ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
<< ಎರಡನೇ ತಿರುಮೊಳಿ – ನಾಮಂ ಆಯಿರಂ
ಹಿಂದಿನ ಪದಿಗದಲ್ಲಿ, ಆಂಡಾಳ್ ಮತ್ತು ಇತರ ದನಗಾಹಿಗಳು (ಸಂತೋಷದ ನೆಲೆಯಲ್ಲಿ) ಒಟ್ಟಿಗೆ ಇದ್ದರು. ಇದನ್ನು ನೋಡಿದ ಬಾಲಕಿಯರ ಹೆತ್ತವರು “ನಾವು ಅವರನ್ನು ಹೀಗೆಯೇ ಮುಂದುವರಿಸಲು ಬಿಟ್ಟರೆ, ಅವರು ತಮ್ಮ ಸಂಯೋಗದಿಂದ ಸಂತೋಷದಲ್ಲಿ ಮಿತಿಮೀರಿ ಹೋಗುತ್ತಾರೆ ಮತ್ತು ಸಾಯಲೂಬಹುದು” ಎಂದು ಭಾವಿಸಿದರು. ಆದ್ದರಿಂದ ಅವರು ಹುಡುಗಿಯರನ್ನು ಕಣ್ಣನಿಂದ ಬೇರ್ಪಡಿಸಿದರು ಮತ್ತು ಅವರನ್ನು ನೆಲಮಾಳಿಗೆಯಲ್ಲಿ ಬಂಧಿಸಿದರು. ಈ ಸ್ಥಿತಿಯಲ್ಲಿ, ಕಣ್ಣನ್ ಮತ್ತು ಹುಡುಗಿಯರಿಬ್ಬರೂ ಪ್ರತ್ಯೇಕವಾಗಿ (ಒಬ್ಬರನ್ನೊಬ್ಬರು ನೋಡಲು ಸಾಧ್ಯವಾಗದೇ) ಕೊರಗಲು ಪ್ರಾರಂಭಿಸಿದರು. ಇದನ್ನು ನೋಡಿದ ಪೋಷಕರು ಮತ್ತು ಸಂಬಂಧಿಕರು “ನಾವು ಅವರನ್ನು ಬೇರ್ಪಡಿಸಿ ಇಡುವುದನ್ನು ಮುಂದುವರೆಸಿದರೆ, ಅವರು ಸಾಯಬಹುದು, ಹೆಣ್ಣುಮಕ್ಕಳನ್ನು ಕಣ್ಣನ ಜೊತೆ ಇರಲು ಬಿಟ್ಟರೆ ಅದೂ ಕೂಡ ವಿಪತ್ತು. ಆದ್ದರಿಂದ ನಾವು ಅವರಿಗೆ ಪನಿ ನೀರಾಟ್ಟಂ (ಮುಂಜಾನೆಯೇ ನದಿಯಲ್ಲಿ ಸ್ನಾನ ಮಾಡುವುದು) ಎಂಬ ಆಚರಣೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತೇವೆ, ಇದರಿಂದ ಅವರು ಉತ್ತಮ ಪತಿಗಳನ್ನು ಪಡೆಯುತ್ತಾರೆ. ಆ ಸಮಯದಲ್ಲಿ ನಾವು ಅವರಿಗೆ ಸ್ವಲ್ಪ ಸಮಯದವರೆಗೆ ಕಣ್ಣನೊಂದಿಗೆ ಇರಲು ಅವಕಾಶ ನೀಡುತ್ತೇವೆ ಮತ್ತು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬೆಳಗಾಗುವ ಮೊದಲು ನದಿಯಲ್ಲಿ ಸ್ನಾನ ಮಾಡಲು ಅವರು ಹುಡುಗಿಯರಿಗೆ ಹೇಳಿದರು. ಕಣ್ಣನು ಅವರ ಮೇಲೆ ನಿರಂತರ ಗಮನವಿಟ್ಟಿದ್ದರಿಂದ, ಅವನಿಗೆ ಈ ವಿಷಯ ತಿಳಿದು, ಮುಂಜಾನೆಯೇ ಅವರನ್ನು ನದಿಗೆ ಹಿಂಬಾಲಿಸಿದನು. ಹುಡುಗಿಯರು ಎಷ್ಟು ಜಾಗರೂಕರಾಗಿದ್ದರೂ ಸಹ, ಅವರು ಸ್ನಾನಕ್ಕೆ ಹೋದ ಅದೇ ನದಿಗೆ ಕಣ್ಣನು ಅವರನ್ನು ಹಿಂಬಾಲಿಸಿದನು. ಕುರಿಗಾಹಿಗಳಾಗಿದ್ದ ಅವರು ನದಿಯ ದಡದಲ್ಲಿ ವಸ್ತ್ರಗಳನ್ನು ಇರಿಸಿ ಸ್ನಾನಕ್ಕಾಗಿ ನದಿಯನ್ನು ಪ್ರವೇಶಿಸಿದರು. ಅಲ್ಲಿಗೆ ಬಂದ ಕಣ್ಣನು ಎಲ್ಲ ವಸ್ತ್ರಗಳನ್ನು ತೆಗೆದು ಪಕ್ಕದಲ್ಲಿದ್ದ ಕುರುಂದಮ್ ಮರ ಹತ್ತಿ ಕುಳಿತ. ಹುಡುಗಿಯರು ಸ್ನಾನ ಮುಗಿಸಿ ನದಿಯಿಂದ ಹೊರಬಂದಾಗ, ಅವರು ಬಿಟ್ಟುಹೋದ ಸ್ಥಳದಲ್ಲಿ ತಮ್ಮ ವಸ್ತ್ರಗಳೂ ಇಲ್ಲದಿರುವುದು ಎಂದು ಕಂಡು ಗೊಂದಲಕ್ಕೊಳಗಾದರು ಮತ್ತು “ಆಕಾಶವು ಅವನ್ನು ತೆಗೆದುಕೊಂಡು ಹೋಗಿದೆಯೇ? ದಿಕ್ಕುಗಳು ಅವನ್ನು ಕರೆದುಕೊಂಡು ಹೋಗಿವೆಯೇ? ನದಿಯು ಅವನ್ನು ಒಯ್ದಿದೆಯೇ ಅಥವಾ ಕಣ್ಣನು ಅವನ್ನು ತೆಗೆದುಕೊಂಡು ಹೋಗಿದ್ದಾನೆಯೇ? ನಂತರ ಅವರು ಕುರುಂದಮ್ ಮರದ ಮೇಲೆ ಕಣ್ಣನನ್ನು ನೋಡಿದರು ಮತ್ತು ಏನಾಯಿತು ಎಂದು ಊಹಿಸಿದರು. ಆತನು ಅವರನ್ನು ಹಿಂಬಾಲಿಸಿ ಅವರಿಗೆ ತಿಳಿಯದಂತೆ ಅವರ ಬಳಿಯಿದ್ದ ವಸ್ತ್ರಗಳನ್ನು ಕದ್ದಂತೆ ತಾವೂ ಸಹ ಹೇಗಾದರೂ ಮಾಡಿ ಆತನಿಂದ ಅವುಗಳನ್ನು ಮರಳಿ ಪಡೆಯಬೇಕೆಂದು ನಿರ್ಧರಿಸಿದರು. ಅವರು ಅವನನ್ನು ವಿವಿಧ ರೀತಿಯಲ್ಲಿ ವಿನಂತಿಸಿದರು ಮತ್ತು ಕೊನೆಯಲ್ಲಿ, ತಮ್ಮ ತೊಂದರೆಗಳನ್ನು ಹೇಳಿದರು. ನಂತರ ಕಣ್ಣನು ಅವರ ವಸ್ತ್ರಗಳನ್ನು ಹಿಂದಿರುಗಿಸಿದನು ಮತ್ತು ಅವರೊಂದಿಗೆ ಸಂತೋಷದಿಂದ ಇದ್ದನು.
ಮೊದಲನೇ ಪಾಸುರಂ. ತಮಗಾಗುತ್ತಿರುವ ತೊಂದರೆಗಳನ್ನು ಹೇಳುತ್ತಾ ಹೆಣ್ಣುಮಕ್ಕಳು ಕೈಮುಗಿದು ಪೂಜಿಸುತ್ತಾರೆ ಮತ್ತು ವಸ್ತ್ರಗಳನ್ನು ಮರಳಿ ಕೇಳುತ್ತಾರೆ.
ಕೋಳಿ ಅಳೈಪ್ಪದನ್ ಮುನ್ನಮ್* ಕುಡೈನ್ದು ನೀರಾಡುವಾನ್ ಪೋನ್ದೋಮ್*
ಆಳಿಯಂಶೆಲ್ವನ್ ಎಳುನ್ದಾನ್* ಅರವಣೈ ಮೇಲ್ ಪಳ್ಳಿ ಕೊಂಡಾಯ್!*
ಏಳೈಮೈ ಆಟ್ರವುಮ್ ಪಟ್ಟೋಮ್* ಇನಿ ಎನ್ರುಮ್ ಪೊಯ್ಗೈಕ್ಕು ವಾರೋಮ್*
ತೋಳಿಯುಂ ನಾನುಮ್ ತೊಳುದೋಮ್* ತುಗಿಲೈ ಪ್ಪಣಿತ್ತರುಳಾಯೇ*
ಓ ತಿರುವನಂದಾಳ್ವಾನ್ (ಆದಿಶೇಷನ) ಹಾಸಿಗೆಯ ಮೇಲೆ ಮಲಗಿರುವವನೇ! ನದಿಯಲ್ಲಿ ಚೆನ್ನಾಗಿ ಮುಳುಗಿ ಸ್ನಾನ ಮಾಡಲು ಕೋಳಿ ಕರೆಯುವ ಮೊದಲು (ಬೆಳಗಾಗುವ ಮೊದಲು) ನಾವು ಇಲ್ಲಿಗೆ ಬಂದಿದ್ದೇವೆ. ಈಗ, ಭವ್ಯವಾದ ಸೂರ್ಯನೂ ಉದಯಿಸಿದ್ದಾನೆ. ನಾವು ಇಲ್ಲಿ ಬಹಳ ತೊಂದರೆ ಅನುಭವಿಸುತ್ತಿದ್ದೇವೆ. ಇನ್ಮುಂದೆ ನಾವು ಈ ನದಿಗೆ ಬರುವುದಿಲ್ಲ. ಗೆಳೆಯರು ಮತ್ತು ನಾನು ನಿನ್ನನ್ನು ಕೈಮುಗಿದು ಪೂಜಿಸುತ್ತಿದ್ದೇವೆ. ದಯವಿಟ್ಟು ಕರುಣೆಯಿಂದ ನಮ್ಮ ವಸ್ತ್ರಗಳನ್ನು ನಮಗೆ ಕೊಡು.
ಎರಡನೇ ಪಾಸುರಂ. ಅವರು ತನ್ನೊಂದಿಗೆ ಸೇರುವ ಬದಲು ವಸ್ತ್ರಗಳನ್ನು ಕೇಳುತ್ತಿದ್ದಾರೆ ಎಂದು ಕಣ್ಣನು ಭಾವಿಸಿದನು. ಆದ್ದರಿಂದ, ಅವನು ಇನ್ನೂ ನದಿಯ ದಡದಲ್ಲಿ ಇದ್ದ ಕೆಲವು ವಸ್ತ್ರಗಳನ್ನು ತೆಗೆದುಕೊಂಡು ಮತ್ತೆ ಮರದ ಮೇಲೆ ಹತ್ತಿದನು. ಅದನ್ನು ನೋಡಿದ ಹುಡುಗಿಯರು ತಮ್ಮ ವಸ್ತ್ರವನ್ನು ಮರಳಿ ಕೊಡುವಂತೆ ದುಃಖದಿಂದ ಕೇಳುತ್ತಿದ್ದಾರೆ.
ಇದುವೆನ್ ಪುಗುಂದದಿಂಗಂನ್ದೋ! ಇಪ್ಪೊಯ್ಗೈಕ್ಕು ಎವ್ವಾರು ವಂದಾಯ್?
ಮಧುವಿನ್ ತುಳಾಯ್ ಮುಡಿ ಮಾಲೇ! ಮಾಯನೇ! ಎಂಗಳ್ ಅಮುದೇ!
ವಿಧಿಯಿನ್ಮೈಯಾಲ್ ಅದು ಮಾಟ್ಟೋಂ ವಿತ್ತಗ ಪಿಳ್ಳಾಯ್ ವಿರೈಯೇಲ್
ಕುದಿ ಕೊಂಡರವಿಲ್ ನಡಿತ್ತಾಯ್ ಕುರುಂದಿಡೈ ಕೂರೈ ಪಣಿಯಾಯ್
ಇಲ್ಲಿ ಏನಾಯಿತು! ಅಯ್ಯೋ! ನೀನು ಯಾವ ಮಾರ್ಗದಿಂದ ನದಿಗೆ ಬಂದಿದ್ದೀಯ? ಜೇನು ತೊಟ್ಟಿಕ್ಕುವ ಕಿರೀಟದ ಮೇಲೆ ತುಳಸಿ ಮಾಲೆಯನ್ನು ತೊಟ್ಟ ಮಹಾಪುರುಷನೇ! ಓ ಅದ್ಭುತ ಚಟುವಟಿಕೆಗಳನ್ನು ಹೊಂದಿರುವವನೇ! ಓ ನಮಗೆ ಅಮೃತದಂತೆ ಸಿಹಿಯಾಗಿರುವವನೇ! ನಾವು ಅದೃಷ್ಟವಂತರಲ್ಲದ ಕಾರಣ, ನಿನ್ನೊಂದಿಗೆ ಇರಲು ನಮಗೆ ಸಾಧ್ಯವಿಲ್ಲ. ಓ ಮಾಯಾವಿಯೇ! ಆತುರಪಡಬೇಡ. ಓ (ವಿಷಪೂರಿತ) ಹಾವು ಕಾಳಿಯನ ಮೇಲೆ ಹಾರಿ ನೃತ್ಯ ಮಾಡಿದವನೇ! ನೀನು ಕುರುಂದಮ್ ವೃಕ್ಷದ ಮೇಲೆ ಇಟ್ಟಿರುವ ವಸ್ತ್ರಗಳನ್ನು ನಮಗೆ ಕರುಣೆಯಿಂದ ಕೊಡಬೇಕು.
ಮೂರನೇ ಪಾಸುರಂ. ಅವರಿಗೆ ವಸ್ತ್ರಗಳನ್ನು ಹಿಂತಿರುಗಿಸುತ್ತೇನೆ ಎಂದು ಅವನು ಹೇಳಿದಾಗ ಅದನ್ನು ನಂಬಿದ ಕೆಲವು ಹುಡುಗಿಯರು ನದಿಯಿಂದ ಹೊರಬಂದರು. ಅವರಿಗೆ ಆತ್ಮೀಯ ಮಾತುಗಳನ್ನಾಡಲು ಆರಂಭಿಸಿದಾಗ ಅವರು ತಮ್ಮ ವಸ್ತ್ರಗಳನ್ನು ಮರಳಿ ಕೊಟ್ಟರೆ ಅಲ್ಲಿಂದ ತೆರಳುವುದಾಗಿ ಹೇಳಿದರು.
ಎಲ್ಲೇ! ಈದೆನ್ನ ಇಳಮೈ? ಎಮ್ಮನೈಮಾರ್ ಕಾಣಿಲ್ ಒಟ್ಟಾರ್*
ಪೊಲ್ಲಾಂಗೀದೆನ್ರು ಕರುದಾಯ್ ಪೂಮ್ ಕುರುಂದೇರಿ ಇರುತ್ತೀ*
ವಿಲ್ಲಾಲ್ ಇಲಂಗೈ ಅಳಿತ್ತಾಯ್ ನೀ ವೇನ್ಡಿಯದೆಲ್ಲಾಮ್ ತರುವೋಮ್*
ಪಲ್ಲಾರುಮ್ ಕಾಣಾಮೇ ಪೋವೋಮ್ ಪಟ್ಟೈ ಪಣಿತ್ತರುಳಾಯೇ*
ಓ ಲಂಕೆಯನ್ನು ಧನುಸ್ಸಿನಿಂದ ನಾಶ ಮಾಡಿದವನೇ! ಅಯ್ಯೋ! ಇದು ಯಾವ ರೀತಿಯ ಕ್ರೀಡೆ! ಇಲ್ಲಿ ನಡೆದದ್ದು ನಮ್ಮ ತಾಯಂದಿರಿಗೆ ತಿಳಿದರೆ ನಮ್ಮನ್ನು ಮನೆಯೊಳಗೆ ಬಿಡುವುದಿಲ್ಲ. ನಾವು ವಸ್ತ್ರಗಳಿಲ್ಲದೇ ಈ ರೀತಿ ಇರುವುದು ನಮಗೆ ಅನುಚಿತವೆಂದು ನೀನು ಯೋಚಿಸುತ್ತಿಲ್ಲ. ಹೂವುಗಳನ್ನು ಅರಳಿದ ಕುರುಂದಮ್ ಮರಕ್ಕೆ ನೀನು ಹತ್ತಿದ್ದೀಯ. ನೀನು ಬಯಸಿದ್ದನ್ನು ನಾವು ನಿನಗೆ ನೀಡುತ್ತೇವೆ. ಯಾರೂ ಕಾಣದ ರೀತಿಯಲ್ಲಿ ನಮ್ಮ ಮನೆಗಳಿಗೆ ನಡೆದುಕೊಂಡು ಹೋಗುತ್ತೇವೆ. ಕರುಣೆಯಿಂದ ನಮ್ಮ ರೇಷ್ಮೆ ವಸ್ತ್ರಗಳನ್ನು ನಮಗೆ ಕೊಡು.
ನಾಲ್ಕನೆಯ ಪಾಸುರಂ. ಹೀಗೆ ಮಾತನಾಡುತ್ತಿದ್ದಾಗ ಅವನು ಭಯ ಹುಟ್ಟಿಸುವಂತೆ ಕೆಲವು ಚೇಷ್ಟೆಗಳಲ್ಲಿ ತೊಡಗಿದನು. ಅದನ್ನು ನೋಡಿ ಅವರು ತಮ್ಮ ದುಃಖವನ್ನು ಹೇಳಿಕೊಂಡು ಆತನ ಕರುಣೆಗಾಗಿ ಪ್ರಾರ್ಥಿಸುತ್ತಾರೆ.
ಪರಕ್ಕ ವಿಳಿತ್ತೆಂಗುಮ್ ನೋಕ್ಕಿ ಪಲರ್ ಕುಡೈನ್ದು ಆಡುಮ್ ಶುನೈಯಿಲ್
ಅರಕ್ಕನಿಲ್ಲಾ ಕಣ್ ನೀರ್ಗಳ್ ಆಲಮರುಗಿನ್ರ ವಾ ಪಾರಾಯ್
ಇರಕ್ಕುಮೇಲ್ ಒನ್ರುಮ್ ಇಲಾದಾಯ್ ಇಲಂಗೈ ಆಳಿತ್ತ ಪಿರಾನೇ!
ಕುರಂಗರಾಶು ಆವದರಿಂದೋಮ್ ಕುರಂದಿಡೈ ಕೂರೈ ಪಣಿಯಾಯ್
ಓ ಲಂಕೆವನ್ನು ನಾಶ ಮಾಡಿದವನೇ! ಈ ಸರೋವರದಲ್ಲಿ ಅನೇಕ ಜನರು ಸ್ನಾನ ಮಾಡುತ್ತಿದ್ದಾರೆ. ಈ ತೊರೆಯ ದಡದ ಸುತ್ತಲಿನ ಎಲ್ಲಾ ದಿಕ್ಕುಗಳಲ್ಲಿ ನೋಡು ಮತ್ತು ನಾವು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗಲೂ ನಮ್ಮ ಮುಖದ ಮೇಲೆ ಕಣ್ಣೀರು ಹರಿಯುವುದನ್ನು ನೋಡು. ಓ ಸಹಾನುಭೂತಿ ಇಲ್ಲದವನೇ! ಮರಗಳನ್ನು ಏರುವ ಮಂಗಗಳ ನಾಯಕ ನೀನು ಎಂದು ನಾವು ಅರಿತುಕೊಂಡಿದ್ದೇವೆ. ಕುರುಂದಮ್ ಮರದ ಮೇಲಿರುವ ವಸ್ತ್ರಗಳನ್ನು ಕರುಣೆಯಿಂದ ಕೊಡು.
ಐದನೇ ಪಾಸುರಂ. ಆಂಡಾಳ್ ಮುಮುಕ್ಷುಗಳ ಕುಲದಲ್ಲಿ (ಮುಕ್ತಿಯನ್ನು ಬಯಸಿದ ಆಳ್ವಾರರ ಕುಲ) ಜನಿಸಿದ ಕಾರಣ, ಅವಳು ಎಂಪೆರುಮಾನನ ದಿವ್ಯ ಮನಸ್ಸನ್ನು ತಿಳಿದಿದ್ದಾಳೆ. ಗಜೇಂದ್ರಾಳ್ವಾನ್ (ಮೊಸಳೆಯಿಂದ ತೊಂದರೆಗೊಳಗಾದ ಆನೆ) ಕರೆದಾಗ, ಅವನು ತನ್ನ ಹಿರಿಮೆಯನ್ನು ನೋಡದೆ ತಕ್ಷಣವೇ ಬಂದನು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಗಜೇಂದ್ರಾಳ್ವಾನ್ ಅನುಭವಿಸಿದ ತೊಂದರೆಗಿಂತ ಅವರು ಹೆಚ್ಚು ಬಳಲುತ್ತಿದ್ದಾರೆ ಮತ್ತು ಆದ್ದರಿಂದ ಅವನು ತಮ್ಮ ವಸ್ತ್ರಗಳನ್ನು ನೀಡಬೇಕು ಎಂದು ಅವರು ಹೇಳುತ್ತಾರೆ.
ಕಾಲೈ ಕದುವಿಡುಗಿನ್ರ ಕಯಲೊಡು ವಾಳೈ ವಿರವಿ*
ವೇಲೈ ಪಿಡಿತ್ತೆನ್ ಐಮಾರ್ಗಳ್ ಓಟ್ಟಿಲ್* ಎನ್ನ ವಿಳೈಯಾಟ್ಟೋ?
ಕೋಲಮ್ ಶಿತ್ತಾಡೈ ಪಲವುಮ್ ಕೊಂಡು ನೀ ಏರಿ ಇರಾದೇ*
ಕೋಲಮ್ ಕರಿಯ ಪಿರಾನೇ! ಕುರುಂದಿಡೈ ಕೂರೈ ಪಣಿಯಾಯ್*
ಕಡು ದಿವ್ಯ ರೂಪವನ್ನು ಹೊಂದಿರುವ ಓ ಎಂಪೆರುಮಾನ್! ಕಯಲು ಮೀನು ಮತ್ತು ಬಾಳೆ ಮೀನುಗಳು ಒಟ್ಟಿಗೆ ನಮ್ಮ ಕಾಲುಗಳನ್ನು ಕಚ್ಚುತ್ತಿವೆ. ನೀನು ನಮಗೆ ಈ ರೀತಿ ತೊಂದರೆ ಕೊಡುತ್ತೀಯ ಎಂದು ನಮ್ಮ ಸಹೋದರರಿಗೆ ತಿಳಿದರೆ, ಅವರು ನಿನ್ನನ್ನು ಓಡಿಸಲು ತಮ್ಮ ಈಟಿಗಳನ್ನು ಹಿಡಿದು ಓಡುತ್ತಾರೆ; ಅದು ಇನ್ನೊಂದು ರೀತಿಯ ಆಟದಲ್ಲಿ ಕೊನೆಗೊಳ್ಳುವುದಿಲ್ಲವೇ? ಸುಂದರವಾದ ಗಿಡ್ಡ ಉಡುಪುಗಳನ್ನು ಧರಿಸಿ ಕುರುಂದಮ್ ಮರದ ಮೇಲೆ ಕುಳಿತುಕೊಳ್ಳುವ ಬದಲು, ನೀನು ಕರುಣೆಯಿಂದ ನಮ್ಮ ಉಡುಪನ್ನು ನಮಗೆ ನೀಡಬೇಕು.
ಆರನೇ ಪಾಸುರಂ. ಇಲ್ಲಿ, ಅವರು ಕಮಲದ ಕಾಂಡಗಳಿಂದ ಹೇಗೆ ತೊಂದರೆಗೊಳಗಾಗುತ್ತಾರೆ ಮತ್ತು ಆತನನ್ನು ಪ್ರಾರ್ಥಿಸುತ್ತಾರೆ ಎಂಬುದರ ಕುರಿತು ಉಲ್ಲೇಖಿಸಿದ್ದಾರೆ.
ತಡತ್ತವಿಳ್ ತಾಮರೈ ಪೊಯ್ಗೈ ತಾಳ್ಗಳ್ ಎಂ ಕಾಲೈ ಕದುವ*
ವಿಡತ್ತೇಳ್ ಎರಿಂದಾಲೇ ಪೋಲ ವೇದನೈ ಆಟ್ರವುಮ್ ಪಟ್ಟೋಮ್*
ಕುಡತ್ತೈ ಎಡುತ್ತೇರವಿಟ್ಟು ಕೂತ್ತಾಡಾವಲ್ಲ ಎಮ್ ಕೋವೇ!*
ಪಡಿಟ್ರೈ ಎಲ್ಲಾಮ್ ತವಿರ್ನ್ದು ಎಂಗಳ್ ಪಟ್ಟೈ ಪಣಿನ್ದರುಳಾಯೇ*
ವಿಸ್ತಾರವಾಗಿರುವ, ಕಮಲದ ಹೂಗಳನ್ನು ಹೊಂದಿರುವ ಕೊಳದಲ್ಲಿರುವ ತಾವರೆ ಗಿಡಗಳ ಕಾಂಡಗಳು ನಮ್ಮ ಕಾಲುಗಳನ್ನು ಕಚ್ಚುತ್ತಿವೆ. ನಾವು ವಿಷಕಾರಿ ಚೇಳುಗಳು ಕಚ್ಚಿದವರಂತೆ ನರಳುತ್ತಿದ್ದೇವೆ. ಮಡಿಕೆಗಳನ್ನು ಎಸೆದು ಕುಣಿಯುವ ಸಾಮರ್ಥ್ಯವುಳ್ಳ ನಮ್ಮ ನಾಯಕನೇ! ನೀನು ಮಾಡುತ್ತಿರುವ ಚೇಷ್ಟೆಯನ್ನು ನಿಲ್ಲಿಸಿ ಕರುಣೆಯಿಂದ ನಮ್ಮ ರೇಷ್ಮೆ ವಸ್ತ್ರಗಳನ್ನು ನಮಗೆ ಕೊಡಬೇಕು.
ಏಳನೇ ಪಾಸುರಂ. ಅವರಂತಹ ಹುಡುಗಿಯರಿಗೆ ತೊಂದರೆ ಕೊಡಬೇಡ, ಅನ್ಯಾಯ ಮಾಡಬೇಡ ಎಂದು ಹೇಳುತ್ತಾರೆ.
ನೀರಿಲೇ ನಿನ್ರಯರ್ಗಿನ್ರೋಮ್ ನೀದಿ ಅಲ್ಲಾದನ ಶೆಯ್ದಾಯ್*
ಊರಗಮ್ ಶಾಲವುಮ್ ಶೆಯ್ತಾಲ್ ಊಳಿ ಎಲ್ಲಾಮ್ ಉಣರ್ವಾನೇ*
ಆರ್ವಮ್ ಉನಕ್ಕೇ ಉಡೈಯೋಮ್ ಅಮ್ಮನೈಮಾರ್ ಕಾಣಿಲ್ ಒಟ್ಟಾರ್*
ಪೋರ ವಿಡಾಯ್ ಎಂಗಳ್ ಪಟ್ಟೈ ಪೂಂಗುರುಂದೇರಿ ಇರಾದೇ*
ಪ್ರಳಯಕಾಲದಲ್ಲಿಯೂ ಯಾರೂ ಇಲ್ಲದಿರುವಾಗಲೂ ಎಲ್ಲರನ್ನೂ ರಕ್ಷಿಸಬೇಕೆಂದು ಯೋಚಿಸುತ್ತಿರುವವನೇ! ನೀರಿನಲ್ಲಿ ನಿಂತು ನರಳುತ್ತಿದ್ದೇವೆ. ನೀನು ಅನ್ಯಾಯದ ಕೃತ್ಯಗಳನ್ನು ಮಾಡುತ್ತಿದ್ದೀಯ. ನಿನ್ನಿಂದ ಪಾರಾಗಬೇಕೆಂದರೂ ನಮ್ಮ ಮನೆಗಳು ಮತ್ತು ಊರು ಇಲ್ಲಿಂದ ದೂರವಿದೆ. ಅಯ್ಯೋ! ನೀನು ನಮಗೆ ಈ ರೀತಿ ತೊಂದರೆ ಕೊಟ್ಟರೂ ನಾವು ನಿನ್ನ ಬಗ್ಗೆ ತುಂಬಾ ಪ್ರೀತಿಯಿಂದ ಇರುತ್ತೇವೆ. ನಮ್ಮ ತಾಯಂದಿರು ನಿನ್ನೊಂದಿಗೆ ನಮ್ಮನ್ನು ನೋಡಿದರೆ, ಅವರು ನಮ್ಮನ್ನು (ಮತ್ತೆ ಇಲ್ಲಿಗೆ ಬರಲು) ಬಿಡುವುದಿಲ್ಲ. ಕರುಣೆಯಿಂದ ನಮ್ಮ ರೇಷ್ಮೆ ವಸ್ತ್ರಗಳನ್ನು ನಮಗೆ ಕೊಡು. ಚೆನ್ನಾಗಿ ಅರಳಿದ ಹೂವುಗಳನ್ನು ಹೊಂದಿರುವ ಕುರುಂದಮ್ ಮರದ ಮೇಲೆ ಕುಳಿತುಕೊಳ್ಳಬೇಡ.
ಎಂಟನೆಯ ಪಾಸುರಂ. ಯಾರ ಸಮ್ಮುಖದಲ್ಲಿ ನೀನು ನಾಚಿಕೆಪಡುತ್ತೀಯೋ ಆ ಸಂಬಂಧಿಕರು ಇಲ್ಲಿಗೆ ಬಂದಿದ್ದಾರೆ. ಅವರ ಉಪಸ್ಥಿತಿಯಲ್ಲಿ ಈ ಚೇಷ್ಟೆಗಳನ್ನು ನಡೆಸಬೇಡ ಮತ್ತು ನಾಚಿಕೆಪಡಬೇಡ.
ಮಾಮಿಮಾರ್ ಮಕ್ಕಳೇ ಅಲ್ಲೋಮ್ ಮಟ್ರುಮ್ ಇಂಗೆಲ್ಲಾರುಮ್ ಪೋನ್ದಾರ್*
ತೂ ಮಲರ್ ಕಣ್ಗಳ್ ವಳರ ತೊಲ್ಲೈ ಇರಾ ತುಯಿಲ್ವಾನೇ*
ಶೇಮಮೇಲ್ ಅನ್ರಿದು ಶಾಲ ಚಿಕ್ಕೆನ ನಾಮ್ ಇದು ಶೊನ್ನೋಮ್*
ಕೋಮಳ ಆಯರ್ ಕೊಳುನ್ದೇ! ಕುರುಂದಿಡೈ ಕೂರೈ ಪಣಿಯಾಯ್*
ಓಹ್, ಪೂರ್ವಕಾಲದಲ್ಲಿ (ಹಗಲಿನ ವೇಳೆಯಲ್ಲಿ) ಚೇಷ್ಟೆಗಳನ್ನು ಮಾಡಿದ ನಂತರ ಮಲಗಲು ಪರಿಶುದ್ಧ ಹೂವುಗಳಂತಿರುವ ಕಣ್ಣುಗಳಿಂದ ಮಲಗಿರುವವನೇ! ಇಲ್ಲಿರುವವರಲ್ಲಿ ನಿನ್ನ ಚಿಕ್ಕಮ್ಮನ ಹೆಣ್ಣುಮಕ್ಕಳು ಮಾತ್ರವಲ್ಲ, ನಿನ್ನ ಚಿಕ್ಕಮ್ಮ ಮತ್ತು ಅವರ ತಾಯಿಯಂತಹ ಇತರ ಸಂಬಂಧಿಕರೂ ಇದ್ದಾರೆ. ನಿನ್ನ ಈ ಚೇಷ್ಟೆಗಳು ಸೂಕ್ತವಲ್ಲ. ನಾವು ಈ ಮಾತುಗಳನ್ನು ಸತ್ಯವಾಗಿ ಹೇಳಿದ್ದೇವೆ. ಓ ಗೋಪ ಕುಲಕ್ಕೆ ಕೋಮಲ ಚಿಗುರಿದಂತಿರುವವನೇ! ನೀನು ಕರುಣೆಯಿಂದ ನಮ್ಮ ವಸ್ತ್ರಗಳನ್ನು ನಮಗೆ ಕೊಡಬೇಕು.
ಒಂಭತ್ತನೇ ಪಾಸುರಂ. ಎಂಪೆರುಮಾನ್ ಎರಡು ಸ್ಥಿತಿಗಳಲ್ಲಿರುತ್ತಾನೆ – ಆತನನ್ನು ಆಚರಿಸುವವರಿಗೆ (ಪೂಜಿಸುವ) ಕಾರ್ಯಗಳನ್ನು ಅವನು ನಿರ್ವಹಿಸುತ್ತಾನೆ; ಆತನು ತನ್ನನ್ನು ನಿಂದಿಸುವವರಿಗೆ ಕಾರ್ಯಗಳನ್ನು ಸಹ ನಿರ್ವಹಿಸುವನು. ಆತನನ್ನು ಹೊಗಳಿ ಯಾವುದೇ ಪ್ರಯೋಜನವಾಗದ ಕಾರಣ ಈಗ ಆತನನ್ನು ನಿಂದಿಸೋಣ ಎಂದು ನಿರ್ಧರಿಸಿ ಅದರಿಂದ ತಮಗೆ ಲಾಭವಾಗುತ್ತದೆಯೇ ಎಂದು ನೋಡುತ್ತಾರೆ.
ಕಂಜನ್ ವಲೈ ವೈತ್ತ ಅನ್ರು ಕಾರಿರುಳ್ ಎಲ್ಲಿಲ್ ಪಿಳೈತ್ತು*
ನೆಂಜು ತುಕ್ಕಮ್ ಶೆಯ್ಯ ಪೋನ್ದಾಯ್ ನಿನ್ರ ಇಕ್ಕನ್ನಿಯರೋಮೈ*
ಅಂಜ ಉರಪ್ಪಾಳ್ ಯಶೋದೈ ಆಣಾಡ ವಿಟ್ಟಿಟ್ಟಿರುಕ್ಕುಮ್*
ವಂಜಕ ಪೇಯ್ಚಿ ಪಾಲುಂಡ ಮಶುಮೈಯಿಲೀ! ಕೂರೈ ತಾರಾಯ್*
ಕಂಸನು (ಕಣ್ಣನ ತಾಯಿಯ ಅಣ್ಣ) ನಿನ್ನನ್ನು ಕೊಲ್ಲಲು ಬಯಸಿದ ಸಮಯದಲ್ಲಿ, ನೀನು ಕತ್ತಲೆಯ ರಾತ್ರಿಯಲ್ಲಿ ತಪ್ಪಿಸಿಕೊಂಡು ಇಲ್ಲಿಗೆ ಬಂದು ಈ ಸರೋವರದಲ್ಲಿ ನಿಂತಿರುವ ಯುವತಿಯರಿಗೆ ದುಃಖವನ್ನು ನೀಡುತ್ತೀದ್ದೀಯ. ಯಶೋದಾ ದೇವಿಯು ನಿನ್ನನ್ನು ಭಯಪಡಿಸಲು ಇಷ್ಟವಿಲ್ಲದೆ ಗದರಿಸುವುದಿಲ್ಲ. ನೀವು ಚೇಷ್ಟೆಗಳನ್ನು ನಡೆಸುವ ಮಟ್ಟಿಗೆ ಅವಳು ನಿನಗೆ ಅವಕಾಶ ಮಾಡಿಕೊಡುತ್ತಾಳೆ. ಪೂತನಿಯ (ರಾಕ್ಷಸಿ) ಹಾಲು ಮತ್ತು ಪ್ರಾಣವನ್ನು ಕುಡಿದ ನಾಚಿಕೆಯಿಲ್ಲದವನೇ! ನಮ್ಮ ವಸ್ತ್ರಗಳನ್ನು ನಮಗೆ ಕೊಡು.
ಹತ್ತನೇ ಪಾಸುರಂ. ಆಂಡಾಳ್ ಈ ಪಧಿಗವನ್ನು ಕಲಿಯುವವರಿಗೆ ಫಲವನ್ನು ತಿಳಿಸುವ ಮೂಲಕ ಪಧಿಗವನ್ನುಪೂರ್ಣಗೊಳಿಸುತ್ತಾಳೆ.
ಕನ್ನಿಯರೋಡೆಂಗಳ್ ನಂಬಿ ಕರಿಯ ಪಿರಾನ್ ವಿಳೈಯಾಟ್ಟೈ*
ಪೊನ್ನಿಯಲ್ ಮಾಡನ್ಗಳ್ ಶೂಳ್ನ್ದ ಪುದುವೈಯರ್ ಕೋನ್ ಪಟ್ಟನ್ ಗೋದೈ*
ಇನ್ನಿಶೈಯಾಲ್ ಶೊನ್ನ ಮಾಲೈ ಈರೈನ್ದುಂ ವಲ್ಲವರ್ ತಾಮ್ ಪೋಯ್*
ಮನ್ನಿಯ ಮಾಧವನೋಡು ವೈಗುನ್ದಮ್ ಪುಕ್ಕಿರುಪ್ಪಾರೇ*
ನಮ್ಮ ಅಧಿಪತಿಯಾದ ಮತ್ತು ಕಪ್ಪು ಮೈಬಣ್ಣವನ್ನು ಹೊಂದಿರುವ ಕಣ್ಣಪಿರಾನ್ (ಶ್ರೀ ಕೃಷ್ಣ), ಗೋಪಾಲಕಿಯರಾದ ನಮ್ಮೊಂದಿಗೆ ದೈವೀಕವಾಗಿ ತಮಾಷೆಯ ಚೇಷ್ಟೆ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಸುಂದರವಾದ ಸುವರ್ಣ ಮಹಲುಗಳಿಂದ ಆವೃತವಾಗಿರುವ ಶ್ರೀವಿಲ್ಲಿಪುತ್ತೂರಿನಲ್ಲಿ ವಾಸಿಸುವವರ ನಾಯಕರಾದ ಪೆರಿಯಾಳ್ವಾರ್ ಅವರ ಪುತ್ರಿ ಆಂಡಾಳ್ (ನಾನು) ನಮ್ರವಾಗಿ,ಕರುಣಾಮಯವಾಗಿ ಆ ಕಾರ್ಯಗಳನ್ನು ಪಾಸುರಗಳಲ್ಲಿ ಮಧುರವಾದ ಸಂಗೀತದೊಂದಿಗೆ ರಚಿಸಿದ್ದೇನೆ. ಈ ಹತ್ತು ಪಾಸುರಗಳನ್ನು ಕಲಿಯುವ ಸಾಮರ್ಥ್ಯವುಳ್ಳವರು ಅರ್ಚಿರಾದಿ ಮಾರ್ಗದ (ಪ್ರಕಾಶಮಾನವಾದ ಮಾರ್ಗ) ಮೂಲಕ ಹೋಗಿ ಶ್ರೀವೈಕುಂಠವನ್ನು ತಲುಪುತ್ತಾರೆ ಮತ್ತು ಅಲ್ಲಿ ಶಾಶ್ವತವಾಗಿ ವಾಸಿಸುವ ಶ್ರೀಮಾನ್ ನಾರಾಯಣನ ಜೊತೆಗೆ ಉತ್ತಮ ಅನುಭವವನ್ನು ಹೊಂದುತ್ತಾರೆ.
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ: https://divyaprabandham.koyil.org/index.php/2020/05/nachchiyar-thirumozhi-3-simple/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org