಷಣ್ಯವನ್ನು ತೋರಿದನು ಇದನ್ನು ವಿಶ್ಲೇಷಿಸಿ ತಮ್ಮ ಹೃದಯದಲ್ಲಿದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಪಾಸುರ-79
(ಕರುಮಾಲ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಆತ್ಮಾವಿನ ಅನ್ಯಶೇಷತ್ವ ( ಭಗವಂತನನ್ನು ಬಿಟ್ಟರೆ ಬೇರೆ ಯಾರಿಗೂ ಶೇಷನಾಗಿ/ದಾಸನಾಗಿ ಇರುವುದು) ನಿವೃತ್ತಿಯನ್ನು ತೋರುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಕರುಮಾಲ್ ತಿಱತ್ತಿಲ್ ಒರು ಕನ್ನಿಗೈಯಾಮ್ ಮಾಱನ್
ಒರು ಮಾ ಕಲವಿ ಉರೈಪ್ಪಾಲ್ ತಿರಮಾಗ
ಅನ್ನಿಯರುಕ್ಕಾಗಾದು ಅವನ್ ತನಕ್ಕೇ ಆಗುಮ್ ಉಯಿರ್
ಇನ್ನಿಲೈಯೈ ಓರು ನೆಡಿದಾ
ಆೞ್ವಾರ್ ಕೃಷ್ಣನ ಉದ್ದೇಶಿಸಿ ಒಂದು ಕನ್ಯೆಯ ಭಾವದಲ್ಲಿ, ತಾನು ತನ್ನ ಗೆಳತಿಯ ವಚನದಿಂದ ವಿಲಕ್ಷಣವೂ ,ಉತ್ಕೃಷ್ಟವಾದ ಭಗವದ್ಸಂಶ್ಲೇಷದ ಚಿನ್ಹೆಗಳನ್ನು ಹೇಳಿದರು. ಇದರಿಂದ ಪ್ರಾಪ್ರ್ತನಾದ ಭಗವಂತನನ್ನು ಬಿಟ್ಟರೆ ಬೇರೆ ಯಾರಿಗೂ ಶೇಷಪಡದ ಆತ್ಮಾವಿನ ಸ್ವರೂಪವನ್ನು ಶೋಧಿಸು.

ಪಾಸುರ-80
(ನೆಡುಮಾಲ್ …)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಅನನ್ಯಾರ್ಹ ಶೇಷತ್ವದ (ಭಗವಂತನಿಗೇ ಇರುವ ದಾಸ್ಯ/ ಕಿಂಕರವೃತ್ತಿ) ಚರಮ(ಕೊನೆಯ/ಪರಮವಾದ) ಅವಸ್ಥೆಯಾದ ಭಾಗವತಶೇಷತ್ವವನ್ನು (ಭಕ್ತರ ವಿಷಯದಲ್ಲಿ ದಾಸ್ಯ/ ಕಿಂಕರವೃತ್ತಿ) ವಿವರಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ನೆಡುಮಾಲ್ ಅೞಗುತನಿಲ್ ನೀಳ್ಗುಣತ್ತಿಲ್ ಈಡು
ಪಡುಮಾ ನಿಲೈಯುಡೈಯ ಪತ್ತರ್ಕ್ಕು ಅಡಿಮೈತನಿಲ್
ಎಲ್ಲೈ ನಿಲನ್ದಾನಾಗ ಎಣ್ಣಿನಾನ್ ಮಾಱನ್ ಅದು
ಕೊಲ್ಲೈ ನಿಲಮಾನ ನಿಲೈ ಕೊಣ್ಡು

ಆೞ್ವಾರ್ ಸರ್ವೇಶ್ವರನ ವಿಗ್ರಹ ಸೌಂದರ್ಯ ಹಾಗು ಸೌಹಾರ್ದವೆಂಬ ಉತ್ಕೃಷ್ಟವಾದ ಗುಣದಲ್ಲಿ ಮಗ್ನರಾದ ಭಕ್ತರ ವಿಷಯದಲ್ಲಿ ದಾಸ್ಯವನ್ನು ಹೊಂದಿದ್ದರು. ಇದಲ್ಲದೆ ಭಾಗವತಶೇಷತ್ವವೇ ಪ್ರಾಪ್ಯವಾದ ಕಾರಣ ಈ ದಾಸ್ಯದ ಚರಮಾವಸ್ಥೆಯಲ್ಲಿ ತಮ್ಮನ್ನು ಕಂಡರು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-71-80-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment