Category Archives: upadhESa raththina mAlai

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೧ ಮತ್ತು ೫೨ ನೇ ಪಾಸುರಂ

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೫೧ 

ನಂಪಿಳ್ಳೈಯವರಿಗೆ ಲೋಕಾಚಾರ್ಯರ್ ಎಂಬ ವೈಶಿಷ್ಟ್ಯವಾದ ದಿವ್ಯ ಹೆಸರು ಬಂದ ರೀತಿಯನ್ನು ಮಾಮುನಿಗಳು ದಯೆತೋರಿ ವಿವರಿಸುತ್ತಾರೆ.

ತುನ್ನು ಪುಗೞ್ ಕಂದಾಡೈ ತೋೞಪ್ಪರ್ ತಂ ಉಗಪ್ಪಾಲ್ 

ಎನ್ನ ಉಲಗಾರಿಯನೋ ಎನ್ಱು ಉರೈಕ್ಕಪ್ -ಪಿನ್ನೈ

ಉಲಗಾರಿಯನ್ ಎನ್ನುಂ ಪೇರ್ ನಂಪಿಳ್ಳೈಕ್ಕು ಓಂಗಿ

ವಿಲಗಾಮಲ್ ನಿನ್ಱದು ಎನ್ಱುಂ ಮೇಲ್

ಕಂದಾಡೈ ತೋೞಪ್ಪರ್ ಅವರು ತಮ್ಮ ಜನನಕುಲ ಮತ್ತು ಜ್ಞಾನದ  ವಿಷಯದಲ್ಲಿ ಶ್ರೇಷ್ಠತೆಯನ್ನು ಹೊಂದಿದ್ದರು, ಅವರು ಮುಧಲಿಯಾಂಡಾನ್ ಅವರ ಮೊಮ್ಮಗ [ಭಗವದ್ ರಾಮಾನುಜರ್ ಅವರ ಸೋದರಳಿಯ ಮತ್ತು ಅವರ ಆತ್ಮೀಯ ಶಿಷ್ಯರಲ್ಲಿ ಒಬ್ಬರು].ನಂಪಿಳ್ಳೈ ಅವರ ಜ್ಞಾನ ಮತ್ತು ಅವರು ಹೊಂದಿದ್ದ ಶಿಷ್ಯರ ಸಂಖ್ಯೆಯಿಂದಾಗಿ ಅವರು ನಂಪಿಳ್ಳೈ ಬಗ್ಗೆ ಅಸೂಯೆ ಹೊಂದಿದ್ದರು.ಒಂದು ದಿನ, ಅವರು ಇತರ ಭಕ್ತರ ಸಮ್ಮುಖದಲ್ಲಿ, ನಂಪೆರುಮಾಳರ ಸನ್ನಿಧಿಯಲ್ಲಿ ನಂಪಿಳ್ಳೈಯನ್ನು ಅವಮಾನಿಸಿ ತಮ್ಮ ಮನೆಗೆ ಮರಳಿದರು. ಏನಾಯಿತು ಎಂಬುದರ ಬಗ್ಗೆ ಕೇಳಿದ ಅವರ ಹೆಂಡತಿ, ಅವರ ಕಾರ್ಯಕ್ಕಾಗಿ ಅವರನ್ನು ದಂಡಿಸಿದರು, ಇದರ ಪರಿಣಾಮವಾಗಿ ಅವರ ಮನಸ್ಸಿನಲ್ಲಿ ಸ್ಪಷ್ಟತೆಯನ್ನು ಪಡೆದರು.ಅವರು ತಮ್ಮ ಮನೆಯ ಬಾಗಿಲು ತೆರೆದು ನಂಪಿಳ್ಳೈಗೆ ಕ್ಷಮೆಯಾಚಿಸಿಲು ಹೊರಟರು. ನಂಪಿಳ್ಳೈ ಅವರ ಬಾಗಿಲಿನ ಹೊರಗೆ ಕಾಯುತ್ತಿದ್ದರು. ಅವರು ಮಾತನಾಡುವ ಮೊದಲು, ನಂಪಿಳ್ಳೈ ಅವರಿಗೆ “ನಾನು ಅನುಚಿತವಾಗಿ ವರ್ತಿಸಿದ್ದೇನೆ, ಮುದಲಿಯಾಂಡಾನ್ ಕುಲದ ವಂಶಸ್ಥರಾದ ನೀವು ಕೋಪಗೊಂಡಿದ್ದೀರಿ. ನನ್ನ ವರ್ತನೆಗೆ ನೀವು ನನ್ನನ್ನು ಕ್ಷಮಿಸಬೇಕು ” ಎಂದರು.

ಇದನ್ನು ಕೇಳಿದ ಕಂದಾಡೈ ತೋೞಪ್ಪರ್  “ನಾನು ನಿಮ್ಮಂತಹ ಯಾರನ್ನೂ ಇಲ್ಲಿಯವರೆಗೆ ನೋಡಿಲ್ಲ. ನೀವು ಕೆಲವೇ ಜನರಿಗೆ ಅಚಾರ್ಯರು ಮಾತ್ರವಲ್ಲ ಇಡೀ ಜಗತ್ತಿಗೆ ನೀವು ಆಚಾರ್ಯರಾಗಲು ಅರ್ಹರಾಗಿದ್ದೀರಿ. ನೀವು ಲೋಕಾಚಾರ್ಯರ್ (ಇಡೀ ಜಗತ್ತಿಗೆ ಶಿಕ್ಷಕರು) ”. ಈ ಘಟನೆಯ ನಂತರ, ಲೋಕಾಚಾರ್ಯರ್ ಎಂಬ ಹೆಸರು ನಂಪಿಳ್ಳೈಗಾಗಿ ಎಲ್ಲೆಡೆ ಹರಡಿತು ಮತ್ತು ದೃಡವಾಗಿ ಸ್ಥಾಪನೆಯಾಯಿತು.

ಪಾಸುರ ೫೨

ಲೋಕಾಚಾರ್ಯರ್ ಎಂಬ ದಿವ್ಯ ನಾಮವು ಪ್ರಪಂಚದಾದ್ಯಂತ ಪ್ರಸಿದ್ಧವಾಗುವ ಕಾರಣವನ್ನು ವಿವರಿಸುತ್ತಾರೆ.

ಪಿನ್ನೈ ವಡಕ್ಕು ತಿರುವೀದಿಪಿಳ್ಳೈ ಅನ್ಬಾಲ್

ಆನ್ನ ತಿರುನಾಮತ್ತೈ ಆದರಿತ್ತು -ಮನ್ನುಪುಗೞ್

ಮೈಂದರ್ಕ್ಕುಚ್ ಚಾಱ್ಱುಗೈಯಾಲ್ ವಂದು ಪರಂದದು ಎಂಗುಂ

ಇಂದ ತಿರುನಾಮಮ್ ಇಂಗು

ಹಿಂದಿನ ಪಾಸುರಂನಲ್ಲಿ ಕಂಡುಬರುವ ನಿರೂಪಣೆಯ ನಂತರ, ನಂಪಿಳ್ಳೈನ ಶಿಷ್ಯರಾದ ವಡಕ್ಕುತಿರುವೀದಿಪಿಳ್ಳೈ,  ಲೋಕಾಚಾರಿಯಾರ್ ಎಂಬ ದಿವ್ಯ ನಾಮದ ಮೇಲಿನ ವಾತ್ಸಲ್ಯದಿಂದಾಗಿ, ಅಚಾರ್ಯನ ಕರುಣೆಯಿಂದ ಹುಟ್ಟಿದ ತನ್ನ ಮಗನಿಗೆ, ಶ್ರೇಷ್ಠತೆಯನ್ನು ಹೊಂದಿದ್ದವರಿಗೆ ಆ ದೈವಿಕ ಹೆಸರನ್ನು ಕೊಟ್ಟರು.ಹೀಗಾಗಿ, ಈ ದೈವಿಕ ಹೆಸರು ಇನ್ನಷ್ಟು ಪ್ರಸಿದ್ಧವಾಯಿತು.

ಮಾಮುನಿಗಳು ಕೂಡ ಪಿಳ್ಳೈ ಲೋಕಾಚಾರ್ಯರನ್ನು ವಾತ್ಸಲ್ಯದಿಂದ “ವಾೞಿ ಉಲಗಾರಿಯನ್” (ಪಿಳ್ಳೈ ಲೋಕಾಚಾರ್ಯರು ಧೀರ್ಘಕಾಲ ಬಾಳಲಿ) ಎಂದು ಪ್ರಶಂಸಿದ್ದಾರೆ.ಪ್ರಪಂಚದ ಎಲ್ಲ ಜನರ ಉನ್ನತಿಗಾಗಿ ಪಿಳ್ಳೈ ಲೋಕಾಚಾರ್ಯರು ದಯೆತೋರಿ ಅನೇಕ ರಹಸ್ಯ ಗ್ರಂಥಗಳನ್ನು (ಗುಪ್ತ ಶಾಸ್ತ್ರಗಳನ್ನು) ರಚಿಸುವುದರೊಂದಿಗೆ, ಅವರ ಮಹಾನ್ ಸಹಾನುಭೂತಿಯಿಂದ, ಅವರ ದಿವ್ಯ ನಾಮವು ಪ್ರಪಂಚದಾದ್ಯಂತ ಆಚರಿಸಲಾಯಿತು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/07/upadhesa-raththina-malai-51-52-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org   
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೦ ನೇ ಪಾಸುರಂ

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೫೦

ಈಡು ಭಾಷ್ಯದ ಶ್ರೇಷ್ಠತೆಯನ್ನು ಹೀಗೆ ವಿವರಿಸಿದ ನಂತರ, ಮಾಮುನಿಗಳು, ತಿರುವಾಯ್ಮೊಳಿಯ ನಿಜವಾದ ಅರ್ಥವಾದ ಶ್ರೀವಚನ ಭೂಷಣದ  ಹಿರಿಮೆಯನ್ನು ನಿರೂಪಿಸಲು ನಿರ್ಧರಿಸಿದ್ದು,ಆರಂಭದಲ್ಲಿ ನಂಪಿಳ್ಳೈ ಅವರು ಲೋಕಾಚಾರಿಯಾರ್ ಎಂಬ ವಿಶಿಷ್ಟ ದೈವಿಕ ಹೆಸರನ್ನು ಹೇಗೆ ಪಡೆದರು ಎಂಬುದನ್ನು ವಿವರಿಸುತ್ತಾರೆ. ನಂಪಿಳ್ಳೈ ಲೋಕಾಅಚಾರಿಯರ್‌ಗೆ ಲೋಕಾಚಾರ್ಯರ್ ಎಂಬ ದೈವಿಕ ಹೆಸರು ಇದ್ದುದರಿಂದ ಇದು ನಂಪಿಳ್ಳೈಯ ವಿಶಿಷ್ಟ ಹೆಸರಾಗಿದ್ದು, ಅವರು ಆ ನಿರೂಪಣೆಯನ್ನು ವಿವರಿಸುತ್ತಾರೆ. ಈ ಪಾಸುರದಲ್ಲಿ, ಅವರು ಹೆಚ್ಚಿನ ಗೌರವವನ್ನು ಹೊಂದಿದ್ದ ಕೆಲವು ವ್ಯಕ್ತಿಗಳ ಹೆಸರುಗಳಿಗೆ ನಮ್ ಎಂಬ ಪೂರ್ವಪ್ರತ್ಯಯವಿರುವ ವ್ಯಕ್ತಿಗಳನ್ನು ಆಚರಿಸಲು ತಮ್ಮ ಮನಸ್ಸಿಗೆ ಹೇಳುತ್ತಾರೆ.

ನಂಪೆರುಮಾಳ್ ನಮ್ಮಾೞ್ವಾರ್ ನಂಜೀಯರ್ ನಂಪಿಳ್ಳೈ

ಎನ್ಬಾರ್ ಅವರವರ್ ತಂ ಎಱ್ಱತ್ತಾಲ್ -ಅನ್ಬುಡೈಯೋರ್

ಸಾತ್ತು ತಿರು ನಾಮಂಗಳ್ ತಾನ್ ಎನ್ರು ನನ್ನೆಂಜೇ

ಏತ್ತದನೈಚ್ ಚೊಲ್ಲು ನೀ ಇನ್ಱು

ಓ ಮನಸೇ! ನಂಪೆರುಮಾಳ್, ನಮ್ಮಾೞ್ವಾರ್, ನಂಜೀಯರ್ ಮತ್ತು ನಂಪಿಳ್ಳೈ ಅವರನ್ನು ವಿಶೇಷ ಗೌರವದಿಂದ ಉಲ್ಲೇಖಿಸಲಾಗಿದೆ. ಇದಕ್ಕೆ ಕಾರಣ ಅವರು ಹೊಂದಿದ್ದ ವೈಶಿಷ್ಟ್ಯತೆ. ನೀನು ಈ ದೈವಿಕ ಹೆಸರುಗಳನ್ನು ಪಠಿಸಿ ಆಚರಿಸುತ್ತಿರು.ಅಳಗಿಯ ಮಣವಾಳಪೆರುಮಾಳ್ (ಶ್ರೀರಂಗನಾಥ, ಶ್ರೀರಂಗಂನಲ್ಲಿರುವ ಉತ್ಸವ ವಿಗ್ರಹ) ಶ್ರೀರಂಗವನ್ನು ಬಹಳ ಸಮಯ ಬಿಟ್ಟು ಹಿಂದಿರುಗಿದ ನಂತರ, ಈ ದೈವಿಕ ವಿಗ್ರಹಕ್ಕಾಗಿ ತಿರುಮಂಜನಂ (ದೈವಿಕ ಸ್ನಾನ) ನಡೆಸಲಾಯಿತು.ನಂಪೆರುಮಾಳರ ಒದ್ದೆಯಾದ ಉಡುಪಿನಿಂದ ತಿರುಮಂಜನಂನ ದೈವಿಕ ನೀರನ್ನು ಸೇವಿಸಿದ ಮುದಿಯ ಶ್ರೀವೈಶ್ಣವ ಅಗಸ ಪ್ರೀತಿಯಿಂದ “ಅವನು ನಂಪೆರುಮಾಳ್” (ಅವನು ನಮ್ಮ ಪೆರುಮಾಳ್)ಎಂದನು; ಆದ್ದರಿಂದ ಶ್ರೀರಂಗನಾಥನಿಗೆ ನಂಪೆರುಮಾಳ್ ಎಂಬ  ಹೆಸರು ದೃಡವಾಗಿ ಸ್ಥಾಪನೆಯಾಯಿತು.ನಂಪೆರುಮಾಳ್ ಸ್ವತಃ ನಮ್ಮಾೞ್ವಾರ್ ಅನ್ನು ನಮ್ ಆೞ್ವಾರ್ ಮತ್ತು ನಮ್ ಶಠಕೋಪನ್ (ನಮ್ಮ ಆೞ್ವಾರ್ ಅಥವಾ ನಮ್ಮ ಶಠಕೋಪನ್) ಎಂದು ಉಲ್ಲೇಖಿಸಿದ್ದರಿಂದ, ನಮ್ಮಾೞ್ವಾರ್ ಎಂಬ ಹೆಸರು ಸ್ಥಾಪನೆಯಾಯಿತು. ತಿರುನಾರಾಯಣಪುರವನ್ನು ತ್ಯಜಿಸಿದ ನಂತರ ಮತ್ತು ಶ್ರೀರಂಗವನ್ನು ಸ್ವೀಕರಿಸಿದ ನಂತರ, ವೇದಾಂತಿ ಶ್ರೀರಂಗವನ್ನು ತಲುಪಿದಾಗ, ಭಟ್ಟರ್ ಅವರನ್ನು ಪ್ರೀತಿಯಿಂದ “ವಾರುಂ ನಮ್ ಜೀಯರ್” ಎಂದು ಸ್ವಾಗತಿಸಿದರು (ಸ್ವಾಗತ, ನಮ್ಮ ಜೀಯರ್!); ಆದ್ದರಿಂದ ಅವರನ್ನು ನಂಜೀಯರ್ ಎಂದು ಕರೆಯಲಾಯಿತು.ನಂಬೂರ್ ವರಧರ್ ಅವರು ಒನ್ಬಧಿನ್ ಆಯಿರಪ್ಪಡಿಯ ಹಸ್ತಪ್ರತಿ ನಕಲನ್ನು ಬಹಳ ಸುಂದರವಾಗಿ ನಂಜೀಯರ್ ಅವರು ಕರುಣೆಯಿಂದ ರಚಿಸಿದಾಗ, ಅವರನ್ನು ಪ್ರೀತಿಯಿಂದ ನಮ್ ಪಿಳ್ಳೈ(ನಮ್ಮ ಪ್ರೀತಿಯ ಮಗು) ಎಂದು ನಂಜೀಯರ್ ಕರೆದರು; ಹೀಗಾಗಿ ನಂಪಿಳ್ಳೈ ಎಂಬ ಹೆಸರು ಅವರಿಗೆ ಸ್ಥಾಪನೆಯಾಯಿತು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/07/upadhesa-raththina-malai-50-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೪೮ ರಿಂದ ೪೯ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೪೮

[ಇತರ ಧಿವ್ಯ ಪ್ರಬಂದಗಳಿಗೆ ಬರೆದ] ವ್ಯಾಖ್ಯಾನಗಳನ್ನು ವಿವರಿಸಿದ ನಂತರ, ನಂಪಿಳ್ಳೈ ಅವರ ಪ್ರಖ್ಯಾತ ಭಾಷ್ಯವಾದ ಈಡು ನಿರೂಪಣೆಯ ಬಗ್ಗೆ ಮುಂದಿನ ಎರಡು ಪಾಸುರಗಳ ಮೂಲಕ ಮಾಮುನಿಗಳು ಕರುಣೆಯಿಂದ ವಿವರಿಸುತ್ತಾರೆ.

ಸೀರಾರ್ ವಡಕ್ಕು ತಿರುವೀದಿ ಪಿಳ್ಳೈ ಎೞುದು

ಏರಾರ್ ತಮಿೞ್ ವೇದತ್ತು ಈಡು ತನೈ-ತಾರುಂ ಎನ

ವಾಂಗಿ ಮುನ್ ನಂಪಿಳ್ಳೈ ಈಯುಣ್ಣಿ ಮಾಧವರ್ಕ್ಕುತ್

ತಾಂ ಕೊಡುತ್ತಾರ್ ಪಿನ್ ಅದನೈತ್ತಾನ್

ವಡಕ್ಕು ತಿರುವೀದಿ ಪಿಳ್ಳೈ ತನ್ನ ಆಚಾರ್ಯರ ಕರುಣೆಯ ಮೂಲಕ ಸಂಪೂರ್ಣ ಜ್ಞಾನವನ್ನು ಪಡೆದ ಶ್ರೇಷ್ಠತೆಯನ್ನು ಹೊಂದಿದ್ದರು.

ತಿರುವಾಯ್ಮೊಳಿಯ  ಅರ್ಥಗಳನ್ನು ವಿವರವಾಗಿ ವಿವರಿಸುವ ಹಿರಿಮೆಯನ್ನು ಹೊಂದಿದ್ದ ಈಡು ವ್ಯಾಖ್ಯಾನಮ್ ಅನ್ನು “ಈ ವ್ಯಾಖ್ಯಾನವನ್ನು ಪ್ರಚಾರ ಮಾಡಲು ಇದು ಸೂಕ್ತ ಸಮಯವಲ್ಲ. ಇದು ನಂತರದ ವರ್ಷಗಳಲ್ಲಿ ದೊಡ್ಡ ಅಚಾರ್ಯರ ಮೂಲಕ ವ್ಯಾಪಕ ಪ್ರಚಾರದ ಮೂಲಕ ವೈಭವದ ಎತ್ತರವನ್ನು ತಲುಪುತ್ತದೆ. ಆದ್ದರಿಂದ, ಇದನ್ನು ಈಗ ನನಗೆ ನೀಡಿ ” ಎಂದು ಹೇಳಿ ನಂಪಿಳ್ಳೈ ಅವರು ಸ್ವಾಧೀನಪಡಿಸಿಕೊಂಡರು, ಆದ್ದರಿಂದ, ಇದನ್ನು ವಡಕ್ಕುತ್ ತಿರುವೀದಿಪ್ಪಿಳ್ಳೈಯಿಂದ ಹಿಂದಿನ ಸಮಯದಲ್ಲಿ ತೆಗೆದುಕೊಂಡು, ಅದನ್ನು ನಂತರದ ಸಮಯದಲ್ಲಿ ತನ್ನ ಆತ್ಮೀಯ ಶಿಷ್ಯ ಈಯುಣ್ಣಿ ಮಾಧವನ್ ಅವರಿಗೆ ಒಪ್ಪಿಸಿದರು. ಅಚಾರ್ಯರ ಮೂಲಕ ಅದರ ಅರ್ಥಗಳನ್ನು ಒಬ್ಬ ಶಿಷ್ಯನಿಗೆ ರಹಸ್ಯ ರೀತಿಯಲ್ಲಿ ಬಹಿರಂಗಪಡಿಸುವ ವಿಧಾನದ ಮೂಲಕ ಅದನ್ನು ಸೂಚಿಸುವಂತೆ ಅವರು ಹೇಳಿದರು. 

ನಂತರದ ವರ್ಷಗಳಲ್ಲಿ, ಮಣವಾಳ ಮಾಮುನಿಗಳು ತನ್ನ ಅಚಾರ್ಯ, ತಿರುವಾಯ್ಮೊಳಿಪಿಳ್ಳೈ ಅವರಿಂದ ಈಡು ವ್ಯಾಖ್ಯಾನಮ್ ಅನ್ನು ಕಲಿತರು ಮತ್ತು ಅದನ್ನು ಪ್ರಪಂಚದಾದ್ಯಂತ ಪ್ರಸಿದ್ಧಗೊಳಿಸಿದರು.

ನಂತರ, ಅವರು ಶ್ರೀರಂಗದಲ್ಲಿ ಒಂದು ವರ್ಷ ಪ್ರವಚನ ನೀಡಿದರು, ನಂಪೆರುಮಾಳ್ ಅವರ ದೈವಿಕ ಎಚ್ಚರಿಕೆಗೆ ಒಪ್ಪಿಕೊಂಡರು, ಉದಾಹರಣೆಗೆ ನಂಪೆರುಮಾಳ್ ಅವರ ಪುನರಾವರ್ತನೆಯೊಂದಿಗೆ, ಅದನ್ನು ಆಲಿಸಿ ಮತ್ತು ಆನಂದಿಸಿದರು.ನಂಪೆರುಮಾಳ್ ಮಣವಾಳ ಮಾಮುನಿಗಳ್ ಅನ್ನು ತನ್ನ ಆಚಾರ್ಯನ್ ಎಂದು ಗುರುತಿಸಿ, ಶ್ರೀಶೈಲೇಷ ದಯಾಪಾತ್ರಂ ಪ್ರಾರಂಭವಾಗುವ ತನಿಯನ್ ಅನ್ನು ಮಣವಾಳ ಮಾಮುನಿಗಳಿಗಾಗಿ ಸಲ್ಲಿಸಿದರು, ಮತ್ತು ಈ ತನಿಯನ್ ಅನ್ನು ಸೇವಾಕಾಲ ಕ್ರಮಮ್ (ಪುನರಾವರ್ತನೆ) ಯ ಆರಂಭದಲ್ಲಿ ಮತ್ತು ಕೊನೆಯಲ್ಲಿ ಪಠಿಸಬೇಕೆಂದು ಆದೇಶಿಸಿದರು. ಈ ಘಟನೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.

ಪಾಸುರ ೪೯

ಈಡು ವ್ಯಾಖ್ಯಾನವು ಅವರ ಆಚಾರ್ಯರಾದ ತಿರುವಾಯ್ಮೊಳಿಪಿಳ್ಳೈಯವರನ್ನು ತಲುಪಿದ ರೀತಿಯನ್ನು ಹೇಳುತ್ತಾರೆ.

ಆಂಗು ಅವರ್ಪಾಲ್ ಪೆಱ್ಱ ಸಿಱಿಯಾೞ್ವಾನ್ ಅಪ್ಪಿಳ್ಳೈ

ತಾಂ ಕೊಡುತ್ತಾರ್ ತಂ ಮಗನಾರ್ ತಂ ಕೈಯಿಲ್ -ಪಾಂಗುಡನೇ

ನಾಲೂರ್ಪ್ ಪಿಳ್ಳೈಕ್ಕು ಅವರ್ ತಾಂ ನಲ್ಲ ಮಗನಾರ್ಕು ಅವರ್ ತಾಂ

ಮೇಲೋರ್ಕ್ಕು ಈನ್ದಾರ್ ಅವರೇ ಮಿಕ್ಕು

ನಂಪಿಳ್ಳೈಯಿಂದ ಈಡು ಪಡೆದ ಸಿಱಿಯಾೞ್ವಾನ್ ಅಪ್ಪಿಳ್ಳೈ ಎಂದೂ ಕರೆಯಲ್ಪಡುವ ಈಯುಣ್ಣಿ ಮಾಧವಪ್ ಪೆರುಮಾಳ್, ಇದನ್ನು ತನ್ನ ದೈವಿಕ ಮಗ ಈಯುಣ್ಣಿ ಪದ್ಮನಾಭ ಪೆರುಮಾಳಿಗೆ ಚೆನ್ನಾಗಿ ಕಲಿಸಿದರು.ಪೆರುಮಾಳ್ ಕೋಯಿಲ್ ಎಂದು ಕರೆಯಲ್ಪಡುವ ಕಾಂಚೀಪುರಂನಲ್ಲಿ ಈಯುಣ್ಣಿ ಪದ್ಮನಾಭ ಪೆರುಮಾಳ್ ವಾಸಿಸುತ್ತಿದ್ದಾಗ, ನಾಲೂರ್ ಪಿಳ್ಳೈ ಅವರ ದೈವಿಕ ಪಾದಗಳಿಗೆ ಅನೇಕ ದಾಸ್ಯಗಳನ್ನು ನಡೆಸಿದರು, ಅವರನ್ನು ಈಯುಣ್ಣಿ ಪದ್ಮನಾಭ ಪೆರುಮಾಳ್ ಒಪ್ಪಿಕೊಂಡರು ಮತ್ತು ಅವರಿಂದ ಈಡು ವ್ಯಾಖ್ಯಾನಮ್ ಕಲಿತರು.ನಂತರ, ಅವರು ತಮ್ಮ ಮಗ ನಾಲೂರಾಚ್ಚಾನ್ ಪಿಳ್ಳೈ ಗೆ ಈಡು ವ್ಯಾಖ್ಯಾನವನ್ನು  ಕಲಿಸಿದರು.

ದೈವಿಕ ವಾಸಸ್ಥಳವಾದ ಆೞ್ವಾರ್ ತಿರುನಗರಿಯನ್ನು ಸುಧಾರಿಸಿದ ತಿರುವಾಯ್ಮೊಳಿಪಿಳ್ಳೈ, ಪೋಲಿಂದು ನಿನ್ರ ಪಿರಾನ್ (ಎಂಪೆರುಮಾನ್) ಮತ್ತು ನಮ್ಮಾೞ್ವಾರ್ ಅವರ ಸನ್ನಿಧಿಗಳನ್ನು (ಗರ್ಭಗುಡಿ) ಪುನರ್ನಿರ್ಮಿಸಿ, ಮತ್ತು ಭವಿಷ್ಯದ್ಆಚಾರ್ಯರ್ ಎಂಪೆರುಮಾನಾರ್ಗಾಗಿ ದೇವಾಲಯವನ್ನು ಸ್ಥಾಪಿಸಿದರು, ಈಡು ವ್ಯಾಖ್ಯಾನವನ್ನು ಕಲಿಯುವ ಬಯಕೆಯೊಂದಿಗೆ ಕಾಂಚೀಪುರಂಗೆ ಬಂದರು.

ದೇವಪ್ಪೆರುಮಾಳ್ ಅವರ ಆಜ್ಞೆಯ ಆಧಾರದ ಮೇಲೆ, ನಾಲೂರಾಚ್ಚಾನ್ ಪಿಳ್ಳೈ ಅವರು ತಿರುವಾಯ್ಮೊಳಿ ಪಿಳ್ಳೈ, ತಿರುವಾಯ್ಮೊಳಿ ಆಚ್ಚಾನ್ ಮತ್ತು ಆಯಿ ಜನ್ನನ್ಯಾಚಾರ್ ಅವರಿಗೆ ತಿರುನಾರಾಯಣಪುರಂನಲ್ಲಿ ಇಡು ವ್ಯಾಖ್ಯಾನವನ್ನು ಕಲಿಸಿದರು. ಹೀಗೆ ಈಡು ಕಲಿತ ತಿರುವಾಯ್ಮೊಳಿ ಪಿಳ್ಳೈ, ಇದನ್ನು ಮಣವಾಳಮಾಮುನಿಗೆ ಒಂದು ದೊಡ್ಡ ನಿಧಿಯಾಗಿ ನೀಡಿದರು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/07/upadhesa-raththina-malai-48-49-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೪೬ ರಿಂದ ೪೭ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೪೬

ವೇದಗಳು ಅಂಗ, ಪ್ರಾಥಮಿಕ ಘಟಕ ಮತ್ತು ಉಪಾಂಗ, ದ್ವಿತೀಯಕ ಘಟಕವನ್ನು ಹೊಂದಿದೆ, ಅದೇ ರೀತಿ ತಿರುವಾಯ್ಮೊೞಿ ಇತರ ದಿವ್ಯ ಪ್ರಬಂಧಮ್‌ಗಳ ಮೂಲಕ ಪ್ರಾಥಮಿಕ ಮತ್ತು ದ್ವಿತೀಯಕ ಘಟಕಗಳನ್ನು ಹೊಂದಿರುವುದರಿಂದ (ಇತರ ಆೞ್ವಾರಗಳ ದೈವಿಕ ಸಂಯೋಜನೆಗಳು), ಮಾಮುನಿಗಳು, ವ್ಯಾಖ್ಯಾನಗಳನ್ನು ಬರೆದ ಮಹಾನ್ ವ್ಯಕ್ತಿಗಳನ್ನು ಆಚರಿಸಲು ಉದ್ದೇಶಿಸಿ, ಈ ಪ್ರಬಂಧಮ್‌ಗಳಿಗಾಗಿ, ಪೆರಿಯಾವಾಚ್ಚಾನ್ ಪಿಳ್ಳೈ ಅವರು ನಿರ್ವಹಿಸಿದ ಸರ್ವೋಚ್ಚ ಪ್ರಯೋಜನವನ್ನು ಆಚರಿಸುವುದರೊಂದಿಗೆ ಪ್ರಾರಂಭಿಸುತ್ತಾರೆ. 

ಪೆರಿಯವಾಚ್ಚಾನ್ ಪಿಳ್ಳೈ ಪಿನ್ಬುಳ್ಳವೈಕ್ಕುಂ

ತೆರಿಯ ವ್ಯಾಕ್ಯೈಗಳ್ ಸೈವಲ್ -ಅರಿಯ

ಅರುಳಿಚ್ಚೆಯಲ್ ಪೊರುಳೈ ಆರಿಯರ್ಗಟ್ಕು ಇಪ್ಪೋದು

ಅರುಳಿಚ್ ಚೆಯಲಾಯ್ತಱಿಂದು

ಪೆರಿಯವಾಚ್ಚಾನ್ ಪಿಳ್ಳೈ, ಅವರನ್ನು ಪ್ರೀತಿಯಿಂದ ವ್ಯಾಖ್ಯಾನ ಚಕ್ರವರ್ತಿ (ವ್ಯಾಖ್ಯಾನಕಾರರಲ್ಲಿ ಚಕ್ರವರ್ತಿ) ಎಂದು ಕರೆಯಲಾಗುತ್ತದೆ ಮತ್ತು ನಂಪಿಳ್ಳೈ ಅವರ ಆತ್ಮೀಯ ಶಿಷ್ಯರಾಗಿದ್ದರು, ಅವರು ಆೞ್ವಾರ್ಗಳ ಉಳಿದ ಎಲ್ಲ 3000 ದಿವ್ಯ ಪ್ರಬಂಧಗಳಿಗೆ [ಅರುಳಿಚಯಲ್ಗಳು] ಅರ್ಥ ವ್ಯಾಖ್ಯಾನ ಎಲ್ಲರಿಗೂ ತಿಳಿಯಲೆಂದು ಬರೆದರು .

 ತನ್ನ ಅಚಾರ್ಯರಿಂದ ಎಲ್ಲ ಅರುಳಿಚೆಯಲ್‌ಗಳ ಸಂಪೂರ್ಣ ಅರ್ಥಗಳನ್ನು ಆಲಿಸಿ ಮತ್ತು ಅವರ ದೈವಿಕ ಮನಸ್ಸಿನಲ್ಲಿ ಅವುಗಳನ್ನು ಸಂತೋಷದಿಂದ ಅನುಭವಿಸುವುದರ ಜೊತೆಗೆ ಇತರರಿಗೆ ಅರ್ಥಗಳನ್ನು ಸೂಚಿಸುವ ಏಕಮಾತ್ರ ಗೌರವವನ್ನು ಅವರು ಹೊಂದಿದ್ದಾರೆ.

ಪಾಸುರ ೪೭

ಮಾಮುನಿಗಳು ನಂಜೀಯರ್ ಮತ್ತು ಇತರರು ಕರುಣೆಯಿಂದ ಬರೆದ ವ್ಯಾಖ್ಯಾನಗಳ ಬಗ್ಗೆ ಕರುಣೆಯಿಂದ ಬರೆಯುತ್ತಾರೆ.

ನಂಜೀಯರ್ ಸೈದ ವ್ಯಾಖ್ಯಿಯೈಗಳ್ ನಾಲಿರಣ್ಡುಕ್ಕು

ಎಂಜಾಮಲ್ ಯಾವೈಕ್ಕುಂ ಇಲ್ಲೈಯೇ ತಂ ಸೀರಾಲ್

ವೈಯ  ಗುರುವಿನ್ ತಂಬಿ ಮನ್ನು ಮಣವಾಳ ಮುನಿ

ಸೈಯ್ಯುಂ ಅವೈ ತಾಮುಂ ಸಿಲ

ನಂಜೀಯರ್ ಕೆಲವು ಪ್ರಬಂಧಗಳಿಗೆ ವ್ಯಾಖ್ಯಾನಗಳನ್ನು ಕರುಣೆಯಿಂದ ಬರೆದಿದ್ದರೂ, ಅವರು ಪೆರಿಯವಾಚ್ಚಾನ್ ಪಿಳ್ಳೈ (ಅವರು ಇದ್ದಿದ್ದರೆ ಅದ್ಭುತವಾಗುತ್ತಿತ್ತು!) ನಂತೆ ಎಲ್ಲಾ ಪ್ರಬಂಧಗಳಿಗೆ ವ್ಯಾಖ್ಯಾನಗಳನ್ನು ಬರೆಯಲಿಲ್ಲ.ಅೞಗಿಯ ಮಣವಾಳ ಪೆರುಮಾಳ್  ನಾಯನಾರ್, ಪಿಳ್ಳೈ ಲೋಕಾಚಾರ್ಯರ್ ಅವರ ದೈವಿಕ ಕಿರಿಯ ಸಹೋದರ, ಮತ್ತು ಶ್ರೇಷ್ಠ, ಶುಭ ಗುಣಗಳು ಮತ್ತು ಅರುಳಿಚೇಯಲ್ಗಳ ಮತ್ತು ಶಾಸ್ತ್ರಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅವರು ಕೆಲವು ಪ್ರಬಂಧಗಳಿಗೆ ಕರುಣಾಮಯದಿಂದ ಅದ್ಭುತ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಅದೇ ರೀತಿ , ಶ್ರೇಷ್ಠತೆಯನ್ನು ಹೊಂದಿದ್ದ ವಾದಿ ಕೇಸರಿ ಅೞಗಿಯ ಮಣವಾಳ ಜೀಯರ್ ಸಹ ಕೆಲವು ವ್ಯಾಖ್ಯಾನಗಳನ್ನು ಕರುಣೆಯಿಂದ ಬರೆದಿದ್ದಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-46-47-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೪೪ ಮತ್ತು ೪೫ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೪೪

ನಂಪಿಳ್ಳೈ ನಡೆಸಿದ ಪ್ರವಚನಗಳಿಂದ ವಡಕುತ್ತಿರುವೀದಿಪ್ಪಿಳ್ಳೈ ಅವರು ವ್ಯಾಖ್ಯಾನವನ್ನು  ಹಸ್ತಪ್ರತಿಯಾಗಿ ಬರೆಯುವ ವಡಕುತ್ತಿರುವೀದಿಪ್ಪಿಳ್ಳೈಯ ವೈಭವದ ಬಗ್ಗೆ ಮಾಮುನಿಗಳು ಮಾತನಾಡುತ್ತಾರೆ.

ತೆಳ್ಳಿಯದಾ ನಂಪಿಳ್ಳೈ ಸೆಪ್ಪು ನೆಱಿ ತನ್ನೈ

ವಳ್ಳಲ್ ವಡಕ್ಕುತಿರುವೀದಿಪ್ ಪಿಳ್ಳೈ- ಇಂದ 

ನಾಡಱಿಯ ಮಾಱನ್ ಮಱೈಪ್ ಪೊರುಳೈ ನಂಗು ಉರೈತ್ತದು

ಈಡು ಮುಪ್ಪತ್ತಾಱಾಯಿರಂ.

ಈಡು ಮುಪ್ಪತ್ತಾರಾಯಿರಂ ವ್ಯಾಖ್ಯಾನ ಎಂಬುದು ನಂಪಿಳ್ಳೈ ಅವರ ಶಿಷ್ಯನಾದ ಮಹನೀಯ ವಡಕ್ಕುತ್ತಿರುವೀದಿ ಪಿಳ್ಳೈ ಅವರು ಬರೆದ ವ್ಯಾಖ್ಯಾನವಾಗಿದೆ. ನಂಪಿಳ್ಳೈ, ನಂಜೀಯರ್‌ನ ಶಿಷ್ಯ, ಮತ್ತು ನಮ್ಮ ಮಾರನ್ ಎಂಬ ನಮ್ಮಾೞ್ವಾರ್ ನಿಂದ ಪ್ರಾರಂಭವಾಗುವ ಅಚಾರ್ಯರು ತೋರಿಸಿದ ವೇದ/ ವೇದಾಂತಗಳ ಹಾದಿಯ ಬಗ್ಗೆ ಸ್ಪಷ್ಟವಾದ ಜ್ಞಾನವನ್ನು ಹೊಂದಿದ್ದಾರೆ.

ನಂಪಿಳ್ಳೈ ಅವರು ತಮ್ಮ ಪ್ರವಚನದಲ್ಲಿ ನೀಡಿದ ಗೌರವಾನ್ವಿತ ಅರ್ಥಗಳು ಎಲ್ಲರಿಗೂ ತಲುಪಬೇಕು, ಇದರಿಂದಾಗಿ ಇಡೀ ದೇಶವು ಉನ್ನತಿ ಹೊಂದಬೇಕು ಎಂದು ವಡಕ್ಕುಥಿರುವಿಧಿಪ್ಪಿಳ್ಳೈ ಭಾವಿಸಿ, ಈಡು ಬರೆದರು. ಈಡು ಎಂಬ ಪದವು ಹಲವಾರು ಅರ್ಥಗಳನ್ನು ಹೊಂದಿದೆ – ಅರ್ಥ (ವಿವರಣೆ), ರಕ್ಷಣಾತ್ಮಕ ರಕ್ಷಾಕವಚ, ಹೋಲಿಸಲಾಗದ ಇತ್ಯಾದಿ. ಈಡು ಗಾತ್ರದಲ್ಲಿ ಶ್ರುತ ಪ್ರಕಾಶಿಕೈ [ಶ್ರೀ ಭಾಷಯಂ ನ  ವ್ಯಾಖ್ಯಾನ] ಗೆ ಸಮಾನವಾಗಿರುತ್ತದೆ. ಈಡು ಶ್ರುತ ಪ್ರಕಾಶಿಕೈಯ ನಂತರ ಬಂದರೂ , ಇಲ್ಲಿ ಅದನ್ನು ಅಳತೆಗಾಗಿ ಹೋಲಿಸಲಾಗಿದೆ. 

ಪಾಸುರ ೪೫

ಅೞಗಿಯ ಮಣವಾಳ ಜೀಯರ್ ಅವರು ಕರುಣೆಯಿಂದ ತಿರುವಾಯ್ಮೊೞಿಗೆ ಬರೆದ ಪನ್ನೀರಾಯಿರಪ್ಪಡಿ ವ್ಯಾಖ್ಯಾನದ ವೈಭವವನ್ನು ಮಾಮುನಿಗಳು ಹೇಳುತ್ತಾರೆ.

ಅನ್ಬೋಡು ಅೞಗಿಯ ಮಣವಾಳಚ್ ಜೀಯರ್

ಪಿನ್ಬೋರುಮ್ ಕಱ್ಱರಿಂದು ಪೇಸುಗೈಕ್ಕಾ- ತಂ ಪೆರಿಯ

ಬೋದಮುಡನ್ ಮಾಱನ್ ಮಱೈಯಿನ್ ಪೊರುಳ್ ಉರೈತ್ತದು

ಏದಮ್ ಇಲ್ ಪನ್ನೀರಾಯಿರಂ

ವಾದಿ ಕೇಸರಿ ಅೞಗಿಯ ಮಣವಾಳ ಜೀಯರ್ ಅವರು ನಮ್ಮಾೞ್ವಾರ್ ಮತ್ತು ತಿರುವಾಯ್ಮೊೞಿ ಮತ್ತು ಚೇತನಗಳ ಬಗ್ಗೆ ಅಪಾರ ವಾತ್ಸಲ್ಯವನ್ನು ಹೊಂದಿದ್ದರು. ಪೆರಿಯವಾಚ್ಚಾನ್ ಪಿಳ್ಳೈ ಅವರ ಕರುಣೆಗೆ ಗುರಿಯಾದ ಜೀಯರ್,ಅವರ ನಂತರ ಬರುವವರು ತಿರುವಾಯ್ಮೊೞಿಯ ಅರ್ಥಗಳನ್ನು ಕಲಿಯಬಹುದು ಮತ್ತು ಇತರರಿಗೆ ಅರ್ಥಗಳನ್ನು ಸೂಚಿಸಬಹುದು ಎಂದು  ಪನ್ನೀರಾಯಿರಪ್ಪಡಿಯನ್ನು ಕರುಣೆಯಿಂದ ಬರೆದರು. ತಮ್ಮ ಆಚಾರ್ಯನ ಕರುಣೆಯಿಂದಾಗಿ ಅವರು ಪಡೆದ  ಜ್ಞಾನದಿಂದ ಅವರು ಇದನ್ನು ಸಾಧಿಸಿದರು. ಈ ವ್ಯಾಖ್ಯಾನವು ತಿರುವಾಯ್ಮೊೞಿಯ ಪಾಸುರಗಳ   ಪದಗಳ ಅರ್ಥಗಳ ರೂಪದಲ್ಲಿದೆ.ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ತಿರುವಾಯ್ಮೊೞಿಯ ಪ್ರತಿ ಪಾಸುರದಲ್ಲಿ ಪ್ರತಿಯೊಂದು ಪದದ ಅರ್ಥವನ್ನು ನೀಡಿದ್ದಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://divyaprabandham.koyil.org/index.php/2020/06/upadhesa-raththina-malai-44-45-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೪೧ ರಿಂದ ೪೩ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೪೧

ಕರುಣಾಮಯಿ ತಿರುಕ್ಕುರುಗೈಪಿರಾನ್ ಪಿಳ್ಳಾನ್ ತಿರುವಾಯ್ಮೊಳಿಗೆ ನಿರ್ಮಿಸಿದ ಆರಾಯಿರಪ್ಪಡಿ ವ್ಯಾಖ್ಯಾನದ( 32 ಅಕ್ಷರಗಳು ಸೇರಿದರೆ ಒಂದು ಪಡಿ) ವೈಶಿಷ್ಟ್ಯತೆಯನ್ನು ಹೇಳುವರು.

ತೆಳ್ಳಾರುಂ ಜ್ಞಾನತ್ ತಿರುಕ್ಕುರುಗೈಪಿರಾನ್

ಪಿಳ್ಳಾನ್ ಎದಿರಾಸರ್ ಪೇರರುಳಾಲ್ -ಉಳ್ಳಾರುಂ

ಅನ್ಬುಡನೇ ಮಾಱನ್ ಮಱೈಪ್ ಪೊರುಳೈ ಅನ್ಱು ಉರೈತ್ತದು

ಇನ್ಬ ಮಿಗು ಆಱಾಯಿರಂ 

ಶ್ರೀಭಾಷ್ಯಕಾರರ್ ಎಂದು ಖ್ಯಾತಿಪಡೆದ ಯತಿರಾಜರು, ತಿರುಕ್ಕುರುಗೈಪಿರಾನ್ ಪಿಳ್ಳಾನ್‌ರನ್ನು ಅವರ ಜ್ಞಾನಪುತ್ರರೆಂದು( ಅವರ ಜ್ಞಾನದಿಂದ ಸಾಕುಮಗನಂತೆ) ಭಾವಿಸುತ್ತಿದ್ದರು.

ಯತಿರಾಜರ  ಅಪಾರ ಕರುಣೆಯಿಂದ ಹಾಗು ತಿರುವಾಯ್ಮೊಳಿಗೆ ಅವರ ಭಕ್ತಿಯಿಂದ ಮತ್ತು ಚೇತನಗಳಿಗೆ (ಭಾವನಾತ್ಮಕ ಅಸ್ತಿತ್ವಗಳು) ಅವರಿಗಿದ್ದ ಸಹಾನುಭೂತಿಯಿಂದ , ಪಿಳ್ಳಾನ್ ಅವರು ಎಂಪೆರುಮಾನಾರರ ಕಾಲಘಟ್ಟದಲ್ಲೇ ತಿರುವಾಯ್ಮೊಳಿಗೆ ವ್ಯಾಖ್ಯಾನ ಬರೆದರು, ಇದು ಅನುಯಾಯಿಗಳಿಗೆ ಬಹಳ ಸಂತೋಷ ಪಡಿಸಿತು. ಇದನ್ನು ಆರಾಯಿರಪ್ಪಡಿ ಎಂದು ಕರೆಯಲಾಯಿತು ಮತ್ತು ಇದು ಶ್ರೀ ವಿಷ್ಣು ಪುರಾಣದಷ್ಟು ವಿಸ್ತಾರವಾಗಿತ್ತು.

ಪಾಸುರ ೪೨

ಕರುಣಾಮಯಿ ನಂಜೀಯರ್ ಬರೆದ ಒಂಬದಿನಾಯಿರಪ್ಪಡಿಯ ವಿಶೇಷತೆ ಹೇಳುವರು.

ತಂ ಸೀರೈ ಜ್ಞಾನಿಯರ್ಗಳ್ ತಾಂ ಪುಗೞುಂ ವೇದಾಂತಿ

ನಂಜೀಯರ್ ತಾಂ ಬಟ್ಟರ್ ನಲ್ಲರುಳಾಲ್-ಎಂಜಾದ

ಆರ್ವಮುಡನ್ ಮಾಱನ್ ಮಱೈಪ್ ಪೊರುಳೈ ಆಯ್ನ್ದುರೈತ್ತದು

ಏರ್ ಒನ್ಬದಿನಾಯಿರಂ.

ನಂಜೀಯರನ್ನು ವೇದಾಂತಿ ಎಂದು ಶಾಸ್ತ್ರ ಬಲ್ಲವರು ತಳಿದಿದ್ದರು.ಏಕೆಂದರೆ ಅವರು ವೇದಾಂತಗಳಲ್ಲಿ(ಉಪನಿಷತ್ತುಗಳು) ನಿಪುಣರಾಗಿದ್ದರು.  ತಮ್ಮ ಆಚಾರ್ಯ ಬಟ್ಟರ್ ಕರುಣೆಯಿಂದ, ನಮ್ಮಾೞ್ವಾರರ ತಿರುವಾಯ್ಮೊಳಿಗೆ. ಅವರಿಗಿದ್ದ ಕಲ್ಮಷವಿಲ್ಲದ ಭಕ್ತಿಯಿಂದ, ಪರಿಶೀಲಿಸಿದ ವ್ಯಾಖ್ಯಾನವನ್ನು ಒನ್ಬದಿನಾಯಿರಪ್ಪಡಿ ಎಂದು ಕರೆಯಲಾಗಿದೆ.

ನಂಜೀಯರ್ ಭಟ್ಟರ್ ಅವರ ಭಾರಿ ಕರುಣೆಯಿಂದ ಸುಧಾರಣೆಯಾದರು ಮತ್ತು ಸಂಪ್ರದಾಯದ ಅರ್ಥಗಳನ್ನು ಭಟ್ಟರ್ ಅವರಿಂದಲೇ ಕಲಿತರು. ತಿರುವಾಯ್ಮೊಳಿಗಾಗಿ ನೂರು ಬಾರಿ ಕಾಲಕ್ಷೇಪಂ (ಪ್ರವಚನ) ನಡೆಸಿದ ಹಿರಿಮೆ ಅವರಿಗೆ ಇತ್ತು. ಈ ಒನ್ಬಧಿನಾಯಿರಪ್ಪಡಿ ಶ್ರೀ ಭಾಷ್ಯಂನ ಅಳತೆ ಇರುವುದು.

ಪಾಸುರ ೪೩

ಮುಂದೆ, ಅವರು ತಿರುವಾಯ್ಮೊಳಿಗಾಗಿ ಪೆರಿಯಾವಾಚ್ಚಾನ್ ಪಿಳ್ಳೈ ಅವರು ಕರುಣೆಯಿಂದ ಬರೆದ ಇರುಬತ್ತುನಾಲಾಯಿರಪ್ಪಡಿ ವ್ಯಾಖ್ಯಾನದ ಮಹಿಮೆಯನ್ನು ಕರುಣೆಯಿಂದ ಹೇಳುತ್ತಾರೆ.

ನಂಪಿಳ್ಳೈ ತಮ್ಮುಡೈಯ ನಲ್ಲರುಳಾಲ್ ಏವಿಯಿಡ

ಪಿನ್ ಪೆರಿಯವಾಚ್ಚಾನ್ ಪಿಳ್ಳೈ ಅದನಾಲ್- ಇನ್ಬ

ವರುಬತ್ತಿ ಮಾಱನ್ ಮಱೈಪ್ ಪೊರುಳೈಚ್ ಚೊನ್ನದು

ಇರುಬತ್ತು ನಾಲಾಯಿರಂ

ಲೋಕಾಚಾರ್ಯಾರ್ ಎಂದು ಆಚರಿಸಲ್ಪಡುವ ನಂಪಿಳ್ಳೈ, ಅವರ ಅಪಾರ ಕರುಣೆಯಿಂದ, ಅವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಪೆರಿಯಾವಾಚ್ಚಾನ್ ಪಿಳ್ಳೈ ಅವರನ್ನು ತಿರುವಾಯ್ಮೊಳಿಗಾಗಿ ವ್ಯಾಖ್ಯಾನ ಬರೆಯಲು ವ್ಯಾಖ್ಯಾನ ಚಕ್ರವರ್ತಿ ಎಂದು ಕರೆಯುತ್ತಾರೆ . ಆ ಆಜ್ಞೆಯನ್ನು ಕಾರಣವೆಂದು ಪರಿಗಣಿಸಿ, ನಮ್ಮಾೞ್ವಾರ್, ಎಂಪೆರುಮಾನರ ಸಹಾನುಭೂತಿಯಿಂದ ಹುಟ್ಟಿದ ಭಕ್ತಿ ಹೊಂದಿದ್ದ ಪೆರಿಯವಾಚ್ಚಾನ್ ಪಿಳ್ಳೈ ಅವರು ಕರುಣೆಯಿಂದ ಬರೆದದ್ದು. ಇರುಬತ್ತು ನಾಲಾಯಿರಪ್ಪಡಿ.ಇದು ಶ್ರೀ ರಾಮಾಯಣದಂತೆ ಅಳತೆ ಹೊಂದಿರುವುದು. 

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://divyaprabandham.koyil.org/index.php/2020/06/upadhesa-raththina-malai-41-43-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೮ ರಿಂದ ೪೦ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೩೮

ಮಾಮುನಿಗಳು , ಎಲ್ಲರೂ ತಿಳಿಯಲೆಂದು ಎಂಪೆರುಮಾನಾರ್ ಪ್ರಪತ್ತಿ (ಎಂಪೆರುಮಾನರಿಗೆ ಶರಣಾಗುವುದು) ಮಾರ್ಗವನ್ನು ನಿರ್ವಹಿಸಿದ ರೀತಿ,ಅವರು ಶ್ರೀಭಾಷ್ಯಂ ಇತ್ಯಾದಿ ಗ್ರಂಥಗಳನ್ನು ( ಸಾಹಿತ್ಯದ ಕೃತಿಗಳು) ರಚಿಸಿ ನಮ್ಮ ತತ್ವಗಳನ್ನು, ಸಿದ್ಧಾಂತಗಳನ್ನು ಪೋಷಿಸಿದರಿಂದ ನಂಪೆರುಮಾಳರು ಎಂಪೆರುಮಾನಾರಿಗೆ ನೀಡಿದ ಮಾನ್ಯತೆಯ ವಿಶೇಷತೆ, ಬಯಲು ಮಾಡುವರು.

ಎಂಪೆರುಮಾನಾರ್ ದರಿಸನಂ ಎನ್ಱೇ ಇದರ್ಕು

ನಂಪೆರುಮಾಳ್ ಪೇರಿಟ್ಟು ನಾಟ್ಟಿ ವೈತ್ತಾರ್ ಅಂಬುವಿಯೋರ್

ಇಂದ ದರಿಸನತ್ತೈ ಎಂಪೆರುಮಾನಾರ್ ವಳರ್ತ್ತ 

ಅಂದ ಚೆಯಲ್ ಅಱಿಗೈಕ್ಕಾ

ಎಂಪೆರುಮಾನಾರ್ ದರಿಶನಂ( ಶ್ರೀ ರಾಮಾನುಜರ ತತ್ವ) ಎಂದು ನಮ್ಮ ಶ್ರೀವೈಷ್ಣವ ಸಂಪ್ರದಾಯಕ್ಕೆ ನಂಪೆರುಮಾಳ್ ಹೆಸರಿಟ್ಟು ದೃಢವಾಗಿ ಖಚಿತಗೊಳಿಸಿದ್ದಾರೆ. ಏಕೆಂದರೆ ಎಲ್ಲರೂ ತಿಳಿಯಲೆಂದು ಎಂಪೆರುಮಾನಾರ್ ಪ್ರಪತ್ತಿ  ಮಾರ್ಗವನ್ನು ನಿರ್ವಹಿಸಿ , ತತ್ವಗಳನ್ನು ವಿವರಿಸಿ ಶ್ರೀಭಾಷ್ಯಂ ಇತ್ಯಾದಿ  ಸಾಹಿತ್ಯದ ಕೃತಿಗಳು ರಚಿಸಿ, ನಮ್ಮ ತತ್ವಗಳನ್ನು, ಸಿದ್ಧಾಂತಗಳನ್ನು ಪೋಷಿಸಿ , ಹಲವಾರು ದಿವ್ಯ ದೇಶಗಳ ಗುಡಿಗಳ ಪುನರಾವರ್ತನೆ ಕಾರ್ಯಗಳನ್ನು ನಿರ್ವಹಿಸಿದರಿಂದ, ಈ ಲೋಕದ ಜನರು ಎಂಪೆರುಮಾನಾರರ ಮಹತ್ವ ತಿಳಿಯಲು ನಂಪೆರುಮಾಳರು ಸ್ವತಃ ಇದನ್ನು  ಪ್ರತಿಷ್ಠಿಸಿದ್ದಾರೆ.

ತಿರುಕ್ಕೋಟ್ಟಿಯೂರ್ ನಂಬಿ (ಎಂಪೆರುಮಾನಾರರ ಹಲವು ಆಚಾರ್ಯರುಗಳಲ್ಲಿ ಒಬ್ಬರು) ಅವರ ಅಪಾರ ಕರುಣೆಯನ್ನು ಕಂಡು ಅವರಿಗೆ ಎಂಪೆರುಮಾನಾರ್ ಎಂಬ ಪಟ್ಟ ಕೊಟ್ಟಿರುವ ವಿಚಾರವನ್ನು ಆಧಾರವಾಗಿಟ್ಟು , ನಂಪೆರುಮಾಳ್ ತಿರುಕ್ಕೋಟ್ಟಿಯೂರ್ ನಂಬಿಯರಿಂದ ಈ ವೈಶಿಷ್ಟ್ಯತೆಯನ್ನು ಸಂಕಲ್ಪಿಸಿದ್ದಾರೆ ಎಂದು ಹೇಳಬಹುದು.

ಪಾಸುರ ೩೯

ಎಂಪೆರುಮಾನಾರ ಆಜ್ಞೆಯಿಂದ ತೊಡಗಿದ ,ದ್ವಯ ಮಹಾಮಂತ್ರದ ಅರ್ಥವಾದ ತಿರುವಾಯ್ಮೊಳಿಯ ವ್ಯಾಖ್ಯಾನವು ಮತ್ತು ಎಂಪೆರುಮಾನಾರ್ ವಿವರಿಸಿದ ಅರ್ಥಗಳನ್ನು ಆಧರಿಸಿದ ವ್ಯಾಖ್ಯಾನಗಳು ಎಣಿಕೆಯಲ್ಲಿ ಹೆಚ್ಚಾಗಿರುವುದು,ಆದ್ದರಿಂದ ಮಾಮುನಿಗಳು ಅವುಗಳನ್ನು ಕರುಣೆಯಿಂದ ವಿವರಿಸುವರು.

ಪಿಳ್ಳಾನ್ ನಂಜೀಯರ್ ಪೆರಿಯವಾಚ್ಚಾನ್ ಪಿಳ್ಳೈ

ತೆಳ್ಳಾರ್ ವಡಕ್ಕುತ್ ತಿರುವೀದೀಪಿಳ್ಳೈ

ಮಣವಾಳ ಯೋಗಿ ತಿರುವಾಯ್ಮೊಳಿಯೈಕ್ ಕಾತ್ತ

ಗುಣವಾಳರ್ ಎನ್ಱು ನೆಂಜೇ ಕೂಱು

ಎಂಪೆರುಮಾನಾರ ಜ್ಞಾನಪುತ್ರರಾದ ( ದಿವ್ಯ ಮನಸ್ಸಿನಿಂದ ಪುತ್ರನೆಂದು ಭಾವಿಸುವುದು),ಪರಾಶರ ಬಟ್ಟರ ಶಿಷ್ಯರಾದ ನಂಜೀಯರ್,ಅದ್ವಿತೀಯ ವ್ಯಾಖ್ಯಾನಕಾರರಾದ ಪೆರಿಯವಾಚ್ಚಾನ್ ಪಿಳ್ಳೈ, ಅಪ್ರತಿಮ ಜ್ಞಾನ ಹೊಂದಿದ ನಂಪಿಳ್ಳೈಯ ಶಿಷ್ಯರಾದ ವಡಕ್ಕು ತಿರುವೀದಿ ಪಿಳ್ಳೈ,ಪೆರಿಯವಾಚ್ಚಾನ್ ಪಿಳ್ಳೈಯ ಕರುಣೆ ಪಡೆದ ವಾದಿ ಕೇಸರಿ ಅಳಗಿಯ ಮಣವಾಳ ಜೀಯರ್ , ಇವರುಗಳು , ದ್ವಯ ಮಹಾಮಂತ್ರದ ಅರ್ಥವಾದ ತಿರುವಾಯ್ಮೊಳಿಯನ್ನು ಪೋಷಿಸಿ ಕಾಪಾಡಿದವರು. ಓ ಮನಸೇ ಅಂತಹ ಮಹನೀಯರನ್ನು ಕೊಂಡಾಡು.

ಪಾಸುರ ೪೦

ಕರುಣಾಮಯಿಗಳಾದ ಪೂರ್ವಾಚಾರ್ಯರು ಬರೆದ ವ್ಯಾಖ್ಯಾನಗಳನ್ನು 

ಕೊಂಡಾಡಲು ಅವರ ಮನಸ್ಸಿಗೆ ಹೇಳುತ್ತಾರೆ

ಮುಂದುಱವೇ ಪಿಳ್ಳಾನ್ ಮುದಲಾನೋರ್ ಸೈದರುಳುಂ

ಅಂದ ವ್ಯಾಕ್ಕಿಯೈಗಳ್ ಅನ್ಱಾಗಿಲ್ -ಅಂದೋ

ತಿರುವಾಯ್ಮೊಳಿಪ್ ಪೊರುಳೈತ್ ತೇರ್ನ್ದುರೈಕ್ಕ ವಲ್ಲ

ಕುರುವಾರ್ ಇಕ್ಕಾಲಂ ನೆಂಜೇ ಕೂಱು

ಅಂದು, ತಿರುಕ್ಕುರುಗೈಪ್ಪಿರಾನ್ ಪಿಳ್ಳಾನ್ ರಿಂದ ತೊಡಗಿ ಆಚಾರ್ಯರು ನಮ್ಮಾಳ್ವಾರರ ದಿವ್ಯ ಮನಸ್ಸಲ್ಲಿದ್ದ ತಿರುವಾಯ್ಮೊಳಿಯ ಅಭಿಪ್ರಾಯಗಳನ್ನು ಅವರ ಆಚಾರ್ಯರಿಂದ ಕೇಳಿ ಅರ್ಥ ಮಾಡಿಕೊಳ್ಳದಿದ್ದರೆ, ಅದಕ್ಕೆ ಸೂಕ್ತ ಅರ್ಥ ವಿವರಣೆ ನೀಡಿ ವ್ಯಾಖ್ಯಾನಗಳನ್ನು ಬರೆಯದಿದ್ದರೆ , ನಮಗೆ ಇಂದು ತಿರುವಾಯ್ಮೊೞಿಯ ಮಹತ್ ತತ್ವವನ್ನು ಯಾರು ಉಪದೇಶಿಸಲಾಗುವುದು? ಓ ಮನಸೇ ನೀ ದಯವಿಟ್ಟು ಹೇಳು! 

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-38-40-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೬ ಮತ್ತು ೩೭ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೩೬

ಆೞ್ವಾರ್ಗಳ ಹಾಗು ಅವರ ಅರುಳಿಚೆಯಲ್ಗಳ ವೈಶಿಷ್ಟ್ಯತೆಯನ್ನು ನಿಜವಾಗಿ ತಿಳಿದವರು ನಮ್ಮ ಆಚಾರ್ಯಗಳಿಗಿಂತ ಬೇರಾರೂ ಇಲ್ಲ .

ತೆರುಳುಱ್ಱ ಆೞ್ವಾರ್ಗಳ್ ಸೀರ್ಮೈ ಅರಿವಾರ್ ಆರ್

ಅರುಳಿಚೆಯಲೈ ಅರಿವಾರ್ ಆರ್- ಅರುಳ್ ಪೆಱ್ಱ

 ನಾಥಮುನಿ ಮುದಲಾಂ ನಂ ದೇಶಿಕರೈ ಅಲ್ಲಾಲ್

ಪೇದೈ ಮನಮೇ ಉಂಡೋ ಪೇಸು.

ಓ ಅರಿವಿಲ್ಲದ ಮನಸೇ! ಕಲ್ಮಷವಿಲ್ಲದ ಜ್ಞಾನ ಪಡೆದ ಆೞ್ವಾರ್ಗಳ ವೈಶಿಷ್ಟ್ಯತೆಯನ್ನು ಬಲ್ಲವರು ಯಾರು? ಅವರು ರಚಿಸಿದ ಅರುಳಿಚೆಯಲ್ಗಳ ವೈಶಿಷ್ಟ್ಯತೆಯನ್ನು ತಿಳಿದವರು ಯಾರು? ಆೞ್ವಾರ್ಗಳಿಂದ , ವಿಶೇಷವಾಗಿ ನಮ್ಮಾೞ್ವಾವಾರರಿಂದ , ಅನುಗ್ರಹ ಪಡೆದ ನಾಥಮುನಿಗಳಿಂದ ತೊಡಗಿ ನಮ್ಮ ಆಚಾರ್ಯಗಳಿಗಿಂತ ಬೇರೆ ಯಾರಿರುವರು ಎಂದು ಚೆನ್ನಾಗಿ ಪರಿಶೀಲಿಸಿ , ನಂತರ ಮಾತನಾಡು.

 ಆೞ್ವಾರ್ಗಳ ವೈಭವವನ್ನು ನಮ್ಮ ಆಚಾರ್ಯರುಗಳು ಮಾತ್ರ ಸರಿಯಾಗಿ ತಿಳಿದಿರುವರು. ಒಬ್ಬರು ಒಂದು ತತ್ವವನ್ನು ಪರಿಪೂರ್ಣವಾಗಿ ಅರಿತವರಾದರೆ ಅಕ್ಕೆ ಅನುಗುಣವಾಗಿ ನಡೆದುಕೊಳ್ಳುವರು. ನಮ್ಮ ಪೂರ್ವಾಚಾರ್ಯರು, ಆೞ್ವಾರ್ಗಳ ಅರುಳಿಚೆಯಲ್ಗಳಿಗೆ ಕರುಣೆಯಿಂದ  ವ್ಯಖ್ಯಾನಗಳನ್ನು ಬರೆದು ಅದಕ್ಕೆ ಅನುಗುಣವಾಗಿ ತಪ್ಪದೆ ನಡೆದುಕೊಂಡಿದ್ದರಿಂದ ಅವರಿಗೆ ಆೞ್ವಾರ್ಗಳ ಬಗ್ಗೆ ಪರಿಪೂರ್ಣ ಜ್ಞಾನವು ಇರುವುದೆಂದು ನಾವು ತಿಳಿಯಬಹುದು.

ಪಾಸುರ ೩೭

ಪ್ರಪತ್ತಿ ಮಾರ್ಗವು (ಎಂಪೆರುಮಾನರಿಗೆ ಶರಣಾಗತಿಯಾಗುವ   ಮಾರ್ಗ) ಪಾರಂಪರ್ಯವಾಗಿ ವರ್ಗಾಯಿಸಿದ ನಮ್ಮ ಪೂರ್ವಾಚಾರ್ಯರು , ನಾಥಮುನಿಗಳಿಂದ ತೊಡಗಿದ್ದು ಎಂಪೆರುಮಾನಾರರು ಅವರ ಅಪಾರ ಕರುಣೆಯಿಂದ ಬದಲಾಯಿಸಿದರು.

ಓರಾನ್ವೞಿಯಾಯ್ ಉಪದೇಶಿತ್ತಾರ್ ಮುನ್ನೋರ್ 

ಏರಾರ್ ಎದಿರಾಸರ್ ಇನ್ನರುಳಾಲ್ -ಪಾರ್ ಉಲಗಿಲ್

ಆಸೈ ಉಡೈಯೋರ್ಕ್ಕು ಎಲ್ಲಾಂ ಆರಿಯರ್ಗಾಳ್ ಕೂಱುಮ್ ಎನ್ಱು

ಪೇಸಿ ವರಂಬು ಅಱುತ್ತಾರ್ ಪಿನ್

ಎಂಪೆರುಮಾನಾರ ಕಾಲಘಟ್ಟಕ್ಕೆ ಹಿಂದೆ, ಆಚಾರ್ಯರು ವಿಶೇಷವಾದ ಕೆಲವು ಶಿಷ್ಯರಿಗೆ ಮಾತ್ರ ಪ್ರಪತ್ತಿಯ ಅರ್ಥಗಳನ್ನು ಉಪದೇಶಿಸುತ್ತಿದ್ದರು. 

ಅವರು ಅದನ್ನು ಎಲ್ಲರಿಂದ ಮುಚ್ಚಿಟ್ಟರು, ಈ ತತ್ವದ ಮಹತ್ವವನ್ನು ಪರಿಗಣಿಸಿ, ಸೂಕ್ತ ವೈಶಿಷ್ಟ್ಯತೆಯುಳ್ಳ ಎಂಪೆರುಮಾನಾರು, ಅವರ ಅಪಾರ ಕರುಣೆಯಿಂದ, ಈ ಲೋಕದ ಜನರ ತವಕ ತಡೆಯಲಾರದೆ, ಶ್ರೇಷ್ಠ ಆಚಾರ್ಯಗಳಾದ ಕೂರತ್ತಾಳ್ವಾನ್, ಮುದಲಿಯಾಂಡಾನ್ ಮುಂತಾದವರನ್ನು ನಮ್ಮ ಸಂಪ್ರದಾಯದಲ್ಲಿ ನೇಮಿಸಿ,ಅವರಿಗೆ ಹೇಳಿದರು“ಎಂಪೆರುಮಾನರನ್ನು ಪಡೆಯಲು ತವಕಿಸಿ ಆಸೆಯಿರುವರಿಗೆಲ್ಲಾ,ನಾನು ಕರುಣೆಯಿಂದ ಮಾಡಿದಂತೆ, ಉಪದೇಶಿಸಿ.” ಮತ್ತು ಅಲ್ಲಿಯವರೆಗು ಜಾರಿಯಲ್ಲಿದ್ದ ಕೆಲವರಿಗೆ ಮಾತ್ರ ಉಪದೇಶಿಸುವ ನಿರ್ಭಂಧಗಳನ್ನು ಅದರೊಡಣೆ ನಿಲ್ಲಿಸಿದರು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-36-37-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ- ಸರಳ ವಿವರಣೆ ೩೪ ಮತ್ತು ೩೫ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೩೪ 

ಇದುವರೆಗು ಆೞ್ವಾರ್ಗಳು ಅವತರಿಸಿದ ದಿವ್ಯ ನಕ್ಷತ್ರಗಳು ಮತ್ತು ಸ್ಥಳಗಳನ್ನು ಮಾಮುನಿಗಳು ಕರುಣೆಯಿಂದ ತಿಳಿಸಿದರು.ಮೂರನೆಯ ಪಾಸುರದಲ್ಲಿ ಅವರು ಪೂರ್ವಾಚಾರ್ಯರು ರಚಿಸಿದ ಸೂಕ್ತಿಗಳಿಗೆ ಹೀಗೆ ಮಂಗಳಾಶಾಸನ ಹಾಡಿದರು “  ತಾೞ್ವಾದುಮಿಲ್ ಕುರವರ್ ತಾಂ ವಾೞೀ- ಏೞ್ಪಾರುಂ ಉಯ್ಯ ಅವರ್ಗಳ್ ಉರೈತ್ತ ಅವೈಗಳ್ ತಾಂ ವಾೞೀ”.ಇನ್ನು ಮುಂಬರುವ ಪಾಸುರಗಳಲ್ಲಿ ಆೞ್ವಾರ್ಗಳ ರಚನೆಗಳಿಗೆ ನಮ್ಮ ಆಚಾರ್ಯರು (ಪೂರ್ವಾಚಾರ್ಯರು ) ನೀಡಿದ  ವ್ಯಾಖ್ಯಾನಗಳ ಮಹತ್ವಗಳನ್ನು ತಿಳಿಸುವುದಂತೆ ಅವರು ದಯೆ ತೋರಿ ಸಂಕಲ್ಪಿಸಿರುತ್ತಾರೆ. 

ಆೞ್ವಾರ್ಗಳ್  ಏಱ್ಱಂ ಅರುಳಿಚೆಯಲ್ ಏಱ್ಱಂ

 ತಾೞ್ವಾದುಂ ಇನ್ಱಿ ಅವೈ ತಾಮ್ ವಳರ್ತೋರ್ ಏೞ್ಪಾರುಂ 

ಉಯ್ಯ ಅವರ್ಗಳ್ ಸೈದ ವ್ಯಾಕ್ಕಿಯೈಗಳ್  ಉಳ್ಳದೆಲ್ಲಾಂ

  ವೈಯ್ಯಂ ಅಱೈಪ್ ಪಗರ್ವೋಂ ವಾಯ್ನ್ದು.

ಈ ಲೋಕದ ಜನರು ತಿಳಿಯಲೆಂದು, ನಾವು , ಆೞ್ವಾರ್ಗಳ ಮಹತ್ವವನ್ನು ಮತ್ತು  ಕೊರತೆಯಿಲ್ಲದ ಅರುಳಿಚೆಯಲ್ಗಳನ್ನು ಪೋಷಿಸಿ ತಮ್ಮಲ್ಲಿ ಯಾವುದೆ ಅಲ್ಪತೆಯಿಲ್ಲದ ಪೂರ್ವಾಚಾರ್ಯರ ವ್ಯಾಖ್ಯಾನಗಳನ್ನು ( ಭಾಷ್ಯ)  ತಿಳಿಸುತ್ತೇವೆ.ಎಂಪೆರುಮಾನರು ಅನುಗ್ರಹಿಸಿದ ಕಲ್ಮಷವಿಲ್ಲದ ಜ್ಞಾನ ಮತ್ತು ಭಕ್ತಿಯು ಅವರ ವೈಶಿಷ್ಟ್ಯತೆಯಾಗಿರುವುದು.

ಅವರ ಅರುಳಿಚೆಯಲ್ಗಳ ವೈಶಿಷ್ಟ್ಯತೆಯೆಂದರೆ ವೇದಗಳ ಅರ್ಥವನ್ನು ಸರಳ ರೀತಿಯಲ್ಲಿ ತಿಳಿಸುವುದಲ್ಲದೆ ಎಂಪೆರುಮಾನರ ವಿಷಯಗಳನ್ನು ಹೊರತು ಬೇರಾವ ವಿಷಯವನ್ನು ಅವರು ಹೇಳುವುದಿಲ್ಲ.

ನಮ್ಮ ಪೂರ್ವಾಚಾರ್ಯರು ಜಗತ್ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು , ತಮಗಾಗಿ ಸಂಪತ್ತು ಗೌರವಗಳನ್ನು ಶೇಖರಿಸುವಂತಹ ಕೀಳೆಂದು ಭಾವಿಸುವ ಲೌಕಿಕ ವಿಷಯಗಳಲ್ಲಿ ಒಳಗೊಳ್ಳದೆ ಸದಾ ಎಂಪೆರುಮಾನರಿಗೆ ಸೇವೆ ಸಲ್ಲಿಸುತ್ತಾ ಅವರನ್ನು ಸ್ಮರಿಸುತ್ತಾ ಇದ್ದರು.

ಪಾಸುರ ೩೫

ಆೞ್ವಾರ್ಗಳ ಮತ್ತು ಅವರ ಅರುಳಿಚೆಯಲ್ಗಳ ವೈಶಿಷ್ಟ್ಯತೆಯನ್ನು ಅರಿಯದೆ ತಿರಸ್ಕರಿಸುವವರು ಅಲ್ಪರೆಂದು ಅವರ ಮನಸ್ಸಿಗೆ ಹೇಳುತ್ತಾರೆ.

ಆೞ್ವಾರ್ಗಳೆಯುಂ ಅರುಳಿಚೆಯಲ್ಗಳೆಯುಂ 

ತಾೞ್ವಾ ನಿನೈಪ್ಪವರ್ದಾಂ ನರಗಿಲ್ -ವೀೞ್ವಾರ್ಗಳ್  

ಎನ್ಱು ನಿನೈತ್ತು ನೆಂಜೇ ಎಪ್ಪೊೞುದುಂ ನೀ ಅವರ್ ಪಾಲ್ 

ಸೆನ್ಱಣುಗ ಕೂ‌ಸಿತ್ತಿರಿ

ಓ ಮನಸೇ!, ಆೞ್ವಾರ್ಗಳನ್ನು ಮತ್ತು ಅವರ ದಿವ್ಯ ರಚನೆಗಳ ವೈಶಿಷ್ಟ್ಯತೆಯನ್ನು ತಿಳಿಯದೆ ಕೆಲವರು ಅಲ್ಪವಾಗಿ ಭಾವಿಸುವರು. ಅಂತಹವರು ನರಕದಲ್ಲಿ ಬೀಳುವರು. ಇವರಿಂದ ದೂರವಿದ್ದು ಸ್ನೇಹ ಭಾವನೆಗಳಲ್ಲಿ ತೊಡಗದೆ ಇರಬೇಕು, ಏಕೆಂದರೆ ಅದು ನಮಗೆ ಕೇಡು ಬಗೆಯುವುದು.ಆೞ್ವಾರ್ಗಳು , ಎಂಪೆರುಮಾನರಿಗೆ ಬಹಳ ಪ್ರಿಯವಾದವರು, ಈ ಭೂಮಿಯಲ್ಲಿ ಅವತರಿಸಿ ,ಈ ಲೋಕದ ಜನರಿಗೆ ಸುಧಾರಿಸುವ ಮಾರ್ಗ ನೀಡಿದ್ದಾರೆ. ಅವರು ಜನಿಸಿದ ಕಾರಣದಿಂದಾಗಿ ಅಥವಾ ಅವರ ಕೃತಿಗಳು ತಮಿಳು ಭಾಷೆಯಲ್ಲಿರುವ ಕಾರಣಗಳಿಂದ ಅವರನ್ನು ಕೀಳಾಗಿ ಭಾವಿಸುವರನ್ನು ಎಂಪೆರುಮಾನರೆ ಕ್ಷಮಿಸುವುದಿಲ್ಲ; ಅವರನ್ನು ನರಕಕ್ಕೆ ತಳ್ಳುವರು.ಹೀಗಿರುವ ಪಕ್ಷದಲ್ಲಿ ಹೇಗೆ ನೀನು ಅವರೊಡನೆ ಇರುವೆ? ಹಾಗಾದರೆ ಅವರನ್ನು ಕಂಡರೆ ನೀನು ಜಿಗುಪ್ಸೆಯಿಂದ ದೂರವಿರು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://divyaprabandham.koyil.org/index.php/2020/06/upadhesa-raththina-malai-34-35-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೧ ರಿಂದ ೩೩ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೩೧

ತೊಂಡರಡಿಪ್ಪೊಡಿ ಆೞ್ವಾರ್, ಕುಲಶೇಖರ  ಆೞ್ವಾರ್ ಅವತರಿಸಿದ ಸ್ಥಳಗಳನ್ನು ದಯೆತೋರಿ ತಿಳಿಸುತ್ತಾರೆ .

ತೊಂಡರಡಿಪ್ಪೊಡಿ ಆೞ್ವಾರ್ ತೋನ್ಱಿಯ ಊರ್ ತೊಲ್ ಪುಗೞ್ ಸೇರ್

ಮಣ್ಡನ್ಗುಡಿ ಎನ್ಬರ್ ಮಣ್ಣುಲಗಿಲ್ – ಎನ್ ದಿಶೈಯುಂ

ಏತ್ತುಂ ಕುಲಶೇಖರನ್  ಊರ್ ಎನ ಉರೈಪ್ಪಾರ್

ವಾಯ್ತ ತಿರುವಂಜಿಕ್ಕಳಂ    

ತಿರುಪ್ಪುಳ್ಳಂಭೂದಂಗುಡಿ  ಎಂಬ ದಿವ್ಯ ದೇಶದ ಹತ್ತಿರ ಇರುವ ಪ್ರಸಿದ್ಧ  ಪೌರಾಣಿಕ ಮಣ್ಡನ್ಗುಡಿಯಲ್ಲಿ  ತೊಂಡರಡಿಪ್ಪೊಡಿ ಆೞ್ವಾರ್  ಅವತರಿಸಿದರೆಂದು  ಬಲ್ಲವರು ಹೇಳುವರು. ಅಪಾರ ಖ್ಯಾತಿವಂತರಾದ, ಅಷ್ಟ ದಿಕ್ಕಿನಲ್ಲೂ ಪ್ರಜೆಗಳು ಅಭಿಮಾನಿಸುವ   ಕುಲಶೇಖರ ಆೞ್ವಾರ್ಗೆ ಸಾಟಿಯಾದದ್ದು ತಿರುವಂಜಿಕ್ಕಳಂ  ಅವರು ಅವತರಿಸಿದ ಸ್ಥಳವು.

ಪಾಸುರ ೩೨

ತಿರುಮೞಿಸೈ  ಆೞ್ವಾರ್, ನಮ್ಮಾೞ್ವಾರ್ ಮತ್ತು ಪೆರಿಯಾೞ್ವಾರ್ ಅವತರಿಸಿದ ಸ್ಥಳಗಳನ್ನು ಮಾಮುನಿಗಳು  ದಯೆತೋರಿ ತಿಳಿಸುತ್ತಾರೆ .

ಮನ್ನು ತಿರುಮೞಿಸೈ  ಮಾಡತ್ ತಿರುಕುರುಗೂರ್

ಮಿನ್ನು ಪುಗೞ್ ವಿಲ್ಲಿಪುತ್ತೂರ್ ಮೇದಿನಿಯಿಲ್ – ನನ್ನೆಱಿಯೋರ್

ಏಯ್ನ್ದ ಬತ್ತಿಸಾರರ್ ಎೞಿಲ್   ಮಾಱನ್ ಬಟ್ಟರ್ ಪಿರಾನ್

ವಾಯ್ನ್ದು  ಉದಿತ್ತ  ಊರ್ಗಳ್ ವಗೈ  

ಭಕ್ತಿಸಾರರ್ ಎಂಬ ತಿರುಮೞಿಸೈ  ಆೞ್ವಾರನ್ನು, ಸರಿಯಾದ ಮಾರ್ಗದಲ್ಲಿದ್ದು  ಆಚಾರ್ಯರ ಕೃಪೆಗಾಗಿ ಈ ಲೋಕದಲ್ಲಿ ಪೂಜಿಸಲ್ಪಡುತ್ತಾರೆ . ಸೌಂದರ್ಯ ಭರಿತ ನಮ್ಮಾೞ್ವಾರರನ್ನು  ಮಾಱನ್ ಎಂದು ಕರೆಯುವರು; ಪೆರಿಯಾೞ್ವಾರರನ್ನು ಭಟ್ಟರ್ ಪಿರಾನ್ ಎಂದು ಕರೆಯುವರು. ಈ ಮೂವರು ಆೞ್ವಾರರುಗಳು ಅವತರಿಸಿದ ಸ್ಥಳಗಳು ಅನುಕ್ರಮವಾಗಿ ಶ್ರೀ ಜಗನ್ನಾಥ ಪೆರುಮಾಳ್ ನೆಲೆಸಿರುವ ಮಹೀಸಾರ ಕ್ಷೇತ್ರವೆಂಬ ತಿರುಮೞಿಸೈ , ಉಜ್ವಲವಾದ ದಿವ್ಯ ಭವನಗಳಿಂದ ಆವರಿಸಿರುವ  ತಿರುಕ್ಕುರುಗೂರ್ ಎಂಬ ಆೞ್ವಾರ್ ತಿರುನಗರಿ.

ಪಾಸುರಂ  ೩೩   

ಆಂಡಾಳ್ , ಮಧುರಕವಿ ಆೞ್ವಾರ್ ಮತ್ತು ಯತಿರಾಜರೆಂಬ ಶ್ರೀ ರಾಮಾನುಜರು ಅವತರಿಸಿದ ಸ್ಥಳಗಳನ್ನು ದಯೆತೋರಿ ತಿಳಿಸುತ್ತಾರೆ

ಸೀರಾರುಮ್ ವಿಲ್ಲಿಪುತ್ತೂರ್ ಸೆಲ್ವತ್  ತಿರುಕ್ಕೋಲೂರ್

ಏರಾರ್ ಪೆರುಂಬೂದೂರ್   ಎನ್ನುಂ ಇವೈ – ಪಾರಿಲ್

ಮದಿಯಾರುಮ್   ಆಂಡಾಳ್  ಮಧುರಕವಿ ಆೞ್ವಾರ್

ಎದಿರಾಸರ್ ತೊನ್ರಿಯ ಊರ್ ಇಂಗು

ಖ್ಯಾತಿಭರಿತ ಶ್ರೀವಿಲ್ಲಿಪುತ್ತೂರ್, ಕೈಂಕರ್ಯ ಸಂಪತ್ತುಳ್ಳ ತಿರುಕ್ಕೋಲೂರ್, ಶ್ರೀ ಆದಿಕೇಶವ ಪೆರುಮಾಳ್ ಸ್ಥಿರವಾಗಿ ನೆಲೆಸಿರುವ ಶ್ರೀ ಪೆರುಂಬೂದೂರ್  ಸ್ಥಳಗಳು ಅನುಕ್ರಮವಾಗಿ ಪರಿಪೂರ್ಣ ಜ್ಞಾನ( ಎಂಪೆರುಮಾನರ  ವಿಷಯಗಳಲ್ಲಿ ) ಪಡೆದ  ಶ್ರೀ ಭೂಮಿಪಿರಾಟ್ಟಿಯ ಅವತಾರವಾದ ಆಂಡಾಳ್ ,  

ನಮ್ಮಾೞ್ವಾರರನ್ನು ಪರಮದೈವವಾಗಿ ಭಾವಿಸಿದ ಮಧುರಕವಿ ಆೞ್ವಾರ್ ಮತ್ತು ಎತಿರಾಜರೆಂಬ ಶ್ರೀ ರಾಮಾನುಜರು ಅವತರಿಸಿದರು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-31-33-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org