ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 1 ರಿಂದ 10

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-1
ಅವ:
(ಉಯರ್ವೇ ಪರನ್ ಪಡಿ…) ಎಮ್ಪೆರುಮಾನಿನ ಪರತ್ವವನ್ನು (ಅತ್ಯುತ್ಕ್ರುಷ್ಟ ಸ್ಥಾನವನ್ನು) ಹಾಗು ” ಪರ ದೇವನ ಪಾದಗಳನ್ನು ಆಶ್ರಯಿಸಿ ಉಜ್ಜೀವಿಸಿ ” ಎಂದು ಚೇತನರಿಗೆ ಮೋಕ್ಷಕ್ಕೆ ಸಾಧನವಾಗಿರುವ ಆಳ್ವಾರಿನ ದಿವ್ಯ ವಾಕ್- ಮೊದಲ ದಶಕದ ಅರ್ಥವನ್ನು ಮಾಮುನಿಗಳು ವಿವರಿಸುತಿದ್ದಾರೆ.
ಉಯರ್ವೇ ಪರನ್ ಪಡಿಯೈ ಉಳ್ಳದೆಲ್ಲಾಮ್ ತಾನ್ ಕಣ್ಡುಙ
ಉಯರ್ ವೇದ ನೇರ್ ಕೊಣ್ಡುರೈತ್ತು – ಮಯರ್ವೇದುಮ್
ವಾರಾಮಲ್ ಮಾನಿಡರೈ ವಾೞ್ವಿಕ್ಕುಮ್ ಮಾಱನ್ ಸೊಲ್
ವೇರಾಗವೇ ವಿಳೈಯುಮ್ ವೀಡು

ವೈಭವನ್ವಿತನಾದ ಪರ ದೇವನ(ಭಗವಾನಿನ) ಪೂರ್ಣ ಸ್ವರೂಪವನ್ನು ಕಂಡು ಪರಮಪ್ರಮಾಣವಾಗಿರುವ ಶ್ರುತಿಯ ಛಾಯೆಯಲ್ಲಿಯೆ (ಶ್ರುತಿಯನ್ನು ಅನುಸರಿಸಿ /ಶ್ರುತಿಯು ಹೇಳಿರುವ ರೀತಿಯಲ್ಲೇ) ಕೃಪೆಯಿಂದ ನಮ್ಮಾಳ್ವಾರಿನಿಂದ ಹೇಳಲ್ಪಟ್ಟಿರುವ ದಿವ್ಯ ವಾಕ್ , ಮಾನವರಲ್ಲಿ ಅಜ್ಞಾನದ ಲವಲೇಶವೂ (ಸ್ವಲ್ಪವೂ/ಒಂದಿಷ್ಟೂ) ಇರದಂತೆ ಮಾಡಿ ಉಜ್ಜೀವಿಸಿ ಮೋಕ್ಷವನ್ನು ನೀಡುವುದು.

ಪಾಸುರ 2
ಅವ: ಈ ಪಾಸುರದಲ್ಲಿ ಮಾಮುನಿಗಳು ಸಂಸಾರಿಗಳಿಗೆ ನಮ್ಮಾಳ್ವಾರ್ ಕೃಪೆಯಿಂದ ತಮ್ಮನ್ನು ತಿದ್ದಿಕೊಂಡು ಆಳ್ವಾರಿನ ದಿವ್ಯ ಹೃದ್ಯದಂತೇ ಇರಲು ಉಪದೇಶಿಸಿದ ವಾಗನ್ನು ಅನುಭವಿಸುತಿದ್ದಾರೆ.
ವೀಡು ಸೆಯ್ದು ಮಟ್ರೆವೈಯುಮ್ ಮಿಕ್ಕ ಪುಗೞ್ ನಾರಣನ್  ತಾಳ್
ನಾಡು ನಲತ್ತಾಲ್ ಅಡೈಯ ನನ್ಗುರೈಕ್ಕುಮ್ – ನೀಡು ಪುಗೞ್
ವಣ್ ಕುರುಗೂರ್ ಮಾಱನ್ ಇನ್ದ ಮಾನಿಲತ್ತೋರ್ ತಾಮ್ ವಾೞಪ್
ಪಣ್ಬುಡನೇ ಪಾಡಿ ಅರುಳ್ ಪತ್ತು
ಮಹತ್ತಾದ ವೈಭವವನ್ನು ಉಳ್ಳವರಾದ ಶ್ರೀಮದ್ ತಿರುಕ್ಕುರುಗೂರಿನ ನಾಯಕರಾದ ನಮ್ಮಾಳ್ವಾರ್ ತಮ್ಮ ಕರುಣೆಯಿಂದ ಹಾಡಿದ ಈ ಹತ್ತು ಪಾಸುರಗಳು ಎಲ್ಲವನ್ನು ಬಿಟ್ಟು ಕೀರ್ತಿಮಯವಾದ ಶ್ರಿಮನ್ನಾರಾಯಣ ಪಾದಗಳನ್ನೇ ಆಶ್ರಯಿಸಿ ಎಂದು ವಿಶಾಲವಾದ ಭೂಮಿಯ ವಾಸಿಗಳಿಗೆ ಉಪದೇಶಿಸುತ್ತಿವೆ.

ಪಾಸುರ-3
ಅವ: ಈ ಪಾಸುರದಲ್ಲಿ ಮಾಮುನಿಗಳು ಭಗವಾನಿನ ಸೌಲಭ್ಯವನ್ನು (ಸುಲಭವಾಗಿ ಆಶ್ರಯಿಸಬಹುದಾದವನು) (ಆಳ್ವಾರಿನ) ದಿವ್ಯ ವಾಕ್ ಅನ್ನು ಅನುಸರಿಸಿ ತಮ್ಮ ಕರುಣೆಯಿಂದ ವಿವರಿಸುತಿದ್ದಾರೆ.
ಪತ್ತುಡೈಯೋರ್ಕ್ಕೆನ್ಱುಮ್ ಪರನ್ ಎಳಿಯನಾಮ್ ಪಿಱಪ್ಪಾಲ್
ಮುತ್ತಿ ತರುಮ್ ಮಾನಿಲತ್ತೀರ್ ಮೂಣ್ಡವನ್ಪಾಲ್ – ಪತ್ತಿ
ಸೆಯ್ಯುಮ್
ಎನೆಱುರೈತ್ತ ಮಾಱನ್ ತನಿನ್ ಸೊಲ್ಲಾಲ್ ಪೋಮ್ ನೆಡುಗಚ್
ಚೆನ್ಱ ಪಿಱಪ್ಪಾಮ್ ಅನ್ಜಿಱೈ
ಆಳ್ವಾರು ತಮ್ಮ ಕೃಪೆಯಿಂದ, “ಓ! ವಿಶಾಲವಾದ ಭೂಮಿಯ ವಾಸಿಗಳೇ, ಸರ್ವೇಶ್ವರನು ಸುಲಭವಾಗಿ ಆಶ್ರಯಿಸಬಹುದಾದವನು, ಅವತಾರಗಳ ಮುಖಾಂತರ ಕೃಪೆಯಿಂದ ಮೋಕ್ಷವನ್ನು ಪ್ರಸಾದಿಸುವನು. ತನ್ನ ವಿಷಯದಲ್ಲಿ ಪಕ್ವಾದ ಪ್ರೀತಿಯಿಂದ ಕೂಡಿದ ಭಕ್ತಿಯಿರಲಿ “ಎಂದು  ಹೇಳಿದ ತಿರುವಾಯ್ಮೊೞಿ ಅಭ್ಯಾಸದಿಂದ ಬಹುಕಾಲದಿಂದ ನಮ್ಮನ್ನು ಹಿಂಬಾಲಿಸಿದ ಕರ್ಮಗಳು ನಮ್ಮನ್ನು ಬಿಡುವವು.

ಪಾಸುರ-4
ಅವ: ಈ ಪಾಸುರದಲ್ಲಿ ಮಾಮುನಿಗಳು ಪಕ್ಷಿಗಳನ್ನು ದೂತರಾಗಿ ಎಮ್ಪೆರುಮಾನಿಗೆ ತನ್ನ ಅಪರಾಧ ಸಹತ್ವವೆಂಬ ಗುಣದ ಬಗ್ಗೆ ತಿಳಿಸಲು ಬೇಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಅಞ್ಜಿಱೈಯ ಪುಟ್ಕಳ್ ತಮೈ ಆೞಿಯಾನುಕ್ಕು ನೀರ್
ಎನ್ ಸೆಯಲೈಚ್ ಚೊಲ್ಲುಮ್ ಎನ ಇರನ್ದು – ವಿನ್ಜ
ನಲನ್ಗಿಯದು ಮಾಱನಿನ್ಗೇ ನಾಯಗನೈತ್ ತೇಡಿ
ಮಲನ್ಗಿಯದುಮ್ ಪತ್ತಿ ವಳಮ್.
ವಿಶ್ವಕೆಲ್ಲಾ ನಾಥನಾದ ಎಮ್ಪೆರುಮಾನನ್ನು ಹುಡುಕಿ ,ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿರುವ ಆಳ್ವಾರ್, ” ಚಕ್ರಾಯುಧವನ್ನು ಧರಿಸುತ್ತಿರುವ ಎಮ್ಪೆರುಮಾನಿಗೆ ನನ್ನ ಸ್ಥಿತಿಯಬಗ್ಗೆ ತಿಳಿಸಿ” ಎಂದು ಸುಂದರವಾದ ರೆಕ್ಕೆಗಳುಳ್ಳ ಪಕ್ಷಿಗಳನ್ನು ನೋಡಿ ದಿಗ್ಭ್ರಮೆಗೊಂಡು ಹೇಳಿದರು. ಇಂತಹದುಚ ಅವರ ಭಕ್ತಿ

ಪಾಸುರ-5
ಅವ: ಈ ಪಾಸುರದಲ್ಲಿ ಮಾಮುನಿಗಳು ಆಳ್ವಾರಿನ ಪಾಸುರಗಳನ್ನು ಅನುಸರಿಸಿ ಎಲ್ಲರಿಂದ ಆಶ್ರಯಣೀಯವಿಗಿ ಮಾಡುವ ಎಮ್ಪೆರುಮಾನಿನ ಸೌಶೀಲ್ಯವನ್ನು(ಸರಳತೆ) ತಮ್ಮ ಕೃಪೆಯಿಂದ ಹೇಳುತಿದ್ದಾರೆ
ವಳಮಿಕ್ಕ ಮಾಲ್ ಪೆರುಮೈ ಮನ್ ಉಯಿರಿನ್ ತಣ್ಮೈ
ಉಳಮುಟ್ರನ್ಗೂಡುರುವವೋರ್ನ್ದು – ತಳರ್ವುಟ್ರು
ನೀನ್ಗ ನಿನೈ ಮಾಱನೈ ಮಾಲ್ ನೀಡಿಲಗು ಸೀಲತ್ತಾಲ್
ಪಾನ್ಗುಡನೇ ಸೇರ್ತ್ತಾನ್ ಪರಿನ್ದು
ಆಳ್ವಾರ್ ವೈಭವಭರಿತ ಎಮ್ಪೆರುಮಾನನ್ನು ,ಆತ್ಮವಿನ ನೈಚ್ಯವನ್ನು (ನೀಚತನ) ತಮ್ಮ ಹೃದಯದಲ್ಲಿ ಕಂಡು ಚಿಂತಿಸಿ ದುರ್ಬಲರಾಗಿ ಎಮ್ಪೆರುಮಾನನ್ನು ಬಿಡಲು ಯೋಚಿಸಿದರು (ಆದರೆ) ಸರ್ವೇಶ್ವರನು ವಿದೀಪ್ತವಾದ (ಪ್ರಕಾಶಿಸುವ) (ಸೌಶೀಲ್ಯದಿಂದ)ಶೀಲದಿಂದ ಆನಂದದಿಂದ ಸ್ನೇಹದಿಂದ ಅಪ್ಪಿಕೊಂಡನು.

ಪಾಸುರ-6
ಅವ: ಈ ಪಾಸುರದಲ್ಲಿ ಮಾಮುನಿಗಳು ಆಳ್ವಾರಿನ ಪಾಸುರಗಳನ್ನು ಅನುಸರಿಸಿ ಎಮ್ಪೆರುಮನ್ ದುರಾರಾಧ್ಯನಲ್ಲವೆಂದು. (ಆರಾಧಿಸುವುದು ಕಷ್ಟವಲ್ಲವೆಂದು) ತಮ್ಮ ಕೃಪೆಯಿಂದ ಹೇಳುತಿದ್ದಾರೆ.
ಪರಿವದಿಲ್ ಈಸನ್ ಪಡಿಯೈಪ್ ಪಣ್ಬುಡನೇ ಪೇಸಿ
ಅರಿಯನ್ ಅಲನ್ ಆರಾಧನೈಕ್ಕೆನ್ಱು – ಉರಿಮೈಯುಡನ್
ಓದಿ ಅರುಳ್ ಮಾನ್ ಒೞಿವಿತ್ತಾನ್ ಇವ್ವುಲಗಿಲ್
ಪೇದೈಯರ್ಗಳ್ ತನ್ಗಳ್ ಪಿಱಪ್ಪು
“ಎಲ್ಲಾ ದೋಷಗಳಿಗು ವಿಪರೀತನಾದ ಸರ್ವೇಶ್ವರನು ಪೂರ್ಣನಾದ ಕಾರಣ, ಏನು ಸಮರ್ಪಿಸಿದರು ತೃಪನಾಗುವನು ಹಾಗು ದುರಾರಾಧ್ಯನಲ್ಲ”ವೆಂದು ಸೌಹಾರ್ದದಿಂದ ಹೇಳಿ ವಿಶ್ವದಲ್ಲಿರುವ ಅಜ್ಞರ ಜನ್ಮ (ಜರಾ-ವ್ಯಾದಿಗಳನ್ನು) ದೂರ ಮಾಡಿದನು.

ಪಾಸುರ-7
ಅವ: ಈ ಪಾಸುರದಲ್ಲಿ ಮಾಮುನಿಗಳು ಭಗವದ್ ಪ್ರಪತ್ತಿಯ(ಶರಣಾಗತಿಯ) ರಾಸಿಕ್ಯತೆಯನ್ನು ಹೋಗಳುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಪಿಱವಿ ಅಟ್ಟ್ರು ನೀಳ್ ವಿಸುಮ್ಬಿಲ್ ಪೇರ್ ಇನ್ಬಮ್ ಉಯ್ಕ್ಕುಮ್
ತಿಱಮ್ ಅಳಿಕ್ಕುಮ್ ಸೀಲತ್ ತಿರುಮಾಲ್ – ಅಱವಿನಿಯನ್
ಪಟ್ರುಮವರ್ಕ್ಕೆನ್ಱು ಪಗರ್ಮಾಱನ್ ಪಾದಮೇ
ಉಟ್ರ ತುಣೈ ಎನ್ಱು ಉಳಮೇ ಓಡು
ಓ ಹೃದಯವೇ!,”ಶ್ರೀಯಪತಿಯು ತನ್ನ ಶರಣಾಗತರನ್ನು ಪುನರ್ಜನ್ಮಗಳಿಂದ ರಕ್ಷಿಸಿ ಪರಮಪದದಲ್ಲಿ ಪರಮಾನಂದವನ್ನು ಪ್ರಸಾದಿಸಿ ಅವರಿಗೆ ಅತಿಭೋಗ್ಯನಾಗಿದ್ದಾನೆ” ಎಂದು ನುಡಿದ ಆಳ್ವಾರಿನ ದಿವ್ಯ ಪಾದಗಳನ್ನೇ ತಕ್ಕ ಸಂಗಾತಿಯೆಂದು ಶರಣಾಗು.

ಪಾಸುರ-8
ಅವ:
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ಆರ್ಜವವಿರುವ ಹಾಗು ಇಲ್ಲದವರನ್ನು ಸಮನಾಗಿ ನೋಡುವ ಆರ್ಜವಗುಣವನ್ನು  ತೋರುವ ಆಳ್ವಾರಿನ ದಿವ್ಯ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುತಿದ್ದಾರೆ.
ಓಡು ಮನಮ್ ಸೆಯ್ಗೈ ಉರೈ ಒನ್ಱಿ ನಿಲ್ಲಾದಾರುಡನೇ
ಕೂಡಿ ನೆಡುಮಾಲ್ ಅಡಿಮೈ ಕೊಳ್ಳುನಿಲೈ – ನಾಡಱಿಯ
ಓರ್ನ್ದವನ್ ತನ್ ಸೆಮ್ಮೈ ಉರೈ ಸೆಯ್ದ ಮಾಱನ್ ಎನ
ಏಯ್ನ್ದು ನಿಱ್ಕುಮ್ ವಾೞ್ವಾಮ್ ಇವೈ
ಸರ್ವೇಶ್ವರನು ಮನಸ್-ಕಾಯ-ವಾಗಿನ  ಐಕ್ಯವಿಲ್ಲದ (ಚಂಚಲ ಮನಸ್ಸು ದೇಹ ಹಾಗು ಮಾತು) ಆರ್ಜವವಿಲ್ಲದವರನ್ನು ಅಂಗೀಕರಿಸುವ ಎಮ್ಪೆರುಮಾನಿನ ಗುಣವನ್ನು ಜನರಿಗೆ ಅರಿವುಮಾಡಲು ವಿಶ್ಲೇಷಿಸಿದ ಆಳ್ವಾರನ್ನು ಚಿಂತಿಸಿದರೆ ಆತ್ಮವಿನ ಸ್ವರೂಪಕ್ಕೆ ತಕ್ಕ ಸಂಪತ್ತು ನಿತ್ಯವಾಗಿರುವುದು

ಪಾಸುರ-9
ಅವ:
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿನ ಹಂತಹಂತವಾಗಿ (ಅಥವಾ ನಿಧಾನಿಸಿ ನಿಧಾನಿಸಿ) ಆನಂದ ಕೊಡುವ (ಸಾತ್ಮ್ಯಭೋಗಪ್ರದತ್ವಮ್) ಎಂಬ ಗುಣವನ್ನು ಆಳ್ವಾರಿನ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುತಿದ್ದಾರೆ.
ಇವೈ ಅಱಿನ್ದೋರ್ ತಮ್ ಅಳವಿಲ್ ಈಸನ್ ಉವನ್ದಾಟ್ರ
ಅವಯನ್ಗಳ್ ತೋಱುಮ್ ಅಣೈಯುಮ್ ಸುವೈ ಅದನೈಪ್
ಪೆಱ್ಱಾರ್ವತ್ತಾಲ್ ಮಾಱನ್ ಪೇಸಿನ ಸೊಲ್ ಪೇಸ, ಮಾಲ್
ಪೊಱ್ಱಾಳ್ ನಮ್ ಸೆನ್ನಿ ಪೊರುಮ್

ಸರ್ವೇಶ್ವರನು  ಹಂತಹಂತವಾಗಿ (ಅಥವಾ ನಿಧಾನಿಸಿ ನಿಧಾನಿಸಿ) ತನ್ನ ಆರ್ಜವಾದಿ ಗುಣಗಳನ್ನು ಅರಿತವರ ಎಲ್ಲಾ ಅಂಗಗಳೊಂದಿಗೆ ಸಂಶ್ಲೇಶಿಸಿದ ಆನಂದವನ್ನು ಅನುಭವಿಸಿ ನುಡಿದ ಆಳ್ವಾರಿನ ದಿವ್ಯ ವಾಗನ್ನು ಹೇಳುತಿದ್ದಂತೆ ಎಮ್ಪೆರುಮಾನಿನ ದಿವ್ಯ ಪಾದಗಳು ನಮ್ಮ ಶಿರಸ್ಸೋಂದಿಗೆ ಸೇರುವುದು.

ಪಾಸುರ-10
ಅವ: ಈ ಪಾಸುರದಲ್ಲಿ ಮಾಮುನಿಗಳು ಆಳ್ವಾರ್ ಯಾವ ಪ್ರತ್ಯೇಕ ಕಾರಣವನ್ನು ಕಾಣದೆ ಸಂತೃಪ್ತರಾಗಿ “ಎಮ್ಪೆರುಮಾನ್ ನಿರ್ಹೇತುಕವಾಗಿ(ಹೇತು-ಕಾರಣ ;ನಿರ್ಹೇತುಕ-ಕಾರಣವಿಲ್ಲದ) ಸರ್ವಾಂಗವಾಗಿ ಸಂಶ್ಲೇಶಿಸಿದನು” ಎಂಬ (ಅಭಿಪ್ರಾಯದ) ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಪೊರುಮ್ ಆೞಿ ಸಙ್ಗುಡೈಯೋನ್ ಪೂದಲತ್ತೇ ವನ್ದು
ತರುಮಾಱೋರೇದುವಱತ್ತನ್ನೈ – ತಿರಮಾಗಪ್
ಪಾರ್ತ್ತುರೈ ಸೆಯ್ ಮಾಱನ್ ಪದಮ್ ಪಣಿಗ ಎನ್ ಸೆನ್ನಿ
ವಾೞ್ತ್ತಿಡುಗ ಎನ್ನುಡೈಯ ವಾಯ್

ಆಳ್ವಾರ್ ಶ್ರೀ ಸುದರ್ಶನ ಚಕ್ರ ಹಾಗು ಶ್ರೀ ಪಾಂಚಜನ್ಯವನ್ನು ಹೊಂದಿರುವ ಎಮ್ಪೆರುಮಾನ್ ನಿರ್ಹೇತುಕವಾಗಿ ಅವತರಿಸಿ ತನ್ನನ್ನೆ ಕೊಡುತ್ತಾನೆ ಎಂದು ನಿಶ್ಚಿತವಾಗಿ ಕಂಡು ಕೃಪೆಯಿಂದ ಹೇಳಿದ ಆೞ್ವಾರಿಗೆ ನಾನು ತಲೆಬಾಗಿ ನಮಸ್ಕರಿಸುತ್ತೇನೆ, ನನ್ನ ಬಾಯಿ ಅವರಿಗೆ ಮಂಗಳಾಶಾಸನವನ್ನು ಮಾಡಲಿ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-1-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org


Leave a Comment