ಉಪದೇಶ ರತ್ನಮಾಲೈ – ಸರಳ ವಿವರಣೆ – ೫೦ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೫೦

ಈಡು ಭಾಷ್ಯದ ಶ್ರೇಷ್ಠತೆಯನ್ನು ಹೀಗೆ ವಿವರಿಸಿದ ನಂತರ, ಮಾಮುನಿಗಳು, ತಿರುವಾಯ್ಮೊಳಿಯ ನಿಜವಾದ ಅರ್ಥವಾದ ಶ್ರೀವಚನ ಭೂಷಣದ  ಹಿರಿಮೆಯನ್ನು ನಿರೂಪಿಸಲು ನಿರ್ಧರಿಸಿದ್ದು,ಆರಂಭದಲ್ಲಿ ನಂಪಿಳ್ಳೈ ಅವರು ಲೋಕಾಚಾರಿಯಾರ್ ಎಂಬ ವಿಶಿಷ್ಟ ದೈವಿಕ ಹೆಸರನ್ನು ಹೇಗೆ ಪಡೆದರು ಎಂಬುದನ್ನು ವಿವರಿಸುತ್ತಾರೆ. ನಂಪಿಳ್ಳೈ ಲೋಕಾಅಚಾರಿಯರ್‌ಗೆ ಲೋಕಾಚಾರ್ಯರ್ ಎಂಬ ದೈವಿಕ ಹೆಸರು ಇದ್ದುದರಿಂದ ಇದು ನಂಪಿಳ್ಳೈಯ ವಿಶಿಷ್ಟ ಹೆಸರಾಗಿದ್ದು, ಅವರು ಆ ನಿರೂಪಣೆಯನ್ನು ವಿವರಿಸುತ್ತಾರೆ. ಈ ಪಾಸುರದಲ್ಲಿ, ಅವರು ಹೆಚ್ಚಿನ ಗೌರವವನ್ನು ಹೊಂದಿದ್ದ ಕೆಲವು ವ್ಯಕ್ತಿಗಳ ಹೆಸರುಗಳಿಗೆ ನಮ್ ಎಂಬ ಪೂರ್ವಪ್ರತ್ಯಯವಿರುವ ವ್ಯಕ್ತಿಗಳನ್ನು ಆಚರಿಸಲು ತಮ್ಮ ಮನಸ್ಸಿಗೆ ಹೇಳುತ್ತಾರೆ.

ನಂಪೆರುಮಾಳ್ ನಮ್ಮಾೞ್ವಾರ್ ನಂಜೀಯರ್ ನಂಪಿಳ್ಳೈ

ಎನ್ಬಾರ್ ಅವರವರ್ ತಂ ಎಱ್ಱತ್ತಾಲ್ -ಅನ್ಬುಡೈಯೋರ್

ಸಾತ್ತು ತಿರು ನಾಮಂಗಳ್ ತಾನ್ ಎನ್ರು ನನ್ನೆಂಜೇ

ಏತ್ತದನೈಚ್ ಚೊಲ್ಲು ನೀ ಇನ್ಱು

ಓ ಮನಸೇ! ನಂಪೆರುಮಾಳ್, ನಮ್ಮಾೞ್ವಾರ್, ನಂಜೀಯರ್ ಮತ್ತು ನಂಪಿಳ್ಳೈ ಅವರನ್ನು ವಿಶೇಷ ಗೌರವದಿಂದ ಉಲ್ಲೇಖಿಸಲಾಗಿದೆ. ಇದಕ್ಕೆ ಕಾರಣ ಅವರು ಹೊಂದಿದ್ದ ವೈಶಿಷ್ಟ್ಯತೆ. ನೀನು ಈ ದೈವಿಕ ಹೆಸರುಗಳನ್ನು ಪಠಿಸಿ ಆಚರಿಸುತ್ತಿರು.ಅಳಗಿಯ ಮಣವಾಳಪೆರುಮಾಳ್ (ಶ್ರೀರಂಗನಾಥ, ಶ್ರೀರಂಗಂನಲ್ಲಿರುವ ಉತ್ಸವ ವಿಗ್ರಹ) ಶ್ರೀರಂಗವನ್ನು ಬಹಳ ಸಮಯ ಬಿಟ್ಟು ಹಿಂದಿರುಗಿದ ನಂತರ, ಈ ದೈವಿಕ ವಿಗ್ರಹಕ್ಕಾಗಿ ತಿರುಮಂಜನಂ (ದೈವಿಕ ಸ್ನಾನ) ನಡೆಸಲಾಯಿತು.ನಂಪೆರುಮಾಳರ ಒದ್ದೆಯಾದ ಉಡುಪಿನಿಂದ ತಿರುಮಂಜನಂನ ದೈವಿಕ ನೀರನ್ನು ಸೇವಿಸಿದ ಮುದಿಯ ಶ್ರೀವೈಶ್ಣವ ಅಗಸ ಪ್ರೀತಿಯಿಂದ “ಅವನು ನಂಪೆರುಮಾಳ್” (ಅವನು ನಮ್ಮ ಪೆರುಮಾಳ್)ಎಂದನು; ಆದ್ದರಿಂದ ಶ್ರೀರಂಗನಾಥನಿಗೆ ನಂಪೆರುಮಾಳ್ ಎಂಬ  ಹೆಸರು ದೃಡವಾಗಿ ಸ್ಥಾಪನೆಯಾಯಿತು.ನಂಪೆರುಮಾಳ್ ಸ್ವತಃ ನಮ್ಮಾೞ್ವಾರ್ ಅನ್ನು ನಮ್ ಆೞ್ವಾರ್ ಮತ್ತು ನಮ್ ಶಠಕೋಪನ್ (ನಮ್ಮ ಆೞ್ವಾರ್ ಅಥವಾ ನಮ್ಮ ಶಠಕೋಪನ್) ಎಂದು ಉಲ್ಲೇಖಿಸಿದ್ದರಿಂದ, ನಮ್ಮಾೞ್ವಾರ್ ಎಂಬ ಹೆಸರು ಸ್ಥಾಪನೆಯಾಯಿತು. ತಿರುನಾರಾಯಣಪುರವನ್ನು ತ್ಯಜಿಸಿದ ನಂತರ ಮತ್ತು ಶ್ರೀರಂಗವನ್ನು ಸ್ವೀಕರಿಸಿದ ನಂತರ, ವೇದಾಂತಿ ಶ್ರೀರಂಗವನ್ನು ತಲುಪಿದಾಗ, ಭಟ್ಟರ್ ಅವರನ್ನು ಪ್ರೀತಿಯಿಂದ “ವಾರುಂ ನಮ್ ಜೀಯರ್” ಎಂದು ಸ್ವಾಗತಿಸಿದರು (ಸ್ವಾಗತ, ನಮ್ಮ ಜೀಯರ್!); ಆದ್ದರಿಂದ ಅವರನ್ನು ನಂಜೀಯರ್ ಎಂದು ಕರೆಯಲಾಯಿತು.ನಂಬೂರ್ ವರಧರ್ ಅವರು ಒನ್ಬಧಿನ್ ಆಯಿರಪ್ಪಡಿಯ ಹಸ್ತಪ್ರತಿ ನಕಲನ್ನು ಬಹಳ ಸುಂದರವಾಗಿ ನಂಜೀಯರ್ ಅವರು ಕರುಣೆಯಿಂದ ರಚಿಸಿದಾಗ, ಅವರನ್ನು ಪ್ರೀತಿಯಿಂದ ನಮ್ ಪಿಳ್ಳೈ(ನಮ್ಮ ಪ್ರೀತಿಯ ಮಗು) ಎಂದು ನಂಜೀಯರ್ ಕರೆದರು; ಹೀಗಾಗಿ ನಂಪಿಳ್ಳೈ ಎಂಬ ಹೆಸರು ಅವರಿಗೆ ಸ್ಥಾಪನೆಯಾಯಿತು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/07/upadhesa-raththina-malai-50-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment