Daily Archives: January 1, 2021

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೬ ಮತ್ತು ೩೭ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೩೬

ಆೞ್ವಾರ್ಗಳ ಹಾಗು ಅವರ ಅರುಳಿಚೆಯಲ್ಗಳ ವೈಶಿಷ್ಟ್ಯತೆಯನ್ನು ನಿಜವಾಗಿ ತಿಳಿದವರು ನಮ್ಮ ಆಚಾರ್ಯಗಳಿಗಿಂತ ಬೇರಾರೂ ಇಲ್ಲ .

ತೆರುಳುಱ್ಱ ಆೞ್ವಾರ್ಗಳ್ ಸೀರ್ಮೈ ಅರಿವಾರ್ ಆರ್

ಅರುಳಿಚೆಯಲೈ ಅರಿವಾರ್ ಆರ್- ಅರುಳ್ ಪೆಱ್ಱ

 ನಾಥಮುನಿ ಮುದಲಾಂ ನಂ ದೇಶಿಕರೈ ಅಲ್ಲಾಲ್

ಪೇದೈ ಮನಮೇ ಉಂಡೋ ಪೇಸು.

ಓ ಅರಿವಿಲ್ಲದ ಮನಸೇ! ಕಲ್ಮಷವಿಲ್ಲದ ಜ್ಞಾನ ಪಡೆದ ಆೞ್ವಾರ್ಗಳ ವೈಶಿಷ್ಟ್ಯತೆಯನ್ನು ಬಲ್ಲವರು ಯಾರು? ಅವರು ರಚಿಸಿದ ಅರುಳಿಚೆಯಲ್ಗಳ ವೈಶಿಷ್ಟ್ಯತೆಯನ್ನು ತಿಳಿದವರು ಯಾರು? ಆೞ್ವಾರ್ಗಳಿಂದ , ವಿಶೇಷವಾಗಿ ನಮ್ಮಾೞ್ವಾವಾರರಿಂದ , ಅನುಗ್ರಹ ಪಡೆದ ನಾಥಮುನಿಗಳಿಂದ ತೊಡಗಿ ನಮ್ಮ ಆಚಾರ್ಯಗಳಿಗಿಂತ ಬೇರೆ ಯಾರಿರುವರು ಎಂದು ಚೆನ್ನಾಗಿ ಪರಿಶೀಲಿಸಿ , ನಂತರ ಮಾತನಾಡು.

 ಆೞ್ವಾರ್ಗಳ ವೈಭವವನ್ನು ನಮ್ಮ ಆಚಾರ್ಯರುಗಳು ಮಾತ್ರ ಸರಿಯಾಗಿ ತಿಳಿದಿರುವರು. ಒಬ್ಬರು ಒಂದು ತತ್ವವನ್ನು ಪರಿಪೂರ್ಣವಾಗಿ ಅರಿತವರಾದರೆ ಅಕ್ಕೆ ಅನುಗುಣವಾಗಿ ನಡೆದುಕೊಳ್ಳುವರು. ನಮ್ಮ ಪೂರ್ವಾಚಾರ್ಯರು, ಆೞ್ವಾರ್ಗಳ ಅರುಳಿಚೆಯಲ್ಗಳಿಗೆ ಕರುಣೆಯಿಂದ  ವ್ಯಖ್ಯಾನಗಳನ್ನು ಬರೆದು ಅದಕ್ಕೆ ಅನುಗುಣವಾಗಿ ತಪ್ಪದೆ ನಡೆದುಕೊಂಡಿದ್ದರಿಂದ ಅವರಿಗೆ ಆೞ್ವಾರ್ಗಳ ಬಗ್ಗೆ ಪರಿಪೂರ್ಣ ಜ್ಞಾನವು ಇರುವುದೆಂದು ನಾವು ತಿಳಿಯಬಹುದು.

ಪಾಸುರ ೩೭

ಪ್ರಪತ್ತಿ ಮಾರ್ಗವು (ಎಂಪೆರುಮಾನರಿಗೆ ಶರಣಾಗತಿಯಾಗುವ   ಮಾರ್ಗ) ಪಾರಂಪರ್ಯವಾಗಿ ವರ್ಗಾಯಿಸಿದ ನಮ್ಮ ಪೂರ್ವಾಚಾರ್ಯರು , ನಾಥಮುನಿಗಳಿಂದ ತೊಡಗಿದ್ದು ಎಂಪೆರುಮಾನಾರರು ಅವರ ಅಪಾರ ಕರುಣೆಯಿಂದ ಬದಲಾಯಿಸಿದರು.

ಓರಾನ್ವೞಿಯಾಯ್ ಉಪದೇಶಿತ್ತಾರ್ ಮುನ್ನೋರ್ 

ಏರಾರ್ ಎದಿರಾಸರ್ ಇನ್ನರುಳಾಲ್ -ಪಾರ್ ಉಲಗಿಲ್

ಆಸೈ ಉಡೈಯೋರ್ಕ್ಕು ಎಲ್ಲಾಂ ಆರಿಯರ್ಗಾಳ್ ಕೂಱುಮ್ ಎನ್ಱು

ಪೇಸಿ ವರಂಬು ಅಱುತ್ತಾರ್ ಪಿನ್

ಎಂಪೆರುಮಾನಾರ ಕಾಲಘಟ್ಟಕ್ಕೆ ಹಿಂದೆ, ಆಚಾರ್ಯರು ವಿಶೇಷವಾದ ಕೆಲವು ಶಿಷ್ಯರಿಗೆ ಮಾತ್ರ ಪ್ರಪತ್ತಿಯ ಅರ್ಥಗಳನ್ನು ಉಪದೇಶಿಸುತ್ತಿದ್ದರು. 

ಅವರು ಅದನ್ನು ಎಲ್ಲರಿಂದ ಮುಚ್ಚಿಟ್ಟರು, ಈ ತತ್ವದ ಮಹತ್ವವನ್ನು ಪರಿಗಣಿಸಿ, ಸೂಕ್ತ ವೈಶಿಷ್ಟ್ಯತೆಯುಳ್ಳ ಎಂಪೆರುಮಾನಾರು, ಅವರ ಅಪಾರ ಕರುಣೆಯಿಂದ, ಈ ಲೋಕದ ಜನರ ತವಕ ತಡೆಯಲಾರದೆ, ಶ್ರೇಷ್ಠ ಆಚಾರ್ಯಗಳಾದ ಕೂರತ್ತಾಳ್ವಾನ್, ಮುದಲಿಯಾಂಡಾನ್ ಮುಂತಾದವರನ್ನು ನಮ್ಮ ಸಂಪ್ರದಾಯದಲ್ಲಿ ನೇಮಿಸಿ,ಅವರಿಗೆ ಹೇಳಿದರು“ಎಂಪೆರುಮಾನರನ್ನು ಪಡೆಯಲು ತವಕಿಸಿ ಆಸೆಯಿರುವರಿಗೆಲ್ಲಾ,ನಾನು ಕರುಣೆಯಿಂದ ಮಾಡಿದಂತೆ, ಉಪದೇಶಿಸಿ.” ಮತ್ತು ಅಲ್ಲಿಯವರೆಗು ಜಾರಿಯಲ್ಲಿದ್ದ ಕೆಲವರಿಗೆ ಮಾತ್ರ ಉಪದೇಶಿಸುವ ನಿರ್ಭಂಧಗಳನ್ನು ಅದರೊಡಣೆ ನಿಲ್ಲಿಸಿದರು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-36-37-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org