ಉಪದೇಶ ರತ್ನಮಾಲೈ – ಸರಳ ವಿವರಣೆ – ೨೫ ಮತ್ತು ೨೬ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೨೫

ಮಾಮುನಿಗಳು ಮಧುರಕವಿಯ ಘನತೆಯನ್ನು ಎರಡು ಪಾಸುರಗಳಲ್ಲಿ ವರ್ಣಿಸಿದ್ದಾರೆ.ಈ ಪಾಸುರದಲ್ಲಿ , ಮಿಕ್ಕ ಆೞ್ವಾರ್ಗಳು ಅವತರಿಸಿದ ದಿನ ಗಳಿಗಿಂತ  ಚೈತ್ರ ಮಾಸದ ಚಿತ್ರಾ ನಕ್ಷತ್ರದಂದು ಅವತರಿಸಿದ ಮಧುರಕವಿ ಆೞ್ವಾರರ ಖ್ಯಾತಿಯನ್ನು ತಿಳಿಸುತ್ತಾ ಅದನ್ನು ಪರಿಶೀಲಿಸಲು ಅವರ ಮನಸ್ಸಿಗೆ ಹೇಳುತ್ತಾರೆ.

ಏರಾರ್ ಮಧುರಕವಿ ಇವ್ವುಲಗಿಲ್  ವಂದು ಉದಿತ್ತ

ಶೀರಾರುಂ ಶಿತ್ತಿರೆಯಿಲ್  ಶಿತ್ತಿರೈ ನಾಳ್ – ಪಾರ್  ಉಲಗಿಲ್

ಮಱ್ಱುಳ್ಳ ಆೞ್ವಾರ್ಗಳ್ ವಂದು ಉದಿತ್ತ ನಾಳ್ಗಳಿಲುಮ್

ಉಱ್ಱದು ಎಮಕ್ಕು ಎನ್ಱು ನೆಂಜೇ ಓರ್  

ಓ ಮನಸೇ! ಚೈತ್ರ ಮಾಸದ ಚಿತ್ರಾ ನಕ್ಷತ್ರಕ್ಕೆ ತಕ್ಕ ಖ್ಯಾತಿಯೆಂದರೆ ಅಂದು ಮಹನೀಯರು, ಮಧುರಕವಿ ಆೞ್ವಾರ್ ಈ ಭುವಿಯಲ್ಲಿ ಅವತರಿಸಿದರು . ಮಿಕ್ಕ ಆೞ್ವಾರ್ಗಳು ಅವತರಿಸಿದ ದಿನಗಳಿಗಿಂತ ಇದು ನಮ್ಮ ಸ್ವರೂಪಕ್ಕೆ  ( ನೈಜಿಕ ಸ್ವಭಾವಕ್ಕೆ ) ತಕ್ಕವಾದದ್ದು ಎಂದು ಪರಿಶೀಲಿಸು.

ನಮ್ಮ ಪೂರ್ವಾಚಾರ್ಯಾರಾದ ಪಿಳ್ಳೈ ಲೋಕಾಚಾರ್ಯರು , ಅವರ ಶಾಸ್ತ್ರ   ಶ್ರೀವಚನ ಭೂಷಣದಲ್ಲಿ , ಮಧುರಕವಿ ಆೞ್ವಾರರ ವಿಖ್ಯಾತಿಯನ್ನು  ಸುಂದರವಾಗಿ ವಿವರಿಸಿದ್ದಾರೆ. ಮಿಕ್ಕ ಆೞ್ವಾರ್ಗಳು ಅವರವರು ಎಂಪೆರುಮಾನರನ್ನು ಎಂದು ಪಡೆದು ಅನುಭವಿಸುವರೋ ಎಂದು ಪರಿಶ್ರಮಿಸಿದಾಗ ಅವರು  ದುಃಖದಲ್ಲಿ ಪಾಸುರಗಳನ್ನು ರಚಿಸಿದರು ಮತ್ತು ಅವರು ಮಾನಸಿಕವಾಗಿ ಸಂತೋಷವಾಗಿ ಅವರನ್ನು ಅನುಭವಿಸಿದಾಗ ಆನಂದದಿಂದ ಪಾಸುರಗಳನ್ನು ರಚಿಸಿದರು. ಆದರೆ ಮಧುರಕವಿ ಆೞ್ವಾರ್ ಅವರ ಆಚಾರ್ಯಾರಾದ ನಮ್ಮಾೞ್ವಾರರನ್ನು ತನಗೆ  ಸರ್ವಸ್ವವೆಂದು ಭಾವಿಸಿ ಅವರ ಆಚಾರ್ಯರ ಕೈಂಕರ್ಯದಲ್ಲಿ ತೊಡಗಿದರು. ಆದ್ದರಿಂದ ಅವರು ಈ ಲೋಕದಲ್ಲಿ  ಸದಾ ಪರಮಾನಂದದಲ್ಲಿದ್ದು  ಅದನ್ನು ಇತರರಿಗೆ ಹೇಳಿ ಉಪದೇಶಿಸಿದರು. ಬೇರಾವುದು ಈ ವೈಶಿಷ್ಟ್ಯತೆ ಹೊಂದಿಲ್ಲ.  ಶೀರಾರುಂ ಚಿತ್ತಿರೆಯಿಲ್  ಚಿತ್ತಿರೈ ನಾಳ್  ಎಂಬ ಸೂಕ್ತಿಯಲ್ಲಿರುವ ಸೀರ್ಮೈ  ( ಖ್ಯಾತಿ ಅಥವಾ ವೈಶಿಷ್ಟ್ಯತೆ ) ಚೈತ್ರ ಮಾಸ  ಮತ್ತು ಚಿತ್ರಾ ನಕ್ಷತ್ರಕ್ಕೆ ಸೂಕ್ತವಾಗಿರುವುದು. ಆಚಾರ್ಯರ ಕೃಪೆಯಾಗಿ ಊರ್ಜಿತವಾಗುವುದೇ ನಮ್ಮ ಸ್ವರೂಪ. ಈ ಆೞ್ವಾರರ ದೆಸೆ ಇದಕ್ಕೆ  ಅನುಗುಣವಾಗಿರುವುದು.

ಪಾಸುರ ೨೬  

 ನಮ್ಮ ಆಚಾರ್ಯರು , ಆೞ್ವಾರುಗಳ ಅರುಳಿಚೆಯಲ್ಗಳ ( ದೈವ ಗಾಯನ ) ಅರ್ಥಗಳನ್ನು ಖಚಿತವಾಗಿ ಪ್ರಕಟಿಸಿದಂತೆ, ಮಧುರಕವಿ ಆೞ್ವಾರರ ಪ್ರಬಂಧದ  ( ದೈವ ಗಾಯನ) ವೈಶಿಷ್ಟ್ಯತೆಯನ್ನು ಪರಿಶೀಲಿಸಿ ಅದನ್ನು ಅರುಳಿಚೆಯಲ್ಗಳಿಗೆ ಸೇರಿಸಿದ ರೀತಿಯನ್ನು ಮಾಮುನಿಗಳು ಉದಾಹರಣೆಯಂತೆ ವಿವರಿಸಿರುವರು.

ವಾಯ್ತ ತಿರುಮಂದಿರತ್ತಿನ್ ಮದ್ದಿಮಮಾಂ ಪದಂ ಪೋಲ್

ಸೀರ್ತ್ತ ಮಧುರಕವಿ ಸೈಕಲೆಯೈ – ಆರ್ತ್ತ ಪುಗೞ್

ಆರಿಯರ್ಗಳ್  ತಾಂಗಳ್ ಅರುಳಿಚೆಯಲ್ ನಡುವೇ

ಸೇರ್ವಿತ್ತಾರ್ ತಾಱ್ಪರಿಯಂ  ತೇರ್ನ್ದು     

ಎಂಟು ಅಕ್ಷರಗಳು ಉಳ್ಳ ( ದೈವ  ಗಾನ)  ತಿರುಮಂತ್ರಂ , ಪದ ಅರ್ಥಗಳಿಂದ ಪರಿಪೂರ್ಣವಾಗಿದೆ ಎಂದು ಭಾವಿಸಲಾಗಿದೆ. ಅದರ ಮಧ್ಯಭಾಗವಾದ ನಮಃ  ಪದದ ವೈಶಿಷ್ಟ್ಯತೆಯು ಮಹನೀಯರಾದ ಮಧುರಕವಿ ಆೞ್ವಾರ್ ರಚಿಸಿದ  ಅಪೂರ್ವ ರಚನೆಯಾದ ಕಣ್ಣಿನುನ್ ಚಿರುತ್ತಾಂಬು ಗೆ ಸಾಟಿಯಾಗಿರದು. ಈ ಪ್ರಬಂಧದ ಅರ್ಥ ವೈಶಿಷ್ಟ್ಯತೆ ತಿಳಿದ ಪೂರ್ವಾಚಾರ್ಯರು ಇದನ್ನು ಮಿಕ್ಕ ಆೞ್ವಾರ್ಗಳ ಅರುಳಿಚೆಯಲೊಂದಿಗೆ ಸೇರಿಸಿ ಮಿಕ್ಕ ಪ್ರಬಂಧಗಳೊಂದಿಗೆ ಸದಾ  ಇದನ್ನು ಪಠಿಸಲು ಏರ್ಪಡಿಸಿದರು.ನಮಃ  ಎಂಬ ಪದವು ಭಾಗವತ ಶೇಷತ್ವಂ- ಎಂಪೆರುಮಾನರ ಭಕ್ತರಿಗೆ ಕೈಂಕರ್ಯ ಮಾಡುವುದನ್ನು ಸೂಚಿಸುವುದು . ಮಧುರಕವಿ  ಆೞ್ವಾರ್ ನಮ್ಮಾೞ್ವಾರರೆ ಭಗವಂತನೆಂದು ಭಾವಿಸಿ  ತೇವು ಮಟ್ರರಿಯೇನ್ – ಬೇರಾವ ದೇವರನು ನಾನ್ ಅರಿಯೆನು  ಎಂದು ಹಾಡಿ, ಈ ಪ್ರಬಂಧದಲ್ಲಿ ಅವರ ಅಪಾರ ನಂಬಿಕೆಯನ್ನು ಪ್ರಕಟಿಸಿದ್ದಾರೆ. ಇದನ್ನು ಅರಿತ ಪೂರ್ವಾಚಾರ್ಯರು ಈ ಪ್ರಬಂಧವನ್ನು ಇತರ ಅರುಳಿಚೆಯಲೊಂದಿಗೆ  ಸೇರಿಸಿ ಗೌರವಿಸಿದ್ದಾರೆ

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-25-26-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Reply

Your email address will not be published. Required fields are marked *