ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
ಹಿಂದಿನ ಲೇಖನದಿಂದ ಮುಂದುವರೆಯುವುದು
ವಿಲಾಂಶೋಲೈ ಪಿಳ್ಳೈ ಅವರು ತಮ್ಮ ಅಪಾರ ಕರುಣೆಯಿಂದ, ನಮ್ಮಾಳ್ವಾರ್ ಅವರ ತಿರುವಾಯ್ಮೊಳಿಯ ಸಾರವಾದ ಶ್ರೀವಚನ ಭೂಷಣ ದಿವ್ಯ ಶಾಸ್ತ್ರದಲ್ಲಿ ವಿಸ್ತೃತವಾಗಿ ತೋರಿಸಿರುವ, ಅಂತಿಮ ರಹಸ್ಯಾರ್ಥಗಳ ವಿಶಿಷ್ಟ ಅರ್ಥಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳುವಂತೆ ಸಂಕ್ಷಿಪ್ತವಾಗಿ ವಿವರಿಸಲು ತಮ್ಮ ದಿವ್ಯ ಹೃದಯದಲ್ಲಿ ಅಪೇಕ್ಷಿಸಿದರು. ಶ್ರೀ ಭಗವದ್ಗೀತೆಯಲ್ಲಿ ಚರಮ ಶ್ಲೋಕವು ಅತ್ಯಂತ ಪ್ರಮುಖವಾದ ಭಾಗವಾಗಿರುವಂತೆಯೇ, ಅಂತಿಮ ಪ್ರಮಾಣಂ (ಶಾಸ್ತ್ರ), ಪ್ರಮೇಯಂ (ಗುರಿ) ಮತ್ತು ಪ್ರಮಾಥ (ಆಚಾರ್ಯರು) ವನ್ನು ಅಂತಿಮವಾಗಿ ವಿವರಿಸುವ ಅಂತಿಮ ಪ್ರಕರಣವು (ವಿಭಾಗ) ಶ್ರೀವಚನ ಭೂಷಣದಲ್ಲಿ ಅತ್ಯಂತ ಪ್ರಮುಖವಾದ ಭಾಗವಾಗಿದೆ. ಆದ್ದರಿಂದ, ಅವರು ಈ ವಿಭಾಗದ ವಿಶಿಷ್ಟ ಅರ್ಥಗಳನ್ನು ಮತ್ತು ಹಿಂದಿನ ವಿಭಾಗಗಳಲ್ಲಿ ವಿವರಿಸಿರುವ ವಿಶಿಷ್ಟವಾದ ಅರ್ಥಗಳನ್ನು ಏಳು ಪಾಸುರಂಗಳಲ್ಲಿ ಹೆಚ್ಚು ದೀರ್ಘವಾಗಿಲ್ಲದೇ, ನಾವು ಈ ವಿಭಾಗವನ್ನು ಅರ್ಥಮಾಡಿಕೊಳ್ಳಲು ವಿವರಿಸುತ್ತಾರೆ. ಇದನ್ನು “ಸಪ್ತ ಗಾಧೈ” ಎಂಬ ಈ ಪ್ರಬಂಧದ ಮೂಲಕ, “ವಾಳಿ ಅವನ್ ಅಮುದ ವಾಯ್ಮೊಳಿಗಳ್” ಎಂದು ತನಿಯನ್ ನಲ್ಲಿ ಹೇಳಿರುವಂತೆ, ಎಲ್ಲಾ ರೀತಿಯಲ್ಲೂ ಆನಂದಿಸಬಹುದು.
“ಅದು ಹೇಗೆ?” ಎಂದು ಕೇಳಿದಾಗ,
ಶ್ರೀವಚನ ಭೂಷಣದಲ್ಲಿ, ೧ ನೇ ಸೂತ್ರ “ವೇದಾರ್ಥಂ ಅರುದಿಯಿಡುವದು” – ದಿಂದ ಆರಂಭಗೊಂಡು 22 ನೇ ಸೂತ್ರ “ಪ್ರಪತ್ಯುಪದೇಶಮ್ ಪನ್ನಿಟ್ರುಮ್ ಇವಳುಕ್ಕಾಗ” -ದವರೆಗೆ, ಲಕ್ಷ್ಮಿ ತಂತ್ರದಲ್ಲಿ “ಅಹಂತಾ ಬ್ರಹ್ಮಣಸ್ತಸ್ಯ” (ನಾನು ಬ್ರಹ್ಮದ ಪ್ರಜ್ಞೆಯಾಗಿ ಉಳಿದಿದ್ದೇನೆ) ನಂತಹ ಸೂತ್ರಗಳ ಪ್ರಕಾರ, ಪುರುಷಕಾರ ಪ್ರಕರಣದಲ್ಲಿ ತೋರಿಸಲಾದ ವಿಶಿಷ್ಟವಾದ ಅರ್ಥಗಳು (ಪಿರಾಟ್ಟಿಯ ಶಿಫಾರಸ್ಸಿನ ಅಧಿಕಾರದೊಂದಿಗೆ) ಮೊದಲ ಪಾಸುರಂ “ಅಂಬೋನ್ ಆರಂಗರ್ಕುಮ್” ನಲ್ಲಿ ಸಾರವಾಗಿ ಬಹಿರಂಗಗೊಂಡಿವೆ.
23ನೇ ಸೂತ್ರ “ಪ್ರಪತ್ತಿಕ್ಕು” -ದಿಂದ ಪ್ರಾರಂಭವಾಗಿ, 79ನೇ ಸೂತ್ರ “ಏಕಾಂತಿ ವ್ಯಪದೇಶ್ತವ್ಯ:” -ದವರೆಗೆ, ಉಪಾಯ ಪ್ರಕರಣದಲ್ಲಿ (ಭಗವಂತನು ಸಾಧನವಾಗಿದ್ದಾನೆ) ತೋರಿಸಿದ ವಿಶಿಷ್ಟ ಅರ್ಥಗಳನ್ನು ಮೊದಲ ಪಾಸುರಂ “ಉಂಬರ್ ತಿವಮ್ ಎನ್ನುಂ ವಾಳ್ವುಕ್ಕು ಶೇರ್ನ್ದ ನೆರಿ” -ನಲ್ಲಿ ತೋರಿಸಲಾಗಿದೆ.
80ನೇ ಸೂತ್ರ “ಉಪಾಯತ್ತುಕ್ಕು” – ದಿಂದ ಪ್ರಾರಂಭವಾಗಿ, 307ನೇ ಸೂತ್ರ “ಉಪೇಯ ವಿರೋಧಿಗಳುಮಾಯ್ ಇರುಕ್ಕುಮ್” -ದವರೆಗೆ, ಅಧಿಕಾರಿ ನಿಷ್ಠಾ ಪ್ರಕರಣದಲ್ಲಿ (ಪ್ರಪನ್ನ ಗುಣ) ತೋರಿಸಿರುವ ವಿಶಿಷ್ಟವಾದ ಅರ್ಥಗಳನ್ನು, “ಅಂಜು ಪೊರುಳುಂ” “ಪಾರ್ತ್ತ ಗುರುವಿನ್ ಆಳವಿಲ್” ಮತ್ತು “ತನ್ನೈ ಇರೈಯೈ” ಪಾಸುರಂಗಳಲ್ಲಿ ತೋರಿಸಲಾಗಿದೆ “.
308ನೇ ಸೂತ್ರ “ತಾನ್ ಹಿತೋಪದೇಶಮ್ ಪಣ್ಣುಮ್ಬೋದು” ದಿಂದ ಆರಂಭಗೊಂಡು 365ನೇ ಸೂತ್ರ “ಉಗಪ್ಪುಮ್ ಉಪಕಾರ ಸ್ಮೃತಿಯುಂ ನಡಕ್ಕ ವೇಣುಮ್” ದವರೆಗೆ, ಆಚಾರ್ಯ ಅನುವರ್ತನ ಪ್ರಕರಣಮ್ (ಆಚಾರ್ಯರ ಸೇವೆಯಲ್ಲಿ) ದಲ್ಲಿ ತೋರಿಸಿರುವ ವಿಶಿಷ್ಟವಾದ ಅರ್ಥಗಳು “ಎನ್ ಪಕ್ಕಲ್ ಓಡಿನಾರ್” ಎಂಬ ಪಾಸುರಂ ನಲ್ಲಿ ತೋರಿಸಲಾಗಿವೆ.
366ನೇ ಸೂತ್ರ “ಸ್ವದೋಷ ಅನುಸಂಧಾನಂ ಭಯ ಹೇತು” ದಿಂದ ಆರಂಭವಾಗಿ, 406ನೇ ಸೂತ್ರ “ನಿವರ್ತಕ ಜ್ಞಾನಮ್ ಅಭಯ ಹೇತು” ದವರೆಗೆ, ಭಗವತ್ ನಿರ್ಹೇತುಕ ಕೃಪಾ ಪ್ರಭಾವ ಪ್ರಕರಣಮ್ (ಭಗವಂತನ ಅನಿಯಮಿತ ಕೃಪೆಯ ಶ್ರೇಷ್ಠತೆ) ಯಲ್ಲಿ ತೋರಿಸಲಾಗಿರುವ ವಿಶಿಷ್ಟವಾದ ಅರ್ಥಗಳನ್ನು “ಅಳುಕ್ಕೆನ್ರು ಇವೈ ಅರಿಂದೇನ್” ಪಾಸುರಂ ನಲ್ಲಿ ನೋಡಬಹುದು.
407ನೇ ಸೂತ್ರ “ಸ್ವತಂತ್ರನೈ ಉಪಾಯಮಾಗತ್ತಾನ್ ಪಟ್ರಿನ ಪೋದಿರೇ ಇಪ್ರಸಂಗನ್ಧಾನ್ ಉಳ್ಳಾದು” -ದಿಂದ ಆರಂಭಗೊಂಡು 463ನೇ ಸೂತ್ರ “ಅನಂತರಂ ಪಲಪರ್ಯಂತಂ ಆಕ್ಕುಂ” -ದವರೆಗೆ, ವೈಭವೋಪಕರಣದಲ್ಲಿ ತೋರಿಸಿರುವ ವಿಶೇಷ ಅರ್ಥಗಳು, “ಅಂಬೋನ್ ಅರಂಗರ್ಕ್ಕುಮ್” -ನಿಂದ “ತಿನ್ಗೇದುಮಿಲ್ಲಾ” -ವರೆಗೆ, ಅಂತಿಮ ಪ್ರಕರಣ (ಆಚಾರ್ಯ ವೈಭವಂ) -ದಲ್ಲಿನ ಏಳು ಪಾಸುರಂಗಳಲ್ಲಿ ಸಂಕ್ಷಿಪ್ತವಾಗಿ ಹೇಳಲ್ಪಟ್ಟಿವೆ.
ಈ ರೀತಿಯಾಗಿ, ಅವರು ಕರುಣೆಯಿಂದ ಇವುಗಳನ್ನು ಸಾರಾಂಶದ ರೀತಿಯಲ್ಲಿ, ಸಕಾರಾತ್ಮಕ ವಿವರಣೆ ಮತ್ತು ನಿರಾಕರಣೆಯ ಮೂಲಕ ವಿವರಿಸುತ್ತಾರೆ, ಈ ಪ್ರಬಂಧವು ಶ್ರೀವಚನ ಭೂಷಣದಲ್ಲಿ ತೋರಿಸಿರುವ ಅರ್ಥಗಳ ಸಾಂದ್ರೀಕೃತ ಆವೃತ್ತಿ ಎಂದು ಹೇಳುವುದರಲ್ಲಿ ತಪ್ಪೇನೂ ಇಲ್ಲ.
ತಿರುವಾಶಿರಿಯಂನಲ್ಲಿ ಪ್ರಥಮ ಪರ್ವವನ್ನು (ಆರಂಭಿಕ ಹಂತ – ಭಗವತ್ ಭಕ್ತಿ) ನಮ್ಮಾಳ್ವಾರ್ ಅವರು “ಶೆಕ್ಕರ್ ಮಾ ಮುಗಿಲ್” ಎಂದು ಆರಂಭಿಸಿ ಕರುಣಾಮಯವಾಗಿ ವಿವರಿಸಿದಂತೆ, ವಿಲಂಶೋಲೈ ಪಿಳ್ಳೈ ಕೂಡ ಚರಮ ಪರ್ವವನ್ನು (ಅಂತಿಮ ಘಟ್ಟ- ಆಚಾರ್ಯ ಭಕ್ತಿ) ಈ ಪ್ರಬಂಧದಲ್ಲಿ “ಅಂಬೋನ್ ಅರಂಗರ್ಕ್ಕುಮ್” -ನಿಂದ ಪ್ರಾರಂಭವಾಗಿರುವಂತೆ ಕರುಣಾಮಯವಾಗಿ ವಿವರಿಸುತ್ತಿದ್ದಾರೆ.
ಆ ಪ್ರಬಂಧಕ್ಕೂ ಈ ಪ್ರಬಂಧಕ್ಕೂ ಬಹಳ ವ್ಯತ್ಯಾಸವಿದೆ.
“ಅವು ಯಾವುವು?” ಎಂದು ಕೇಳಿದಾಗ,
ತಿರುವಾಶಿರಿಯಂ ಅನ್ನು ಆಶಿರಿಯಪ್ಪಾ ದಲ್ಲಿ ರಚಿಸಲಾಗಿದೆ (ತಮಿಳಿನಲ್ಲಿನ ಒಂದು ರೀತಿಯ ಕವಿತೆ ನಿಯಮ) ಇದು ಸಾಲುಗಳ ಸಂಖ್ಯೆ ಇತ್ಯಾದಿಗಳ ಮೇಲೆ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿಲ್ಲ. ಶ್ವೇತಾಶ್ವತರ ಉಪನಿಷತ್ “ಸಂಸಾರ ಬಂಧ ಸ್ಥಿತಿ ಮೋಕ್ಷ ಹೇತು” (ಬಂಧನ ಮತ್ತು ಮುಕ್ತಿ ಎರಡಕ್ಕೂ ಕಾರಣ) ದಲ್ಲಿ ಹೇಳಿರುವಂತೆ ಬಂಧಂ (ಬಂಧನ) ಮತ್ತು ಮೋಕ್ಷಂ (ವಿಮೋಚನೆ)ಗೆ ಸಾಮಾನ್ಯ ಕಾರಣವಾದ ಪ್ರಥಮ ಪರ್ವದ ಬಗ್ಗೆಯೂ ಹೇಳಲಾಗಿದೆ. ಸ್ಕಂದ ಪುರಾಣಂ “ಸಿದ್ಧಿರ್ ಭವತಿವಾನೇತಿ ಸಂಶಯೋಚ್ಚುತ ಸೇವಿನಾಮ್” (ಅಚ್ಯುತನನ್ನು ಆರಾಧಿಸುವವರು ತಮ್ಮ ಇಷ್ಠಾರ್ಥಗಳ ಯಶಸ್ಸು ಅಥವಾ ವೈಫಲ್ಯದ ಬಗ್ಗೆ ಚಿಂತಿಸುತ್ತಾರೆ), ತಿರುವಾಯ್ಮೊಳಿ 3.2.1 “ಅನ್ನಾಳ್ ನೀ ತಂದ ಆಕ್ಕೈ” (ಸೃಷ್ಟಿಯ ಸಮಯದಲ್ಲಿ ನೀವು ನೀಡಿದ ದೇಹ) ಮತ್ತು ತಿರುವಾಯ್ಮೊಳಿ 10.7.10 “ಮಂಗವೊಟ್ಟು ಉನ್ ಮಾಮಾಯೈ” (ನಿನ್ನ ಈ ಮಹಾನ್ ಪ್ರಕೃತಿ (ನನ್ನ ದೇಹ) ನಾಶವಾಗಲಿ).
ಆದರೆ, ಈ ಸಪ್ತ ಗಾಧೈಯು ವೆಣ್ಬಾ-ದಲ್ಲಿದೆ, ಇದು ಸಾಲುಗಳ ಸಂಖ್ಯೆಗೆ ನಿಯಮಗಳನ್ನು ಹೊಂದಿದೆ. ಅಲ್ಲದೆ, ಛಾನ್ದೋಗ್ಯ ಉಪನಿಷತ್ “ತಮಸ:ಪರಂ ದರ್ಶಯತಿ ಆಚಾರ್ಯಸ್ತು ತೇ ಗತಿಮ್ ವಕ್ತಾ” (ಈಗ, ನಿಮ್ಮ ಆಚಾರ್ಯರು ಮೋಕ್ಷಕ್ಕಾಗಿ ಸೂಚನೆಗಳನ್ನು ನೀಡುತ್ತಾರೆ) ನಲ್ಲಿ ಹೇಳಿರುವಂತೆ ಇದು ಚರಮ ಪರ್ವವನ್ನು ಸಮರ್ಪಕವಾಗಿ ಪ್ರಸ್ತುತಪಡಿಸುತ್ತದೆ. “ನ ಸಂಶಯೋಸ್ತಿ ತದ್ ಭಕ್ತ ಪರಿಚರ್ಯಾರತಾತ್ಮನಾಮ್” (ಭಗವಾನನ ಭಕ್ತರ ಸೇವೆಯು ನಿಸ್ಸಂದೇಹವಾಗಿ ಅಪೇಕ್ಷಿತ ಫಲಿತಾಂಶವನ್ನು ಪಡೆಯುತ್ತದೆ), ಮತ್ತು ಪ್ರಮೇಯ ಸಾರಂ 9 ರ, “ನಿಧಿಯಾಲ್ ವಂಧಿಪ್ಪಾರ್ಕ್ಕುಂಡು ಇಳಿಯಾವಾನ್” (ಆಚಾರ್ಯರನ್ನು ಸರಿಯಾಗಿ ಪೂಜಿಸುವವರು ಶ್ರೀವೈಕುಂಠವನ್ನು ಪಡೆಯುತ್ತಾರೆ, ಅಲ್ಲಿ ಪುನರ್ಜನ್ಮವಿಲ್ಲ).
ಪರ್ಯಾಯವಾಗಿ, ಆಂಡಾಳ್ ಅವರ ದೈವಿಕ ಮಾತುಗಳಿಂದ ಬೆಂಬಲಿತವಾಗಿದೆ [ಆಂಡಾಳ್ ಅವರು ನಾಚಿಯಾರ್ ತಿರುಮೊಳಿಯ 10.10 ರಲ್ಲಿ ಹೇಳಿದಂತೆ] “ವಿಟ್ಟುಚಿತ್ತರ್ ತಂಗಳ್ ದೇವರೈ ವರುವಿಪ್ಪರೈ ಅದು ಕಾಂಡುಮೇ” (ಶ್ರೀವಿಲ್ಲಿಪುತ್ತೂರಿನ ಮುಖ್ಯಸ್ಥರಾದ ಪೆರಿಯಾಳ್ವಾರ್ ಅವರು ತಮ್ಮ ಅಧೀನದಲ್ಲಿರುವ ಎಂಪೆರುಮಾನ್ನನ್ನು ತಮಗೆ ಸಾಧ್ಯವಿರುವ ರೀತಿಯಲ್ಲಿ ಆಹ್ವಾನಿಸಿದರೆ), ಈ ಪ್ರಬಂಧದಲ್ಲಿ, ಇದು ನಾಲ್ಕನೇ ವಾಕ್ಯದ ಸಾಂದ್ರೀಕೃತ ರೂಪವಾಗಿದೆ (ಶ್ರೀಮತೇ ರಾಮಾನುಜಾಯ ನಮ:) ವಾಕ್ಯ ಗುರುಪರಂಪರೈಯಲ್ಲಿ (ಅಸ್ಮತ್ ಗುರುಭ್ಯೋ ನಮ: … ಶ್ರೀಧರರಾಯ ನಮ:), ಮೊದಲ ವಾಕ್ಯವನ್ನು (ಅಸ್ಮತ್ ಗುರುಭ್ಯೋ ನಮ:) ಅನುಕ್ರಮವಾಗಿ ವಿವರಿಸಲಾಗಿದೆ.
1ನೇ ಅಕ್ಷರ “ಅಸ್” ಅನ್ನು ಮೊದಲ ಸಾಲಿನ “ಅಂಬೋನ್ ಅರಂಗರ್ಕ್ಕುಮ್” ಮತ್ತು ಮೊದಲ ಪಾಸುರಂನಲ್ಲಿ ವಿವರಿಸಲಾಗಿದೆ.
2ನೇ ಅಕ್ಷರ “ಮತ್” ವನ್ನು ಪಾಸುರಂ “ಅಂಜು ಪೊರುಳುಂ ಅಳಿತ್ತವನ್” ನಲ್ಲಿ ವಿವರಿಸಲಾಗಿದೆ.
3ನೇ ಅಕ್ಷರ “ಗು” ಅನ್ನು ಪಾಸುರಂ “ಪಾರ್ತ ಗುರು” ನಲ್ಲಿ ವಿವರಿಸಲಾಗಿದೆ.
4ನೇ ಅಕ್ಷರ “ರುಭ್” ಅನ್ನು ಪಾಸುರಂ “ಒರು ಮಂದಿರತ್ತಿನ್” ನಲ್ಲಿ ವಿವರಿಸಲಾಗಿದೆ
5ನೇ ಅಕ್ಷರ “ಯೋ” ಅನ್ನು ಪಾಸುರಂ “ಎನ್ ಪಕ್ಕಲ್ ಓದಿನಾರ್” ನಲ್ಲಿ ವಿವರಿಸಲಾಗಿದೆ.
6ನೇ ಅಕ್ಷರ “ನ” ಅನ್ನು “ಅಂಬೋನರಂಗಾ” ಮತ್ತು 6 ನೇ ಪಾಸುರಂನಲ್ಲಿ ವಿವರಿಸಲಾಗಿದೆ.
7ನೇ ಅಕ್ಷರ “ಮ” ವನ್ನು 7 ನೇ ಪಾಸುರಂನಲ್ಲಿ “ಸೇರುವರೇ ಅಂದಾಮಂದಾನ್” ನಲ್ಲಿ ವಿವರಿಸಲಾಗಿದೆ.
ಶ್ರೀ ರಾಮಾಯಣವು 24 ಅಕ್ಷರಗಳನ್ನು ಹೊಂದಿರುವ ಗಾಯತ್ರಿ ಛಂದಸ್ಸಿನ ಆಧಾರದ ಮೇಲೆ 24೦೦೦ ಶ್ಲೋಕಗಳನ್ನು ಹೊಂದಿರುವಂತೆ, ಈ ಪ್ರಬಂಧವು ಆ 7 ಅಕ್ಷರಗಳನ್ನು 7 ಪಾಸುರಗಳಾಗಿ ವಿಸ್ತರಿಸುತ್ತದೆ.
ಶ್ರೀ ಮಧುರಕವಿಗಳು ಮತ್ತು ವಡುಗ ನಂಬಿ ಅವರು ತಮ್ಮ ಮಾತುಗಳು ಮತ್ತು ಕ್ರಿಯೆಗಳ ಮೂಲಕ ಚರಮ ಪರ್ವವನ್ನು ಸರಿಯಾಗಿ ಪ್ರಸ್ತುತಪಡಿಸಿದಂತೆಯೇ, ವಿಲಾಂಶೋಲೈ ಪಿಳ್ಳೈ ಅವರು ತಮ್ಮ ಮಾತುಗಳು ಮತ್ತು ಕಾರ್ಯಗಳಿಂದ ಅದನ್ನು ಸ್ಪಷ್ಟಪಡಿಸುತ್ತಿದ್ದಾರೆ.
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ : https://divyaprabandham.koyil.org/index.php/2022/12/saptha-kadhai-introduction-1/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org