ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ
ತನಿಯನ್‌ಗಳು ದೇವಾಲಯಗಳಲ್ಲಿ , ಮಠಗಳಲ್ಲಿ , ಮನೆಗಳಲ್ಲಿ ಸೇವಾಕಾಲಂನ ಆರಂಭದಲ್ಲಿ ಪಠಿಸುವ ಪ್ರಾರ್ಥನಾ ಶ್ಲೋಕಗಳು (ಪದ್ಯಗಳು). ಪ್ರತಿಯೊಂದು ಧಿವ್ಯ ಪ್ರಬಂಧಂ ತನ್ನದೇ ಆದ ಆಹ್ವಾನಿತ ಪದ್ಯಗಳನ್ನು ಹೊಂದಿದ್ದರೂ, ಸಾಮಾನ್ಯ ಪದ್ಯಗಳ ಒಂದು ಗುಂಪನ್ನು ಪ್ರಾರಂಭದಲ್ಲಿ ಯಾವಾಗಲೂ ಪಠಿಸಲಾಗುತ್ತದೆ. ನಾವು ಈಗ ಅವುಗಳ ಅರ್ಥಗಳೊಂದಿಗೆ ಸಂಕ್ಷಿಪ್ತವಾಗಿ ನೋಡುತ್ತೇವೆ.
ಮಾಮುನಿಗಳನ್ನು ವೈಭವೀಕರಿಸುವ ತನಿಯನ್ – ರಚಿಸಿದವರು ನಂಪೆರುಮಾಳ್ (ಶ್ರೀ ರಂಗನಾಥನ್ )
ಶ್ರೀ ಶೈಲೇಷ ದಯಾ ಪಾತ್ರಂ ಧೀಭಕ್ತ್ಯಾದಿ ಗುಣಾರ್ಣವಂ
ಯತೀಂದ್ರ ಪ್ರವಣಂ ವಂದೇ ರಮ್ಯ ಜಾಮಾತರಂ ಮುನಿಮ್
ತಿರುಮಲೈ ಆೞ್ವಾರರ ಕರುಣೆಗೆ ಪಾತ್ರರಾದ ,ಜ್ಞಾನ , ಭಕ್ತಿ ಮುಂತಾದ ಮಂಗಳಕರ ಗುಣಸಾಗರವಾಗಿರುವ ಮತ್ತು ಯತೀಂದ್ರರಿಗೆ (ಶ್ರೀ ರಾಮಾನುಜ ) ಹೆಚ್ಚಾಗಿ ಲಗತ್ತಿಸಿರುವ , ಅೞಗಿಯ ಮಣವಾಳ ಮಾಮುನಿಗಳನ್ನು ನಾನು ಪೂಜಿಸುತ್ತೇನೆ.
“ ಇಪ್ಪುವಿಯಿಲ್ ಅರಂಗೇಶರ್ಕು ಈಡಳಿತ್ತಾನ್ ವಾೞಿಯೇ “ ( ಈ ಜಗತ್ತಿನಲ್ಲಿ ಈಡು ವ್ಯಾಖ್ಯಾನವನ್ನು ಶ್ರೀ ರಂಗನಾಥನಿಗೆ ಉಪನ್ಯಾಸ ಮಾಡಿದವರು ) ಅದರಲ್ಲಿ ಪ್ರಶಂಶಿಸಿದಂತೆ , ಮನವಾಳ ಮಾಮುನಿಗಳು ಈಡು ವ್ಯಾಖ್ಯಾನವನ್ನು- ತಿರುವಾಯ್ಮೊೞಿ ಯ ಅತ್ಯಂತ ವೈಭವಾನ್ವಿತ ವ್ಯಾಖ್ಯಾನ- ಶ್ರೀ ರಂಗನಾಥನಿಗೆ ವಿವರಿಸಿದರು. ಸಾಱ್ಱುಮುರೈ (ಮುಕ್ತಾಯ) ದಿನದಂದು, ಶ್ರೀ ರಂಗನಾಥನು ಸ್ವತಃ ಪುಟ್ಟ ಬಾಲಕನಂತೆ ಆ ಮಹಾ ಸಭೆಯಲ್ಲಿ ಪ್ರತ್ಯಯಕ್ಷವಾದರು.ಅವರು ಶ್ರೀ ಶೈಲೇಶ ದಯಾ ಪಾತ್ರಂ ಎಂದು ಆರಂಭಿಸುವ ಈ ತನಿಯನ್ ಅನ್ನು ಮಾಮುನಿಗಳ ಮುಂದೆ ವಿನಮ್ರತೆಯಿಂದ ಪಠಿಸಿದರು. ಹೇಗೆ ಸಂಸ್ಕೃತ ವೇದ ಪಾರಾಯಣ ಪ್ರಾರಂಭ ಮತ್ತು ಮುಕ್ತಾಯದಲ್ಲಿ ಪ್ರಣವಂ ಪಠಿಸುವಂತೆ , ಈ ತನಿಯನ್ ಅನ್ನು ದಿವ್ಯ ಪ್ರಬಂಧದ (ತಮಿಳು/ದ್ರಾವಿಡ ವೇದ ಎಂದು ಪ್ರಸಿದ್ಧವಾದ ) ಪ್ರಾರಂಭ ಮತ್ತು ಮುಕ್ತಾಯದಲ್ಲಿ ಪಾಠಿಸಬೇಕು ಎಂದು ಎಲ್ಲ ಶ್ರೀವೈಷ್ಣವರಿಗೆ ಆದೇಶ ನೀಡಿದರು. ಮನವಾಳ ಮಾಮುನಿಗಳ ಆಚಾರ್ಯ ತಿರುವಾಯ್ಮೊೞಿ ಪಿಳ್ಳೈ ಸಹ ಶ್ರೀಶೈಲನಾಥ (ತಿರುಮಲೈ ಆೞ್ವಾರ್ ) ಮತ್ತು ಶ್ರೀಶೈಲೇಶ ಎಂದು ಕರೆಯಲ್ಪಟ್ಟವರು.
ನಮ್ಮ ಗುರುಪರಂಪರೈ ವೈಭವೀಕರಿಸಿ ಕೂರತ್ ಆೞ್ವಾನ್ ರಚಿಸಿದ ತನಿಯನ್
ಲಕ್ಷ್ಮೀನಾಥ ಸಮಾರಂಭಾಂ ನಾಥಯಾಮುನ ಮಧ್ಯಮಾಂ
ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರುಪರಂಪರಾಂ
ಶ್ರೀಮನ್ ನಾರಾಯಣನಿಂದ ಆರಂಭಿಸುವ, ನಾಥಮುನಿಗಳ್ ಮತ್ತು ಯಾಮುನಾಚಾರ್ಯರ್ ಮಧ್ಯದಲ್ಲಿದ್ದು ನನ್ನ ಆಚಾರ್ಯಾರಾದ ಶ್ರೀ ರಾಮಾನುಜರಿಂದ ಅಂತ್ಯಯಗೊಳ್ಳುವ ವೈಭವಾನ್ವಿತ ಗುರು ಪರಂಪರೈಯನ್ನು ನಾನು ಪೂಜಿಸುತ್ತೇನೆ.
(ಶ್ರೀ ರಾಮಾನುಜ ) ಎಂಪೆರುಮಾನಾರನ್ನು ವೈಭವೀಕರಿಸಿ ಕೂರತ್ ಆೞ್ವಾನ್ ರಚಿಸಿದ ತನಿಯನ್
ಯೋ ನಿತ್ಯಂ ಅಚ್ಯುತ ಪದಾಂಭುಜ ಯುಗ್ಮ ರುಕ್ಮ
ವ್ಯಾಮೋಹತಸ್ ತದಿತರಾಣಿ ತೃಣಾಯ ಮೇನೇ
ಅಸ್ಮದ್ ಗುರೋರ್ ಭಗವತೋಸ್ಯ ದಯೈಕ ಸಿಂಧೋಃ
ರಾಮಾನುಜಸ್ಯ ಚರಣೌ ಶರಣಂ ಪ್ರಪಧ್ಯೇ
ಶ್ರೀಮನ್ ನಾರಾಯಾಣನ್ ಅವರ ಕಮಲದ ಪಾದಗಳಿಗೆ ಬಹಳ ಲಗತ್ತಾಗಿರುವ ಶ್ರೀ ರಾಮಾನುಜಾ (ಎಂಪೆರುಮಾನಾರ್ ) ಹೀಗೆ ಎಲ್ಲವನ್ನು ಹುಲ್ಲಿನ ತುಂಡು (ಅತ್ಯಲ್ಪ) ಎಂದು ಪರಿಗಣಿಸುವವನು, ನನ್ನ ಆಚಾರ್ಯ ಮತ್ತು ಕರುಣೆಯ ಸಾಗರ ಮತ್ತು ಎಲ್ಲಾ ಇತರ ಶುಭ ಗುಣಗಳು ಹೊಂದಿರುವ ಅವರ ಕಮಲದ ಪಾದಗಳಿಗೆ ನಾನು ಶರಣಾಗುತ್ತೇನೆ
ನಮ್ಮಾೞ್ವಾರ್ ಅನ್ನು ವೈಭವೀಕರಿಸಿ ಆಳವಂಧಾರ್ ರಚಿಸಿದ ತನಿಯನ್
ಮಾತಾ ಪಿತಾ ಯುವತಯಸ್ ತನಯಾ ವಿಭೂತಿಃ
ಸರ್ವಂ ಯದೇವ ನಿಯಮೇನ ಮದನವ್ಯಯಾನಾಂ
ಆದ್ಯಸ್ಯನಃ ಕುಲಪತೇರ್ ವಕುಳಾಭಿರಾಮಂ
ಶ್ರೀಮತ್ ತದಂಘ್ರಿಯುಗಳಂ ಪ್ರಾಣಮಾಮಿ ಮೂರ್ಧ್ನಾ
ನಮ್ಮಾೞ್ವಾರ್ ಅವರ ಕಮಲದ ಪಾದಗಳು ಯಾವಾಗಲೂ ತಾಯಿ, ತಂದೆ, ಮಕ್ಕಳು, ಸಂಪತ್ತು ಮತ್ತು ಉಳಿದೆಲ್ಲ ಮತ್ತು ನಮ್ಮ ಶ್ರೀವೈಶ್ನವ ಸಮುದಾಯದ ನಾಯಕ , ಮಘಿಳ ಹೂವುಗಳಿಂದ ಅಲಂಕರಿಸಲಾದ ಮತ್ತು ಸದಾ ಪ್ರಕಾಶಮಾನವಾಗಿ ಹೊಳೆಯುವ ಮತ್ತು ಅಂತಹ ಕಮಲದ ಪಾದಗಳನ್ನು ನಾನು ತಲೆ ಬಾಗಿ ನಮಸ್ಕರಿಸುತ್ತೇನೆ .
ಆೞ್ವಾರ್ ಮತ್ತು ಎಂಪೆರುಮಾನಾರ್ ಅನ್ನು ವೈಭವೀಕರಿಸಿ ಪರಾಶರ ಭಟ್ಟರ್ ರಚಿಸಿದ ತನಿಯನ್
ಭೂತಮ್ ಶರಶ್ಚ ಮಹದಾಹ್ವಯ ಭಟ್ಟನಾಥ
ಶ್ರೀ ಭಕ್ತಿಸಾರ ಕುಲಶೇಖರ ಯೋಗಿವಾಹಾನ್
ಭಕ್ತಾಂಘ್ರಿ ರೇಣು ಪರಕಾಲ ಯತೀಂದ್ರ ಮಿಶ್ರಾನ್
ಶ್ರೀಮತ್ ಪರಾಂಕುಶ ಮುನಿಮ್ ಪ್ರಾಣತೊಸ್ಮಿ ನಿತ್ಯಂ
ನಾನು ನಮ್ಮಾೞ್ವಾರ್ ಜೊತೆ ಪೊಯ್ಗೈ ಆೞ್ವಾರ್, ಭೂದತ್ತಾೞ್ವಾರ್ , ಪೇಯ್ ಆೞ್ವಾರ್, ತಿರುಮೞಿಶೈ ಆೞ್ವಾರ್, ಕುಲಶೇಖರ ಆೞ್ವಾರ್, ಪೆರಿಯಾೞ್ವಾರ್ , ತೊಂಡರಡಿಪ್ಪೊಡಿ ಆೞ್ವಾರ್, ತಿರುಪ್ಪಾನ್ ಆೞ್ವಾರ್, ತಿರುಮಂಗೈ ಆೞ್ವಾರ್ ಮತ್ತು ಎಂಪೇರುಮನಾರನ್ನು ಪೂಜಿಸುತ್ತೇನೆ.
ನಮ್ಮ ಅಚಾರ್ಯ ಪರಂಪರೈಗಳಲ್ಲಿ ಪ್ರಮುಖರಾದ 10 ಆೞ್ವಾರ್ಗಳು ಮತ್ತು ಎಂಪೆರುಮಾನಾರ್ ವೈಭವೀಕರಣದಲ್ಲಿ ಈ ಶ್ಲೋಕವನ್ನು ಪ್ರತಿದಿನ ಪಠಿಸಲಾಗುತ್ತದೆ. ಪೊಯ್ಗೈ ಆೞ್ವಾರ್, ಭೂದತ್ತಾೞ್ವಾರ್ , ಪೇಯ್ ಆೞ್ವಾರ್, ಇತ್ಯಾದಿಗಳಿಂದ ಪ್ರಾರಂಭಿಸಿ ಈ ಶ್ಲೋಕವನ್ನು ಸರಿಯಾದ ಕ್ರಮದಲ್ಲಿ ಮಾಡಲಾಗುವುದಿಲ್ಲ ಎಂದು ಕೆಲವರು ಭಾವಿಸಬಹುದು.ಅದು ಹಾಗಲ್ಲ . ಇದನ್ನು “ಕಾಸಾರ ಭೂತ ಮಹಾದಾಹ್ವಯ ಭಕ್ತಿಸಾರನ್ ಶ್ರೀಮತ್ಚಟಾರಿ ಕುಲಸೇಕರ ಭಟ್ಟನಾಥನ್, ಭಕ್ತಾಂಘ್ರಿ ರೇಣು ಮುನಿವಾಹಾನ ಕಾರ್ತಿಕೇಯನ್ ರಾಮಾನುಜಂಚ ಯಮಿನಂ ಪ್ರಣತೊಸ್ಮಿ ನಿತ್ಯಂ ” , ಅಷ್ಟು ಮಧುರವಾಗಿರುವಿದಿಲ್ಲ . ಭಟ್ಟರ್ ಶ್ಲೋಕವನ್ನು ಭೂದತ್ತಾೞ್ವಾರಿಂದ ಪ್ರಾರಂಭಿಸಿ ನಮ್ಮಾೞ್ವಾರೊಂದಿಗೆ ಕೊನೆಗೊಳ್ಳುವ ವಿಧಾನಕ್ಕೆ ಒಂದು ಕಾರಣವಿದೆ. ಈಗ ಅದನ್ನು ನೋಡೋಣ:
ಆೞ್ವಾರ್ಗಳ ಮುಖ್ಯಸ್ಥನೆಂದು ಪ್ರಶಂಸಿಸಲ್ಪಟ್ಟಿರುವ ನಮ್ಮಾೞ್ವಾರ್ ಅವರನ್ನು ಕೆಲವು ಶ್ಲೋಕಗಳಲ್ಲಿ ಅವಯವಿ (ಸಂಪೂರ್ಣ) ಮತ್ತು ಇತರ ಆೞ್ವಾರ್ಗಳು ನಮ್ಮ ಪೂರ್ವಾಚಾರ್ಯರು ತಲೆ, ಕಣ್ಣುಗಳು ಮುಂತಾದ ವಿವಿಧ ಭಾಗಗಳಾಗಿ ವೈಭವೀಕರಿಸುತ್ತಾರೆ. ಅಂತಹ ಶ್ಲೋಕಗಳಲ್ಲಿ, ಭೂದತ್ತಾೞ್ವಾರ್ ಅನ್ನು ತಲೆಯಂತೆ ಪೊಯ್ಗೈ ಆೞ್ವಾರ್ ಮತ್ತು ಪೇಯ್ ಆೞ್ವಾರ್ ಅನ್ನು ಕಣ್ಣುಗಳಂತೆ , ಪೆರಿಯಾೞ್ವಾರ್ ಮುಖದಂತೆ , ತಿರುಮೞಿಶೈ ಆೞ್ವಾರ್ ಅನ್ನು ಕುತ್ತಿಗೆಯಂತೆ , ಕುಲಶೇಖರ ಪೆರುಮಾಳ್ ಮತ್ತು ತಿರುಪ್ಪಾನ್ ಪೆರುಮಾಳ್ ಅನ್ನು ಕೈಗಳಾಗಿ , ತೊಂಡರಡಿಪ್ಪೊಡಿ ಆೞ್ವಾರ್ ಎದೆಯಂತೆ, ತಿರುಮಂಗೈ ಆೞ್ವಾರ್ ನಾಭಿಯಂತೆ, ಮತ್ತು ಯತಿರಾಜ (ಶ್ರೀ ರಾಮಾನುಜ ) ಅವರನ್ನು ಕಮಲದ ಪಾದಗಳಾಗಿ ಎತ್ತಿ ತೋರಿಸಲಾಗಿದೆ. ಒಟ್ಟಾರೆಯಾಗಿ ನಮ್ಮಾೞ್ವಾರ್ ಮತ್ತು ಇತರ ಆೞ್ವಾರ್ ಮತ್ತು ಎಂಪೆರುಮಾನಾರ್ ಅನ್ನು ಭಾಗಗಳಾಗಿ ಎತ್ತಿ ತೋರುವ ಅಭ್ಯಾಸವನ್ನು ಈ ತನಿಯನ್ ಹೊಂದಿಸುತ್ತದೆ. ಇತರ ಆೞ್ವಾರ್ಗಳು ಮತ್ತು ಎಂಪೆರುಮಾನಾರ್ (ಭಾಗಗಳು) ಅನ್ನು ಮೊದಲು ತೋರಿಸಿ ನಂತರ ಪ್ರಪನ್ನ ಜನ ಕೂಟಸ್ಥರ್ (ಶರಣಾದ ವ್ಯಕ್ತಿಗಳ ಸಮುದಾಯದಲ್ಲಿ ಮುಖ್ಯಸ್ಥ) ಎಂದು ಪ್ರಶಂಸಿಸಲ್ಪಟ್ಟ ನಮ್ಮಾೞ್ವಾರ್ (ಇಡೀ) ಕೊನೆಯಲ್ಲಿ ತೋರಲಾಗುತ್ತದೆ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಅವರು ತಿರುಕ್ಕೋಷ್ಟಿಯೂರ್ನಲ್ಲಿ ತಂಗಿದ್ದಾಗ ನಂಜೀಯರ್ ಅವರ ಕೋರಿಕೆಯ ಮೇರೆಗೆ ಈ ಶ್ಲೋಕವನ್ನು ಭಟ್ಟರ್ ಸಂಯೋಜಿಸಿದ್ದಾರೆ. ಈ ಅನುವಾದವನ್ನು ವೇದಿಕ್ಸ್ ಫೌಂಡೇಶನ್ ಮತ್ತು ಗ್ರಂಥ ಮಾಲಾ ಆಫೀಸ್ (ಟ್ರಿಪ್ಲಿಕೇನ್) ಪ್ರಕಟಿಸಿದ ನಿತ್ಯಾನುಸಂಧಾನಂ ಪುಸ್ತಕದಲ್ಲಿ ನೀಡಲಾಗಿರುವ ಕಾಂಚೀಪುರಂ ಪ್ರತಿವಾಧಿ ಭಯಂಕರಂ ಅಣ್ಣಂಗರಾಚಾರ್ಯರ ಸ್ವಾಮಿ ಅವರ ವಿವರಣೆಯನ್ನು ಆಧರಿಸಿ ಮಾಡಲಾಗುತ್ತದೆ.
ಪೊನ್ನಡಿ ಕ್ಕಾಲ್ ಜೀಯರ್ ಅನ್ನು ವೈಭವಿಕರಿಸಿ ದೊಡ್ಡೈಯಂಗಾರ್ ಅಪ್ಪೇ ( ಅಷ್ಟ ದಿಗ್ಗಜರಲ್ಲಿ ಒಬ್ಬರು -ಪೊನ್ನಡಿ ಕ್ಕಾಲ್ ಜೀಯರ್ ಅವರ ಪ್ರಮುಖ 8 ಶಿಷ್ಯರು )
ರಮ್ಯ ಜಾಮಾತೃ ಯೋಗೀಂದ್ರ ಪಾದರೇಖಾ ಮಯಂ ಸದಾ
ತಥಾ ಯತ್ತಾತ್ಮ ಸತ್ತಾದಿಂ ರಾಮಾನುಜ ಮುನಿಮ್ ಭಜೆ
ನಾನು ಮಾಮುನಿಗಳ ಕಮಲದ ಪಾದಗಳ ಮುದ್ರೆಗಳಂತೆ ಇರುವ ಮತ್ತು ತನ್ನ ನಿಜವಾದ ಸ್ವರೂಪವನ್ನು (ಮಾಮುನಿಗಳ ಸೇವಕನಾಗಿ), ಆಹಾರ, ಚಟುವಟಿಕೆಗಳು, ಇತ್ಯಾದಿಗಳನ್ನು ಸ್ಥಾಪಿಸಲು ಮಾಮುನಿಗಳನ್ನು ಸಂಪೂರ್ಣವಾಗಿ ಅವಲಂಬಿಸಿರುವ ವಾನಮಾಮಲೇ ಜೀಯರ್ ಅವರನ್ನು ನಾನು ಪೂಜಿಸುತ್ತೇನೆ.
ಪೊನ್ನಡಿಕ್ಕಾಲ್ ಜೀಯರ್ (ಮಾಮುನಿಗಳ ಮೊದಲ ಶಿಷ್ಯ ಮತ್ತು ಶ್ರೀ ರಂಗನಾಥನ್ ಮತ್ತು ಮಾಮುನಿಗಳ್ ಅವರ ಆದೇಶದ ಮೇರೆಗೆ ವಾನಮಾಮಲೆ / ತೋತಾದ್ರಿ ಮಠದ ಸಂಸ್ಥಾಪಕ) ಅವರ ತನಿಯನ್ ವಾನಮಾಮಲೇ ದಿವ್ಯ ದೇಶದಲ್ಲಿ , ನವತಿರುಪತಿ ದಿವ್ಯ ದೇಶಗಳಲ್ಲಿ , ವಾನಮಾಮಲೆ ಮಠಗಳಲ್ಲಿ ,ಮತ್ತು ವಾನಮಾಮಲೆ ಮಠದ ಶಿಷ್ಯರ ಮನೆಗಳಲ್ಲಿ ಪಠಿಸಲಾಗುತ್ತದೆ. ಸಾಮಾನ್ಯವಾಗಿ ಶ್ರೀಶೈಲೇಶ ದಯಾಪಾತ್ರಂ ತನಿಯನ್ ನಂತರ ಈ ತನಿಯನ್ ಅನ್ನು ಪಠಿಸಲಾಗುತ್ತದೆ. ಈ ತನಿಯನ್ ಅನ್ನು ತಿರುಮಾಳಿಗೈ (ಆಚಾರ್ಯ ಪುರುಷರ ಮನೆಗಳು), ಆತ್ತಾನ್ ತಿರುಮಾಳಿಗೈ (ಆೞ್ವಾರ್ ತಿರುನಗರಿ), ಮುಧಲಿಯಾಂಡಾನ್ ತಿರುಮಾಳಿಗೈ (ಅಪ್ಪಾಚಿಯಾರಣ್ಣ – ಅಣ್ಣವಿಲಪ್ಪನ್ ವಂಶಸ್ಥರು) ಮೊದಲಾದವರು, ಪೊನ್ನಡಿಕ್ಕಾಲ್ ಜೀಯರ್ ಅವರ ಮೊದಲ ಶಿಷ್ಯ ಆಚಾರ್ಯನಾಗಿ ಇರುವವರು ಪಠಿಸುವರು.
ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/thaniyans-invocation/
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org