ತಿರುವಾಯ್‌ಮೊೞಿ – ಸರಳ ವಿವರಣೆ – ತನಿಯನ್‌ಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

Nammalwar-emperumanar

ಭಕ್ತಾಮೃತಮ್ ವಿಶ್ವಜನಾನುಮೋದನಮ್
ಸರ್ವಾರ್ಥದಮ್ ಶ್ರೀ ಶಠಕೋಪ ವಾಙ್ಮಯಮ್
ಸಹಸ್ರ ಶಾಖೋಪನಿಷತ್ ಸಮಾಗಮಮ್
ನಮಾಮ್ಯಹಮ್ ದ್ರಾವಿಡ ವೇದ ಸಾಗರಮ್


ನಮ್ಮಾೞ್ವಾರ್ ಅವರ ದೈವಿಕ ವಾಕ್ಯಗಳಾದ, ಛಾಂದೋಗ್ಯ ಉಪನಿಷತ್ ಮತ್ತು ಸಾಮವೇದದ ಸಾವಿರ ಶಾಖೆಗಳಿಗೆ ಸಮವಾದ, ಎಲ್ಲಾ ಆಶೀರ್ವಾದಗಳನ್ನು ನೀಡುವ, ಎಲ್ಲರಿಗೂ ಸಂತೋಷವನ್ನು ಕೊಡುವ, ಶ್ರೀಮನ್ನ ನಾರಾಯಣನ ಭಕ್ತರಿಗೆ ಜೇನಾಗಿರುವ ತಿರುವಾಯ್ಮೊೞಿಯನ್ನು ನಾನು ಪೂಜಿಸುತ್ತೇನೆ.

ತಿರುವೞುದಿ ನಾಡೆಂಡ್ರುಮ್ ತೆನ್ ಕುರುಗೂರ್ ಎನ್ರುಮ್
ಮರುವಿನಿಯ ವಣ್ಪೊರುನಲ್ ಎನ್ರುಮ್
ಅರುಮರೈಗಳ್ ಅಂದಾದಿ ಸೈದಾನ್ ಅಡಿಯಿಣೈಯೇ
ಎಪ್ಪೊೞುದುಮ್ ಸಿಂದಿಯಾಯ್ ನೆಞ್ಜೇ ತೆಳಿಂದು!


ಓ ಮನವೇ! ಅತ್ಯಂತ ಸುಂದರವಾದ ತಾಮಿರ ಭರಣಿ ನದಿ ಹರಿಯುವ ತರುಕ್ಕುರುಗೂರ್ , ತಿರುವೞುದಿ ನಾಡು ಎನ್ನುವ ಅೞ್ವಾರ್ತಿರುನಗರಿಯನ್ನು ಧ್ಯಾನಿಸುತ್ತಾ, ಅಪರೂಪವಾದ ಮತ್ತು ಕಷ್ಟವಾಗಿರುವ ವೇದಗಳ ಅರ್ಥಗಳನ್ನು ತಿರುವಾಯ್ಮೊೞಿಯಲ್ಲಿ ಅಂದಾದಿ ರೂಪದಲ್ಲಿ( ಒಂದು ಪಾಸುರದ ಕೊನೆಯ ಪದ ಮುಂದಿನ ಪಾಸುರದ ಮೊದಲನೇ ಪದವಾಗಿರುವುದು) ನಮಗೆ ಬೋಧಿಸಿದ ನಮ್ಮಾೞ್ವಾರ್ ಅವರ ದೈವಿಕ ಚರಣಗಳನ್ನು ಸ್ಪಷ್ಟವಾಗಿ ಧ್ಯಾನಿಸು!

ಮನತ್ತಾಲುಮ್ ವಾಯಾಲುಮ್ ವಣ್ ಕುರುಗೂರ್ ಪೇಣುಮ್
ಇನತ್ತಾರೈ ಅಲ್ಲಾದು ಇರೈಂಜೇನ್ ತನತ್ತಾಲುಮ್
ಏದುಮ್ ಕುರೈವಿಲೇನ್ ಎನ್ದೈ ಶಠಕೋಪನ್
ಪಾದಂಗಳ್ ಯಾಮ್ ಉಡೈಯ ಪಟ್ರು!

ಆೞ್ವಾರ್ ತಿರುನಗರಿಯನ್ನು ಮೆಚ್ಚದೆ, ಅಲ್ಲಿ ಕೈಂಕರ್ಯವನ್ನು ಮಾಡದಿರುವವರನ್ನು ನಾನು ಸೇರುವುದಿಲ್ಲ ಹಾಗು ಮನಸ್ಸಲ್ಲೂ ವಾಕ್ಯದಲ್ಲೂ ವಂದಿಸುವುದಿಲ್ಲ ಏಕೆಂದರೆ, ನಮ್ಮಾೞ್ವಾರ್ ಅವರ ಪಾದಕಮಲವೇ ನಮಗೆ ಆಶ್ರಯ!

ಏಯ್‌ನ್ದ ಪೆರುಮ್ ಕೀರ್ತಿ ಇರಾಮಾನುಸ ಮುನಿ ತನ್
ವಾಯ್ನ್ದ ಮಲರ್ ಪಾದಮ್ ವಣಂಗುಗಿನ್ರೇನ್
ಆಯ್ನ್ದ ಪೆರುಮ್ ಸೀರಾರ್ ಶಠಕೋಪನ್ ಸೆನ್ದಮಿೞ್ ವೇದಮ್ ಧರಿಕ್ಕುಮ್
ಪೇರಾದ ಉಳ್ಳಮ್ ಪೆರ

ದೋಷರಹಿತರಾದ, ಅತ್ಯುತ್ತಮವಾದ ಗುಣಗಳನ್ನು ಹೊಂದಿರುವ ನಮ್ಮಾೞ್ವಾರ್ ರಚಿಸಿದ ತಮಿೞ್ ವೇದವನ್ನು, ತಿರುವಾಯ್ಮೊೞಿಯನ್ನುಮನಪೂರ್ವಕವಾಗಿ ಗ್ರಹಿಸಲು ಬಿಟ್ಟರೆ ಬೇರೇನೂ ವಿಷಯಗಳಲಲ್ಲಿ ಆಸಕ್ತಿ ಇಲ್ಲದಂತಹ , ಅತ್ಯುತ್ತಮವಾದ ಮಹತ್ವವುಳ್ಳ , ಎಲ್ಲಗಿಂತ ಹೆಚ್ಚಾಗಿ ಅರ್ಹತೆ ಹೊಂದಿರುವ ಎಂಪೆರುಮಾನಾರವರ ದೈವಿಕ ಪಾದಗಳನ್ನು ನಾನು ಪೂಜಿಸುತ್ತೇನೆ!

ವಾನ್ ತಿಗೞುಮ್ ಸೋಲೈ ಮದಿಳ್ ಅರಂಗರ್ ವಣ್ ಪುಗೞ್ ಮೇಲ್
ಆನ್ರ ತಮಿೞ್ ಮರೈಗಳ್ ಆಯಿರಮುಮ್
ಈನ್ರ ಮುದಲ್ ತಾಯ್ ಶಠಕೋಪನ್ ಮೊಯ್ಮಬಾಲ್ ವಳರ್ತ್ತ
ಇದತ್ತಾಯ್ ಇರಾಮಾನುಸನ್

ಎತ್ತರವಾದ ಮರಗಳು ಮತ್ತು ಏಳು ಪದರಗಳ ಕೋಟೆಗಳಿಂದ ಸುತ್ತಲ್ಪಟ್ಟ ಶ್ರೀರಂಗದಲ್ಲಿ ಶಯನಿಸುತ್ತಿರುವ ಪೆರಿಯ ಪೆರುಮಾಳನ್ನು ದೈವಿಕ ಕಲ್ಯಾಣ ಗುಣಗಳನ್ನು ಹೊಗಳಿ ಹಾಡುವ ತಿರುವಾಯ್ಮೊೞಿಯನ್ನು (೧೦೦೦ ಪಾಸುರಗಳು) ಗರ್ಭಧರಿಸಿ, ಜನ್ಮ ನೀಡಿದ ನೈಸರ್ಗಿಕವಾದ ಮೊದಲನೇ ತಾಯಿ ನಮ್ಮಾೞ್ವಾರ್. ಚುರುಕು ಬುದ್ಧಿಯುಳ್ಳ, ಶುಭ ಹಾರೈಸುವ ಎಂಪೆರುಮಾನಾರ್ ತಿರುವಾಯ್ಮೊೞಿಯ ಸಾಕು ತಾಯಿ.

ಮಿಕ್ಕ ಇರೈ ನಿಲಯುಮ್ ಮೈಯ್ಯಾಮ್ ಉಯಿರ್ ನಿಲಯುಮ್
ತಕ್ಕ ನೆರಿಯುಮ್ ತಡೆಯಾಗಿ ತೊಕ್ಕಿಯಲುಮ್
ಊೞ್ ವಿನೈಯುಮ್ ವಾೞ್ ವಿನೈಯುಮ್ ಓದುಮ್ ಕುರುಗಯರ್ ಕೋನ್
ಯಾೞಿನ್ ಇಸೈ ವೇದತ್ತಿಯಲ್

ಆೞ್ವಾರ್ ತಿರುನಗರಿಯ ನಿವಾಸಿಗಳ ನಾಯಕ ನಮ್ಮಾೞ್ವಾರ್.
ಅವರು ರಚಿಸಿದ ತಿರುವಾಯ್ಮೊೞಿ ವೀಣೆಯ ಅತಿ ಮಧುರ ಧ್ವನಿಯಂತೆ ಇದೆ.
ತಿರುವಾಯ್ಮೊೞಿ ಅತ್ಯಂತ ಮುಖ್ಯವಾದ ಐದು ತತ್ವಗಳ ನಿಜ ಸ್ವರೂಪವನ್ನು ಕೂರುತ್ತದೆ. ಸರ್ವೋಚ್ಚನಾದ ಶ್ರೀಮನ್ ನಾರಾಯಣನ ಸ್ವರೂಪ(ಪರಮಾತ್ಮಸ್ವರೂಪ)ನಿರಂತರವಾಗಿರುವ ,ಜೀವಾತ್ಮ ಸ್ವರೂಪ, ಭಗವಂತನನ್ನು ಸೇರಲು ಪಾರಂಗತವಾದ ಮಾರ್ಗದ ಸ್ವರೂಪ(ಉಪಾಯ ಸ್ವರೂಪ) ,ಭಗವಂತನನ್ನು ಸೇರಲು ತಡೆಯಾಗಿರುವ ಅಡಚಣೆಗಳ ಸ್ವರೂಪ(ವಿರೋಧಿ ಸ್ವರೂಪ) ಮತ್ತು ಅಂತಿಮ ಗುರಿಯ ಸ್ವರೂಪ (ಫಲ ಸ್ವರೂಪ).

ಅಡಿಯೇನ್ ರೂಪ ರಾಮಾನುಜ ದಾಸಿ

ಮೂಲ – http://divyaprabandham.koyil.org/index.php/2020/05/thiruvaimozhi-thaniyans-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.orgLeave a Comment