Daily Archives: January 2, 2021

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೮ ರಿಂದ ೪೦ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೩೮

ಮಾಮುನಿಗಳು , ಎಲ್ಲರೂ ತಿಳಿಯಲೆಂದು ಎಂಪೆರುಮಾನಾರ್ ಪ್ರಪತ್ತಿ (ಎಂಪೆರುಮಾನರಿಗೆ ಶರಣಾಗುವುದು) ಮಾರ್ಗವನ್ನು ನಿರ್ವಹಿಸಿದ ರೀತಿ,ಅವರು ಶ್ರೀಭಾಷ್ಯಂ ಇತ್ಯಾದಿ ಗ್ರಂಥಗಳನ್ನು ( ಸಾಹಿತ್ಯದ ಕೃತಿಗಳು) ರಚಿಸಿ ನಮ್ಮ ತತ್ವಗಳನ್ನು, ಸಿದ್ಧಾಂತಗಳನ್ನು ಪೋಷಿಸಿದರಿಂದ ನಂಪೆರುಮಾಳರು ಎಂಪೆರುಮಾನಾರಿಗೆ ನೀಡಿದ ಮಾನ್ಯತೆಯ ವಿಶೇಷತೆ, ಬಯಲು ಮಾಡುವರು.

ಎಂಪೆರುಮಾನಾರ್ ದರಿಸನಂ ಎನ್ಱೇ ಇದರ್ಕು

ನಂಪೆರುಮಾಳ್ ಪೇರಿಟ್ಟು ನಾಟ್ಟಿ ವೈತ್ತಾರ್ ಅಂಬುವಿಯೋರ್

ಇಂದ ದರಿಸನತ್ತೈ ಎಂಪೆರುಮಾನಾರ್ ವಳರ್ತ್ತ 

ಅಂದ ಚೆಯಲ್ ಅಱಿಗೈಕ್ಕಾ

ಎಂಪೆರುಮಾನಾರ್ ದರಿಶನಂ( ಶ್ರೀ ರಾಮಾನುಜರ ತತ್ವ) ಎಂದು ನಮ್ಮ ಶ್ರೀವೈಷ್ಣವ ಸಂಪ್ರದಾಯಕ್ಕೆ ನಂಪೆರುಮಾಳ್ ಹೆಸರಿಟ್ಟು ದೃಢವಾಗಿ ಖಚಿತಗೊಳಿಸಿದ್ದಾರೆ. ಏಕೆಂದರೆ ಎಲ್ಲರೂ ತಿಳಿಯಲೆಂದು ಎಂಪೆರುಮಾನಾರ್ ಪ್ರಪತ್ತಿ  ಮಾರ್ಗವನ್ನು ನಿರ್ವಹಿಸಿ , ತತ್ವಗಳನ್ನು ವಿವರಿಸಿ ಶ್ರೀಭಾಷ್ಯಂ ಇತ್ಯಾದಿ  ಸಾಹಿತ್ಯದ ಕೃತಿಗಳು ರಚಿಸಿ, ನಮ್ಮ ತತ್ವಗಳನ್ನು, ಸಿದ್ಧಾಂತಗಳನ್ನು ಪೋಷಿಸಿ , ಹಲವಾರು ದಿವ್ಯ ದೇಶಗಳ ಗುಡಿಗಳ ಪುನರಾವರ್ತನೆ ಕಾರ್ಯಗಳನ್ನು ನಿರ್ವಹಿಸಿದರಿಂದ, ಈ ಲೋಕದ ಜನರು ಎಂಪೆರುಮಾನಾರರ ಮಹತ್ವ ತಿಳಿಯಲು ನಂಪೆರುಮಾಳರು ಸ್ವತಃ ಇದನ್ನು  ಪ್ರತಿಷ್ಠಿಸಿದ್ದಾರೆ.

ತಿರುಕ್ಕೋಟ್ಟಿಯೂರ್ ನಂಬಿ (ಎಂಪೆರುಮಾನಾರರ ಹಲವು ಆಚಾರ್ಯರುಗಳಲ್ಲಿ ಒಬ್ಬರು) ಅವರ ಅಪಾರ ಕರುಣೆಯನ್ನು ಕಂಡು ಅವರಿಗೆ ಎಂಪೆರುಮಾನಾರ್ ಎಂಬ ಪಟ್ಟ ಕೊಟ್ಟಿರುವ ವಿಚಾರವನ್ನು ಆಧಾರವಾಗಿಟ್ಟು , ನಂಪೆರುಮಾಳ್ ತಿರುಕ್ಕೋಟ್ಟಿಯೂರ್ ನಂಬಿಯರಿಂದ ಈ ವೈಶಿಷ್ಟ್ಯತೆಯನ್ನು ಸಂಕಲ್ಪಿಸಿದ್ದಾರೆ ಎಂದು ಹೇಳಬಹುದು.

ಪಾಸುರ ೩೯

ಎಂಪೆರುಮಾನಾರ ಆಜ್ಞೆಯಿಂದ ತೊಡಗಿದ ,ದ್ವಯ ಮಹಾಮಂತ್ರದ ಅರ್ಥವಾದ ತಿರುವಾಯ್ಮೊಳಿಯ ವ್ಯಾಖ್ಯಾನವು ಮತ್ತು ಎಂಪೆರುಮಾನಾರ್ ವಿವರಿಸಿದ ಅರ್ಥಗಳನ್ನು ಆಧರಿಸಿದ ವ್ಯಾಖ್ಯಾನಗಳು ಎಣಿಕೆಯಲ್ಲಿ ಹೆಚ್ಚಾಗಿರುವುದು,ಆದ್ದರಿಂದ ಮಾಮುನಿಗಳು ಅವುಗಳನ್ನು ಕರುಣೆಯಿಂದ ವಿವರಿಸುವರು.

ಪಿಳ್ಳಾನ್ ನಂಜೀಯರ್ ಪೆರಿಯವಾಚ್ಚಾನ್ ಪಿಳ್ಳೈ

ತೆಳ್ಳಾರ್ ವಡಕ್ಕುತ್ ತಿರುವೀದೀಪಿಳ್ಳೈ

ಮಣವಾಳ ಯೋಗಿ ತಿರುವಾಯ್ಮೊಳಿಯೈಕ್ ಕಾತ್ತ

ಗುಣವಾಳರ್ ಎನ್ಱು ನೆಂಜೇ ಕೂಱು

ಎಂಪೆರುಮಾನಾರ ಜ್ಞಾನಪುತ್ರರಾದ ( ದಿವ್ಯ ಮನಸ್ಸಿನಿಂದ ಪುತ್ರನೆಂದು ಭಾವಿಸುವುದು),ಪರಾಶರ ಬಟ್ಟರ ಶಿಷ್ಯರಾದ ನಂಜೀಯರ್,ಅದ್ವಿತೀಯ ವ್ಯಾಖ್ಯಾನಕಾರರಾದ ಪೆರಿಯವಾಚ್ಚಾನ್ ಪಿಳ್ಳೈ, ಅಪ್ರತಿಮ ಜ್ಞಾನ ಹೊಂದಿದ ನಂಪಿಳ್ಳೈಯ ಶಿಷ್ಯರಾದ ವಡಕ್ಕು ತಿರುವೀದಿ ಪಿಳ್ಳೈ,ಪೆರಿಯವಾಚ್ಚಾನ್ ಪಿಳ್ಳೈಯ ಕರುಣೆ ಪಡೆದ ವಾದಿ ಕೇಸರಿ ಅಳಗಿಯ ಮಣವಾಳ ಜೀಯರ್ , ಇವರುಗಳು , ದ್ವಯ ಮಹಾಮಂತ್ರದ ಅರ್ಥವಾದ ತಿರುವಾಯ್ಮೊಳಿಯನ್ನು ಪೋಷಿಸಿ ಕಾಪಾಡಿದವರು. ಓ ಮನಸೇ ಅಂತಹ ಮಹನೀಯರನ್ನು ಕೊಂಡಾಡು.

ಪಾಸುರ ೪೦

ಕರುಣಾಮಯಿಗಳಾದ ಪೂರ್ವಾಚಾರ್ಯರು ಬರೆದ ವ್ಯಾಖ್ಯಾನಗಳನ್ನು 

ಕೊಂಡಾಡಲು ಅವರ ಮನಸ್ಸಿಗೆ ಹೇಳುತ್ತಾರೆ

ಮುಂದುಱವೇ ಪಿಳ್ಳಾನ್ ಮುದಲಾನೋರ್ ಸೈದರುಳುಂ

ಅಂದ ವ್ಯಾಕ್ಕಿಯೈಗಳ್ ಅನ್ಱಾಗಿಲ್ -ಅಂದೋ

ತಿರುವಾಯ್ಮೊಳಿಪ್ ಪೊರುಳೈತ್ ತೇರ್ನ್ದುರೈಕ್ಕ ವಲ್ಲ

ಕುರುವಾರ್ ಇಕ್ಕಾಲಂ ನೆಂಜೇ ಕೂಱು

ಅಂದು, ತಿರುಕ್ಕುರುಗೈಪ್ಪಿರಾನ್ ಪಿಳ್ಳಾನ್ ರಿಂದ ತೊಡಗಿ ಆಚಾರ್ಯರು ನಮ್ಮಾಳ್ವಾರರ ದಿವ್ಯ ಮನಸ್ಸಲ್ಲಿದ್ದ ತಿರುವಾಯ್ಮೊಳಿಯ ಅಭಿಪ್ರಾಯಗಳನ್ನು ಅವರ ಆಚಾರ್ಯರಿಂದ ಕೇಳಿ ಅರ್ಥ ಮಾಡಿಕೊಳ್ಳದಿದ್ದರೆ, ಅದಕ್ಕೆ ಸೂಕ್ತ ಅರ್ಥ ವಿವರಣೆ ನೀಡಿ ವ್ಯಾಖ್ಯಾನಗಳನ್ನು ಬರೆಯದಿದ್ದರೆ , ನಮಗೆ ಇಂದು ತಿರುವಾಯ್ಮೊೞಿಯ ಮಹತ್ ತತ್ವವನ್ನು ಯಾರು ಉಪದೇಶಿಸಲಾಗುವುದು? ಓ ಮನಸೇ ನೀ ದಯವಿಟ್ಟು ಹೇಳು! 

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-38-40-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org