ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ
ಆಳ್ವಾರರು ವಾನಮಾಮಲೈ ಶ್ರೀವರಮಂಗಲ ನಗರ್ ಎಂಪೆರುಮಾನರಿಗೆ ಪೂರ್ತಿಯಾಗಿ ಶರಣಾದ ಮೇಲೂ , ಎಂಪೆರುಮಾನರು ಅವರ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಆಳ್ವಾರರು ಯೋಚಿಸುತ್ತಾರೆ, “ಒಂದು ವೇಳೆ ತಿರುಕ್ಕುಡಂದೈಯ ಎಂಪೆರುಮಾನರು ನನ್ನ ಶರಣಾಗತಿಯನ್ನು ಸ್ವೀಕರಿಸುತ್ತಾರೆಯೋ” ಎಂದು. ಆದ್ದರಿಂದ ತಿರುಕ್ಕುಡಂದೈ ಆರಾವಮುದನ್ ಪೆರುಮಾಳಿನ ಹತ್ತಿರ ಅನನ್ಯಗತಿತ್ವಮ್ (ಬೇರೆಲ್ಲೂ ಗತಿಯಿಲ್ಲದೆ/ಆಶ್ರಯವಿಲ್ಲದೆ) ಎಂದು ಶರಣಾಗುತ್ತಾರೆ.
ಪಾಸುರಮ್ 1:
ಆಳ್ವಾರರು ಹೇಳುತ್ತಾರೆ, “ ನಾನು ನಿನ್ನನ್ನು ತಿರುಕ್ಕುಡಂದೈಯಲ್ಲಿ ಮಲಗಿರುವುದನ್ನು ಕಂಡೆ. ಆ ಸದೃಶ್ಯವು ನಿನ್ನ ಸೌಂದರ್ಯದಿಂದ ಮತ್ತು ಅನಿರ್ಬಂಧಿತ ಸಂಬಂಧದಿಂದ ನನಗೆ ಅಪರಿಮಿತ ಆನಂದವನ್ನುಂಟು ಮಾಡಿ ನಾನು ಕರಗಿ ಹೋದೆನು.”
ಆರಾವಮುದೇ ಅಡಿಯೇನ್ ಉಡಲಮ್ ನಿನ್ಬಾಲ್ ಅನ್ಬಾಯೇ
ನೀರಾಯ್ ಅಲೈನ್ದು ಕರೈಯ ಉರುಕ್ಕುಹಿನ್‍ಱ ನೆಡುಮಾಲೇ
ಶೀರಾರ್ ಶೆನ್ನೆಲ್ ಕವರಿ ವೀಶುಮ್ ಶೆೞುನೀರ್ ತಿರುಕ್ಕುಡನ್ದೈ
ಏರಾರ್ ಕೋಲಮ್ ತಿಗೞ ಕ್ಕಿಡನ್ದಾಯ್ ಕಣ್ಡೇನ್ ಎಮ್ಮಾನೇ॥
ಎಂಪೆರುಮಾನರು ನನ್ನ ಅನಿರ್ಬಂಧವಾದ ಸ್ವಾಮಿಯು. ನನ್ನ ದಾಹವು ನಿನ್ನನ್ನು ಎಷ್ಟು ನೋಡಿದರೂ ತೀರುವುದಿಲ್ಲ. ಅಪರಿಮಿತವಾಗಿ ಆನಂದಿಸಲ್ಪಡುವ ಶ್ರೇಷ್ಠತೆಯನ್ನು ಹೊಂದಿರುವವನೇ, ನೀನು ನನ್ನಲ್ಲಿ ಕೋಲಾಹಲವುಂಟುಮಾಡಿ, ನನ್ನ ದೇಹವನ್ನು ನಿನ್ನ ಬಗ್ಗೆ ಇರುವ ಪ್ರೀತಿಯಿಂದಲೇ ಕರಗಿಸಿರುವೆ. ಅದು ಈಗ ದೃಢತ್ವವನ್ನು ಕಳೆದುಕೊಂಡು ನೀರಾಗಿ ಬಿಟ್ಟಿದೆ. ಹೇರಳವಾಗಿ ಭಾರದಿಂದ ತೊನೆಯುತ್ತಿರುವ ಭತ್ತದ ಬೆಳೆಗಳಿಂದ ತುಂಬಿ , ಪಂಖದಂತೆ ಬೀಸುತ್ತಿರುವ ತೊನೆಗಳಿಂದ ತುಂಬಿರುವ ತಿರುಕ್ಕುಡಂದೈಯಲ್ಲಿ ನೀನು ವಿಶ್ರಮಿಸುತ್ತಿರುವೆ. ನಿನ್ನ ಅಗಾಧವಾದ ಸೌಂದರ್‍ಯದಿಂದ ಮತ್ತು ಅಲಂಕಾರದಿಂದ ಹೊಳೆಯುತ್ತಿರುವೆ. ನಾನು ಈ ಸೌಂದರ್‍ಯವನ್ನು ನನ್ನ ಈ ಕಣ್ಣುಗಳಿಂದ ಆನಂದಿಸಿರುವೆ.
ಇದರಿಂದ ತಿಳಿಯುವುದೇನೆಂದರೆ , ಆಳ್ವಾರರು ಎಂಪೆರುಮಾನರನ್ನು ನೋಡಿದ್ದಾರೆ. ಆದರೆ ಇನ್ನೂ ಮಾತನಾಡಿಸಿಲ್ಲ.
ಪಾಸುರಮ್ -2:
ಆಳ್ವಾರರು ಹೇಳುತ್ತಾರೆ, “ ನೀನು ನಿನ್ನ ಭಕ್ತರಿಗಾಗಿ ಬಹಳ ಅವತಾರಗಳನ್ನು ಎತ್ತಿರುವೆ. ನೀನು ನನ್ನನ್ನು ಕರುಣೆಯಿಂದ ನೋಡುತ್ತಿಲ್ಲ . ನಾನೇನು ಮಾಡಲಿ?”
ಎಮ್ಮಾನೇ ಎನ್ ವೆಳ್ಳೈಮೂರ್ತ್ತಿ ಎನ್ನೈ ಆಳ್ವಾನೇ,
ಎಮ್ಮಾವುರುವುಮ್ ವೇಣ್ಡುಮಾತ್ತಾಲ್ ಆವಾಯ್ ಎೞಿಲ್ ಏಱೇ,
ಶೆಮ್ಮಾಕಮಲಮ್ ಶೆೞುನೀರ್ ಮಿಶೈಕಣ್ ಮಲರುಮ್ ತಿರುಕ್ಕುಡನ್ದೈ,
ಅಮ್ಮಾಮಲರ್ ಕ್ಕಣ್ ವಳರ್ಹಿನ್‍ಱಾನೇ ಎನ್ ನಾನ್ ಶೆಯ್‍ಗೇನೇ॥
ಎಂಪೆರುಮಾನರು ನನ್ನ ಸ್ವಾಮಿಯು, ಅವರು, ನಾನು ಸತ್ವಗುಣವನ್ನು ಹೊಂದಲಿ ಎಂದು (ಶುದ್ಧವಾದ ಒಳ್ಳೆಯ ಗುಣಗಳು) ಶುದ್ಧರೂಪವನ್ನು ನನಗಾಗಿ ಹೊಂದಿದ್ದಾರೆ. ನಾನು ಅವರನ್ನು ಆನಂದಿಸಲು ಮತ್ತು ನಾನು ನನ್ನ ಅಸ್ತಿತ್ವವನ್ನು ಕಳೆದುಕೊಳ್ಳದೇ ಇರಲು ಆ ರೂಪವನ್ನು ತೋರಿಸುತ್ತಿದ್ದಾರೆ.(ತಮ್ಮ ಇಚ್ಛೆಯಂತೆಯೇ ಎಲ್ಲಾ ಜೀವಿಗಳಲ್ಲಿಯೂ ಅವರು ಅನೇಕ ಅವತಾರಗಳನ್ನು ತಾಳಿ) ,”ಪುಂಸಾಮ್ ದೃಷ್ಟಿ ಚಿತ್ತಾಪಹಾರಿಣಾಮ್” ನಲ್ಲಿ ಹೇಳಿರುವಂತೆಯೇ , ಅವರ ಆ ಸೌಂದರ್‍ಯದಿಂದ ಹೃದಯವನ್ನು ಆವರಿಸಿ ತಮ್ಮ ಅದ್ಭುತವಾದ ರೂಪದಿಂದ ಮನವನ್ನು ಅಪಹರಣ ಮಾಡಿದ್ದಾರೆ. ಅನೇಕ ಕೆಂಪಾದ ದೊಡ್ಡ ದೊಡ್ಡ ತಾವರೆಯ ಹೂಗಳಿಂದ ಆವೃತ್ತವಾದ ನೀರಿನಿಂದ ತುಂಬಿರುವ ತಿರುಕ್ಕುಡಂದೈಯಲ್ಲಿ ವಿಶ್ರಮಿಸುತ್ತಿರುವ ವಿಶಿಷ್ಟವಾದ ತಾವರೆಯ ಮೊಗ್ಗಿನಂತಿರುವ ದಿವ್ಯ ಕಣ್ಣುಗಳನ್ನು ಹೊಂದಿರುವ ಎಂಪೆರುಮಾನರೇ , ಎಲ್ಲಾ ತಾವರೆಯ ಹೂವುಗಳೂ ಅರಳುತ್ತಿವೆ . ಆದರೆ ನಿಮ್ಮ ಎರಡು ತಾವರೆಯ ಹೂಗಳಂತಹ ಕಣ್ಣುಗಳು ನನ್ನ ಮೇಲೆ ಅರಳುತ್ತಿಲ್ಲವೇ, ಈಗ ನಾನೇನು ಮಾಡಲಿ? ಎಂದು ಆಳ್ವಾರರು ಹಲುಬುತ್ತಾರೆ.
ಪಾಸುರಮ್ 3:
ಆಳ್ವಾರರು ಹೇಳುತ್ತಾರೆ, “ನಾನು ಒಬ್ಬ ಅಕಿಂಚನ ,(ಕೈ ಖಾಲಿ ಇರುವವನು), ನನ್ನ ಆಸೆಗಳನ್ನು ನಿನ್ನನ್ನು ಬಿಟ್ಟು ಬೇರೆ ಯಾರಿಂದಲೂ ಪೂರ್ತಿ ಮಾಡಿಸಲು ಇಷ್ಟವಿಲ್ಲದಿರುವವನು. ನನ್ನನ್ನು ಈ ರೀತಿಯಾಗಿ ಮಾಡಿದ ನೀನೇ, ನಾನು ನಿನ್ನ ದಿವ್ಯ ಪಾದ ಕಮಲಗಳಲ್ಲಿ ಸೇವೆ ಸಲ್ಲಿಸುವ ಹಾಗೆ ಮಾಡಬೇಕು.”
ಎನ್ ನಾನ್ ಶೆಯ್‍ಹೇನ್ ಯಾರೇ ಕಳೈಕಣ್ ಎನ್ನೈ ಎನ್‍ಶೆಯ್‍ಹಿನ್‍ಱಾಯ್,
ಉನ್ನಾಲಲ್ಲಾಲ್ ಯಾವರಾಲುಮ್ ಒನ್‍ಱುಮ್ ಕುಱೈ ವೇಣ್ಡೇನ್,
ಕನ್ನಾರ್ ಮದಿಳ್ ಶೂೞ್ ಕುಡನ್ದೈ ಕ್ಕಿಡನ್ದಾಯ್ ಅಡಿಯೇನ್ ಅರುವಾಣಾಳ್,
ಶೆನ್ನಾಳ್ ಎನ್ನಾಳ್ ಅನ್ನಾಳ್ ಉನತಾಳ್ ಪಿಡಿತ್ತೇ ಶೆಲ ಕ್ಕಾಣೇ॥
ನಾನು ನನ್ನನ್ನು ರಕ್ಷಿಸಿಕೊಳ್ಳಲು ಏನೇನು ಮಾಡಬೇಕು? ಬೇರೆ ಯಾರು ನನಗೆ ರಕ್ಷಕನು? ನನ್ನ ಜೊತೆಗೆ ಏನು ಮಾಡಬೇಕೆಂದು ಯೋಚಿಸಿರುವೆ? ನಾನು ನನ್ನ ಆಸೆಗಳನ್ನು ಪೂರೈಸಲು ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಬೇಡುವುದಿಲ್ಲ. ಭದ್ರವಾದ ಕೋಟೆಗಳನ್ನು ಹೊಂದಿರುವ ತಿರುಕ್ಕುಡಂದೈಯಲ್ಲಿ ಕರುಣೆಯಿಂದ ನಿದ್ರಿಸುತ್ತಿರುವ ಎಂಪೆರುಮಾನರೇ! ನೀವು ದಯವಿಟ್ಟು ನಿಮ್ಮಿಂದ ನಾನು ಮೇಲೆತ್ತಲ್ಪಡುವವರೆಗೆ ನಿಮ್ಮ ದಿವ್ಯ ಪಾದಗಳನ್ನೇ ನಾನು ಭದ್ರವಾಗಿ ಹಿಡಿಯುವಂತೆ , ನಿನ್ನ ಸೇವಕನಾಗಿಯೇ ಇರುವಂತೆ ನನ್ನನ್ನು ನೋಡಿಕೊಳ್ಳಿ. ಎಷ್ಟು ದಿನವಾದರೂ ಸರಿ ಎಂದು ಆಳ್ವಾರರು ಕಳಕಳಿಯಿಂದ ಪ್ರಾರ್ಥಿಸುತ್ತಾರೆ.
(‘ಅರು’ ಅಥವಾ ಅಣು ಎಂದರೆ ಆತ್ಮ ಎಂದು ಅರ್ಥ ಮಾಡಿಕೊಳ್ಳಬೇಕು.)
ಪಾಸುರಮ್ 4:
ಆಳ್ವಾರರು ಹೇಳುತ್ತಾರೆ. “ನಾನು ನಿನ್ನನ್ನು ಕಾಣಲು ಸಾಧ್ಯವಾಗದೇ ಇರಲು ನರಳುತ್ತಿರುವೆ. ಸರ್ವೇಶ್ವರನಾಗಿಯೂ ನೀನು ತಿರುಕ್ಕುಡಂದೈಗೆ ಇಳಿದು ಬಂದು ವಿಶ್ರಮಿಸುತ್ತಿರುವೆ. ನನಗೆ ನಿನ್ನನ್ನು ನೋಡಬೇಕೆಂದು ಆಸೆ”.
ಶೆಲ ಕ್ಕಾಣ್ ಗಿಱ್ಪಾರ್ ಕಾಣುಮಳವುಮ್ ಶೆಲ್ಲುಮ್ ಕೀರ್ತ್ತಿಯಾಯ್,
ಉಲಪ್ಪಿಲಾನೇ ಎಲ್ಲಾವುಲಗುಮ್ ಉಡೈಯ ಒರುಮೂರ್ತ್ತಿ,
ನಲತ್ತಾಲ್ ಮಿಕ್ಕಾರ್ ಕ್ಕುಡನ್ದೈ ಕ್ಕಿಡನ್ದಾಯ್ ಉನ್ನೈ ಕಾಣ್ಬಾನ್ ನಾನ್
ಅಲಪ್ಪಾಯ್ , ಆಕಾಶತ್ತೈ ನೋಕ್ಕಿ ಅೞವನ್ ತೊೞವನೇ॥
ಎಂಪೆರುಮಾನರಿಗೆ ಕೊನೆಯಿಲ್ಲದ ಕಲ್ಯಾಣಗುಣಗಳು, ಐಶ್ವರ್‍ಯ ಮುಂತಾದುವುಗಳು ಇವೆ. ಯಾರಿಗೆ ಬಹಳ ಮುಂದೆ (ಮತ್ತೂ ಮುಂದೆ) ಹೋಗಲು ಸಾಧ್ಯವಿದೆಯೋ , ಅವರ ಕೈಮೀರಿ ಹೋಗುವ ಸಾಮರ್ಥ್ಯವನ್ನೂ ಎಂಪೆರುಮಾನರು ಹೊಂದಿದ್ದಾರೆ. ಅವರು ಇಡೀ ಪ್ರಪಂಚವನ್ನು ತಮ್ಮ ಸೇವೆಗಾಗಿ ಇಟ್ಟಿದ್ದಾರೆ. ಅವರಿಗೆ ವಿಶಿಷ್ಟವಾದ ರೂಪವು ಇದೆ. ಅದೇ ನಮಗೆ ಸರಿಯಾದ ಗುರಿಯಾಗಿದೆ. ಅಂತಹ ಎಂಪೆರುಮಾನರು ಜನಗಳು ಅವರ ಮೇಲಿನ ಪ್ರೇಮದಿಂದಲೇ ಕಟ್ಟಿದ ತಿರುಕ್ಕುಡಂದೈಯಲ್ಲಿ ವಿಶ್ರಮಿಸುತ್ತಿದ್ದಾರೆ. ನಿನ್ನನ್ನು ನೋಡಲು ಮತ್ತು ನಾನು ಆಸೆ ಪಡುವ ರೀತಿಯಲ್ಲಿ ಆನಂದಿಸಲು , ನಾನು ಆಕಾಶವನ್ನೇ ನೋಡುತ್ತಾ ಅಳುತ್ತಿದ್ದೇನೆ. ನಾನು ಶ್ರೇಷ್ಟವಾದ ಭಕ್ತಿಯನ್ನು ಹೊಂದಿದವರ, ನಿನ್ನನ್ನೇ ಪೂಜಿಸುವವರ ರೀತಿಯಲ್ಲಿ ಕೂಗಿ ಕರೆಯುತ್ತಿದ್ದೇನೆ. ಎಂದು ಆಳ್ವಾರರು ಎಂಪೆರುಮಾನರ ಹತ್ತಿರ ಮೊರೆಯಿಡುತ್ತಾರೆ.
[ಇಲ್ಲಿ ಮಗುವಿನ ರೀತಿಯಲ್ಲಿ ಅಳುವುದನ್ನೂ, ದೊಡ್ಡವರ ರೀತಿಯಲ್ಲಿ ಪೂಜಿಸುವುದನ್ನೂ ಉಲ್ಲೇಖಿಸಲಾಗಿದೆ.]
ಪಾಸುರಮ್ 5:
ಆಳ್ವಾರರು ಹೇಳುತ್ತಾರೆ, “ ನಿನ್ನನ್ನು ನೋಡುವ ಆಸೆಯನ್ನು ಹೊಂದಿ , ನಿನ್ನ ಕರುಣೆಯನ್ನು ಪ್ರಚೋದಿಸಲು , ಬಹಳ ಪ್ರಯತ್ನ ಪಟ್ಟಿದ್ದೇನೆ, ಆದರೆ ಇನ್ನೂ ನಿನ್ನನ್ನು ಕಾಣಲು ಸಾಧ್ಯವಾಗಿಲ್ಲ. ನಾನು ನಿನ್ನ ದಿವ್ಯ ಪಾದ ಕಮಲಗಳನ್ನು ಸೇರುವಂತೆ ನೀನೇ ನೋಡಿಕೊಳ್ಳಬೇಕು.”
ಅೞುವನ್ ತೊೞವನ್ ಆಡಿ ಕ್ಕಾಣ್ಬನ್ ಪಾಡಿ ಅಲತ್ತುವನ್,
ತೞು ವಲ್ ವಿನೈಯಾಲ್ ಪಕ್ಕುಮ್ ನೋಕ್ಕಿ ನಾಣಿ ಕ್ಕವಿೞ್‍ನ್ದಿರುಪ್ಪನ್,
ಶೆೞು ಒಣ್ ಪೞನ ಕ್ಕುಡನ್ದೈ ಕಿಡನ್ದಾಯ್ ಶೆನ್ದಾಮರೈ ಕ್ಕಣ್ಣಾ,
ತೊೞುವನೇನೈ ಉನತಾಳ್ ಶೇರುಮ್ ವಗೈಯೇ ಶೂೞ್ ಕಣ್ಡಾಯ್॥
ನಾನು ನಿನ್ನ ಪ್ರೇಮವೆಂಬ ಅತಿ ಪ್ರಬಲವಾದ ಪಾಶಕ್ಕೆ ಸಿಲುಕಿ, ಅಳುತ್ತೇನೆ, ಆಡುತ್ತೇನೆ, ನೋಡುತ್ತೇನೆ, ಹಾಡುತ್ತೇನೆ, ಏನೇನೋ ಬಡಬಡಿಸುತ್ತೇನೆ. ಎಲ್ಲಾ ದಿಕ್ಕಿನಲ್ಲಿಯೂ ಓಡಿ ಹುಡುಕುತ್ತೇನೆ. ಕೊನೆಯಲ್ಲಿ ನಾಚಿಕೆಯಿಂದ ತಲೆ ಕೆಳಗೆ ಮಾಡಿಕೊಳ್ಳುತ್ತೇನೆ. ಕೆಂದಾವರೆಯಂತಹ ದಿವ್ಯ ಕಣ್ಣುಗಳನ್ನು ಹೊಂದಿರುವ , ಎಂಪೆರುಮಾನರೇ! ಹೇರಳವಾಗಿ ನೀರಿನಿಂದ ತುಂಬಿರುವ ಗದ್ದೆಗಳನ್ನು ಹೊಂದಿರುವ ಆಕರ್ಷಕ ತಿರುಕ್ಕುಡಂದೈಯಲ್ಲಿ ನೆಲೆಸಿ ವಿಶ್ರಮಿಸುತ್ತಿರುವೆ. ನಿನ್ನನ್ನೇ ರಕ್ಷಣೆಯಾಗಿ ನಂಬಿರುವ ನಾನು, ನಿನ್ನ ದಿವ್ಯ ಪಾದ ಕಮಲಗಳನ್ನು ಪಡೆಯಲು ನೀನೇ ಸರಿಯಾದ ಮಾರ್ಗವನ್ನು ತೋರಿಸು ಎಂದು ಆಳ್ವಾರರು ಅಂಗಲಾಚುತ್ತಾರೆ.
ಪಾಸುರಮ್ – 6:
ಆಳ್ವಾರರು ಹೇಳುತ್ತಾರೆ, “ ನಾನು ನಿನ್ನ ಆನಂದಮಯವಾದ ಸ್ವರೂಪದಿಂದ ಬಂಧಿಸಲ್ಪಟ್ಟಿರುವುದರಿಂದ ಮತ್ತು ಇತರ ಲೌಕಿಕ ವಿಷಯಗಳ ಜೊತೆಗೆ ಇರಲು ಸಾಧ್ಯವಿಲ್ಲದಿರುವುದರಿಂದ , ನೀನೇ ನನ್ನ ತೊಂದರೆಗಳನ್ನು ನಿವಾರಿಸಿ (ನಿನ್ನನ್ನು ಪಡೆಯಲು ) ಮತ್ತು ನೀನೇ ಕರುಣೆಯಿಂದ ನನಗೇ ಗೊತ್ತಿಲ್ಲದ ರೀತಿಯಲ್ಲಿ ಮಾರ್ಗವನ್ನು ತೋರಿಸಬೇಕು.”
ಶೂೞ್ ಕಣ್ಡಾಯ್ ಎನ್ ತೊಲ್ಲೈ ವಿನೈಯೈ ಅಱುತ್ತು ಉನ್ ಅಡಿ ಶೇರುಮ್
ಊೞ್ ಕಣ್ಡಿರುನ್ದೇ , ತೂರಾ ಕ್ಕುೞಿ ತೂರ್ತು ಎನೈನಾಳ್ ಅಗನ್‍ಱಿರುಪ್ಪನ್,
ವಾೞ್ ತೊಲ್ ಪುಗೞಾರ್ ಕುಡನ್ದೈ ಕ್ಕಿಡನ್ದಾಯ್ ವಾನೋರ್ ಕೋಮಾನೇ,
ಯಾೞಿನ್ ಇಶೈಯೇ ಅಮುದೇ ಅಱಿವಿನ್‍ಪಯನೇ ಅರಿಯೇಱೇ॥
ಭಗವಂತನ ಅನುಭವದಲ್ಲೇ ಸಹಜವಾಗಿ ಸಂಪನ್ನಕ್ಕೊಳಗಾದ ವೈಭವವನ್ನೊಳಗೊಂಡ ಜನತೆಗಳಿಂದ ತುಂಬಿರುವ ತಿರುಕ್ಕುಡಂದೈಯಲ್ಲಿ ನೀನು ವಿಶ್ರಮಿಸುತ್ತಿರುವೆ. ನೀನು ನಿತ್ಯಸೂರಿಗಳನ್ನು ಹಿಡಿತದಲ್ಲಿಟ್ಟಿರುವೆ. ಯಾೞ ಮತ್ತು ಇತರ ಸಂಗೀತ ವಾದ್ಯಗಳಿಂದ ಹೊರಹೊಮ್ಮುವ ಮಧುರವಾದ ನಾದವೇ ನೀನಾಗಿರುವೆ. ನೀನು ನಿರಂತರವಾಗಿ ಆನಂದಿಸಲ್ಪಡುವ ಅಮೃತದಂತೆ, ನಿನ್ನನ್ನು ಸ್ತುತಿಗಳಿಂದ (ಹೊಗಳಿಕೆಗಳಿಂದ) ಆನಂದಿಸಬಹುದಾಗಿದೆ. ನೀನು ಮನಸ್ಸಿಗೆ, ಬುದ್ಧಿಗೆ ಆನಂದಪಡುವ ವಸ್ತುವಾಗಿರುವೆ. ಏಕೆಂದರೆ ನೀನೇ ಜ್ಞಾನದ ಸ್ವರೂಪವಾಗಿರುವೆ. ನೀನು ಸಿಂಹಗಳಲ್ಲೇ ಅತಿ ಶ್ರೇಷ್ಠವಾಗಿರುವೆ. ನಿನ್ನನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯವಾಗಿದೆ. ನಾನು ಪುರಾತನ ಶೈಲಿಯಲ್ಲಿ ನಿನ್ನ ಪಾದಕಮಲಗಳನ್ನು ಹೊಂದಲು ನಿನಗಾಗಿಯೇ ಅಸ್ತಿತ್ವದಲ್ಲಿರುವೆ. ಇನ್ನೂ ಎಷ್ಟು ದಿನಗಳವರೆಗೂ ನಿನ್ನಿಂದ ದೂರವಾಗಿ , ಬೇರ್ಪಡಿಸಿಕೊಂಡು ಅಸ್ತಿತ್ವದಲ್ಲಿರಬೇಕು? ಈ ಆಳವಾದ ಸಂಸಾರವೆಂಬ ಹಂದರದೊಳಗೆ ಸರಿಯಲ್ಲದ ಆಸೆಗಳನ್ನು ಹೊಂದಿ ? ಕರುಣೆಯಿಂದ ನನ್ನ ಪುರಾತನವಾದ ಪಾಪಗಳನ್ನು ಬಗೆಹರಿಸಿ, ನನ್ನನ್ನು ನಿನ್ನ ಪಾದಕಮಲಗಳಿಗೆ ಸೇರಿಸಿಕೋ. ಇದೇ ನನ್ನ ಸಹಜವಾದ ಗುಣಕ್ಕೆ ಸರಿಯಾದುದು. (ಜೀವಾತ್ಮದ ಸಹಜವಾದ ಸ್ವರೂಪವಾದುದು).
ಪಾಸುರಮ್ – 7:
ಆಳ್ವಾರರು ಹೇಳುತ್ತಾರೆ, “ ನಿನ್ನ ಕರುಣೆಯಿಂದಲೇ ನೀನು ನಿನ್ನ ಸೌಂದರ್‍ಯವನ್ನು ಪ್ರತಿಷ್ಠಾಪಿಸಿರುವೆ. ನನ್ನನ್ನು ನಿನ್ನ ಸೇವಕನಾಗಿ ನಿಯಮಿಸಿರುವೆ. ನಾನು ಈಗ ನಿನ್ನ ದಿವ್ಯ ಪಾದಗಳನ್ನು ಬಿಟ್ಟು ಅಗಲಿಕೆಯಲ್ಲಿರಲಾರೆ. ದಯವಿಟ್ಟು ನನಗೆ ನಿನ್ನ ಪಾದಕಮಲಗಳನ್ನು ದಯಪಾಲಿಸಿ, ನನ್ನನ್ನು ಈ ಸಂಸಾರದಿಂದ ವಿಮುಕ್ತಿಗೊಳಿಸು.”
ಅರಿಯೇಱೇ ಎನ್ ಅಮ್‍ಪೊನ್ ಶುಡರೇ ಶೆಙ್ಗಣ್ ಕುರುಮುಗಿಲೇ,
ಎರಿಯೇ ಪವಳಕ್ಕುನ್‍ಱೇ ನಾಲ್‍ತೋಳ್ ಎನ್ದಾಯ್ ಉನದರುಳೇ,
ಪಿರಿಯಾ ಅಡಿಮೈ ಎನ್ನೈ ಕ್ಕೊಣ್ಡಾಯ್ ಕ್ಕುಡನ್ದೈ ತ್ತಿರುಮಾಲೇ,
ತರಿಯೇನ್ ಇನಿ ಉನ್‍ಶರಣಮ್ ತನ್ದು ಎನ್‍ಶನ್ಮಮ್ ಕಳೈಯಾಯೇ॥
ಎಂಪೆರುಮಾನರು ಅದ್ಭುತವಾಗಿ ಪ್ರಕಾಶಿಸುತ್ತಿದ್ದಾರೆ. ಅವರ ಮಿತಿಯಿಲ್ಲದ ಅನಾವಲಂಬಿತ ತನದಿಂದ (ಸ್ವಾತಂತ್ರದಿಂದ). ಅವರು ಕೆಂದಾವರೆಯಂತಹ ದಿವ್ಯ ಕಣ್ಣುಗಳನ್ನು ಹೊಂದಿದ್ದಾರೆ. ಕಪ್ಪಾದ ಮೋಡದಂತಹ ತಿರುಮೇನಿಯನ್ನು ಹೊಂದಿದ್ದಾರೆ. ಅದು ಎಲ್ಲಾ ರೀತಿಯ ಹೊಳಪಿಗೆ ನೆಲೆಯಾಗಿದೆ. ಬೆಂಕಿಯ ರೀತಿಯಲ್ಲಿ ಎತ್ತರವಾದ ಕೆಂಪಾದ ರೂಪವನ್ನು , ಮಾಣಿಕ್ಯದ ಪರ್ವತದಂತೆ ಹೊಂದಿದ್ದಾರೆ. ಅವರು ನನಗೆ ಸ್ವಾಮಿಯಾಗಿದ್ದಾರೆ. ಅವರು ಭವ್ಯವಾದ ನಾಲ್ಕು ಭುಜಗಳನ್ನು ಹೊಂದಿ, ಆ ಸ್ವರೂಪದಲ್ಲಿಯೇ ನನ್ನನ್ನು ಸೇವಕನಾಗಿ ಸ್ವೀಕರಿಸಿದ್ದಾರೆ. “ನೀನು ನನ್ನ ಕೈಂಕರ್‍ಯವನ್ನು ನನ್ನ ವಾಕಿನ (ಮಾತಿನ) ಮೂಲಕ ಸ್ವೀಕರಿಸಿದ್ದೀರಿ. ನಿನ್ನ ಕರುಣೆಯಿಂದ ನನ್ನನ್ನು ಎಂದೆಂದಿಗೂ ಬೇರ್ಪಡಿಸದಿರಿ. ಓಹ್! ನನ್ನ ಸೇವೆಯನ್ನು ಸ್ವೀಕರಿಸಿರುವ ತಿರುಕ್ಕುಡಂದೈಯಲ್ಲಿ ಲಕ್ಷ್ಮೀ ಸಮೇತನಾಗಿ ನೆಲೆಸಿರುವ ಎಂಪೆರುಮಾನರೇ! ನಾನು ನಿನ್ನನ್ನು ಈ ರೀತಿಯಾಗಿ ಪೋಷಕನಾಗಿ ನೋಡಿದ ಮೇಲೆ ವಿಶ್ರಮಿಸುವುದಿಲ್ಲ. ನಿನ್ನ ದಿವ್ಯ ಪಾದಕಮಲಗಳನ್ನು ಕರುಣಿಸು. ಮತ್ತು ನನ್ನ ಈ ದೇಹದೊಂದಿಗಿನ ಸಂಪರ್ಕವನ್ನು ಅದರ ಮೂಲದಿಂದ ತೆಗೆದುಹಾಕು. (ಮುಕ್ತಿ ಕೊಡು) ಎಂದು ಆಳ್ವಾರರು ಬೇಡಿಕೊಳ್ಳುತ್ತಾರೆ.
ಪಾಸುರಮ್ -8:
ಆಳ್ವಾರರು ಗೊಂದಲಕ್ಕೊಳಗಾಗಿದ್ದಾರೆ. ಅವರಿಗೆ ಎಂಪೆರುಮಾನರ ಬಗ್ಗೆ ಯೋಚಿಸಲಾಗುತ್ತಿಲ್ಲ. ಏಕೆಂದರೆ ಎಂಪೆರುಮಾನರು , ಆಳ್ವಾರರು ‘ತರಿಯೇನ್’ (ನಾನು ನಿನ್ನನ್ನು ಬಿಟ್ಟು ಇರಲಾಗುವುದಿಲ್ಲ) ಎಂದು ಹೇಳಿದ ನಂತರವೂ ಅವರ ಮುಂದೆ ಪ್ರತ್ಯಕ್ಷವಾಗುತ್ತಿಲ್ಲ. ಅವರು ಹೇಳುತ್ತಾರೆ “ ನೀನು ನನ್ನನ್ನು ರಕ್ಷಿಸು, ಇಲ್ಲವಾದರೆ ಬಿಡು. ಅದು ಹಾಗೆಯೇ ಇರಲಿ. ಆದರೆ ನಾನು ನಿನ್ನ ದಿವ್ಯ ಪಾದಕಮಲಗಳನ್ನು ಧ್ಯಾನಿಸುವಂತೆ ಕರುಣೆಯಿಂದ ನನ್ನನ್ನು ನೋಡಿಕೋ. ಇದೇ ನನಗೆ ಬೇಕಾಗಿರುವುದು.”
ಕಳೈವಾಯ್ ತುನ್ಬಮ್ ಕಳೈಯಾದೊೞಿವಾಯ್ ಕಳೈಕಣ್ ಮಟ್ರು ಇಲೇನ್,
ವಳೈ ವಾಯ್ ನೇಮಿ ಪ್ಪಡೈಯಾಯ್ ಕುಡನ್ದೈ ಕ್ಕಿಡನ್ದ ಮಾಮಾಯಾ,
ತಳರಾ ಉಡಲಮ್ ಎನದಾವಿ ಶರಿನ್ದುಪೊಮ್ಬೋದು,
ಇಳೈಯಾದುನತಾಳ್ ಒರುಙ್ಗ ಪ್ಪಿಡಿತ್ತುಪ್ಪೋದ ಇಶೈ ನೀಯೇ॥
ನನಗೆ ಬೇರೆ ಯಾವ ರಕ್ಷಕನೂ ಇಲ್ಲ. ನೀನು ನನ್ನ ದುಃಖವನ್ನು ದೂರ ಮಾಡು ಇಲ್ಲವಾದರೆ ಬಿಡು. ಓಹ್ ! ತಿರುಕುಡಂಧೈಯಲ್ಲಿ ವಿಶ್ರಮಿಸುತ್ತಿರುವ, ಅತ್ಯಂತ ಸುಂದರವಾಗಿರುವ, ಗುಂಡಗಿನ ಬಾಯನ್ನು ಹೊಂದಿರುವ ದಿವ್ಯ ಚಕ್ರವನ್ನು ಆಯುಧವಾಗಿ ಹಿಡಿದಿರುವ ನನ್ನ ಸ್ವಾಮಿಯೀ ! ನನ್ನ ದೇಹವು ನಿತ್ರಾಣವಾಗಿ , ಪ್ರಾಣವು ಅದುರಿದಾಗ ಮತ್ತು ನನ್ನ ದೇಹವನ್ನು ಬಿಡುವ ಕೊನೆಯ ಹಂತವನ್ನು ತಲುಪಿದಾಗ, ನಾನು ನಿನ್ನ ದಿವ್ಯ ಪಾದಕಮಲಗಳನ್ನು ನಿರಂತರವಾಗಿ ಬಿಡದೇ ಹಿಡಿದುಕೊಂಡಿರುವ ಹಾಗೆ ಮನೋಬಲವನ್ನೂ ಸ್ಥೈರ್‍ಯವನ್ನೂ ಕೊಡು ಎಂದು ಆಳ್ವಾರರು ಬೇಡುತ್ತಾರೆ.
ಪಾಸುರಮ್ – 9:
“ನೀನೇ ನನಗೆ ಒಪ್ಪಿಗೆಯನ್ನು ಕೊಟ್ಟು, ನಾನು ನಿನ್ನ ಪಾದಕಮಲಗಳನ್ನೇ ಗುರಿಯಾಗಿಸಿಕೊಂಡಿರುವುದನ್ನು ನೀನು ಆನಂದಿಸಿರುವೆ. ಹೇಗೆ ನೀನು ಮಲಗಿರುವುದನ್ನು ತೋರಿಸುತ್ತಿರುವೆಯೋ ಹಾಗೆ, ನೀನೇ ನಿನ್ನ ಸುಂದರವಾದ ನಡಿಗೆಯನ್ನೂ ತೋರಿಸು.” ಎಂದು ಆಳ್ವಾರರು ಬೇಡಿಕೊಳ್ಳುತ್ತಾರೆ.
ಇಶೈವಿತ್ತೆನ್ನೈ ಉನ್ ತಾೞಿಣೈಕ್ಕೀೞ್ ಇರುತ್ತುಮ್ ಅಮ್ಮಾನೇ,
ಅಶೈವಿಲ್ ಅಮರರ್ ತಲೈವರ್ ತಲೈವಾ ಆದಿ ಪ್ಪೆರುಮೂರ್ತ್ತಿ,
ತಿಶೈವಿಲ್ ವೀಶುಮ್ ಶೆೞು ಮಾಮಣಿಗಳ್ ಶೇರುಮ್ ತಿರುಕ್ಕುಡನ್ದೈ,
ಅಶೈವಿಲ್ ಉಲಗಮ್ ಪರವ ಕ್ಕಿಡನ್ದಾಯ್ ಕಾಣ ವಾರಾಯೇ॥
ನೀನು ನನಗೆ ಸ್ವಾಮಿಯಾಗಿರುವೆ. ನನ್ನನ್ನು ನೀನು ಒಪ್ಪಿಕೊಂಡು ನಿನ್ನ ದಿವ್ಯ ಪಾದಗಳಲ್ಲಿ ಇರಿಸಿಕೊಂಡಿರುವೆ. ನನಗೆ ನಿನ್ನ ಪಾದವೇ ಮಾಧ್ಯಮ ಮತ್ತು ಅದೇ ಗುರಿಯಾಗಿ ನೀನು ಅರ್ಥ ಮಾಡಿಸಿರುವೆ. ನೀನೇ ಎಲ್ಲರಿಗೂ ಒಡೆಯನಾಗಿರುವೆ. ನಿತ್ಯಸೂರಿಗಳಿಗೆಲ್ಲರಿಗೂ, ಅನಂತ, ಗರುಡ, ವಿಶ್ವಕ್ಸೇನ ಮುಂತಾದವರಿಗೆಲ್ಲ ಅವರ ತೊಂದರೆಗಳನ್ನು ನಿವಾರಿಸಿರುವೆ. ನೀನೇ ಎಲ್ಲರಿಗೂ, ಎಲ್ಲದಕ್ಕೂ ಕಾರಣವಾಗಿರುವೆ. ನೀನು ಎಲ್ಲರಿಗಿಂತಾ ಶ್ರೇಷ್ಠವಾಗಿರುವ ಸ್ವರೂಪದಲ್ಲಿರುವೆ. ತಿರುಕ್ಕುಡಂಧೈಯಲ್ಲಿ ವಿರಾಮಿಸುತ್ತಿರುವ ನನ್ನ ಸ್ವಾಮಿಯೇ! ಅದು ಅನೇಕ ಅಮೂಲ್ಯವಾದ, ಆಕರ್ಷಕ ಹರಳುಗಳಿಂದ ತುಂಬಿದೆ. ಅವು ತಮ್ಮ ಪ್ರಕಾಶವನ್ನು ಎಲ್ಲಾ ದಿಕ್ಕಿನಲ್ಲೂ ಹರಡಿ, ನಿನ್ನನ್ನು ಪಡೆಯಲು ಇರುವ ಕಷ್ಟಗಳನ್ನು, ಸಂದೇಹಗಳನ್ನೂ ದೂರಮಾಡುತ್ತಿವೆ. ನೀನು ಬಂದು ನನಗಾಗಿ ಇದನ್ನು ನೋಡು. ‘ಅಸೈವು ಇಲ್ ಉಲಗಮ್’ ಕಷ್ಟಗಳಿಂದ, ದುಃಖ ಸಾಗರದಿಂದ ತುಂಬಿ ತೂಗುತ್ತಿರುವ, ಇಡೀ ಭೂಮಿಯು, ಈ ತಿರುಕ್ಕುಡಂಧೈಯ ನೀನು ಇರುವ ಪ್ರದೇಶವನ್ನು ನೋಡಿ, ಆಶ್ಚರ್‍ಯಕ್ಕೆ ಒಳಗಾಗಿ , ನಿನ್ನನ್ನು ಹೊಗಳುತ್ತಿದೆ.
ಇಲ್ಲಿ, ಇದನ್ನು ಭಯಕ್ಕೆ ಒಳಗಾಗದ ಪರಮಪದಕ್ಕೂ ಹೋಲಿಸಿರಬಹುದು.
ಅಥವಾ, ಈ ಲೋಕವು ಎಡಕ್ಕೂ ಬಲಕ್ಕೂ ಜೀಕುತ್ತಿರುವ ಎಂಪೆರುಮಾನರ ವಿಶ್ರಮಿಸುತ್ತಿರುವ ದಿವ್ಯ ಶರೀರವನ್ನೂ ಕೂಡಾ ಹೊಗಳುತ್ತಿರಬಹುದು.
ಪಾಸುರಮ್ -10:
ಆಳ್ವಾರರು ಹೇಳುತ್ತಾರೆ, “ನೀನು ನನ್ನ ಅಂತರಂಗದಲ್ಲಿರುವೆ, ಆದ್ದರಿಂದ ಬಹಳ ರುಚಿಯಾಗಿರುವೆ. ಆದರೆ ನಾನು ನಿನ್ನನ್ನು ಬಹಿರಂಗವಾಗಿ ನೋಡಲು ಕಾದಿರುವೆ”.
ವಾರಾ ಅರುವಾಯ್ ವರುಮ್ ಎನ್ ಮಾಯಾ ಮಾಯಾ ಮೂರ್ತಿಯಾಯ್,
ಆರಾವಮುದಾಯ್ ಅಡಿಯೇನ್ ಆವಿ ಅಹಮೇ ತಿತ್ತಿಪ್ಪಾಯ್,
ತೀರಾ ವಿನೈಗಳ್ ತೀರ ಎನ್ನೈ ಆಣ್ಡಾಯ್ ತಿರುಕ್ಕುಡನ್ದೈ
ಊರಾ ಉನಕ್ಕು ಆಳ್ ಪಟ್ಟುಮ್ ಅಡಿಯೇನ್ ಇನ್ನಮ್ ಉೞಲ್ವೇನೋ॥
ನನ್ನ ಬಳಿ ನಿನ್ನ ನಿಜ ಸ್ವರೂಪವನ್ನು ಹೊಂದಿ, ನೀನು ನಡೆದು ಬಂದು ಈ ಕಣ್ಣುಗಳಿಗೆ ಆನಂದವನ್ನು ನೀಡುವುದಕ್ಕೆ ಬದಲಾಗಿ, ನೀನು ನನ್ನ ಮನಸ್ಸಿನಲ್ಲಿ ಯಾವುದೇ ರೂಪವನ್ನು ಹೊಂದದೇ, ಶ್ರೇಷ್ಠ ಗುಣಗಳನ್ನು ಧರಿಸಿ ನಿಂತಿದ್ದೀಯ. ಆದರೆ ಜೊತೆಗೆ ನೀನು ನನ್ನ ಹೃದಯದೊಳಗೆ ನಿನ್ನ ಸೇವಕನಾಗಿರುವ , ನಿನ್ನಿಂದ ಪೋಷಿಸಲ್ಪಡುವವನೊಳಗೆ, ಬಹಳ ಸವಿಯಾದ ರುಚಿಯನ್ನು ಪ್ರಚೋದಿಸಿದ್ದೀಯ. ನನ್ನ ಹೃದಯ, ನನ್ನ ಆತ್ಮಕ್ಕೆ ನೆಲೆಯಾಗಿರುವ ಹೃದಯದೊಳಗೆ ನಿರಂತರ ಶುಭವಾದ ರೂಪವನ್ನು ಹೊಂದಿ, ಅದು ಕೆಡದಂತೆ, ಕಲ್ಮಶವಾಗದಂತೆ, ನೆಲೆಸಿದ್ದೀಯ. ನೀನು ನನ್ನ ಶಬ್ದದ ಮೂಲಕವಾದ ಸೇವೆಯನ್ನು ಸ್ವೀಕರಿಸಿ, ನನ್ನ ಅನಂತವಾದ ಪಾಪಗಳನ್ನು ನಿವಾರಿಸಿದ್ದೀಯ. ಓಹ್! ತಿರುಕ್ಕುಡಂಧೈಯಲ್ಲಿ ವಿಶಿಷ್ಟವಾಗಿ ನೆಲೆಸಿರುವವನೇ! ನಾನು ನಿನ್ನ ಸೇವಕನೇ ಇರಬಹುದು. ಆದರೆ ನಿನಗಾಗಿಯೇ ಅಸ್ತಿತ್ವದಲ್ಲಿ ಇರುವೆ ಮತ್ತು ಬೇರೆ ಯಾವ ಆಶ್ರಯವಿಲ್ಲದೆ, ನಿನ್ನನ್ನೇ ಆಶ್ರಯಿಸಿ, ಬಂದಿರುವೆ. ಆದರೆ ಆಸೆ ಪಡುವ ರೀತಿಯಲ್ಲಿ ನಿನ್ನ ಜೊತೆ ಸಂಪರ್ಕವಿಲ್ಲದೆ ನಾನು ನರಳುತ್ತಿರುವೆ.
ಪಾಸುರಮ್ -11:
ಈ ಹತ್ತು ಪಾಸುರಗಳನ್ನು ತಪ್ಪಿಲ್ಲದೆ ಓದಿ ತಿಳಿದುಕೊಂಡವರು, ಶ್ರೀವೈಷ್ಣವರ ಪ್ರೀತಿಗೆ ಹೇಗೆ ಪಾತ್ರರಾಗುತ್ತಾರೆಂದರೆ , ಕಾಮಿನಿಯರಿಗೆ ಹೇಗೆ ಕಾಮುಕನು ಆನಂದವನ್ನು ನೀಡುತ್ತಾನೋ ಹಾಗೆಯೇ.
ಉೞಲೈ ಎನ್ಬಿನ್ ಪೇಯ್ಚಿ ಮುಲೈಯೂಡು ಅವಳೈ ಉಯಿರ್ ಉಣ್ಡಾನ್,
ಕೞಲ್‍ಗಳ್ ಅವೈಯೇ ಶರಣಾಗ ಕ್ಕೊಣ್ಡ ಕುರುಗೂರ್ ಚ್ಚಡಗೋಪನ್,
ಕುೞಲಿನ್ ಮಲಿಯ ಚ್ಚೊನ್ನ ಓರಾಯಿರತ್ತುಳ್ ಇಪ್ಪತ್ತುಮ್,
ಮುೞಲೈ ತೀರ ವಲ್ಲಾರ್ ಕಾಮರ್ ಮಾನೇಯ್ ನೋಕ್ಕಿಯರ್ಕ್ಕೇ॥
ಕೃಷ್ಣನು ರಾಕ್ಷಸಿಯಾದ ಪೂತನಿಯ ಮೊಲೆಯನ್ನು ಉಣ್ಡು, ಅವಳನ್ನು ಸಂಹರಿಸಿದನು. ಆಳ್ವಾರ್ ತಿರುನಗರಿಯ ನಮ್ಮಾೞ್ವಾರರು ಅಂತಹ ಕೃಷ್ಣನ ದಿವ್ಯ ಪಾದಕಮಲಗಳನ್ನು ಮಾತ್ರ ಮೊರೆಹೋಗಿ ,ತಮ್ಮ ಆಸೆಯನ್ನು ಪೂರೈಸಿದರು. ಅಂತಹ ಆಳ್ವಾರರು ಕರುಣೆಯಿಂದ ಈ ಹತ್ತು ಪಾಸುರಗಳನ್ನು , ಕೊಳಲಿಗಿಂತಲೂ ಸಿಹಿಯಾದ ಧ್ವನಿಗಳಿಂದ, ಸಾವಿರ ಪಾಸುರಗಳಲ್ಲಿ ಕೊಟ್ಟಿದ್ದಾರೆ. ಯಾರು ಈ ಹತ್ತು ಪಾಸುರಗಳನ್ನು ಹೇಳುತ್ತಾರೋ, ಅವರ ಅಜ್ಞಾನವು ದೂರವಾಗುತ್ತದೆ. ಆಳ್ವಾರರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಆ ಭಾವದಲ್ಲಿ ಹಾಡಿದರೆ, ಆ ಭಕ್ತರು ಶ್ರೀವೈಷ್ಣವರಿಗೆ ಅತ್ಯಂತ ಪ್ರೀತಿ ಪಾತ್ರರಾಗುತ್ತಾರೆ. ಹೇಗೆ ಕಾಮಿನಿಯರಿಗೆ ಕಾಮುಕನು ಪ್ರೀತಿ ಪಾತ್ರನಾಗುತ್ತಾನೋ ಹಾಗೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : http://divyaprabandham.koyil.org/index.php/2020/05/thiruvaimozhi-5-8-simple/
ಆರ್ಕೈವ್ ಮಾಡಲಾಗಿದೆ : http://divyaprabandham.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org