ತಿರುಪ್ಪಾವೈ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ಮುದಲಾಯಿರಮ್

ANdAl_srIvilliputhur_pinterest.com_sreedevi_balaji

ಶ್ರೀ ಮಣವಾಳ ಮಾಮುನಿಗಳು ಶ್ರೀ ಆಂಡಾಳಿನ ಶ್ರೇಷ್ಠತೆಯನ್ನು ಉಪದೇಶ ರತ್ನಮಾಲೆಯ 22ನೆಯ ಪಾಸುರದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ.


ಇನ್‌ಱೋ ತಿರುವಾಡಿಪ್ಪೂರಮ್, ಎಮಕ್ಕಾಗ
ವನ್‌ಱೋ ಇಙ್ ಆಂಡಾಳ್ ಅವದರಿತ್ತಾಳ್ ಕುನ್‌ಱಾದ
ವಾೞ್ವಾನ ವೈಕುನ್ದವಾನ್ ಬೋಗಮ್ ತನ್ನೈ ಇಹೞ್‌ನ್ದು
ಆೞ್ವಾರ್ ತಿರುಮಗಳಾರಾಯ್


ಈವತ್ತು ತಿರುವಾಡಿಪ್ಪೂರ ನಕ್ಷತ್ರವೇ ? (ಆಡಿ ಮಾಸದ ಪೂರಮ್ ನಕ್ಷತ್ರ) ಹೇಗೆ ಒಂದು ತಾಯಿ ತನ್ನ ಬಾವಿಗೆ ಬಿದ್ದ ಮಗುವನ್ನು ರಕ್ಷಿಸಲು ಸ್ವತಃ ಬಾವಿಗೆ ಹಾರುತ್ತಾಳೋ, ಹಾಗೆಯೇ ಶ್ರೀ ಭೂಮಿಪಿರಾಟ್ಟಿ, ಶ್ರೀ ವೈಕುಂಠದಲ್ಲಿ ಲಭ್ಯವಾಗಿರುವ ಆನಂದಮಯವಾದ ಅನುಭವವನ್ನು ಬಿಟ್ಟು, ನನ್ನ ಉನ್ನತಿಗಾಗಿ ಭೂಮಿಯಲ್ಲಿ ಈ ಶುಭದಿನ ,ಪೆರಿಯಾೞ್ವಾರವರ ದೈವಿಕ ಪುತ್ರಿ ಆಂಡಾಳಾಗಿ ಜನಿಸಿದಳು.
ಶ್ರೀ ವರಾಹ ಪೆರುಮಾನ್ ಶ್ರೀ ಭೂಮಿಪಿರಾಟ್ಟಿಗೆ ಹೇಳಿರುತ್ತಾರೆ, ” ನನ್ನನ್ನು ಪದಮಾಲೆಗಳಿಂದ ಹೊಗಳುವುದರಿಂದ, ಮನಸ್ಸಿನಿಂದ ಪ್ರಾರ್ಥಿಸುವುದರಿಂದ ಮತ್ತು ಹೂಗಳುವುದರಿಂದ, ಪೂಜಿಸುವುದರಿಂದ ಜೀವಾತ್ಮಗಳು ನನ್ನನ್ನು ಸುಲಭವಾಗಿ ಪಡೆಯುತ್ತಾರೆ. “

ಈ ಶಬ್ದ್ಗಗಳನ್ನು ನಿಜವಾಗಿ ಪರಿಪಾಲಿಸಲು ಮತ್ತು ಇದನ್ನು ನಮಗೆ ತೋರಿಸಲು ಭೂಮಿಮಾತೆಯು ಆಂಡಾಳ್ ಆಗಿ ಅವತರಿಸಿರುತ್ತಾರೆ.

ಎಂತಹ ಆಶ್ಚರ್ಯ !! ಎಂತಹ ಆಶೀರ್ವಾದ !!

ಆಂಡಾಳ್ ತನ್ನನ್ನು ಹಸು ಮೇಯಿಸುವ ಕನ್ಯೆಯಾಗಿ , ಶ್ರೀ ವಿಲ್ಲಿಪುತ್ತೂರನ್ನೇ ಶ್ರೀ ಆಯ್‌ಪ್ಪಾಡಿ (ಗೋಕುಲಮ್) ಆಗಿ , ತನ್ನ ಸ್ನೇಹಿತೆಯರನ್ನು ಗೋಪಿಕೆಯರಾಗಿ (ತನ್ನ ಸಹಿತ) , ಶ್ರೀ ವಿಲ್ಲಿಪುತ್ತೂರಿನ ವಡಪೆರುಂಕೋಯಿಲಿನ ವಟಪತ್ರಸಾಯಿಯಾದ ಎಂಬೆರುಮಾನರನ್ನೇ ಕಣ್ಣ (ಕೃಷ್ಣ)ನಾಗಿ , ಆ ಗುಡಿಯನ್ನೇ ನಂದಗೋಪರ (ಕೃಷ್ಣನ ತಂದೆಯ) ಮನೆಯಾಗಿ ಕಲ್ಪಿಸಿಕೊಳ್ಳುತ್ತಾಳೆ.

ಅವಳು ಅತ್ಯಂತ ಕರುಣೆಯಿಂದ ಸರಳವಾಗಿ ಅರ್ಥವಾಗುವ ಮೂವತ್ತುಮೂವತ್ತು ತಮಿೞ್ ಪಾಸುರಗಳಾದ ತಿರುಪ್ಪಾವೈಯ ಮೂಲಕ ,ಎಂಬೆರುಮಾನರನ್ನು ಪಡೆಯಲು ಅವರೇ (ಎಂಬೆರುಮಾನರೇ) ದಾರಿ. ಅವರನ್ನು ಭಕ್ತರ ಮೂಲಕ ಮತ್ತು ನಪ್ಪಿನ್ನೈ ಪಿರಾಟ್ಟಿಯ ಶಿಫಾರಸ್ಸಿನ ಮೂಲಕ ಪಡೆದ ಮೇಲೆ, ಅವರನ್ನು ಸಂತೋಷ ಪಡಿಸಲು ಮಾತ್ರವೇ ಕೈಂಕರ್ಯಗಳನ್ನು ನೀಡುವುದೇ ಜೀವಾತ್ಮನ ಸ್ವರೂಪ ಎಂದು ತಿಳಿಸುತ್ತಾಳೆ.
ತಿರುಪ್ಪಾವೈ ಎಲ್ಲಾ ವೇದಗಳಿಗೂ ಮೂಲವಾದದು ತಿರುಪ್ಪಾವೈ ಎಲ್ಲಾ ವೇದಗಳಿಗೂ ಮೂಲವಾಗಿರುತ್ತದೆ. ಇನ್ನೊಂದು ವಿಧದಲ್ಲಿ ಹೇಳುವುದೆಂದರೆ ,ನಾವು ಎಲ್ಲಾ ವೇದಗಳ ಮೂಲ ಸಾರಗಳನ್ನು ತಿರುಪ್ಪಾವೈ ನಲ್ಲಿ ನೋಡಬಹುದು. ವೇದಾಗಳಿಗೂ , ಎಂಬೆರುಮಾನರಿಗೂ ಎಂತಹ ಸಂಬಂಧವೆಂದರೆ ,ಯಾರಾದರೂ ವೇದಗಳನ್ನು ತಿಳಿದವರ ಸಹಾಯದಿಂದ ಎಂಬೆರುಮಾನರ ಪಾದಕಮಲವನ್ನು ತಲುಪಬಹುದು. ಅದೇ ರೀತಿಯಲ್ಲಿ ಎಂಬೆರುಮಾನರಿಗೆ ಸೇವೆಗಳನ್ನು ಮತ್ತಿತರ ಭಕ್ತರ ಸಮೇತವಾಗಿ ಮಾಡುವುದರಿಂದ ಎಂಬೆರುಮಾನರಿಗೆ ಸಂತೋಷ ಏರ್ಪಡುತ್ತದೆ. ನಾವು ಈ ರೀತಿ ತಿರುಪ್ಪಾವೈಯನ್ನು ಆನಂದಿಸಬಹುದು.

ಒಂದು ಸಾರಿ ಶ್ರೀ ರಾಮಾನುಜರ ಶಿಷ್ಯರು ಅವರ ಬಳಿ ಹೋಗಿ ತಮಗೆ ಇನ್ನೊಂದು ಸಾರಿ ತಿರುಪ್ಪಾವೈ ಬಗ್ಗೆ ವಿವರಿಸಲು ಕಾಲಕ್ಷೇಪವನ್ನು ಕೇಳಿದಾಗ, ಶ್ರೀ ರಾಮಾನುಜರು ಹೇಳುತ್ತಾರೆ, ಶ್ರೀ ಆಂಡಾಳ್ ಮಾತ್ರ ಇದನ್ನು ಸಂಪೂರ್ಣವಾಗಿ ವಿವರಿಸಬಲ್ಲಳು. ಇದನ್ನು ಕೃಷ್ಣನ ಪ್ರೀತಿಯಲ್ಲಿ ಮುಳುಗಿರುವ ಪುಟ್ಟ ಗೋಪಿಕೆಯರು ಮಾತ್ರ ಅರ್ಥ ಮಾಡಿಕೊಳ್ಳುವರು. ನಾವೆಲ್ಲಾ ಸ್ವಲ್ಪ ಪ್ರಯತ್ನ ಪಟ್ಟರೆ ಏನೋ ಸ್ವಲ್ಪ ವಿವರಿಸಬಹುದು ಮತ್ತು ಅರ್ಥ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ.

ನಾವೆಲ್ಲಾ ಏನೋ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಂಡು ಆಚಾರ್ಯರು ಆವಾಗಲೇ ಉಪದೇಶಿಸದ್ದನ್ನು ಸ್ವಲ್ಪ ಬರೆಯಬಹುದು ಅಷ್ಟೇ.

ಎಂಬೆರುಮಾನಾರ್ (ಶ್ರೀ ಭಗವದ್ ರಾಮಾನುಜರು ) ಅನ್ನು ತಿರುಪ್ಪಾವೈ ಜೀಯರ್ ಎಂದೂ ಕರೆಯುತ್ತಿದ್ದರು. (ಅವರ ತಿರುಪ್ಪಾವೈಯಲ್ಲಿದ್ದ ಅಭಿರುಚಿಯಿಂದ) . ತಿರುಪ್ಪಾವೈಯನ್ನು ಮಕ್ಕಳಿಂದ ಮುದುಕರವರೆಗೂ ಯಾವ ವಯಸ್ಸಿನಲ್ಲೂ ಹಾಡಿ ಆನಂದ ಪಡೆಯಬಹುದು. ಇದು ತಿರುಪ್ಪಾವೈನ ಇನ್ನೊಂದು ಶ್ರೇಷ್ಠತೆ.

ಈ ಪ್ರಬಂಧದ ಸರಳವಾದ ಅನುವಾದಿತ ವಿವರಣೆಯನ್ನು ಪೂರ್ವಾಚಾರ್‍ಯರ  ವ್ಯಾಖ್ಯಾನದ ಸಹಾಯದಿಂದ ಮಾಡಲಾಗಿದೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/05/thiruppavai-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment