ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:
ಶ್ಲೋಕ- 41 – ಈ ಶ್ಲೋಕದಲ್ಲಿ ದ್ವಜಾದಿಯೆಲ್ಲಾ ರೀತಿಯಲ್ಲಿರುವ ಹಾಗು ಪರಿಪಕ್ವವಾಗಿರುವ ಫಲದ ಹಾಗೆ ಎಮ್ಪೆರುಮಾನಿಗೆ ತುಂಬಾ ಪ್ರಿಯವಾಗಿರುವ ಪೆರಿಯ ತಿರುವಡಿ(ಗರುಡಾಲ್ವಾನ್) ಹಾಗು ಎಮ್ಪೆರುಮಾನಿನ ***
ದಾಸಸ್ ಸಖಾ ವಾಹನಮಾಸನಮ್ ದ್ವಜೋ
ಯಸ್ತೇ ವಿತಾನಮ್ ವ್ಯಜನಮ್ ತ್ರಯೀಮಯಃ |
ಉಪಸ್ಥಿತಮ್ ತೇನ ಪುರೋ ಗರುತ್ಮತಾ
ತ್ವಧಂಗ್ರಿ ಸಮ್ಮರ್ದ ಕಿನಾಂಕ ಶೋಭಿನಾ ||
ವೇದವನ್ನು ತನ್ನ ಅಂಗಗಳಾಗಿ ಹೋಂದಿರುವ, ನಿನ್ನ ದಾಸನಾಗಿ, ಸಖನಾಗಿ, ವಾಹನವಾಗಿ, ಸಿಂಹಾಸನವಾಗಿ, ದ್ವಜವಾಗಿ, ಮೇಲುಕಟ್ಟಾಗಿ(ವಿತಾನವಾಗಿ), ಚಾಮರವಾಗಿರುವ ಹಾಗು ನಿನ್ನ ಪಾದಗಳು ಊರಿದರಿಂದ ಜಿಡ್ಡುಗಟ್ಟಿದ ಗುತ್ತಿನಿಂದ ಕಂಗೊಳಿಸುತ್ತಿರುವ ಗರುಡಾಲ್ವಾನಿಂದ ಸೇವಿತನಾಗಿರುವಿರಿ.
ಶ್ಲೋಕ- 42 – ಆಳವಂದಾರ್ ಎಮ್ಪೆರುಮಾನ್ ತನ್ನ ಎಲ್ಲಾ ಜವಬ್ದಾರಿಗಳನ್ನು ವಿಶ್ವಕ್ಸೇನರಲ್ಲಿ ಇಟ್ಟು ತನನ್ನೂ ಅವರ ಅದೀನದಲ್ಲಿ ಇಟ್ಟಿರುವಂತಹ ಶ್ರೀ ಸೇನಾಪತಿ ಆೞ್ವಾನಿನ ದಾಸ್ಯ ಸಾಂರಾಜ್ಯವನ್ನು ಅನುಭವಿಸುತಿದ್ದಾರೆ.
ತ್ವದೀಯಭುಕ್ತೋಜ್ಜಿತಶೇಷಭೋಜಿನಾ
ತ್ವಯಾ ನಿಸ್ರುಶ್ಟಾತ್ಮಭರೇಣ ಯದ್ಯತಾ |
ಪ್ರಿಯೇಣ ಸೇನಾಪತಿನಾ ನ್ಯವೇದಿ ತತ್
ತದಾ$ನುಜಾನನ್ತಮುದಾರವೀಕ್ಷಣೈಃ ||
ನಿನ್ನಿಂದ ಊಟಮಾಡಿ ಬಿಟ್ಟ ಪಾತ್ರವಾನು ಭುಜಿಸುವವರಾಗಿ, ಲೀಲ ವಿಭೂತಿಹಾಗು ನಿತ್ಯ ವಿಭೂತಿಗಳ ನಿರ್ವಾಹಭಾರವನ್ನು ನಿಮ್ಮಿಂದ ಸ್ವೀಕರಿಸುವವರಾಗಿ, ಎಲ್ಲರಿಗು ಪ್ರಿಯರಾಗಿರುವವರಾಗಿ, ಮಾಡಬೇಕಾದ ಕಾರ್ಯಗಳಿಗೆ ನಿಮ್ಮ ಕಟಾಕ್ಷದಿಂದ ಒಪ್ಪಿಗೆಯನ್ನು ಪಡೆದು, ಮಾಡಲೂಶಕ್ತರಾಗಿ ವಿಶ್ವಕ್ಸೇನರು ಇರುವರು.
ಶ್ಲೋಕ-43 – ಆಳವಂದಾರ್ “ಸದಾ ಪಶ್ಯಂತಿ ಸೂರಯಃ ( ನಿತ್ಯ ಸುರಿಗಳು ಸದಾ ಎಮ್ಪೆರುಮಾನನ್ನೇ ನೋಡುತಿದ್ದಾರೆ)” ಎಂದು ವಿಷ್ಣು ಸೂಕ್ತದಲ್ಲಿ ಹೇಳಿದಂತೆ ನಿತ್ಯಸೂರಿಗಳ ಶೇಷವೃತ್ತಿಯನ್ನು(ಕೈಂಕರ್ಯವನ್ನು) ಅನುಭವಿಸುತಿದ್ದಾರೆ ಹಾಗು ಅವರ ಪ್ರಾರ್ಥನೆ , “ಅಡಿಯಾರ್ಗಳ್ ಕುೞಾನ್ಗಳೈ ಉಡನ್ ಕೂಡವದು ಎನ್ಱು ಕೊಲೋ?( ತಿರುವಾಯ್ಮೊೞಿ 2.3.10 ನಿತ್ಯಸೂರಿಗಳ ಘೋಷ್ಟಿಯನ್ನು ನಾನು ಎಂದು ಸೇರುವೆನೋ)”ಯಲ್ಲಿ ಹೇಳಿದಂತಿದೆ.
ಹತಾಖಿಲಕ್ಲೇಶಮಲೈಃ ಸ್ವಭಾವತಃ
*ಸದಾನುಕೂಲ್ಯೈಕರಸೈಸ್ ತವೋಚಿತೈಃ |
ಗ್ರುಹೀತತತ್ತತ್ಪರಿಚಾರಸಾದನೈಃ
ನಿಶೇವ್ಯಮಾಣಮ್ ಸಚಿವೈರ್ ಯತೋಚಿತಮ್ ||
ತ್ವದಾನುಕೂಲ್ಯೈಕ ಎಂಬ ಪಾಠವೂ ಇದೆ.
(ಸ್ವಭಾವತಃ) ದುಃಖ-ದೋಶರಹಿತರು, ಸ್ವಾಭಾವಿಕವಾಗಿಯೇ (ನಿಮಗೆ) ಕೈಂಕರ್ಯವೇ ತಮ್ಮ ಆನಂದವಾಗಿ ಹೋಂದಿದವರು, (ಸ್ವರೂಪ-ಶಕ್ತಿಗಳಲ್ಲಿ) ನಿಮಗೆ ತಕ್ಕವರು, ಕೈಂಕರ್ಯಕ್ಕೆ ಅಪೇಕ್ಷಿತವಾದ ಪುಶ್ಪಹಾರ, ಧೂಪ ದೀಪಾದಿಗಳನ್ನು ಹಿಡಿದು ಹಾಗು ನಿಮಗೆ (ತಕ್ಕ ಸಂಬಂಧದ ಬಗ್ಗೆ ಹಾಗು ಕಾರ್ಯಗಳ ಬಗ್ಗೆ) ಬೋಧಿಸುವ (ತಮ್ಮ / ನಿಮ್ಮ ) ಸ್ವರೂಪಕ್ಕೆ ತಕ್ಕ ರೀತಿಯಲ್ಲಿ ಸೇವಿತರಾಗಿದ್ದೀರಿ.
ಶ್ಲೋಕ- 44 – “ಭವಾಂಸ್ತು ಸಹ ವೈದೇಹ್ಯಾ ಗಿರಿಸಾನುಷು ರಂಸ್ಯತೇ ( ನೀವು ಸೀತೆಯೋಂದಿಗೆ ಮಲೆಗಳ ತಾಳ್ವರೆಗಳಲ್ಲಿ ಅನುಭವಿಸಿ, ನಾನು ನಿಮ್ಮಿಬರಿಗೂ ಎಲ್ಲಾ ರೀತಿಯಲ್ಲು ಸೇವಿಸುವೆ )” ಎಂದು ಶ್ರೀರಾಮಾಯಣದ ಅಯೋಧ್ಯಾ ಖಾಂಡದ 31.25ದಲ್ಲಿ ಹೇಳಿದಂತೆ ಆಳವಂದಾರ್ ಎಮ್ಪೆರುಮಾನ್ ಪಿರಾಟ್ಟಿಯನ್ನು ವಿವಿದ ರೀತಿಯಲ್ಲಿ ಸಂತೋಷಪಡಿಸುವುದನ್ನು ಅನುಭವಿಸಲು ಇಚ್ಛಿಸುತಿದ್ದಾರೆ.
ಅಪೂರ್ವ ನಾನಾರಸ ಭಾವ ನಿರ್ಭರ
ಪ್ರಬುದ್ಧಯಾ ಮುಗ್ದ ವಿಧಗ್ಧಲೀಲಯಾ |
ಕ್ಷಣಾಣುವತ್ ಕ್ಷಿಪ್ತಪರಾದಿಕಾಲಯಾ
ಪ್ರಹರ್ಷಯನ್ತಮ್ ಮಹಿಷೀಮ್ ಮಹಾಭುಜಮ್ ||
( ಪೆರಿಯ ಪಿರಾಟ್ಟಿಯನ್ನು ಆಲಂಗಿಸಲು ಸೂಕ್ತವಾದ ) ಮಹಾಭುಜಗಳನ್ನು ಹೋಂದಿರುವವನು, ಪ್ರತಿಕ್ಷಣವು ಅನುಭಾವ್ಯವಾಗಿ ಹಾಗು ನವೀನವಾಗಿತೋರುವ ರೀತಿಯ ವಿಭ್ರಮದ ಲೀಲೆಗಳಿಂದ ಬ್ರಹ್ಮನ ಆಯುಶ್ಶು ಕ್ಷಣದಹಾಗೆ ಕಳಿಯುವಂತೆ ಪೆರಿಯಪಿರಾಟ್ಟಿಯನ್ನು ಸಂತೋಷಪಡಿಸುತಿದ್ದಾನೆ.
ಶ್ಲೋಕ-45 – ಆಳವಂದಾರ್ ಪಿರಾಟ್ಟಿಗೆ ಆನಂದದಾಯಕಗಳಾದ ಅನುಭಾವ್ಯವಾದ ಗುಣಂಗಳಿಗೆ ಆಶ್ರಯವಾದ ದಿವ್ಯ ವಿಗ್ರಹವನ್ನು ಅನುಭವಿಸುತಿದ್ದಾರೆ.
ಅಚಿನ್ತ್ಯ ದಿವ್ಯಾದ್ಭುತನಿತ್ಯಯೌವನ
ಸ್ವಭಾವಲಾವಣ್ಯಮಯಾಮ್ರುತೋದದಿಮ್ |
ಶ್ರಿಯಃ ಶ್ರಿಯಮ್ ಭಕ್ತಜನೈಕಜೀವಿತಮ್
ಸಮರ್ಥಮಾಪತ್ಸಖಮರ್ತಿಕಲ್ಪಕಮ್ ||
ಎಮ್ಪೆರುಮಾನ್ ಆಲೋಚನೆಗೆ ಮೀರಿದ ದಿವ್ಯ ಅದ್ಭುತ ನಿತ್ಯ ಯೌವನವನ್ನು ಉಳ್ಳವನು, ಲಾವಣ್ಯ(ಸೌಂದರ್ಯ) ಸಾಗರವಾದವನು, ಶ್ರೀಯಿಗೂ (ಶ್ರೀಮಹಾಲಕ್ಷ್ಮೀಗೂ ) ಶ್ರೀಯಾಗಿದ್ದವನು, ಭಕ್ತರಿಗೆ ಪ್ರಾಣನು, (ಮುಗ್ಧರಿಂದಲೂ ತನ್ನನ್ನು ಸ್ವಲ್ಪ-ಸ್ವಲ್ಪವೇ ಅನುಭವಿಸುವಂತೆ ಮಾಡುವುದರಲ್ಲಿ) ಸಮರ್ಥನು, ಆಪತ್ಸಖನು ಹಾಗು ಯಾಚಿಸುವವರಿಗೆ(ಕೇಳುವವರಿಗೆ) ಕಲ್ಪವೃಕ್ಷದಂತಿರುವನು …
ಶ್ಲೋಕ-46 – ಆಳವಂದಾರ್ ಎಂದು ನಾನು ಲೌಕಿಕ ವಿಷಯಗಳಲ್ಲಿ ಸಂಗವನ್ನು ಬಿಟ್ಟು ಹಿಂದೆ (ಶ್ಲೋಕ 32ಯರಿಂದ) ಹೆಳಲ್ಪಟ್ಟ ಸ್ವರೂಪ, ರೂಪ, ಗುಣ ವಿಭೂತಿಯುಕ್ತರಾದ ನಿಮಗೆ ಆನಂದಿಸುವಂತೆ ನನ್ನ ಅರುವಿಕೆಗೆ ಸಾರ್ತಕತೆಯನ್ನು ತರುವಂತೆ ಕೈಂಕರ್ಯವನ್ನು ಮಾಡುವೆ ?
ಭವಂತಮೇವಾನುಚರನ್ ನಿರಂತರಂ
ಪ್ರಶಾನ್ತ ನಿಶ್ಶೇಷ ಮನೋರತಾನ್ತರಃ |
ಕದಾ£ಹಮೈಕಾನ್ತಿಕ ನಿತ್ಯ ಕಿನ್ಕರಃ
ಪ್ರಹರ್ಶಯಿಶ್ಯಾಮಿ ಸನಾತಜೀವಿತಃ ||
ಅಡಿಯೇನ್ ಎಂದು ಬೆರೆಲ್ಲಾ ವಿಷಯ ಪ್ರಾವಣ್ಯವನ್ನು ನಿಶ್ಶೇಷವಾಗಿ ಬಿಟ್ಟು, ಸದಾ ನಿಮ್ಮನ್ನೆ ಅನುಸರಿಸಿಕೊಂಡು ನಿತ್ಯಕೈಂಕರ್ಯದಿಂದ ಸಂತೋಷಗೊಳಿಸಿ ಸಾರ್ಥಕನಾಗುವೆ ?
ಶ್ಲೋಕ-47 – ಈ ಶ್ಲೋಕದಲ್ಲಿ ಆಳವಂದಾರ್ ಪ್ರಾಪ್ಯನಾದ ವಿಲಕ್ಷಣವಾದ ಈಶ್ವರನನ್ನು ತಮ್ಮ ಹಿಂದಿನ ಸ್ಥಿತಿಯನ್ನು ಕಂಡು, ” ಬ್ರಹ್ಮ ರುದ್ರಾದಿಗಳ ಮನಸಿಗೂ ದೂರವದಂತಹದ್ದು ಹಾಗು ಸಂಸಾರಿಕ ವಿಷಯಗಳಿಂದ ಅಸ್ಪೃಷ್ಟರಾದ ನಿತ್ಯಸೂರಿಗಳಿಂದ ಇಚ್ಛಿಸಲ್ಪಡುವ ಕೈಂಕರ್ಯವನ್ನು ಸಂಸಾರಿಯಾದ ನಾನು ಹೇಗೆ ಇಚ್ಛಿಸುವೆನು?”. ರಾಜ ಭೋಗವಾದದ್ದು ವಿಷದಿಂಶ ಕಲುಶಿತವಾಗಬಹುದೆ ! ಹಾಗು “ವೞವೇೞುಲ್ಗು”ನಲ್ಲಿ ಆೞ್ವಾರಿನ ಹಾಗೆ ತಮ್ಮನ್ನು ನಿಂಡ್ಗಿಸಿಕೊಳುತಿದ್ದಾರೆ.
ಧಿಗಶುಚಿಮವಿನೀತಮ್ ನಿರ್ದಯಮ್ ಮಾಮಲಜ್ಜಂ
ಪರಮಪುರುಷ! ಯೋ£ಹಮ್ ಯೋಗಿವರ್ಯಾಗ್ರಗಣ್ಯೈಃ |
ವಿದಿಶಿವಸನಕಾದ್ಯೈರ್ ದ್ಯಾತುಮತ್ಯಂತ ದೂರಮ್
ತವ ಪರಿಜನಭಾವಮ್ ಕಾಮಯೇ ಕಾಮವೃತ್ತಃ ||
ಓ ಪುರುಷೋತ್ತಮ! ನನ್ನ ಸ್ವೆಚ್ಛೆಯಂತೆ ನಡೆದುಕೊಳ್ಳುವುದಲ್ಲಿ ವಿಖ್ಯಾತನಾಗಿರುವವನು ಅಶುದ್ಧನು, ವಿನಯರಹಿತನು, ದಯಾರಿಹತನು, ಲಾಜ್ಜಾ ರಹಿತನಾದ ನಾನು ನನ್ನನ್ನು ನಿಂದಿಸಿಕೊಳ್ಳಬೇಕು, ಆದರೂ ಯೋಗಿಶ್ರೇಷ್ಠರಾದ ಬ್ರಹ್ಮ, ಶಿವ, ಸನಕಾದಿಗಳಿಂದಲೂ ಅಚಿಂತ್ಯವದ ನಿನ್ನ ಸೇವೆಯನ್ನೆ ಇಚ್ಛಿಸುತಿದ್ದೇನೆ.
ಶ್ಲೋಕ- 48 – ಆಳವಂದಾರ್ ತಮ್ಮ ಪಾಪಗಳನ್ನು ಕಳಿಸಿ ಕರುಣೆಯಿಂದ ಸ್ವೀಕರಿಸಬೇಕು. ಅಥವಾ ಇನ್ನೋಂದು ನಿರ್ವಾಹವು, “ನನಗೆ ಪ್ರಾಪ್ಯ ವಿರೋಧಿಯಾದ ಪಾಪಗಳನ್ನು ನೀವೆ ಕಳಿಸಬೇಕು.”, ಎಂದು ಆಳವಂದರ್ ಪ್ರಾಥಿಸುತಿದ್ದಾರೆ. ಮುಂಚೆ ಎಮ್ಪೆರುಮಾನಿನ ಉತ್ಕರ್ಷವನ್ನು ಕಂಡು ಎಮ್ಪೆರುಮಾನಿಂದ ದೂರ ಸರಿದರು, ಈಗ ಎಮ್ಪೆರುಮಾನಿನ ಅತ್ಯಂತ ಸೌಲಭ್ಯವನ್ನು ಚಿಂತಿಸಿ ಆಶ್ರಯಿಸುತಿಡ್ದಾರೆ.
ಅಪರಾದಸಹಸ್ರಭಾಜನಮ್
ಪತಿತಮ್ ಭೀಮಭವಾರ್ಣವೋದರೇ |
ಅಗತಿಮ್ ಶರಣಾಗತಮ್ ಹರೇ!
ಕ್ರುಪಯಾ ಕೇವಲಮಾತ್ಸಮಾತ್ ಕುರು ||
ಶೋಕವನ್ನು ಹರಿಸುವವನೆ ! ಅಸಂಖ್ಯವಾದ ಅಪರಾದಗಳ ಭಾಜನಾದವನು, ಭೀತಿಯನ್ನು ಜನಿಸುವ ಸಂಸಾರ ಸಾಗರದಲ್ಲಿ ಬಿದ್ದಿರುವವನು, ಇನ್ನೊಂದು ಗತಿಯಿಲ್ಲದವನು, ನಿಮ್ಮ ಶರಣಾಗತನೆಂದು ಘೋಷಿಸುತಿದ್ದೇನೆ, ನಿಮ್ಮ ಕರುಣೆಯಿಂದಲೇ ನಿಮ್ಮವನೆಂದು ಅಂಗೀಕರಿಸಬೇಕು.
ಶ್ಲೋಕ- 49 – “ನೀವು ದೋಷಭೂರಿಷ್ಟರಾಗಿರುವಾಗ ಅವ್ನ್ನು ನಶಿಸುವ ಉಪಯವನ್ನು ಆಚಿರುಸುವುದಲ್ಲದೆ, ಅಥವಾ ಎಲ್ಲವನ್ನು ಬಿಟ್ಟು ನನ್ನನ್ನೆ ಹಿಡಿಯುವುದಲ್ಲದೆ “ಕೃಪಯಾಕೇವಲಮತ್ಮ್ಸಾತ್ಕುರು”ಎಂದು ನಿರ್ಬಂದಿಸುತಿದ್ದೀರಿ?” ಎಂದು ಎಮ್ಪೆರುಮಾನ್ ಆಳವಂದಾರನ್ನು ಕೇಳುತಿದ್ದಾರೆ. “ನಾನು ಶಾಸ್ತ್ರಾನುಷ್ಠಾನಕ್ಕೆಬೇಕಾದ ಜ್ಞಾನರಹಿತನು (ಆದರಿಂದ ಉಪಯಾಂತರಸಂಗವಿಲ್ಲ), ಇನ್ನೋಂದು ಗತಿಯಿಲ್ಲದ ನನ್ನಿನ್ನಿಮ್ದ ಪುರ್ಣವಾಗಿ ತಜಿಸಲು ಸಾದ್ಯವಿಲ್ಲ. ಆದರಿಂದ ನಿಮ್ಮ ಮಹತ್ತಾದ ದಯೆಯಿಂದ ವಿಶೇಷ ಕಟಾಕ್ಷವೇ ನನ್ನ ಉಜ್ಜೇವನಕ್ಕೆ ಸಾದನವಾಗಿದೆ.”ಎಂದು ಉತ್ತರಿಸುತಿದ್ದಾರೆ.
ಅವಿವೇಕ ಘನಾನ್ತ ಧಿಂಗ್ಮುಖೆ
ಬಹುದಾ ಸಂತತ ದುಃಖವರ್ಷಿಣಿ |
ಭಗವನ್! ಭವದುರ್ದಿನೇ ಪದಃ
ಸ್ಕಲಿತಮ್ ಮಾಮವಲೋಕಯಾಚ್ಯುತ ||
ಜ್ಞಾನ ಶಕ್ತ್ಯಾದಿಗಳಿಂದ (ಶಡ್ಗುಣಗಳಿಂದ) ಕೂಡಿರುವ ಭಗವಾನೆ! ನಿನ್ನ ಭಕ್ತರನ್ನು ತ್ಯಜಿಸದವನೇ! ದುಃಖಗಲನ್ನು ಸತತವಾಗಿ ವರ್ಷಿಸುವ ದಿಕ್ಕಕಳನ್ನು ಕಣ್ಮರೆಸುವ ಸಂಸಾರದ ವರ್ಷಾಕಾಲದ ಅಂಧಕಾರದಿಂದ ಸುಪಥದಿಂದ ಬೀಳುತ್ತಿರುವ ನನ್ನನ್ನು ನಿಮ್ಮ ಕಟಾಕ್ಷ ವಿಶೇಷದಿಂದ ಅನುಗ್ರಹಿಸಬೇಕು.
ಶ್ಲೋಕ- 50 – “ನನಗೆ ನಿಮ್ಮ ಕರುಣೆಯಲ್ಲದೆ ಇನ್ನೊಂದು ಗತಿಯಿಲ್ಲದಹಾಗೆಯೆ ನಿಮ್ಮ ಕರುಣೆಗೆ ನನಗಿಂತ ಸೂಕ್ತಪಾತ್ರರು ಬೇರೆಯಾರು ಯಿಲ್ಲ ಆದರಿಂದ ಈ ಅವಕಾಶವನ್ನು ಕಳೆದುಕೋಳ್ಳಬೇಡಿ” ಎಂದು ಆಳವಂದಾರ್ ಹೇಲುತಿದ್ದಾರೆ.
ನ ಮ್ರುಶಾ ಪರಮಾರ್ತಮೇವ ಮೇ
ಶ್ರುಣು ವಿಜ್ಞಾಪನಮೇಕಮಗ್ರತಃ |
ಯದಿ ಮೇ ನ ದಯಿಶ್ಯಸೇ ತತೋ
ದಯನೀಯಸ್ ತವ ನಾಥ ದುರ್ಲಭಃ ||
ಓ ಭಗವಾನ್, ನನ್ನ (ಈ) ವಿಜ್ಞಾಪನೆಯನ್ನು ದಯೆಮಾಡಿ ಕೇಳಬೇಕು; (ಈ ವಿಜ್ಞಾಪನೆಯು) ಸುಳ್ಳಲ್ಲಾ, ಇದುಸತ್ಯವೇ, ನನಗೆ ನಿಮ್ಮ ಕರುಣೆಯನ್ನು ತೋರದಿದಲ್ಲಿ, ನಿಮ್ಮ ದಯೆಗೆ ನನಗಿಂತಲೂ ಸೂಕ್ತರಾದ ಪಾತ್ರರು ಸಿಗುವುದಿಲ್ಲ.
ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್
ಮೂಲ – http://divyaprabandham.koyil.org/index.php/2020/10/sthothra-rathnam-slokams-41-to-50-simple/
ಆರ್ಕೈವ್ ಮಾಡಲಾಗಿದೆ : http://divyaprabandham.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org