ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
ವಿಲಾಂಶೋಲೈ ಪಿಳ್ಳೈ ಅವರು ಶ್ರೀ ಭಗವದ್ಗೀತೆಯ ೭. ೧೮ ರಲ್ಲಿಯ ದೈವೀಕ ಪದಗಳಾದ ‘ಜ್ಞಾನೀ ತ್ವಾತ್ತ್ಮೈವ ಮೇ ಮತಂ’ (ಅಂತಹ ಭಕ್ತನೇ ನನ್ನ ಆತ್ಮ ಎಂಬುದು ನನ್ನ ಅಭಿಪ್ರಾಯ) ಎಂದು ನಿರ್ದಿಷ್ಟಪಡಿಸಿದಂತೆ ಇಡೀ ಪ್ರಪಂಚದ ಏಕೈಕ ರಕ್ಷಕ ಎಂದು ಪರಿಗಣಿಸಲ್ಪಟ್ಟ ಶ್ರೀರಂಗನಾಥರ ಪೋಷಕರಾದ ಪಿಳ್ಳೈ ಲೋಕಾಚಾರ್ಯರ ಬಳಿ ಆಶ್ರಯ ಪಡೆದಿದ್ದರು. ಲೋಕಾಚಾರ್ಯರು ಅಂತಿಮ ಪ್ರಮಾಣ (ಗ್ರಂಥಗಳು), ಪ್ರಮೇಯ (ಗುರಿ) ಮತ್ತು ಪ್ರಾಮಾತೃ (ಆಚಾರ್ಯರು) ಶ್ರೇಷ್ಠತೆಯನ್ನು ಕರುಣೆಯಿಂದ ಸರಿಯಾದ ರೀತಿಯಲ್ಲಿ ಬಹಿರಂಗಪಡಿಸಲು, ಹಸ್ತಿಗಿರಿ ಅರುಳಾಳರ (ದೇವರಾಜ ಪೆರುಮಾಳ್) ಆದೇಶಗಳ ಮೂಲಕ ದಾಖಲಿಸಲಾದ ಶ್ರೀವಚನ ಭೂಷಣಮ್ ಸೇರಿದಂತೆ ಎಲ್ಲಾ ರಹಸ್ಯ ಗ್ರಂಥಗಳನ್ನು ಅನುಗ್ರಹಿಸಿದವರು.
ಅವತಾರ ವಿಶೇಷ (ವಿಶಿಷ್ಟ ಅವತಾರ) ಆಗಿರುವ ಪಿಳ್ಳೈ ಲೋಕಾಚಾರ್ಯರ ಕೃಪೆಯಿಂದ ವಿಲಾಂಶೋಲೈಪಿಳ್ಳೈಯವರು ಯಾವುದೇ ಅನುಮಾನ ಮತ್ತು ದೋಷಗಳಿಲ್ಲದೆ ಅವರಿಂದ ಸರಿಯಾಗಿ ಅರ್ಥಗಳನ್ನು ಕಲಿತು ತೃಪ್ತರಾಗಿದ್ದರು.
೧) ಸಂಪೂರ್ಣ ತಿರುವಾಯ್ಮೊಳಿ: ತಿರುವಾಯ್ಮೊಳಿ ೯.೪.೯ ರಲ್ಲಿ ಹೇಳಿದಂತೆ “ತೊಂಡರ್ಕು ಅಮುದುಣ್ಣಾ ಶೊಲ್ ಮಾಲೈಗಳ್ ಶೊನ್ನೇನ್” (ಭಕ್ತರು ಅಮೃತವನ್ನು ಆಸ್ವಾದಿಸಲು ನಾನು ಈ ಪದಗಳ ಮಾಲೆಯನ್ನು ಹೇಳಿದ್ದೇನೆ).
೨) ಆಚಾರ್ಯ ಹೃದಯಂ ೪೩ ರಲ್ಲಿ “ಇರುಂದಮಿಳ್ ನುರ್ಪುಲವರ್ ಪನುವಲ್ಗಳ್” (ತಿರುವಾಯ್ಮೊಳಿಯ ಪರಿಣಿತರು ಎನ್ನಲ್ಪಡುವ ತಿರುಮಂಗೈ ಆಳ್ವಾರ್ ಅವರ ಕವನಗಳು) ತಿರುಮಂಗೈ ಆಳ್ವಾರರ ಪ್ರಬಂಧಗಳ ಪೂರಕ ಮತ್ತು ಉಪ-ಅನುಷಂಗಿಕ ವಿಷಯಗಳು ಕ್ರಮವಾಗಿ ತಿರುಮಂಗೈ ಆಳ್ವಾರರ ಕವನಗಳು ಮತ್ತು ಇತರ ಎಂಟು ಆಳ್ವಾರರ ಪ್ರಬಂಧಗಳು.
೩) ಆ ಪ್ರಬಂಧಗಳಿಗೆ ತಿರುಕ್ಕುರುಗೈ ಪಿರಾನ್ ಪಿಳ್ಳಾನ್ ಮತ್ತು ಇತರರು ನೀಡಿದ ವ್ಯಾಖ್ಯಾನಗಳು,
ಮತ್ತು
೪) ಸಾರ, ಪದಗಳ ರುಚಿ, ಅರ್ಥಗಳ ರುಚಿ, ಮನಸ್ಥಿತಿಯ ರುಚಿ ಮತ್ತು ಆಂತರಿಕ ಅರ್ಥಗಳನ್ನು ನೇರವಾಗಿ ಬಹಿರಂಗಪಡಿಸುವ ವಿಶೇಷ ಮತ್ತು ನಿಗೂಢ ರಹಸ್ಯಗಳು.
ಪಿಳ್ಳೈಉರಂಗಾವಿಲ್ಲಿ ದಾಸರ್ ಅವರು ಉಡೈಯವರಿಗೆ ನಿಕಟ/ವಿಶೇಷ ಸೇವಕರಾಗಿದ್ದಂತೆಯೇ, ಏರು ತಿರುವುಡೈಯಾನ್ ದಾಸರ್ ಅವರು ನಂಪಿಳ್ಳೈಯವರಿಗೆ ಮತ್ತು ಪಿಳ್ಳೈ ವಾನಮಾಮಲೈ ದಾಸರ್ ಅವರು ನಡುವಿಲ್ ತಿರುವೀಧಿ ಪಿಳ್ಳೈ ಭಟ್ಟರಿಗೆ ಇದ್ದಂತೆಯೇ, ವಿಲಾಂಶೋಲೈ ಪಿಳ್ಳೈಯವರು ಪಿಳ್ಳೈ ಲೋಕಾಚಾರ್ಯರ ಆತ್ಮ, ಜೀವನ, ದೃಷ್ಟಿ, ಭುಜ, ಆಭರಣ, ದೈವೀಕ ಪಾದಗಳು, ದೈವೀಕ ಪಾದಗಳ ಮೇಲಿನ ಗೆರೆಗಳು, ದೈವೀಕ ಪಾದಗಳ ನೆರಳು, ದೈವೀಕ ಪಾದರಕ್ಷೆಗಳು ಮತ್ತು ದೈವಿಕ ಪಾದಗಳಿಗೆ ಹಾಸಿಗೆಯಾಗಿ ಕರುಣೆಯಿಂದ ಉಳಿದಿದ್ದಾರೆ.
ಕೆಳಜಾರುವ ಅವಕಾಶವಿಲ್ಲದ ಉನ್ನತ ಜನ್ಮವನ್ನು ಹೊಂದಿದ್ದರಿಂದ ಅವರು ಸ್ವಾಭಾವಿಕವಾದ ದಾಸ್ಯಭಾವವನ್ನು ಹೊಂದಿದ್ದರು. ಅವರು ಎಲ್ಲಾ ಶಾಸ್ತ್ರಗಳ ಅಂತ್ಯವನ್ನು ಕಂಡಿರುವ ತಿರುವಾಯ್ಮೊಳಿ ಪಿಳ್ಳೈಯನ್ನು ಹೊಂದಲು ಮಹಾನ್ ಸರ್ವಜ್ಞ (ಬಲ್ಲಿದ) ಆಗಿದ್ದರು. ಆರ್ಥಿ ಪ್ರಬಂಧಂ ೨೨ ರಲ್ಲಿ ಹೇಳಿರುವಂತೆ “ತೀದಟ್ರಾಜ್ಞಾನ ತಿರುವಾಯ್ಮೊಳಿ ಪಿಳ್ಳೈ” (ದೋಷರಹಿತ ಜ್ಞಾನವನ್ನು ಹೊಂದಿರುವ ತಿರುವಾಯ್ಮೊಳಿ ಪಿಳ್ಳೈ), ಅವರ ಬಳಿಗೆ ಹೋಗಿ ಅಂತಿಮ ಅರ್ಥಗಳನ್ನು ಕಲಿಯಲು ಪೂಜ್ಯನೀಯರಾಗಿದ್ದರು.
ಅವರ ತನಿಯನ್ ನಲ್ಲಿ ಉಲ್ಲೇಖಿಸಿರುವಂತೆ “ವಾಳಿ ನಲಂ ತಿಗಳ್ ನಾರಣ ತಾದನ್ ಅರುಳ್ ” ಎಂದು
ಆಚಾರ್ಯ ಹೃದಯಂ ೮೫ ರಲ್ಲಿ ಉಲ್ಲೇಖಿಸಲಾದ ಘಟನೆಗಳು ಮತ್ತು ಶುದ್ಧ ನಡವಳಿಕೆಯನ್ನು ತಿಳಿದಿರುವ ಹಿರಿಯರಿಂದ ಅವರು ಯಾವಾಗಲೂ ವೈಭವೀಕರಿಸಲ್ಪಟ್ಟರು. “ಯಾಗ ಅನುಯಾಗ ಉತ್ತರ ವೀದಿಗಳಿಲ್ ಕಾಯ ಅಣ್ಣ ಸ್ಥಲ ಶುಧ್ದಿ ಪಣ್ಣಿನ” (ಎಂಪೆರುಮಾನಾರರು, ತಿರುವಾರಾಧನಕ್ಕೆ ಮುಂಚೆ ಪಿಳ್ಳೈಉರಾಂಗವಿಲ್ಲಿ ದಾಸರನ್ನು ಮುಟ್ಟಿ, ತಮ್ಮ ದಿವ್ಯ ರೂಪವನ್ನು ಶುಧ್ದೀಕರಿಸಿದರು; ನಂಪಿಳ್ಳೈಯವರು, ಪ್ರಸಾದವನ್ನು ಸ್ವೀಕರಿಸುವ ಮುಂಚೆ ಪಿಳ್ಳೈ ಏರು ತಿರುವುಡೈಯಾನ್ ದಾಸರು ಅದನ್ನು ಮುಟ್ಟುವಂತೆ ಮಾಡಿದರು; ತಮ್ಮ ಹೊಸ ನಿವಾಸವನ್ನು ಶುಧ್ದೀಕರಿಸುವ ಧರ್ಮಾಚರಣೆಯಲ್ಲಿ, ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರು, ಪಿಳ್ಳೈ ವಾನಮಾಮಲೈ ದಾಸರನ್ನು ನಿವಾಸದ ಪ್ರದಕ್ಷಿಣೆ ಹಾಕಿಸಿದರು).
ಅವರ ಆಚಾರ್ಯರಾದ ಪಿಳ್ಳೈ ಲೋಕಾಚಾರ್ಯರಿಂದ ಅವರು ತಮ್ಮ ಕೊನೆಯ ಉಸಿರಿನವರೆಗೂ ತಿರುವನಂತಪುರದಲ್ಲಿ ವಾಸಿಸುವಂತೆ ಕರುಣೆಯಿಂದ ಆದೇಶಿಸಲ್ಪಟ್ಟರು. ಆಚಾರ್ಯರ ಅಂತ್ಯ ಕಾಲದಲ್ಲಿ; ಆ ಕರುಣಾಮಯಿಯ ಆದೇಶದ ಆಧಾರದ ಮೇಲೆ, ಅವರು ಅಲ್ಲಿಗೆ ಹೋದರು ಮತ್ತು ತಿರುವಾಯ್ಮೊಳಿ 10.2.8 “ನಡಮಿನೋ ನಮರ್ಗಳ್ ಉಳ್ಳೀರ್” (ಓ ನಮ್ಮ ಅನುಯಾಯಿಗಳೇ! ತಿರುವನಂತಪುರಕ್ಕೆ ಹೋಗಿ) ನಲ್ಲಿನ ನಮ್ಮಾಳ್ವಾರ್ ಅವರ ಆದೇಶಗಳನ್ನು ಅನುಸರಿಸುವವರಲ್ಲಿ ಆಚಾರ್ಯರನ್ನು ಅಗ್ರಗಣ್ಯರು ಎಂದು ಭಾವಿಸಿ ವಿಶಿಷ್ಟ ರೀತಿಯಲ್ಲಿ ಅಲ್ಲಿಯೇ ಉಳಿದರು.
ಅವರು ತಿರುವಾಯ್ಮೊಳಿ 10.2.8 ರಲ್ಲಿ “ಪದಮುಡೈ ಅರವಿಲ್ ಪಳ್ಳಿ ಪಯಿನ್ರಾವನ್” (ಹೆಡೆಯೆತ್ತಿರುವ ಆದಿಶೇಷನ ಮೇಲೆ ಒರಗಿರುವವರು) ಎಂದು ಹೇಳಲಾಗಿರುವ ಎಂಪೆರುಮಾನನ ಪಾದಗಳಿಗೆ ಶರಣಾದರು, ಮತ್ತು, ಮುಖ್ಯ ಪೂಜಾಪೀಠದ ಮೂರು ಪ್ರವೇಶದ್ವಾರಗಳ ಮೂಲಕ ಎಂಪೆರುಮಾನ್ ಅವರ ದಿವ್ಯವಾದ ಮುಖ, ದೈವೀಕ ನಾಭಿ ಮತ್ತು ದೈವೀಕ ಪಾದಗಳನ್ನು ಅನುಕ್ರಮವಾಗಿ ಆನಂದಿಸಿದರು, ನಂತರ ಅವರು ದಿವ್ಯದೇಶದ ಸುತ್ತಮುತ್ತಲಿನ ಉದ್ಯಾನವನದೊಳಗಿನ ವಿಶೇಷ/ಏಕಾಂತ ಸ್ಥಳಕ್ಕೆ ಹೋದರು.
“ಗುರು ಪಾದಾಂಬುಜಂ ಧ್ಯಾಯೇತ್” (ಗುರುವಿನ ಪಾದಕಮಲಗಳನ್ನು ನಿರಂತರವಾಗಿ ಧ್ಯಾನಿಸಬೇಕು), “ವಿಗ್ರಹಾಲೋಕನಪರ:” (ಗುರುವಿನ ರೂಪವನ್ನು ನೋಡಬೇಕು) ಎಂದು ಹೇಳಿರುವಂತೆ, ಮತ್ತು ಅವರು ಪಿಳ್ಳೈ ಲೋಕಾಚಾರ್ಯರ ದಿವ್ಯ ರೂಪವನ್ನು ಧ್ಯಾನಿಸಿದರು:
ಶ್ರೀ ಲೋಕಾರ್ಯ ಮುಖಾರವಿಂದಂ ಅಖಿಲ ಶ್ರುತ್ಯರ್ಥಕೋಸಮ್ ಸತಾಂ।
ತಾಮ್ ಘೋಷ್ಠೀನ್ಚ ತದೇಕ ಲೀನಮನಸಾಸಂ ಚಿಂತಯಂತಂ ಸದಾ।।
(ವೇದದ ಎಲ್ಲಾ ಅರ್ಥಗಳೂ ಪಿಳ್ಳೈ ಲೋಕಾಚಾರ್ಯರ ಬಾಯಲ್ಲಿವೆ. ನಾನು ಯಾವಾಗಲೂ ಅವರ ಬಗ್ಗೆ ಮತ್ತು ಅವರ ಗೋಷ್ಠಿಯ ಬಗ್ಗೆ ಮಾತ್ರ ನನ್ನ ಮನಸ್ಸಿನಲ್ಲಿ ಯೋಚಿಸುತ್ತೇನೆ…)
ಆ ದಿವ್ಯ ರೂಪದಲ್ಲಿ, ಜೀರುಂಡೆಗಳಿಂದ ಸುತ್ತುವರಿದ ಕೆಂಪು ಕಮಲದ ಪಾದಗಳು, ಅತ್ಯುತ್ತಮ ರೇಷ್ಮೆ ವಸ್ತ್ರದಿಂದ ಅಲಂಕರಿಸಲ್ಪಟ್ಟ ಸೊಂಟ, ಪವಿತ್ರ ದಾರ ಮತ್ತು ಕಮಲದ-ಬೀಜದ ಹಾರಗಳಿಂದ ಕೂಡಿದ ದೈವೀಕ ಎದೆ, ಪೂರ್ವಾಚಾರ್ಯರ ಕರುಣಾಮಯ ಪದಗಳಿಂದ ಕೂಡಿದ ದೈವೀಕ ನಗು, ಕರುಣೆಯನ್ನು ಸುರಿಸುವ ಕಣ್ಣುಗಳು, ಸುಂದರವಾದ ಕುಡುಮಿ, ದೈವೀಕ ಅರ್ಧಚಂದ್ರಾಕೃತಿಯಂತಹ ಹಣೆ, ದಿವ್ಯ ಚಕ್ಷುಗಳು ಮತ್ತು ಕೆಂಪನೆಯ ಬಾಯಿ, ಏರುತ್ತಿರುವ ಪ್ರಭೆ ಹೊಂದಿರುವ ಚಿನ್ನದ ತಲೆ, ಪವಿತ್ರ ಜನಿವಾರ, ಚಿನ್ನದ ಭುಜಗಳು, ಮಂಗಳಕರವಾದ ದಿವ್ಯ ಎದೆ, ಮಣಿ ಹಾರಗಳು, ಸೊಂಟದ ವಸ್ತ್ರ, ದೈವೀಕ ಕಮಲದ ಪಾದಗಳು, ಪದ್ಮಾಸನದಲ್ಲಿ ಕುಳಿತುಕೊಳ್ಳುವ ಭಂಗಿ, ಹನ್ನೆರಡು ತಿರುಮಣ್ಗಳನ್ನು ಧರಿಸಿರುವ ಸೌಂದರ್ಯ, ಕೈಯಲ್ಲಿ ಸುಂದರವಾದ ಧ್ಯಾನಮುದ್ರೆ.. ಹೀಗೆ ಅವರು ಪಿಳ್ಳೈ ಲೋಕಾಚಾರ್ಯರ ದಿವ್ಯ ರೂಪವನ್ನು ಪಾದದಿಂದ ತಲೆಯವರೆಗೂ, ಮತ್ತೆ ತಲೆಯಿಂದ ಪಾದದವೆರಗೂ ಮನದಲ್ಲಿ ವಿಶದವಾಗಿ ಚಿತ್ರೀಕರಿಸಿ, ಆನಂದಿಸಿ, ಧ್ಯಾನಿಸಿದರು.
ಅವರು ಪಿಳ್ಳೈ ಲೋಕಾಚಾರ್ಯರ ಗೋಷ್ಠಿಯಲ್ಲಿರುವಂತಹ ಮಹಾನ್ ಜೀವಿಗಳ ಬಗ್ಗೆ ಧ್ಯಾನಿಸುತ್ತಿದ್ದರು, ಇದು ನಂಬಿಳ್ಳೈ ಅವರ ಗೋಷ್ಠಿಯ ಪ್ರತಿರೂಪವಾಗಿದೆ. “ವಾರ್ತೋಂಚ ವೃತ್ಯಾಪಿ ಯದೀಯ ಗೋಷ್ಟ್ಯಂ ಗೋಷ್ಟ್ಯಂತರಾಣಾಂ ಪ್ರಥಮಾಭವಂತಿ…” (ಅವರ ಪದಗಳನ್ನು ಬಳಸಿದ ಮಾತ್ರದಿಂದಲೇ ಇತರರು ಬೇರೆ ಗೋಷ್ಠಿಗಳಲ್ಲಿ ನಾಯಕರಾಗಬಹುದು. ಅಂತಹ ತಿರುಕ್ಕಲಿಕನ್ರಿ ದಾಸರ್ (ನಂಪಿಳ್ಳೈ) ಅನ್ನು ನಾನು ಬೇರೆ ಯಾವುದರ ಬಗ್ಗೆಯೂ ಯೋಚಿಸದೆ ಪೂಜಿಸುತ್ತೇನೆ). ಶ್ರೀ ರಾಮಾಯಣದ ಉತ್ತರ ಕಾಂಡದ ೪೦.೧೪ ರಲ್ಲಿ ಹನುಮಾನನು “ಭವೋ ನಾನ್ಯತ್ರ ಗಚ್ಛತಿ” (ನನ್ನ ಹೃದಯವು ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ) ಎಂದು ಹೇಳಿದಂತೆ.
ಈ ಪ್ರಕ್ರಿಯೆಯಲ್ಲಿ, ಜೇಡಗಳು ಅವರ ದೈವೀಕ ರೂಪದಲ್ಲಿ ಜಾಲವನ್ನು ಹುಟ್ಟುಹಾಕುತ್ತವೆ ಮತ್ತು ಅವರು ಅವರ ಮೇಲೆ ಹರಿದಾಡುವ ಮತ್ತು ಅನೇಕ ದಿನಗಳವರೆಗೆ ಕಚ್ಚುವ ಯಾವುದನ್ನೂ ಅರಿಯದ ರೀತಿ ಸಮಾಧಿಯಲ್ಲಿ ಉಳಿಯುತ್ತಾರೆ (ಸಂಪೂರ್ಣ ಪರವಶತೆ). ಶ್ರೀ ರಾಮಾಯಣದ ಸುಂದರ ಕಾಂಡ ೩೬.೪೨ ರಲ್ಲಿರುವಂತೆ “ನ ಏವ ದಂಸನ್” (ಅವರ ದಿವ್ಯ ರೂಪದ ಮೇಲೆ ನೊಣಗಳು ಮತ್ತು ಸೊಳ್ಳೆಗಳು ಇರುವುದನ್ನು ಅವರು ಅರಿಯುವುದಿಲ್ಲ). ಅವರು ಪಿಳ್ಳೈ ಲೋಕಾಚಾರ್ಯರ ದೈವೀಕ ಕೃತಿಗಳ ವಿಶೇಷ, ಅಂತಿಮ ಸಾರವನ್ನುಕುರಿತು ಧ್ಯಾನಿಸುತ್ತಿದ್ದರು. ಪಿಳ್ಳೈ ಲೋಕಾಚಾರ್ಯರು ಇವರ ಶ್ರೀ ವಚನ ಭೂಷಣ ಮತ್ತು ಇತರ ಕೃತಿಗಳ ತನಿಯನ್ “ಏರು ತಿರುವುಡೈಯಾನ್ ಎಂದೈ ಉಲಗಾರಿಯನ್ ಶೊಲ್ ತೇರು ತಿರುವುಡೈಯಾನ್ ಶೀರ್” ಎಂದು ವೈಭವೀಕರಿಸಲ್ಪಟ್ಟವರು. ಸಂಸಾರ ಮತ್ತು ಪರಮಪದದ ನಡುವೆ ಯಾವುದೇ ವ್ಯತ್ಯಾಸವಿಲ್ಲದ ರೀತಿಯಲ್ಲಿ ಅವರು ಆನಂದಿಸಿದರು. “ಪಾರುಲಗೈ ಪೊನ್ನುಲಗಾ ಪಾರ್ಕವುಮ್ ಪೆಟ್ರೋಮ್” (ಈ ಭೌತಿಕ ಜಗತ್ತನ್ನು ಆಧ್ಯಾತ್ಮಿಕ ಪ್ರಪಂಚವಾಗಿ ನೋಡಿದೆ) ಎಂದು ಸ್ವತಃ ಹೇಳಿದಂತೆ.
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ : https://divyaprabandham.koyil.org/index.php/2022/12/saptha-kadhai-introduction-1/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org