ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
ಮಣವಾಳ ಮಾಮುನಿಗಳು ಉಪದೇಶ ರತ್ನಮಾಲೆಯ ಇಪ್ಪತ್ತನಾಲ್ಕನೆಯ ಪಾಸುರದಲ್ಲಿ ಆಂಡಾಳರ ಶ್ರೇಷ್ಠತೆಯನ್ನು ಸುಂದರವಾಗಿ ತಿಳಿಸುತ್ತಾರೆ.
ಅಂಜು ಕುಡಿಕ್ಕು ಒರು ಸಂತತಿಯಾಯ್ ಆಳ್ವಾರ್ಗಳ್
ತಮ್ ಸೆಯಲೈ ವಿಂಜಿ ನಿರ್ಕುಮ್ ತನ್ಮೆಯಳಾಯ್, -ಪಿಂಜಾಯ್
ಪಳುತ್ತಾಳೈ ಆಂಡಾಳೈ ಪತ್ತಿಯುಡನ್ ನಾಳುಮ್
ವಳುತ್ತಾಯ್ ಮನಮೇ ಮಗಿಳ್ನ್ದು
ಆಂಡಾಳ್ ಆಳ್ವಾರರ ವಂಶದಲ್ಲಿ ಏಕೈಕ ಉತ್ತರಾಧಿಕಾರಿಯಾಗಿ ಅವತರಿಸಿದರು. ಅಂಜು ಎಂಬ ಪದವು ‘ಐದು’ ಎಂಬ ಅಂಕಿಯನ್ನು ಮತ್ತು ‘ಭಯ’ ಎಂಬುದನ್ನೂ ಸೂಚಿಸುತ್ತದೆ. ಮೊದಲ ವ್ಯಾಖ್ಯಾನದಲ್ಲಿ, ಐದು ಪಾಂಡವರ ಕುಲಕ್ಕೆ ಪರೀಕ್ಷಿತ್ ಒಬ್ಬನೇ ವಾರಸುದಾರನಾಗಿದ್ದಂತೆಯೇ, ಆಳ್ವಾರರ ಕುಲಕ್ಕೆ ಆಂಡಾಳ್ ಏಕೈಕ ಉತ್ತರಾಧಿಕಾರಿಯಾಗಿದ್ದಳು ಎಂಬ ಅಂಶವನ್ನು ಉಲ್ಲೇಖಿಸುತ್ತದೆ. ಎರಡನೇ ಅರ್ಥವಿವರಣೆಯಲ್ಲಿ, ಎಂಪೆರುಮಾನನಿಗೆ ಯಾವ ಕೇಡು ಬರುತ್ತದೋ ಎಂದು ಸದಾ ಭಯಪಡುತ್ತಿದ್ದ ಆಳ್ವಾರರ ಕುಲಕ್ಕೆ ಇವಳೊಬ್ಬಳೇ ಉತ್ತರಾಧಿಕಾರಿ ಎಂದರ್ಥ. ಪೆರಿಯಾಳ್ವಾರ್ ಅವರು ಎಂಪೆರುಮಾನಿಗೆ ಮಂಗಳಾಶಾಸನವನ್ನು ಹಾಡುವುದರಲ್ಲಿ ಯಾವಾಗಲೂ ನಿರತರಾಗಿದ್ದರು. ಇತರ ಎಲ್ಲಾ ಆಳ್ವಾರ್ಗಳು ಪರಮಭಕ್ತಿಯ ಸ್ಥಿತಿಯಲ್ಲಿ (ಎಂಪೆರುಮಾನನ ಅನುಪಸ್ಥಿತಿಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲಾಗದ ಸ್ಥಿತಿ) ನಿರತರಾಗಿರುವಾಗ ಪೆರಿಯಾಳ್ವಾರ್ ಅವರು ಎಂಪೆರುಮಾನ್ ದೀರ್ಘಕಾಲ ಬದುಕಬೇಕೆಂದು ಹಾರೈಸುತ್ತಿದ್ದರು. ಆಂಡಾಳ್ ಪೆರಿಯಾಳ್ವಾರರಂತೆ ಎಂಪೆರುಮಾನ್ಗೆ ಮಂಗಳಾಶಾಸನವನ್ನು ಹಾಡುವುದರಲ್ಲಿ ನಿರತರಾಗಿದ್ದರು ಮತ್ತು ಇತರ ಆಳ್ವಾರ್ಗಳಂತೆಯೇ ಭಕ್ತಿಯಲ್ಲಿ ಮುಳುಗಿದ್ದರು. ‘ಪಿಂಜಾಯ್ ಪಳುತ್ತಾಳ್’ ಎಂಬ ಪದವು ಯಾರಾದರೂ (ಅಥವಾ ಏನಾದರೂ) ಯೌವ್ವನ ಸ್ಥಿತಿಯಲ್ಲಿಯೇ ಪ್ರಬುದ್ಧತೆಯನ್ನು ಪಡೆದಿರುವುದನ್ನು ಸೂಚಿಸುತ್ತದೆ. ಸಾಮಾನ್ಯ ಸಸ್ಯಗಳು ಆರಂಭದಲ್ಲಿ ಹೂವನ್ನು ಹುಟ್ಟುಹಾಕುತ್ತವೆ, ಅದು ಬಲಿತು ಹಣ್ಣಾಗುತ್ತದೆ (ಕಾಯಿ) ಮತ್ತು ಅಂತಿಮವಾಗಿ ಮಾಗಿದ ಹಣ್ಣುಗಳನ್ನು ನೀಡುತ್ತವೆ. ಆದರೆ, ತುಳಸಿ ಗಿಡವು ಭೂಮಿಯಿಂದ ಮೊಳಕೆಯೊಡೆದು ಕುಡಿಯಿಡುವಾಗಲೂ ತನ್ನ ಪರಿಮಳವನ್ನು ಹೊರಹಾಕುತ್ತದೆ. ಆಂಡಾಳ್ ಅವರನ್ನು ಎರಡನೆಯದಕ್ಕೆ (ತುಳಸಿಗೆ) ಹೋಲಿಕೆ ಮಾಡಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಚಿಕ್ಕ ವಯಸ್ಸಿನಲ್ಲೂ ಕೂಡ ಅವಳು ಭಕ್ತಿಯಲ್ಲಿ ಮುಳುಗಿದ್ದಳು. ಅವಳು ಕೇವಲ ಐದು ವರ್ಷದವಳಿದ್ದಾಗ ತಿರುಪ್ಪಾವೈಯ ಮೂವತ್ತು ಪಾಸುರಗಳನ್ನು ರಚಿಸಿದಳು. ನಾಚ್ಚಿಯಾರ್ ತಿರುಮೊಳಿಯಲ್ಲಿ ಅವಳು ಎಂಪೆರುಮಾನನನ್ನು ಪಡೆಯಲು ಕರಗುತ್ತಾಳೆ. ಓ ನನ್ನ ಹೃದಯವೇ! ಇಂತಹ ಆಂಡಾಳ್ ಅನ್ನು ಎಲ್ಲಾ ಸಮಯದಲ್ಲೂ ನೀನು ಕೊಂಡಾಡುತ್ತಿರು.
ಅವಳು ರಚಿಸಿದ ತಿರುಪ್ಪಾವೈಯಲ್ಲಿ, ಎಂಪೆರುಮಾನನೇ ‘ಉಪಾಯಮ್’ (ಅವನನ್ನು ಸಾಧಿಸುವ ವಿಧಾನ) ಮತ್ತು ‘ಉಪೇಯಂ’ (ಅವನನ್ನು ಪಡೆದ ನಂತರ ಆನಂದಿಸುವ ಅಂತಿಮ ಗುರಿ) ಎಂದು ಅವಳು ನಿರ್ಧರಿಸಿದಳು. ಎಂಪೆರುಮಾನ್ ಬಂದು ತನ್ನನ್ನು ಅವನೆಡೆಗೆ ತೆಗೆದುಕೊಳ್ಳದ ಕಾರಣ, ಅವಳು ಭಗ್ನ-ಹೃದಯಿಯಾದಳು. ಎಂಪೆರುಮಾನ್-ನನ್ನು ಪಡೆಯುವ ಅನಿಯಂತ್ರಿತ ಬಯಕೆಯಿಂದ, ಆಂಡಾಳ್ ಈ ಅದ್ಭುತವಾದ ಪ್ರಬಂಧ, ನಚ್ಚಿಯಾರ್ ತಿರುಮೊಳಿಯನ್ನು ರಚಿಸಿದರು.
ಪ್ರತಿ ‘ಪದಿಗಮ್’ (ದಶಕದ) ಕೊನೆಯಲ್ಲಿ ಅವಳು ತನ್ನನ್ನು ‘ವಿಟ್ಟುಚಿತ್ತನ್ ಕೋದೈ’ ಮತ್ತು ‘ಪಟ್ಟರ್ಪಿರಾನ್ ಕೋಧೈ’ (ಪೆರಿಯಾಳ್ವಾರ್ ಅವರ ಮಗಳು) ಎಂದು ಗುರುತಿಸಿಕೊಳ್ಳುತ್ತಾಳೆ, ಪೆರಿಯಾಳ್ವಾರ್ ಅವರಿಗೆ ಅಧೀನಳಾಗಿದ್ದಾಳೆ. ಪೆರಿಯಾಳ್ವಾರ್ ನಿಮಿತ್ತ ಎಂಪೆರುಮಾನ್ ತನ್ನನ್ನು ಸ್ವೀಕರಿಸಿದರೆ ತಾನು ಸ್ವಾಗತಿಸುತ್ತೇನೆ ಎಂದು ಹೇಳುವ ಮೂಲಕ ಅವಳು ಆಚಾರ್ಯ ನಿಷ್ಠೈ (ಗುರುಗಳಾದ ಆಚಾರ್ಯರಿಗೆ ಅಧೀನವಾಗಿರುವ ಸ್ಥಾನದಲ್ಲಿ ಸಂಪೂರ್ಣವಾಗಿ ನೆಲೆಗೊಂಡಿರುವ) ಸ್ಥಿತಿಯನ್ನು ಬಹಿರಂಗಪಡಿಸುತ್ತಾಳೆ. ಭೂಮಿಪ್ಪಿರಾಟ್ಟಿಯ (ಭೂದೇವಿ) ಪುನರ್ಜನ್ಮವಾಗಿರುವುದರಿಂದ, ಎಂಪೆರುಮಾನ್ನೊಂದಿಗಿನ ತನ್ನ ನಿಕಟ ಸಂಬಂಧವನ್ನು ವ್ಯಕ್ತಪಡಿಸುವ ಮೂಲಕ, ಅವಳು ನಮ್ಮನ್ನು ಭಕ್ತಿಯ ಭಾವಪರವಶತೆಯಲ್ಲಿ ತೊಡಗುವಂತೆ ಮಾಡುತ್ತಾಳೆ.
ಪರಮ ಕಾರುಣಿಕರಾದ ಪೆರಿಯ ವಾಚ್ಚಾನ್ ಪಿಳ್ಳೈ ಅವರು ಈ ಪ್ರಬಂಧಕ್ಕೆ ವ್ಯಾಖ್ಯಾನವನ್ನು ಬರೆದಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಪುತ್ತೂರು ಸ್ವಾಮಿಯವರ ವಿವರಣೆಯ ಸಹಾಯದಿಂದ ನಾವು ಈ ವ್ಯಾಖ್ಯಾನವನ್ನು ಅನುಭವಿಸೋಣ. ಈ ದಿವ್ಯಪ್ರಬಂದವು 143 ಪಾಸುರಗಳನ್ನು ಹೊಂದಿದ್ದು, ಅವುಗಳನ್ನು, 14 ಪದಿಗಗಳ ಕ್ರಮದಲ್ಲಿ ಪೋಣಿಸಿದ್ದಾರೆ (1 ಪದಿಗಕ್ಕೆ 10 ಪಾಸುರಗಳು)…
- ತನಿಯನ್
- ಮೊದಲನೇ ತಿರುಮೊಳಿ – ತೈಯೊರು ತಿಂಗಳ್
- ಎರಡನೇ ತಿರುಮೊಳಿ – ನಾಮಂ ಆಯಿರಂ
- ಮೂರನೇ ತಿರುಮೊಳಿ – ಕೋಳಿ ಅಳೈಪ್ಪದನ್
- ನಾಲ್ಕನೇ ತಿರುಮೊಳಿ – ತೆಳ್ಳಿಯಾರ್ ಪಲರ್
- ಐದನೇ ತಿರುಮೊಳಿ – ಮನ್ನು ಪೆರುಮ್
- ಆರನೇ ತಿರುಮೊಳಿ – ವಾರಣಮ್ ಆಯಿರಂ
- ಏಳನೇ ತಿರುಮೊಳಿ – ಕರ್ಪೂರಮ್ ನಾರುಮೋ
- ಎಂಟನೇ ತಿರುಮೊಳಿ – ವಿಣ್ಣೀಲ ಮೇಲಾಪ್ಪು
- ಒಂಭತ್ತನೇ ತಿರುಮೊಳಿ – ಸಿಂಧೂರ ಶೆಂಬೊಡಿ
- ಹತ್ತನೇ ತಿರುಮೊಳಿ – ಕಾರ್ಕೋಡಲ್ ಪೂಕ್ಕಾಳ್
- ಹನ್ನೊಂದನೇ ತಿರುಮೊಳಿ – ತಾಮ್ ಉಗಕ್ಕುಮ್
- ಹನ್ನೆರಡನೇ ತಿರುಮೊಳಿ – ಮಟ್ರಿರುಂದೀರ್
- ಹದಿಮೂರನೇ ತಿರುಮೊಳಿ – ಕಣ್ಣನೆನ್ನುಮ್
- ಹದಿನಾಲ್ಕನೇ ತಿರುಮೊಳಿ – ಪಟ್ಟಿಮೇಯ್ಂದು
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ: https://divyaprabandham.koyil.org/index.php/2020/05/nachchiyar-thirumozhi-simple/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org