ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
<< ನಾಲ್ಕನೇ ತಿರುಮೊಳಿ – ತೆಳ್ಳಿಯಾರ್ ಪಲರ್
ಕೂಡಲ್ನಲ್ಲಿ ತೊಡಗಿದ ನಂತರವೂ ಅವಳು ಎಂಪೆರುಮಾನ್ನೊಂದಿಗೆ ಒಂದಾಗದ ಕಾರಣ, ಅವಳು ಮೊದಲು ಎಂಪೆರುಮಾನ್ನೊಂದಿಗೆ ಸೇರಿದಾಗ ತನ್ನೊಂದಿಗೆ ಇದ್ದ ಕೋಗಿಲೆ ಪಕ್ಷಿಯನ್ನು ನೋಡುತ್ತಾಳೆ. ಹಕ್ಕಿಗೆ ಜ್ಞಾನವಿದೆ ಮತ್ತು ತನ್ನ ಮಾತಿಗೆ ಉತ್ತರಿಸಬಲ್ಲದು ಎಂದು ಅರಿತುಕೊಂಡ ಅವಳು ಕೋಗಿಲೆ ಹಕ್ಕಿಯ ಪಾದಗಳಿಗೆ ಬೀಳುತ್ತಾಳೆ, “ನನ್ನನ್ನು ಅವನೊಂದಿಗೆ ಸೇರಿಸು” ಎಂದು ಪ್ರಾರ್ಥಿಸುತ್ತಾಳೆ. ಅವಳ ಮಾತುಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಪರಿಗಣಿಸಿ, ಅವಳು ಅದನ್ನು ಪ್ರಾರ್ಥಿಸುತ್ತಾಳೆ. ಆಂಡಾಳ್ ಸೀತಾ ದೇವಿಯಂತೆ ರಾವಣನಿಗೆ “ನನ್ನನ್ನು ಪೆರುಮಾಳ್ ಜೊತೆ ಸೇರಿಸು” ಎಂದು ಹೇಳಬಲ್ಲಳಾದ್ದರಿಂದ ಅವಳು ಕೋಗಿಲೆಯನ್ನು ಬಿಡುವುದಿಲ್ಲ. ಇಲ್ಲಿ, ಅವಳು ತನ್ನನ್ನು ಎಂಪೆರುಮಾನ್ನೊಂದಿಗೆ ಒಂದುಗೂಡಿಸಲು ಪ್ರಾರ್ಥಿಸುತ್ತಿದ್ದಾಳೆ.
ಮೊದಲನೇ ಪಾಸುರಂ. ಎಲ್ಲರನ್ನೂ ಸರಿಯಾಗಿ ರಕ್ಷಿಸುವ ಸಾಮರ್ಥ್ಯವಿರುವ ಎಂಪೆರುಮಾನ್ ನನ್ನನ್ನು ರಕ್ಷಿಸದಿದ್ದರೆ, ಅದನ್ನು ಸರಿಮಾಡುವುದು ಅದರ ಕರ್ತವ್ಯವಲ್ಲವೇ ಎಂದು ಅವಳು ಕೋಗಿಲೆಯನ್ನು ಕೇಳುತ್ತಾಳೆ.
ಮನ್ನು ಪೆರುಮ್ ಪುಗಳ್ ಮಾಧವನ್ ಮಾಮಣಿವಣ್ಣನ್ ಮಣಿಮುಡಿ ಮೈಂದನ್
ತನ್ನೈ ಉಗಂದದು ಕಾರಣಮಾಗ ಎನ್ ಶಂಗಿಳಕ್ಕುಂ ವಳಕ್ಕುಂಡೇ?
ಪುನ್ನೈ ಕುರುಕ್ಕತ್ತಿ ನಾಳಿಲ್ ಶೆರುಂದಿ ಪೊದುಂಬಿನಿಲ್ ವಾಳುಮ್ ಕುಯಿಲೇ!
ಪನ್ನಿ ಎಪ್ಪೋದುಮ್ ಇರುಂದು ವಿರೈನ್ದು ಎನ್ ಪವಳವಾಯನ್ ವರಕ್ಕೂವಾಯ್
ಸುರಹೊನ್ನೆ ಮರ, ಬಿಳಿ ಅಂಜೂರ, ಬೋಗಿ ಮರ ಮುಂತಾದ ವಿವಿಧ ರೀತಿಯ ಮರಗಳನ್ನು ಹೊಂದಿರುವ ತೋಪಿನಲ್ಲಿ ಮರದ ರಂಧ್ರದೊಳಗೆ ವಾಸಿಸುವ ಓ ಕೋಗಿಲೆಯೇ! ಯೋಗ್ಯವಾದ, ಅಸಂಖ್ಯಾತ ಮಂಗಳಕರವಾದ ಗುಣಗಳನ್ನು ಹೊಂದಿರುವ, ನೀಲಿ ರತ್ನದ ಮೈಬಣ್ಣವನ್ನು ಹೊಂದಿರುವ, ಅಮೂಲ್ಯವಾದ ರತ್ನಗಳಿಂದ ಕೂಡಿದ ಕಿರೀಟವನ್ನು ಧರಿಸಿರುವ ಶ್ರೀ ಮಹಾಲಕ್ಷ್ಮಿಯ ಪತ್ನಿಯಾದ, ಬಲಶಾಲಿ ಎಂಪೆರುಮಾನ್ ಅನ್ನು ನಾನು ಬಯಸಿದ್ದರಿಂದ ನನ್ನ ಬಳೆಗಳು ನನ್ನ ಕೈಯಿಂದ ಬೀಳುವುದು ಸರಿಯೇ? ಕೆಂಪಾದ ದಿವ್ಯವಾದ ತುಟಿಗಳನ್ನು ಹೊಂದಿರುವ ಆ ಎಂಪೆರುಮಾನ್ನ ದಿವ್ಯನಾಮಗಳನ್ನು, ಅವರು ಶೀಘ್ರದಲ್ಲೇ ನನ್ನ ಬಳಿಗೆ ಬರುವಂತೆ ನೀನು ಗಟ್ಟಿಯಾದ ಧ್ವನಿಯಲ್ಲಿ ಪಠಿಸುತ್ತಿರಬೇಕು.
ಎರಡನೇ ಪಾಸುರಂ. ಅವಳು ತನ್ನ ಪ್ರಸ್ತುತ ಸ್ಥಿತಿಯನ್ನು ಬಹಿರಂಗಪಡಿಸಿದರೆ, ಕೋಗಿಲೆ ಅದನ್ನು ಕೇಳಿ, ಸೂಕ್ತವಾದ ಪರಿಹಾರವನ್ನು ಹುಡುಕಬಹುದು. ಆದ್ದರಿಂದ, ಅವಳು ತನ್ನ ಈಗಿನ ಪರಿಸ್ಥಿತಿಯನ್ನು ವಿವರಿಸುತ್ತಾಳೆ.
ವೆಳ್ಳೈ ವಿಳಿ ಶಂಗಿಡಂ ಕೈಯಿಲ್ ಕೊಂಡ ವಿಮಲನ್ ಎನಕ್ಕುರುಕಾಟ್ಟಾನ್
ಉಳ್ಳಂ ಪುಗುಂದು ಎನ್ನೈ ನೈವಿತ್ತು ನಾಳುಮ್ ಉಯಿರ್ಪೆಯ್ದು ಕೂತ್ತಾಟ್ಟು ಕಾಣುಮ್
ಕಳ್ ಅವಿಳ್ ಷಣ್ಬಗಪ್ಪೂಮಲರ್ ಕೋದಿ ಕಳಿತ್ತಿಶೈಪಾಡುಂ ಕುಯಿಲೇ
ಮೆಳ್ಳ ಇರುಂದು ಮಿಳಟ್ರಿ ಮಿಳಟ್ರಾದು ಎನ್ ವೇಂಗಡವನ್ ವರಕ್ಕೂವಾಯ್
ಜೇನು ತೊಟ್ಟಿಕ್ಕುವ ಚಂಪಕ ಹೂವಿನ ಸಾರವನ್ನುಆಸ್ವಾದಿಸುವ ಮತ್ತು ಆನಂದದಿಂದ ಹಾಡುವ ಓ ಕೋಗಿಲೆ! ಶುಧ್ದ ಹೃದಯೀ ಅನುಯಾಯಿಗಳನ್ನು ಕೈಬೀಸಿ ಕರೆಯುವ ದಿವ್ಯವಾದ ಶಂಖವನ್ನು ತನ್ನ ದಿವ್ಯವಾದ ಎಡಗೈಯಲ್ಲಿ ಹಿಡಿದಿರುವ ಪರಮ ಪುರುಷನು ತನ್ನ ದಿವ್ಯರೂಪವನ್ನು ನನಗೆ ತೋರಿಸುತ್ತಿಲ್ಲ. ಇದಲ್ಲದೆ, ಅವನು ನನ್ನ ಹೃದಯವನ್ನು ಪ್ರವೇಶಿಸುತ್ತಾನೆ ಮತ್ತು ನನ್ನನ್ನು ಒಳಗೆ ಕೊಳೆಯುವಂತೆ ಮಾಡುತ್ತಾನೆ. ನನ್ನನ್ನು ಹೆಚ್ಚು ಹಿಂಸಿಸಲು, ಅವನು ಪ್ರತಿದಿನ ನನ್ನ ಪ್ರಾಣವನ್ನು (ಮುಖ್ಯ ವಾಯು) ಪೋಷಿಸುತ್ತಾನೆ, ನನ್ನನ್ನು ಕ್ಷೀಣಿಸುತ್ತಾನೆ ಮತ್ತು ಅದನ್ನು ಅವನ ವಿನೋದವಾಗಿ ಪರಿಗಣಿಸುತ್ತಾನೆ. ನೀನು ನನ್ನ ಹತ್ತಿರದಲ್ಲಿಯೇ ಇದ್ದುಕೊಂಡು ನನ್ನೊಂದಿಗೆ ಆಟವಾಡುವ ಬದಲು, ಅವನು ತಿರುವೇಂಗಡದಿಂದ ಇಲ್ಲಿಗೆ ಬರುವಂತೆ ಅವನನ್ನು ಕರೆಯಬೇಕು.
ಮೂರನೇ ಪಾಸುರಂ. ನಮ್ಮ ಶತ್ರುಗಳನ್ನು ತೊಲಗಿಸಿ ನಮಗೆ ಅನುಭವವನ್ನು ನೀಡುವ ಶ್ರೀರಾಮನು ಇಲ್ಲಿಗೆ ಬರುವಂತೆ ಕೋಗಿಲೆಗೆ ಕರೆ ಮಾಡುವಂತೆ ಹೇಳುತ್ತಾಳೆ.
ಮಾತಲಿ ತೇರ್ ಮುನ್ಬು ಕೋಲ್ ಕೊಳ್ಳ ಮಾಯನ್ ಇರಾವಣನ್ ಮೇಲ್ ಶರಮಾರಿ
ತಾಯ್ತಲೈ ಅಟ್ರಟ್ರು ವೀಳ ತೊಡುತ್ತ ತಲೈವನ್ ವರ ಎಂಗುಮ್ ಕಾಣೇನ್
ಪೋದಲರ್ ಕಾವಿಲ್ ಪುದು ಮಣಮ್ ನಾರ ಪೊರಿ ವಂಡಿನ್ ಕಾಮರಂ ಕೇಟ್ಟು
ಉನ್ ಕಾದಲಿಯೋಡುಡನ್ ವಾಳ್ ಕುಯಿಲೇ ಎನ್ ಕರುಮಾಣಿಕ್ಕಂ ವರಕ್ಕೂವಾಯ್
ಸುಂದರವಾದ ಪರಿಮಳವನ್ನು ಹರಡುವ ಅರಳಿದ ಹೂವುಗಳನ್ನು ಹೊಂದಿರುವ ತೋಟಗಳಲ್ಲಿ ಜೀರುಂಡೆಯಿಂದ ಗುನುಗುವಿಕೆಯನ್ನು ಕೇಳುತ್ತಿರುವ, ಓ ನಿನ್ನ ಪ್ರಿಯತಮೆಯೊಂದಿಗೆ ವಾಸಿಸುವ ಕೋಗಿಲೆ! ರಾವಣನು ಮಾಂತ್ರಿಕ ಯುದ್ಧದಲ್ಲಿ ತೊಡಗಿರುವಾಗ, ಮಾತಲಿಯು ಶ್ರೀರಾಮನ ಸಾರಥಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ಅವನ ಮುಖ್ಯ ತಲೆಯು ಪದೇ ಪದೇ ಕತ್ತರಿಸಲ್ಪಡುವ ರೀತಿಯಲ್ಲಿ ರಾವಣನ ಮೇಲೆ ಬಾಣಗಳ ಮಳೆಗರೆಯುವ ಎಂಪೆರುಮಾನ್ನ ಆಗಮನವು ನನಗೆ ಕಂಡು ಬರುತ್ತಿಲ್ಲ. ಆದ್ದರಿಂದ ನೀಲ ರತ್ನದಂತಹ ಮೈಬಣ್ಣವನ್ನು ಹೊಂದಿರುವ ಎಂಪೆರುಮಾನ್ ಇಲ್ಲಿಗೆ ಬರುವಂತೆ ನೀನು ಕೂಗಬೇಕು.
ನಾಲ್ಕನೆಯ ಪಾಸುರಂ. ಗರುಡನನ್ನು ತನ್ನ ಧ್ವಜವನ್ನಾಗಿ ಹೊಂದಿರುವ ಸುಂದರ ಎಂಪೆರುಮಾನ್ ತನ್ನ ಸ್ಥಳಕ್ಕೆ ಬರುವಂತೆ ಕೋಗಿಲೆಯು ಕರೆಯಬೇಕು ಎಂದು ಅವಳು ಹೇಳುತ್ತಾಳೆ.
ಎನ್ಬುರುಗಿ ಇನವೇಲ್ ನೆಡುಮ್ ಕಣ್ಗಳ್ ಇಮೈ ಪೊರುಂದಾ ಪಲ ನಾಳುಮ್
ತುನ್ಬಮ್ ಕಡಲ್ ಪುಕ್ಕು ವೈಕುಂದನ್ ಎನ್ಬದೋರ್ ತೋಣಿ ಪೆರಾದು ಉಳಲ್ಗಿನ್ರೇನ್
ಅನ್ಬುಡೈಯಾರೈ ಪ್ಪಿರಿವುರುನೋಯ್ ಅದು ನೀಯುಮ್ ಅರಿದಿ ಕುಯಿಲೇ
ಪೊನ್ ಪುರೈ ಮೇನಿ ಕ್ಕರುಳ ಕ್ಕೊಡಿಯುಡೈ ಪುಣ್ಣಿಯನೈ ವರಕ್ಕೂವಾಯ್
ಓ ಕೋಗಿಲೆ! ಮೂಳೆಗಳು ಕರಗುತ್ತಿವೆ ಮತ್ತು ಈಟಿಗಳಂತಿರುವ ಎರಡು ಉದ್ದವಾದ, ವಿಸ್ತಾರವಾದ ಕಣ್ಣುಗಳು ನಿದ್ರಿಸಲು ನಿರಾಕರಿಸುತ್ತಿವೆ. ಬಹಳ ಸಮಯದಿಂದ, ನಾನು (ಎಂಪೆರುಮಾನ್ನಿಂದ) ಬೇರ್ಪಡುವ ಸಾಗರದಲ್ಲಿ ಮುಳುಗಿದ್ದೇನೆ ಮತ್ತು ನನ್ನನ್ನು ಶ್ರೀವೈಕುಂಠಂಗೆ ಕರೆದೊಯ್ಯುವ ವಿಷ್ಣುಪೋಧಂ (ಶ್ರೀವೈಕುಂಠನಾಥನನ್ನು ದೋಣಿಯಾಗಿ) ಪಡೆಯಲು ಸಾಧ್ಯವಾಗದೆ ಇಲ್ಲಿ ದುಃಖಿತಳಾಗಿದ್ದೇನೆ. ನಮಗೆ ಆತ್ಮೀಯರಾದವರ ಅಗಲಿಕೆಯಿಂದ ಆಗುವ ಸಂಕಟ ನಿನಗೂ ಗೊತ್ತಿಲ್ಲವೇ? ಬಂಗಾರದ ರೂಪವುಳ್ಳವನೂ, ಗರುಡನನ್ನು ಧ್ವಜವನ್ನಾಗಿಸಿಕೊಂಡವನೂ ಆದ ಕಣ್ಣನು ಇಲ್ಲಿಗೆ ಬರುವಂತೆ ನೀನು ಕರೆಯಬೇಕು.
ಐದನೇ ಪಾಸುರಂ. ಲೋಕಗಳನ್ನು ಕರುಣೆಯಿಂದ ಅಳೆಯುವ ಎಂಪೆರುಮಾನ್ ಇಲ್ಲಿಗೆ ಬಂದರೆ ಅವನನ್ನು ತಾನು ನೋಡಬಹುದಾದ್ದರಿಂದ ಅವನನ್ನು ಕರೆಯುವೆಯಾ ಎಂದು ಅವಳು ಕೋಗಿಲೆಯನ್ನು ಕೇಳುತ್ತಾಳೆ.
ಮೆನ್ನಡೈ ಅನ್ನಮ್ ಪರಂದು ವಿಳೈಯಾಡುಮ್ ವಿಲ್ಲಿಪುತ್ತೂರ್ ಉರೈವಾನ್ ತನ್
ಪೊನ್ನಡಿ ಕಾಣ್ಬದೋರ್ ಆಶೈಯಿನಾಲ್ ಎನ್ ಪೊರು ಕಯರ್ಕಣ್ಣಿಣೈ ತುಂಜಾ
ಇನ್ನಡಿಶಿಲೊಡು ಪಾಲ್ ಅಮುದೂಟ್ಟಿ ಎಡುತ್ತ ಎನ್ ಕೋಲಕ್ಕಿಳಿಯೈ
ಉನ್ನೊಡು ತೋಳಮೈ ಕೊಳ್ಳುವನ್ ಕುಯಿಲೇ ಉಲಗಳಂದಾನ್ ವರಕ್ಕೂವಾಯ್
ಶ್ರೀವಿಲ್ಲಿಪುತ್ತೂರ್ ವಿಸ್ತಾರವಾದ ಪ್ರದೇಶವನ್ನು ಹೊಂದಿದ್ದು, ನಿಧಾನ ನಡಿಗೆಯಲ್ಲಿ ನಡೆಯುವ ಹಂಸಗಳು ಚೆನ್ನಾಗಿ ಹರಡಿಕೊಂಡು ಆಡಬಹುದು. ಪರಸ್ಪರ ಕಾದಾಡುವ ಮತ್ತು ಕೊರಚ ಮೀನಿನಂತಿರುವ ನನ್ನ ಕಣ್ಣುಗಳು ಶ್ರೀವಿಲ್ಲಿಪುತ್ತೂರಿನಲ್ಲಿ ಕರುಣಾಮಯವಾಗಿ ನೆಲೆಸಿರುವ ಎಂಪೆರುಮಾನ್ನ ಸುಂದರವಾದ, ಚಿನ್ನದಂತಹ ದಿವ್ಯ ಪಾದಗಳನ್ನು ನೋಡುವ ಬಯಕೆಯಿಂದ ನಿದ್ದೆ ಮಾಡಲು ನಿರಾಕರಿಸುತ್ತವೆ.
ಆರನೇ ಪಾಸುರಂ. ಎಂಪೆರುಮಾನನು ನನ್ನ ಬದುಕಿಗೆ ಮೂಲ ಕಾರಣ. ಅವನು ಇಲ್ಲಿಗೆ ಬರಬೇಕೆಂದು ನೀನು ಕರೆದರೆ, ನಾನು ಬದುಕುವವರೆಗೂ ನಿನ್ನಪಾದದ ಮೇಲೆ ತಲೆ ಇಡುತ್ತೇನೆ.
ಎತ್ತಿಶೆಯುಮ್ ಅಮರರ್ ಪಣಿಂದೇತ್ತುಮ್ ಇರುಡೀಕೇಶನ್ ವಲಿ ಶೆಯ್ಯ
ಮುತ್ತನ್ನ ವೆಣ್ ಮುರುವಲ್ ಶೆಯ್ಯ ವಾಯುಮ್ ಮುಲೈಯುಂ ಅಳಗಳಿಂದೇನ್ ನಾನ್
ಕೊತ್ತಲರ್ ಕಾವಿಲ್ ಮಣಿತ್ತಡಂ ಕಣ್ ಪಡೈ ಕೊಳ್ಳುಮ್ ಇಳಂ ಕುಯಿಲೇ
ಎನ್ ತತ್ತುವನೈ ವರ ಕೂಗಿಟ್ರಿಯಾಗಿಲ್ ತಲೈ ಅಲ್ಲಾಲ್ ಕೈಮ್ಮಾರಿಲೇನೇ
ಹೂಗಳಿಂದ ಅರಳಿದ ತೋಟದೊಳಗಿನ ಸುಂದರ ಸ್ಥಳದಲ್ಲಿ ಮಲಗಿರುವ ಪುಟ್ಟ ಕೋಗಿಲೆಯೇ! ಹೃಶೀಕೇಶನು (ಅನುಯಾಯಿಗಳ ಇಂದ್ರಿಯಗಳನ್ನು ತನ್ನ ನಿಯಂತ್ರಣದಲ್ಲಿ ಹೊಂದಿರುವವನು) ಎಲ್ಲಾ ದಿಕ್ಕುಗಳಲ್ಲಿಯೂ ದೇವಾನುದೇವತೆಗಳು ಅವನನ್ನು ವಂದಿಸುವ ಮತ್ತು ಪೂಜಿಸುವ ಶ್ರೇಷ್ಠತೆಯನ್ನು ಹೊಂದಿದ್ದಾನೆ. ಅವನು ನನಗೆ ತನ್ನನ್ನು ತೋರಿಸಿಕೊಳ್ಳದೆ ಮತ್ತು ನನ್ನನ್ನು ನರಳುವಂತೆ ಮಾಡುತ್ತಿರುವುದರಿಂದ, ನನ್ನ ಮುತ್ತಿನಂತಹ ಬಿಳಿ ಹಲ್ಲುಗಳು, ಮೈಬಣ್ಣ ಮತ್ತು ನನ್ನ ಎದೆಯ ಸೌಂದರ್ಯವನ್ನು ಕಳೆದುಕೊಂಡಿದ್ದೇನೆ. ನಾನು ಬದುಕಿರಲು ಮೂಲ ಕಾರಣನಾದ ಎಂಪೆರುಮಾನನು ಇಲ್ಲಿಗೆ ಬರಬೇಕೆಂದು ನೀವು ಕರೆದರೆ, ನನ್ನ ತಲೆಯನ್ನು ಶಾಶ್ವತವಾಗಿ ನಿಮ್ಮ ಪಾದಗಳ ಮೇಲೆ ಇಡುವುದನ್ನು ಬಿಟ್ಟು ಬೇರೆ ಯಾವುದೇ ಪ್ರತ್ಯುಪಕಾರದ ರೀತಿ ನನಗೆ ತಿಳಿದಿಲ್ಲ.
ಏಳನೇ ಪಾಸುರಂ. ಸುಂದರವಾದ ಆಯುಧಗಳನ್ನು ಹೊಂದಿರುವ ಎಂಪೆರುಮಾನನನ್ನು ನೀನು ಕರೆಯುತ್ತೀಯಾ ಎಂದು ಅವಳು ಕೋಗಿಲೆಯನ್ನು ಕೇಳುತ್ತಾಳೆ.
ಪೊಂಗಿಯ ಪಾರ್ಕಡಲ್ ಪಳ್ಳಿಕೊಳ್ವಾನೈ ಪುಣರ್ವದೋರ್ ಆಶೈಯಿನಾಲ್
ಎನ್ ಕೊಂಗೈ ಕಿಳರ್ನ್ದು ಕುಮೈತ್ತು ಕ್ಕುದುಗಲಿತ್ತು ಆವಿಯೈ ಆಕುಲಮ್ ಶೆಯ್ಯುಮ್
ಅಂಗುಯಿಲೇ! ಉನಕ್ಕೆನ್ನ ಮರೈನ್ದುರೈವು? ಆಳಿಯುಮ್ ಶಂಗುಂ ಒಣ್ತಂಡುಮ್
ತಂಗಿಯ ಕೈಯವನೈ ವರ ಕ್ಕೂವಿಲ್ ನೀ ಶಾಲ ಧರುಮಮ್ ಪೆರುಧಿ
ಓ ಸುಂದರ ಕೋಗಿಲೆ! ಪ್ರಕ್ಷುಬ್ಧ ಅಲೆಗಳೊಂದಿಗಿನ ತಿರುಪ್ಪಾರ್ಕಡಲ್ (ಕ್ಷೀರಸಾಗರ) ಮೇಲೆ ಮಲಗಿರುವ ಎಂಪೆರುಮಾನ್ನೊಂದಿಗೆ ಸೇರಲು ಅಪೇಕ್ಷಿಸುತ್ತಿರುವ ನನ್ನ ದೃಢವಾದ ಎದೆಗಳು ನನ್ನ ಜೀವನವನ್ನು ಸಂತೋಷದಿಂದ ಕರಗಿಸುತ್ತಿವೆ ಮತ್ತು ನನ್ನನ್ನು ದಿಗ್ಭ್ರಮೆಗೊಳಿಸುತ್ತಿವೆ. ನೀನು ತಲೆಮರೆಸಿಕೊಂಡರೆ ಅದು ನಿನಗೆ ಯಾವ ಉದ್ದೇಶವನ್ನು ಪೂರೈಸುತ್ತದೆ? ದಿವ್ಯವಾದ ಚಕ್ರ, ದಿವ್ಯವಾದ ಶಂಖ ಮತ್ತು ದಿವ್ಯವಾದ ಗದೆಗಳನ್ನು ದಿವ್ಯ ಹಸ್ತಗಳಲ್ಲಿ ಹೊಂದಿರುವ ಆ ಎಂಪೆರುಮಾನನು ಇಲ್ಲಿಗೆ ಬಂದರೆ, ನೀನು ಬಹಳ ಉದಾತ್ತ ಕಾರ್ಯವನ್ನು ಮಾಡಿದಂತಾಗುತ್ತದೆ.
ಎಂಟನೆಯ ಪಾಸುರಂ. ತಿರುಮಾಲ್ (ಶ್ರೀ ಮಹಾಲಕ್ಷ್ಮಿಯ ಪತಿ) ಆಗಿರುವ ಎಂಪೆರುಮಾನನು ಇಲ್ಲಿಗೆ ಬರುವಂತೆ ಕರೆ ಮಾಡಲು ಕೋಗಿಲೆಗೆ ಹೇಳುತ್ತಾಳೆ.
ಶಾರ್ನ್ಗಮ್ ವಳೈಯ ವಲಿಕ್ಕುಂ ತಡಕ್ಕೈ ಚತುರನ್ ಪೊರುತ್ತಮ್ ಉಡೈಯನ್
ನಾಂಗಳ್ ಎಮ್ಮಿಲ್ ಇರುಂದೊಟ್ಟಿಯ ಕಚ್ಚಂಗಮ್ ನಾನುಂ ಅವನುಂ ಅರಿದುಮ್
ತೇನ್ ಕನಿ ಮಾಂಬೊಳಿಲ್ ಶೆನ್ದಳಿರ್ ಕೋದುಮ್ ಶಿರು ಕುಯಿಲೇ!
ತಿರುಮಾಲೈ ಆಂಗು ವಿರೈನ್ದು ಒಲ್ಲೈ ಕೂಗಿಟ್ರಿಯಾಗಿಲ್ ಅವನೈ ನಾನ್ ಶೈಯ್ವನ ಕಾಣೇ
ಮಾವಿನ ಹಣ್ಣುಗಳಿರುವ ಮಾವಿನ ತೋಪಿನಲ್ಲಿ ತನ್ನ ಕೊಕ್ಕಿನಿಂದ ನವಿರಾದ ಕೆಂಪು ಎಲೆಗಳನ್ನು ಚುಚ್ಚುತ್ತಿರುವ ಓ ಎಳೆಯ ಕೋಗಿಲೆ! ಶಾರ್ನ್ಗಮ್ ಬಿಲ್ಲನ್ನು ಸೆಳೆಯುವ ಶಕ್ತಿಯುಳ್ಳ ದೊಡ್ಡ ದಿವ್ಯ ಹಸ್ತಗಳನ್ನು ಹೊಂದಿರುವ ಅತ್ಯಂತ ಸಮರ್ಥ ಎಂಪೆರುಮಾನ್ ಪ್ರೇಮದ ವಿಷಯಗಳಲ್ಲಿಯೂ ಉತ್ತಮ ಪರಿಣತನಾಗಿದ್ದಾನೆ. ನಾವಿಬ್ಬರು ಸೇರಿ ಮಾಡಿಕೊಂಡಿದ್ದ ರಹಸ್ಯ ಪ್ರಮಾಣ ವಚನ ನಮಗೆ ಚೆನ್ನಾಗಿ ಗೊತ್ತು. ದೂರದಲ್ಲಿರುವ ಎಂಪೆರುಮಾನನನ್ನು ನೀನು ಕರೆಯದಿದ್ದರೆ, ನಾನು ಅವನನ್ನು ಹೇಗೆ ಹಿಂಸಿಸುತ್ತೇನೆ ಎಂದು ನೀನೇ ನೋಡುತ್ತೀಯೆ.
ಒಂಭತ್ತನೇ ಪಾಸುರಂ. ಅವಳು ಕೋಗಿಲೆಗೆ ಎಂಪೆರುಮಾನನನ್ನು ಕರೆಯಲು ಅಥವಾ ತನ್ನ ಬಳೆಗಳನ್ನು (ಅವನಿಂದ) ಮರಳಿ ಪಡೆಯಲು ಹೇಳುತ್ತಾಳೆ.
ಪೈಂಗಿಳಿ ವಣ್ಣನ್ ಶಿರೀದರನ್ ಎನ್ಬದೋರ್ ಪಾಶತ್ತಗಪ್ಪಟ್ಟಿರುಂದೇನ್
ಪೊಂಗು ಒಳಿ ವಂಡಿರೈಕ್ಕುಮ್ ಪೊಳಿಲ್ವಾಳ್ ಕುಯಿಲೇ ಕುರಿಕ್ಕೊಂಡು ಇದು ನೀ ಕೇಳ್
ಶಂಗೊಡು ಶಕ್ಕರತ್ತಾನ್ ವರ ಕ್ಕೂವುದಲ್ ಪೊನ್ ವಳೈ ಕೊಂಡು ತರುದಲ್
ಇಂಗು ಉಳ್ಳ ಕಾವಿನಿಲ್ ವಾಳ ಕ್ಕರುದಿಲ್ ಇರಂಡತ್ತು ಒನ್ರು ಏಲ್ ತಿಣ್ಣಮ್ ವೇಂಡುಮ್
ಕಾಂತಿಯುತ ಜೀರುಂಡೆಗಳು ಗುನುಗುವ ಉದ್ಯಾನದಲ್ಲಿ ಸಂತೋಷದಿಂದ ವಾಸಿಸುತ್ತಿರುವ ಓಹ್ ಕೋಗಿಲೆ! ನಾನು ಹೇಳುವುದನ್ನು ಗಮನವಿಟ್ಟು ಕೇಳು. ಹಸಿರು ಗಿಳಿಯ ಮೈಬಣ್ಣವನ್ನು ಹೊಂದಿರುವ ತಿರುಮಾಲ್ ನ ವಿಶಿಷ್ಟ ಜಾಲದಲ್ಲಿ ನಾನು ಸಿಕ್ಕಿಬಿದ್ದಿದ್ದೇನೆ. ನೀವು ಈ ಉದ್ಯಾನದಲ್ಲಿ ವಾಸಿಸಲು ಬಯಸಿದರೆ, ದಿವ್ಯವಾದ ಚಕ್ರ ಮತ್ತು ದೈವೀಕ ಶಂಖವನ್ನು ಹೊಂದಿರುವ ಎಂಪೆರುಮಾನನು ಇಲ್ಲಿಗೆ ಬರಬೇಕು ಅಥವಾ ನಾನು ಕಳೆದುಕೊಂಡ ಚಿನ್ನದ ಬಳೆಗಳನ್ನು ಮರಳಿ ಪಡೆಯಬೇಕು.
ಹತ್ತನೇ ಪಾಸುರಂ. ಎಂಪೆರುಮಾನ್ನನು ಆ ಸ್ಥಳಕ್ಕೆ ಬರದಿದ್ದರೆ ಕೋಗಿಲೆಗೆ ಶಿಕ್ಷೆ ಕೊಡುವುದಾಗಿ ಅವಳು ಬೆದರಿಕೆ ಹಾಕುತ್ತಾಳೆ.
ಅನ್ರು ಉಲಗಂ ಅಳಂದಾನೈ ಉಗಂದು ಅಡಿಮೈ ಕಣ್ ಅವನ್ ವಲಿ ಶೆಯ್ಯ
ತೆನ್ರಲುಮ್ ತಿಂಗಳುಂ ಊಡರುತ್ತು ಎನ್ನೈ ನಲಿಯುಮ್ ಮುರೈಮೈ ಅರಿಯೇನ್
ಎನ್ರುಮ್ ಇಕ್ಕಾವಿಲ್ ಇಂರುಂದಿರುಂದು ಎನ್ನೈ ತದರ್ತಾದೇ ನೀಯುಮ್ ಕುಯಿಲೇ
ಇನ್ರು ನಾರಾಯಣನೈ ವರ ಕೂವಾಯೇಲ್ ಇಂಗುತ್ತು ನಿನ್ರುಮ್ ತುರಪ್ಪನ್
ಮಹಾಬಲಿಯು ಅತ್ಯಂತ ಶಕ್ತಿಶಾಲಿಯಾಗಿದ್ದ ಕಾಲದಲ್ಲಿ, ಲೋಕಗಳನ್ನು ಕರುಣೆಯಿಂದ ಅಳೆಯುವ ಎಂಪೆರುಮಾನನಿಗೆ ಸೇವೆಯನ್ನು ಮಾಡಲು ನಾನು ಬಯಸಿದ್ದೆ. ಅವನು ಅದನ್ನು ನಿರಾಕರಿಸಿದ್ದರಿಂದ, ನಾನು ಅಸ್ವಸ್ಥಳಾಗಿದ್ದೆ. ಆಗ ಹಿತವಾದ ತಂಗಾಳಿ ಮತ್ತು ಹುಣ್ಣಿಮೆಯ ಚಂದ್ರನು ನನ್ನೊಳಗೆ ಪ್ರವೇಶಿಸಿ ನನ್ನನ್ನು ಹಿಂಸಿಸುವುದಕ್ಕೆ ಕಾರಣ ನನಗೆ ತಿಳಿದಿರಲಿಲ್ಲ. ಓ ಕೋಗಿಲೆ! ನನ್ನನ್ನು ಹಿಂಸಿಸದೆ ಈ ತೋಟದಲ್ಲಿ ಶಾಶ್ವತವಾಗಿ ಇರು. ಎಂಪೆರುಮಾನನನ್ನು ಇಲ್ಲಿಗೆ ಬರುವಂತೆ ಮಾಡಲು ನೀನು ಕರೆ ಮಾಡದಿದ್ದರೆ, ನಾನು ನಿನ್ನನ್ನು ಈ ಉದ್ಯಾನದಿಂದ ಓಡಿಸುತ್ತೇನೆ.
ಹನ್ನೊಂದನೇ ಪಾಸುರಂ. ಈ ಪದಿಗವನ್ನು ಯಾರು ಕಲಿಯುತ್ತಾರೋ ಅವರು ತಮ್ಮ ಸ್ವರೂಪಕ್ಕೆ (ಮೂಲ ಸ್ವಭಾವ) ಅನುಗುಣವಾಗಿ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಅವಳು ಕೊನೆಯಲ್ಲಿ ಹೇಳುತ್ತಾಳೆ.
ವಿಣ್ ಊರ ನೀಂಡಡಿ ತಾವಿಯ ಮೈಂದನೈ ವೇರ್ ಕಣ್ ಮಡನ್ದೈ ವಿರುಂಬಿ
ಕಣ್ಣುರ ಎನ್ ಕಡಲ್ ವಣ್ಣನೈ ಕ್ಕೂವು ಕರುಂಗುಯಿಲೇ ಎನ್ರ ಮಾಟ್ರಮ್
ಪಣ್ಣುರು ನಾನ್ಮರೈಯೋರ್ ಪುದುವೈ ಮನ್ನನ್ ಭಟ್ಟರ್ ಪಿರಾನ್ ಕೋದೈ ಶೊನ್ನ
ನಣ್ಣುರು ವಾಶಕ ಮಾಲೈ ವಲ್ಲಾರ್ ನಮೋ ನಾರಾಯಣಾ ಎನ್ಬಾರೇ
ಸಂಗೀತದಿಂದ ನಾಲ್ಕು ವೇದಗಳನ್ನು ಪಠಿಸಬಲ್ಲ ಶ್ರೀವೈಷ್ಣವರು ನೆಲೆಸಿರುವ ಶ್ರೀವಿಲ್ಲಿಪುತ್ತೂರಿನ ನಾಯಕರಾದ ಪೆರಿಯಾಳ್ವಾರ್ ಅವರ ಪುತ್ರಿ ಆಂಡಾಳ್, ಈಟಿಯಂತಹ ಕಣ್ಣುಗಳು ಮತ್ತು ಸೌಮ್ಯ ಗುಣಗಳನ್ನು ಹೊಂದಿದ್ದಾರೆ. ತನ್ನ ದಿವ್ಯ ಪಾದಗಳನ್ನು ವ್ಯೋಮಕ್ಕೆ ಚಾಚುವ, ಎಲ್ಲಾ ಸ್ಥಳಗಳನ್ನು ವ್ಯಾಪಿಸುವಂತೆ ಬೆಳೆಯುವ ಹಿರಿಮೆಯನ್ನು ಹೊಂದಿರುವ ಎಂಪೆರುಮಾನ್ನನ್ನು ಅವಳು ಬಯಸಿದ್ದಳು. “ಓ ಕಪ್ಪು ಕೋಗಿಲೆ! ನಾನು ಆ ಎಂಪೆರುಮಾನನನ್ನು ನೋಡುವ ಹಾಗೆ ಕರೆ” ಎಂದು ಅವಳು ಕೋಗಿಲೆಗೆ ಹೇಳಿ ಈ ಪಾಸುರಗಳನ್ನು ರಚಿಸಿದಳು.
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ: https://divyaprabandham.koyil.org/index.php/2020/05/nachchiyar-thirumozhi-5-simple/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org