Author Archives: alavandar

ತಿರುವಾಯ್ಮೊೞಿ ನೂಟ್ರಂದಾದಿಯ – ಸರಳ ವಿವರಣೆ – ತನಿಯನ್ಗಳು

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿಯ

ತನಿಯನ್-1
ಅಲ್ಲುಮ್ ಪಗಲುಮ್ ಅನುಬವಿಪ್ಪಾರ್ ತನ್ಗಳುಕ್ಕುಚ್
ಚೊಲ್ಲುಮ್ ಪೊರುಳುಮ್ ತೊಗುತ್ತುರೈತ್ತಾನ್ – ನಲ್ಲ
ಮಣವಾಳ ಮಾಮುನಿವನ್ ಮಾಱನ್ ಮಱೈಕ್ಕುತ್
ತಣವಾ ನೂಟ್ರಂದಾದಿ ತಾನ್

ಮಧುರವಾದ ಪಾದಗಳು-ಅದರ ಅರ್ಥವನ್ನು ಎಂದೂ ಹಗಲೂ ರಾತ್ರಿ ಅನುಭವಿಸಲು ಇಚ್ಛಿಸುವವರಿಗಾಗಿ ಮಣವಾಳ ಮಾಮುನಿಗಳು ತಮ್ಮ ಕೃಪೆಯಿಂದ ತಮಿಳು (ದ್ರಾವಿಡ) ವೇದವಾಗಿರುವ ತಿರುವಾಯ್ಮೊೞಿಯ ಅರ್ಥಗಳನ್ನು ಸಂಕ್ಷಿಪ್ತವಾಗಿ ಅಂದಾದಿ ಕ್ರಮದಲ್ಲಿ ನೂರು ಪಾಸುರಗಳಲ್ಲಿ ಚೆನ್ನಾಗಿ ಹೊಂದಿಕೊಳ್ಳುವ ಪ್ರಬಂಧವಾಗಿ ಅನುಗ್ರಹಿಸಿದರು.


ತನಿಯನ್-2
ಮನ್ನು ಪುಗೞ್ ಸೇರ್ ಮಣವಾಳ ಮಾಮುನಿವನ್
ತನ್ ಅರುಳಾಲ್ ಉಟ್ಪೊರುಳ್ಗಳ್ ತನ್ನುಡನೇ ಸೊನ್ನ
ತಿರುವಾಯ್ಮೊೞಿ ನೂಟ್ರನ್ದಾದಿ
ತೇನೈ
ಒರುವಾದರುಂದು ನೆಂಜೇ ಉಟ್ರು

ಓ ಹೃದಯವೇ! ನಿತ್ಯವಾದ ವೈಭವಾಂನ್ವಿತರಾದ ಮಣವಾಳ ಮಾಮುನಿಗಳು (ತಿರುವಾಯ್ಮೊೞಿಯ ) ಆಳವಾದ ಅರ್ಥಗಳನ್ನು ಪ್ರಕಾಶಿಸಲು ಕೃಪೆಯಿಂದ ಹೇಳಿದ ಈ ಮಧುವಿನಂತೆ(ಜೇನುತುಪ್ಪದಂತೆ) ಇರುವ ತಿರುವಾಯ್ಮೊೞಿ ನೂಟ್ರನ್ದಾದಿಯನ್ನು ಗ್ರಹಿಸಿ ಪ್ರತಿನಿತ್ತ್ಯವೂ ಕುಡಿ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-thaniyans-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ಮೊೞಿ ನೂಟ್ರಂದಾದಿಯ – ಸರಳ ವಿವರಣೆ

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಇತರ ಪ್ರಬಂದಗಳು

ಶ್ರಿಮನ್ನಾರಾಯಣನು ಆಳ್ವಾರಿಗೆ ನಿರ್ದೋಷವಾದ ಜ್ಞಾನ-ಭಕ್ತಿಗಳನ್ನು ತನ್ನ ವಿಷಯದಲ್ಲಿ ಅನುಗ್ರಹಿಸಿದನು. ನಮ್ಮಾಳ್ವಾರಿನ ಈ ಅಗಾಧ ಅನುಭವವು ತಿರುವಿರುತ್ತಮ್ ,ತಿರುವಾಸಿರಿಯಮ್ , ಪೆರಿಯ ತಿರುವಂದಾದಿ ಹಾಗು ತಿರುವಾಯ್ಮೊೞಿ ರೂಪವನ್ನು ಪಡೆದವು. ತಿರುವಾಯ್ಮೊೞಿಯು ಸಾಮವೇದದ ಸಾರ. ಮುಮುಕ್ಷುವಿನಿಂದ ಜ್ಞಾತವ್ಯವಾದ ( ಮೋಕ್ಷವನ್ನು ಪಡೆಯಲು ಇಚ್ಛಿಸುವವನಿಂದ ತಿಳಿಯಬೇಕಾದ) ಎಲ್ಲಾ ಅರ್ಥಗಳು- ಅರ್ಥ-ಪಂಚಕದ ಜ್ಞಾನವನ್ನು ತಿರುವಾಯ್ಮೊೞಿಯು ತಿಳಿಸುತ್ತದೆ. ನಮ್ಪಿಳ್ಳೈಯಿನ ‘ಈಡು’ ವ್ಯಾಖ್ಯಾನವು ಇದರ ಅರ್ಥಗಳನ್ನು ವಿಸ್ತರವಾಗಿ ವಿವರಿಸುತ್ತದೆ

ಮಣವಾಳ ಮಾಮುನಿಗಳಿಂದ ರಚಿತವಾದ ಒಂದು ಅದ್ಭುತ ಗ್ರಂಥವು ತಿರುವಾಯ್ಮೊೞಿ ನೂಟ್ರಂದಾದಿ . ಇದರ ರಚನೆಯಲ್ಲಿ ಮಾಮುನಿಗಳು ಹಲವಾರು ನಿರ್ಬಂಧನೆಗಳೂಂದಿಗೆ ರಚಿಸಿದ್ದಾರೆ, ಅವು:

*ಕಲಿಕೆ ಹಾಗು ಪಠನದ ಸರಳತೆಗಾಗಿ ಅಂದಾದಿಯ ಪದ್ಯ ರೂಪದಲ್ಲಿರಬೇಕು.
*ಅದರ ಪ್ರತಿ ಪಾಸುರದಲ್ಲೂ ಈಡು-ವ್ಯಾಖ್ಯಾನವನ್ನು ಅನುಸರಿಸಿ ಪ್ರತಿ ದಶಕದ ಅರ್ಥವನ್ನು ತಿಳಿಸ ಬೇಕು
*ಪ್ರತಿ ಪಾಸುರದಲ್ಲೂ ನಮ್ಮಾಳ್ವಾರರ ನಾಮ ಹಾಗು ವೈಭವವು ಇರಬೇಕು
ಪಿಳ್ಳೈ ಲೋಕಮ್ ಜೀಯರಿನ ವ್ಯಾಖ್ಯಾನದ ಸಹಾಯದಿಂದ ಅತಿ ಸ್ವಾರಸವಾದ ಈ ಗ್ರಂಥದ ಸರಳ ಅರ್ಥವನ್ನು ಅನುಭವಿಸೋಣ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/09/thiruvaimozhi-nurrandhadhi-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org