ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 41 ರಿಂದ 50

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-41 (ಕೈಯಾರುಮ್ ಚಕ್ಕರತ್ತೋನ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿಂದ ಸಂಸಾರಿಗಳನ್ನು ತಿದ್ದಲು ,ಅವರನ್ನು(ಆೞ್ವಾರನ್ನು) ನಿರ್ಹೇತುಕವಾಗಿ ಸ್ವೀಕರಿಸಿದ್ದದನ್ನು ಕಂಡು ಆಶ್ಚರ್ಯಚಕಿತರಾದದ್ದನ್ನು ಅನುವದಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಕೈಯಾರುಮ್ ಚಕ್ಕರತ್ತೋನ್ ಕಾದಲ್ ಇನ್ರಿಕ್ಕೇ ಇರುಕ್ಕಪ್
ಪೊಯ್ಯಾಗಪ್ ಪೇಸುಮ್ ಪುಱನ್ ಉರೈಕ್ಕು – ಮೆಯ್ಯಾನ
ಪಟ್ರೈ ಉಪಗರಿತ್ತ ಪೇರ್ ಅರುಳಿನ್ ತನ್ಮೈದನೈಪ್
ಪೋಟ್ರಿನನೇ ಮಾರನ್ ಪೊಲಿನ್ದು.

ಆೞ್ವಾರ್ ಕೃಪೆಯಿಂದ ವಿದೀಪ್ತವಾಗಿ “(ಎಮ್ಪೆರುಮಾನಿನ ವಿಷಯದಲ್ಲಿ)ನನಗೆ ಭಕ್ತಿಯಿಲ್ಲದ ವಂಚಿಸುವ ಮಿಂಚುವ ಶಬ್ದಗಳಿಂದ ಮಾತನಾಡುವಾಗ, ತನಗೆ ನಿಜವಾದ ಫಲವನ್ನು ನೀಡುವ ಗುಣವಿದೆ ಎಂದು ಹೇಳಿದರು.

ಪಾಸುರ-42(ಪೊಲಿಗ ಪೊಲಿಗ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ 4.10 “ಒನ್ಱುಮ್ ದೇವುಮ್” ಪದಿಗದ ಉಪದೇಶವನ್ನು ಕೇಳಿ , ತಿದ್ದಲ್ಪಟ್ಟವರಿಗೆ ಮಂಗಳಾಶಾಸನವನ್ನು ಮಾಡುತಿದ್ದಾರೆ ಹಾಗು ಹಲವಾರು ಜನರನ್ನು ತಿದ್ದುತ್ತಾರೆ
ಪೊಲಿಗ ಪೊಲಿಗ ಎನ್ಱು ಪೂಮಗಳ್ಕೊನ್ ತೊಣ್ಡರ್
ಮಲಿವುದನೈಕ್ ಕಣ್ಡುಗನ್ದು ವಾೞ್ತ್ತಿ – ಉಲಗಿಲ್
ತಿರುನ್ದಾದಾರ್ ತಮ್ಮೈತ್ ತಿರುತ್ತಿಯ ಮಾಱನ್ ಸೊಲ್
ಮರುಣ್ದಾಗಪ್ ಪೋಗುಮ್ ಮನಮಾಸು

ಶ್ರಿಮನ್ನಾರಾಯಣನ ಭಕ್ತರಿಂದ (ವಿಶ್ವವು) ಭರಿತಿರುವುದನ್ನು ಕಂಡು ಆನಂದದಿಂದ “ಆಯುಶ್ಮಾನ್ಭವ! ಆಯುಶ್ಮಾನ್ಭವ!” ಎಂದು ಮಂಗಳಾಶಾಸನವನ್ನು ಮಾಡಿದರು. ತಮ್ಮನ್ನು ತಿದ್ದುಕೊಳ್ಳದವರನ್ನು ತಿದ್ದಿದರು. ಇಂತಹ ಆೞ್ವಾರಿನ ಶ್ರೀಸೂಕ್ತಿಗಳು ಔಶಧಿಯಾಗಿರುವಾಗಿದ್ದಾಗ ಮನದ ದೋಷಗಳು ದೂರವಾಗುವವು.

ಪಾಸುರ-43 (ಮಾಸಱು ಸೋದಿ…) ಈ ಪಾಸುರದಲ್ಲಿ ಮಾಮುನಿಗಳು ಹಿಂದೆ ಹೇಳಲ್ಪಟ್ಟ ಎಮ್ಪೆರುಮಾನಿನ ತಿರುಮೇನಿಯ ಸೌಂದರ್ಯವನ್ನು ಅನುಭವಿಸಲಾಗದೆ ಮಡಲನ್ನು ಅರಂಭಿಸಲು ಪ್ರಯತ್ನಿಸುವ ಆೞ್ವಾರಿನ ಪಾಸುರಗಳ ಛಾಯೆಯಲ್ಲಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಮಾಸಱು ಸೋದಿ ಕಣ್ಣನ್ ವನ್ದು ಕಲವಾಮೈಯಾಲ್
ಆಸೈ ಮಿಗುನ್ದು ಪೞಿಕ್ಕನ್ಜಾಮಲ್ – ಏಸಱವೇ
ಮಣ್ಣಿಲ್ ಮಡಲ್ ಊಱ ಮಾಱನ್ ಒರುಮಿತ್ತಾನ್
ಉಣ್ಣಡುನ್ಗತ್ ತಾನ್ ಪಿಱನ್ದ ಊರ್

ತಮ್ಮೊಂದಿಗೆ ಸೇರದ ಅಕಳಂಕವಾದ ತೇಜಸ್ಸನ್ನು ಹೋಂದಿರುವ ಎಮ್ಪೆರುಮಾನಿನ ವಿಷಯದಲ್ಲಿ ಅತಿಶಯಿತ ಪ್ರೀತಿಯ ಕಾರಣ ಆಳ್ವಾರ್ ತಾನು ಜನಿಸಿದ ಊರಿನ ಜನರಲ್ಲಿ ನಡುಕ ಉಂಟು ಮಾಡಲು, ಜನರ ನಿಂದನೆಗೆ ಹೆದರದೆ, ಭಯದ ಗೆರೆಯನ್ನು ದಾಟಿ, ಮಡಲನ್ನು ಮಾಡಲು ಹೊರಟರು.

ಪಾಸುರ-44 (ಊರ ನಿನೈನ್ದ…) ಈ ಪಾಸುರದಲ್ಲಿ ಮಾಮುನಿಗಳು ವಿಸ್ತರವಾದ ರಾತ್ರಿಯ ಕಾರಣ ವಿರಹತಾಪದಿಂದ ನಾಯಿಕಾಭಾವದಲ್ಲಿರುವ (ನಾಯಿಕಾ-ಶ್ರೀಮನ್ನಾರಾಯಣನ ಪತ್ನಿ) ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಊರ ನಿನೈನ್ದ ಮಡಲ್ ಊರವುಮ್ ಒಣ್ಣಾದಪಡಿ
ಕೂರ್ ಇರುಳ್ ಸೇರ್ ಕನ್ಗುಲುಡನ್ ಕೂಡಿ ನಿನ್ಱು ಪೇರಾಮಲ್
ತೀದು ಸೆಯ್ಯ ಮಾಱನ್ ತಿರುವುಳ್ಳತ್ತುಚ್ ಚೆನ್ಱ ತುಯರ್
ಓದುವದಿನ್ಗು ಎನ್ಗನೇಯೋ

ಅಯ್ಯೋ!ತುಂಬ ಕತ್ತಲೆಯಿಂದ ಕೂಡಿರುವ ಅಂಧಕಾರಭರಿತವಾದ ರಾತ್ರಿಯು ತನ್ನ ಸಹಚರಿಗಳೊಡನೆ ಆಗಮಿಸಿ ಆೞ್ವಾರನ್ನು ಮಡಲೂರಂದಂತೆ ನಿಂತಾಗ, ಆೞ್ವಾರಿನ ದುಃಖವನ್ನು ವಿವರಿಸಲಾಗುವುದೇ?

ಪಾಸುರ-45 (ಎನ್ಗನೇ ನೀರ್ ಮುನಿವದು…) ಈ ಪಾಸುರದಲ್ಲಿ ಮಾಮುನಿಗಳು,ಆೞ್ವಾರಿನ ಉರವೆಳಿಪ್ಪಾದು(ಡ್) ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ
ಎನ್ಗನೇ ನೀರ್ ಮುನಿವದು ಎನ್ನೈ ಇನಿ ನಂಬಿ ಅೞಗು
ಇಂಗನೇ ತೋನ್ಱುಗಿನ್ಱದು ಎನ್ ಮುನ್ನೇ – ಅಂಗನ್
ಉರು ವೆಳಿಪ್ಪಾಡಾ ಉರೈತ್ತ ತಮಿೞ್ ಮಾಱನ್
ಕರುದುಮವರ್ಕ್ಕು ಇಂಬಕ್ ಕಡಲ್

ನೀವು ನನ್ನ ಮೇಲೆ ಹೇಗೆ ಕೋಪಗೋಳ್ಳುವಿರೀ?
ತಿರುಕ್ಕುರುಂಗುಡಿ ನಂಬಿಯ ವಿಗ್ರಹ ಸೌಂದರ್ಯವು ನನ್ನ ಕಣ್ಗಳ ಮುಂದಿದೆ; ಈ ಎರಿವೆಳುಪ್ಪಾಡಿನ ಪದ್ಯ ರೀತಿಯಲ್ಲಿರುವ ದ್ರಾವಿಡ (ತಮಿೞ್) ವೇದವನ್ನು ನಮಗೆ ನೀಡಿದ ಆೞ್ವಾರನ್ನು ಧ್ಯಾನಿಸುವವರು ಆನಂದ ಸಾಗರದಲ್ಲಿರುವರು.

ಪಾಸುರ-46 (ಕಡಲ್ ಞಾಲತ್ತು….) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಅನುಕಾರದಿಂದ)ತನ್ನನ್ನು ಉಳಿಸಿಕೋಂಡ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಕಡಲ್ ಞಾಲತ್ತೀಸನೈ ಮುನ್ ಕಾಣಾಮಲ್ ನೊಂದೇ
ಉಡನಾ ಅನುಕರಿಕ್ಕಲುಟ್ರುತ್ – ತಿಡಮಾಗ
ವಾಯ್ನ್ದವನಾಯ್ತ್ ತಾನ್ ಪೇಸುಮ್ ಮಾಱನ್ ಉರೈ ಅದನೈ
ಆಯ್ನ್ದುರೈಪ್ಪಾರ್ ಆಟ್ಚೆಯ್ಯ ನೋಟ್ರಾರ್

ಆೞ್ವಾರ್ ತಮ್ಮ ನೇತ್ರಗಳಿಂದ ಸಮುದ್ರದಿಂದ ಪರಿವೃತ್ತವಾಗಿರುವ ಭೂಮಿಯಲ್ಲಿ ಎಮ್ಪೆರುಮಾನನ್ನು ಕಾಣಳಾಗದೆ ಶೋಕಾವಿಷ್ಠವಾಗಿ ಎಮ್ಪೆರುಮಾನನ್ನು ಅನುಕರಿಸಿ ತಮ್ಮನ್ನು ಉಳಿಸಿಕೊಳ್ಳಲು ದೃಢವಾಗಿ ಎಮ್ಪೆರುಮಾನಾಗಿಯೇ ನುಡಿದರು, ಇಂತಹ ಆೞ್ವಾರಿನ ಶ್ರೀಸೂಕ್ತಿಗಳ ವೈಭವವನ್ನು ಅರಿತು, ಪಟಿಸುವವರು ಆೞ್ವಾರನ್ನು ಸೇವಿಸಲು ತಪಸ್ಸನ್ನು ಮಾಡಿದ್ದಾರೆ.

ಪಾಸುರ-47 (ನೋಟ್ರ ನೋಂಬು…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಪ್ರೀತಿಯಿಂದ (ಭಕ್ತಿಪಾರವಶ್ಯದಿಂದ)ಕೂಡಿರುವ ಪಾಸುರಗಳಿಂದ ವಾನಮಾಮಲೆಯ(ವರಮಂಗಳನಗರ -ತೋತಾದ್ರಿಯ)ನಾಥನಾದ ಎಮ್ಪೆರುಮಾನಿನ ದಿವ್ಯ ಪಾದಗಳಲ್ಲಿ ಶರಣಾಗುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ನೋಟ್ರ ನೋನ್ಬಾದಿಯಿಲೇನ್ ಉಂದನೈ ವಿಟ್ಟಾಟ್ರಗಿಲ್ಲೇನ್
ಪೇಟ್ರುಕ್ಕುಪಾಯಮ್ ಉನ್ಱನ್ ಪೇರರುಳೇ – ಸಾಟ್ರುಗಿನ್ಱೇನ್
ಇನ್ಗೆನ್ನಿಲೈ ಎನ್ನುಮ್ ಎೞಿಲ್ ಮಾಱನ್ ಸೊಲ್ ವಲ್ಲಾರ್
ಅಂಗಮರರ್ಕ್ಕಾರಾವಮುದು.

ಸೌಂದರ್ಯವನ್ನು ಹೋಂದಿರುವ ಆೞ್ವಾರ್ ಈ ಉಪಾಯದ ವಿಷಯದಲ್ಲಿ ಕೃಪೆಯಿಂದ , “ನನ್ನಲ್ಲಿ ಉಪಾಯಾಂತರಗಳಾದ ಕರ್ಮಯೋಗಾದಿಗಳಲ್ಲಿ ಅನ್ವಯವಿಲ್ಲ. ನೀನಿಲ್ಲದೆ ನಾನು ಧರಿಸಲಾಗೆನು. ನಾನಗೆ ನಿನ್ನ ಮಹತ್ಕೃಪೆಯೇ ಪುರುಷಾರ್ಥಕ್ಕೆ ಸಾಧನ” ಎಂದು ನುಡಿದರು. ಈ ಕೃಪಾಭರಿತವಾದ ಪಾಸುರಗಳನ್ನು ಪಠಿಸುವವರು ನಿತ್ಯಸೂರಿಗಳಿಗೆ ನಿತ್ಯವಾದ ನವ್ಯವಾದ ಅಮೃತವಾಗಿರುವರು.

ಪಾಸುರ-48 (ಆರಾವಮುದಾೞ್ವಾರ್…) ಈ ಪಾಸುರದಲ್ಲಿ ಮಾಮುನಿಗಳು ಆರಾವಮುದಾೞ್ವಾರಿನಲ್ಲಿ ತನ್ನ ಆಕಿಂಚನ್ಯವನ್ನು ವಿನಂತಿಸಿ ಶರಣಾದ ನಂತರವು “ಇವರ್(ಇವರು) ನಮ್ಮಾೞ್ವಾರ್” ಎಂದು ಎಮ್ಪೆರುಮಾನ್ ಹೇಳುತ್ತಾ ಎಮ್ಪೆರುಮಾನ್ ತನ್ನ ಅಭಿಷ್ಟೆಯನ್ನು ನೆರವೇರಿಸದಿರುವುದರಿಂದ ದುಃಖಪಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಆರಾವಮುದಾೞ್ವಾರ್ ಆದರಿತ್ತ ಪೇಱುಗಳೈತ್
ತಾರಾಮೈಯಾಲೇ ತಳರ್ನ್ದು ಮಿಗತ್ ತೀರಾದ
ಆಸೈಯುಡನ್ ಆಟ್ರಾಮೈ ಪೇಸಿ ಅಲಮನ್ದಾನ್
ಮಾಸಱು ಸೀರ್ ಮಾಱನ್ ಎಮ್ಮಾನ್

ಆೞ್ವಾರಿನ ಆಸೆಗಳನ್ನು ಆರಾವವಮುದನ್ ನೆರವೇರಿಸದ ತೃಪ್ತಿ ಪಡಿಸಲಾರದಂತಹ ಆಕಾಂಕ್ಷೆಯಲ್ಲಿ ಮುಳುಗಿರುವ ಕಾರಣ ತುಂಬ ದುಃಖಗೊಂಡ ಆಳ್ವಾರ್ ತನ್ನ ಶೋಕವನ್ನು ತಿಳಿಸಿದರು. ನಿರವದ್ಯ ಕಲ್ಯಾಣಗುಣಗಳನ್ನು (ದೋಶರಹಿತವಾದ ಗುಣಗಳನ್ನು) ಹೋಂದಿರುವ ಆೞ್ವಾರ್ ನಮ್ಮ ನಾಥರು.

ಪಾಸುರ-49 (ಮಾನಲತ್ತಾಲ್ ಮಾಱನ್…) ಈ ಪಾಸುರದಲ್ಲಿ ಮಾಮುನಿಗಳು ತಿರುವಲ್ಲವಾೞ್ ನಗರದ ಸುತ್ತಲ್ಲು ಇರುವ ವಾಟಿಕೆಯ(ಉದ್ಯಾನನಗಳಲ್ಲೆ) ಭೋಗ್ಯ ವಿಷಯಗಳಲ್ಲಿ ಖಿನ್ನರಾದ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ
ಮಾನಲತ್ತಾಲ್ ಮಾಱನ್ ತಿರುವಲ್ಲವಾೞ್ ಪುಗಪ್ ಪೋಯ್ತ್
ತಾನ್ ಇಳೈತ್ತವ್ವೂರ್ ತನ್ನರುಗಿಲ್ ಮೇನಲನ್ಗಿತ್
ತುನ್ಬಮುಟ್ರುಚ್ ಚೊನ್ನ ಸೊಲವು ಕಱ್ಪಾರ್ ತನ್ಗಳುಕ್ಕುಪ್
ಪಿನ್ ಪಿಱಕ್ಕ ವೇಣ್ಡಾ ಪಿಱ

ಆಳ್ವಾರ್ ತಿರುವಲ್ಲವಾೞ್ ದಿವ್ಯದೇಶದ ಕಡೆ ಹೊರಟರು, ಅಶಕ್ತರಾಗಿ ನಗರದ ಸುತ್ತಲೂ ಇರುವ ಉದ್ಯಾನಗಳಲ್ಲಿ ಭ್ರಮಿತರಾಗಿ ಕೆಳಗೆ ಬಿದ್ದು ಖಿನ್ನರಾಗಿ ಈ ದಿವ್ಯವಾಕ್ಕನು ನುಡಿದರು. ಇದನ್ನು(ದಿವ್ಯ ಪಾಸುರಗಳು)ಕಲಿತಮೇಲೆ ಭಗವದ್ಪಾದಗಳಿಗೆ ಪರತಃ ಇರುವ ಜನ್ಮಗಳಲ್ಲಿ ಅವರು ಹುಟ್ಟುವುದಿಲ್ಲ.

ಪಾಸುರ-50 (ಪಿಱನ್ದುಲುಗಮ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನನ್ನು, “ನನ್ನನ್ನು ದರಿಸಿಕೊಂಡು ನಿಮ್ಮ ಅವತಾರಗಳ ಲೀಲೆಗಳನ್ನು ಸಂತೋಷದಿಂದ ಅನುಭವಿಸಲು ಅನುಗ್ರಹಿಸು” ಎಂದು ಕೇಳಿಕೊಳ್ಳುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಪಿಱನ್ದುಲಗಮ್ ಕಾತ್ತಳಿಕ್ಕುಮ್ ಪೇರರುಟ್ಕಣ್ಣಾ ಉನ್
ಸಿಱನ್ದ ಗುಣತ್ತಾಲ್ ಉರುಗುಮ್ ಸೀಲತ್ತಿಋಅಮ್ ತವಿರ್ನ್ದು
ಸೇರ್ನ್ದನುಬವಿಕ್ಕು ನಿಲೈಸೆಯ್ಯೆನ್ಱ ಸೀರ್ಮಾಱನ್
ವಾಯಂದ ಪದತ್ತೇ ಮನಮೇ ವೈಗು

“ಓ ಹೃದಯವೇ! ನೀನು ಪರಮಕಾರುಣಿಕನಾದ ವಿಶ್ವದಲ್ಲಿ ಅವತೀರ್ಣನಾಗಿ ಎಲ್ಲರನ್ನು ರಕ್ಷಿಸುವ ಕೃಷ್ಣನಿಗೆ,” ಎಲೌ ಕೃಷ್ಣನೇ! ದಯವಿಟ್ಟು ನನನ್ನು ನಿಮ್ಮನ್ನು ಸೇರಿ ಅನುಭವಿಸಿ ನಿಮ್ಮ ಕಲ್ಯಾಣಗುಣಗಳ ಅನುಭವದಿಂದ ಹೃದಯವು ಕರಗುವಂತೆ ಅನುಗ್ರಹಿಸು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-41-50-simple/

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment