ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಪಾಸುರ ೨೧
ಆೞ್ವಾರ್ಗಳು ಹತ್ತು ಜನ. ಆದರೆ ಹನ್ನೆರೆಡೆಂದೂ ಭಾವಿಸಲಾಗಿದೆ. ಎಂಪೆರುಮಾನರೊಡನೆ ಪೂರ್ಣರಾಗಿ ನಿರತವಾದ ಆೞ್ವಾರ್ಗಳು ಎಂದು ಭಾವಿಸಿದರೆ ಹತ್ತು ಎಣಿಕೆಗೆ ಬರುವುದು. ಈಗಾಗಲೇ ನೋಡಿದ ಪಾಸುರಗಳಲ್ಲಿ ಮಾಮುನಿಗಳು ಅವರ ಅವತಾರ ಮಾಸ ಹಾಗು ನಕ್ಷತ್ರವನ್ನು ದಯೆತೋರಿ ಹೇಳಿದ್ದಾರೆ. ಆಂಡಾಳ್ ಹಾಗು ಮಧುರಕವಿ ಆೞ್ವಾರರು ಆಚಾರ್ಯ ಅಭಿಮಾನದಲ್ಲಿ ಆಸರೆಗೊಂಡವರು. ಎಂಪೆರುಮಾನರನ್ನು ಆಂಡಾಳ್ ವಿಟ್ಟುಚಿತ್ತರ್ ತಂಗಳ್ ದೇವರ್ , ಅಂದರೆ ತನ್ನ ತಂದೆಯಾದ ವಿಷ್ಣುಚಿತ್ತರರ ದೇವರು ಎಂದು ಅನುಭವಿಸಿದಳು. ಮಧುರಕವಿ ಆೞ್ವಾರರೂ ಹೇಳಿದ್ದು ತೇವು ಮಟ್ಟೃ ಅರಿಯೇನ್ ; ಅಂದರೆ ಅವರಿಗೆ ನಮ್ಮಾೞ್ವಾರರಲ್ಲದೆ ಬೇರಾವ ದೇವರು ತಿಳಿಯದು. ಇವರಿಬ್ಬರನ್ನು ಸೇರಿದರೆ ಆೞ್ವಾರ್ಗಳು ಹನ್ನೆರಡು ಜನ.
ಇವರಿಬ್ಬರೊಡನೆ, ನಮ್ಮ ಗುರುಪರಂಪರೆಯ (ಆಚಾರ್ಯರ ಸಾಂಪ್ರದಾಯಿಕ ಪರಂಪರೆ ) ಪ್ರಮುಖ ಆಚಾರ್ಯರಾದ ,ಯತಿರಾಜ, ಮಾರನ್ ಅಡಿ ಪಣಿಂದು ಉಯ್ನ್ದವನ್ , ಎಂಬ ಹೆಸರಾಂತ ಎಂಪೆರುಮಾನಾರ್ , ನಮ್ಮಾೞ್ವಾರರ ದಿವ್ಯ ಪಾದಗಳನ್ನು ಅಡೆದು ಉನ್ನತಗೊಂಡವರು ಎಂದು ಈ ಪಾಸುರದಲ್ಲಿ ಸೇರಿಸಿ ಮಾಮುನಿಗಳು ಸಂತೋಷದಿಂದ ಅನುಭವಿಸುವರು. ಎಂಪೆರುಮಾನಾರನ್ನು ನಮ್ಮಾೞ್ವಾರರ ದಿವ್ಯ ಪಾದಗಳೆಂದು “ಶ್ರೀರಾಮಾನುಜಂ “ ಎಂದು ಆಚರಿಸಲಾಗಿದೆ. ಈ ಮೂವರಲ್ಲಿ [ಆಂಡಾಳ್ , ಮಧುರಕವಿ ಆೞ್ವಾರ್ , ಎಂಪೆರುಮಾನಾರ್ ] ಮತ್ತೊಂದು ಹೊಂದಿಕೆ ಇದೆ ಆಂಡಾಳನ್ನು ಶ್ರೀ ಭೂಮಪಿರಾಟ್ಟಿಯ ಪುನರವತಾರವೆಂದು ಆಚರಿಸಲಾಗಿದೆ ಮಧುರಕವಿ ಆೞ್ವಾರ್ ಪೆರಿಯ ತಿರುವಡಿಯ (ಗರುಡ) ಪುನರವತಾರವೆಂದು ಆಚರಿಸಲಾಗಿದೆ ಹಾಗು ಎಂಪೆರುಮಾನಾರ್ ಆದಿಶೇಷನ ಪುನರವತಾರವೆಂದು ಆಚರಿಸಲಾಗಿದೆ. ಮಾಮುನಿಗಳು ಈ ಮೂವರು ಅವತರಿಸಿದ ದಿನಗಳನ್ನು ಕರುಣೆಯಿಂದ ಹೇಳುವರು
ಆೞ್ವಾರ್ ತಿರುಮಗಳಾರ್ ಆಂಡಾಳ್ ಮದುರಕವಿ
ಆೞ್ವಾರ್ ಯಾತಿರಾಸರಾಂ ಇವರ್ಗಳ್ – ವಾೞ್ವಾಗ
ವಂದು ಉದಿತ್ತ ಮಾದಂಗಳ್ ನಾಳ್ಗಳ್ ತಮ್ಮಿನ್ ವಾಸಿಯೈಯುಂ
ಇಂದ ಉಲಗೋರ್ಕ್ಕು ಉರೈಪ್ಪೋಂ ಯಾಂ
ಆಂಡಾಳ್ ಪೆರಿಯಾೞ್ವಾರರ ದಿವ್ಯ ಪುತ್ರಿ , ಮಧುರಕವಿ ಆೞ್ವಾರ್ , ಯತಿಗಳ ಒಡೆಯನಾದ ಶ್ರೀ ರಾಮಾನುಜರು ಈ ಲೋಕ ಕಲ್ಯಾಣಕ್ಕಾಗಿ ಅವತರಿಸಿದ ಮಾಸ ಹಾಗು ನಕ್ಷತ್ರಗಳ ವೈಶಿಷ್ಟ್ಯತೆಯನ್ನು ಎಲ್ಲರಿಗೂ ಬಹಿರಂಗ ಪಡಿಸುತ್ತೇವೆ.
ಪಾಸುರ ೨೨
ಆಂಡಾಳ್ ಅವರಿಗಾಗಿಯೇ ಈ ಲೋಕದಲ್ಲಿ ಅವತರಿಸಿದಳೆಂದು ಮಾಮುನಿಗಳು ಕರುಣೆಯಿಂದ ವಿವರಿಸುವರು.
ಇನ್ಱೋ ತಿರುವಾಡಿಪ್ಪೂರಂ ಎಮಕ್ಕಾಗ
ಅನ್ಱೋ ಇಂಗು ಆಂಡಾಳ್ ಅವದರಿತ್ತಾಳ್ – ಕುನ್ಱಾದ
ವಾೞ್ವಾನ ವೈಗುಂದ ವಾನ್ ಭೋಗಮ್ ತನ್ನೈ ಇಗೞ್ನ್ದು
ಆೞ್ವಾರ್ ತಿರುಮಗಳಾರ್ ಆಯ್
ಇಂದು ಆಡಿ ಮಾಸದ ಪೂರ (ಆಷಾಡ ಮಾಸದ ಪುಬ್ಬಾ) ನಕ್ಷತ್ರವೆ? ಅಪರಿಮಿತ ಭೋಗ , ಉಲ್ಲಾಸಭರಿತ ಶ್ರೀ ವೈಕುಂಠವನ್ನು ತ್ಯಜಿಸಿ , ಆಕೆ ಆಂಡಾಳ್ ನಾಚ್ಚಿಯಾರಾಗಿ, ಪೆರಿಯಾೞ್ವಾರರ ದಿವ್ಯ ಪುತ್ರಿಯಾಗಿ ನನ್ನನ್ನು ಉದ್ಧರಿಸಲು ಅವತರಿಸಿದಳು . ಒಬ್ಬ ತಾಯಿ ತನ್ನ ಕೂಸು ಬಾವಿಗೆ ಬಿದ್ದಾಗ ಮಗುವನ್ನು ರಕ್ಷಿಸಲು ಭಾವಿಗೆ ಹಾರಿದಂತೆ . ಶ್ರೀ ವರಾಹ ಪೆರುಮಾಳ್ ಭೂಮಿ ಪಿರಾಟ್ಟಿಗೆ ಹೇಳಿದಂತೆ “ ಜೀವಾತ್ಮಗಳು ನನ್ನನು ಸ್ತುತಿಸಿ ಹಾಡಿ , ವಿಚಾರ ಮಾಡಿ , ಶುಭ್ರವಾದ ಹೂಗಳಿಂದ ಅರ್ಚಿಸಿ ಸುಲಭವಾಗಿ ನನ್ನನ್ನು ಪಡೆಯಬಹುದು “ ಎಂದು ನಮಗೆ ತೋರಿಸಲು ಈ ಭುವಿಯಲ್ಲಿ ಅವತರಿಸಿದಳು. ಅದ್ಭುತವಾದದ್ದಲ್ಲವೇ! ಎಂತಹ ಕಾರುಣ್ಯ !
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/06/upadhesa-raththina-malai-21-22-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org