ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ
ಶ್ರೀಯಃ ಪತಿಯಾದ ಸರ್ವೇಶ್ವರನೇ ಎಲ್ಲಾದಿಕ್ಕೂ ಮೇಲಾದವನು, ಸಕಲ ಕಲ್ಯಾಣ ಗುಣಗಳನ್ನು ಹೊಂದಿರುವವನು, ದೈವಿಕ ರೂಪಗಳನ್ನು ಹೊಂದಿರುವವನು, ವೇದಗಳ ಮೂಲಕ ಸಂಪೂರ್ಣವಾಗಿ ಹೊರಪಡುವವನು, ಎಲ್ಲೆಲ್ಲಿಯೂ ವ್ಯಾಪಿಸುವವನು, ಎಲ್ಲರನ್ನೂ ನಿಯಂತ್ರಿಸುವವನು , ಎಲ್ಲದರಲ್ಲೂ( ಚಿತ್ ಅಚಿತ್ತುಗಳಲ್ಲಿ) ಅಂತರ್ಯಾಮಿಯಾಗಿದ್ದುಕೊಂಡು ಅವುಗಳನ್ನು ಆಳುವವನು.
ಈ ಪ್ರಬಂಧದಲ್ಲಿ ಆೞ್ವಾರ್ ಎಂಪೆರುಮಾನಿನ ಈ ಅಂಶಗಳನ್ನು ವಿವರಿಸುತ್ತಾ, ಸರ್ವೇಶ್ವರನು ತನಗೆ ದೈವಿಕ ಜ್ಞಾನ ಮತ್ತು ಭಕ್ತಿಯನ್ನು ಅನುಗ್ರಹಿಸಿರುವುದನ್ನು ನೆನೆದು ಆನಂದಮಯವಾಗುತ್ತಾರೆ.
ಈ ೧೦ ಪಾಸುರಗಳು ಇಡೀ ತಿರುವಾಯ್ಮೊೞಿಯ ಸಾರಾಂಶ
ಮೊದಲ ೩ ಪಾಸುರಗಳು ಈ ೧೦ ಪಾಸರರಗಳ ಸಾರಾಂಶ
೧ನೇ ಪಾಸುರಮ್ ಮೊದಲ ಮೂರು ಪಾಸುರಗಳ ಸಾರಾಂಶ
೧ನೇ ಪಾಸುರದ ಮೊದಲ ಸಾಲು ಪಾಸುರದ ಸಾರಾಂಶ ಎಂದು ಹಿರಿಯರು ತಿಳಿಸಿದ್ದಾರೆ.
೧.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನಿನ ಪ್ರಾಬಲ್ಯವನ್ನು ಹೊರಪಡಿಸುವ ,ಎಲ್ಲೆ ಇಲ್ಲದ ಅವನ ಕಲ್ಯಾಣ ಗುಣಗಳನ್ನು, ಬೇಷರತ್ತಾಗಿರುವ ಅವನ ಕರುಣೆ, ನಿತ್ಯಸೂರಿಗಳ ಮೇಲೆ ನಿಯಂತ್ರಣ, ಮತ್ತು ಮಂಗಳಕರವಾದ ರೂಪವನ್ನು ಹೊಂದಿರುವ ಎಂಪೆರುಮಾನನಿಗೆ ಮಾತ್ರವೇ ಸೇವೆಯನ್ನು ಮಾಡಲು ತನ್ನ ಮನವನ್ನು(ಹೃದಯವನ್ನು) ನಿರ್ದೇಶಿಸುತ್ತಾರೆ.
ಉಯರ್ವರ ಉಯರ್ನಲಮ್ ಉಡಯವನ್ ಎವನ್ ಅವನ್
ಮಯರ್ವರ ಮದಿನಲಮ್ ಅರುಳಿನನ್ ಎವನ್ ಅವನ್
ಅಯರ್ವರುಮ್ ಅಮರರ್ಗಳ್ ಅಧಿಪತಿ ಎವನ್ ಅವನ್
ತುಯರರು ಸುಡರಡಿ ತೊೞುದೆೞು ಎನ್ ಮನನೇ!
ಓ ನನ್ನ ಮನವೇ! ಎಂಪೆರುಮಾನಿನ ಪಾದಕಮಲಗಳಲ್ಲಿ ಶರಣಾಗಿ, ಉನ್ನತಿಯನ್ನು ಪಡೆದವನಾಗು!
ಅವಿವರಣೀಯ ಶ್ರೇಷ್ಠತೆಯನ್ನು ಎಂಪೆರುಮಾನ್ ಮಾತ್ರವೇ ಹೊಂದಿರುವವನು.ಅವನ ಶ್ರೇಷ್ಠತೆಯ ಮುಂದೆ ಬೇರೇನೂ ಶ್ರೇಷ್ಠವಾಗಿರಲಾರದು ಎಂದು ಅಧಿಕೃತ ಧರ್ಮಗ್ರಂಥಗಳು ಹೊರಪಡಿಸುತ್ತವೆ. ತನ್ನ ಬೇಷರತ್ತಾದ ಕರುಣೆಯಿಂದ ನನ್ನ ಅಜ್ಞಾನವನ್ನು ನಾಶಮಾಡಿ,ನನಗೆ ನಿಜವಾದ ಜ್ಞಾನ ಮತ್ತು ಭಕ್ತಿಯನ್ನು ಅನುಗ್ರಹಿಸಿದವನು ಆ ಎಂಪೆರುಮಾನನೇ!ಮರವು ಇತ್ಯಾದಿ ದೋಷಗಳಿಲ್ಲದಿರುವ ನಿತ್ಯಸೂರಿಗಳಿಗೆ ನಿರ್ವಿವಾದ ನಾಯಕನು ಎಂಪೆರುಮಾನನೇ! ”
೨.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ‘ಎವನ್’ ಎನ್ನುವ ಪದ ‘ಭಗವಾನ್/ ಭಗವಂತನನ್ನು ಕುರಿತು, ಎಲ್ಲಾ ಜೀವಿ ಗಳಿಂದಲೂ ಎಂಪೆರುಮಾನ್ ವಿಶಿಷ್ಟವಾದವನು ಎಂದು ವಿವರಿಸುತ್ತಾರೆ.
ಮನನಗ ಮಲಮ್ ಅರ ಮಲರ್ ಮಿಸೈ ಎೞುದರುಮ್
ಮನನುಣರ್ವು ಅಳವಿಲನ್ ಪೊರಿಯುಣರ್ವು ಅವೈಯಿಲನ್
ಇನನುಣರ್ ಮುೞುನಲಮ್ ಎದಿರ್ ನಿಗೞ್ ಕೞಿವಿನುಮ್
ಇನನಿಲನ್ ಎನನ್ ಉಯಿರ್ ಮಿಗು ನರೈ ಇವನೇ!
ನಿಷ್ಕಳಂಕವಾದ (ಕಾಮ, ಕ್ರೋಧ ಇತ್ಯಾದಿ ದೋಷಗಳಿಲ್ಲದಿರುವ) , ಚೆನ್ನಾಗಿ ಅರಳಿರುವ, ಆತ್ಮವನ್ನು ತಿಳಿದುಕೊಳ್ಳುವ ಮನಸ್ಸಿಗೆ ಕೂಡ ಭಗವಂತನು ಅಗಾಧವಾದವನು. ಅಚಿತ್ತನ್ನು ಗ್ರಹಿಸುವಂತಹ ಐದು ಇಂದ್ರಿಯಗಳಿಗೆ ಎಟುಕದಂತೆ ಅಗಾಧವಾಗಿರುವವನು ಎಂಪೆರುಮಾನ್! ಚಿತ್ ಅಚಿತ್ತರಿಂದ ವಿಶಿಷ್ಟವಾದವನು. ಭೂತ, ವರ್ತಮಾನ ಮತ್ತು ಭವಿಷ್ಯ ಕಾಲಗಳಲ್ಲಿ ಎಂಪೆರುಮಾನನಿಗೆ ಮೇಲೆ ಹಾಗು ಸಮವಾಗಿ ಯಾರೂ ಇಲ್ಲ. ಸಂಪೂರ್ಣ ಜ್ಞಾನಾನಂದಮಯನಾಗಿ ಗುರುತಿಸಲ್ಪಡುತ್ತದೆ. ಅವನೇ ನನ್ನ ಆಧಾರವಾಗಿರುವ ನಿರಂತರವಾದ ಆತ್ಮ! ಎಲ್ಲಾ ಪಾಸುರಗಳ ಅಂತ್ಯದಲ್ಲಿ “ ತುಯರರು ಸುಡರಡಿ ತೊೞುದೆೞು” ಎಂದು ಸೇರಿಸಿಕೊಳ್ಳಬೇಕು.
೩.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನ್ ಯಾವ ನಿರ್ದಿಷ್ಟ ವಸ್ತು ಅಥವಾ ಸ್ಥಳಕ್ಕೂ ಸೀಮಿತನಲ್ಲ ಎಂದು ಸ್ಥಾಪಿಸಲು, ಎಂಪೆರುಮಾನಿಗೆ ವಸ್ತುಲೋಕದೊಂದಿರುವ ಸಂಬಂಧವನ್ನು ವಿವರಿಸುತ್ತಾರೆ.
ಇಲನದು ಉಡಯನಿದು ಎನ ನಿನೈವು ಅರಿಯವನ್
ನಿಲನಿಡೈ ವಿಸುಂಬಿಡೈ ಉರುವಿನನ್ ಅರುವಿನನ್
ಪುಲನೊಡು ಪುಲನಲನ್ ಒೞಿವಿಲನ್ ಪರಂದ
ಅನ್ ನಲನುಡೈ ಒರುವನೈ ನಣುಗಿನಮ್ ನಾಮೇ!
ಭಗವಂತನನ್ನು ಕೆಲವು ವಸ್ತುಗಳಿಗೆ ಸೀಮಿತವಾಗಿ ಮಾಡಿ ಅವನನ್ನು ಅರಿಯಲು ಸಾಧ್ಯವಿಲ್ಲ. ಅವನು ವಸ್ತುಗಳಿಂದ ದೂರಸ್ತನಾಗಿರುವುದರಿಂದ, ಅವುಗಳಲ್ಲಿ ಮತ್ತು ಹತ್ತಿರ ಇರುವ ವಸ್ತುಗಳಲ್ಲಿ ಮಾತ್ರ ನೆಲೆಸಿದ್ದಾನೆ ಎಂದು ಆಗುವುದಿಲ್ಲ.
ಕೆಳಗೆ ಮತ್ತು ಮೇಲು ಲೋಕಗಳ ಚಿತ್ತು( ಇಂದ್ರಿಯಗಳಿಗೆ ಎಟುಕಲಾದದು), ಅಚ್ಚಿತ್ತುಗಳು( ಇಂದ್ರಿಯಗಳಿಗೆ ಕಾಣಿಸುವುದು) ಅವನಿಗೇ ಸ್ವಂತ ! ಆದುದರಿಂದ, ಚಿತ್ತು ಆಚ್ಚಿತ್ತುಗಳನ್ನು ತನ್ನ ಗುಣಲಕ್ಷಣಗಳಾಗಿ ಹೊಂದಿರುವ ಸರ್ವ ವ್ಯಾಪಿ ಎಂಪೆರುಮಾನ್!
ಕಲ್ಯಾಣಗುಣಗಳಿಂದ ತುಂಬಿರುವ ಅಂತಹ ಭಗವಾನಿನಲ್ಲಿ ನಾವು ಆಶ್ರಯ ಪಡೆಯಲು ಅದೃಷ್ಟವಂತರು!
೪.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಲ್ಲಾ ಅಸ್ತಿತ್ವಗಳ ಮೂಲ ಸ್ವಭಾವವನ್ನು ಭಗವಾನ್ ಸಾಮಾನಾಧಿಕರಣ್ಯದ ಮೂಲಕ ನಿಯಂತ್ರಿಸುತ್ತಾನೆ. (ಸಾಮಾನಾಧಿಕರಣ್ಯ ಎಂದರೆ ಒಂದಿಕ್ಕಿಂತ ಹೆಚ್ಚಾಗಿರುವ ಅಂಶ ಅಥವ ಗುಣಗಳಿಗೆ ಒಂದು ಸಾಮಾನ್ಯ ತಳ ಇರುವುದು ಹಾಗು ಎರಡು ಅಥವ ಹೆಚ್ಚು ಪದಗಳು ಒಂದು ಅಸ್ತಿತ್ವವನ್ನೇ ವಿವರಿಸುವುದು)
ನಾಮ್ ಅವನ್ ಇವನ್ ಉವನ್ ಅವಳ್ ಇವಳ್ ಉವಳ್ ಎವಳ್
ತಾಮ್ ಅವರ್ ಇವರ್ ಉವರ್ ಅದು ಇದು ಉದು ಎದು
ವೀಮ್ ಅವೈ ಇವೈ ಉವೈ ಅವೈ ನಲಮ್ ತೀಂಗು ಅವೈ
ಆಯ್ ಅವೈ ಆಮ್ ಅವೈ ಆಯ್ ನಿನ್ರ ಅವರೇ!
ಸಾಮೀಪ್ಯವನ್ನು ( ಹತ್ತಿರ, ದೂರ, ಮಧ್ಯ ಇತ್ಯಾದಿ) ಸೂಚಿಸುವ ವಿವಧ ಪದಗಳಿಂದ ಗುರುತಿಸಲ್ಪಡುವ ಎಲ್ಲಾ ಅಸ್ತಿತ್ವಗಳಲ್ಲೂ( ಚಿತ್, ಅಚಿತ್ ತಾತ್ಕಾಲಿಕ ವಸ್ತುಗಳು), ಒಳ್ಳೆಯದಲ್ಲಿ ,ಕೆಟ್ಟದಲ್ಲಿ , ಭೂತಕಾಲದಲ್ಲಿದ್ದಿದರಲ್ಲಿ, ಈಗ ಇರುವುದರಲ್ಲಿ, ಭವಿಷ್ಯದಲ್ಲಿ ಬರುವಂತಹದರಲ್ಲಿ ಕೂಡ ಆ ಭಗವಂತನೇ ಅಂತರ್ಯಾಮಿಯಾಗಿರುವವನು. ಸಂಕ್ಷಿಪ್ತವಾಗಿ ಹೇಳುವುದಾದರೆ, ಎಲ್ಲವೂ ಭಗವಂತನ ಕಡೆಗೇ ಸೂಚಿಸುತ್ತದೆ. ಬಿಟ್ಟುಹೋಗಿರುವ ಪದಗಳನ್ನು ಕೂಡ ಸೇರಿಸಿಕೊಳ್ಳಬೇಕು. ಹಾಗೆಂದರೆ, ಎಲ್ಲಾ ವಸ್ತುಗಳೂ ಎಲ್ಲಾ ಕಾಲಗಳಲ್ಲೂ ಭಗವಂತನ ನಿಯಂತ್ರಣ ಒಳಗೆ ಇರುತ್ತವೆ.
೫.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನ್ ಎಲ್ಲವನ್ನೂ ತನ್ನೊಳಗೆ ಉಳಿಸಿಕೊಂಡು ರಕ್ಷಿಸುವ ಕಲ್ಯಾಣ ಗುಣವನ್ನು ವೈಯಧಕರಣ್ಯದ ಮೂಲಕ ವಿವರಿಸುತ್ತಾರೆ.
‘ವೈಯಧಕರಣ್ಯ’ ಎಂದರೆ, ಎರಡು ಅಥವ ಹೆಚ್ಚು ಅಂಶಗಳು ವಿವಿಧ ತಳವನ್ನು ಹೊಂದಿರುವುದು ಹಾಗು ಎರಡು ಅಥವ ಹೆಚ್ಚು ಪದಗಳು ವಿವಿಧ ಅಸ್ತಿತ್ವಗಳನ್ನು ವಿವರಿಸುವುದು.
ಅವರವರ್ ತಮತಮದು ಅರಿವರಿ ವಗೈವಗೈ
ಅವರವರ್ ಇರೈಯವರ್ ಎನವಡಿ ಅಡೈವರ್ಗಳ್
ಅವರವರ್ ಇರೈಯವರ್ ಕುರೈವಿಲರ್ ಇರೈಯವರ್
ಅವರವರ್ ವಿಧಿವೞಿ ಅಡೆಯ ನಿನ್ರನರೇ!
ಅವರವರ ಜ್ಞಾನಕ್ಕೆ ತಕ್ಕಂತೆ ಅಧಿಕಾರಿಗಳು ( ಅರ್ಹತೆಯುಳ್ಳ ಜನರು) ತಮ್ಮ ತಮ್ಮ ಆಸೆಗಳನ್ನು ಬೇರೆ ದೇವತಾಂತರರು ಪೂರೈಸುತ್ತಾರೆ ಎಂದು ನಂಬಿ ಅವರಲ್ಲಿ ಆಶ್ರಯಗೊಳ್ಳುತ್ತಾರೆ. ಆದರೆ, ಆ ದೇವತೆಗಳಲ್ಲಿ ಕೂಡ ಅಂತರ್ಯಾಮಿಯಾಗಿದ್ದುಕೊಂಡು ಜನರ ಬೇಡಿಕೆಗಳನ್ನೆಲ್ಲಾ ಅವರವರ ಕರ್ಮದ ಪ್ರಕಾರ ಪೂರೈಸುತ್ತಾನೆ.
೬.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಲ್ಲಾ ಕ್ರಿಯೆಗಳು ಮತ್ತು ನಿಷ್ಕ್ರಿಯೆಗಳನ್ನು ಎಂಪೆರುಮಾನ್ ಸಾಮಾನಾಧಿಕರಣ್ಯದ ಮೂಲಕ ನಿಯಂತ್ರಿಸುತ್ತಾನೆ ಎಂದು ವಿವರಿಸುತ್ತಾರೆ.
ನಿನ್ರನರ್ ಇರುನ್ದನರ್ ಕಿಡಂದನರ್ ತಿರಿನ್ದನರ್
ನಿನ್ರಿಲರ್ ಇರುನ್ದಿಲರ್ ಕಿಡಂದಿಲರ್ ತಿರಿಂದಿಲರ್
ಎನ್ರುಮೋರಿಯಲ್ವಿನರ್ ಎನ ನಿನೈವು ಅರಿಯವರ್
ಎನ್ರುಮೊರು ಇಯಲ್ವೊಡು ನಿನ್ರ ಎಮ್ ತಿಡರೇ!
ಎಲ್ಲಾ ಅಸ್ತಿತ್ವಗಳ ಕ್ರಿಯೆ ( ನಿಲ್ಲುವುದು, ಕೂರುವುದು, ಮಲಗುವುದು, ನಡೆಯುವುದು ಇತ್ಯಾದಿ) ಮತ್ತು ನಿಷ್ಕ್ರಿಯೆಗಳನ್ನೂ( ನಿಲ್ಲದಿರುವುದು, ಕೂರುವುದಿರದು, ಮಲಗುವುದಿರದು, ನಡೆಯದೆ ಇರುವುದು ಇತ್ಯಾದಿ)ಆ ಎಂಪೆರುಮಾನನೇ ನಿಯಂತ್ರಿಸುತ್ತಾನೆ.
ಎಲ್ಲಾ ಅಸ್ತಿತ್ವಗಳಿಂದಲೂ ವಿಶಿಷ್ಟನಾದ, ಭಾವನಾತೀತನಾದ ಅ ಎಂಪೆರುಮಾನನೇ ನಮಗೆ ನಾಯಕ ಎಂದು ಪ್ರಬಲವಾದ ಮತ್ತು ಅಧಿಕೃತವಾದ ಶಾಸ್ತ್ರ ಸ್ಥಾಪಿಸಿದೆ.
೭.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಭಗವಂತನಿಗೆ ವಸ್ತು ಲೋಕಕ್ಕೂ ಇರುವ ಶರೀರಾತ್ಮ ಸಂಬಂಧದಲ್ಲಿ ಸಾಮಾನಾಧಿಕರಣ್ಯ ಬದ್ಧವಾಗಿದೆ ಎಂದು ವಿವರಿಸುತ್ತಾರೆ.
ತಿಡ ವಿಸುಂಬೆರಿ ವಳಿ ನೀರ್ ನಿಲಮ್ ಇವೈ ಮಿಸೈ
ಪಡರ್ ಪೊರುಳ್ ಮುೞುವದುಮಾಯ್ ಅವೈ ಅವೈ ದೊರುಮ್
ಉಡನ್ ಮಿಸೈ ಉಯಿರ್ ಎನ ಕರಂದೆಂಗುಮ್ ಪರಂದುಳನ್
ಸುಡರ್ ಮಿಗು ಸುರುದಿಯುಳ್ ಇವೈ ಉಂಡ ಸುರನೇ!
ಬಲವಾದ ಅಗ್ನಿ, ವಾಯು, ಜಲ, ಪೃಥ್ವಿ ಮತ್ತು ನಿರ್ಮಲವಾದ ಆಕಾಶವನ್ನು ಸೃಷ್ಟಿಸಿ ಈ ವಸ್ತು ಲೋಕವನ್ನು ಸೃಷ್ಟಿಸಿ, ಆತ್ಮ ಹೇಗೆ ಶರೀರವನ್ನು ಪ್ರವೇಶಿಸುತ್ತದೆಯೋ, ಹಾಗೆ ಎಲ್ಲಾ ಅಸ್ತಿತ್ವಗಳನ್ನೂ ಪ್ರವೇಶಿಸಿದ್ದಾನೆ ಆ ಸರ್ವೋಚ್ಚ ನಾಯಕನಾದ ಎಂಪೆರುಮಾನ್. ಅವನು ಎಲ್ಲಾ ಅಸ್ತಿತ್ವಗಳ ಒಳಗೂ ಹಾಗು ಹೊರಗೂ ವ್ಯಾಪಿಸಿದ್ದಾನೆ.ಪ್ರಕಾಶಮಾನವಾದ ವೇದಗಳ ಮೂಲ ಅಸ್ತಿತ್ವ ಅವನೇ! ಪ್ರಳಯ ಕಾಲದಲ್ಲಿ ಸಕಲವನ್ನೂ ತನ್ನೊಳಗೆ ಕೊಂಡು ‘ಸುರ’ ಎಂದು ವೈಭವೀಕರಿಸಲ್ಪಡುತ್ತಾನೆ ಎಂಪೆರುಮಾನ್!
೮.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್, ವ್ಯಷ್ಟಿ ಸೃಷ್ಟಿ ( ವೈವಿಧ್ಯಮಯ ರೂಪಗಳ ಸೃಷ್ಟಿ) ಮಾಡುವ ಬ್ರಹ್ಮನು ಮತ್ತು ವ್ಯಷ್ಟಿ ಸಂಹಾರ ( ವೈವಿಧ್ಯಮಯ ರೂಪಗಳ ಸರ್ವನಾಶ) ಮಾಡುವ ರುದ್ರನು ಎಂಪೆರುಮಾನಿನ ನಿಯಂತ್ರಣದಲ್ಲಿ ಇರುವವರು.
ಸುರರ್ ಅರಿವರು ನಿಲೈ ವಿಣ್ ಮುದಲ್ ಮುೞುವದುಮ್
ವರನ್ ಮುದಲಾಯ್ ಅವೈ ಮುೞುದುಂಡ ಪರಪರನ್
ಪುರಮ್ ಒರುಮೂನ್ರೆರಿಮೂನ್ರೆರಿತ್ತು ಅಮರರ್ಕ್ಕು ಅರಿವು ಇಯಂದು
ಅರನ್ ಅಯನ್ ಎನ ಉಲಗೞಿತ್ತು ಅಮೈತ್ತು ಉಳನೇ!
ಮೂಲ ಪ್ರಕೃತಿಗೆ ಕಾರಣನಾದ ಎಂಪೆರುಮಾನ್, ತನ್ನನ್ನು ಗ್ರಹಿಸಲಾದಂತಹ ಬ್ರಹ್ಮ ಮತ್ತು ರುದ್ರನಲ್ಲಿ ಅಂತರ್ಯಾಮಿಯಾಗಿದ್ದುಕೊಂಡು ರುದ್ರನ ರೂಪದಲ್ಲಿ ಮೂರೂ ಪಟ್ಟಣಗಳನನ್ನು ಸಂಹಾರ ಮಾಡಿ ಸಕಲ ವಸ್ತು ಲೋಹಗಳನ್ನು ಸರ್ವನಾಶ ಮಾಡಿ(ಪ್ರಳಯ), ಪುನಃ ವೈವಿಧ್ಯಮಯ ರೂಪಗಳನ್ನು ಸೃಷ್ಟಿಸಿ, ಬ್ರಹ್ಮ ಮತ್ತು ರುದ್ರನಿಗೆ ಜ್ಞಾನವನ್ನು ನೀಡಿದನು!
೯.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್, ಪ್ರಾಥಮಿಕ ಶೂನ್ಯವಾದಿಗಳಾದ( ವೇದವನ್ನು ತಿರಸ್ಕರಿಸುವವರು) ಮಾಧ್ಯಮಿಕ ಬೌದ್ಧ ತತ್ವಜ್ಞಾನಿಗಳನ್ನು ನಿರಾಕರಿಸುತ್ತಾರೆ.
ಉಳನ್ ಎನಿಲ್ ಉಳನ್ ಅವನ್ ಉರುವಮ್ ಇವ್ವುರುವುಗಳ್
ಉಳನ್ ಅಲನ್ ಎನಿಲ್ ಅವನ್ ಅರುವಮ್ ಇವ್ವರುವುಗಳ್
ಉಳನ್ ಎನ ಇಲನ್ ಎನ ಇವೈ ಗುಣಮ್ ಉಡಮೈಯಿಲ್
ಉಳನ್ ಇರು ತಗೈಮೈಯೊಡು ಒೞಿವಿಲನ್ ಪರಂದೇ!
( ಆೞ್ವಾರಿನ ವೈದಿಕ ತತ್ವಜ್ಞಾನದ ಪ್ರಕಾರ) ಅಸ್ತಿತ್ವದಲ್ಲಿರುವುದು ಮತ್ತು ಅಸ್ತಿತ್ವದಲ್ಲಿಲ್ಲದಿರುವುದು( ಅವೈದಿಕ ತತ್ವಜ್ಞಾನದ ಪ್ರಕಾರ) ಎರಡಕ್ಕೂ ಎಂಪೆರುಮಾನನೇ ತಳ. ಆದುದರಿಂದ, ಭಗವಾನ್ ಎಲ್ಲೆಲ್ಲೂ ಇರುವವನು, ಅವನು ಸರ್ವ ವ್ಯಾಪಿ , ನಿತ್ಯ, ನಿರಂತರವಾಗಿರುವವನು ಎನ್ನುವುದನ್ನು ತಿಳಿದುಕೊಳ್ಳಬೇಕು. ಅವನು ಈ ವಸ್ತು ಲೋಕದಲ್ಲಿ ಅವನ ಎರಡು ಅಂಶಗಳು ಅವನನ್ನು ತೋರಿಸಿ ಹಾಗು, ಮುಚ್ಚಿ ಇರುವಂತೆ ರೂಪದೊಂದಿಗೆ ಹಾಗು ರೂಪರಹಿತನಾಗಿರಬಲ್ಲನು.
೧೦.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಭಗವಾನಿನ ಸರ್ವ ವ್ಯಾಪಕ ಗುಣದ ಅನುಕೂಲತೆಯನ್ನು ವಿವರಿಸುತ್ತಾರೆ.
ಪರಂದ ತಣ್ ಪರವೈ ಉಳ್ ನೀರ್ ತೊರುಮ್ ಪರಂದುಳನ್
ಪರಂದ ಅಂಡಮ್ ಇದು ಎನ ನಿಲ ವಿಸುಂಬು ಒೞಿವು ಅರಕ್
ಕರಂದ ಸಿಲ್ ಇಡಮ್ ತೊರುಮ್ ಇಡಮ್ ತಿಗೞ್ ಪೊರುಳ್ ತೊರುಮ್
ಕರಂದು ಎಂಗುಮ್ ಪರಂದುಳನ್ ಇವೈ ಉಂಡ ಕರನೇ!
ಅವನು ಈ ಬ್ರಹ್ಮಾಂಡದಲ್ಲಿ ಹೇಗೆ ಅನುಕೂಲವಾಗಿರುವನೋ, ಹಾಗೆಯೇ ನೈಸರ್ಗಿಕ ತಂಪಾದ ಸಮುದ್ರದ ಒಂದೊಂದು ನೀರಿನ ಹನಿಯಲ್ಲಿ ಕೂಡ ವ್ಯಾಪಿಸಿರುತ್ತಾನೆ. ಬಹಳ ಪುಟ್ಟ ಸ್ಥಳದಲ್ಲಿ ಕೂಡ ಅತ್ಯಂತ ಸೂಕ್ಷ್ಮ ರೂಪದಲ್ಲಿ ವ್ಯಾಪಿಸಿರುವವನು. ಸ್ವಯಂ ಕಾಂತಿಯುಕ್ತವಾಗಿರುವ ಜೀವಾತ್ಮದಲ್ಲಿ ಎಷ್ಟು ಸೂಕ್ಷ್ಮವಾಗಿ ನೆಲೆಸಿರುತ್ತಾನೆಂದರೆ, ಆ ಜೀವಾತ್ಮರು ಅವನು ಅಂತರ್ಯಾಮಿಯಾಗಿರುವುದನ್ನು ಅರಿಯುವುದಿಲ್ಲ.
ಸರ್ವ ವ್ಯಾಪಿಯಾದ ಎಂಪೆರುಮಾನ್ ಪ್ರಳಯದಲ್ಲಿ ಸಕಲವನ್ನೂ ಸಂಹಾರ ಮಾಡಿ ದೃಢವಾಗಿ ಇರುತ್ತಾನೆ.
೧೧.ಪಾಸುರಮ್:ಈ ಪಾಸುರದಲ್ಲಿ ಆೞ್ವಾರ್, ಈ ಹತ್ತು ಪಾಸುಗಳನ್ನು ಕಲಿತು, ಅರ್ಥ ಮಾಡಿಕೊಂಡು ಪಠಿಸುವವರಿಗೆ ಮೋಕ್ಷ ಎಂದು ಘೋಷಿಸಿದ್ದಾರೆ.
ಕರ ವಿಸುಂಬು ಎರಿ ವಳಿ ನೀರ್ ನಿಲಮ್ ಇವೈ ಮಿಸೈ
ವರನವಿಲ್ ತಿರಲ್ ವಲಿ ಅಳಿ ಪೊರೈಯಾಯ್ ನಿನ್ರ
ಪರನ್ ಅಡಿ ಮೇಲ್ ಕುರುಗೂರ್ ಚಟಗೋಪನ್ ಸೊಲ್
ನಿರೈನಿರೈ ಆಯಿರತ್ತು ಇವೈ ಪತ್ತುಮ್ ವೀಡೇ!
ಹೆಚ್ಚಾಗಿ ಸಮೃದ್ಧಗೊಳಿಸುವ ಈ ಹತ್ತು ಪಾಸುರಗಳನ್ನು ( ಆೞ್ವಾರ್ ತಿರುನಗರಿಯಲ್ಲಿ ಅವತರಿಸಿದ) ನಮ್ಮಾೞ್ವಾರ್, ಸರ್ವೋಚ್ಚನಾದ , ಪಂಚಭೂತಗಳಿಗೆ( ಅಗ್ನಿ, ವಾಯು, ಜಲ, ಆಕಾಶ ಮತ್ತು ಪೃಥ್ವಿ) ಮತ್ತು ಅವುಗಳ ಗುಣಗಳಿಗೆ (ಜ್ವಾಲೆ, ಧ್ವನಿ,ಬಲ, ತಂಪು ಮತ್ತು ಸಹಿಷ್ಣುತೆ) ವಾಸಸ್ಥಳನಾದ ಹಾಗು ಅವುಗಳನ್ನು ತನ್ನ ಗುಣಗಳಾಗಿ ಹೊಂದಿರುವ ಎಂಪೆರುಮಾನಿನ ಪಾದಕಮಲದಲ್ಲಿ ಸಮರ್ಪಿಸಿದ್ದಾರೆ.
ಅಡಿಯೇನ್ ರೂಪ ರಾಮಾನುಜ ದಾಸಿ
ಮೂಲ: http://divyaprabandham.koyil.org/index.php/2020/05/thiruvaimozhi-1-1-simple/
ಆರ್ಕೈವ್ ಮಾಡಲಾಗಿದೆ : http://divyaprabandham.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org