ಉಪದೇಶ ರತ್ನಮಾಲೈ – ಸರಳ ವಿವರಣೆ – ೪೧ ರಿಂದ ೪೩ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೪೧ ಕರುಣಾಮಯಿ ತಿರುಕ್ಕುರುಗೈಪಿರಾನ್ ಪಿಳ್ಳಾನ್ ತಿರುವಾಯ್ಮೊಳಿಗೆ ನಿರ್ಮಿಸಿದ ಆರಾಯಿರಪ್ಪಡಿ ವ್ಯಾಖ್ಯಾನದ( 32 ಅಕ್ಷರಗಳು ಸೇರಿದರೆ ಒಂದು ಪಡಿ) ವೈಶಿಷ್ಟ್ಯತೆಯನ್ನು ಹೇಳುವರು. ತೆಳ್ಳಾರುಂ ಜ್ಞಾನತ್ ತಿರುಕ್ಕುರುಗೈಪಿರಾನ್ ಪಿಳ್ಳಾನ್ ಎದಿರಾಸರ್ ಪೇರರುಳಾಲ್ -ಉಳ್ಳಾರುಂ ಅನ್ಬುಡನೇ ಮಾಱನ್ ಮಱೈಪ್ ಪೊರುಳೈ ಅನ್ಱು ಉರೈತ್ತದು ಇನ್ಬ ಮಿಗು ಆಱಾಯಿರಂ  ಶ್ರೀಭಾಷ್ಯಕಾರರ್ ಎಂದು ಖ್ಯಾತಿಪಡೆದ ಯತಿರಾಜರು, ತಿರುಕ್ಕುರುಗೈಪಿರಾನ್ ಪಿಳ್ಳಾನ್‌ರನ್ನು ಅವರ ಜ್ಞಾನಪುತ್ರರೆಂದು( … Read more